ಮಂಜರಿ ತಂಡದವರ ನೃತ್ಯ ಮಂಜರಿ

ಸೃಷ್ಟಿ ನೃತ್ಯ ಕಲಾ ಕುಟೀರ ಪ್ರಸ್ತುತಿ

Team Udayavani, Jul 12, 2019, 5:00 AM IST

ನೃತ್ಯಾರ್ಚನೆಯ ಕೊನೆಯಲ್ಲಿ ಪಾಪನಾಶಂ ಶಿವಂರವರ ಕೃತಿ ನವರಸ ಶಿವಂ ಪ್ರಸ್ತುತಿಯಲ್ಲಿ ನವರಸಗಳನ್ನು ಪ್ರತ್ಯೇಕವಾಗಿ ಅದರಲ್ಲೂ ಶೇಷವಾಗಿ ಲಾಸ್ಯ ಹಾಗೂ ರುದ್ರ ತಾಂಡವವನ್ನು ಅಳವಡಿಸಿಕೊಂಡು ಸುದೀರ್ಘ‌ವೆನಿಸಿದರೂ ಅಮೋಘವಾಗಿ ಪ್ರದರ್ಶಿಸಿದರು.

ಕೊಡವೂರು ದೇವಳದಲ್ಲಿ ಇತ್ತೀಚೆಗೆ ಡಾ| ಮಂಜರಿಚಂದ್ರ ನೇತೃತ್ವದ ಸೃಷ್ಟಿ ನೃತ್ಯ ಕಲಾ ಕುಟೀರ, ಉಡುಪಿ ಇವರಿಂದ ಭರತ ನಾಟ್ಯ ಕಾರ್ಯಕ್ರಮ ಪ್ರಸ್ತುತಗೊಂಡಿತು. ಪ್ರಾರಂಭದಲ್ಲಿ ನೃತ್ಯಾಧಿಪತಿ ನಟರಾಜ ಸ್ತುತಿಯನ್ನೊಳಗೊಂಡ ಪುಷ್ಪಾಂಜಲಿಯೊಂದಿಗೆ ನೃತ್ಯ ಕುಸುಮಗಳು ರಂಗದಲ್ಲಿ ಅರಳುವ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು. ಧ್ವನಿ ಮುದ್ರಿತ ಸಂಗೀತವಾಗಿದ್ದರೂ ಹಿತಮಿತವಾಗಿ ಕೇಳುಗರ ಕಿವಿಗಳಿಗೆ ಅಪ್ಯಾಯಮಾನವಾಗಿ ನೃತ್ಯದ ಚಲನವಲನಗಳಿಗೆ ಅನುಗುಣವಾಗಿತ್ತು. ಅನಂತರ ಡಾ| ಮಂಜರಿಚಂದ್ರರವರ ಪ್ರಧಾನ ಭೂಮಿಕೆಯಲ್ಲಿ ತೋಡೆಯ ಮಂಗಲಮ್‌ ರಾಗ ಮಾಲಿಕೆಯನ್ನು ವಿವಿಧ ತಾಳಗಳಲ್ಲಿ ವೈವಿಧ್ಯಮಯವಾಗಿ ಸಹನರ್ತಕಿಯರ ಸಹಕಾರದೊಂದಿಗೆ ಸಾಕಾರಗೊಂಡಿತು. ಮುಂದೆ ದೇವರ ನಾಮವೊಂದನ್ನು ಆದಿ ತಾಳದಲ್ಲಿ ನೃತ್ಯತಂಡ ಪ್ರದರ್ಶಿಸಿತು. ಜಿತೇಶ್‌ ಬಂಗೇರ ಇವರ ಪ‌ದಾಭಿನಯದ ಮಾರಮಣನ ಉಮಾರಮಣನ ಎನ್ನುವ ದೇವರ ನಾಮ ಮುದ ನೀಡಿತು. ಭರತನಾಟ್ಯ ಕಲಾವಿದರ ಆರಾಧ್ಯ ದೇವರಾದ ಈಶ್ವರನ ಕುರಿತಾದ ಒಂದಾದರೂ ನೃತ್ಯ ಪ್ರತಿಯೊಂದು ಕಾರ್ಯಕ್ರಮದಲ್ಲಿ ನೀಡುವ ಪರಿಪಾಠ ಬೆಳೆದು ಬಂದಿದೆ. ಅಂತೆಯೇ ಅಭೋಗಿರಾಗ ಆದಿತಾಳದಲ್ಲಿ ಪ್ರಸ್ತುತಿಗೊಂಡ ಶಿವಸ್ತುತಿ ಕ್ಷಿಪ್ರಗತಿಯ ನಡೆ, ಶಿಷ್ಟ ಅಡವುಗಳನ್ನೊಗೊಂಡು, ಮಂದಗತಿಯಿಂದ ತೀವ್ರಗತಿಗೆ, ವೈಧ್ಯಮಯ ಭಾವ ಮುದ್ರೆಗಳೊಂದಿಗೆ ಮನಗೆದ್ದಿತು.

ಸಂಪ್ರದಾಯಬದ್ಧ ಭರತನಾಟ್ಯದಿಂದ ಜಾನಪದ ಲೋಕಕ್ಕೆ ಜಾರಿದ ನೃತ್ಯ ತಂಡದ ಕಿರಿಯ ಕಲಾದೆಯರು ಎಂಥಾ ಮೋಜಿನ ಕುದರಿ ಎನ್ನುವ ಹಾಡಿಗೆ ಲವಲಕೆಯಿಂದ ಹೆಜ್ಜೆ ಹಾಕಿ ಮೆಚ್ಚುಗೆ ಗಳಿಸಿಕೊಂಡರು. ಮುಂದೆ ಪಂಡರಾಪುರ ವಿಠಲನ ಕುರಿತಾದ ಭಕ್ತಿಪ್ರದಾನ ಮರಾಠಿ ಅಭಂಗವೊಂದಕ್ಕೆ ಜಿತೇಶ್‌ ಬಂಗೇರ ಭಕ್ತಿಪೂರ್ವಕವಾಗಿ ನರ್ತಿಸಿದರು. ರಾಗಮಾಲಿಕೆಯಲ್ಲಿ ಸುಲಭದಿ ಒದಗದು ಎನ್ನುವ ದಾಸರ ಪದವನ್ನು ಮಂಜರಿಚಂದ್ರ ಆದಿತಾಳದಲ್ಲಿ ಅಭಿನಯಪೂರ್ವಕವಾಗಿ ಪ್ರದರ್ಶಿಸಿದರು. ನೃತ್ಯಾರ್ಚನೆಯ ಕೊನೆಯಲ್ಲಿ ಪಾಪನಾಶಂ ಶಿವಂರವರ ಕೃತಿ ನವರಸ ಶಿವಂ ಪ್ರಸ್ತುತಿಯಲ್ಲಿ ನವರಸಗಳನ್ನು ಪ್ರತ್ಯೇಕವಾಗಿ ಅದರಲ್ಲೂ ಶೇಷವಾಗಿ ಲಾಸ್ಯ ಹಾಗೂ ರುದ್ರ ತಾಂಡವವನ್ನು ಅಳವಡಿಸಿಕೊಂಡು ಸುದೀರ್ಘ‌ವೆನಿಸಿದರೂ ಅಮೋಘವಾಗಿ ಪ್ರದರ್ಶಿಸಿ ನೃತ್ಯಕಾರ್ಯಕ್ರಮ ಮಂಗಳವಾಯಿತು. ಬಾಲ ಕಲಾವಿದರಾದ ಅನ್ವಿತಾ, ಅಪೇಕ್ಷಾ, ಧನ್ಯಶ್ರೀ, ಚಿನ್ಮಯಿ, ಅಮೃತಾ, ಕವಿತಾ, ಪನ್ನಗ, ರುಕ್ಮಿಣಿ, ಅನ್ನಪೂರ್ಣ, ತುಷಾರ, ಸಾನ್ವಿ, ಮಾನಸಿ, ಪ್ರಜ್ಞಾ, ಶ್ರೇಷ್ಠಾ ಇವರ ಪ್ರತಿಭೆಗೆಪ್ರೇಕ್ಷಕರು ಮೆಚ್ಚುಗೆ ಸೂಚಿಸಿದರು.

ಜನನಿ ಭಾಸ್ಕರ ಕೊಡವೂರು

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಇಬ್ಬರೇ ಪಾತ್ರಧಾರಿಗಳು ಕಥನವನ್ನು ಕೊಂಡೊಯ್ಯುವ ಗತಿ , ದಿನ ನಿತ್ಯದ ಎಲ್ಲಾ ಗೌಜಿ ಗದ್ದಲದ ನಡುವೆ ಸಾಗುವ ನಾಟಕ ಕೇವಲ ಇಬ್ಬರೇ ಪಾತ್ರಧಾರಿಗಳ ಪ್ರಸ್ತುತಿ ಎಂಬುದನ್ನೇ...

  • ಸತ್ಯರೂಢನಾದ ಭೂಪಾಲನಾರು ಎನ್ನುವ ಇಂದ್ರನ ಪ್ರಶ್ನೆಯೊಂದಿಗೆ ಕಥೆ ಆರಂಭ.ವಸಿಷ್ಠರು ಹರಿಶ್ಚಂದ್ರನ ಹೆಸರು ಸೂಚಿಸಿದಾಗ ಕೋಪಗೊಂಡು ವಿರೋಧಿಸಿದ ವಿಶ್ವಾಮಿತ್ರರು...

  • ಉಡುಪಿ ಪುತ್ತೂರು ಭಗವತಿ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಅಂಗವಾಗಿ ಶ್ರೀ ಭಗವತಿ ಹವ್ಯಾಸಿ ಯಕ್ಷ ಬಳಗ ಪುತ್ತೂರು ಇವರು "ಲಂಕಿಣಿ ಮೋಕ್ಷ' ಮತ್ತು...

  • ಡಿಜಿಟಲ್‌ ಯುಗದಲ್ಲಿ ಮಕ್ಕಳ ಮನಸ್ಸನ್ನು ಆಕರ್ಷಿಸಿ ಅವರ ಸೃಜನಶೀಲತೆ ಬೆಳೆಸಲು ಸೂಕ್ತ ತರಬೇತಿಯನ್ನು ನೀಡುವುದೆಂದರೆ ಸುಲಭದ ಕೆಲಸವಲ್ಲ. ಉತ್ಸಾಹಿ ಸಂಪನ್ಮೂಲ...

  • ಚೇಂಪಿಯ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಜಿ.ಎಸ್‌.ಬಿ.ಎಸ್‌ ಸೇವಾ ಸಂಘದ ಆಶ್ರಯದಲ್ಲಿ ಸುಧನ್ವ ಕಾಳಗ ಎಂಬ ಯಕ್ಷಗಾನ ಪ್ರದರ್ಶನಗೊಂಡಿತು. ಕಿರಣ್‌ ಪೈ...

ಹೊಸ ಸೇರ್ಪಡೆ

  • ಅಷ್ಟೂ ಬುದ್ಧಿ ಬೇಡ್ವೇನ್ರಿ ನಿಮ್ಗೆ? ಅವನು ಬೇಡ ಬೇಡ ಅಂದ್ರೂ ಒತ್ತಾಯ ಮಾಡಿ ತಿನ್ನಿಸಿದ್ರಂತಲ್ಲ; ಈಗ ಅವನಿಗೆ ಹೊಟ್ಟೆ ಅಪ್‌ಸೆಟ್‌ ಆದ್ರೆ ಏನ್ರೀ ಮಾಡೋದು? ಇವತ್ತು...

  • ಶಿಕಾರಿ ಎಂದೊಡನೆ ನೆನಪಾಗುವುದು ಯಾವುದೋ ಪ್ರಾಣಿ ಪಕ್ಷಿಯ ಬೇಟೆ. ಆದರೆ ಈ ಪುಸ್ತಕದಲ್ಲಿ ಇದು ಒಂದು ಪ್ರಾಣಿ ಪಕ್ಷಿಯ ಬೇಟೆಯಾಗಿರದೇ ಮನುಷ್ಯನಿಂದ ಮನುಷ್ಯನ ಬೇಟೆಯನ್ನು...

  • ಬೆಂಗಳೂರು: ದೇಶದ ಅತಿ ದೊಡ್ಡ ತಂತ್ರಜ್ಞಾನ ಮೇಳ "ಬೆಂಗಳೂರು ಟೆಕ್‌ ಸಮಿಟ್‌'ಗೆ ದಿನಗಣನೆ ಆರಂಭವಾಗಿದೆ. ನವೆಂಬರ್‌ 18ರಿಂದ 20ರವರೆಗೆ ಅರಮನೆ ಆವರಣದಲ್ಲಿ ನಡೆಯಲಿರುವ...

  • ಬೆಂಗಳೂರು/ಟಿ.ದಾಸರಹಳ್ಳಿ: ಸ್ಥಳೀಯ ಬಿಜೆಪಿ ಮುಖಂಡ ಹಾಗೂ ಶುದ್ಧ ಕುಡಿವ ನೀರು ಪೂರೈಕೆ ಘಟಕ ಮಾಲೀಕನ ಪುತ್ರನ ಅಪಹರಣಕ್ಕೆ ವಿಫ‌ಲ ಯತ್ನ ನಡೆಸಿ, ಅವರ ಮನೆ ಮುಂದೆ ನಿಂತಿದ್ದ...

  • ಬೆಂಗಳೂರು: ಶಬರಿಮಲೆ ಯಾತ್ರೆ ಸಂಬಂಧ ರಾಜ್ಯದ ಭಕ್ತರು ಸಜ್ಜಾಗುತ್ತಿದ್ದು, ಕಳೆದ ವರ್ಷ ಇದ್ದ ಆತಂಕ ನಿವಾರಿಸಿ ರಾಜ್ಯದ ಯಾತ್ರಾರ್ಥಿಗಳಿಗೆ ಎಲ್ಲ ಸೌಕರ್ಯ ನೀಡಲು...