ಯುದ್ಧದ ಕರಾಳತೆಯನ್ನು ಅನಾವರಣಗೊಳಿಸುವ ಪುಟುಗೋಸಿ ಮನುಷ್ಯ

ಗುರುರಾಜ ಮಾರ್ಪಳ್ಳಿ ಅವರು ಬರೆದು ನಿರ್ದೇಶಿಸಿದ ನಾಟಕ

Team Udayavani, Jan 24, 2020, 5:12 AM IST

kaa-14

ಸುಮನಸಾ ಕೊಡವೂರು ತಂಡದವರು ಜ.6ರಂದು ಎಂ.ಜಿ.ಎಂ. ಕಾಲೇಜಿನಲ್ಲಿ ಪ್ರಸಿದ್ಧ ನಾಟಕಕಾರ ಗುರುರಾಜ ಮಾರ್ಪಳ್ಳಿ ಬರೆದು, ನಿರ್ದೇಶಿಸಿದ “ಪುಟುಗೋಸಿ ಮನುಷ್ಯ’ ಎಂಬ ಅಸಂಗತ ನಾಟಕವನ್ನು ಪ್ರದರ್ಶಿಸಿದ ರು. ವರ್ತಮಾನ ಕಾಲದ ಭೀಕರ ದುರಂತಗಳು, ರಾಜಕಾರಣ, ಧರ್ಮ, ವಿಜ್ಞಾನಗಳಿಂದ ಸಂಭವಿಸುತ್ತಿರುವ ಹಿನ್ನೆಲೆಯನ್ನು ಇಟ್ಟುಕೊಂಡು ಈ ನಾಟಕ ರಚಿಸಲಾಗಿದೆ.

ನಾಟಕಕಾರನೊಬ್ಬ ಭಯೋತ್ಪಾದಕರ ಪ್ರೇತಗಳೊಂದಿಗೆ ಸಂಭಾಷಿಸುವ ಘಟನೆಯಿಂದ ಪ್ರರಂಭವಾಗುತ್ತದೆ. ಭಯೋತ್ಪಾದಕ ಪ್ರೇತಗಳು ನಾಟಕಕಾರನನ್ನು ಕೊಲ್ಲುವುದಕ್ಕಾಗಿ ಹೆದರಿಸಿದರೆ, ನಾಟಕಕಾರ ತಾನೇ ಭಯೋತ್ಪಾದಕದಿಂದ ದೊಡ್ಡ ಕೊಲೆಯನ್ನು ಮಾಡುವುದಾಗಿ ಹೇಳುತ್ತಾನೆ. ಅಂದರೆ ಜೀವಂತವಾಗಿರುವ ಆಧುನಿಕ ನಾಗರಿಕತೆಯನ್ನು ಕೊಂದು ಅದನ್ನು ಪೋಸ್ಟ್‌ ಮಾರ್ಟಮ್‌ ಮಾಡುತ್ತಾನೆ. ಟ್ರಂಪ್‌ ಮತ್ತು ಕಿಮ್‌ ಮೂರನೆಯ ಮಹಾಯುದ್ಧ ಮಾಡಿ ಭೂಮಿ ನಾಶವಾಗುವ ಕಾಲ್ಪನಿಕ ಹಿನ್ನಲೆಯಿಂದ ನಾಟಕ ಪ್ರಾರಂಭವಾಗುತ್ತದೆ.

ಪ್ರಕೃತಿ ವಿಕೋಪಗಳಾದ ಚಂಡಮಾರುತ, ಭೂಕಂಪ, ಅತಿವೃಷ್ಟಿಯಿಂದ ಭೂಮಿ ಘಾಸಿಗೊಂಡರೂ ಮತ್ತೆ ಚಿಗುರುತ್ತದೆ. ಆದರೆ ಅಣ್ವಸ್ತ್ರಗಳಿಂದ ನಾಶವಾಗುವ ಭೂಮಿ ಶತಮಾನಗಳ ಕಾಲ ವಿಕೃತಿಗೆ ಒಳಗಾಗುತ್ತದೆ. ಭೂಮಿಯಲ್ಲಿ ಆಧುನಿಕ ನಾಗರಿಕತೆ ನಾಶವಾದರೆ ಪುನಃ ಅಂಥದೇ ನಾಗರಿಕತೆಯನ್ನು ಕಟ್ಟಬೇಕೆ ಎಂದು ಪುಟುಗೋಸಿ ಮನುಷ್ಯ ರಾಷ್ಟ್ರಪತಿಯಾಗಿ ಪ್ರಶ್ನಿಸುತ್ತಾನೆ. ಬತ್ತಿದ ನದಿಗಳ ತೊರೆಗಳ ಬಾಯಾರಿದ ಭೂಮಿಯ ಪುನರಜ್ಜೀವನ ಹೇಗೆ ಎಂಬು ಪ್ರಶ್ನೆ.

ನಾಟಕಕಾರ ಭಯೋತ್ಪಾದಕ ಪ್ರೇತಗಳು ಮತ್ತು ಗಾಂಧೀಜಿಯ ಕೋತಿಗಳು ಭೇಟಿಯಾಗುವ ಘಟನೆಯನ್ನು ಘೋಷಾಪುರದ ಸ್ಮಶಾನದಲ್ಲಿ ಸೃಷ್ಟಿ ಮಾಡುತ್ತಾನೆ. ಅಮೆರಿಕದ ಜೀವನ ಕ್ರಮ ಅತಿರೇಕದ ಸ್ವತ್ಛಂದತೆ, ಆಧುನಿಕ ನಾಗರಿಕತೆಯ ಜಾಹೀರಾತು ಜಗತ್ತು, ಧಾರವಾಹಿ, ಸಿನಿಮಾಗಳು, ಲಿವಿಂಗ್‌ ಟುಗೆದರ್‌ ಶೈಲಿಗಳು ಎಲ್ಲವೂ ವಿದೂಷಕನ ಬಾಯಲ್ಲಿ ಮೂಡಿಬಂದಿದೆ. ಹಾಡುಗಳಂತೂ ಮಾರ್ಮಿಕವಾಗಿವೆ.

ಪದೇ ಪದೆ ಆಧುನಿಕ ದುರಂತಗಳ ಬಗ್ಗೆ ಯೋಚಿಸುವಂತೆ ಮಾಡುತ್ತದೆ. ಈ ನಾಟಕದ ಪ್ರಸ್ತುತಿಯಲ್ಲಿ ಕಾಣುವ ವಿಶೇಷವೆಂದರೆ ದುರಂತವನ್ನು ಅಂತ್ಯದ ನಗೆಗಡಲಲ್ಲಿ ತೇಲಿಸಿ ಹೇಳುವ ರೀತಿ. ನಟರಾದ ಎಂ. ಎಸ್‌. ಭಟ್‌, ಯೊಗೀಶ್‌ ಕೊಳಲಗಿರಿ, ದಿವಾಕರ್‌ ಕಟೀಲ್‌, ನೂತನ್‌ ಕುಮಾರ್‌, ಜೀವನ್‌, ಅಕ್ಷತ್‌, ಪ್ರಜ್ಞಾಶ್ರೀ, ಕವನ, ಕಾವ್ಯ ಹಾಗೂ ಸಿಂಚನ ಲವಲವಿಕೆಯಿಂದ ನಟಿಸಿದರು.

ರಂಗ ಸಜ್ಜಿಕೆಯಲ್ಲಿ ಜಗದೀಶ್‌ ಚೆನ್ನಂಗಡಿ, ನೆರಳು ಬೆಳಕಿನ ಸಂಯೋಜನೆ ಬೆಳಕಿನ ಆಟ ನಾಟಕಕ್ಕೆ ಪೂರಕವಾಗಿ ಪ್ರವೀಣ್‌ ಜಿ.ಕೊಡವೂರು ನಿರ್ವಹಿಸಿದರು. ರಂಗ ಸಂಗೀತವು ನಾಟಕಕ್ಕೆ ಪೂರಕವಾಗಿ ಮೂಡಿಬಂತು ಯನ್‌ಸ್ಟನ್‌ ಹಾಗೂ ವಾರ್ಷಿತಾ ಅಭಿನಂದನೆಗೆ ಆರ್ಹರು.ಶ್ರೀಮಂತ ರಾಷ್ಟ್ರಗಳು ಜಗತ್ತಿಗೆ ತಂದಿರುವ ಕ್ಷಿಪಣಿ, ರಾಸಾಯನಿಕ ಅಸ್ತ್ರಗಳ ಕುರಿತು ಯೋಚಿಸುವಂತೆ ಮಾಡುವ ನಾಟಕ.

ಜಯರಾಮ್‌, ನೀಲಾವರ

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.