ಯಕ್ಷ ಸೇವಕನಿಗೆ ಅರುವತ್ತರ ಸಂಭ್ರಮ


Team Udayavani, Jul 26, 2019, 5:00 AM IST

m-7

ಒಂದು ವಿಸ್ಮ ಯ, ಒಂದು ಕಲೆ, ಸಾಹಿತ್ಯ,ಸಂಸ್ಕೃತಿ, ಸಂಘಟನೆ, ಜ್ಯೋತಿಷ, ಮಿಲಿಟರಿ,ಸಹೃದಯಿ ಮನಸ್ಸು, ತೋಟಗಾರಿಕೆ, ಸಂಶೋಧನೆ, ಸಂಗ್ರಹಣೆ ಎಲ್ಲವೂ ಆಗಿರುವ ಒಂದು ವಿಶಿಷ್ಟ ಶಕ್ತಿ ಮಧುಕರ ಭಾಗವತರು. ಅವರು ಭಾಗವತರಲ್ಲ. ಆದರೆ ಎಂತಹ ಭಾಗವತರನ್ನೂ ನಿರ್ದೇಶಿಸಬಲ್ಲ ಸಮರ್ಥ. ಅವರ ಹಿಂದಿನ ಅನೇಕ ತಲೆಮಾರುಗಳು, ಅವರ ಅಜ್ಜ, ಮುತ್ತಜ್ಜ ಎಲ್ಲರೂ ಭಾಗವತರು, ಹಿಮ್ಮೇಳವಾದನ ಪ್ರವೀಣರು, ವೇಷಧಾರಿಗಳು. ಸುಮಾರು 150 ವರುಷಗಳ ಇತಿಹಾಸವಿದ್ದ ಪಣಂಬೂರು ಮೇಳವನ್ನು ಇವರ ಕುಟುಂಬದ ಹಿರಿಯರೇ ನಡೆಸುತ್ತಿದ್ದುದು ಮಾತ್ರವಲ್ಲದೆ ಸ್ವತಃ ಕಲಾವಿದರಾಗಿ ಇದ್ದವರು. ಇವರ ಮನೆ ಭಾಗವತರ ಮನೆ ಎಂದೇ ಪ್ರಸಿದ್ಧಿ.

ಹಿರಿಯರ ಎಲ್ಲ ಪ್ರತಿಭೆಗಳ ವಂಶವಾಹಿಗಳು ಮಧುಕರ ಭಾಗವತರಲ್ಲಿ ಸಮ್ಮಿಲಿತಗೊಂಡವು. ಬಾಲ್ಯದಲ್ಲೇ ಯಕ್ಷಗಾನವನ್ನು ಶ್ರೀರಾಮ ಮಾಸ್ಟರ್‌ ಅವರಿಂದ ಕಲಿತು 11ನೇ ವಯಸ್ಸಿನಲ್ಲಿ ಪಣಂಬೂರು ಶ್ರೀ ನಂದನೇಶ್ವರ ಯಕ್ಷಗಾನ ಮಿತ್ರ ಮಂಡಳಿಯಲ್ಲಿ ಗೆಜ್ಜೆ ಕಟ್ಟಿದರು. ಹಿರಿಯ ಅಗರಿ ಭಾಗವತರು, ನೆಡ್ಲೆ, ದಿವಾಣ, ಕೋಳ್ಯೂರು, ಸಾಮಗ ಮೊದಲಾದ ಯಕ್ಷ ದಿಗ್ಗಜರ ಕೃಪೆಗೆ ಒಳಗಾದರು. ಹಿರಿಯರಾದ ಶ್ರೀರಾಮ ಐತಾಳ, ಪರಮೇಶ್ವರ ಐತಾಳ, ವೆಂಕಟ್ರಾ¿å ಐತಾಳ, ಶ್ರೀಧರ ಐತಾಳ, ಗೋಪಾಲ ಮಾಸ್ಟರ್‌ ಅವರ ಮಾರ್ಗದರ್ಶನದಲ್ಲಿ ಭರವಸೆಯ ಕಲಾವಿದನಾಗಿ ಮೂಡಿಬಂದರು. ಶಿಶುಪಾಲ, ಅತಿಕಾಯ, ಇಂದ್ರಜಿತು ಕಾಳಗದ ಲಕ್ಷ್ಮಣ, ಹನುಮಂತ, ವ್ಯಾಘ್ರಾಸುರ, ಗಜಾಸುರ ಮುಂತಾದ ವೈವಿಧ್ಯಮಯ ಪಾತ್ರಗಳಲ್ಲಿ ಮಿಂಚಿದರು.

18ರ ವಯಸ್ಸಿನಲ್ಲಿ ಅಟೋಮೊಬೈಲ್‌ ಡಿಪ್ಲೊಮಾ ಪೂರೈಸಿ ಭಾರತೀಯ ವಾಯುಸೇನೆ ಸೇರಿದರು. ರಜಾದಿನಗಳಲ್ಲಿ ಊರಿಗೆ ಬಂದಾಗಲೆಲ್ಲ ಯಕ್ಷಗಾನದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಸ್ವಯಂ ನಿವೃತ್ತಿ ಪಡೆದು ಸಮಾಜಕ್ಕಾಗಿ ತನ್ನನ್ನು ಅರ್ಪಿಸಿಕೊಂಡರು.ಪಣಂಬೂರು ನಂದನೇಶ್ವರ ಸಂಘದ ಸಕ್ರಿಯ ಕಾರ್ಯಕರ್ತನಾಗಿ, ಸಂಘಟಕನಾಗಿ ಬೆಳೆದವರು. ಅವರ ತಾಳಮದ್ದಳೆ- ಯಕ್ಷಗಾನ ಸಂಘಟನೆಗಳಲ್ಲಿ ಒಂದು ಮಿಲಿಟರಿ ಶಿಸ್ತು ಇದೆ. ಈ ಶಿಸ್ತನ್ನು ಕಲಾವಿದರು, ಪ್ರೇಕ್ಷಕರು ಸಹೃದಯದಿಂದ ಸ್ವೀಕರಿಸಿದ್ದಾರೆ. ಅವರೇ ಜ್ಯೋತಿಷಿಯಾದುದರಿಂದ ಕಾರ್ಯಕ್ರಮದ ಆರಂಭಕ್ಕೂ ಮುಹೂರ್ತ ಇದೆ. ಆರಂಭ ಮಧ್ಯಾಹ್ನ 2.03ಕ್ಕೆ ಅಂತಾದ್ರೆ ಹಿಮ್ಮೇಳ ಕಲಾವಿದರು ರಂಗದಲ್ಲಿ 2 ಘಂಟೆಗೆ ತಮ್ಮ ಪರಿಕರಗಳೊಂದಿಗೆ ಸಿದ್ಧರಾಗಿರುತ್ತಾರೆ.

ಹೀಗೆ ಅವರೊಬ್ಬ ಕ್ರಾಂತಿಕಾರಿ ಮೌನ ಸಂಘಟಕ. ಈ ಸಂಘಟನೆಗಳಲ್ಲಿ ದೃಶ್ಯಸಂಯೋಜನೆ – ಅದಕ್ಕೆ ಬೇಕಾದ ಪದ್ಯಗಳ ಹಾಗೂ ಕಲಾವಿದರ ಆಯ್ಕೆ, ಎಲ್ಲದರಲ್ಲೂ ಗುಣಮಟ್ಟಕ್ಕೆ ಪ್ರಾಶಸ್ತ್ಯ. ಹೀಗೆ ಕಲೆಯನ್ನು ಎತ್ತರಿಸಿದವರು. ಒಂದು ವೇಳೆ ಅವರು ಯೋಚಿಸಿದ ದೃಶ್ಯಗಳಿಗೆ, ಸಂದರ್ಭಗಳಿಗೆ ಸಿದ್ಧ ಪದ್ಯ ಇಲ್ಲದೇ ಇದ್ದರೆ ಅದನ್ನು ಸಮರ್ಥರಲ್ಲಿ ಬರೆಸುತ್ತಾರೆ. ಅವರ ಸಂಘಟನೆಯ ಇನ್ನೊಂದು ಪ್ರಮುಖ ಅಂಶವೆಂದರೆ ಕಲಾವಿದರನ್ನು, ಪ್ರೇಕ್ಷಕರನ್ನು ಚಿಂತನೆಗೆ ಹಚ್ಚುವಲ್ಲಿನ ದೃಷ್ಟಿಕೋನ. ಯೋಚಿಸುವ ಮನಸ್ಸುಗಳಿಗೆ ಪುಷ್ಕಳವಾದ ಆಹಾರವನ್ನು ಒದಗಿಸುವಲ್ಲಿ ಅವರು ಪಡುವ ಶ್ರಮ ಮೆಚ್ಚಲೇಬೇಕು. ಭಾಗವಹಿಸುವ ಕಲಾವಿದ ಎಲ್ಲಿಯಾದರೂ ಮೈಮರೆತು ಹಗುರವಾಗಿ ನಿರ್ವಹಣೆ ಮಾಡಿದರೆ ಆತನಿಗೆ ಬೇಕಾದ ಕಟು ಉತ್ತರ ಅವರಲ್ಲಿ ಸಿದ್ಧವಾಗಿಯೇ ಇರುತ್ತದೆ.

ಪ್ರದರ್ಶನಗಳ ಗುಣಮಟ್ಟದಲ್ಲಿ ಅವರದ್ದು ಮಿಲಿಟರಿ ಶಿಸ್ತು. ಇದು ಎಲ್ಲ ಕಡೆಯೂ ನಡೆದರೆ ಅದ್ಭುತ ಕಲಾ ಸಮಾಜವೇ ಸೃಷ್ಟಿಯಾಗಲಿಕ್ಕಿಲ್ಲವೇ? ಇದರೊಂದಿಗೆ ಕಳೆದ ಏಳರಿಂದ ಎಂಟು ದಶಕಗಳ ಆಟ – ಕೂಟಗಳ ಸಮಗ್ರ ದಾಖಲೆ ಅವರಲ್ಲಿದೆ.

ಮಧು-ಸುಧಾ ಅಭಿನಂದನೆ
ಮಧುಕರ ಭಾಗವತರು 60ನೇ ವರ್ಷಕ್ಕೆ ಕಾಲಿಟ್ಟಿರುವ ಸಂದರ್ಭದಲ್ಲಿ ಈ ಸಂತೋಷವನ್ನು ಅರ್ಥಪೂರ್ಣವಾಗಿಸಲು, ಸ್ಮರಣೀಯವನ್ನಾಗಿಸಲು ವರ್ಷಪೂರ್ತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಭಾರತೀಯ ವಾಯುಸೇನೆ (ನಿವೃತ್ತ) ಮಿತ್ರವೃಂದ ಜು. 28ರಂದು ಅಪರಾಹ್ನ 4.04ರಿಂದ ಶ್ರೀ ನಂದನೇಶ್ವರ ದೇವಸ್ಥಾನದ ರಜತಾಂಗಣದಲ್ಲಿ “ಮಧು-ಸುಧಾ ಅಮೃತಾಭಿನಂದನಾ’ ಸಮ್ಮಾನ ಸಮಾರಂಭ ಆಯೋಜಿಸಿದೆ. ಮಧುಕರ ಭಾಗವತರ ಸಾಧನಾ ಪಥದಲ್ಲಿ ಅವರ ಶ್ರೀಮತಿ ಸುಧಾ ಅವರ ಪ್ರೋತ್ಸಾಹವೂ ಅನನ್ಯ. ಅಭಿನಂದನ ಸಮಾರಂಭದ ಬಳಿಕ ಯಕ್ಷ – ನೃತ್ಯ ವೈಭವ ಹಾಗೂ “ಅತಿಕಾಯ ಮೋಕ್ಷ’ ಬಯಲಾಟ ಆಯೋಜಿಸಲಾಗಿದೆ.

ಡಾ| ಶ್ರುತಕೀರ್ತಿರಾಜ

ಟಾಪ್ ನ್ಯೂಸ್

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.