ಸಮೃದ್ಧ ಆಸ್ವಾದನೆ ಒದಗಿಸಿದ ರಾಗಧನ ಸಂಗೀತೋತ್ಸವ 


Team Udayavani, Mar 9, 2018, 8:15 AM IST

s-19.jpg

ಫೆ.4ರಂದು ಪೂರ್ವಾಹ್ನ “ರಾಗಧನಶ್ರೀ’ ಪತ್ರಿಕೆಯ ದಶಮಾನೋತ್ಸವ ಸಂಭ್ರಮದೊಂದಿಗೆ “ಸಂಘಟಕರ ಹಾಗೂ ಸಂಗೀತ ಪ್ರೇಮಿಗಳ’ ಒಂದು ಸೌಹಾರ್ದ ಸಂವಾದ ಕಾರ್ಯಕ್ರಮ ನಡೆಯಿತು.

ಇಳಿ ಹಗಲಿನ ಗಾಯನವನ್ನು ನಡೆಸಿಕೊಟ್ಟವರು ಪುತ್ತೂರಿನ ಅನೀಶ್‌ ಭಟ್‌. ಗಂಟೆಯಂತೆ ಗಂಭೀರವಾದ ಗಂಡು ಶಾರೀರ, ಸ್ಪುಟವಾದ ಸಾಹಿತ್ಯ, ಸ್ವರಸ್ಥಾನಗಳ ನಿಖರತೆ ಮತ್ತು ಶ್ರುತಿ ಲೀನತೆ. ಹಂಸಧ್ವನಿಯ (ರಘುನಾಯಕ) ಚೇತೋಹಾರಿಯಾದ ಪ್ರಾರಂಭ ಉ¤ಮವಾದ ರಾಗ ವಿಸ್ತಾರದೊಂದಿಗೆ ಮೂಡಿಬಂದ ಧರ್ಮವತಿಯ (ಪರಂಧಾಮವತಿ) ಕೃತಿ ನಿರೂಪಣೆ ಮತ್ತು ಸ್ವರ ಚಮತ್ಕಾರಗಳು ಪ್ರೌಢವಾಗಿದ್ದು ಗುಣಗ್ರಾಹಿ ಶ್ರೋತೃಗಳಿಗೆ ಮುದ ನೀಡಿದವು. ಪ್ರಧಾನ ರಾಗವಾಗಿದ್ದ ಕಾಂಭೋಜಿ (ಎವರಿಮಾಟ) ಸಂಪ್ರದಾಯಬದ್ಧವಾದ ಆಲಾಪನೆ, ರಾಜ ನಡಿಗೆಯಲ್ಲಿ ಸಾಗಿದ ಕೃತಿ ನಿರೂಪಣೆ, “ಭಕ್ತ ಪರಾಧೀನ’…. ಎಂಬಲ್ಲಿ ನೆರವಲ್‌ ಮತ್ತು ಸ್ವರವಿನಿಕೆಗಳಿಂದ ಕೂಡಿತ್ತು.ಈ ಎರಡೂ ಪ್ರಸ್ತುತಿಗಳಲ್ಲೂ ತಮ್ಮ ಪಕ್ವವಾದ ಬೆರಳುಗಾರಿಕೆಯಿಂದ ಜನಮನ ಸೆಳೆದ ಗಣರಾಜ ಕಾರ್ಲೆ ಅಭಿನಂದನಾರ್ಹರು.

ಕಲ್ಯಾಣ ವಸಂತ (ಇನ್ನೂ ದಯ ಬಾರದೇ), ಸಿಂಧುಭೈರವಿ (ವೆಂಕಟಾಚಲ), ಯಮನ್‌ (ಶ್ರೀರಾಮಚಂದ್ರ ಕೃಪಾಲು), ಲಘು ಪ್ರಸ್ತುತಿಗಳು, ಹಂಸಾನಂದಿ ತಿಲ್ಲಾನಾದೊಂದಿಗೆ ಈ ಯುವ ಗಾಯಕರು ತಮ್ಮ ಕಛೇರಿಯನ್ನು ಸಮಾಪನಗೊಳಿಸಿದರು. ಮುಕ್ತವಾದ ಕಂಠವನ್ನು ಹೊಂದಿರುವ ಗಾಯಕರು ತಾರಸ್ಥಾಯಿ ಸಂಚಾರಗಳಲ್ಲಿ ಧ್ವನಿಯನ್ನು ತುಸು ಸಂಸ್ಕರಿಸುವ ಅಗತ್ಯವಿದೆ.ಗಾಯಕರ ಬಿರುಸಾದ ನಿರೂಪಣೆಗೆ ಅನುಗುಣವಾಗಿ ಸಹವಾದನ ಮತ್ತು ತನಿ ಆವರ್ತನ ನೀಡಿದ ನಿಕ್ಷಿತ್‌ ಪುತ್ತೂರು ಪ್ರಶಂಸನೀಯರು.

ಉತ್ಸವದ ಕೊನೆಯ ಹಾಡುಗಾರಿಕೆ ಚೆನ್ನೈನ ಅಮೃತಾ ಮುರಳಿ ಅವರಿಂದ. ಈ ತರುಣಿ ತುಸು ಘನವಾದ, ಆಕರ್ಷಕ ಕಂಠಸಿರಿಯನ್ನು ಹೊಂದಿದ್ದು, ಅವನ್ನು ತನ್ನ ಗಾಯನದಲ್ಲಿ ಧನಾತ್ಮಕವಾಗಿ ಬಳಸಿಕೊಂಡಿದ್ದಾರೆ. ಕಛೇರಿಯುದ್ಧಕ್ಕೂ ಬಹುಶ್ರುತವಲ್ಲದ ಪ್ರಸ್ತುತಿಗಳನ್ನೇ ಹಾಡಿದ ಗಾಯಕಿ ತನ್ಮೂಲಕ ಶ್ರೋತೃಗಳ ಕುತೂಹಲವನ್ನು ಕಾಯ್ದುಕೊಂಡರು.

ಬೇಗಡೆ ರಾಗದ ವರ್ಣ (ದಯಾನಿಧೇ), ಶ್ರೀರಾಗ (ಯುಕ್ತಮು ಕಾದು), ಸರಸ್ವತಿ ಮನೋಹರಿ ಕೃತಿಗಳ ಅನಂತರ ಗಾಯಕಿ “ವರಾಳಿ’ (ಕರುಣ ಜೂಡವಮ್ಮ) ರಾಗವನ್ನು ಎತ್ತಿಕೊಂಡರು. ಅಲ್ಲಿಯವರೆಗೂ ತುಸು ಗೊಂದಲದಲ್ಲಿದ್ದ ಶ್ರೋತೃಗಳಿಗಾದರೂ ಕಛೇರಿಯ ಹಿಡಿತ ಸಿಕ್ಕಿದ್ದು ಅನಂತರವೇ.

ವರಾಳಿಯ ಲಕ್ಷಣಯುತವಾದ ರಾಗ ವಿಸ್ತಾರದ ನಂತರ ಮೂಡಿಬಂದ ಕೃತಿ ನಿರೂಪಣೆ ಗಾಯಕಿಯ ಅನುರಣಿಸುವ “ಹಸ್ಕಿ’ ಶಾರೀರದಲ್ಲಿ ಇನ್ನಷ್ಟು ಮೆರುಗು ಪಡೆಯಿತು. (ವಿಶೇಷವಾಗಿ ಶುದ್ಧ ಗಾಂಧಾರ ಪ್ರಯೋಗಗಳಲ್ಲಿ). ಮುಂದೆ ಹಾಡಲಾದ 14 ರಾಗಗಳ ರಾಗಮಾಲಿಕೆ (ಶ್ರೀ ವಿಶ್ವನಾಥಂ) ಮತ್ತು ತ್ವರಿತಗತಿಯ ಉಸೇನಿ (ರಾಮಾ ನಿನ್ನೇ ನಮ್ಮಿ ನಾನು) ರಸಿಕರಲ್ಲಿ ಹೊಸ ಸಂಚಲನವನ್ನು ಉಂಟು ಮಾಡಿದವು.

ಪ್ರಧಾನ ರಾಗ ಕಾಂಭೋಜಿ. ರಾಗದ ಸೌಂದರ್ಯಕ್ಕೆ ಪೂರಕವಾಗುವಂತಹ ಗಮಕಗಳು, ಮೂಛìನೆಗಳು ಮತ್ತು ಆಕರ್ಷಕವಾದ ಬಿರ್ಕಾ ಪ್ರಯೋಗಗಳಿಂದ ಆಲಂಕೃತವಾಗಿದ್ದ ಆಲಾಪನೆಯ ಅನಂತರ ಕಲಾವಿದೆ “ಕಂಡೆನಾ ಉಡುಪಿಯ’ ದೇವರನಾಮವನ್ನು ಕೃತಿಯ ಚೌಕಟ್ಟಿನಲ್ಲಿ ಅಳಪಡಿಸಿ ಸಂಗತಿಗಳೊಂದಿಗೆ ಹಾಡಿದರು. “ಪುರಂದರ ವಿಠಲನ ಪಾದವ’ ಎಂಬಲ್ಲಿ ರೋಚಕವಾದ ನೆರವಲ್‌ ಮತ್ತು ಸ್ವರಹಂದರಗಳೊಂದಿಗೆ ಈ ಪ್ರಸ್ತುತಿ ರಂಜನೀಯವಾಗಿತ್ತು.

ರಾಮಕುಮಾರ್‌ ಅವರು ಗಾಯಕಿಯ ಇಂಗಿತವರಿತು ಹಿತಮಿತವಾಗಿ ವಯಲಿನ್‌ ಸಹಕಾರ ನೀಡಿದರು.ಅರುಣಪ್ರಕಾಶ್‌ ಅವರ ಮೃದಂಗವಾದನ ಶ್ರೋತೃಗಳಿಗೆ ಒಂದು ವಿಶೇಷವಾದ ಅನುಭವವಾಗಿತ್ತು. ತ್ವರಿತಗತಿಯ ಕೃತಿ ನಿರೂಪಣೆ, ನೆರವಲ್‌ ಯಾ ಸ್ವರವಿನಿಕೆಗಳಲ್ಲಿ ಮುಖ್ಯ ಗಾಯಕಿಯ ಜತೆಗೂಡಿದ ಮೃದಂಗ, ಉಳಿದಂತೆ ಹೆಚ್ಚಿನ ಹೊತ್ತು “ತಟಸ್ಥವಾಗಿಯೇ’ ಇತ್ತು. ಬಹುಶಃ ಗಾಯಕಿ ನೀಡುವಂತಹ ನಾಜೂಕಾದ ಪಲುಕುಗಳು, ಮಾಧುರ್ಯ ಪೂರ್ಣ ಸ್ವರಾಂತ್ಯಗಳು ಅಥವಾ ಮನಸೂರೆಗೊಳ್ಳುವ ಮಂದ್ರ ಸಂಚಾರಗಳು ಹಾಗಿದ್ದ ಹಾಗೇ ಶ್ರೋತೃಗಳನ್ನು ತಲುಪಲು, ಮೃದಂಗ ವಾದನ ಹಿನ್ನೆಲೆಗೆ ಸರಿಯುವ ಅಗತ್ಯವಿತ್ತೇನೋ? ಅವರ ತನಿ ಆವರ್ತನ ಉತ್ತಮವಾಗಿತ್ತು.

ಸರೋಜಾ ಆರ್‌. ಆಚಾರ್ಯ

ಟಾಪ್ ನ್ಯೂಸ್

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.