ಹೆಣ್ಣಿನ ಚಿಂತನೆಯ ಎತ್ತರವನ್ನು ಪರಿಚಯಿಸಿದ ಸೂರ್ಯಪ್ರಭೆ


Team Udayavani, Apr 12, 2019, 6:00 AM IST

h-10

ನಾಟಕದ ಉತ್ತರಾರ್ಧ ಮಹಾಭಾರತದ ಕಥೆಯನ್ನು ಆಧರಿಸಿದ ಸನ್ನಿವೇಶ. ಆದರೆ ಪೂರ್ವಾರ್ಧವನ್ನು ಸಹ ಮೂಲ ಕಥೆ ಬರೆದವರು ತಮ್ಮ ಚಿಂತನಾ ಲಹರಿಯಿಂದ ಮಹಾಭಾರತದ ಕಥೆಗೆ ಹೊಂದಿಕೆಯಾಗುವಂತೆ ಅಳವಡಿಸಿಕೊಂಡಿರುವುದು ಕಥೆಗಾರನ ಸೂಕ್ಷ್ಮತೆ.
ವಿಷ್ಣು ಭಟ್‌ ಹೊಸ್ಮನೆ ಆತ್ರಾಡಿಯವರ ಪೌರಾಣಿಕ ಕಥೆ “ಸೂರ್ಯಪ್ರಭೆ’ಯನ್ನು ನಾಟಕವಾಗಿ ರೂಪಾಂತರಿಸಿದವರು ವಿಶ್ವನಾಥ ದೊಡ್ಮನೆ. ಅದನ್ನು ನಿರ್ದೇಶಿಸಿ ರಂಗಕ್ಕೆ ತಂದವರು ಅಶೋಕ ಕುಮಾರ್‌ ಕೋಡ್ಯಡ್ಕ.

ಹಿರಿಯ ನಟಿ ಪ್ರಿಯಾ ಸರೋಜಾದೇವಿ, ಅಶೋಕ್‌ ಮಾರ್ನಾಡ್‌, ಅನಿಲ್‌ ಕುಮಾರ್‌ ಸಸಿಹಿತ್ಲು, ಪ್ರಭಾಕರ್‌ ನಾಯಕ್‌, ದೀಪಕ್‌ ಪೂಜಾರಿ, ಕರುಣಾಕರ ಪೂಜಾರಿ ತಂಡ ತಮ್ಮ ಮಾತು ಹಾಗೂ ಅಭಿನಯದಿಂದ ನಾಟಕಕ್ಕೆ ಜೀವ ತುಂಬುವಲ್ಲಿ ಯಶಸ್ವಿಯಾಗಿದೆ. ಮುಂಬಯಿಯ ಮಯೂರ ವರ್ಮ ಸಾಂಸ್ಕೃತಿಕ ಪ್ರತಿಷ್ಠಾನದ ವಾರ್ಷಿಕ ಮಹೋತ್ಸವದ ಸಂದರ್ಭ ಶ್ರೀ ಗೀತಾಂಬಿಕ ಸಭಾಗೃಹ ಅಸಲ# ಇಲ್ಲಿ ಪ್ರದರ್ಶನ ಕಂಡಿತು”ಸೂರ್ಯಪ್ರಭೆ’.

ಪ್ರಾರಂಭದಿಂದ ಕೊನೆಯವರೆಗೂ ಕಥಾನಾಯಕಿ ತನ್ನ ಎತ್ತರದ ಬೌದ್ಧಿಕ ಚಿಂತನೆಯನ್ನು ಸಮರ್ಥಿಸುವಲ್ಲಿ ಯಶಸ್ವಿಯಾದದ್ದು ಕಥೆಯ ಸಾರಾಂಶ. ಕೌಟುಂಬಿಕ ಕಲಹದಿಂದಾಗಿ ಉಂಟಾದ ಯುದ್ಧದಿಂದ ತನ್ನ ಪತಿಯನ್ನು ಕಳೆದುಕೊಂಡ ಅಗಸನ ಪತ್ನಿ ತನ್ನ ಮುಂದಿನ ಬಾಳಿನ ಕುರಿತು ಯೋಚಿಸುವುದಕ್ಕಿಂತ ಈ ಯುದ್ಧದಿಂದ ಇನ್ನಷ್ಟು ಜನರಿಗೆ ತನ್ನಂತೆ ಸ್ಥಿತಿ ಬರಬಹುದು ಎನ್ನುವತ್ತ ಯೋಚಿಸಿ ಯುದ್ಧ ನಿಲ್ಲಿಸುವಂತೆ ಭೀಷ್ಮಾಚಾರ್ಯರಲ್ಲಿ ಕೇಳಿಕೊಳ್ಳುವ ದೃಶ್ಯ. ಹೆಣ್ಣೊಬ್ಬಳ ಧೈರ್ಯ, ದೂರದೃಷ್ಟಿ , ವಿಶಾಲ ಮನೋಭಾವನೆಯನ್ನು ಎತ್ತಿ ತೋರಿಸುತ್ತದೆ.

ಭೀಷ್ಮಾಚಾರ್ಯರಾಗಿ ನಟಿಸಿದ ಅನಿಲ್‌ ಕುಮಾರ್‌ ಸಸಿಹಿತ್ಲು ಅವರ ಅಭಿನಯವು ಒಂದು ಕ್ಷಣ ಮಹಾಭಾರತದತ್ತ ಕೊಂಡೊಯ್ದದ್ದು ನಿಜ. ಅಲ್ಲದೇ ಮುಂಬಯಿಯ ಕಲಾವಿದರ ಪ್ರೌಢಿಮೆಯನ್ನು ಕಾಣುವಂತಾಯಿತು. ಮಧುಬಾಹುವಾಗಿ (ಅಗಸ) ನಟಿಸಿದ ಅಶೋಕ್‌ ಕಾರ್ನಾಡ್‌ ಕೌರವರ ಮನೆಯ ಅಗಸ ಪಾತ್ರವನ್ನು ಪ್ರಬುದ್ಧವಾಗಿ ನಿರ್ವಹಿಸಿರುವರು. ರಾಜ ಮನೆತನದ ಘನ – ಗಾಂಭೀರ್ಯದೊಂದಿಗೆ ಯುದ್ಧಕ್ಕೆ ಹೋಗುವ ಸಂದರ್ಭ ಬಂದಾಗ ಪತ್ನಿಯನ್ನು ಸಮಾಧಾನಿಸಿ ನಿರ್ಗಮಿಸುವುದು ಕರ್ತವ್ಯ ಪ್ರಜ್ಞೆಯನ್ನು ತೋರಿಸುವ ಸನ್ನಿವೇಶ ದೇಶಪ್ರೇಮವನ್ನು ಸಾರುವಂತಿತ್ತು.

ಇನ್ನು ದ್ರೋಣಾಚಾರ್ಯರ ಪಾತ್ರವನ್ನು ನಿರ್ವಹಿಸಿದ ಪ್ರಭಾಕರ್‌ ನಾಯಕ್‌ ಕಲಾಪ್ರೌಢಿಮೆ ತೋರಿಸುವಲ್ಲಿ ಹಿಂದೆ ಬೀಳಲಿಲ್ಲ. ಕೃಷ್ಣನ ಪಾತ್ರ ನಿರ್ವಹಿಸಿದ ದೀಪಕ್‌ ಪೂಜಾರಿ ಮುಂಬಯಿಯಲ್ಲೇ ಶಿಕ್ಷಣ ಪೂರೈಸಿದವರು. ತುಳು ನಾಟಕಗಳಲ್ಲಿ ಸಾಕಷ್ಟು ಅಭಿನಯಿಸಿದ್ದರು. ಕನ್ನಡ ನಾಟಕದಲ್ಲಿ ಅದೂ ಪೌರಾಣಿಕ ನಾಟಕದಲ್ಲಿ ಕೃಷ್ಣನ ಪಾತ್ರ ನಿರ್ವಹಿಸಿ ಭವಿಷ್ಯದಲ್ಲಿ ಭರವಸೆ ಮೂಡಿಸಿದರು.

ಸೂತ್ರಧಾರನ ಪಾತ್ರ ನಿರ್ವಹಿಸಿದ ಪ್ರಿಯಾ ಸರೋಜಾದೇವಿ ಪತಿ ಮಧುಬಾಹುವನ್ನು ಯುದ್ಧಕ್ಕೆ ಕಳುಹಿಸಿ ಕೊಡುವ ಸನ್ನಿವೇಶ, ನಂತರ ಪತಿ ಅಗಲುವಿಕೆ ಮುಂದೆ ಯುದ್ಧದಿಂದಾಗಬಹುದಾದ ಅನಾಹುತಗಳನ್ನು ತಪ್ಪಿಸಬೇಕೆಂಬ ಹಂಬಲದಿಂದ ಏಕಾಂಗಿಯಾಗಿ ಪ್ರಯತ್ನಿಸಿದ ಸನ್ನಿವೇಶಗಳಿಗೆ ಜೀವ ತುಂಬುವಲ್ಲಿ ಯಶಸ್ವಿಯಾಗಿದ್ದಾರೆ.
ಪತಿಯನ್ನು ಕಳೆದುಕೊಂಡ “ಸೂರ್ಯಪ್ರಭೆ’ ಧೈರ್ಯಗೆಡದೇ ಭೀಷ್ಮರಲ್ಲಿಗೆ ಹೋಗಿ ಯುದ್ಧ ನಿಲ್ಲಿಸುವಂತೆ ಕೇಳಿಕೊಳ್ಳುವುದು, ಭೀಷ್ಮಚಾರ್ಯರು ತನ್ನ ಅಸಹಾಯಕತೆಯನ್ನು ವ್ಯಕ್ತಪಡಿಸಿದಾಗ ದ್ರೋಣಾಚಾರ್ಯರಲ್ಲಿಗೆ ಹೋಗಿ ಯುದ್ಧದಿಂದಾಗುವ ತೊಂದರೆಗಳನ್ನು ವಿವರಿಸುವ ಸನ್ನಿವೇಶ ಹಾಗೆ ಕೃಷ್ಣನಲ್ಲಿಗೆ ಹೋಗಿ ಧೈರ್ಯದಿಂದ ಸಮಸ್ಯೆ ಹೇಳಿಕೊಳ್ಳುವ ದೃಶ್ಯಗಳಿಗೆ ವಿಶೇಷ ಕಳೆ ತುಂಬುವಲ್ಲಿ ಯಶಸ್ವಿಯಾದದ್ದು ಅವರ ಪ್ರಬುದ್ಧತೆಗೆ ಸಾಕ್ಷಿಯಾಯಿತು.

ಶಾಂತಿಲಕ್ಷ್ಮಿ ಎಸ್‌. ಉಡುಪ

ಟಾಪ್ ನ್ಯೂಸ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

6-jp-hegde

Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

5-karkala

Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್‌; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ

Fraud: ರೈಸ್‌ ಪುಲ್ಲಿಂಗ್‌ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ

Fraud: ರೈಸ್‌ ಪುಲ್ಲಿಂಗ್‌ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ

Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ

Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.