Udayavni Special

ಮಾರುವ ಕಾಡಾಗಿ ಬದಲಾದ ಜಗತ್ತನ್ನು ತೋರಿಸಿದ ಮಾರಿಕಾಡು


Team Udayavani, May 4, 2018, 6:00 AM IST

s-9.jpg

 ಹೆಣ್ಣು ಮಾಯೆಯೆಂಬರು, ಹೆಣ್ಣು ಮಾಯೆಯಲ್ಲ, ಹೊನ್ನು ಮಾಯೆಯೆಂಬರು, ಹೊನ್ನು ಮಾಯೆಯಲ್ಲ, ಮನುಷ್ಯನ ಮನದ ಮುಂದಿನ ಆಸೆಯೇ ಮಾಯೆ ಎಂಬ ಅಲ್ಲಮನ ವಚನದ ಸುಮಧುರ ಗಾಯನದೊಂದಿಗೆ ಆರಂಭವಾದ ಮಾರಿಕಾಡು ನಾಟಕ ಮನುಷ್ಯನ ದುರಾಸೆ ಮತ್ತು ಮಹತ್ವಾಕಾಂಕ್ಷೆಗಳ ದುರಂತವನ್ನು ಮನ ಕದಡುವಂತೆ ಪ್ರಸ್ತುತ ಪಡಿಸಿತು. ಮಂಡ್ಯ ರಮೇಶ್‌ ಅವರ ಮೈಸೂರಿನ “ನಟನಾ’ ತಂಡವು ಈ ನಾಟಕವನ್ನು ಉಡುಪಿಯ ರಂಗಭೂಮಿ ಸಂಸ್ಥೆಯು ಎಂ.ಜಿ.ಎಂ.ಕಾಲೇಜಿನ ಮುದ್ದಣ ಮಂಟಪದಲ್ಲಿ ರಂಗ ಸಂಘಟಕರಾದ ಆನಂದ ಗಾಣಿಗರ ನೆನಪಿನಲ್ಲಿ ನಡೆಸಿದ ಆನಂದೋತ್ಸವದ ಸಂದರ್ಭದಲ್ಲಿ ಪ್ರದರ್ಶಿಸಿತು. ಶೇಕ್ಸ್‌ಪಿಯರ್‌ ನಾಟಕವನ್ನು ಕನ್ನಡಕ್ಕೆ ರೂಪಾಂತರಿಸಿದವರು ಡಾ|ಚಂದ್ರಶೇಖರ ಕಂಬಾರ ಹಾಗೂ ನಿರ್ದೇಶಿಸಿದವರು ಮೇಘ ಸಮೀರ.

 ನಾಟಕಕಾರ ಮನುಷ್ಯ ಮನಸ್ಸುಗಳ ಆಳಕ್ಕಿಳಿದು ಯೋಚನೆಗಳನ್ನು ಹೊರ ಹಾಕುತ್ತಿದ್ದಾನೇನೋ ಎನ್ನುವ ಭ್ರಮೆ ಹುಟ್ಟಿಸುವ ನಾಟಕ. ತನ್ನ ಆಸೆಗಳ ಪೂರೈಕೆಗೆ ಅಡ್ಡಿಯಾಗಿ ಬರುವ ಹಲವರ ಕಗ್ಗೊಲೆ ನಡೆಸಲು ಹೇಸದ ಮ್ಯಾಕ್‌ಬೆಥ್‌ ದಂಪತಿಯ ಬದುಕು ದಾರುಣ ಅಂತ್ಯಕ್ಕೀಡಾಗುವ ಕಥೆ ಇಲ್ಲಿದೆ. ಭಾಷೆ ಮತ್ತು ಸಂಸ್ಕೃತಿಗೆ ಒಗ್ಗುವ ರೀತಿಯಲ್ಲಿ ಬದಲಾವಣೆಗಳೊಂದಿಗೆ, ಮೂಲಸತ್ವವನ್ನು ಉಳಿಸಿಕೊಂಡು ಕಂಬಾರರು ಕನ್ನಡಕ್ಕೆ ಅಳವಡಿಸಿಕೊಂಡಿದ್ದಾರೆ. ರಂಗಕ್ಕೆ ಅಳವಡಿಸಿಕೊಳ್ಳುವಾಗ ನಿರ್ದೇಶಕರು ನಾಟಕ ನೀಡುವ ಸಂದೇಶದ ಸಂವಹನವನ್ನು ಇನ್ನಷ್ಟು ಪರಿಣಾಮಕಾರಿಯಾಗಿಸುವ ಮತ್ತು ಆಧುನಿಕ ಜಗತ್ತಿನ ದುರಂತಗಳಿಗೆ ಅನ್ವಯಿಸುವ ರೀತಿಯಲ್ಲಿ ಹೊಂದಿಸಿಕೊಳ್ಳುವ ಉದ್ದೇಶದಿಂದ ಇನ್ನೂ ಒಂದಷ್ಟು ಬದಲಾವಣೆಗಳನ್ನು ಮಾಡಿಕೊಂಡದ್ದು ಮೆರುಗು ನೀಡಿದೆ. ಮೂಲ ನಾಟಕದಲ್ಲಿ ಸಂಭವಿಸುವ ಘಟನೆಗಳಿಗೆ ಸಮಾಂತರವಾಗಿ ಅಳವಡಿಸಿಕೊಂಡ ತಂತ್ರಗಳೇ ಇದಕ್ಕೆ ಸಾಕ್ಷಿ. 

 ರಂಗಸಜ್ಜಿಕೆಯಲ್ಲಿ ಎದ್ದು ಕಾಣುತ್ತಿದ್ದದ್ದು ವಾಣಿಜ್ಯೀಕೃತ ಜಗತ್ತಿನಲ್ಲಿ ಗ್ರಾಹಕರನ್ನು ತಮ್ಮೆಡೆಗೆ ಸೆಳೆಯುವ ಪ್ರಯತ್ನದಲ್ಲಿ ತೊಡಗಿರುವ ವ್ಯಾಪಾರ ಜಾಲವನ್ನು ಪ್ರತಿನಿಧಿಸುವ ಮತ್ತು ಅಧಿಕಾರ ಕ್ಷೇತ್ರದಲ್ಲಿ ಕಾಣುವ ವಿವಿಧ ಅವಕಾಶಗಳತ್ತ ಬೊಟ್ಟುಮಾಡಿ ತೋರಿಸುವ ಫ‌ಲಕಗಳು. ನಾಟಕದೊಳಗಿನ ಮಾರಿಗಳು ವಾಸಿಸುವ ಭಯಾನಕ ಕಾಡಿಗೇನೂ ಕಮ್ಮಿಯಿಲ್ಲದ ಸುಳ್ಳು ಆಮಿಷಗಳನ್ನೊಡ್ಡಿ ತನ್ನತ್ತ ಸೆಳೆಯುವ ಆಧುನಿಕ ಜಗತ್ತಿನ ಮಾರುಕಟ್ಟೆ ಎಂಬ ಕಾಡಿನ ಕಬಂಧ ಬಾಹುಗಳೊಳಗೆ ಸಿಕ್ಕಿ ಬಿದ್ದ ಮನುಷ್ಯ ತನ್ನ ಸ್ವಾರ್ಥ ಸಾಧನೆಗಾಗಿ ಮಾಡುವ ಹುನ್ನಾರಗಳಿಗೂ ಮದಕರಿ ನಾಯಕನಾಗಲಿ ಮ್ಯಾಕ್‌ಬೆಥ್‌ ಆಗಲಿ ಮಾಡುವ ಸಂಚುಗಳಿಗೂ ಏನೂ ವ್ಯತ್ಯಾಸವಿಲ್ಲ ಎಂಬುದನ್ನು ನಾಟಕ ಸಾರಿ ಹೇಳುತ್ತದೆ. ಹಳೆಯ ಕಥೆಗೊಂದು ಹೊಸ ಸಮಾಂತರವನ್ನು ಸೃಷ್ಟಿಸಿದ ಹೆಮ್ಮೆ ರಂಗಕೃತಿಗೆ ಸಲ್ಲುತ್ತದೆ. ಆದ್ದರಿಂದಲೇ ಮೂಲ ನಾಟಕದಲ್ಲಿ ಮಾಟಗಾತಿಯರು ಅಥವಾ ಮಾರಿಗಳು ಮ್ಯಾಕ್‌ಬೆಥ್‌ನ ಮನದೊಳಗಣ ಆಲೋಚನೆಗಳಿಗೆ ರೂಪಕವಾಗಿ ನಿಲ್ಲುವಂತೆ ಮಾರುಕಟ್ಟೆಯ ತಂತ್ರಗಳು ಬಂಡವಾಳಶಾಹಿಗಳ ಮಹತ್ವಾಕಾಂಕ್ಷೆಯನ್ನೂ ಸಾರಿ ಹೇಳುತ್ತವೆೆ. ಕಾಲದ ಬದಲಾವಣೆಗೆ ಅನುಸಾರವಾಗಿ ಮನುಷ್ಯನ ಹೊರನೋಟ ಮತ್ತು ಸಂದರ್ಭಗಳಲ್ಲಷ್ಟೇ ಬದಲಾವಣೆಗಳು ಕಾಣಿಸಿಕೊಳ್ಳುತ್ತವ‌ಷ್ಟೇ ಹೊರತು ಒಳ ಜಗತ್ತು ಬದಲಾಗುವುದಿಲ್ಲ ಎಂಬ ಹೊಸ ಒಳನೋಟವನ್ನು ನಾಟಕವು ಕಟ್ಟಿ ಕೊಟ್ಟಿತು.”ನಟನಾ’ದಲ್ಲಿ ಈಗಿನ್ನೂ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳಾದರೂ ಪ್ರತಿಯೊಬ್ಬ ನಟನ ಅಭಿನಯ, ಸಂಭಾಷಣೆ ಮತ್ತು ಚಲನವಲನಗಳ ನಿರ್ವಹಣೆ ಉತ್ತಮ ಮಟ್ಟದ್ದಾಗಿತ್ತು. ದೂತನ ಪಾತ್ರ ವಹಿಸಿ ರಂಗದ ಮೇಲೆ ಮಿಂಚಿ ಮಾಯವಾಗುವ ನಟನೂ ತನ್ನ ಛಾಪನ್ನೊತ್ತಬಲ್ಲ ಎಂಬುದನ್ನು ಇಲ್ಲಿ ದೂತರಾಗಿ ಅಭಿನಯಿಸಿದವರು ತೋರಿಸಿದರು. ಅದರಲ್ಲೂ ಕರಿಬಂಟ ತಪ್ಪಿಸಿಕೊಂಡು ಹೋದ ಎಂದವನನ್ನು ಮದಕರಿ ನಾಯಕ ಕೊಲ್ಲುವಾಗ ಅವನು ವಿಲವಿಲನೆ ಒದ್ದಾಡಿದ್ದು ತುಂಬ ನೈಜವಾಗಿ ಬಂತು. ಈ ಕಾರಣದಿಂದಾಗಿ ನಾಟಕದ ಓಘ ಎಲ್ಲೂ ನಿಧಾನವಾಗದೆ, ಚಕಚಕನೆ ಸಾಗಿದ ದೃಶ್ಯಗಳು ನಾಟಕದ ಯಶಸ್ಸಿಗೆ ಕಾರಣವಾದವು. ಶ್ರೀಪಾದ ಭಟ್‌ ಅವರ ಸಂಗೀತ ನಿರ್ದೇಶನದಲ್ಲಿ ದಿಶಾ ರಮೇಶ್‌ ಇಂಪಾಗಿ ಹಾಡಿದ ಹಾಡುಗಳು ಮತ್ತು ಏನೋ ಗಹನವಾದುದನ್ನು ಸೂಚಿಸುವಂತೆ ಭಾರ ನಡೆಯೊಂದಿಗೆ ಸಾಗಿದ ತಬಲ, ಡೋಲಕ್‌, ನಗಾರಿ,ತಾಸೆ, ತಮಟೆ,ಮಡಕೆ, ದಮ್ಮಡಿ, ಡೊಳ್ಳು ಮೊದಲಾದ ಮರ್ದನ ವಾದ್ಯಗಳು ಮತ್ತು ಹಾರ್ಮೋನಿಯಂ, ಕೊಳಲು , ಸ್ವರಮಂಡಲ ಮೊದಲಾದ ಸ್ವರವಾದ್ಯಗಳು, ಔಚಿತ್ಯಪೂರ್ಣವಾಗಿ ಬಳಸಿದ ವೇಷಭೂಷಣಗಳು ಮತ್ತು ಸಂದರ್ಭಕ್ಕೆ ಸೂಕ್ತವಾಗಿ ಮಾಡಿದ ಬೆಳಕಿನ ಪ್ರಯೋಗಗಳು ನಾಟಕದ ಸೊಬಗನ್ನು ಹೆಚ್ಚಿಸಿದವು.

 ಡಾ| ಪಾರ್ವತಿ ಜಿ.ಐತಾಳ್‌

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆ: ಇಬ್ಬರು ‘ಸ್ಟಾರ್’ ನಟರ ಮಾಹಿತಿ ಕೊಡುತ್ತೇನೆ ಎಂದು ಸಂಬರಗಿ

ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆ: ಇಬ್ಬರು ‘ಸ್ಟಾರ್’ ನಟರ ಮಾಹಿತಿ ಕೊಡುತ್ತೇನೆ ಎಂದು ಸಂಬರಗಿ

ಮಲಪ್ರಭಾ, ಘಟಪ್ರಭಾ, ಬಳ್ಳಾರಿ ನಾಲಾ, ಹಿರಣ್ಯಕೇಶಿ ನದಿಪಾತ್ರ ಒತ್ತುವರಿ ಸಮೀಕ್ಷೆ: ಜಾರಕಿಹೊಳಿ

ಮಲಪ್ರಭಾ, ಘಟಪ್ರಭಾ, ಬಳ್ಳಾರಿ ನಾಲಾ, ಹಿರಣ್ಯಕೇಶಿ ನದಿಪಾತ್ರ ಒತ್ತುವರಿ ಸಮೀಕ್ಷೆ: ಜಾರಕಿಹೊಳಿ

ಕುಖ್ಯಾತ ರೌಡಿ ಸುಭಾಶ್ ಯಾದವ್ ಮನೆ ಮೇಲೆ ಪೊಲೀಸ್ ದಾಳಿ; ಕೋಟ್ಯಂತರ ರೂ. ಆಸ್ತಿ ಜಪ್ತಿ

ಕುಖ್ಯಾತ ರೌಡಿ ಸುಭಾಶ್ ಯಾದವ್ ಮನೆ ಮೇಲೆ ಪೊಲೀಸ್ ದಾಳಿ; ಕೋಟ್ಯಂತರ ರೂ. ಆಸ್ತಿ ಜಪ್ತಿ

ಮೈಸೂರು: ಸಚಿವ ಎಸ್.ಟಿ. ಸೋಮಶೇಖರ್ ಗೆ ರೈತರಿಂದ ಘೇರಾವ್!

ಮೈಸೂರು: ಸಚಿವ ಎಸ್.ಟಿ. ಸೋಮಶೇಖರ್ ಗೆ ರೈತರಿಂದ ಘೇರಾವ್!

ಕೂಳೂರು ತಡೆಗೋಡೆ ಕುಸಿದು ಓರ್ವ ಕಾರ್ಮಿಕ ಸಾವು , ಇಬ್ಬರು ಅಪಾಯದಿಂದ ಪಾರು

ಕೂಳೂರು: ತಡೆಗೋಡೆ ಕುಸಿದು ಓರ್ವ ಕಾರ್ಮಿಕ ಸಾವು , ಇಬ್ಬರು ಅಪಾಯದಿಂದ ಪಾರು

ಹಳ್ಳಿ ರೈತನ ಮಗಳಿಗೆ ಏಳು ಸರಕಾರಿ ಹುದ್ದೆಗಳ ಅವಕಾಶ!

ಹಳ್ಳಿ ರೈತನ ಮಗಳಿಗೆ ಏಳು ಸರಕಾರಿ ಹುದ್ದೆಗಳ ಅವಕಾಶ!

ಐಪಿಎಲ್ 2020: ಮಯಾಂತಿ ಜಾಗಕ್ಕೆ ಬಂದ ಆಸೀಸ್ ಬೆಡಗಿ ನೆರೋಲಿ ಮೆಡೋಸ್ ಹಿನ್ನಲೆ ಗೊತ್ತಾ?

ಐಪಿಎಲ್ 2020: ಮಯಾಂತಿ ಜಾಗಕ್ಕೆ ಬಂದ ಆಸೀಸ್ ಬೆಡಗಿ ನೆರೋಲಿ ಮೆಡೋಸ್ ಹಿನ್ನಲೆ ಗೊತ್ತಾ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ಕುತಂತ್ರಿ ಚೀನಾವನ್ನು ಕಟ್ಟಿ ಹಾಕುವುದು ಹೇಗೆ?

udayavani youtube

ಭಾಗಶಃ ಕುಸಿದ ಉಡುಪಿಯ ಹಳೆಯ ಕಟ್ಟಡ: ಓರ್ವ ಮಹಿಳೆಗೆ ಗಾಯ | Udayavani

udayavani youtube

ಹಂಪನಕಟ್ಟೆಯಲ್ಲಿ ಪತ್ತೆಯಾದ ಶತಮಾನದ ಹಿಂದಿನ ಬಾವಿ!

udayavani youtube

ಭತ್ತದ ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

udayavani youtube

COVID-19 ಸಮಯದಲ್ಲಿ ಜೀವನಕ್ಕೆ ಆಧಾರವಾದ ಹೈನುಗಾರಿಕೆಹೊಸ ಸೇರ್ಪಡೆ

ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆ: ಇಬ್ಬರು ‘ಸ್ಟಾರ್’ ನಟರ ಮಾಹಿತಿ ಕೊಡುತ್ತೇನೆ ಎಂದು ಸಂಬರಗಿ

ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆ: ಇಬ್ಬರು ‘ಸ್ಟಾರ್’ ನಟರ ಮಾಹಿತಿ ಕೊಡುತ್ತೇನೆ ಎಂದು ಸಂಬರಗಿ

ಎನ್‌.ಎಚ್‌.ವ್ಯಾಲಿ ನೀರು ಹರಿಸಲು ಆಗ್ರಹ

ಎನ್‌.ಎಚ್‌.ವ್ಯಾಲಿ ನೀರು ಹರಿಸಲು ಆಗ್ರಹ

ಅಮೀನಗಡ ಸರ್ಕಾರಿ ಆಸ್ಪತ್ರೆಗಿಲ್ಲ ಖಾಯಂ ವೈದ್ಯರು! ಇಲ್ಲಿಗೆ ಬಂದರೆ ನೀಡುತ್ತಾರೆ ಬರಿ ಮಾತ್ರೆ

ಅಮೀನಗಡ ಸರ್ಕಾರಿ ಆಸ್ಪತ್ರೆಗಿಲ್ಲ ಖಾಯಂ ವೈದ್ಯರು! ಇಲ್ಲಿಗೆ ಬಂದರೆ ನೀಡುತ್ತಾರೆ ಬರಿ ಮಾತ್ರೆ

ಆಶಾಕಾರ್ಯಕರ್ತೆಯರ ಸೇವೆ ಶ್ಲಾಘನೀಯ

ಆಶಾಕಾರ್ಯಕರ್ತೆಯರ ಸೇವೆ ಶ್ಲಾಘನೀಯ

ಮಲಪ್ರಭಾ, ಘಟಪ್ರಭಾ, ಬಳ್ಳಾರಿ ನಾಲಾ, ಹಿರಣ್ಯಕೇಶಿ ನದಿಪಾತ್ರ ಒತ್ತುವರಿ ಸಮೀಕ್ಷೆ: ಜಾರಕಿಹೊಳಿ

ಮಲಪ್ರಭಾ, ಘಟಪ್ರಭಾ, ಬಳ್ಳಾರಿ ನಾಲಾ, ಹಿರಣ್ಯಕೇಶಿ ನದಿಪಾತ್ರ ಒತ್ತುವರಿ ಸಮೀಕ್ಷೆ: ಜಾರಕಿಹೊಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.