Udayavni Special

ಮಡಿವಾಳ ಮಾಚಿದೇವರ ಕತೆ ಸಾರುವ ಶಿವಾನಂದ ಲಹರಿ


Team Udayavani, Feb 14, 2020, 4:07 AM IST

madivala-2

ವೀರಭದ್ರನ ಇನ್ನೊಂದು ಅವತಾರ ಮಡಿವಾಳ ಮಾಚಯ್ಯ ಅಥವಾ ಮಾಚಿದೇವರ ಕತೆ ಶಿವಾನಂದ ಲಹರಿ. ಶಿವ ಜಟೆಯಿಂದ ಸೃಷ್ಟಿಯಾದ ವೀರಭದ್ರ ದಕ್ಷಯಾಗದಲ್ಲಿ ದಕ್ಷನ ತಲೆ ಕಡಿದು ಅತ್ಯುತ್ಸಾಹದಲ್ಲಿ ಶಿವನಲ್ಲಿಗೆ ಹೋಗುವಾಗ ಶಿವಭಕ್ತರಿಗೆ ರಕ್ತಸಿಕ್ತ ಉತ್ತರೀಯ ತಾಗುತ್ತದೆ. ಮಲಿನ ಬಟ್ಟೆ ಸೋಕಿದ್ದರಿಂದ ಕೆರಳಿದವರು ಭೂಲೋಕದಲ್ಲಿ ವಸ್ತ್ರ ಮಡಿ ಮಾಡುವ ಮಡಿವಾಳನಾಗಿ ಜನಿಸು ಎಂದು ಶಪಿಸುತ್ತಾರೆ. ಕಂಗಾಲಾದ ವೀರಭದ್ರ ಶಿವನ ಮೊರೆಯಿಟ್ಟಾಗ, ಭೂಲೋಕದಲ್ಲಿ ಶರಣ ಶ್ರೇಷ್ಠನಾಗಿ ಜನಿಸಲಿದ್ದಿ, ಶಿವಾಂಶ ಸಂಭೂತ ಅಲ್ಲಮಪ್ರಭು, ನಂದಿ ಅಂಶ ಸಂಭೂತ ಬಸವಣ್ಣ, ಪಾರ್ವತಿ ಅಂಶ ಸಂಭೂತೆ ಅಕ್ಕಮಹಾದೇವಿ ಮೊದಲಾದವರ ಒಡನಾಡಿಯಾಗಲಿದ್ದಿ ಎಂದು ಹೇಳುತ್ತಾನೆ. ಹಾಗೆ ಮುಂದುವರಿಯುವ ಮಾಚಿದೇವನ ಕತೆಯೇ ಶಿವಾನಂದ ಲಹರಿ.

ಹನುಮಗಿರಿ ಮೇಳದವರು ಉಡುಪಿ ದೊಡ್ಡನಗುಡ್ಡೆ ಆದಿಪರಾಶಕ್ತಿ ಕ್ಷೇತ್ರದಲ್ಲಿ ನಡೆಸಿದ ಯಕ್ಷಗಾನ ಪ್ರದರ್ಶನ ಒಂದು ಐತಿಹಾಸಿಕ ಕತೆಯನ್ನು ಜನಮನಕ್ಕೆ ತಲುಪಿಸಿತು. ಎಂ.ಕೆ. ರಮೇಶ ಆಚಾರ್ಯರು ಪದ್ಯ ಬರೆದ ಈ ಪ್ರಸಂಗದಲ್ಲಿ ಮೊದಲಿಗೆ ದಕ್ಷಯಜ್ಞ. ಯುವ ಭಾಗವತ ಚಿನ್ಮಯ ಕಲ್ಲಡ್ಕ ಸುಶ್ರಾವ್ಯವಾಗಿ ಹಾಡಿದ್ದಾರೆ. ಹಿಮ್ಮೇಳದಲ್ಲಿ ಪಿ.ಟಿ. ಜಯರಾಮ ಭಟ್‌, ಚೈತನ್ಯಕೃಷ್ಣ ಪದ್ಯಾಣ. ಈಶ್ವರನಾಗಿ ಪೆರ್ಮುದೆ ಜಯಪ್ರಕಾಶ್‌ ಶೆಟ್ಟಿ, ದಕ್ಷನಾಗಿ ಜಗದಭಿರಾಮ ಪಡುಬಿದ್ರೆ, ದಾಕ್ಷಾಯಿಣಿಯಾಗಿ ಸಂತೋಷ್‌ ಹಿಲಿಯಾಣ, ದೇವೇಂದ್ರನಾಗಿ ಜಯಾನಂದ ಸಂಪಾಜೆ, ಮರೀಚಿ ಬ್ರಹ್ಮನಾಗಿ ಪ್ರಸಾದ್‌ ಸವಣೂರು, ಬ್ರಾಹ್ಮಣರಾಗಿ ಜಯರಾಮ ಆಚಾರ್ಯ, ಪ್ರಜ್ವಲ್‌ ಕುಮಾರ್‌ ಗುರುವಾಯನಕೆರೆ, ಪ್ರಕಾಶ್‌ ನಾಯಕ್‌ ನೀರ್ಚಾಲ್‌, ಪುರೋಹಿತರಾಗಿ ಸೀತಾರಾಮ್‌ ಕುಮಾರ್‌ ಕಟೀಲ್‌, ವೀರಭದ್ರನಾಗಿ ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್‌ ಅಭಿನಯಿಸಿದ್ದರು.

ಮಾಚಿದೇವನ ಕಥೆಗೆ ರವಿಚಂದ್ರ ಕನ್ನಡಿಕಟ್ಟೆ ಭಾಗವತಿಕೆ, ಶ್ರೀಧರ ವಿಟ್ಲ, ದೇಲಂತಮಜಲು ಸುಬ್ರಹ್ಮಣ್ಯ ಭಟ್‌ ಹಿಮ್ಮೇಳವಿತ್ತು.

ಬಿಜಾಪುರ ಜಿಲ್ಲೆಯ ಸಿಂಧಗಿ ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿ ಪರ್ವತಯ್ಯ(ಜಯರಾಮ ಆಚಾರ್ಯ) ಸುಜ್ಞಾನಾಂಬಿಕೆ ದಂಪತಿಯ ಪುತ್ರನಾಗಿ ಜನಿಸುವ ಮಾಚಿದೇವನಿಗೆ, ಶೂದ್ರರಿಗೆ ಪಾಠ ಹೇಳುವುದಿಲ್ಲ ಎಂಬ ಕಾಲದಲ್ಲೂ ಮಲ್ಲಿಕಾರ್ಜುನಯ್ಯ ಸ್ವಾಮಿಗಳು ಪಾಠ ಬೋಧಿಸುತ್ತಾರೆ. ಬಾಲ ಮಾಚಿದೇವನಾಗಿ (ಅಕ್ಷಯ್‌ ಭಟ್‌ ಮೂಡಬಿದಿರೆ), ಅನಂತರದ ಮಾಚಿದೇವನಾಗಿ ರಕ್ಷಿತ್‌ ಪಡ್ರೆ, ಬಸವಣ್ಣನಾಗಿ ಪೆರ್ಮುದೆ ಅವರ ಅಭಿನಯ, ವಾಕ್‌ ಚಾತುರ್ಯದ ಚಾಕಚಕ್ಯತೆ ಕಾಣುತ್ತಿತ್ತು. ತೈಲಪ (ಶಿವರಾಮ ಜೋಗಿ)ನನ್ನು ಬಿಜ್ಜಳ (ಸದಾಶಿವ ಕುಲಾಲ್‌ ವೇಣೂರು) ಮೋಸದಿಂದ ಕೊಂದು ರಾಜ್ಯಭಾರ ಮಾಡುತ್ತಾನೆ. ಬಿಜ್ಜಳನ ಸಹವರ್ತಿಗಳಾದ ಮಂತ್ರಿ ಮಂಜಣ್ಣ (ಪ್ರಜ್ವಲ್‌) ಹಾಗೂ ನಾತಿರಾಜ (ಶಬರೀಶ ಮಾನ್ಯ) ಅವರು ಬಿಜ್ಜಳನ ಕುಕೃತ್ಯಗಳಿಗೆ ದುಷೆøàರಣೆ ನೀಡುತ್ತಾರೆ.

ಶರಣರ ಬಟ್ಟೆಯನ್ನಷ್ಟೇ ಮಡಿ ಮಾಡುವ ಮಾಚಿದೇವ ಸೋಮಾರಿಗಳ,ದುರ್ಗುಣಿಗಳ ಬಟ್ಟೆಯನ್ನು ಮುಟ್ಟದೇ ಅರಸುತನ ಮೇಲಲ್ಲ ಅಗಸತನ ಕೀಳಲ್ಲ ಎಂದು ಸಾರಿದ್ದರು. ಹೆಂಡ ಮಾರಾಟದ ವ್ಯಕ್ತಿ (ಸೀತಾರಾಮ ಕುಮಾರ್‌) ಅವರಿಂದ ಹೆಂಡ ಕುಡಿದ ಬಿಜ್ಜಳನ ಬಂಟ (ಶಬರೀಶ) ತನ್ನ ಬಟ್ಟೆ ಮಡಿ ಮಾಡುವಂತೆ ಒತ್ತಾಯಿಸಿದಾಗ ಅವನನ್ನು ಮಾಚಿದೇವ ಕೊಲ್ಲುತ್ತಾರೆ. ಆಗ ಬಿಜ್ಜಳನಿಗೆ ಮಡಿವಾಳನ ಕುರಿತು ಸುಳ್ಳು ದೂರು ಹೋಗುತ್ತದೆ. ರಾಜ ವಿವೇಚನೆಯಿಲ್ಲದೆ ಮಾಚಿದೇವನನ್ನು ಕೊಲ್ಲಲು ಆದೇಶಿಸುವಾಗ ಸಾವು ಮಾಚಿದೇವನ ಸನಿಹವೂ ಬರುವುದಿಲ್ಲ. ಮಂತ್ರಿ ಬಸವಣ್ಣ ನೀಡಿದ ಹಿತವಚನದಂತೆ ರಾಜ ವಚನಕಾರ, ಕದನಕಲಿ ಮಾಚಿದೇವನನ್ನು ಹಿಂಸಿಸುವುದನ್ನು ಬಿಡುತ್ತಾನೆ. ಮಾಚಿದೇವ ಅರಸನನ್ನು ಕ್ಷಮಿಸುತ್ತಾರೆ.

ಬಿದಿರು ಕಡಿದು ಬಂದ ದುಡಿಮೆ ಹಣದಲ್ಲಿ ದಾಸೋಹ ನೀಡುವ ಕೇತಯ್ಯ (ಪ್ರಸಾದ್‌ ಸವಣೂರು) ತಾಯವ್ವ (ಪ್ರಕಾಶ್‌ ನೀರ್ಚಾಲ್‌) ದಂಪತಿಯನ್ನು ಪರೀಕ್ಷಿಸಲು ಶಿವ ಬಸವಣ್ಣನ ವೇಷದಲ್ಲಿ ದಾಸೋಹದ ಬಳಿಕ ಚಿನ್ನದ ಗಂಟನ್ನು ಊಟದ ಜಾಗದಲ್ಲಿ ಇಡುತ್ತಾನೆ. ಇದನ್ನು ನೋಡಿದ ಕೇತಯ್ಯ ಆ ಗಂಟನ್ನು ತಿಪ್ಪೆಗೆ ಎಸೆಯುತ್ತಾನೆ. ಬಳಿಕ ಬಿದಿರು ಮೆಳೆಗೆ ಸಿಲುಕಿ ಸಾಯುತ್ತಾನೆ. ಇದನ್ನು ನೋಡಿ ತನ್ನಿಂದಾಗಿ ಹೀಗಾಯಿತು ಎಂದು ಬಸವಣ್ಣರೂ ಪ್ರಾಣ ಕಳೆದುಕೊಳ್ಳುತ್ತಾರೆ. ಇವರಿಬ್ಬರ ಸ್ಥಿತಿ ನೋಡಿ ಮಡಿವಾಳ ಮಾಚಿದೇವ ಕೆರಳಿದಾಗ ಶಿವ ಇಬ್ಬರ ಪ್ರಾಣ ಮರಳಿಸುತ್ತಾನೆ.

ಬ್ರಾಹ್ಮಣ ಮಧುವರಸ (ಸೀತಾರಾಮ ಕುಮಾರ್‌) ಹರಳಯ್ಯ (ಜಯಾನಂದ) ತನ್ನ ಹಾಗೂ ಪತ್ನಿಯ ತೊಡೆಯ ಚರ್ಮದಿಂದ ಮಾಡಿದ ಚಪ್ಪಲಿಯನ್ನು ಬಸವಣ್ಣರಿಗೆ ನೀಡಲು ಕೊಂಡೊಯ್ಯುವಾಗ ಸೆಳೆದು ತೆಗೆದು ಹಾಕಿಕೊಂಡಾಗ ಮೈಯೆಲ್ಲ ಉರಿ ಬಂದು ಹರಳಯ್ಯನ ಮನೆ ಬಾವಿ ನೀರಿನಿಂದ ಉರಿಶಮನವಾಗುತ್ತದೆ. ನಂತರದ ದಿನಗಳಲ್ಲಿ ನೀರಿಗೆ ಬಿದ್ದ ಬ್ರಾಹ್ಮಣ ಕುವರಿ ಮಂಜುಳಾ (ಹಿಲಿಯಾಣ)ಳನ್ನು ಹರಳಯ್ಯನ ಮಗ ವೀರಣ್ಣ (ಪೆರ್ಲ ಜಗನ್ನಾಥ ಶೆಟ್ಟಿ) ರಕ್ಷಿಸಿ ಪ್ರೇಮಾಂಕುರವಾಗಿ ಅಲ್ಲಮಪ್ರಭುಗಳ ನೇತೃತ್ವದಲ್ಲಿ ಶರಣ ಸಂಪ್ರದಾಯದಂತೆ ವಿವಾಹವಾಗುತ್ತದೆ.

ತೈಲಪನ ಮಡದಿ ಸೋಮಲಾದೇವಿ (ರಮೇಶ ಆಚಾರ್ಯ) ಪತಿಯ ಸಾವಿನ ಬಳಿಕ ಅಜ್ಞಾತವಾಸದಲ್ಲಿ ಮಕ್ಕಳಾದ ಬೊಪ್ಪಣ್ಣ (ಶಿವರಾಜ್‌ ಬಜಕೂಡ್ಲು) ಜಗದೇವ (ಅಕ್ಷಯ್‌ ಭಟ್‌)ನ ಜತೆಗಿದ್ದರು. ಅವರು ದೊಡ್ಡವರಾದ ಮೇಲೆ ತಂದೆಯ ಮರಣದ ಹಿಂದಿನ ಮೋಸವನ್ನು ಹೇಳಿ ತೈಲಪನ ಸಾವಿಗೆ ಪ್ರತೀಕಾರ ತೀರಿಸಬೇಕೆಂದು ಹೇಳಿ ಕಳುಹಿಸಿಕೊಡುತ್ತಾಳೆ. ಅವರಿಬ್ಬರೂ ಬಿಜ್ಜಳನ ಸಂಸ್ಥಾನ ಸೇರಿ ನಂಬಿಕೆ ಬರುವಂತೆ ಮಾಡಿ ಬೇಟೆಗೆ ಹೋದಾಗ ಅವನನ್ನು ಕೊಲ್ಲುತ್ತಾರೆ. ಇದು ತಿಳಿದು ಬಿಜ್ಜಳನ ಮಂತ್ರಿ ಮಂಜಣ್ಣ ಬೊಪ್ಪಣ್ಣನನ್ನು ಕೊಲ್ಲುತ್ತಾನೆ. ಜಗದೇವನನ್ನು ಕೊಲ್ಲಲು ಮುಂದಾದಾಗ ಮಾಚಿದೇವನೇ ಮಂಜಣ್ಣನನ್ನು ಕೊಲ್ಲುತ್ತಾನೆ. ಬಸವಣ್ಣ, ಮಾಚಿದೇವರು ಜಗದೇವನಿಗೆ ಪಟ್ಟಾಭಿಷೇಕ ಮಾಡಿಸಿ ವಚನಗ್ರಂಥಗಳೊಂದಿಗೆ ಬಾಗೇವಾಡಿ ಹಿಪ್ಪರಗಿಗೆ ನಿರ್ಗಮಿಸುತ್ತಾರೆ . ಇದಿಷ್ಟು ಅಂಶಗಳು ಅಂದಿನ ಪ್ರದರ್ಶನದಲ್ಲಿದ್ದವು.

ಅನುಭವ ಮಂಟಪ, ಅಕ್ಕಮಹಾದೇವಿ ಇತ್ಯಾದಿಗಳನ್ನು ಸಮಯಾಭಾವದಿಂದ ಕೈ ಬಿಡಲಾಗಿತ್ತು. ಬಸವಣ್ಣನವರ ವಚನಗಳು, ಮಾಚಿದೇವರ ವಚನಗಳು ಪ್ರಸಂಗದಲ್ಲಿ ಅಲ್ಲಲ್ಲಿ ಕಾಣಿಸಿಕೊಂಡಿತು. ಇದೆಲ್ಲಕ್ಕಿಂತ ಮುಖ್ಯವಾಗಿ ಒಂದು ಐತಿಹಾಸಿಕ, ಸಾಮಾಜಿಕ ಪ್ರಸಂಗ ಪೌರಾಣಿಕ ಪ್ರಸಂಗದ ಮಾದರಿಯಲ್ಲೇ ಕತೆಯನ್ನು ಕೊಂಡೊಯ್ದಂತೆ ಸಾಗಿದ ನಿರೂಪಣೆ. ಇಲ್ಲಿ ಯಾವುದೇ ಕಲಾವಿದರು ಕನ್ನಡ ಸ್ನಾತಕೋತ್ತರ ಪದವಿ ಮಾಡದೇ ಇದ್ದರೂ ವಚನಗಳನ್ನು, ಐತಿಹಾಸಿಕ ಕತೆಯನ್ನು ಲೀಲಾಜಾಲವಾಗಿ ಎಲ್ಲೂ ಕತೆ, ಭಾಷೆ, ಇತಿಹಾಸ, ಸಾಮಾಜಿಕ ವರ್ತುಲಗಳಿಗೆ ಚ್ಯುತಿ ಬಾರದಂತೆ ಕೊಂಡೊಯ್ದ ರೀತಿ ಪ್ರಶಂಸನೀಯ. ಅಂದಿನ ಕಾಲದ ವರ್ಣವೈಷಮ್ಯವನ್ನು ಕೂಡಾ ನಾಜೂಕಾಗಿ ಹೆಣೆದು ಹೇಳಿದ ರೀತಿ ಮಾದರಿಯಾಗಿತ್ತು. ಅಸಂಬದ್ಧಕ್ಕೆ ಆಸ್ಪದವೇ ಇರಲಿಲ್ಲ. ಹುಳುಕು ಹುಡುಕಲು ಅವಕಾಶ ಇಲ್ಲದಂತೆ ಅಚ್ಚುಕಟ್ಟಾಗಿ ಅಭಿನಯಿಸಿದ್ದರು. ಪದ್ಯಗಳೆಲ್ಲವೂ ನವನವೀನವಾಗಿದ್ದು ಇಬ್ಬರೂ ಭಾಗವತರು ಮಾಧುರ್ಯಭರಿತವಾಗಿ ಪ್ರಸಂಗವನ್ನು ಕೊಂಡೊಯ್ದರು. ಅದರಲ್ಲೂ ಸಾಮಾಜಿಕ ಕಥೆಯಾದ ಮಾಚಿದೇವನ ಪ್ರಸಂಗದ ನಡೆ ಕನ್ನಡಿಕಟ್ಟೆಯವರ ಭಾಗವತಿಕೆಯಲ್ಲಿ ಅತ್ಯಂತ ಪ್ರಬುದ್ಧವಾಗಿ ಸಾಗಿತು.

-ಲಕ್ಷ್ಮೀ ಮಚ್ಚಿನ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಮಳೆಗೆ ಮತ್ತೆ ಒಡೆದ ವಿಜಯನಗರ ಕಾಲುವೆ ಅತಂತ್ರದಲ್ಲಿ ಭತ್ತದ ನಾಟಿ ಕಾರ್ಯ

ಮಳೆಗೆ ಮತ್ತೆ ಒಡೆದ ವಿಜಯನಗರ ಕಾಲುವೆ: ಅತಂತ್ರದಲ್ಲಿ ಭತ್ತದ ನಾಟಿ ಕಾರ್ಯ

ಇಂದು ಸಂಜೆ 3.30ಕ್ಕೆ ಎಸ್ಎಸ್ಎಲ್ ಸಿ ಪರೀಕ್ಷೆ ಫಲಿತಾಂಶ: ಪೋಷಕರಿಗೆ ಸಚಿವರ ಕಿವಿಮಾತು

ಇಂದು ಸಂಜೆ 3.30ಕ್ಕೆ ಎಸ್ಎಸ್ಎಲ್ ಸಿ ಪರೀಕ್ಷೆ ಫಲಿತಾಂಶ: ಪೋಷಕರಿಗೆ ಸಚಿವರ ಕಿವಿಮಾತು

ನೆಮ್ಮಾರ್ ಬಳಿ ಕುಸಿದ ರಸ್ತೆ: ಶೃಂಗೇರಿ ಕಾರ್ಕಳ ರಸ್ತೆಯನ್ನು ತಾತ್ಕಾಲಿಕ ಬಂದ್

ನೆಮ್ಮಾರ್ ಬಳಿ ಕುಸಿದ ರಸ್ತೆ: ಶೃಂಗೇರಿ ಕಾರ್ಕಳ ರಸ್ತೆ ತಾತ್ಕಾಲಿಕ ಬಂದ್

ವಾಷಿಂಗ್ಟನ್ ಡಿಸಿ: ಪಾರ್ಟಿಯ ಮೇಲೆ ಗುಂಡಿನ ದಾಳಿ, ಓರ್ವ ಸಾವು 20ಕ್ಕೂ ಹೆಚ್ಚು ಮಂದಿಗೆ ಗಾಯ

ವಾಷಿಂಗ್ಟನ್ ಡಿಸಿ: ಪಾರ್ಟಿಯ ಮೇಲೆ ಗುಂಡಿನ ದಾಳಿ, ಓರ್ವ ಸಾವು 20ಕ್ಕೂ ಹೆಚ್ಚು ಮಂದಿಗೆ ಗಾಯ

Bell-01

ಅಯೋಧ್ಯಾ ರಾಮನಿಗೆ 2.1 ಟನ್‌ನ ಭಾವೈಕ್ಯ ಗಂಟೆ !

ಮುಂದಿನ ಪ್ರಧಾನಿ ಮೋದಿಯೇ ಆಗಲಿ ; ಇಂಡಿಯಾ ಟುಡೇ-ಕಾರ್ವಿ ಇನ್‌ಸೈಟ್ಸ್‌ ಸಮೀಕ್ಷಾ ವರದಿ

ಮುಂದಿನ ಪ್ರಧಾನಿ ಮೋದಿಯೇ ಆಗಲಿ ; ಇಂಡಿಯಾ ಟುಡೇ-ಕಾರ್ವಿ ಇನ್‌ಸೈಟ್ಸ್‌ ಸಮೀಕ್ಷಾ ವರದಿ

School-Children-01

ಚಿಂತನೆ: ಹೊಸ ಶಿಕ್ಷಣ ನೀತಿ ಒಂದು ಐತಿಹಾಸಿಕ ಹೆಜ್ಜೆ
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ಅಮೃತ’ ಗಾನ ಧಾರೆ: ಮದುವೆ ಔತಣ ಕೂಟದಲ್ಲಿ ಪತಿ-ಪತ್ನಿ ‘ಯಕ್ಷ ಗಾನ ವೈಭವ’

udayavani youtube

ರಾಂಬೂಟಾನ್ ಬೆಳೆಯುವ ಸೂಕ್ತ ವಿಧಾನ | How To Grow Rambutan Fruit | FULL INFORMATION

udayavani youtube

ಟೇಬಲ್ ಟಾಪ್ ರನ್ ವೇ ಏಕೆ ಸವಾಲು?

udayavani youtube

ಜೇನುನೊಣಗಳ ಸಂತತಿ ಇಲ್ಲವಾದರೆ ಇಡೀ ಜೀವ ಸಂಕುಲವೇ ನಶಿಸಿಹೋಗುತ್ತದೆ | Udayavani

udayavani youtube

VP NAGARAದ 75 CENTS ಜಾಗದಲ್ಲಿ ಮಾದರಿ ಕೃಷಿ ತೋಟ| Udayavaniಹೊಸ ಸೇರ್ಪಡೆ

CINEMA-TDY-1

ಹೊಸಬರಿಗೆ “ನಿಮ್ಮೆಲ್ಲರ ಆಶೀರ್ವಾದ’ ಇರಲಿ…

ಭಾರತದ ಮಾಜಿ ಫ‌ುಟ್ಬಾಲಿಗ ಮನಿತೋಂಬಿ ಸಿಂಗ್‌ ನಿಧನ

ಭಾರತದ ಮಾಜಿ ಫ‌ುಟ್ಬಾಲಿಗ ಮನಿತೋಂಬಿ ಸಿಂಗ್‌ ನಿಧನ

ಮಳೆಗೆ ಮತ್ತೆ ಒಡೆದ ವಿಜಯನಗರ ಕಾಲುವೆ ಅತಂತ್ರದಲ್ಲಿ ಭತ್ತದ ನಾಟಿ ಕಾರ್ಯ

ಮಳೆಗೆ ಮತ್ತೆ ಒಡೆದ ವಿಜಯನಗರ ಕಾಲುವೆ: ಅತಂತ್ರದಲ್ಲಿ ಭತ್ತದ ನಾಟಿ ಕಾರ್ಯ

ಸೋಂಕಿತರ ಸಂಖ್ಯೆ 2,603ಕ್ಕೇರಿಕೆ

ಸೋಂಕಿತರ ಸಂಖ್ಯೆ 2,603ಕ್ಕೇರಿಕೆ

hasan-tdy-1

ಕ್ವಿಟ್‌ ಇಂಡಿಯಾ ನೆನಪು ಕಾರ್ಯಕ್ರಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.