ಮಹಾಸಭೆಯಲ್ಲಿ ಮೂಡಿ ಬಂದ ಸಂಗೀತ ಕಛೇರಿ

Team Udayavani, May 31, 2019, 6:00 AM IST

v-2

ರಾಗಧನದ ವಾರ್ಷಿಕ ಮಹಾಸಭೆಯ ಅಂಗವಾಗಿ ಮೇ 5ರಂದು ಎಮ್‌.ಜಿ.ಎಮ್‌. ಕಾಲೇಜಿನಲ್ಲಿ ಬಂಟ್ವಾಳದ ಡಾ| ಮಹೇಶ್‌ ಎಮ್‌. ಎಸ್‌. ಭಟ್‌ ಹಾಗೂ ಶಶಾಂಕ್‌ ಭಟ್‌ ಅವರ ಹಾಡುಗಾರಿಕೆ ನಡೆಯಿತು. ಕಲಾವಿದರು ಭೈರವಿಯ ಅಟತಾಳದ ವಿರಿಬೋಣಿ ವರ್ಣದಿಂದ ಹಾಡುಗಾರಿಕೆಯನ್ನು ಪ್ರಾರಂಭಿಸಿದರು. ಮುಂದೆ ನಾಟದಲ್ಲಿ ಮಾಣಿಕ್ಯ ವೀಣಾ ಶ್ಲೋಕದೊಂದಿಗೆ ಸರಸೀರುಹಾಸನಪ್ರಿಯೇ ಕೃತಿಯನ್ನು ಹಾಡಿ “ಸರಸ್ವತೀ’ ಯಲ್ಲಿ ಸ್ವರಪ್ರಸ್ತಾರವನ್ನು ಮಾಡಿದರು. ಮುಂದೆ ಲತಾಂಗಿಯಲ್ಲಿ”ಮರಿವೇರೆ’ ಕೃತಿಯನ್ನು ರಾಗಾಲಾಪನೆ ಹಾಗೂ ಕಲ್ಪನಾ ಸ್ವರಗಳೊಂದಿಗೆ ಪ್ರಸ್ತುತಿ ಪಡಿಸಿದರು. ಆ ಬಳಿಕ ಉತ್ತಮ ಸಂಗತಿಗಳೊಂದಿಗೆ ಜಗನ್ಮೋಹಿನಿಯ ಶೋಭಿಲ್ಲು, ಪ್ರಧಾನ ರಾಗವಾಗಿ ಕಾಂಭೋಜಿಯನ್ನು ಎತ್ತಿಕೊಂಡು ಒಳ್ಳೆಯ ಆಲಾಪನೆಯನ್ನೂ ಸ್ವರಪ್ರಸ್ತಾರವನ್ನೂ ಮರಕತವಲ್ಲೀಂ ಕೃತಿಯೊಂದಿಗೆ ನಿರೂಪಿಸಿದರು. ತರುವಾಯ ಲಘು ಪ್ರಸ್ತುತಿಗಳಾದ ಅಲ್ಲಿ ನೋಡಲು ರಾಮ ( ನಾಟಕುರಂಜಿ), ಆರಭಿ ರಾಗ ಪ್ರಿಯೇ ಶಂಕರೀ (ರಾಗಮಾಲಿಕೆ), ಸುರುಟಿಯಲ್ಲಿ ತಿಲ್ಲಾನ, ಹಾಗೂ ಮಧ್ಯಮಾವತಿಯ ವಿನಾಯಕುನಿವಲೆಯೊಂದಿಗೆ ಈ ಕಾರ್ಯಕ್ರಮ ಮುಕ್ತಾಯಗೊಂಡಿತು. ನಿರಾಯಾಸವಾಗಿ ಮಂದ್ರ, ತಾರಗಳೆರಡರಲ್ಲೂ ಸುಲಭವಾಗಿ ಸಂಚರಿಸಬಲ್ಲ ಕಂಠಸಿರಿ ಹಾಗೂ ಉತ್ತಮ ಪಾಠಾಂತರಗಳು ಈ ಗಾಯಕರಿಗೆ ಪೂರಕವಾದವು. ಆದರೆ ಯಾವುದಾದರೂ ಕೃತಿಗೆ ನೆರವಲ್‌ ಮಾಡಿದ್ದರೆ ಚೆನ್ನಾಗಿತ್ತು. ಈ ಕಛೇರಿಗೆ ಹೈದರಾಬಾದಿನ ಯುವ ಕಲಾವಿದೆ ಶಿವಾನಿ ಗಾಯತ್ರಿಯವರು ವಯೊಲಿನ್‌ ನುಡಿಸಿದರು. ಒಂದೊಂದು ರಾಗದಲ್ಲಿಯೂ, ರಾಗದ ಆಳದ ಒಳಹೊಕ್ಕು ಪರಿಪಕ್ವತೆಯಿಂದ ನುಡಿಸಿದ ಪರಿ ನೆನಪಿನಲ್ಲಿ ಉಳಿಯವಂತೆ ಮಾಡಿತು. ಹಾಗೆಯೇ ಗಾಯನಕ್ಕೆ ಬೇಕಾದ ರೀತಿಯಲ್ಲಿ ಮೃದಂಗ ನುಡಿಸಿ, ಇನ್ನೂ ಕೇಳಬೇಕೆಂದೆನಿಸುವ ರೀತಿಯಲ್ಲಿ ತನಿ ಆವರ್ತನವನ್ನು ನುಡಿಸಿದವರು ಮಂಗಳೂರಿನ ಸುನಾದ ಕೃಷ್ಣ ಆಮೈ.

ವಿದ್ಯಾಲಕ್ಷ್ಮೀ ಕಡಿಯಾಳಿ

ಟಾಪ್ ನ್ಯೂಸ್

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

16-adu-jeevitham

Movie Review: ಆಡು ಜೀವಿದಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.