Udayavni Special

ಯಾತನೆಯನ್ನು ಸಂಭ್ರಮವಾಗಿಸಿದ ಕೆಂಡೋನಿಯನ್ಸ್‌

ರಂಗ ತರಬೇತಿ ವಿದ್ಯಾರ್ಥಿಗಳ ಪ್ರಸ್ತುತಿ

Team Udayavani, Nov 15, 2019, 5:00 AM IST

ff-7

ಯಾತನೆಯೇ ಸಂಭ್ರಮವಾಗಿ ಬಿತ್ತರಗೊಳ್ಳುವ ಪ್ರಕ್ರಿಯೆ ಇಡೀ ನಾಟಕದಲ್ಲಿ ನಡೆಯುತ್ತದೆ. ಇನ್ನೊಂದು
ಮಗ್ಗುಳಲ್ಲಿ ನೋಡಿದಾಗ ಬದುಕಿನ ಸಂಭ್ರಮದೊಳಗೆ ಯಾತನೆ ಮರೆಯಲ್ಲಿ ನಿಂತು ಕಣ್ಣೀರು ಹಾಕುವಂತೆ ಭಾಸವಾಗುತ್ತದೆ. ನಾಟಕ ಆರಂಭಗೊಳ್ಳುವುದು ವಿಮಾನ ನಿಲ್ದಾಣದ ಒಳ ಲಾಂಜ್‌ನಿಂದ . ಇಡೀ ವಿಮಾನ ನಿಲ್ದಾಣದ ಒಳಾಂಗಣದ ನಿತ್ಯದ ಚಟುವಟಿಕೆಯನ್ನು ಅದ್ಭುತ ಅನ್ನುವ ರೀತಿಯಲ್ಲಿ ದೃಶ್ಯ ಸಂಯೋಜನೆ ಮಾಡಲಾಗಿತ್ತು.

ಕೆಂಡೋನಿಯನ್ಸ್‌ ನಾಟಕದ ಮುಖ್ಯ ಭಾಗವೇ ಸರ್ಕಸ್‌ . ಹಾಗಂತ ಇದು ಸರ್ಕಸ್‌ನ ಕಲಾವಿದರ ಅಥವಾ ಕಾರ್ಮಿಕರ ಕಷ್ಟ ಕಾರ್ಪಣ್ಯದ ಬಗ್ಗೆ ಮಾತನಾಡುವ ನಾಟಕವಲ್ಲ. ಬಣ್ಣದ ಕನಸನ್ನು ನಂಬಿ ಭ್ರಮೆಗೆ ಬಿದ್ದು, ಬಿಸಿಲ್ಗುದುರೆಯನ್ನೇರುವವರ ಬದುಕು ಮೂರಾಬಟ್ಟೆಯಾಗುವುದನ್ನು ನಾಟಕದೊಳಗೆ ಬರುವ ಸರ್ಕಸ್‌ ಸಂಕೇತಿಸುತ್ತದೆ.

ಪಾದುವ ರಂಗ ಅಧ್ಯಯನ ಕೇಂದ್ರದ ರಂಗ ತರಬೇತಿಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದ ನಾಟಕ ಕೆಂಡೋನಿಯನ್ಸ್‌. ಒಮ್ಮೆಗೆ ಈ ಕೆಂಡೋನಿಯನ್ಸ್‌ ಒಂದು ವಿಚಿತ್ರ ಹೆಸರಿನಂತೆ ಕಾಣುತ್ತಾ , ಏನಿದರ ಅರ್ಥ ಎಂದು ತಲೆ ಕೆರೆದುಕೊಳ್ಳುವಂತೆ ಮಾಡುತ್ತದೆ. ನಾಟಕ ಮುಗಿದಾಗಲೇ ಕೆಂಡೋನಿಯನ್ಸ್‌ ಅರ್ಥವಾಗುವುದು .

ಮಲಯಾಳದ ಪ್ರಸಿದ್ಧ ನಿರ್ದೇಶಕ ಅರುಣ್‌ ಲಾಲ್‌ ಅವರು ಈ ನಾಟಕವನ್ನು ಬರೆದು ನಿರ್ದೇಶಿಸಿದ್ದಾರೆ. ವಿದ್ಯಾರ್ಥಿಗಳು ವೃತ್ತಿಪರ , ಹವ್ಯಾಸಿ ಕಲಾವಿದರಿಗೆ ಸರಿ ತೂಗುವ ಮಟ್ಟಿಗೆ ನಟನೆಯಲ್ಲಿ ಕಡಿಮೆ ಇಲ್ಲದಂತೆ ನಟಿಸಿದ್ದಾರೆ. ಅತ್ಯುತ್ತಮವಾದ ಬೆಳಕಿನ ಸಂಯೋಜನೆ ಇತ್ತು. ಮಧ್ಯೆ ಮಧ್ಯೆ ಬರುವ ಹಾಡುಗಳು ನಾಟಕಕ್ಕೆ ಒಂದು ಸಂಭ್ರಮವನ್ನು ತಂದು ಕೊಡುತ್ತದೆ.

ಯಾತನೆಯೇ ಸಂಭ್ರಮವಾಗಿ ಬಿತ್ತರಗೊಳ್ಳುವ ಪ್ರಕ್ರಿಯೆ ಇಡೀ ನಾಟಕದಲ್ಲಿ ನಡೆಯುತ್ತದೆ. ಇನ್ನೊಂದು ಮಗ್ಗುಳಲ್ಲಿ ನೋಡಿದಾಗ ಬದುಕಿನ ಸಂಭ್ರಮದೊಳಗೆ ಯಾತನೆ ಮರೆಯಲ್ಲಿ ನಿಂತು ಕಣ್ಣೀರು ಹಾಕುವಂತೆ ಭಾಸವಾಗುತ್ತದೆ.

ನಾಟಕ ಆರಂಭಗೊಳ್ಳುವುದು ವಿಮಾನ ನಿಲ್ದಾಣದ ಒಳ ಲಾಂಜ್‌ನಿಂದ . ಇಡೀ ವಿಮಾನ ನಿಲ್ದಾಣದ ಒಳಾಂಗಣದ ನಿತ್ಯದ ಚಟುವಟಿಕೆಯನ್ನು ಅದ್ಭುತ ಅನ್ನುವ ರೀತಿಯಲ್ಲಿ ದೃಶ್ಯ ಸಂಯೋಜನೆ ಮಾಡಲಾಗಿತ್ತು. ಅಲ್ಲೇ ಕಾಣಿಸಿಕೊಳ್ಳುವಾತ ದಾಮು. ಊರಿನಲ್ಲಿ ಟೀ ಸ್ಟಾಲ್‌ ನಡೆಸಿಕೊಂಡಿದ್ದ ದಾಮು ಏಜೆಂಟರ ಆಮಿಷಕ್ಕೆ ಒಳಗಾಗಿ ವಿದೇಶಿ ಉದ್ಯೋಗದ ಭ್ರಮೆಗೆ ಸಿಲುಕಿ ಕೆಂಡೋನಿಯಕ್ಕೆ ವಿಮಾನ ಹತ್ತಿದವ. ಆಧುನಿಕತೆಯ ಭರಾಟೆಯ ವಿಮಾನ ನಿಲ್ದಾಣದೊಳಗಡೆ ಪೆಚ್ಚುಪೆಚ್ಚಾಗಿ ದಾಮು ಎಲ್ಲಾ ಹಳ್ಳಿಗರ ಪ್ರತಿನಿಧಿಯಂತೆ ಕಾಣುತ್ತಾನೆ.

ನೂರಾರು ಕನಸು ಹೊತ್ತು ಕೆಂಡೋನಿಯಾ ತಲುಪುವ ದಾಮು , ಅಲ್ಲಿ ಸರ್ಕಸ್‌ ಕಂಪೆನಿಯಲ್ಲಿ ಕೆಲಸ ಗಿಟ್ಟಿಸಿಕೊಳ್ಳುತ್ತಾನೆ. ನಕಲಿ ವೀಸಾದಲ್ಲಿ ಬಂದು ವಿದೇಶ ತಲುಪಿದೆ ಅನ್ನುವ ಸತ್ಯ ಗೊತ್ತಾದಾಗ ತನ್ನ ಟೀ ಸ್ಟಾಲ್‌ ಕಣ್ಣೆದುರು ಬರುತ್ತದೆ. ದಿನ ನಿತ್ಯ ಟೀ ಕುಡಿಯಲು ಬಂದವನೇ ನಕಲಿ ವೀಸಾ ಮೂಲಕ ವಿದೇಶಕ್ಕೆ ಕಳುಹಿಸಿದ ಅಪ್ರಿಯ ಸತ್ಯವನ್ನು ಒಪ್ಪುವಷ್ಟರಲ್ಲೇ , ಸುತ್ತಮುತ್ತಲೆಲ್ಲಾ ಊರಿನವರೇ ಕಾಣಿಸಿಕೊಳ್ಳುತ್ತಾರೆ. ಎಲ್ಲರದ್ದೂ ತನ್ನದೇ ಸ್ಥಿತಿ, ದಾಮು ವಸ್ತುಶಃ ಬಿಂಗ್ರಿಯಾಗುತ್ತಾನೆ.ಫ್ಲ್ಯಾಶ್‌ಬ್ಯಾಕ್‌ನಲ್ಲಿ ಬರುವ ತನ್ನ ಊರು , ಮನೆ, ಟೀ ಸ್ಟಾಲ್‌, ಪತ್ನಿ , ತಂದೆಯ ನೆನಪು ದಾಮುವನ್ನು ಪರಿತಪಿಸುವಂತೆ ಮಾಡುತ್ತದೆ.

ವೆರಿ ಸ್ಟ್ರಿಕ್ಟ್ , ನೋ ಇಮೋಷನ್ಸ್‌ ಅನ್ನುವ ಮಾತುಗಳು ಅಷ್ಟರಲ್ಲಿಯೇ ದಾಮುಗೆ ಭಾವನೆ ಇಲ್ಲದ, ತುಂಬಾ ಕಟ್ಟುನಿಟ್ಟಿನ ಲೋಕವನ್ನು ತೋರಿಸುತ್ತದೆ. ಈಗ ಸರ್ಕಸ್‌ನಲ್ಲಿ ದಾಮು ಮಂಗನ ಪಾತ್ರಧಾರಿ , ಹೌದು ಅದೇನು ಪಾತ್ರವಲ್ಲ , ಅದೊಂದು ಉದ್ಯೋಗ . ಮಂಗನಿಂದ ಮಾನವ ಬದಲಿಗೆ ನೀನು ಮಾನವನಿಂದ ಮಂಗ ಎಂದು ಹೇಳಲಾಗುತ್ತದೆ. ದಾಮುಗೆ ತಾನು ಕೆಂಡೋನಿಯಾಕ್ಕೆ ಬಂದು ಮಂಗ ಆದೆ ಎಂದು ಅರ್ಥವಾಗುವಷ್ಟರಲ್ಲಿ ಆತ ನಕಲಿ ವೀಸಾದ ಜಾಲದಲ್ಲಿ ಟ್ರ್ಯಾಪ್‌ ಆಗಿರುತ್ತಾನೆ. ಹಸಿವಿನೊಂದಿಗೆ ಹೋರಾಟವೇ ದಿನದ ಬದುಕಾಗುತ್ತದೆ.

ದಾಮುವಿಗೆ ಊರಿನ ನೆನಪು ಕಾಡುತ್ತದೆ, ಊರಿನ ಹಬ್ಬಗಳು, ಜಾತ್ರೆಗಳು ಮತ್ತೆ ಮತ್ತೆ ನೆನಪಾಗುತ್ತದೆ. ಇವೆಲ್ಲವೂ ಅತ್ಯುತ್ತಮ ದೃಶ್ಯ ರೂಪಕಗಳಾಗಿ ಬರುವ ಮೂಲಕ ವೇದಿಕೆಯಲ್ಲಿ ಸಂಭ್ರಮ ಮನೆ ಮಾಡುತ್ತದೆ. ಪ್ರೇಕ್ಷಕನಿಗೂ ಸ್ಥಳೀಯ ಅಸ್ಮಿತೆಯ ರಂಗು ರಂಗಿನ ಹಬ್ಬ ಕಣ್ಮನ ಸೆಳೆಯುತ್ತದೆ.

ಪತ್ನಿ, ಮಕ್ಕಳ ಭೇಟಿಯೆಂಬ ಹಗಲು ಕನಸು ಕಾಣುವ ದಾಮುವಿಗೆ ಮನೆ , ಮಡದಿ ಮಕ್ಕಳ ನೆನಪು ಅದಾಗೆಲ್ಲಾ ಇನ್ನೂ ಊರಿಗೆ ಹೋಗುವುದು ಕನಸಷ್ಟೇ ಎಂಬ ನೋವು ಎದೆಯನ್ನು ಚುಚ್ಚುತ್ತದೆ.

ಸರ್ಕಸ್‌ನಲ್ಲಿ ದಾಮುವಿನ ಮಂಗನಾಟ , ಮಂಗನ ಪಾಡಾಗುತ್ತದೆ , ಸಿಂಹದ ಬಾಯಿಗೆ ಬೀಳುವ ಮಂಗನಾಗಿ ನಟಿಸಬೇಕಾಗುತ್ತದೆ. ಅದು ನಟನೆಯಲ್ಲ ಜೀವವನ್ನು ಕೈಯಲ್ಲಿ ಹಿಡಿದು ಓಡುವ ಓಟ. ಸಿಂಹದ ಗೂಡಿನ ಬಾಗಿಲು ತೆರೆದಾಗ ದಿಕ್ಕಾಪಾಲಾಗಿ ಓಡುವ ದಾಮು ಕೊನೆಗೆ ಸಿಂಹದ ಕಾಲಬುಡಕ್ಕೆ ಬಂದು ಬೀಳುತ್ತಾನೆ. ಇನ್ನೇನೂ ಜೀವ ಹರಣವಾಯಿತು ಅನ್ನುವಾಗಲೇ ಸಿಂಹದ ಮುಖವಾಡದಿಂದ ಮನುಷ್ಯ ಹೊರ ಬರುತ್ತಾನೆ , ಸಿಂಹದೊಳಗಿನ ಮನುಷ್ಯ , ಅರೇ…ಆತನೂ ದಾಮುವಿನ ಊರಿನವನೇ ಆಗಿದ್ದ, ಇನ್ನೂ ಸರ್ಕಸ್‌ನ ಕರಡಿ, ರಿಂಗ್‌ ಮಾಸ್ಟರ್‌ ಎಲ್ಲರೂ ದಾಮುವಿನ ಊರಿನವರೇ . ಇಲ್ಲಿ ಎಲ್ಲವೂ ಡೂಪ್ಲಿಕೇಟ್‌ , ಯಾವುದೂ ಒರಿಜಿನಲ್‌ ಇಲ್ಲ ಅನ್ನುವ ಎಲ್ಲರ ಮಾತು , ಇಡೀ ಕಥನದ ತಿರುಳನ್ನು ಧ್ವನಿಸುತ್ತದೆ.

ವೈಭವದ ಕಲರ್‌ಫ‌ುಲ್‌ ಸರ್ಕಸ್‌ ಇಡೀ ನಾಟಕಕ್ಕೆ ಸಂಭ್ರಮವನ್ನು ತಂದುಕೊಟ್ಟದ್ದು ನಿಜ. ನೋವಿನ , ಯಾತನೆಯ ನೆರಳಲ್ಲೂ ಇಡೀ ನಾಟಕ ಸಂಭ್ರಮದ ಸಾಗರವಾಗಿ ಹರಿಯುತ್ತದೆ.

ನಾಟಕ ಪೂರ್ತಿ ರಟ್ಟಿನ ಪೆಟ್ಟಿಗೆಗಳನ್ನೇ ರಂಗ ಸಜ್ಜಿಕೆಗೆ ಬಳಸಿಕೊಂಡದ್ದು ಅಧುºತವಾಗಿತ್ತು. ಇಡೀ ನಾಟಕವನ್ನು ರಟ್ಟಿನ ಪೆಟ್ಟಿಗಳ ಸಾಲಿನಲ್ಲಿ ಮೂರು ನಾಲ್ಕು ದೃಶ್ಯಗಳಿಗೂ ಜೋಡಿಕೆಯಾಗುವಂತೆ ಬಳಸಿಕೊಂಡದ್ದು , ಮತ್ತೆ ಸರ್ಕಸ್ಸಿನ ಒಳಾಂಗಣಕ್ಕೆ , ವಿಮಾನ ನಿಲ್ದಾಣದ ಒಳಾಂಗಣಕ್ಕೆ ವೇದಿಕೆಯನ್ನು ಬಳಸಿಕೊಂಡದ್ದು, ಪೋಟೋ ಫ್ರೆàಮ್‌ನಲ್ಲಿ ಪಾತ್ರಧಾರಿಯನ್ನು ಬಳಸಿಕೊಂಡದ್ದು ಅದ್ಭುತ ತಂತ್ರಗಾರಿಕೆಯೇ ಸರಿ .

ನಾಟಕ ಆರಂಭಗೊಳ್ಳುವಾಗ ಕೇಳಲಾಗುವ ನೀನೆಲ್ಲಿಗೆ ಹೋಗುವೆ ಅನ್ನುವ ಪ್ರಶ್ನೆಗೆ ನಾಟಕ ಮುಕ್ತಾಯದಲ್ಲಿ ಬರುವ ಮುಖವಾಡ ಕಳಚಿ ನಾನು ನಾನೇ ಆಗಬೇಕು, ನಾನು ನನ್ನಲ್ಲಿಗೆ ವಾಪಸು ಹೋಗಬೇಕು ಎಂಬ ಹಪಾಹಪಿ ಇಡೀ ನಾಟಕ ಧ್ವನಿಸುವ ಕಥಾವಸ್ತು . ದಾಮುವಿನ ಪಾತ್ರ ಮಾಡಿದ ಕ್ಲಾನೆನ್‌ ಫೆರ್ನಾಂಡಿಸ್‌ ನಟನೆ ಅದ್ಭುತವಾಗಿತ್ತು. ಎಲ್ಲಾ ನಟರ ನಟನೆ ತುಂಬಾ ಚೆನ್ನಾಗಿ ಲವಲವಿಕೆಯಿಂದ ಕೂಡಿತ್ತು. ಬೆಳಕಿನ ಸಂಯೋಜನೆ , ಸಂಗೀತ ಚೆನ್ನಾಗಿತ್ತು.

ಬದುಕನ್ನೇ ಅಲ್ಲಾಡಿಸಿ ಬಿಡುವ ಯಾತನೆಯನ್ನು ಒಂದು ಸಂಭ್ರಮದ ಸ್ವರೂಪದಲ್ಲಿ , ಅಥವಾ ಫ್ಯಾಮಿಲಿ ಎಂಟರ್‌ಟೈನ್‌ಮೆಂಟ್‌ ಎಂಬ ಸ್ವರೂಪದಲ್ಲಿ ಪ್ರಸ್ತುತಪಡಿಸಿದ್ದು ಈ ನಾಟಕದ ಹೆಚ್ಚುಗಾರಿಕೆ. ಕನ್ನಡ ನೆಲದಲ್ಲಿ ಅರುಣ್‌ಲಾಲ್‌ ಬಿರುಗಾಳಿಯನ್ನೇ ಎಬ್ಬಿಸಿದ್ದಾರೆ. ನಿಸಾಸಮ್‌ ಕ್ರಿಸ್ಟೋಪರ್‌ ಅವರ ಸೃಜನಶೀಲ ಕಾರ್ಯ ಸಂಯೋಜನೆ , ಫಾದರ್‌ ಆಲ್ವಿನ್‌ ಸೆರಾವೋ ಅವರ ನಿರ್ಮಾಣ ಸಾಹಸಕ್ಕೆ ಯಶ ಸಿಕ್ಕಿದೆ.

ತಾರಾನಾಥ್‌ ಗಟ್ಟಿ ಕಾಪಿಕಾಡ್‌

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

hack

ನಿಮ್ಮ ಸ್ಮಾರ್ಟ್ ಪೋನ್ ಹ್ಯಾಕ್ ಆಗಿದೆ ಎಂದು ಹೇಗೆ ಪತ್ತೆಹಚ್ಚುವುದು ? ಇಲ್ಲಿವೆ ಮಾಹಿತಿ

ಮಾನಸಿಕ ಸ್ಥೈರ್ಯ ವೃದ್ಧಿಗೆ “ಮೆಂಟಲ್‌ ಸ್ಟ್ರೆಂತ್‌ ಮ್ಯಾಟರ್ಸ್”

ಮಾನಸಿಕ ಸ್ಥೈರ್ಯ ವೃದ್ಧಿಗೆ “ಮೆಂಟಲ್‌ ಸ್ಟ್ರೆಂತ್‌ ಮ್ಯಾಟರ್ಸ್”

ವೆಂಟಿಲೇಟರ್ ನಲ್ಲಿ ಪ್ರಣಬ್ ಮುಖರ್ಜಿ; ಮಾಜಿ ರಾಷ್ಟ್ರಪತಿ ಆರೋಗ್ಯ ಸ್ಥಿತಿ ಗಂಭೀರ

ವೆಂಟಿಲೇಟರ್ ನಲ್ಲಿ ಪ್ರಣಬ್ ಮುಖರ್ಜಿ; ಮಾಜಿ ರಾಷ್ಟ್ರಪತಿ ಆರೋಗ್ಯ ಸ್ಥಿತಿ ಗಂಭೀರ

ಹಾಸನ: 145 ಹೊಸ ಕೋವಿಡ್ ಸೋಂಕು ಪ್ರಕರಣಗಳು, ಮೂವರು ಸೋಂಕಿತರು ಸಾವು

ಹಾಸನ: 145 ಹೊಸ ಕೋವಿಡ್ ಸೋಂಕು ಪ್ರಕರಣಗಳು, ಮೂವರು ಸೋಂಕಿತರು ಸಾವು

ಪುಟಿನ್ ಮಗಳ ಮೇಲೆ ಪ್ರಯೋಗ; ಜಗತ್ತಿನ ಮೊದಲ ಕೋವಿಡ್ 19 ಲಸಿಕೆ ಬಿಡುಗಡೆಗೆ ರಷ್ಯಾ ಸಜ್ಜು

ಪುಟಿನ್ ಮಗಳ ಮೇಲೆ ಪ್ರಯೋಗ; ಜಗತ್ತಿನ ಮೊದಲ ಕೋವಿಡ್ 19 ಲಸಿಕೆ ಬಿಡುಗಡೆಗೆ ರಷ್ಯಾ ಸಜ್ಜು

ಕೋವಿಡ್ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆಗಳಿಗೆ ಅನುಮತಿ ನೀಡಲು ನಿರ್ದೇಶನ

ಕೋವಿಡ್ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆಗಳಿಗೆ ಅನುಮತಿ ನೀಡಲು ನಿರ್ದೇಶನ

ಲಂಚ ಪಡೆಯುತ್ತಿದ್ದ ಯಾದಗಿರಿ ಜಿಲ್ಲಾ ಆರೋಗ್ಯಾಧಿಕಾರಿ ಎಸಿಬಿ ಬಲೆಗೆ

ಲಂಚ ಪಡೆಯುತ್ತಿದ್ದ ಯಾದಗಿರಿ ಜಿಲ್ಲಾ ಆರೋಗ್ಯಾಧಿಕಾರಿ ಎಸಿಬಿ ಬಲೆಗೆ
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ಮಿತ್ತಬಾಗಿಲು ಗ್ರಾಮದ ಕಾಡುಮನೆ ಬಳಿ ಭಾರಿ ಭೂಕುಸಿತ: ಆತಂಕದಲ್ಲಿ ನಿವಾಸಿಗಳು

udayavani youtube

SSLC ಪರೀಕ್ಷೆಯಲ್ಲಿ ರಾಜ್ಯದಲ್ಲಿ ದ್ವಿತೀಯ ಸ್ಥಾನ ಹಂಚಿಕೊಂಡ ನಿಧಿ ರಾವ್

udayavani youtube

ದೇಶದ ಕೃಷಿಕ ಒಬ್ಬ ಉದ್ಯಮಿ ಯಾಗಬೇಕು ಪ್ರಧಾನಿಗಳ ಆಶಾಯ | Narendra Modi Agriculture

udayavani youtube

ಅಮೃತ’ ಗಾನ ಧಾರೆ: ಮದುವೆ ಔತಣ ಕೂಟದಲ್ಲಿ ಪತಿ-ಪತ್ನಿ ‘ಯಕ್ಷ ಗಾನ ವೈಭವ’

udayavani youtube

ರಾಂಬೂಟಾನ್ ಬೆಳೆಯುವ ಸೂಕ್ತ ವಿಧಾನ | How To Grow Rambutan Fruit | FULL INFORMATIONಹೊಸ ಸೇರ್ಪಡೆ

hack

ನಿಮ್ಮ ಸ್ಮಾರ್ಟ್ ಪೋನ್ ಹ್ಯಾಕ್ ಆಗಿದೆ ಎಂದು ಹೇಗೆ ಪತ್ತೆಹಚ್ಚುವುದು ? ಇಲ್ಲಿವೆ ಮಾಹಿತಿ

ಮಾನಸಿಕ ಸ್ಥೈರ್ಯ ವೃದ್ಧಿಗೆ “ಮೆಂಟಲ್‌ ಸ್ಟ್ರೆಂತ್‌ ಮ್ಯಾಟರ್ಸ್”

ಮಾನಸಿಕ ಸ್ಥೈರ್ಯ ವೃದ್ಧಿಗೆ “ಮೆಂಟಲ್‌ ಸ್ಟ್ರೆಂತ್‌ ಮ್ಯಾಟರ್ಸ್”

ಬೋಟಿಗೆ ಸಿಲುಕಿದ ಬಲೆ ತೆಗೆಯುವ ಸಂದರ್ಭ ಸಮುದ್ರದಲ್ಲಿ ಮುಳುಗಿ ವ್ಯಕ್ತಿ ಸಾವು

ಬೋಟಿಗೆ ಸಿಲುಕಿದ ಬಲೆ ತೆಗೆಯುವ ಸಂದರ್ಭ ಸಮುದ್ರದಲ್ಲಿ ಮುಳುಗಿ ವ್ಯಕ್ತಿ ಸಾವು

ಕನ್ನಡ ಮಾದ್ಯಮದಲ್ಲಿ ಕಲಿತು ಸಿಎಲ್ಇ ಶಿಕ್ಷಣ ಸಂಸ್ಥೆಯ ಕೀರ್ತಿ ಹೆಚ್ಚಿಸಿದ ಕುಮಾರಿ ಸಹನಾ

ಕನ್ನಡ ಮಾದ್ಯಮದಲ್ಲಿ ಕಲಿತು ಸಿಎಲ್ಇ ಶಿಕ್ಷಣ ಸಂಸ್ಥೆಯ ಕೀರ್ತಿ ಹೆಚ್ಚಿಸಿದ ಕುಮಾರಿ ಸಹನಾ

ವೆಂಟಿಲೇಟರ್ ನಲ್ಲಿ ಪ್ರಣಬ್ ಮುಖರ್ಜಿ; ಮಾಜಿ ರಾಷ್ಟ್ರಪತಿ ಆರೋಗ್ಯ ಸ್ಥಿತಿ ಗಂಭೀರ

ವೆಂಟಿಲೇಟರ್ ನಲ್ಲಿ ಪ್ರಣಬ್ ಮುಖರ್ಜಿ; ಮಾಜಿ ರಾಷ್ಟ್ರಪತಿ ಆರೋಗ್ಯ ಸ್ಥಿತಿ ಗಂಭೀರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.