ಬೀದಿ ಬದಿಗೆ ಕಲೆಯ ಬಲೆ

Team Udayavani, Mar 24, 2017, 3:50 AM IST

24-KALA-4.jpg

ನಗರಗಳ ಬೀದಿಗೋಡೆಗಳೆಂದರೆ ಕೇವಲ ಜಾಹೀರಾತುಗಳ, ಕೋಮು ಪ್ರಚೋದನೆಗಳ ಪೋಸ್ಟರ್‌ಗಳಿಗೆ ಸೀಮಿತವಾದುದಲ್ಲ, ಅದನ್ನು ಕಲಾತ್ಮಕ ಭಿತ್ತಿಯಾಗಿ ಪರಿವರ್ತಿಸಬಹುದೆಂಬುದನ್ನು ಮಂಗಳೂರಿನ ರಾಮಕೃಷ್ಣ ಮಠದ ಏಕಗಮ್ಯಾನಂದ ಮಹಾರಾಜ್‌ ಮತ್ತು ಆದಿತತ್ವ ಕಲಾತಂಡ ಸಾಬೀತು ಪಡಿಸಿದೆ. 

ನಗರದ ಸೊಬಗು ಹೆಚ್ಚಾಗಬೇಕಾದರೆ ನಗರದ ಭಿತ್ತಿಗಳು ಅಂದವಾಗಿ ಶೃಂಗಾರಗೊಂಡಿರಬೇಕು. ಮಂಗಳೂರು ನಗರದ ವೆನ್‌ಲಾಕ್‌ ಆಸ್ಪತ್ರೆ ಹಾಗೂ ಸರಕಾರಿ ಕಾಲೇಜಿನ ಮುಂಭಾಗದ ಗೋಡೆಗಳಲ್ಲಿ ಕಲಾವಿದ ವಿಕ್ರಮ್‌ ಶೆಟ್ಟಿ ಹಾಗೂ ಶೈಲೇಶ್‌ ಕೋಟ್ಯಾನ್‌ ನೇತೃತ್ವದ ಆದಿತತ್ವ ಕಲಾತಂಡವು ಬಣ್ಣಗಳ ತೋರಣ ಕಟ್ಟಿ ವಿಶೇಷ ಮೆರುಗನ್ನು ನೀಡಿದೆ. ಮಹಾಲಸ ಕಲಾಶಿಕ್ಷಣ ಸಂಸ್ಥೆಯ ಸೌಮ್ಯಾ ಭಟ್‌, ಕಮಿಲ್‌ರಾಜ್‌, ಶರತ್‌ ಕುಲಾಲ್‌, ಶಾಶ್ವತ್‌ ಕಿಣಿ ಹಾಗೂ ಇನ್ನೊಂದಷ್ಟು ಯುವ ಕಲಾವಿದರು ಈ ಭಿತ್ತಿಬಣ್ಣದ ಸಂಭ್ರಮದಲ್ಲಿ ಕುಂಚ, ವರ್ಣಗಳನ್ನೆಳೆದವರು. ತುಳುನಾಡಿನ ಸಂಸ್ಕೃತಿ, ಪದ್ಧತಿ, ಪ್ರಕೃತಿಯ ವಿವಿಧ ಪ್ರಕಾರಗಳನ್ನು ಈ ಗೋಡೆಯಲ್ಲಿ ಬಣ್ಣಗಳಲ್ಲಿ ಚಿತ್ರಿಸಿ ರಸ್ತೆಯನ್ನು ಕಲಾತ್ಮಕವಾಗಿ ಅನಾವರಣಗೊಳಿಸಿದುದರಿಂದ ಈ ರಸ್ತೆಯು ಶುಚಿತ್ವದ ಹೊದಿಕೆಯಿಂದ ಕಂಗೊಳಿಸುತ್ತಿದೆ. ತುಳುನಾಡಿನ ಯಕ್ಷಗಾನ, ಕಂಬಳ, ದೈವಾರಾಧನೆ, ಗುತ್ತಿನಮನೆ, ಮೀನುಗಾರಿಕೆ ಮುಂತಾದ ವಿಷಯಗಳೇ ಇಲ್ಲಿನ ಗೋಡೆಗಳಲ್ಲಿ ಕಲಾಕೃತಿಗಳಾಗಿವೆ. ನೀರು, ಕಾಡು, ನದಿ, ಪಶ್ಚಮಘಟ್ಟದ ಬಗ್ಗೆ ಅರಿವು, ಜಾಗೃತಿ ಮೂಡಿಸುವಂತಹ ಚಿತ್ತಾರಗಳೂ ಇವೆ. ಜತೆಗೆ ಮದ್ಯಪಾನ ಮಾಡದಂತೆ, ಪರಿಸರ ಮಾಲಿನ್ಯವಾಗದಂತೆ ಒಂದಷ್ಟು ಎಚ್ಚರಿಕೆಯ ಹಿತವಾಕ್ಯಗಳು, ಸಂದೇಶಗಳು ಗೋಡೆಯನ್ನಲಂಕರಿಸಿವೆ. ಬಾಲಕಾರ್ಮಿಕರ ಶೋಷಣೆ, ಶಬ್ದಮಾಲಿನ್ಯ, ಶಿಕ್ಷಣ ವಂಚಿತ ಬಾಲಕರು, ನೀರು ಪೋಲಾಗದಂತೆ ಜಾಗೃತಿ ವಹಿಸಬೇಕಾದಂತಹ ವಿಚಾರಗಳು ಕಲಾಕೃತಿಗಳಿಗೆ ಪೂರಕವಾಗುವಂತೆ ಹೊಂದಾಣಿಕೆಯಲ್ಲಿವೆ. 

ಈ ಒಂದು ರಸ್ತೆ ಸುವ್ಯವಸ್ಥೆ-ಶುಚಿತ್ವಕ್ಕೆ ಮಾದರಿಯಾಗಿದ್ದು ನಗರದ ಎಲ್ಲ ರಸ್ತೆಗಳ ಭಿತ್ತಿಗಳೂ ಇದೇ ರೀತಿ ಚಿತ್ತಾರಗಳ ಶೃಂಗಾರವಾದರೆ ಸ್ವತ್ಛ ಭಾರತವೆಂಬ ಪರಿಕಲ್ಪನೆಯು ಸಾರ್ಥಕಗೊಂಡು ಫ‌ಲಪ್ರದವಾದೀತು. ಕಲಾವಿದ ವಿಕ್ರಮ್‌ ಶೆಟ್ಟಿಯವರು ಈ ಹಿಂದೆಯೂ ಮಂಗಳೂರಿನ ವಿವಿಧ ಗೋಡೆಗಳಲ್ಲಿ ಶಿಕ್ಷಣಕ್ಕೆ, ಆರೋಗ್ಯಕ್ಕೆ, ಸಮಾಜದ ಸ್ವಾಸ್ಥ್ಯಕ್ಕೆ ಅನುಗುಣವಾಗುವಂತಹ ಚಿತ್ತಾರಗಳನ್ನು ರಚಿಸಿ ತನ್ನ ಕಲಾಪ್ರಜ್ಞೆಯನ್ನು ಅರಳಿಸಿರುವವರು. ಇದೀಗ ಮಿತ್ರ ಶೈಲೇಶ ಕೋಟ್ಯಾನ್‌ ಜತೆಗೆ ಒಂದಷ್ಟು ಯುವ ಕಲಾವಿದರನ್ನು ಸೇರಿಸಿಕೊಂಡು ಆದಿತತ್ವ ಎಂಬ ಕಲಾ ಸಂಘಟನೆಯನ್ನು ಹುಟ್ಟು ಹಾಕಿ ಮಂಗಳೂರು ಹಾಗೂ ಬೆಂಗಳೂರು ಮಹಾನಗರದ ಗೋಡೆಗಳಲ್ಲಿ ಹಾಗೂ ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ಜಾಗೃತಿ ಮೂಡಿಸುವಂತಹ ಹಾಗೂ ಸಮಾಜದ ಒಳಿತಿಗೆ ಪೂರಕವಾಗುವಂತಹ ಕಲಾಕೃತಿಗಳನ್ನು ರಚಿಸಬೇಕೆಂಬ ಯೋಜನೆಯನ್ನು ಹಾಕಿಕೊಂಡಿದ್ದಾರೆ. 

ಇದರ ಜತೆಗೆ ಆಡಳಿತ ವರ್ಗ ಈ ಕಲಾತ್ಮಕ ಯೋಜನೆಗೆ ಸ್ಪಂದಿಸದಿದ್ದಲ್ಲಿ ಮತ್ತೆ ಈ ಕಲಾಕೃತಿಗಳ ಮೇಲೆ ಒಂದಷ್ಟು ಪೋಸ್ಟರ್‌ಗಳು ಆಕ್ರಮಿಸಿಕೊಳ್ಳಬಹುದು. ಆದುದರಿಂದ ನಗರ ಪಾಲಿಕೆಯು ಈ ಭಿತ್ತಿ ಚಿತ್ತಾರಗಳ ಮೇಲೆ ಪೋಸ್ಟರ್‌ ಹಚ್ಚದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.

ದಿನೇಶ್‌ ಹೊಳ್ಳ

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.