Udayavni Special

ನಾಟಕದ ರಸದೌತಣ ನೀಡಿದ ರಂಗ ಪಂಚಮಿ


Team Udayavani, May 4, 2018, 6:00 AM IST

s1.jpg

ಬೈಂದೂರಿನ “ಲಾವಣ್ಯ’ ರಂಗಸಂಸ್ಥೆ ಇತ್ತೀಚೆಗೆ ತನ್ನ ನಲವತ್ತೂಂದನೆಯ ವಾರ್ಷಿಕೋತ್ಸವವನ್ನು “ರಂಗ ಪಂಚಮಿ’ ಎಂಬ ಹೆಸರಿನಲ್ಲಿ ಐದು ದಿನದ ನಾಟಕೋತ್ಸವದ ಮೂಲಕ ಆಚರಿಸಿಕೊಂಡಿತು. 

ಮೊದಲ ದಿನ ಆತಿಥೇಯ ತಂಡದ “ಗಾಂಧಿಗೆ ಸಾವಿಲ್ಲ’ ಪ್ರದರ್ಶನಗೊಂಡಿತು. ಹಿಂದಿಯಲ್ಲಿ ಅಸ್ಕರ್‌ ವಜಾಹತ್‌ ರಚಿಸಿರುವ ರಂಗ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದವರು ಹಸನ್‌ ನಯೀಂ ಸುರಕೋಡ. ವಸಂತ ಬನ್ನಾಡಿಯವರ ಮಾರ್ಗದರ್ಶನದಲ್ಲಿ ನವೀನ ವಿನ್ಯಾಸಗಳೊಂದಿಗೆ ನಿರ್ದೇಶನಗೈದವರು ಗಿರೀಶ್‌ ಬೈಂದೂರು.ನಾಟಕದ ಹೆಸರೇ ರೂಪಕವಾಗಿ ಗಾಂಧಿಗಿರಿ ಎನ್ನುವುದು ಅಚಲವಾದ ಹಿಮಗಿರಿಯಂತೆ ತನ್ನ ಸಿದ್ಧಾಂತವನ್ನು ವಿಷಮ ಸನ್ನಿವೇಶದಲ್ಲೂ ಕೈಬಿಡದೆ ಅಹಿಂಸೆ, ಸಂಯಮ, ಸಹಿಷ್ಣುತೆ ಮೆರೆಯುವುದು; ಗೋಡ್ಸೆಯ ಮನಃ ಪರಿವರ್ತನೆ ಮಾಡುವುದು ಕೇವಲ ಗಾಂಧಿಗೆ ಮಾತ್ರ ಸಾಧ್ಯ ಎಂದು ತೋರಿಸಿಕೊಡುತ್ತದೆ.ಗೋಡ್ಸೆಯೊಂದಿಗೆ ಸಂವಾದ ನಡೆಸುವ ಗಾಂಧಿ ನ್ಯಾಯಾಲಯದಲ್ಲಿ ಕೇವಲ ಸಾಕ್ಷಿಯ ಮೇಲೆ ನಿರ್ಣಯ ತೆಗೆದುಕೊಳ್ಳಲಾಗುತ್ತದೆ; ಆದರೆ ಸೆರೆಮನೆಯಲ್ಲಿ ಆತ್ಮ ಸಂವಾದಕ್ಕೆ ತಡೆ ಇಲ್ಲ ಎಂದು ತೋರಿಸಿಕೊಡುತ್ತಾರೆ. ಗೋಡ್ಸೆಗಿರಿಯು ಗಾಂಧಿವಾದದ ಮುಂದೆ ಶರಣಾಗುವುದನ್ನು ನಿರ್ದೇಶಕರು ವಾಚ್ಯಕ್ಕೂ ನಿಲುಕದ ರಂಗತಂತ್ರದ ಮೂಲಕ ನಾಟಕದ ಆಶಯವನ್ನು ಎತ್ತಿ ಹಿಡಿದಿದ್ದಾರೆ.

    ಸಾಂದರ್ಭಿಕವಾಗಿ ಬರುವ ಪ್ರೇಮಿಗಳಾದ ಸುಷ್ಮಾ ಮತ್ತು ನವೀನ ಜೋಶಿ ಗಾಂಧೀಜಿಯ ಇನ್ನೊಂದು ಮುಖದ ದರ್ಶನ ಮಾಡಿಸುತ್ತಾರೆ. ಬೆಳಕಿನ ಗುಣಮಟ್ಟ ಚೆನ್ನಾಗಿದ್ದರೂ ನಿಖರತೆಯ ಕಡೆಗೆ ಇನ್ನಷ್ಟು ಶ್ರಮವಹಿಸಬೇಕು. ಉತ್ತಮ ವೇಷಭೂಷಣ, ರಂಗಪರಿಕರಗಳು ಪ್ರಭಾವಿ ಎನಿಸಿವೆ. ಒಟ್ಟಿನಲ್ಲಿ ಸವಾಲಿನ ನಾಟಕವನ್ನು ಪರಿಣಾಮಕಾರಿಯಾಗಿ ಪ್ರದರ್ಶಿಸಲಾಯಿತು. ನಾಟಕದ ಒಟ್ಟು ಅವಧಿಯಲ್ಲಿ ಇನ್ನಷ್ಟು ಸಂಕ್ಷೇಪಿಸುವತ್ತ ಗಮನಹರಿಸಬಹುದು.

    ದ್ವಿತೀಯ ದಿನದ ನೃತ್ಯರೂಪಕ ಗೋಕುಲ ನಿರ್ಗಮನ, ರಚನೆ- ಪು.ತಿ.ನ., ನಿರ್ದೇಶನ- ವಿದ್ದು ಉಚ್ಚಿಲ. ತಂಡ ಅರೆಹೊಳೆ ಪ್ರತಿಷ್ಠಾನ, ಮಂಗಳೂರು ಇದರ ನಂದಗೋಕುಲ ಕಲಾವಿದೆಯರು. ಗೋಕುಲದಲ್ಲಿ ವೇಣುವಾದನದ ಮೂಲಕ ಎಲ್ಲರನ್ನೂ ಮೋಹಿಸಿ ಬ್ರಹ್ಮಾನಂದದಲ್ಲಿ ತೇಲಿಸುತ್ತಿದ್ದ ಕೃಷ್ಣ, ಅಣ್ಣನ ಒತ್ತಡಕ್ಕೆ ಒಪ್ಪಿ ಒಲ್ಲದ ಮನದಿಂದ ವೇಣು ವಿಸರ್ಜಿಸಿ ಗೋಕುಲವನ್ನು ಬಿಟ್ಟು ಕಂಸನ ಬಿಲ್ಲ ಹಬ್ಬದ ಕಡೆಗೆ ಶೃಂಗಾರ ರಸ ತೊರೆದು ವೀರರಸದತ್ತ ಹೊರಳುವಲ್ಲಿನ ತಲ್ಲಣಗಳೇ ಇಲ್ಲಿನ ಕಥಾವಸ್ತು.        ಬಾನ್ಸುರಿಯಲ್ಲಿ ಪಹಾಡಿ ಧುನ್‌, ದೇಶ್‌, ಭೂಪಾಲಿ, ದುರ್ಗಾ ರಾಗ ಬಳಸಿಕೊಳ್ಳಬಹುದಿತ್ತು. ಒಟ್ಟಾರೆ ಮಕ್ಕಳನ್ನೇ ಪ್ರಧಾನವಾಗಿಸಿಕೊಂಡು ಹಳೆಗನ್ನಡ ಶೈಲಿಯ ನೃತ್ಯ ರೂಪಕಕ್ಕೆ ಪಟ್ಟ ಶ್ರಮ ತಕ್ಕಮಟ್ಟಿಗೆ ಯಶಕಂಡಿದೆ.

ಚಂದ್ರಗಿರಿ ತೀರದಲ್ಲಿ ಪ್ರದರ್ಶನಗೊಂಡ ಮೂರನೇ ನಾಟಕ. ರಚನೆ – ಸಾರಾ ಅಬೂಬಕರ್‌, ರಂಗ ರೂಪ ನೀಡಿದವರು ರೂಪ ಕೋಟೇಶ್ವರ, ನಿರ್ದೇಶನ ನಯನ ಜೆ. ಸೂಡ. ಮುಸ್ಲಿಮ್‌ ಸಮುದಾಯದ ಹೆಣ್ಣು ಮಕ್ಕಳ ಬೇಗುದಿಯನ್ನು ಅಬ್ಬರಿಸದೆ ಶಾಂತವಾಗಿ ಪ್ರೇಕ್ಷಕರ ಮುಂದೆ ತೆರೆದಿಡುತ್ತಾ ಸಾಗಿ ಧರ್ಮ ಸಂಕಟಕ್ಕೆ ಸಿಲುಕಿದ ಅಮಾಯಕ ನಾದಿರಾ ಆಹುತಿಯಾಗುವುದೇ ಇಲ್ಲಿನ ಕಥಾವಸ್ತು. ಅತ್ಯಂತ ಸೂಕ್ಷ್ಮ ಸಂವೇದನೆಗಳನ್ನೊಳಗೊಂಡು ಕಲಾತ್ಮಕತೆಯನ್ನು ಉಳಿಸಿಕೊಂಡ ನಾಟಕ ಇದಾಗಿದೆ.ನಾದಿರಾಳ ವಿವಾಹ ಸಮಾರಂಭದ ನೃತ್ಯಗಳು ಮುಸ್ಲಿಮ್‌ ಸಮುದಾಯದ ಸಂಸ್ಕೃತಿಯನ್ನು ಸೊಗಸಾಗಿ ಸಾದರಪಡಿಸಿತು. ಜೀವನವನ್ನು ಸುಗಮವಾಗಿಸುವ, ಸಹ್ಯವಾಗಿಸುವ ಧರ್ಮವೇ ಬದುಕಿಗೆ ಮುಳುವಾದಾಗ ದಿಕ್ಕು ಕಾಣದೆ ಮರುಮದುವೆಯ ರಾತ್ರಿಯೇ, ಧರ್ಮ, ಶಾಸ್ತ್ರ, ತಲಾಖ್‌ಗಳನ್ನು ಕ್ರೂರವಾಗಿ ವಿಡಂಬಿಸುವಂತೆ ಚಂದ್ರಗಿರಿ ನದಿಗೆ ಹಾರಿ ಪ್ರಾಣಾರ್ಪಣೆ ಮಾಡುತ್ತಾಳೆ.

ನಾಲ್ಕನೆಯ ದಿನ ಪ್ರದರ್ಶಿತಗೊಂಡ ಗುಲಾಬಿ ಗ್ಯಾಂಗ್‌ ಅನ್ಯಾಯದ ವಿರುದ್ಧ ಸಿಡಿದೇಳುವ ಧೋರಣೆಯನ್ನೇ ಬಂಡವಾಳವಾಗಿಸಿಕೊಂಡ ನಾಟಕ. ರಂಗ ರೂಪ ಪ್ರವೀಣ ಸೂಡಾ. ಉತ್ತರ ಪ್ರದೇಶದ ಬಂದೇಲ್‌ಖಂಡ ಜಿಲ್ಲೆ ಬಡೋಸಾ ಗ್ರಾಮದ ಸಂಪತ್‌ ಪಾಲ್‌ ದೇವಿ ಇಲ್ಲಿ ಕಮಲಾಬಾಯಿಯಾಗಿ ಕಾಣಿಸಿಕೊಂಡು ಸ್ತ್ರೀಯರ ಬದುಕಿನ ಹಕ್ಕನ್ನು ಹಂತಹಂತದಲ್ಲೂ ಭೌತಿಕ ಹಾಗೂ ಬೌದ್ಧಿಕ ಚಾತುರ್ಯದಿಂದ ಪಡೆದುಕೊಳ್ಳುವ ಯಶೋಗಾಥೆಯೇ ಇಲ್ಲಿನ ಕಥಾವಸ್ತು.

ದೃಶ್ಯದಿಂದ ದೃಶ್ಯಕ್ಕೂ ಅಸಹಾಯಕ ಸನ್ನಿವೇಶದಲ್ಲೂ, ಧ್ವನಿ ಏರುಗತಿಯಲ್ಲಿ ಮುಂದುವರಿದು, ರಂಗ ಚಲನೆ ಕೂಡಾ ಪ್ರತಿಭಟನೆಯ ಪ್ರಖರತೆಯ ಅಭಿವ್ಯಕ್ತಿಗೆ ಪೂರಕವಾಗಿ ನಡೆಯುತ್ತದೆ. ಇಡೀ ನಾಟಕದಲ್ಲಿ ಗಟ್ಟಿ ಧ್ವನಿ, ಗಟ್ಟಿ ಹೆಜ್ಜೆ, ಗಟ್ಟಿ ನಡೆ, ತಾರಕ ಶೃತಿಯನ್ನು ಕೊನೆವರೆಗೂ ಏರುಗತಿಯಲ್ಲಿ ಉಳಿಸಿಕೊಂಡು ಮೈಮರೆತು ಪಾತ್ರವೇ ತಾವಾಗಿ ಅದ್ಭುತ ನಟನೆ ನೀಡಿದ ನಯನ ಜೆ. ಸೂಡ ಅವರ ನಿರ್ವಹಣೆ ಅಮೋಘವಾದುದು.

ಮಂಜುನಾಥ ಶಿರೂರು

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಶಾಲೆ ತೆರೆಯದ ಕಾರಣ ಬಾಲ್ಯ ವಿವಾಹ, ಬಾಲ ಕಾರ್ಮಿಕರ ಸಂಖ್ಯೆ ಹೆಚ್ಚುತ್ತಿದೆ: ಸುರೇಶ್ ಕುಮಾರ್

ಶಾಲೆ ತೆರೆಯದ ಕಾರಣ ಬಾಲ್ಯ ವಿವಾಹ, ಬಾಲ ಕಾರ್ಮಿಕರ ಸಂಖ್ಯೆ ಹೆಚ್ಚುತ್ತಿದೆ: ಸುರೇಶ್ ಕುಮಾರ್

ವಿಪಕ್ಷಗಳ ಬಣ್ಣ ಬಯಲಿಗೆಳೆದ ಪ್ರಧಾನಿ ಮೋದಿ; ಸರ್ಜಿಕಲ್ ಸ್ಟ್ರೈಕ್ ಬಗ್ಗೆಯೂ ಪುರಾವೆ ಕೇಳಿದ್ರು

ವಿಪಕ್ಷಗಳ ಬಣ್ಣ ಬಯಲಿಗೆಳೆದ ಪ್ರಧಾನಿ ಮೋದಿ; ಸರ್ಜಿಕಲ್ ಸ್ಟ್ರೈಕ್ ಬಗ್ಗೆಯೂ ಪುರಾವೆ ಕೇಳಿದ್ರು

ಶಾಲಾ ಕಾಲೇಜು ಪ್ರಾರಂಭಿಸುವ ಮೊದಲು ಸಂಪುಟದ ಸಲಹೆ ಪಡೆಯಲಿ: ಧ್ರುವನಾರಾಯಣ

ಶಾಲಾ ಕಾಲೇಜು ಪ್ರಾರಂಭಿಸುವ ಮೊದಲು ಸಂಪುಟದ ಸಲಹೆ ಪಡೆಯಲಿ: ಧ್ರುವನಾರಾಯಣ

ಅರ್ಮೇನಿಯಾ, ಅಝರ್ ಬೈಜಾನ್ ಯುದ್ಧ ತೀವ್ರ: 58 ಸೈನಿಕರು, 9 ನಾಗರಿಕರು ಸಾವು

ಅರ್ಮೇನಿಯಾ, ಅಝರ್ ಬೈಜಾನ್ ಯುದ್ಧ ತೀವ್ರ: 58 ಸೈನಿಕರು, 9 ನಾಗರಿಕರು ಸಾವು

ವಿಧಾನಪರಿಷತ್ ನ ನಾಲ್ಕು ಕ್ಷೇತ್ರಗಳಿಗೆ ಚುನಾವಣೆ ಘೋಷಣೆ: ಅ.28ರಂದು ಚುನಾವಣೆ

ವಿಧಾನ ಪರಿಷತ್ ನ ನಾಲ್ಕು ಕ್ಷೇತ್ರಗಳಿಗೆ ಚುನಾವಣೆ ಘೋಷಣೆ: ಅ.28ರಂದು ಚುನಾವಣೆ

ಅಗತ್ಯ ಮೂಲ ಸೌಕರ್ಯಗಳಿಲ್ಲದ ಖಾಸಗಿ ಶಾಲೆಗಳ ವಿರುದ್ಧ ಕ್ರಮ: ಸುರೇಶ್ ಕುಮಾರ್ ಎಚ್ಚರಿಕೆ

ಅಗತ್ಯ ಮೂಲ ಸೌಕರ್ಯಗಳಿಲ್ಲದ ಖಾಸಗಿ ಶಾಲೆಗಳ ವಿರುದ್ಧ ಕ್ರಮ: ಸುರೇಶ್ ಕುಮಾರ್ ಎಚ್ಚರಿಕೆ

ಭಗವಂತನನ್ನಾದರೂ ನೋಡಬಹುದು ಆದರೆ ಬಿಜೆಪಿ ಸಂಸದರಿಗೆ ಮೋದಿ ನೋಡಲು ಸಾಧ್ಯವಿಲ್ಲ: BN ಚಂದ್ರಪ್ಪ

ಭಗವಂತನನ್ನಾದರೂ ನೋಡಬಹುದು ಆದರೆ ಬಿಜೆಪಿ ಸಂಸದರಿಗೆ ಮೋದಿ ನೋಡಲು ಸಾಧ್ಯವಿಲ್ಲ: BN ಚಂದ್ರಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ಕರ್ನಾಟಕ ಬಂದ್: ಬಜ್ಪೆ, ಬೆಳ್ತಂಗಡಿ, ಉಜಿರೆಯಲ್ಲಿ‌ ನೀರಸ ಪ್ರತಿಕ್ರಿಯೆ

udayavani youtube

ಭೂ ಸುಧಾರಣೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ Moodbidri, BC Roadನಲ್ಲಿ Protest

udayavani youtube

ಮಂಗಳೂರು: ರೈತ ವಿರೋಧಿ ಮಸೂದೆಯನ್ನು ವಿರೋಧಿಸಿ ವಿವಿಧ ಸಂಘಟನೆಗಳಿಂದ ಜಂಟಿ ಪ್ರತಿಭಟನೆ

udayavani youtube

JD(s) workers clash with Police at Shimoga anti farm bill protest | Udayavani

udayavani youtube

ಹೀರೆಕಾಯಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆಹೊಸ ಸೇರ್ಪಡೆ

ತಿದ್ದುಪಡಿ ಕಾಯ್ದೆ ರೈತರ ಪಾಲಿಗೆ ಮರಣ ಶಾಸನ

ತಿದ್ದುಪಡಿ ಕಾಯ್ದೆ ರೈತರ ಪಾಲಿಗೆ ಮರಣ ಶಾಸನ

bidara-tdy-2

ಅನಧಿಕೃತ ಚಾನೆಲ್‌ಗ‌ಳ ವಿರುದ್ಧ ಕ್ರಮ: ಡಿಸಿ

ಶಾಲೆ ತೆರೆಯದ ಕಾರಣ ಬಾಲ್ಯ ವಿವಾಹ, ಬಾಲ ಕಾರ್ಮಿಕರ ಸಂಖ್ಯೆ ಹೆಚ್ಚುತ್ತಿದೆ: ಸುರೇಶ್ ಕುಮಾರ್

ಶಾಲೆ ತೆರೆಯದ ಕಾರಣ ಬಾಲ್ಯ ವಿವಾಹ, ಬಾಲ ಕಾರ್ಮಿಕರ ಸಂಖ್ಯೆ ಹೆಚ್ಚುತ್ತಿದೆ: ಸುರೇಶ್ ಕುಮಾರ್

ಪ್ರತಿಭಟನೆಗೆ ಸೀಮಿತವಾದ ಬಂದ್‌

ಪ್ರತಿಭಟನೆಗೆ ಸೀಮಿತವಾದ ಬಂದ್‌

ವಿಪಕ್ಷಗಳ ಬಣ್ಣ ಬಯಲಿಗೆಳೆದ ಪ್ರಧಾನಿ ಮೋದಿ; ಸರ್ಜಿಕಲ್ ಸ್ಟ್ರೈಕ್ ಬಗ್ಗೆಯೂ ಪುರಾವೆ ಕೇಳಿದ್ರು

ವಿಪಕ್ಷಗಳ ಬಣ್ಣ ಬಯಲಿಗೆಳೆದ ಪ್ರಧಾನಿ ಮೋದಿ; ಸರ್ಜಿಕಲ್ ಸ್ಟ್ರೈಕ್ ಬಗ್ಗೆಯೂ ಪುರಾವೆ ಕೇಳಿದ್ರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.