Udayavni Special

ಚಿಲಿಪಿಲಿ ಶಿಬಿರದಲ್ಲಿ ಕಲಾ ಸಾಧನೆಯ ಗಟ್ಟಿ ದನಿ


Team Udayavani, May 25, 2018, 6:00 AM IST

c-5.jpg

ಬಂಟ್ವಾಳದ ಪುಟ್ಟ ಊರು ಮಂಚಿಯಲ್ಲಿ  ಎರಡನೆಯ ವರ್ಷದ ಮಕ್ಕಳ ಬೇಸಿಗೆ ಶಿಬಿರವನ್ನು ವಿಭಿನ್ನವಾಗಿ ಅಷ್ಟೇ ಫ‌ಲಪ್ರದವಾಗಿ ನಡೆಸಿದೆ ಮಂಚಿಯ ಚಿಲಿಪಿಲಿ ತಂಡ. ಇದರ ಚಟುವಟಿಕೆಗಳನ್ನು ನೋಡಿದರೆ ಚಿಲಿಪಿಲಿಯಲ್ಲ, ಇದು ಗಟ್ಟಿ ದನಿ ಎಂದು ಹೇಳಬಹುದು. ಮೇ 16ರಿಂದ ಐದು ದಿನಗಳ ಕಾಲ ನಡೆದ ಈ ಶಿಬಿರಕ್ಕಾಗಿ ಲಯನ್ಸ್‌ ಕ್ಲಬ್‌ ಉಚಿತವಾಗಿ ತನ್ನ ಸಭಾಭವನವನ್ನು ಒದಗಿಸಿತ್ತು. ಸ್ಥಳೀಯ ಮಕ್ಕಳಲ್ಲದೆ ದೂರದ ಊರುಗಳಿಂದಲೂ ಇಲ್ಲಿ ಕಲೆಯೊಂದನ್ನು ಕಲಿತುಕೊಳ್ಳಲು ಬಂದಿದ್ದ ಮಕ್ಕಳಿಗೆ ನಿರಾಶೆಯಾಗಿರಲಿಲ್ಲ. ಕಾರಣ ಮಕ್ಕಳೊಂದಿಗೆ ಮಕ್ಕಳಾಗಿ ತಮ್ಮಲ್ಲಿರುವ ಕಲಾ ಕೌಶಲವನ್ನು ಅವರ ಬೆರಳುಗಳಿಗೆ ವರ್ಗಾಯಿಸಲು ಕಾದು ನಿಂತ ಪರಿಣತ ತರಬೇತುದಾರರು. ಚಿತ್ರಕಲೆ ಶಿಕ್ಷಕ ಬಾಲಕೃಷ್ಣ ಶೆಟ್ಟಿ ಖಂಡಿಗ ಜಲವರ್ಣ, ಪೆನ್ಸಿಲ್‌ ಸ್ಕೆಚ್‌ ಮುಂತಾದ ಪದ್ಧತಿಗಳಲ್ಲಿ ಸರಳವಾಗಿ ಚಿತ್ರ ಬರೆಯುವ ಕ್ರಮವನ್ನು ವಿವರಿಸಿದ್ದು ಕೆಲವೇ ತಾಸುಗಳಲ್ಲಿ. ಮಕ್ಕಳು ಕಲಿತುಕೊಂಡು ಶಿಬಿರ ನಡೆಯುವ ಸಭಾಭವನದ ಗೋಡೆಯ ತುಂಬ ತಾವು ಬರೆದ ವೈವಿಧ್ಯಮಯ ಚಿತ್ರಗಳನ್ನು ತೂಗಾಡಿಸಿಸಿದರು. ಕಣ್ಣಿಗೆ ಹಬ್ಬವಾಗುವಂತಹ ಚಿತ್ರಗಳು ಮಕ್ಕಳ ಕಲ್ಪನಾ ಶಕ್ತಿಯಿಂದ ಸೃಷ್ಟಿಯಾಗಿ ನಿಂತವು.

ಪ್ರಭಾಕರ ಜೋಗಿ, ರೇಷ್ಮಾ ಕಜೆ ಇವರು ರಾಗಬದ್ಧವಾಗಿ  ಹಾಡುಗಳನ್ನು ಹೇಳಿಕೊಟ್ಟಿರುವುದು ಎಷ್ಟು ಮನದಟ್ಟಾಗಿತ್ತೆಂದರೆ ಆರು ವಯಸ್ಸಿನ ಹೆಣ್ಣುಮಗು ಸಂಸ್ಕೃತದ ಪ್ರಾರ್ಥನಾ ಗೀತೆಯನ್ನು ಸುಲಲಿತವಾಗಿ ಹಾಡಿ ತೋರಿಸಿದಳು. ವಸುಧಾ, ಹರ್ಷಿತಾ ಅವರು ಎರಡೇ ದಿನಗಳ ತರಬೇತಿ ನೀಡಿ ಹಲವು ಮಕ್ಕಳಿಂದ ಮಾಡಿಸಿದ ಸಮೂಹ ನೃತ್ಯಗಳು ಪ್ರಬುದ್ಧವಾಗಿದ್ದವು. ಒಂದೇ ತಂಡದ ಮಕ್ಕಳು ಬೇರೆ ಬೇರೆ ನೃತ್ಯಗಳನ್ನು ಅಳುಕಿಲ್ಲದೆ ಪ್ರದರ್ಶಿಸಿದರು. ಮೂಡಬಿದರೆಯಿಂದ ಬಂದಿದ್ದ ಅಕ್ಷಯ್‌ ಕಲಿಸಿದ್ದು ಹದ ಮಾಡಿದ ಜೇಡಿಮಣ್ಣಿನಿಂದ ವಿವಿಧ ಕಲಾಕೃತಿಗಳನ್ನು ಚಕಚಕನೆ ತಯಾರಿಸಬಲ್ಲ ಕೌಶಲವನ್ನು. ಇಲ್ಲಿ ಬಗೆಬಗೆಯ ಮಣ್ಣಿನ ವಿಗ್ರಹಗಳು, ಹಲವಾರು ಪರಿಕರಗಳನ್ನು ತಯಾರಿಸಿ ರಾಶಿ ಹಾಕಿದ ಮಕ್ಕಳಲ್ಲಿ ಕೆಲವರಾದರೂ ಈ ವರ್ಷ ಹಬ್ಬಗಳ ಸಾಲಿನಲ್ಲಿ ಗಣಪತಿಯನ್ನೋ ಶಾರದೆಯನ್ನೋ ತಯಾರಿಸಿ ಹಬ್ಬಕ್ಕೆ ಕಳೆ ನೀಡಿದರೆ ಅಚ್ಚರಿಯಿಲ್ಲ.

ಬಣ್ಣದ ಕಾಗದಗಳನ್ನು ಬಳಸಿ ನಾನಾ ಬಗೆಯ ಹೂ, ಮತ್ತಿತರ ವಸ್ತು ವಿಶೇಷಗಳನ್ನು ತಯಾರಿಸುವ ಕಲೆಯನ್ನೂ ಬೋಧಿಸಿದ್ದು ನಿಷ್ಣಾತ ಕೈಗಳು. ನಿವೃತ್ತ ಅಧ್ಯಾಪಕಿ ಶಾರದಾ ಎಸ್‌. ರಾವ್‌ ಮುಂಚೂಣಿಯಲ್ಲಿದ್ದರು. ಮುರಳಿಕೃಷ್ಣ, ಚೆನ್ನಕೇಶವ, ತಾರಾನಾಥ ಕೈರಂಗಳ, ಸುರೇಖಾ ಮೊದಲಾದವರು ಬೆರಳೆಣಿಕೆಯ ದಿನಗಳಲ್ಲಿ ಮಕ್ಕಳೊಳಗೆ ಹುದುಗಿದ್ದ ಕಲಾವಿದನನ್ನು ಹೊರ ತೆಗೆಯುವಲ್ಲಿ ಒಂದಿಲ್ಲೊಂದು ಕಲೆಯ ಗುಟ್ಟನ್ನು ಬಯಲಿಗಿಟ್ಟು ಗುರಿ ತಲುಪಿಸುವಲ್ಲಿ ಸಮರ್ಥರಾಗಿದ್ದರು. ಬೆಳಗ್ಗೆ ಒಂಭತ್ತರಿಂದ ಸಂಜೆ ನಾಲ್ಕೂವರೆಯ ತನಕ ನಡೆಯುತ್ತಿದ್ದ ಕಾರ್ಯಕ್ರಮವು ಯೋಗಾಭ್ಯಾಸದಿಂದಲೇ ಆರಂಭವಾಗುತ್ತಿದ್ದುದು ಯೋಗದಲ್ಲಿಯೂ ಮಕ್ಕಳಿಗೆ ಆಸಕ್ತಿ ಮೂಡಿಸುವಲ್ಲಿ ಯಶಸ್ಸು ಪಡೆಯಿತು ಅನಿಸಿತು.    

 ಪ. ರಾಮಕೃಷ್ಣ ಶಾಸ್ತ್ರಿ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

4 ಕೋಟಿ ಮೌಲ್ಯದ ಕೊಕೇನ್‌ ಜಪ್ತಿ

4 ಕೋಟಿ ಮೌಲ್ಯದ ಕೊಕೇನ್‌ ಜಪ್ತಿ

ನೊಯ್ಡಾದಲ್ಲಿ ದೇಶದ ಅತಿದೊಡ್ಡ ಫಿಲಂ ಸಿಟಿ ನಿರ್ಮಾಣ: ಯೋಗಿ

ನೊಯ್ಡಾದಲ್ಲಿ ದೇಶದ ಅತಿದೊಡ್ಡ ಫಿಲಂ ಸಿಟಿ ನಿರ್ಮಾಣ: ಯೋಗಿ

ಉಡುಪಿ: ಬಿರುಸಿನ ಮಳೆ; ಬನ್ನಂಜೆ ಪರಿಸರ ಸಂಪೂರ್ಣ ಜಲಾವೃತ

ಉಡುಪಿ: ಬಿರುಸಿನ ಮಳೆ; ಬನ್ನಂಜೆ ಪರಿಸರ ಸಂಪೂರ್ಣ ಜಲಾವೃತ

ಸೆ. 28ರಿಂದ ಶ್ರೀಕೃಷ್ಣ ಮಠ ಭಕ್ತರಿಗೆ ಮುಕ್ತ; ಮೊದಲ ಹಂತದಲ್ಲಿ ಅಪರಾಹ್ನ 2- 5 ಗಂಟೆ ವರೆಗೆ

ಸೆ. 28ರಿಂದ ಶ್ರೀಕೃಷ್ಣ ಮಠ ಭಕ್ತರಿಗೆ ಮುಕ್ತ; ಮೊದಲ ಹಂತದಲ್ಲಿ ಅಪರಾಹ್ನ 2- 5 ಗಂಟೆ ವರೆಗೆ

IPL ಕಲರವ : ಮೊದಲ ಪಂದ್ಯ ಗೆದ್ದು ಬೀಗಿದ ಚೆನ್ನೈ ಸೂಪರ್ ಕಿಂಗ್ಸ್

IPL ಕಲರವ : ಮೊದಲ ಪಂದ್ಯ ಗೆದ್ದು ಬೀಗಿದ ಚೆನ್ನೈ ಸೂಪರ್ ಕಿಂಗ್ಸ್

ಅಜಿಂಕ್ಯ ರಹಾನೆಗೆ ಆಡುವ ಬಳಗದಲ್ಲಿ ಸ್ಥಾನ ಲಭಿಸೀತೇ?

ಅಜಿಂಕ್ಯ ರಹಾನೆಗೆ ಆಡುವ ಬಳಗದಲ್ಲಿ ಸ್ಥಾನ ಲಭಿಸೀತೇ?

ಮಂಗಳೂರಿನಲ್ಲಿ ಭಾರೀ ಮಳೆ; ಕೆಲವೆಡೆ ಕೃತಕ ನೆರೆ ಸೃಷ್ಟಿ

ಮಂಗಳೂರಿನಲ್ಲಿ ಭಾರೀ ಮಳೆ; ಕೆಲವೆಡೆ ಕೃತಕ ನೆರೆ ಸೃಷ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

Dr.Harsha Kamath : ಕಾರ್ಕಳದ ಈ Doctor ಕಲಾ ಕುಸುರಿಯ Master | Udayavani

udayavani youtube

ಮುಂಬೈಯಿಂದ ಡ್ರಗ್ಸ್‌ ತಂದು ಮಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದರು: ನಗರ ಪೊಲೀಸ್ ಆಯುಕ್ತ

udayavani youtube

ಕುತಂತ್ರಿ ಚೀನಾವನ್ನು ಕಟ್ಟಿ ಹಾಕುವುದು ಹೇಗೆ?

udayavani youtube

ಭಾಗಶಃ ಕುಸಿದ ಉಡುಪಿಯ ಹಳೆಯ ಕಟ್ಟಡ: ಓರ್ವ ಮಹಿಳೆಗೆ ಗಾಯ | Udayavani

udayavani youtube

ಹಂಪನಕಟ್ಟೆಯಲ್ಲಿ ಪತ್ತೆಯಾದ ಶತಮಾನದ ಹಿಂದಿನ ಬಾವಿ!ಹೊಸ ಸೇರ್ಪಡೆ

ಮಂಗಲಪಾದೆ ಜಿನಬಿಂಬಕ್ಕೆ ಅಪಚಾರ; ಕೇಸು

ಮಂಗಲಪಾದೆ ಜಿನಬಿಂಬಕ್ಕೆ ಅಪಚಾರ; ಕೇಸು

ಮಟ್ಕಾ: ಜಿಲ್ಲೆಯಾದ್ಯಂತ 7 ಮಂದಿ ಮೇಲೆ ಕೇಸು

ಮಟ್ಕಾ: ಜಿಲ್ಲೆಯಾದ್ಯಂತ 7 ಮಂದಿ ಮೇಲೆ ಕೇಸು

4 ಕೋಟಿ ಮೌಲ್ಯದ ಕೊಕೇನ್‌ ಜಪ್ತಿ

4 ಕೋಟಿ ಮೌಲ್ಯದ ಕೊಕೇನ್‌ ಜಪ್ತಿ

ನೊಯ್ಡಾದಲ್ಲಿ ದೇಶದ ಅತಿದೊಡ್ಡ ಫಿಲಂ ಸಿಟಿ ನಿರ್ಮಾಣ: ಯೋಗಿ

ನೊಯ್ಡಾದಲ್ಲಿ ದೇಶದ ಅತಿದೊಡ್ಡ ಫಿಲಂ ಸಿಟಿ ನಿರ್ಮಾಣ: ಯೋಗಿ

ಉಡುಪಿ: ಬಿರುಸಿನ ಮಳೆ; ಬನ್ನಂಜೆ ಪರಿಸರ ಸಂಪೂರ್ಣ ಜಲಾವೃತ

ಉಡುಪಿ: ಬಿರುಸಿನ ಮಳೆ; ಬನ್ನಂಜೆ ಪರಿಸರ ಸಂಪೂರ್ಣ ಜಲಾವೃತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.