Udayavni Special

ದೀನ ದುರ್ಬಲರಿಗಾಗಿ ಕುಣಿದ ರಾಧೆ-ಕೃಷ್ಣ-ಗೋಪಿಕೆಯರು

ನೃತ್ಯನಿಕೇತನ ಕೊಡವೂರು ಪ್ರಸ್ತುತಿ

Team Udayavani, Sep 20, 2019, 5:00 AM IST

t-16

ಆತ್ಮ ಸಂತೋಷಕ್ಕಾಗಿ, ಕೃಷ್ಣ ಮೇಲಿನ ಭಕ್ತಿಯಿಂದ/ಪ್ರೀತಿಯಿಂದ, ಮನರಂಜನೆಯ ಜೊತೆಗೆ ಸಾಮಾಜಿಕ ಕಳಕಳಿಯ ಸಂದೇಶ ನೀಡುತ್ತಾ ಸಂಗ್ರಹವಾದ ಹಣವನ್ನು ಆರ್ಥಿಕವಾಗಿ ಹಿಂದುಳಿದವರಿಗೆ, ವೈದ್ಯಕೀಯ ವೆಚ್ಚ, ಶಿಕ್ಷಣ, ಮನೆ ನಿರ್ಮಾಣದಂತಹ ಸಮಾಜಮುಖೀ ಕಾರ್ಯಗಳಿಗಾಗಿ ವೇಷ ಹಾಕುವವರಿದ್ದಾರೆ.

ಶ್ರೀ ಕೃಷ್ಣಜನ್ಮಾಷ್ಟಮಿಗೆ ವೇಷ ಹಾಕುವುದು ಈಗೀಗ ಒಂದು ಹೊಸ ಆಯಾಮ ಪಡೆದುಕೊಂಡಿದೆ. ಹಲವರು ಆತ್ಮ ಸಂತೋಷಕ್ಕಾಗಿ, ಮತ್ತೆ ಕೆಲವರು ಕೃಷ್ಣ ಮೇಲಿನ ಭಕ್ತಿಯಿಂದ/ಪ್ರೀತಿಯಿಂದ, ಇನ್ನು ಕೆಲವರು ಮನರಂಜನೆಯ ಜೊತೆಗೆ ಸಾಮಾಜಿಕ ಕಳಕಳಿಯ ಸಂದೇಶ ನೀಡುತ್ತಾ ಸಂಗ್ರಹವಾದ ಹಣವನ್ನು ಆರ್ಥಿಕವಾಗಿ ಹಿಂದುಳಿದವರಿಗೆ, ವೈದ್ಯಕೀಯ ವೆಚ್ಚ-ಶಿಕ್ಷಣ, ಮನೆ ನಿರ್ಮಾಣದಂತಹ ಸಮಾಜಮುಖೀ ಕಾರ್ಯಗಳಿಗಾಗಿ ವೇಷ ಹಾಕುವವರಿದ್ದಾರೆ. ಈ ಪ್ರಯತ್ನಕ್ಕೆ ಪೂರಕವಾಗಿ ಸಮೂಹ ಸಂಚಲನವೊಂದನ್ನು ಈ ಬಾರಿಯ ಶ್ರೀ ಕೃಷ್ಣ ಲೀಲೋತ್ಸವದಂದು ನೃತ್ಯನಿಕೇತನ ಕೊಡವೂರು ಇದರ ವಿದ್ಯಾರ್ಥಿನಿಯರು ಮಾಡಿದ್ದಾರೆ.

ಆಯ್ದ ಮನೆಗಳಲ್ಲಿ ರಾಧಾಕೃಷ್ಣ ನೃತ್ಯ ಪ್ರದರ್ಶನ ನೀಡಿ ಸಂಗ್ರಹವಾದ ಮೊತ್ತವನ್ನು ಸಮಾಜದ ದೀನ-ದುರ್ಬಲರಿಗೆ ಜಾತಿ-ಮತ-ಧರ್ಮ ಬೇಧವಿಲ್ಲದೆ ಹಂಚುವ ಪ್ರಯತ್ನ ಪ್ರಶಂಸನೀಯ. ಸಂಗ್ರಹಿಸಿದ ಹಣವನ್ನು ವಿತರಿಸುವ ಸಮಾರಂಭ ಇತ್ತೀಚೆಗೆ ನಡೆದು ಈ ಸಂದರ್ಭದಲ್ಲಿ ಕುಣಿದಾಡೋ ಕೃಷ್ಣ ಎನ್ನುವ ನೃತ್ಯ ಕಾರ್ಯಕ್ರಮ ನೀಡಿದರು. ಕೃಷ್ಣನಿಗರ್ಪಿತವಾದ ಮೊದಲ ನೃತ್ಯ ಕುಸುಮದಲ್ಲಿ ಮುನಿಸಿಕೊಂಡ ರಾಧೆಯನ್ನು ಒಲಿಸಿಕೊಳ್ಳಲು ಕೃಷ್ಣನು ಹೆಣೆದ ಮಾಯಾಜಾಲ ಪರಿಣಾಮಕಾರಿಯಾಗಿ ಅಭಿವ್ಯಕ್ತವಾಯಿತು. ರಾಧೆಯ ಸಮಕ್ಷಮ ಇತರ ಗೋಪಿಕೆಯರೊಂದಿಗೆ ಸರಸ-ಸಲ್ಲಾಪ, ಅವರೊಂದಿಗೆ ಒಲವಿನ ಒಡನಾಟ ಕಂಡು ರಾಧೆ ಹುಸಿಕೋಪದಿಂದ ಕೃಷ್ಣನನ್ನು ನಿರ್ಲಕ್ಷಿಸುವುದು, ಕೃಷ್ಣನ ರಮಿಸುವಿಕೆ ಇತ್ಯಾದಿಗಳನ್ನು ಕಲಾವಿದೆಯರು ಸೊಗಸಾಗಿ ವ್ಯಕ್ತಪಡಿಸಿದರು. ಮುಂದಿನ ನೃತ್ಯದಲ್ಲಿ ಕಾರಿರುಳಿನಲ್ಲಿ ರಾಧೆಯನ್ನು ಭಯಭೀತಳನ್ನಾಗಿಸಿ ತನ್ಮೂಲಕ ಆಕೆಯ ಸಾಮೀಪ್ಯ ಸಾಧಿಸಿ, ಕತ್ತಲೆಗೆ ಹೆದರಿದಂತೆ ನಟಿಸಿ ಅಮ್ಮ ಯಶೋದಾಳನ್ನು ದೀಪ ತರುವಂತೆ ಬಿನ್ನೆçಸುವ, ತನ್ನ ಸಲಹೆಯಂತೆ ಅಡಗಿ ಕುಳಿತ ರಾಧೆಯನ್ನು ಯಶೋದೆಗೆ ತೋರಿಸಿ ಆಕೆಯನ್ನು ಮುಜುಗರಕ್ಕೀಡು ಮಾಡುವ, ತಾಯಿಗೆ ತನ್ನ ಹಾಗೂ ರಾಧೆಯ ಪ್ರಣಯದಾಟ ಪರಿಚಯಿಸುವ ಮುಂತಾದ ತುಂಟಾಟಗಳನ್ನು ವಿ|ಅನಘಾಶ್ರೀ ಪ್ರಸ್ತುತ ಪಡಿಸಿದರು.

ಗೋಪಿಕೆಯರ ವಸ್ತ್ರಾಪಹರಣ, ಅವರೊಂದಿಗೆ ಕಣ್ಣಮುಚ್ಚಾಲೆಯಾಟ, ವೇಣಿಯೊಂದಿಗೆ ವೇಣುನಿನಾದ ಮುಂತಾದ ಕೃಷ್ಣಲೀಲೆಗಳನ್ನು ಸುರಭಿ ಸುಧೀರ್‌ ಅಭಿನಯಪೂರ್ವಕ ನೃತ್ಯ ಸಂಚಲನದೊಂದಿಗೆ ಸಾಕಾರಗೊಳಿಸಿದರು. ಬಾಹ್ಯ ಚಕ್ಷುಗಳಿಲ್ಲದಿದ್ದರೂ ಅಂತಃಚಕ್ಷುವಿನಿಂದ ಕೃಷ್ಣನನ್ನು ಆರಾಧಿಸುತ್ತಿದ್ದ ಸೂರದಾಸನಿಗೆ ಶ್ರೀಕೃಷ್ಣನು ತನ್ನ ಸುಂದರ ರೂಪವನ್ನು ನೋಡಲು ದಿವ್ಯ ಚಕ್ಷುಗಳನ್ನಿತ್ತು ಮತ್ತೆ ಆತನ ಕೋರಿಕೆಯಂತೆ ಹುಟ್ಟು ಕುರುಡನನ್ನಾಗಿಸಿದ ದೃಶ್ಯಾವಳಿಗಳು ಅಂತಃಕರಣ ಕಲಕುವಂತೆ ಮೂಡಿ ಬಂದವು. ಕೊನೆಯ ನೃತ್ಯದಲ್ಲಿ ಗೋಪಿಕೆಯರ ಮನದಿಂಗಿತವನ್ನು ಪೂರೈಸುವ ವಿವಿಧ ರೂಪ-ಶೈಲಿಗಳಲ್ಲಿ ಪ್ರಕಟವಾಗುವ ತುಂಟ-ನಂಟ ಕೃಷ್ಣನನ್ನು ನಯನಮನೋಹರವಾಗಿ ಚಿತ್ರಿಸಿದ ನೃತ್ಯ ಕಲಾವಿದೆಯರು ಅಭಿನಂದನಾರ್ಹರು.

ಜನನಿ ಭಾಸ್ಕರ ಕೊಡವೂರು

ಟಾಪ್ ನ್ಯೂಸ್

bangla

ದೇಗುಲಗಳ ಮೇಲೆ ದಾಳಿ, ಹತ್ಯೆ ಖಂಡಿಸಿ ಬಾಂಗ್ಲಾ ಹಿಂದೂಗಳಿಂದ ದೇಶವ್ಯಾಪಿ ನಿರಶನ

ದೇಶದ ಸಂಸ್ಕೃತಿ, ಇತಿಹಾಸ ಯುವ ಬರಹಗಾರರಿಗೆ ಆವಿಷ್ಕಾರ : ಚಂದ್ರಶೇಖರ ಕಂಬಾರ

ದೇಶದ ಸಂಸ್ಕೃತಿ, ಇತಿಹಾಸ ಯುವ ಬರಹಗಾರರಿಗೆ ಆವಿಷ್ಕಾರ : ಚಂದ್ರಶೇಖರ ಕಂಬಾರ

ವಿಶ್ವ ಅಂಚೆ ದಿನಾಚರಣೆ : ರಾಜ್ಯಪಾಲರಿಂದ ಡಾಕ್‌ ಸೇವಾ ಪ್ರಶಸ್ತಿ ಪ್ರದಾನ

ವಿಶ್ವ ಅಂಚೆ ದಿನಾಚರಣೆ : ರಾಜ್ಯಪಾಲರಿಂದ ಡಾಕ್‌ ಸೇವಾ ಪ್ರಶಸ್ತಿ ಪ್ರದಾನ

ಒಂದು ಡೋಸ್‌ ಪಡೆದವರಿಗೆ ಸ್ಥಳೀಯ ರೈಲು  ಮತ್ತು ಮಾಲ್‌ಗ‌ಳಲ್ಲಿ ಪ್ರವೇಶ ಸಾಧ್ಯತೆ

ಒಂದು ಡೋಸ್‌ ಪಡೆದವರಿಗೆ ಸ್ಥಳೀಯ ರೈಲು  ಮತ್ತು ಮಾಲ್‌ಗ‌ಳಲ್ಲಿ ಪ್ರವೇಶ ಸಾಧ್ಯತೆ

Untitled-1

ಸಹೋದರಿಯನ್ನು ಕರೆದೊಯ್ಯುತ್ತಿದ್ದ ಉದ್ಯೋಗಿ ಕೊಲೆ; ಆಟೋ ಚಾಲಕ ಸೇರಿ ನಾಲ್ಪರ ಬಂಧನ

ಡ್ರಗ್ಸ್‌ ಪ್ರಕರಣವನ್ನು ಇಲಾಖೆ ಗಂಭಿರವಾಗಿ ಪರಿಗಣಿಸುತ್ತಿದೆ: ಡಿಜಿಪಿ ಪ್ರವೀಣ್‌ ಸೂದ್‌

ಡ್ರಗ್ಸ್‌ ಪ್ರಕರಣವನ್ನು ಇಲಾಖೆ ಗಂಭಿರವಾಗಿ ಪರಿಗಣಿಸುತ್ತಿದೆ: ಡಿಜಿಪಿ ಪ್ರವೀಣ್‌ ಸೂದ್‌

gfgfdg

ಹುಬ್ಬಳ್ಳಿ: ಸಾರಿಗೆ ಸಂಸ್ಥೆ ನಮ್ಮ ಕಾರ್ಗೋಗೆ ಉತ್ತಮ ಸ್ಪಂದನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ಅರರೆ… ಬಾಳೆ ಕಾಯಿ ಶ್ಯಾವಿಗೆ.. ರುಚಿ ಬಾಯಿಗೆ, ಉತ್ತಮ ಆರೋಗ್ಯಕ್ಕೆ

udayavani youtube

ದಾಂಡೇಲಿ : ಜನಮನ ಸೂರೆಗೊಂಡ ದನಗರ ಗೌಳಿ ನೃತ್ಯ

udayavani youtube

ಭತ್ತದ ಕೃಷಿ ಭರಪೂರ ಲಾಭ ತಂದು ಕೊಡುತ್ತಾ ?

udayavani youtube

ಸಮಾಜ ಮೆಚ್ಚುವಂತೆ ಬಾಳುವೆ: ಆರ್ಯನ್‌ ಖಾನ್ |UDAYAVANI NEWS BULLETIN|17/10/2021

udayavani youtube

ಅರಕಲಗೂಡು: ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಪೊಲೀಸರ ದಾಳಿ

ಹೊಸ ಸೇರ್ಪಡೆ

ಐಪಿಎಲ್‌ ಇಲೆವೆನ್‌: ಕೆ.ಎಲ್‌. ರಾಹುಲ್‌ ಕೀಪರ್‌

ಐಪಿಎಲ್‌ ಇಲೆವೆನ್‌: ಕೆ.ಎಲ್‌. ರಾಹುಲ್‌ ಕೀಪರ್‌

bangla

ದೇಗುಲಗಳ ಮೇಲೆ ದಾಳಿ, ಹತ್ಯೆ ಖಂಡಿಸಿ ಬಾಂಗ್ಲಾ ಹಿಂದೂಗಳಿಂದ ದೇಶವ್ಯಾಪಿ ನಿರಶನ

ಮನೆಯ ನಾಲ್ವರನ್ನು ವಿಷವಿಕ್ಕಿ ಕೊಂದ ಬಾಲಕಿ!

ಮನೆಯ ನಾಲ್ವರನ್ನು ವಿಷವಿಕ್ಕಿ ಕೊಂದ ಬಾಲಕಿ!

ದೇಶದ ಸಂಸ್ಕೃತಿ, ಇತಿಹಾಸ ಯುವ ಬರಹಗಾರರಿಗೆ ಆವಿಷ್ಕಾರ : ಚಂದ್ರಶೇಖರ ಕಂಬಾರ

ದೇಶದ ಸಂಸ್ಕೃತಿ, ಇತಿಹಾಸ ಯುವ ಬರಹಗಾರರಿಗೆ ಆವಿಷ್ಕಾರ : ಚಂದ್ರಶೇಖರ ಕಂಬಾರ

ವಿಶ್ವ ಅಂಚೆ ದಿನಾಚರಣೆ : ರಾಜ್ಯಪಾಲರಿಂದ ಡಾಕ್‌ ಸೇವಾ ಪ್ರಶಸ್ತಿ ಪ್ರದಾನ

ವಿಶ್ವ ಅಂಚೆ ದಿನಾಚರಣೆ : ರಾಜ್ಯಪಾಲರಿಂದ ಡಾಕ್‌ ಸೇವಾ ಪ್ರಶಸ್ತಿ ಪ್ರದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.