ಸುಬ್ಬಯ್ಯ ಶೆಟ್ಟಿ -ಕೃಷ್ಣಭಟ್ಟರಿಗೆ ಯಕ್ಷದೇವ ಪ್ರಶಸ್ತಿ

Team Udayavani, Jul 12, 2019, 5:00 AM IST

ಬೆಳುವಾಯಿ ಶ್ರೀ ಯಕ್ಷದೇವ ಮಿತ್ರ ಕಲಾಮಂಡಳಿ ವೃತ್ತಿಪರ ಮತ್ತು ಹವ್ಯಾಸಿ ಆಟ-ಕೂಟದ ಕಲಾವಿದರಿಗೆ ಅವಕಾಶ ಕಲ್ಪಿಸುವ ವೇದಿಕೆ. ಕೀರ್ತಿಶೇಷ ಕಲಾವಿದ ಮಿಜಾರು ಸುಬ್ರಾಯ ಭಟ್ಟರ ನೆನಪಿನಲ್ಲಿ ವರ್ಷಂಪ್ರತಿ ಕಾರ್ಯಕ್ರಮ ಸಂಯೋಜನೆ, ವಿಪುಲವಾದ ಪ್ರೇಕ್ಷಕ ವರ್ಗ, ಸಂಘಟನೆಯ ಕಾರ್ಯಧ್ಯಕ್ಷ ದೇವಾನಂದ ಭಟ್ಟರ ಸಾರಥ್ಯ. ಈ ಬಾರಿ ಮೂಡಬಿದಿರೆ ಪದ್ಮಾವತಿ ಕಲಾಮಂದಿರದಲ್ಲಿ ಜು.19ರಿಂದ ಮೂರು ದಿನ ಕಾರ್ಯಕ್ರಮ ಜರಗಲಿದ್ದು, ಈ ಸಂದರ್ಭದಲ್ಲಿ ವೇಷಧಾರಿ ಬೋಳಾರ ಸುಬ್ಬಯ್ಯ ಶೆಟ್ಟಿ ಮತ್ತು ಮದ್ದಳೆಗಾರ ಪೆರುವಾಯಿ ಕೃಷ್ಣ ಭಟ್ಟರಿಗೆ ಯಕ್ಷದೇವ ಪ್ರಶಸ್ತಿ ಸಮರ್ಪಿಸಲಾಗುವುದು.

ಬೋಳಾರ ಸುಬ್ಬಯ್ಯ ಶೆಟ್ಟಿ
ತೆಂಕುತಿಟ್ಟು ಯಕ್ಷಗಾನದ ಹಿರಿಯ ವೇಷಧಾರಿಗಳಲ್ಲೊಬ್ಬರು. ಕಾಸರಗೋಡು ಜಿಲ್ಲೆಯ ಮೂಡಂಬೈಲು ಹುಟ್ಟೂರು.ತಾರುಣ್ಯದಲ್ಲಿ ಕೆಲವರ್ಷ ಸ್ವಂತ ಹೋಟೆಲ್‌ ನಡೆಸಿದರು. ಕ್ರಮೇಣ ವ್ಯವಹಾರ ಕಡಿಮೆ ಎನಿಸಿತು. ಪಟ್ಟ ಪರಿಶ್ರಮ ಫ‌ಲಿಸಲಿಲ್ಲ. ಆ ವೇಳೆಗಾಗಲೇ ಶೆಟ್ಟರಲ್ಲಿ ಬಲವಾಗಿದ್ದ ಯಕ್ಷರಂಗದ ಒಲುಮೆ ಮೇಳದತ್ತ ಸೆಳೆಯಿತು. ಸುಬ್ಬಯ್ಯ ಶೆಟ್ಟರು ಅಬ್ಬರದ ಬಣ್ಣದ ಬಾಳಿನಲ್ಲಿ ನೆಲೆ ಕಂಡುಕೊಂಡರು.

ತಮ್ಮಣ್ಣ ಸುವರ್ಣರಿಂದ ನಾಟ್ಯದ ಪಾಠ, ತನಿಯಪ್ಪ ಪಂಡಿತರು ಮತ್ತು ಕೋಟಿ ಪಾತ್ರದ ಖ್ಯಾತಿವಂತ ಬೋಳಾರ ನಾರಾಯಣ ಶೆಟ್ಟರ ಪ್ರಭಾವ ಆವರಿಸಿತು. ಸುಂಕದಕಟ್ಟೆ, ಕದ್ರಿ, ಕರ್ನಾಟಕ, ಕುಂಟಾರು ಮೊದಲಾದ ಏಳೆಂಟು ಮೇಳಗಳಲ್ಲಿ ಸಂಚಾರ. ರಾ-ಸಾಮಗ, ಕೋಳ್ಯೂರು, ಕರ್ನೂರು, ಮಿಜಾರು, ಅರುವ, ಪುಳಿಂಚ …ಹೀಗೆ ಉನ್ನತ ಕಲೋಪಾಸಕರ ಜೊತೆ 50 ವರ್ಷ ಮುನ್ನಡೆದರು.

ಧರ್ಮರಾಯ , ದೇವೇಂದ್ರ ಮೊದಲಾದ ಪೀಠಿಕೆ ವೇಷ. ಶುಂಭ, ಶೂರ್ಪನಖೀ, ಲಂಕಿಣಿ, ತಾಟಕಿ ಮುಂತಾದ ಬಣ್ಣದ ವೇಷ ಹಾಗೂ ತುಳು ಪ್ರಸಂಗದ ಪೆರುಮಳ ಬಲ್ಲಾಳ, ತಿಮ್ಮಣ್ಣ ಅಜಿಲ, ಮಲ್ಲಯ್ಯ ಬುದ್ಧಿವಂತ ಪಾತ್ರ ನಿರ್ವಹಣೆಯಲ್ಲಿ ಪ್ರಚಲಿತರು. ಹಿತಮಿತವಾದ ಮಾತು, ಆವರಣ ಭಂಗವೆನಿಸದ ಭಾವಾಭಿನಯ ಎಲ್ಲವೂ ಅಚ್ಚುಕಟ್ಟು. ಚೌಕಿಯ ಮಟ್ಟಿಗೆ ಒಳ್ಳೆಯ ಸುಧಾರಿಕೆ. ಉಡುಪಿ ಕಲಾರಂಗ ಮತ್ತು ಇನ್ನಿತರ ಹತ್ತಾರು ಪ್ರಶಸ್ತಿ ಪುರಸ್ಕೃತರು.

ಪೆರುವಾಯಿ ಕೃಷ್ಣ ಭಟ್ಟರು
ಬಂಟ್ವಾಳದ ಪೆರುವಾಯಿ ಹುಟ್ಟೂರು. ಧರ್ಮಸ್ಥಳ ಲಲಿತ ಕಲಾಕೇಂದ್ರದ ಪ್ರಥಮ ತಂಡದ ವಿದ್ಯಾರ್ಥಿ. ಗುರು ಮಾಂಬಾಡಿ ನಾರಾಯಣ ಭಾಗವತ. ಅಜ್ಜ ಶಾಂತಿಮೂಲೆ ನಾರಾಯಣ ಭಟ್ಟರು ಮತ್ತು ಬಲಿಪ ನಾರಾಯಣ ಭಾಗವತರಿಂದ ಹಿಮ್ಮೇಳ ವಾದನ ಕಲೆಯ ಪ್ರೇರಣೆ. ಕಟೀಲು, ಕುಂಬಳೆ, ಕದ್ರಿ, ಅಳದಂಗಡಿ ಮೇಳಗ‌ಳಲ್ಲಿ ಸುಮಾರು 45 ವರ್ಷಗಳ ತಿರುಗಾಟದ ಅನುಭವಿ.

ಹಳೆಯ ಕಾಲದ ವಾದನ ಶೈಲಿಗೆ ಒಗ್ಗಿಕೊಂಡವರು. ತನ್ನ ತಿರುಗಾಟದ ಮೇಳದ ಪ್ರದರ್ಶನಗಳಿಗೆ ಮಾತ್ರ ಒಪ್ಪಿಕೊಳ್ಳುವವರು. ಇಂದಿನ ಇತರ ಆಟ-ಕೂಟಗಳತ್ತ ಹಂಬಲಿಸಿದವರಲ್ಲ.ಇದ್ದ ಸೇವೆಯ ಅವಕಾಶ ಸಾಕೆಂದು ಸಂತಸಪಟ್ಟವರು. ಸಾತ್ವಿಕ ಮನೋಭಾವ, ಮಿತಭಾಷಿ, ಮೇಳನಿಷ್ಠ, ಸಮಯಪಾಲನೆ ಭಟ್ಟರ ಈ ಗುಣಗಳೆಲ್ಲ ಗುರುತರವಾದುದು.

– ಸುಬ್ರಹ್ಮಣ್ಯ ಬೈಪಾಡಿತ್ತಾಯ, ನಂದಳಿಕೆ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಹೊಸದಿಲ್ಲಿ: ದಕ್ಷಿಣದಲ್ಲಿ ಅಬ್ಬರಿಸಿ ಅಪಾರ ಸಾವು- ನೋವು, ಆಸ್ತಿ ಪಾಸ್ತಿ ಹಾನಿಗೆ ಕಾರಣನಾದ ಮಳೆರಾಯ ಉತ್ತರದಲ್ಲಿ ತನ್ನ ಪ್ರತಾಪ ಮುಂದುವರಿಸಿದ್ದಾನೆ. ದಿಲಿ,...

  • ಬೆಂಗಳೂರು: ಕಾಂಗ್ರೆಸ್‌ ಸರ್ಕಾರ ಜಾರಿಗೆ ತಂದಿರುವ ಹಾಗೂ ಮೈತ್ರಿ ಸರ್ಕಾರ ಮುಂದುವರಿಸಿಕೊಂಡು ಬಂದಿರುವ 'ಅನ್ನಭಾಗ್ಯ' ಹಾಗೂ 'ಇಂದಿರಾ ಕ್ಯಾಂಟೀನ್‌' ಯೋಜನೆಗೆ...

  • ಮನುಷ್ಯನ ದೇಹದಲ್ಲಿರುವ ಒಂದು ಅವಿಭಾಜ್ಯ ಅಂಗವೆಂದರೆ ಅದು ಕಣ್ಣು. ಪ್ರಪಂಚವನ್ನು ಇಷ್ಟು ಸುಂದರವಾಗಿ ಕಾಣಲು ಕಾರಣವೇ ಕಣ್ಣು.ನಮ್ಮ ದೇಶದಲ್ಲಿ ಇಂದಿಗೂ ಒಂದು ಅಂದಾಜಿನ...

  • ರಾಯಚೂರು: ಮಂತ್ರಾಲಯದ ಶ್ರೀರಾಘ ವೇಂದ್ರ ಸ್ವಾಮಿಗಳ 348ನೇ ಆರಾಧನಾ ಮಹೋತ್ಸವದ ಅಂಗವಾಗಿ ಶನಿವಾರ ರಾಯರ ಮಧ್ಯಾರಾಧನೆ ವಿಜೃಂಭಣೆಯಿಂದ ನೆರವೇರಿತು. ಸಂಪ್ರದಾಯದಂತೆ...

  • ಬೆಂಗಳೂರು: ವಿಶೇಷ ಸ್ಥಾನಮಾನ ರದ್ದುಪಡಿಸುವ ನಿರ್ಧಾರಕ್ಕೆ ಪೂರ್ವಭಾವಿಯಾಗಿ ಕೇಂದ್ರ ಸರಕಾರವು ಜಮ್ಮು-ಕಾಶ್ಮೀರದಲ್ಲಿ ಭಾರೀ ಸಂಖ್ಯೆಯಲ್ಲಿ ಸೇನಾ ಯೋಧರನ್ನು...

  • ಹುಬ್ಬಳ್ಳಿ: ರೈಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ ನಿರ್ದೇಶನದಂತೆ ನ.1ರಿಂದ ಬೆಳಗಾವಿ-ಬೆಂಗಳೂರು (06526/06525) ಸೂಪರ್‌ಫಾಸ್ಟ್‌ ತತ್ಕಾಲ್ ಸ್ಪೇಷಲ್ ರೈಲನ್ನು ಪ್ರತಿದಿನ...