ಎಳೆಯರ ಹೆಜ್ಜೆಯಲ್ಲಿ ಮೀನಾಕ್ಷಿ ಕಲ್ಯಾಣ 


Team Udayavani, Jan 4, 2019, 12:30 AM IST

x-55.jpg

ಶ್ರೀ ವಿನಾಯಕ ಯಕ್ಷಗಾನ ಸಂಘ(ರಿ.), ಉಪ್ಪೂರು, ಇದರ ಎಳೆಯರ ಬಳಗದಿಂದ ಮೀನಾಕ್ಷಿ ಕಲ್ಯಾಣ ಎಂಬ ಯಕ್ಷಗಾನ ಪ್ರದರ್ಶನಗೊಂಡಿತು. ಮಲಯಧ್ವಜ ಭೂಪತಿಯ ಮಗಳು ಮೀನಾಕ್ಷಿ ಬಲು ಧೀರೆ. ಅವಳ ದೇಹ ವಿಶೇಷತೆಯಿಂದ ಚಿಂತಾಕ್ರಾಂತರಾದ ಭೂಪತಿಯನ್ನು ನಾರದರು ಬಂದು ಸಮಾಧಾನಿಸಿ, ಈಕೆಯು ದಿಗ್ವಿಜಯಗೈಯ್ಯುವ ಸಂದರ್ಭದಲ್ಲಿ ಯಾವಾತನಿಂದ ಇವಳ ದೇಹ ವಿಶೇಷತೆ ಮಾಯವಾಗುತ್ತದೋ ಆತನೇ ಇವಳ ಪತಿಯಾಗುತ್ತಾನೆ ಎಂದು ನಾರದರು ಹರಸುತ್ತಾರೆ. ಮುಂದೆ ಮೀನಾಕ್ಷಿ ದಿಗ್ವಿಜಯ ಕೈಗೊಂಡು ಸ್ತ್ರೀಮಲಯಾಳ ದೇಶದ ಪದ್ಮಗಂಧಿನಿಯೂ ಸೇರಿದಂತೆ ವಿವಿಧ ದೇಶದ ಮಹಾರಾಜರುಗಳನ್ನು ಜಯಿಸಿ, ಕಾಶ್ಮೀರದ ಅರಸ ಶೂರಸೇನನೊಡನೆ ಹೋರಾಡುವ ಸಂದರ್ಭದಲ್ಲಿ ನಾರದರ ಆಗಮನದಿಂದ ಅವರೀರ್ವರು ಅಜ್ಜ-ಮೊಮ್ಮಗಳು ಎನ್ನುವ ವಿಚಾರ ತಿಳಿಯುತ್ತದೆ. ಹಾಗೆಯೇ ಅಷ್ಟದಿಕಾ³ಲಕರನ್ನೂ ಜಯಿಸಿದ ಮೀನಾಕ್ಷಿ ಕೊನೆಯದಾಗಿ ಕೈಲಾಸದ ಶಿವನೊಂದಿಗೆ ಯುದ್ಧ ಗೈಯುವಾಗ ಅವಳ ದೇಹ ವಿಶೇಷತೆ ಮಾಯವಾಗಿ, ಆತನೇ ಪತಿಯಾಗುವಲ್ಲಿಗೆ ಪ್ರಸಂಗ ಕೊನೆಗೊಳ್ಳುತ್ತದೆ. ಮೀನಾಕ್ಷಿಯಾಗಿ ಪ್ರಾರ್ಥನಾ ಕೆ. ದಿಟ್ಟ ಅಭಿನಯದಿಂದ ಮನ ಸೆಳೆದರೆ, ಪದ್ಮಗಂಧಿನಿಯಾಗಿ ಪ್ರಾರ್ಥನಾ ಎನ್‌., ಶೂರಸೇನನಾಗಿ ವೈಭವ್‌, ದೇವೇಂದ್ರನಾಗಿ ಸ್ವಸ್ತಿಕ್‌, ಈಶ್ವರನಾಗಿ ಶ್ರಾವ್ಯ, ಮದನಾಂಗಿಯಾಗಿ ಅಮೃತಾ, ಗುಣವಂತೆಯಾಗಿ ಯಶಸ್ವಿನಿ ಇವರುಗಳು ಪಾತ್ರದ ಗತ್ತು ಗೈರತ್ತುಗಳನ್ನು ಅಭಿವ್ಯಕ್ತಿ ಗೊಳಿಸಿದ ರೀತಿ ಚೆನ್ನಾಗಿತ್ತು. ಮೀನಾಕ್ಷಿಯ ಮಂತ್ರಿಯಾಗಿ ಸಾತ್ವಿಕ್‌ ಆರ್‌., ಕಿರಾತನಾಗಿ ವಿಶ್ವಾಸ್‌, ಅಗ್ನಿಯಾಗಿ ಸೌಜನ್ಯ, ಭೃಕುಟಿಯಾಗಿ ನಿತಿನ್‌, ನಂದಿಯಾಗಿ ಅಕ್ಷಯ್‌, ಕಾಲಭೈರವನಾಗಿ ಹರ್ಷಿತ್‌, ವೀರಭದ್ರನಾಗಿ ಶ್ರೀಶ, ಕಿರಾತ ಪಡೆ ನಾಯಕನಾಗಿ ದೈವಿಕ್‌, ನಾರದ ಮತ್ತು ಭೃಂಗಿಯಾಗಿ ಸಾತ್ವಿಕ್‌ ತಮ್ಮ ಪಾತ್ರಗಳನ್ನು ಸೊಗಸಾಗಿ ನಿರ್ವಹಿಸಿದರು. ಪ್ರಾರ್ಥನೆಯಲ್ಲಿ ಪ್ರಾಪ್ತಿ, ಪ್ರಣಮ್ಯ, ತೇಜಸ್ವಿನಿ, ಸಮೃದ್ಧಿ, ಬಾಲಗೋಪಾಲರಾಗಿ ನವ್ಯಾ, ಮಾಣಿಕ್ಯ ಹಾಗೆಯೇ ಪೀಠಿಕಾ ಸ್ತ್ರೀವೇಷದಲ್ಲಿ ಯಶಸ್ವಿನಿ, ಅಮೃತಾ ಒಟ್ಟಾಗಿ ಪೂರ್ವರಂಗದ ಚೆಲುವನ್ನು ಹೆಚ್ಚಿಸಿದರು. ಆರು ವರುಷದ ಪುಟಾಣಿಗಳಿಂದ ಹಿಡಿದು ಹದಿನೆಂಟರ ವಯೋಮಾನದ ವರೆಗಿನ ಈ ಇಪ್ಪತ್ತೆರಡು ಮಂದಿ ಎಳೆಯರನ್ನು ಸೀಮಿತ ಅವಧಿಯಲ್ಲಿ ತಿದ್ದಿ ತೀಡಿ ತರಬೇತಿಗೊಳಿಸಿದ ಯಕ್ಷಗುರುಗಳಾದ ಕರ್ಜೆ ಎಮ್‌. ಶ್ರೀಧರ್‌ ಹೆಬ್ಟಾರರು ನಿಜವಾಗಿಯೂ ಸ್ತುತ್ಯಾರ್ಹರು. ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀಧರ್‌ ಹೆಬ್ಟಾರ್‌, ಮದ್ದಲೆಯಲ್ಲಿ ಜಗದೀಶ್‌ ಆಚಾರ್ಯ ಕಿದಿಯೂರು, ಚೆಂಡೆಯಲ್ಲಿ ಕೃಷ್ಣಾನಂದ ಶೆಣೈ ಸಹಕರಿಸಿದ್ದರು. ವೇಷಭೂಷಣ ಅಜಪುರ ಯಕ್ಷಗಾನ ಸಂಘ, ಬ್ರಹ್ಮಾವರ ಅವರದಾಗಿತ್ತು. 

ದಿಶಾ ಬ್ರಹ್ಮಾವರ 

ಟಾಪ್ ನ್ಯೂಸ್

ಬಿಡಿಎ ಅಧಿಕಾರಿಗಳ ಭ್ರಷ್ಟಾಚಾರ: ಇಬ್ಬರು ಬಿಡಿಎ ಸಿಬ್ಬಂದಿ ಸೇರಿ ಆರು ಮಂದಿ ಬಂಧನ

ಬಿಡಿಎ ಅಧಿಕಾರಿಗಳ ಭ್ರಷ್ಟಾಚಾರ: ಇಬ್ಬರು ಬಿಡಿಎ ಸಿಬ್ಬಂದಿ ಸೇರಿ ಆರು ಮಂದಿ ಬಂಧನ

ಲತಾ ಮಂಗೇಶ್ಕರ್‌ ಆರೋಗ್ಯ ಸ್ಥಿರ

ಲತಾ ಮಂಗೇಶ್ಕರ್‌ ಆರೋಗ್ಯ ಸ್ಥಿರ

5ಜಿ ತಂತ್ರಜ್ಞಾನಕ್ಕೆ ವಿರೋಧ: ನಟಿ ಜೂಹಿ ಚಾವ್ಲಾ ದಂಡ 2 ಲಕ್ಷ ರೂ.ಗೆ ಇಳಿಕೆ

5ಜಿ ತಂತ್ರಜ್ಞಾನಕ್ಕೆ ವಿರೋಧ: ನಟಿ ಜೂಹಿ ಚಾವ್ಲಾ ದಂಡ 2 ಲಕ್ಷ ರೂ.ಗೆ ಇಳಿಕೆ

ಲಖನ್‌ ಜಾರಕಿಹೊಳಿಯನ್ನು ಕಾಂಗ್ರೆಸ್‌ಗೆ ಕರೆಯಲ್ಲ: ಸತೀಶ್ ಜಾರಕಿಹೊಳಿ

ಲಖನ್‌ ಜಾರಕಿಹೊಳಿಯನ್ನು ಕಾಂಗ್ರೆಸ್‌ಗೆ ಕರೆಯಲ್ಲ: ಸತೀಶ್ ಜಾರಕಿಹೊಳಿ

500 ರೂ.ಗೆ ಕೊಂಡ ಕುರ್ಚಿಗೆ ಈಗ 16 ಲಕ್ಷ ರೂ.!

500 ರೂ.ಗೆ ಕೊಂಡ ಕುರ್ಚಿಗೆ ಈಗ 16 ಲಕ್ಷ ರೂ.!

7 ಕೋಟಿ ರೂ. ನಕಲಿ ನೋಟು ವಶ: 7 ಮಂದಿ ಬಂಧನ

7 ಕೋಟಿ ರೂ. ನಕಲಿ ನೋಟು ವಶ: 7 ಮಂದಿ ಬಂಧನ

covid-1

ರಾಜ್ಯದಲ್ಲಿ ಕಡಿಮೆಯಾಗುತ್ತಿರುವ ಕೋವಿಡ್ ಪ್ರಕರಣಗಳು : ಇಂದು 49 ಸಾವುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ತುಳುನಾಡಿನ ರಾಜಧಾನಿ ಬಾರ್ಕೂರನ್ನು ಆಳಿದ ರಾಜರ ಹೆಸರೇನು ಗೊತ್ತೇ ?

udayavani youtube

ಉತ್ತರಪ್ರದೇಶ ಚುನಾವಣೆ ಭಾರತದ ಭವಿಷ್ಯವನ್ನು ನಿರ್ಧರಿಸಲಿದೆ

udayavani youtube

ಮನೆಯಿಂದ ಹೊರ ಬಂದ್ರೆ ತಲೆಗೇ ಕುಕ್ಕುತ್ತೆ ಈ ಕಾಗೆ.!

udayavani youtube

ದೇಶದ ಧ್ವಜದ ಜೊತೆ ಘೋಷಣೆ ಕೂಗಿದ್ದಕ್ಕೆ ಬಂಧನ!

udayavani youtube

ಮೈಕೊರೆಯುವ ಚಳಿಯನ್ನೂ ಲೆಕ್ಕಿಸದೇ ವಾರದಿಂದ ಭಕ್ತರು ಯಲ್ಲಮ್ಮನ ಕ್ಷೇತ್ರಕ್ಕೆ ಬರುತ್ತಿದ್ದಾರೆ

ಹೊಸ ಸೇರ್ಪಡೆ

ಮನೆಗಳಿಂದ ಅಸಮರ್ಪಕ ತ್ಯಾಜ್ಯ ಸಂಗ್ರಹ 

ಮನೆಗಳಿಂದ ಅಸಮರ್ಪಕ ತ್ಯಾಜ್ಯ ಸಂಗ್ರಹ 

ನೂತನ ಕಿಂಡಿ ಅಣೆಕಟ್ಟಿನಿಂದ ಸಮೃದ್ಧ ಜಲ

ನೂತನ ಕಿಂಡಿ ಅಣೆಕಟ್ಟಿನಿಂದ ಸಮೃದ್ಧ ಜಲ

ಕಿಂಡಿ ಅಣೆಕಟ್ಟಿನ ನಿರ್ವಹಣೆ: ಜಲ ಸಂರಕ್ಷಣೆಗೆ ಪೂರಕ

ಕಿಂಡಿ ಅಣೆಕಟ್ಟಿನ ನಿರ್ವಹಣೆ: ಜಲ ಸಂರಕ್ಷಣೆಗೆ ಪೂರಕ

ಇಂದು ಪಾಲಿಕೆ ಬಜೆಟ್‌: ಬಹುನಿರೀಕ್ಷೆಯ ಲೆಕ್ಕಾಚಾರ

ಇಂದು ಪಾಲಿಕೆ ಬಜೆಟ್‌: ಬಹುನಿರೀಕ್ಷೆಯ ಲೆಕ್ಕಾಚಾರ

ಬಿಡಿಎ ಅಧಿಕಾರಿಗಳ ಭ್ರಷ್ಟಾಚಾರ: ಇಬ್ಬರು ಬಿಡಿಎ ಸಿಬ್ಬಂದಿ ಸೇರಿ ಆರು ಮಂದಿ ಬಂಧನ

ಬಿಡಿಎ ಅಧಿಕಾರಿಗಳ ಭ್ರಷ್ಟಾಚಾರ: ಇಬ್ಬರು ಬಿಡಿಎ ಸಿಬ್ಬಂದಿ ಸೇರಿ ಆರು ಮಂದಿ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.