ಗೆಜ್ಜೆ ಕಟ್ಟಿ ಹೆಜ್ಜೆ ಹಾಕಿದ ಶಿಕ್ಷಕರು

Team Udayavani, Sep 27, 2019, 5:00 AM IST

ಶಿಕ್ಷಕರು ಶಿಕ್ಷಣದೊಂದಿಗೆ ಕಲೆಯ ರುಚಿಯನ್ನು ಉಣಬಡಿಸಬಲ್ಲರು ಎಂಬುದಕ್ಕೆ ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ಗೆಜ್ಜೆ ಕಟ್ಟಿ, ವೇಷ ಹಾಕಿದ ಶಿಕ್ಷಕರ ಗಡಣವೇ ಸಾಕ್ಷಿಯಾಯಿತು. ಉಪ್ಪುಂದದಲ್ಲಿ ಆಯೋಜಿಸಲಾದ ಶಿಕ್ಷಕರ ದಿನಾಚರಣೆಯ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಶಿಕ್ಷಕರಿಂದ ಯಕ್ಷಗಾನ ಪ್ರದರ್ಶನಗೊಂಡಿತು.

ಶ್ರೀರಾಮನ ಅಶ್ವಮೇಧದ ಯಜ್ಞಾಶ್ವ ಶತ್ರುಘ್ನ-ಪುಷ್ಕಳರ ಬೆಂಗಾವಲಿನಲ್ಲಿ ಜ್ಯೋತಿರ್ಮೇದಾಪುರವನ್ನು ಪ್ರವೇಶಿಸಿದಾಗ ಬಂಧನಕ್ಕೊಳಗಾಗುತ್ತದೆ. ಮುಂದೆ ನಿರ್ಣಾಯಕ ಹಂತದಲ್ಲಿ ಶಿವ ಮತ್ತು ರಾಮರ ಸಮಾಗಮದೊಂದಿಗೆ ಹರಿಹರರಲ್ಲಿ ಭೇದವಿಲ್ಲ ಎಂಬ ತತ್ವ ಸಾರುವುದರೊಂದಿಗೆ ವೀರಮಣಿ ಕಾಳಗ ಪ್ರಸಂಗ ಸುಖಾಂತ್ಯ ಕಾಣುತ್ತದೆ.

ಬೈಂದೂರು ವಲಯದ ಶಿಕ್ಷಕ ಸಮೂಹ ಉತ್ತಮ ರೀತಿಯಲ್ಲಿ ಹಲಸಿನ ಹಳ್ಳಿ ನರಸಿಂಹ ಶಾಸ್ತ್ರಿ ವಿರಚಿತ ವೀರಮಣಿ ಕಾಳಗ ಪ್ರಸಂಗವನ್ನು ವ್ಯವಸಾಯಿ ಕಲಾವಿದರಂತೆ ಪ್ರದರ್ಶಿಸಿ ಸೈ ಎನಿಸಿಕೊಂಡಿತು.

ನಿರ್ವಹಣೆ ಮತ್ತು ನಿರ್ದೇಶನದ ಹೊಣೆ ಹೊತ್ತವರು ಶಿಕ್ಷಕ ವಿಠಲ ಕಾಮತ್‌.ಶತ್ರುಘ್ನನಾಗಿ ವೇಣುಗೋಪಾಲ ಶೆಟ್ಟಿ ಪುಷ್ಕಳರ ಪ್ರವೇಶದೊಂದಿಗೆ ಪೀಠಿಕಾ ಪ್ರಕರಣ ಪ್ರಸಂಗಕ್ಕೆ ನೆಲೆಗಟ್ಟನ್ನು ಒದಗಿಸಿ ಕೊಟ್ಟಿತು. ಈರ್ವರೂ ಚುರುಕು ಹೆಜ್ಜೆಯ ನೃತ್ಯ ಭಾವಭಂಗಿಗಳಿಂದ ಮತ್ತು ಅರ್ಥಗಾರಿಕೆಯಿಂದ ಉತ್ತಮವಾಗಿ ಪಾತ್ರ ಪೋಷಣೆಗೈದರು.

ವೀರಮಣಿಯ ಮಕ್ಕಳಾದ ಶುಭಾಂಗ ಮತ್ತು ರುಕ್ಮಾಂಗ ನೃತ್ಯ ನೈಪುಣ್ಯವನ್ನು ವೃತ್ತಿಪರರಂತೆ ಪ್ರದರ್ಶಿಸಿದರು. ಒತ್ತಡದ ಕಾರ್ಯ ಬಾಹುಳ್ಯದ ನಡುವೆಯೂ ಅಲ್ಪ ಕಾಲದ ತರಬೇತಿಯಿಂದ ವೀರಮಣಿ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿದವರು ಕ್ಷೇತ್ರ ಸಮನ್ವಯ ಅಧಿಕಾರಿ ಅಬ್ದುಲ್‌ ರವೂಫ್. ಪಾತ್ರೋಚಿತ ನೃತ್ಯ, ಅರ್ಥದಿಂದ ಪಾತ್ರಕ್ಕೆ ನ್ಯಾಯ ಒದಗಿಸಿ ಪ್ರಾವೀಣ್ಯತೆಯನ್ನು ಮೆರೆದರು. ಹನುಮಂತ ಮತ್ತು ಈಶ್ವರ (ವಿಜಯಕುಮಾರ ಶೆಟ್ಟಿ )ನ ನಡುವಿನ ಅರ್ಥಗಾರಿಕೆ ಮೊನಚು – ನೃತ್ಯದ ಒನಪು ಪ್ರೇಕ್ಷಕರಲ್ಲಿ ಲವಲವಿಕೆ ಮೂಡಿಸಿ,ಪ್ರೋತ್ಸಾಹದ ಕರತಾಡನಕ್ಕೆ ಹಾದಿಮಾಡಿಕೊಟ್ಟಿತು. ಈ ಜೋಡಿಯ ಕಸುಬುಗಾರಿಕೆ ಶ್ಲಾಘನೀಯ.

ವೀರಭದ್ರ (ಶೇಖರ ಗಾಣಿಗ) ವಿಶೇಷ ಪ್ರವೇಶ ಮತ್ತು ನಡೆಯಿಂದ ಗಮನ ಸೆಳೆದರು. ಚಾರಕ (ಗಣೇಶ) ವಾಕ್‌ಚಾತುರ್ಯ ಮತ್ತು ನೃತ್ಯದಿಂದ – ನಗೆಯ ಅಲೆ ಎಬ್ಬಿಸಿದರು. ದಮನ (ಮಂಜುನಾಥ) ಪೋಷಕ ಪಾತ್ರವಾಗಿ ಕಾಳಗದಲ್ಲಿ ಕಾಣಿಸಿಕೊಂಡರು. ಹನುಮನ ಭಜನೆಗೆ ಪ್ರತ್ಯಕ್ಷನಾಗುವ ಶ್ರೀ ರಾಮ (ಮಹಾದೇವ ಮಂಜ) ಭಕ್ತ ವಾತ್ಸಲ್ಯವನ್ನು ನೃತ್ಯಾಭಿನಯದಲ್ಲಿ ಅಭಿವ್ಯಕ್ತಿಸಿ ಸಂಕ್ಷಿಪ್ತ ಮಾತುಗಾರಿಕೆಯಲ್ಲೇ ಪಾತ್ರ ಪೋಷಣೆ ಮಾಡಿದರು.

ಹಿಮ್ಮೇಳದಲ್ಲಿ ವೃತ್ತಿಪರ ಕಲಾವಿದರಾದ ಪರಮೇಶ್ವರ ನಾಯ್ಕ (ಭಾಗವತರು) ಶಶಾಂಕ ಆಚಾರ್ಯ (ಮದ್ದಳೆ), ಕೃಷ್ಣಾನಂದ ಶೆಣೈ ಕಲ್ಮರ್ಗಿ (ಚಂಡೆ) ಕಲಾವಿದರ ಮನೋರಥಕ್ಕೆ ಅನುಸಾರವಾಗಿ ಸಹಕರಿಸಿದರು.

ಮಂಜುನಾಥ ಶಿರೂರು

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಜಯತಿ ಎಂದರೆ "ಸರ್ವದಾ ಜಯಶೀಲವಾಗುತ್ತ ಇರುವ'ಎಂಬರ್ಥ ಬಿಂಬಿಸುವ ಇದು ಈ ಮಣ್ಣಿನ ನಾಟ್ಯಪ್ರಕಾರಗಳ "ಜಯತಿ'ಯಾಗಿ ನಾಟ್ಯ ಜಯಂತೀಯ ಸಂಭ್ರಮ ಆಚರಣೆಯಾಯಿತು . ಭರತಮುನಿ...

  • ಇತ್ತೀಚೆಗೆ ಬೆಂಗಳೂರಿನಲ್ಲಿ ಯಕ್ಷಸಿಂಚನ ತಂಡದವರಿಂದ ಉಪನ್ಯಾಸಕ ಶಿವಕುಮಾರ ಬಿ.ಎ. ಅಳಗೋಡು ರಚಿಸಿದ ದೇವಸೇನಾ ಪರಿಣಯ(ಸ್ಕಂದ ವಿಜಯ) ಪ್ರಸಂಗದ ಪ್ರಥಮ ರಂಗಪ್ರದರ್ಶನ...

  • ಸಮಾಜ ಮಂದಿರ ಸಭಾ ಮೂಡಬಿದಿರೆ ಇದರ 74ನೇ ದಸರಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವದ ಅಂಗವಾಗಿ ಜರುಗಿದ ಪಾರ್ತಿಸುಬ್ಬ ವಿರಚಿತ ವಾಲಿ ಮೋಕ್ಷ ಆಖ್ಯಾನವು ಉತ್ತಮ...

  • ಕೆಲವೊಮ್ಮೆ ಅನ್ನಿಸುವುದುಂಟು, ಗತಿಸಿದ ಬಳಿಕವೂ ಲೋಕ ಅಂಥವರ ಕುರಿತು ಏನೆನ್ನುತ್ತದೆ ಎಂದು ಅರಿತುಕೊಳ್ಳುವ ಸಾಧ್ಯತೆ ಇರುತ್ತಿದ್ದರೆ ಹೇಗೆ ಎಂದು. ಹಾಗೆ ಅರಿತ...

  • ಇಬ್ಬರು ಪದವಿ ಪೂರ್ವ ವಿದ್ಯಾಲಯದ ಅಧ್ಯಾಪಕರು. ಒಬ್ಬರು ಪ್ರೌಢಶಾಲೆಯ ಶಿಕ್ಷಕರು, ಓರ್ವ ನಿವೃತ್ತ ಪ್ರಾಧ್ಯಾಪಕರು. ಇವರದೇ ಮುಮ್ಮೇಳದಲ್ಲಿ ನಡೆದ ಮಧುಕೈಟಭ ವಧೆ...

ಹೊಸ ಸೇರ್ಪಡೆ

  • ಮಲೆನಾಡಿನ ಭೂರಮೆಯ ಸೌಂದರ್ಯವೇ ಬೇರೆ ತೆರನಾದುದು. ಭೂಮಿ ಹುಣ್ಣಿಮೆ ಬರುವಾಗ ಮಲೆನಾಡಿನ ಅಡಕೆ ತೋಟಗಳಲ್ಲಿ ಫ‌ಸಲಿನ ಸಮೃದ್ಧಿ. ಬೆಳೆದು ನಿಂತ ಹಸಿರು ಬಾಳೆಗೊನೆಗಳಿಂದ,...

  • ಧಾನ್ಯಗಳನ್ನು ಸಮರ್ಪಕವಾಗಿ ದಾಸ್ತಾನು ಮಾಡುವುದು ಅತ್ಯಗತ್ಯ. ಇಲ್ಲದಿದ್ದರೆ ಕೀಟಬಾಧೆ ಅಧಿಕವಾಗಿ ಭಾರಿ ನಷ್ಟ ಉಂಟಾಗಬಹುದು. "ಮುಂಜಾಗ್ರತೆ ವಹಿಸಿದ್ದೆವು. ಆದರೂ...

  • ಕೃಷಿ ಮೇಲಿನ ಪ್ರೀತಿಯಿಂದ ಓದನ್ನು ಅರ್ಧಕ್ಕೇ ನಿಲ್ಲಿಸಿದ ಪರಮೇಶ್ವರನ್‌ ಇಂದು ಪೂರ್ಣ ಪ್ರಮಾಣದ ಕೃಷಿಕ. ಅಷ್ಟೇ ಅಲ್ಲ, ಅವರು ಸೀಡ್‌ ಬ್ಯಾಂಕ್‌ ಸ್ಥಾಪನೆ ಮಾಡಿರುವುದಲ್ಲದೆ,...

  • ಗುಡ್ಡಗಾಡು ಪ್ರದೇಶದಲ್ಲಿ ಕೃಷಿ ಮಾಡುವವರು ವಿರಳ. ಕಲ್ಲುಮಣ್ಣುಗಳಿಂದ ಕೂಡಿದ ಜಾಗದಲ್ಲಿ ಬೆಳೆ ತೆಗೆಯುತ್ತೇನೆಂದು ಹೊರಟಾಗ ಅನೇಕರು ಆಡಿಕೊಂಡಿದ್ದರು. ಆದರೆ...

  • ಬೆಂಗಳೂರು: ಹಿಂಗಾರು ಮಾರುತಗಳ ಭರ್ಜರಿ ಪ್ರವೇಶ ದಿಂದ ಕಳೆದೆರಡು ದಿನಗಳಿಂದ ರಾಜ್ಯಾದ್ಯಂತ ಮಳೆ ಅಬ್ಬರಿ ಸುತ್ತಿದೆ. ಇನ್ನೂ ಮೂರ್‍ನಾಲ್ಕು ದಿನಗಳು ಇದೇ ವಾತಾವರಣ...