Udayavni Special

ಹೃನ್ಮನ ತಣಿಸಿದ ನೃತ್ಯ ಸಮಾರಾಧನೆ


Team Udayavani, Nov 2, 2018, 6:00 AM IST

s-4.jpg

ನೃತ್ಯದಲ್ಲಿ ಚತುರ ಶಿಲ್ಪಿಯ ರೂಪ ಲಾವಣ್ಯವನ್ನು ನೋಡಬಹುದು. ಚಿತ್ರಕಾರನ ರೇಖಾ ವಿನ್ಯಾಸಗಳನ್ನು ಕಾಣಬಹುದು. ಕವಿ ಕಲ್ಪನೆಯ ವಿಲಾಸಕ್ಕೆ ಮಾರು ಹೋಗಬಹುದು. ನಟನ ಜೀವನಾನುಭವವನ್ನು ನಿರೂಪಿಸಬಹುದು’.  ನೂರು ಮಾತುಗಳು ಹೇಳದ್ದನ್ನು ಒಂದು ನೋಟ ಹೇಳುತ್ತದೆ.  ಒಂದು ಮುದ್ರೆ  ತೋರುತ್ತದೆ. ಅಂಗವಿನ್ಯಾಸ ಶ್ರುತಗೊಳಿಸುತ್ತದೆ.

ಯಕ್ಷಗಾನದ ಆಡುಂಬೊಲವಾದ ಕರಾವಳಿಯಲ್ಲಿಂದು ನೃತ್ಯವೂ ಜನಪ್ರಿಯವಾಗಿ ಕಲಾರಸಿಕರ ಹೃನ್ಮನವನ್ನು ತಣಿಸುತ್ತಿದೆ. “ಪ್ರಾಯೇಣ ಸರ್ವಲೋಕಸ್ಯ ನೃತ್ಯಮಿಷ್ಟಂ ಸ್ವಭಾವತಃ ಪ್ರಾಯಃ’. ನೃತ್ಯವು ಸ್ವಭಾವತಃ ಎಲ್ಲರಿಗೂ ಇಷ್ಟವಾದುದೆಂದು ನಾಟ್ಯ ಶಾಸ್ತ್ರ ಹೇಳಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.

“ನೃತ್ಯದಲ್ಲಿ ಚತುರ ಶಿಲ್ಪಿಯ ರೂಪ ಲಾವಣ್ಯವನ್ನು ನೋಡಬಹುದು. ಚಿತ್ರಕಾರನ ರೇಖಾ ವಿನ್ಯಾಸಗಳನ್ನು ಕಾಣಬಹುದು. ಕವಿಕಲ್ಪನೆಯ ವಿಲಾಸಕ್ಕೆ ಮಾರು ಹೋಗಬಹುದು. ನಟನ ಜೀವನಾನುಭವವನ್ನು ನಿರೂಪಿಸಬಹುದು’. ಇಲ್ಲಿ ನೂರು ಮಾತುಗಳು ಹೇಳದ್ದನ್ನು ಒಂದು ನೋಟ ಹೇಳುತ್ತದೆ. ಒಂದು ಮುದ್ರೆ ತೋರುತ್ತದೆ. ಅಂಗವಿನ್ಯಾಸ ಶ್ರುತಗೊಳಿಸುತ್ತದೆ. ಹೀಗಾಗಿ ನೃತ್ಯ ರಸಾಸ್ವಾದನೆಗೆ ಭಾಷೆ ತೊಡಕಾಗವುದಿಲ್ಲ. ಕವಿ ಕುಲಗುರು ಕಾಳಿದಾಸ “ನಾಟ್ಯಂ ಭಿನ್ನರುಚೇರ್ಜನಶ್ಯ ಬಹುಧಾಪೆಕ‌ಂ ಸಮಾರಾಧನಮ್‌’. ನಾಟ್ಯವೂ ಭಿನ್ನರುಚಿಯ ಎಲ್ಲರಿಗೂ ಸಮಾರಾಧನವೇ ಸರಿ ಎಂದಿದ್ದಾನೆ. 

ನಟನೋ, ನಟನಿಗೋ ಅಭಿಜಾತ ದೇಹ ಸೌಂದರ್ಯವಿದ್ದಲ್ಲಿ, ಶಿಲ್ಪ ಸಾದೃಶವಾದ ಅಂಗಾಂಗಳಿದ್ದಲ್ಲಿ, ಭಾವವ್ಯಂಜಕವಾದ ನಯನಗಳಿದ್ದಲ್ಲಿ, ದೇಹ ಪ್ರಮಾಣ ಸಮ ಪ್ರಮಾಣವಿದ್ದಲ್ಲಿ ನೃತ್ಯವು ಮಾಡುವ ಪರಿಣಾಮವೇ ಬೇರೆ. ಇದರೊಂದಿಗೆ ಸಂಗೀತ, ಸಾಹಿತ್ಯ ಶಕ್ತಿಗಳ ಪರಿಜ್ಞಾನ, ಸ್ವಯಂ ಕಲ್ಪನೆ-ಸ್ಪಷ್ಟಿಶೀಲ ಗುಣವಿದ್ದಲ್ಲಿ ನೃತ್ಯ ಉಂಟುಮಾಡುವ ಪರಿಣಾಮ ಅನನ್ಯವೆನಿಸುತ್ತದೆ; ಬಹುಶ್ರುತವಾಗುತ್ತದೆ ಎಂಬುದಕ್ಕೆ ಶರನ್ನವರಾತ್ರಿಯ ಕಾಲದಲ್ಲಿ ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನದಲ್ಲಿ ಸಂಪನ್ನಗೊಂಡ ನೃತ್ಯವಿದುಷಿ ಡಾ| ರಶ್ಮಿ ಗುರುಮೂರ್ತಿಯವರ ನೃತ್ಯ ಸಾಕ್ಷಿಯಾಗಿತ್ತು. ಸಾಂಪ್ರದಾಯಿಕ ಪುಷ್ಪಾಂಜಲಿ (ರಾಗ ಮಾಲಿಕೆ, ತಾಳಮಾಲಿಕೆೆ)ಯೊಂದಿಗೆ ಪ್ರತಿಭೆಯನ್ನು ತೋರಿದರು. ಕಾಲೈತೂಕಿ (ನಟರಾಜನ ಕಾಲ್ಗೆಜ್ಜೆಗಳು ನಲಿಯುತ್ತಿವೆ) ತಮಿಳು ಸಾಹಿತ್ಯದ, ಭಾಗೇಶ್ರೀ ರಾಗ, ರೂಪಕ ತಾಳದಲ್ಲಿ ಮನೋಜ್ಞವಾಗಿ ಮೂಡಿ ಬಂತು. ವಿಶೇಷವೆಂದರೆ ಇಲ್ಲಿ ನಟರಾಜನೆ ಕಾಲ್ಗೆಜ್ಜೆಗಳು ಕುಣಿಯುವುದು, ಇದನ್ನು ತೋರುವಲ್ಲಿನ ನಟಿಯ ಸೂಕ್ಷ್ಮಾವಲೋಕನ ಗತಿಪ್ರಜ್ಞೆ ಮೆಚ್ಚುವಂತಿತ್ತು. ದೇವೀ ಅಕ್ಷರಂ (ರಾಗಮಾಲಿಕೆ, ತಾಳಮಾಲಿಕೆ) ಡಾ| ರಶ್ಮಿ ಗುರುಮೂರ್ತಿಯವರ ವಿಶಿಷ್ಟ ಸಂಯೋಜನೆ. ಶ್ರೀ ದುರ್ಗಾ ಸಪ್ತಶತಿಯಲ್ಲಿ ಮುಖ್ಯವಾಗಿ ಕಾಣಿಸಿಕೊಳ್ಳುವ “ನವರಾಕ್ಷಸರು’ ಮಧು-ಕೈಟಭಾದಿ ರಕ್ತಬೀಜಾಸುರರ ವಧೆಯವರೆಗಿನ ಮುಖ್ಯಾಂಶಗಳನ್ನು ತೋರುವಲ್ಲಿ ಕಲಾವಿದೆ ಗಮನಸೆಳೆದರು. ನಾನೇನು ಮಾಡಿದೆನೋ (ರಾಗಮಾಲಿಕೆ, ಆದಿತಾಳ) ಪುರಂದರದಾಸರ ಪ್ರಸಿದ್ಧವಾದ ಕೃತಿ-ಸ್ವಯಂ ಕೃಷ್ಣಭಕ್ತೆಯಾಗಿ, ಕೃಷ್ಣನ ಕುರಿತು ಅನೇಕ ಭಾವಗೀತೆಗಳನ್ನು ಬರೆದ ಕವಯತ್ರಿ-ನರ್ತಕಿ ಹೃನ್ಮನ ತಣಿಯುವ ಅಭಿನಯ ತೋರಿದರು. ಸಂಚಾರೀ ಭಾವದಲ್ಲಿ ಕೃಷ್ಣ-ಕುಚೇಲರ ಸ್ನೇಹ ಸಾಹಿತ್ಯ ಪರಿಣಾಮಕಾರಿಯಾಗಿತ್ತು. ಡಾ|ರಶ್ಮಿ ಆಸಕ್ತಿಯಿಂದ ಗುರುಮುಖೇನ ಕೂಚಿಪುಡಿ ಕಲಿತವರು. ಹೀಗಾಗಿ, ಅನ್ನಮಾಚಾರ್ಯರ ಕೃತಿ ಮುದ್ದುಗಾರೆ ಯಶೋಧಾ (ಕುರಂಜಿ-ಆದಿತಾಳ)ವನ್ನು ಕಲಾಸಕ್ತರಿಗೆ ತೋರಿ ಕೊಡುವಲ್ಲಿ ಪೂರ್ಣ ಯಶಸ್ವಿಯಾದರು. 

ನೃತ್ಯದ ಹಿಮ್ಮೇಳ ಸಾಥಿಗಳಾಗಿ ಉಡುಪಿಯ ರಾಧಾಕೃಷ್ಣ ನೃತ್ಯ ನಿಕೇತನದ ಗುರು ಉಡುಪಿ ವೀಣಾ ಮುರುಳೀಧರ ಸಾಮಗ , ಸಂಗೀತ ಮತ್ತು ನಟುವಾಂಗದಲ್ಲಿ ತನ್ನ ಶಿಷ್ಯೆಯ ಪ್ರತಿಭಾ ದರ್ಶನಕ್ಕೆ ಬೆಂಬಲವಾಗಿ ಸೈಯೆನಿಸಿಕೊಂಡರು. ವಿ| ರಾಮಚಂದ್ರ ಪಾಂಗಣ್ಣಾಯ ಮೃದಂಗವಾದನ ನೃತ್ಯಕ್ಕೆ ಪೋಷಕವೂ ಆಗಿತ್ತು. ವಯೋಲಿನ್‌ ವಾದಕರಾಗಿ ಮಾ| ವೈಭವ್‌ ಪೈ, ಮಣಿಪಾಲ ಅವರು ಸಾಂಗತ್ಯ ನೀಡಿದರು. 

ಅಂಬಾತನಯ ಮುದ್ರಾಡಿ

ಟಾಪ್ ನ್ಯೂಸ್

ಸಿಎಂ ಕಚೇರಿ ನೌಕರನ ಭ್ರಷ್ಟಾಚಾರ ಬಯಲಾದರೂ ಸಿಎಂ ಮೌನ ಯಾಕೆ?

ಸಿಎಂ ಕಚೇರಿ ನೌಕರನ ಭ್ರಷ್ಟಾಚಾರ ಬಯಲಾದರೂ ಸಿಎಂ ಮೌನ ಯಾಕೆ?

ಅಮೆರಿಕದ ಮೊದಲ ಕಪ್ಪುವರ್ಣೀಯ ವಿದೇಶಾಂಗ ಸಚಿವ ಪೊವೆಲ್‌ ನಿಧನ

ಅಮೆರಿಕದ ಮೊದಲ ಕಪ್ಪುವರ್ಣೀಯ ವಿದೇಶಾಂಗ ಸಚಿವ ಪೊವೆಲ್‌ ನಿಧನ

ನ.8ರಿಂದ ದತ್ತಮಾಲಾ ಅಭಿಯಾನ; ಗಂಗಾಧರ ಕುಲಕರ್ಣಿ

ನ.8ರಿಂದ ದತ್ತಮಾಲಾ ಅಭಿಯಾನ; ಗಂಗಾಧರ ಕುಲಕರ್ಣಿ

 18 ತಿಂಗಳಲ್ಲಿ ಅತೀ ಕಡಿಮೆ ಕೋವಿಡ್‌ ಸೋಂಕು

 18 ತಿಂಗಳಲ್ಲಿ ಅತೀ ಕಡಿಮೆ ಕೋವಿಡ್‌ ಸೋಂಕು

ತಿಕೋಟಾ ತಾಲೂಕಿನಲ್ಲಿ ಮತ್ತೆ ಭೂಕಂಪ : ಭಯದಿಂದ‌ ಮನೆಯಿಂದ ಹೊರ ಓಡಿದ ಜನ

ತಿಕೋಟಾ ತಾಲೂಕಿನಲ್ಲಿ ಮತ್ತೆ ಭೂಕಂಪನ : ಭಯಗೊಂಡು ಮನೆಯಿಂದ ಹೊರ ಓಡಿದ ಜನ

ದುರಸ್ತಿಗೊಂಡು ಎರಡೇ ದಿನಕ್ಕೆ ಹಳೆ ಚಾಳಿಯನ್ನು ಮುಂದುವರಿಸಿದ ವಾಚ್ ಟವರ್

ದುರಸ್ತಿಗೊಂಡು ಎರಡೇ ದಿನಕ್ಕೆ ಹಳೆ ಚಾಳಿಯನ್ನು ಮುಂದುವರಿಸಿದ ವಾಚ್ ಟವರ್

ಬೆಂಗಳೂರಿನಲ್ಲಿ ತಲೆ ಎತ್ತಲಿದೆ ಗಲ್ಫ್ ಇಸ್ಲಾಮಿಕ್ ಹೂಡಿಕೆಯ ಕಚೇರಿ

ಬೆಂಗಳೂರಿನಲ್ಲಿ ತಲೆ ಎತ್ತಲಿದೆ ಗಲ್ಫ್ ಇಸ್ಲಾಮಿಕ್ ಹೂಡಿಕೆಯ ಕಚೇರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ತೆರೆದ ಹೊಂಡದಲ್ಲಿ ಬಿದ್ದು ಸಾಯುತ್ತಿವೆ ಪ್ರಾಣಿಗಳು : ಕಣ್ಣು ಮುಚ್ಚಿ ಕುಳಿತ ನಗರ ಸಭೆ

udayavani youtube

ದುರಸ್ತಿಗೊಂಡು ಎರಡೇ ದಿನಕ್ಕೆ ಹಳೆ ಚಾಳಿಯನ್ನು ಮುಂದುವರಿಸಿದ ವಾಚ್ ಟವರ್

udayavani youtube

ಕೊನೆಗೂ ರಾಜ್ಯದಲ್ಲಿ 1 ರಿಂದ 5ನೇ ತರಗತಿ ಶಾಲೆ ಆರಂಭಕ್ಕೆ ಸರಕಾರದ ಗ್ರೀನ್ ಸಿಗ್ನಲ್

udayavani youtube

ಮಹಿಳೆಯರಿಗೆ ಉದ್ಯೋಗ ಕಲ್ಪಿಸಿದ ಯಶಸ್ವೀ ಮಹಿಳಾ ಉದ್ಯಮಿ

udayavani youtube

ಹಳೆ ದ್ವೇಷ : ICU ವಾರ್ಡ್ ನಲ್ಲೆ ನಡೆಯಿತು ಎರಡು ತಂಡಗಳ ಮಾರಾಮಾರಿ

ಹೊಸ ಸೇರ್ಪಡೆ

ಸಿಎಂ ಕಚೇರಿ ನೌಕರನ ಭ್ರಷ್ಟಾಚಾರ ಬಯಲಾದರೂ ಸಿಎಂ ಮೌನ ಯಾಕೆ?

ಸಿಎಂ ಕಚೇರಿ ನೌಕರನ ಭ್ರಷ್ಟಾಚಾರ ಬಯಲಾದರೂ ಸಿಎಂ ಮೌನ ಯಾಕೆ?

4ಜಿ ಡೌನ್ ಲೋಡ್ ಸ್ಪೀಡ್ ಜಿಯೋ ಮುಂದೆ

4ಜಿ ಡೌನ್ ಲೋಡ್ ಸ್ಪೀಡ್ ಜಿಯೋ ಮುಂದೆ

ಅಮೆರಿಕದ ಮೊದಲ ಕಪ್ಪುವರ್ಣೀಯ ವಿದೇಶಾಂಗ ಸಚಿವ ಪೊವೆಲ್‌ ನಿಧನ

ಅಮೆರಿಕದ ಮೊದಲ ಕಪ್ಪುವರ್ಣೀಯ ವಿದೇಶಾಂಗ ಸಚಿವ ಪೊವೆಲ್‌ ನಿಧನ

ದಾಂಡೇಲಿ ನಗರ ಸಭೆಯಲ್ಲಿ ಮಾಹಿತಿ ಹಕ್ಕು ಅಧಿನಿಯಮ ಉಲ್ಲಂಘನೆ ಅಕ್ರಂ ಖಾನ್ ಆರೋಪ

ದಾಂಡೇಲಿ ನಗರ ಸಭೆಯಲ್ಲಿ ಮಾಹಿತಿ ಹಕ್ಕು ಅಧಿನಿಯಮ ಉಲ್ಲಂಘನೆ ಅಕ್ರಂ ಖಾನ್ ಆರೋಪ

ನ.8ರಿಂದ ದತ್ತಮಾಲಾ ಅಭಿಯಾನ; ಗಂಗಾಧರ ಕುಲಕರ್ಣಿ

ನ.8ರಿಂದ ದತ್ತಮಾಲಾ ಅಭಿಯಾನ; ಗಂಗಾಧರ ಕುಲಕರ್ಣಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.