ಸದ್ಗುರು ಸಂಗೀತ ಶಾಲೆ  ರಜತ ಸಂಭ್ರಮ


Team Udayavani, Feb 24, 2017, 3:50 AM IST

23-KALA-1.jpg

ಸಂಗೀತ ಎನ್ನುವ ಪದಕ್ಕೆ ವ್ಯಾಖ್ಯಾನ ನೀಡಬಹುದೇ ವಿನಾ ಅದರ ಸಿರಿವಂತಿಕೆಯನ್ನು ಅನುಭವಿಸಿಯೇ ಅರ್ಥ ಮಾಡಲು ಸಾಧ್ಯ. ಹಾಗಾಗಿ ಈ ಶ್ರೀಮಂತ ಕಲೆಗೆ ಶ್ರೇಷ್ಠವಾದ ಕಲಾವಿದರ ಹಾಗೂ ಕಲೋಪಾಸಕ ಅಭಿಮಾನಿಗಳ ಸಮೂಹವೇ ಇದೆ. ವಯೋಮಾನಕ್ಕೆ ಅತೀತವಾದ ಸಂಗೀತದ ಕಲಿಕೆಗೆ ಬಹುಸಂಖ್ಯೆಯಲ್ಲಿ ಬರುವವರಿದ್ದಾರೆ. ಹಳ್ಳಿಹಳ್ಳಿಗಳಲ್ಲಿ ಕೂಡ ಸಂಗೀತ ಶಾಲೆಗಳು ಆಸಕ್ತರನ್ನು ಸಿದ್ಧಗೊಳಿಸುತ್ತಿವೆ. ಯಾವುದೇ ಸಂಸ್ಥೆಯ ಬೆಳವಣಿಗೆ, ಅದರ ಸ್ಥಾಪಕರ ಇಚ್ಛಾಶಕ್ತಿ ಹಾಗೂ ಮುನ್ನಡೆಸುವವರ ಆಸ್ಥೆ ಹೊಂದಿಕೊಂಡಿದೆ. ಇದಕ್ಕೊಂದು ಉದಾಹರಣೆ ರಜತ ಸಂಭ್ರಮ ಆಚರಿಸುತ್ತಿರುವ ಸದ್ಗುರು ಸಂಗೀತ ಶಾಲೆ.

ಕಾಸರಗೋಡು ಜಿಲ್ಲೆಯ ಪೈವಳಿಕೆ ಸಮೀಪದ ಕಾಯರಕಟ್ಟೆಯಲ್ಲಿ ಸ್ಥಾಪಿಸಲ್ಪಟ್ಟ ಸದ್ಗುರು ಸಂಗೀತ ಶಾಲೆ ಆ ಊರಿನ ಕನಸಿನ ಕೂಸು. ಸ್ಥಾಪಕರಾದ ಬಜಕ್ಕಳ ಗಣಪತಿ ಭಟ್ಟರು ಸಮರ್ಥ ಶಿಕ್ಷಕರಾಗಿ ಹಲವು ವರ್ಷ ನೂರಾರು ಮಂದಿಗೆ ಕಲಿಸಿದರು. ಆರಂಭದ ಉಲ್ಲಾಸ ಉತ್ಸಾಹವನ್ನು ಇಳಿವಯಸ್ಸಿನವರೆಗೂ ಉಳಿಸಿಕೊಂಡ ಪುಣ್ಯವಂತ. ಬಳಿಕ ತಮ್ಮ ಶಿಷ್ಯೆ ಸಾದಂಗಾಯದ ಜಯಲಕ್ಷ್ಮೀ ಪ್ರಮೋದ ಭಟ್‌ ಇವರಿಗೆ ಜವಾಬ್ದಾರಿ ವಹಿಸಿಕೊಟ್ಟು ಮಾರ್ಗದರ್ಶಕರಾಗಿ ಸಹಕರಿಸಿದರು. ಜಯಲಕ್ಷ್ಮೀಯವರ ನೇತೃತ್ವದಲ್ಲಿ ನಡೆದ ದಶಮಾನೋತ್ಸವದ ಯಶಸ್ಸಿನ ನೆನಪು ಇನ್ನೂ ಹಸುರಾಗಿರುವಾಗಲೇ ಇದೀಗ ಇಪ್ಪತ್ತೈದರ ಸಂಭ್ರಮ.

ಫೆಬ್ರವರಿ 19, 2017ರಂದು ಬಾಯಾರು ಹೆದ್ದಾರಿ ಎಯುಪಿ ಶಾಲೆಯಲ್ಲಿ ಈ ರಜತ ಸಂಭ್ರಮ ನಡೆಯಿತು. ಮಕ್ಕಳ ಹಾಡುಗಾರಿಕೆ ಮತ್ತು ಡಾ| ಎಂ.ಎಸ್‌. ಭಟ್‌ ಇವರಿಂದ ಸಂಗೀತ ಕಛೇರಿ ನಡೆದ ಬಳಿಕ ಪಂಚರತ್ನ ಕೀರ್ತನೆ ಹಾಗೂ ಸಂಜೆ ಪೂರ್ಣಶ್ರೀ ಕಾಂಞಂಗಾಡ್‌- ಟಿ.ಪಿ. ಶ್ರೀನಿವಾಸನ್‌ ಇವರಿಂದ ಹಾಡುಗಾರಿಕೆಯಿತ್ತು. ಈ ಮಧ್ಯೆ ನಡೆದ ಸಭಾ ಕಾರ್ಯಕ್ರಮದಲ್ಲಿ ವಿ| ಕುಕ್ಕಿಲ ಶಂಕರ ಭಟ್‌ ಹಾಗೂ ವಿ| ಪ್ರೇಮಲೀಲಾ ಪಿ. ಭಟ್‌ ಆಟಿಕುಕ್ಕೆ ಇವರನ್ನು ಸಮ್ಮಾನಿಸಲಾಯಿತು. 

ಕುಕ್ಕಿಲ ಶಂಕರ ಭಟ್‌: ಸಂಗೀತ ಕ್ಷೇತ್ರದಲ್ಲಿ ಬಹು ಪರಿಚಿತ ಹೆಸರು. ವಿಟ್ಲ ಸಮೀಪದ ಕುಕ್ಕಿಲದಲ್ಲಿ ವಾಸ್ತವ್ಯ. ತಂದೆ ಕೃಷ್ಣ ಭಟ್ಟರು ಪ್ರಸಿದ್ಧ ಲೇಖಕರು. ಶಂಕರ ಭಟ್ಟರು 16ನೇ ವಯಸ್ಸಿಗೆ ಮೃದಂಗದ ಬಗ್ಗೆ ಆಸಕ್ತಿ ಹೊಂದಿದರು. ಪರಿಣಾಮವಾಗಿ ಕಲಾನಿಕೇತನದ ವಿ| ಸುಂದರ ಆಚಾರ್ಯರ ಗುರುತನದಲ್ಲಿ ಮೃದಂಗ ವಾದನ ಕಲಿತರು. ಬಳಿಕ ಮೈಸೂರಿನ ಕೆ. ಹರಿಶ್ಚಂದ್ರ ಅವರಿಂದಲೂ ಕೆಲವುಕಾಲ ಶಿಕ್ಷಣ ಪಡೆದು ಓರ್ವ ಮೃದಂಗ ವಾದಕರಾಗಿ ಸಂಗೀತ ಕ್ಷೇತ್ರಕ್ಕೆ ಕಾಲಿರಿಸಿದರು. ಇದೀಗ ಐದು ದಶಕಗಳ ಕಲಾಸೇವೆ ಪೂರೈಸಿದ್ದಾರೆ. 47 ವರ್ಷಗಳಿಂದ ಪುತ್ತೂರಿನ ಉಮಾಮಹೇಶ್ವರ ಸಂಗೀತ ಶಾಲೆಯಲ್ಲಿ ಶಿಕ್ಷಕರಾಗಿದ್ದಾರೆ. ಮಹಾದೇವಪ್ಪ ಅವರಲ್ಲಿ ಪಿಟೀಲು ವಾದನವನ್ನು ಕಲಿತ ಇವರಿಗೆ ತಾಳ ರಾಗ ಲಯ ಸಾಹಿತ್ಯ ಇತ್ಯಾದಿಗಳ ಬಗ್ಗೆ ನಿಖರವಾದ ಪಾಂಡಿತ್ಯವಿದೆ. ಖ್ಯಾತರಾದ ಪಿಟೀಲು ಚೌಡಯ್ಯ, ರಾಮರತ್ನಂ, ಟಿ. ಆರ್‌. ಶ್ರೀನಿವಾಸನ್‌, ಕಾಂಚನ ನಾರಾಯಣ ಭಟ್‌ ಮೊದಲಾದವರೊಂದಿಗೆ ಆತ್ಮೀಯ ಒಡನಾಟ ಇರಿಸಿಕೊಂಡು ಮೃದಂಗ ಸಾಥ್‌ ನೀಡಿದ ಧನ್ಯತೆ ಹೊಂದಿದ್ದಾರೆ. ಚಕ್ರಕೋಡಿ ನಾರಾಯಣ ಶಾಸ್ತ್ರಿಗಳ ಕಚೇರಿಗೆ ಘಟದಲ್ಲಿ ಸಹಕರಿಸಿದ ಅನುಭವ ಇವರಲ್ಲಿದೆ.

“ಕಲಾರತ್ನಾಕರ’ ಬಿರುದು ಸಹಿತ ಹಲವು ಸಂಘ ಸಂಸ್ಥೆಗಳ ಪುರಸ್ಕಾರ ಸಮ್ಮಾನ ಪಡೆದಿರುವ ಶಂಕರ ಭಟ್ಟರು ತಮ್ಮ ಸುಪುತ್ರ ಮುರಲೀಕೃಷ್ಣ ಭಟ್ಟರನ್ನು ಪ್ರಬುದ್ಧ ಮೃದಂಗವಾದಕರಾಗಿ ಸಿದ್ಧಗೊಳಿಸಿದ್ದಾರೆ. ಬಾಲಕೃಷ್ಣ ಹಾಗೂ ದೀಕ್ಷಿತ್‌ ಎನ್ನುವವರೂ ಇವರ ಶಿಷ್ಯರಾಗಿ ಹೆಸರು ಮಾಡಿದ್ದಾರೆ. ಉಡುಪಿ, ಮಡಿಕೇರಿ ಹಾಗೂ ಕಾಸರಗೋಡು ಜಿಲ್ಲೆಗಳ ಸಾವಿರಾರು ಕಛೇರಿಗಳಿಗೆ ಕಳೆಗೂಡಿದ ಈ ಕಲಾವಿದರು ಕಳೆದ ಇಪ್ಪತ್ತೈದು ವರ್ಷಗಳಿಂದ ಸದ್ಗುರು ಸಂಗೀತ ಶಾಲೆಯ ವಾರ್ಷಿಕೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದೀಗ ಅವರಿಗೆ ರಜತ ಸಂಭ್ರಮದ ಸಮ್ಮಾನ ಅರ್ಹವಾಗಿ ಸಂದಿದೆ. 

ಪ್ರೇಮಲೀಲಾ ಪಿ. ಭಟ್‌ ಆಟಿಕುಕ್ಕೆ: ಕಾಸರಗೋಡಿನ ಕಾರಡ್ಕ ಸುಬ್ಬಣ್ಣ ಭಟ್‌ – ರುಕ್ಮಿಣಿ ಅಮ್ಮನ ಹಿರಿಯ ಮಗಳು ಪ್ರೇಮ ಲೀಲಾ ಭಟ್‌ ಮದುವೆಯಾಗಿ ಬಂದುದು ಬಾಯಾರಿನ ಆಟಿಕುಕ್ಕೆಗೆ. ಇವರು ತಂದೆಗೆ ಯಕ್ಷಗಾನ ಭಾಗವತಿಕೆ ಹಾಗೂ ಮದ್ದಳೆವಾದನದ ಅನುಭವವಿತ್ತು. ಅವರು ವೀಣಾವಾದಕರೂ ಹೌದು. ಪ್ರೇಮಲೀಲಾ ಎಳೆಯ ಪ್ರಾಯದಲ್ಲಿಯೇ ಅಕ್ಕನಿಂದ ಸಂಗೀತ ಪಾಠ ಕಲಿತು ಅನಂತರ ಗೋಪಾಲಕೃಷ್ಣ ಮನೊಳಿತ್ತಾಯರಲ್ಲಿ ಸೀನಿಯರ್‌ ತನಕ ಅಭ್ಯಾಸ ಮಾಡಿದರು. ಜತೆಗೆ ಇವರ ಮನಸ್ಸು ಪಿಟೀಲು ವಾದನದ ಕಡೆಗೂ ವಾಲಿದ್ದರಿಂದ ಅವರಲ್ಲಿಯೇ ಬಾಲಪಾಠಅಭ್ಯಸಿಸಿದರು. ಗುತ್ತು ಗೋವಿಂದ ಭಟ್‌ ಮತ್ತು ಮಧೂರು ಪದ್ಮನಾಭ ಸರಳಾಯರಲ್ಲಿ ಸಾಕಷ್ಟು ಕಲಿತು ಓರ್ವ ಭರವಸೆಯ ಕಲಾವಿದೆಯಾಗಿ ಮೂಡಿಬಂದರು. ವಿವಾಹಪೂರ್ವ ಎಂಟು ವರ್ಷ ಕಾಸರಗೋಡಿನಲ್ಲಿ ತರಗತಿ ನಡೆಸಿದ ಅನುಭವದೊಂದಿಗೆ ಆಟಿಕುಕ್ಕೆಗೆ ಬಂದು ಕಲಾಸೇವೆ ಮುಂದುವರಿಸಿದರು. ಸಜಂಕಿಲ ಭಜನಾ ಮಂದಿರದಲ್ಲಿ ದೀರ್ಘ‌ಕಾಲ ಹಾಗೂ ಪುತ್ತೂರು ಸುದಾನ ಶಾಲೆಯಲ್ಲಿ ಸ್ವಲ್ಪ ಸಮಯ ಹಲವರಿಗೆ ಸಂಗೀತದ ರುಚಿ ನೀಡಿದ್ದಾರೆ. 

ಸುಮಾರು ನಲುವತ್ತು ವರ್ಷ ಸಾವಿರಾರು ಕಛೇರಿಗಳಿಗೆ ಪಕ್ಕವಾದ ನುಡಿಸಿದ ಇವರ ಪಿಟೀಲು ವಾದನ ಶ್ರೇಷ್ಠ ಮಟ್ಟದ್ದು. ಕೇರಳ – ಕರ್ನಾಟಕದ ದೂರದೂರುಗಳಿಗೂ ತಮ್ಮ ವ್ಯಾಪ್ತಿ ವಿಸ್ತರಿಸಿ ದ್ದಾರೆ. ಶಾಸ್ತ್ರೀಯ ಸಂಗೀತವಲ್ಲದೆ ಭರತನಾಟ್ಯ, ಹರಿಕತೆ, ಯಕ್ಷಗಾನ,
ಭಕ್ತಿಗೀತೆಗಳಿಗೆ ಸಾಥ್‌ ನೀಡಿ ಗುರುತಿಸಲ್ಪಟ್ಟವರು. ನಾಲ್ಕು ಧ್ವನಿ ಸುರುಳಿಗಳಿಗೆ ಸಂಗೀತ ನಿರ್ದೇಶನ ನೀಡಿ ತಮ್ಮ ಶಿಷ್ಯೆಯರಿಂದ ಹಾಡಿಸಿದ್ದಾರೆ. ಸರಳ ವ್ಯಕ್ತಿತ್ವದ ಪ್ರೇಮಲೀಲಾ ಭಟ್‌ ನಿಗರ್ವಿಯಾ ಗಿದ್ದು ಕಲಾವಿದರಿಗೆ ತುಂಬು ಮನದ ಪ್ರೋತ್ಸಾಹ ನೀಡುವವರು. ಸದ್ಗುರು ಸಂಗೀತ ಶಾಲೆಯ ವಾರ್ಷಿಕ ಉತ್ಸವದಲ್ಲಿ 25 ವರ್ಷ ಗಳಿಂದ ಪಾಲ್ಗೊಳ್ಳುತ್ತಿರುವ ಇವರಿಗೆ ಆವಳ, ಪುತ್ತೂರು, ಸಜಂಕಿಲ, ಬಾಯಾರು ಹಾಗೂ ಕಾಸರಗೋಡಿನಲ್ಲಿ ಸಮ್ಮಾನ ಸಂದಿದೆ. 

ಶ್ರೀನಿವಾಸ ಭಟ್‌ ಸೇರಾಜೆ

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.