ಪೌರಾಣಿಕ-ಸಮಕಾಲೀನ ಮೌಲ್ಯಗಳ ಸಮೀಕರಣ ಮಾಯಾವಿಹಾರಿ


Team Udayavani, Dec 28, 2018, 6:00 AM IST

42.jpg

ಭೀಮಸೇನನ ಮಗ ಘಟೋತ್ಕಚನ ಸುತ್ತ ಹೆಣೆದ ಪ್ರಸಂಗದಲ್ಲಿ ಮೂಲ ಕಥೆಗೆ ಸಾಮಾಜಿಕ ಚಿಂತನೆಯ ಕಲ್ಪನಾಶಕ್ತಿಯೂ ಸೇರಿದೆ. ಕಾವ್ಯ , ಪುರಾಣಗಳಿಗೆ ಕಾಲ್ಪನಿಕತೆ ಅಳವಡಿಸುವಾಗ ಮೂಲಕಥೆಯ ಚೌಕಟ್ಟಿಗೆ ಲೋಪವಾಗಕೂಡದು ಎಂದು ಗಮನದಲ್ಲಿಟ್ಟ ಪ್ರಸಂಗ.

ಪೌರಾಣಿಕ ಮೌಲ್ಯಗಳನ್ನು ಸಮಕಾಲೀನ ಮೌಲ್ಯಗಳೊಂದಿಗೆ ಸಮೀಕರಿಸಿ ಪುರಾಣ ಕಥೆಗಳಿಗೆ ಹೊಸ ಸ್ಪರ್ಶ ನೀಡಬಹುದು ಎಂಬುದಕ್ಕೆ ಹನುಮಗಿರಿ ಮೇಳದವರ ಮಾಯಾವಿಹಾರಿ ಪ್ರಸಂಗ ಉತ್ತಮ ಉದಾಹರಣೆ. ಪ್ರಸಿದ್ಧ ಪ್ರಸಂಗಕರ್ತ , ಕಲಾವಿದರಾದ ತಾರಾನಾಥ ವರ್ಕಾಡಿ ರಚಿಸಿದ “ಮಾಯಾವಿಹಾರಿ’ ಉತ್ತಮ ಪ್ರಯೋಗವೆನ್ನಬಹುದು. ಭೀಮಸೇನನ ಮಗ ಘಟೋತ್ಕಚನ ಸುತ್ತ ಹೆಣೆದ ಪ್ರಸಂಗದಲ್ಲಿ ಮೂಲ ಕಥೆಗೆ ಸಾಮಾಜಿಕ ಚಿಂತನೆಯ ಕಲ್ಪನಾಶಕ್ತಿಯೂ ಸೇರಿದೆ .ಕಾವ್ಯ , ಪುರಾಣಗಳಿಗೆ ಕಾಲ್ಪನಿಕತೆ ಅಳವಡಿಸುವಾಗ ಮೂಲಕಥೆಯ ಚೌಕಟ್ಟಿಗೆ ಲೋಪವಾಗಕೂಡದು ಎಂದು ಗಮನದಲ್ಲಿಟ್ಟ ಪ್ರಸಂಗ. 

ಏಕಚಕ್ರದಲ್ಲಿ ಏಕಚಕ್ರ ಎಂಬ ರಾಕ್ಷಸನು ದೇವತೆಗಳಿಂದ ಸೋತು ಮುನಿಯಾಗಿ ಬದಲಾಗುತ್ತಾನೆ . ಮುನಿಯಾದರೂ ಹಿಡಿಂಬ , ಬಕ , ಜಟಾಸುರ , ಕಿಮ್ಮಿರ ,ಅಲಾಯುಧ , ಅಲಂಬುಷ ಮೊದಲಾದ ರಾಕ್ಷಸರನ್ನು ಒಗ್ಗೂಡಿಸಿ ರಾಕ್ಷಸ ಸಾಮ್ರಾಜ್ಯ ನಿರ್ಮಾಣದ ಕನಸು ಕಾಣುತ್ತಾನೆ . ಬಕಾಸುರನು ಏಕಚಕ್ರದ ರಾಜ ಶುಕಧ್ವಜನನ್ನು ಸೋಲಿಸಿ ತನಗೆ ದಿನಂಪ್ರತಿ ಆಹಾರ ಒದಗಿಸುವ ಒಪ್ಪಂದ ಮಾಡುತ್ತಾನೆ . ಅರಗಿನ ಮನೆಯಿಂದ ತಪ್ಪಿಸಿಕೊಂಡ ಪಾಂಡವರು ಕಾನನದಲ್ಲಿ ನೆಲೆಸುತ್ತಾರೆ . ರಾತ್ರಿ ಹಿಡಿಂಬಾಸುರನ ಸಾಕು ತಂಗಿಯಾದ ಹಿಡಿಂಬೆಯು ಭೀಮನನ್ನು ಕಂಡು ಪ್ರೇಮಮೋಹಿತಳಾಗಿ ವಿವಾಹವಾಗುತ್ತಾಳೆ . ಭೀಮ ಹಿಡಿಂಬೆಯರಿಗೆ ಘಟೋತ್ಕಚನು ಜನಿಸುತ್ತಾನೆ . ಮಾತೃಸಂಬಂಧದ ಹಿನ್ನೆಲೆಯಲ್ಲಿ ಒಂದಷ್ಟು ರಾಕ್ಷಸೀ ಸ್ವಭಾವ ಹೊಂದಿ ಬ್ರಹ್ಮದ್ವೇಷಿ , ಯಜ್ಞದ್ವೇಷಿಯಾಗಿ ಬೆಳೆದರೂ ಸಂಸ್ಕಾರವಂತನಾಗುತ್ತಾನೆ. ಘಟೋತ್ಕಚನನ್ನು ಹಿಡಿಂಬೆಯ ಬಳಿ ಬಿಟ್ಟು ಪಾಂಡವರು ಏಕಚಕ್ರನಗರದಲ್ಲಿ ಕುಂಬಾರನ ಆಶ್ರಯದಲ್ಲಿರುತ್ತಾರೆ .ಬಕಾಸುರನಿಗೆ ಔತಣ ನೀಡುವ ಸರದಿ ಕುಂಬಾರನ ಪಾಲಿಗೆ ಬಂದಾಗ ಭೀಮನಿಂದ ಬಕಾಸುರನ ಅಂತ್ಯವಾಗುತ್ತದೆ .ಘಟೋತ್ಕಚನು ಕಾಮಕಟಂಕಟೆಯನ್ನು ಸ್ಪರ್ಧೆಯಲ್ಲಿ ಸೋಲಿಸಿ ವಿವಾಹವಾಗುತ್ತಾನೆ . ಕುರುಕ್ಷೇತ್ರ ಯುದ್ಧದಲ್ಲಿ ಘಟೋತ್ಕಚನು ತನ್ನ ತಂದೆಯ ಪಕ್ಷದಲ್ಲಿ ಹೋರಾಡಿ ಅಲಾಯುಧ , ಅಲಂಬಲ , ಅಲಂಬುಷರಂಥಹ ರಾಕ್ಷಸರನ್ನು ಕೊಂದುದಲ್ಲದೆ , ಕೌರವ ಸೇನೆಯ ಪಾಲಿಗೆ ಮಾರಣಾಂತಕನಾಗಿ ಪರಿಣಮಿಸಿದಾಗ , ಕರ್ಣನು ಅರ್ಜುನನ ವಧೆಗೆಂದೇ ಮೀಸಲಾದ ಅಸ್ತ್ರವನ್ನು ಪ್ರಯೋಗಿಸಿ ಅವನನ್ನು ಕೊಲ್ಲುತ್ತಾನೆ. 

ಛಂದೋಬದ್ಧವಾದ ರಚನೆಯ ಪದ್ಯಗಳಲ್ಲಿ ಉತ್ತಮವಾದ ಸಾಹಿತ್ಯವಿದೆ.ರಾಕ್ಷಸ ಮಾತೆಯಾದ ದಿತಿದೇವಿಯ ಮಗ ಏಕಚಕ್ರ ಎಂದು ಪುರಾಣದಲ್ಲಿರುವ ಅಂಶವನ್ನು ಕಲ್ಪನೆಯಿಂದ ಸೃಷ್ಟಿಸಿದ್ದಾರೆ. ಬಕ , ಹಿಡಿಂಬರನ್ನು ಏಕಚಕ್ರನು ಸಲಹುವುದು , ಹಿಡಿಂಬೆಯನ್ನು ವಿವಾಹವಾಗಕೂಡದೆಂದು ಭೀಮನಲ್ಲಿ ಏಕಚಕ್ರ ವಾದಿಸುವುದು , ಕಾಮಕಟಂಕಟೆಯು ನಾಟ್ಯ ಪ್ರವೀಣೆ ಎನಿಸಿರುವುದು , ಗಂಗಾಶುದ್ಧೀಕರಣದ ಧ್ಯೇಯವನ್ನು ಅಂಗಾರಪರ್ಣ – ಅರ್ಜುನನ ಯುದ್ಧದಲ್ಲಿ ಬಳಕೆ – ಇತ್ಯಾದಿಗಳನ್ನೆಲ್ಲಾ ಕಲ್ಪನೆಯ ಮೂಲಕ ಅಳವಡಿಸಲಾಗಿದೆ. ಹನುಮಗಿರಿ ಮೇಳದ ಕಲಾವಿದರ ಸಾಂ ಕ ಪ್ರಸ್ತುತಿ ಪ್ರಸಂಗದ ಯಶಸ್ಸಿಗೆ ಕಾರಣವಾಗಿದೆ .ಕಾಲ್ಪನಿಕ ಪಾತ್ರ ಏಕಚಕ್ರನಾಗಿ ರಂಗಾಭಟ್ಟರು ವೈಚಾರಿಕತೆಯ ಮೂಲಕ ಪಾತ್ರೋಚಿತ ಚಿತ್ರಣ ನೀಡಿದರು . ಪೂರ್ವಾರ್ಧದ ಭೀಮಸೇನನಾಗಿ ಪೆರ್ಮುದೆಯವರು ತಾನಾಗಿ ಒಲಿದ ನಾರಿಯನ್ನು ತಿರಸ್ಕರಿಸುವುದು ಧರ್ಮಸಮ್ಮತವಲ್ಲ ಎಂದು ನಿರೂಪಿಸಿದರು . ಹಿಡಿಂಬೆಯಾಗಿ ಹಿಲಿಯಾಣರು ಭೀಮನೊಂದಿಗಿನ ಸಂಭಾಷಣೆಯಲ್ಲಿ ಪ್ರಭುತ್ವ ಮೆರೆದರು . ಪೂರ್ವಾರ್ಧದ ಘಟೋತ್ಕಚನಾಗಿ ದಿವಾಕರ ಸಂಪಾಜೆಯವರು ಉತ್ತಮ ನಾಟ್ಯ ಹಾಗೂ ಸಂಭಾಷಣೆಯಿಂದ ಮಿಂಚಿದರು . ಕಾಮಕಟಂಕಟೆಯಾಗಿ ರಕ್ಷಿತ್‌ ಪಡ್ರೆಯವರ ನಿರ್ವಹಣೆ ಮನ ಗೆದ್ದಿತು . ಬಕಾಸುರನಾಗಿ ಶೆಟ್ಟಿಗಾರರವರು ಕ್ರೌರ್ಯ ಸಾಧಿಸುವಲ್ಲಿ ಯಶಸ್ವಿಯಾದರು . ಬಕನ ಅನುಚರ ಬಂಡಿಕಾರ ಪತ್ರಾಂಗನಾಗಿ ಹಾಸ್ಯಗಾರ ಸೀತಾರಾಮ ಕಟೀಲು ಒಂದೂ ಪದ್ಯ ಇಲ್ಲದ ಪಾತ್ರವಾದರೂ ಬಣ್ಣಗಾರಿಕೆಯಲ್ಲಿ ವಿಶಿಷ್ಟ ಚಿತ್ರಣದ ಮೂಲಕ ಶುದ್ಧ ಹಾಸ್ಯ ನೀಡಿದರು . ಬಂಟ್ವಾಳರು ಪಾರಂಪರಿಕ ಹಾಸ್ಯದಿಂದ ರಂಜಿಸಿದರು. ಶುಕಧ್ವಜನಾಗಿ ಶೀನಪ್ಪ ರೈ , ಉತ್ತರಾರ್ಧದ ಘಟೋತ್ಕಚನಾಗಿ ಜಗದಾಭಿರಾಮ , ಭೀಮನಾಗಿ ಶಬರೀಶ , ಹಿಡಿಂಬಾಸುರನಾಗಿ ಜಯಾನಂದ , ಕೌರವನಾಗಿ ಜೋಗಿ , ಕರ್ಣನಾಗಿ ಸದಾಶಿವ ಕುಲಾಲ್‌ , ಶ್ರೀಕೃಷ್ಣನಾಗಿ ಪೆರ್ಲ , ಕುಂಭೀನಸಿಯಾಗಿ ಪ್ರಕಾಶ್‌ ನಾಯಕ್‌ ಪಾತ್ರೋಚಿತ ಚಿತ್ರಣ ನೀಡಿದರು. ಅಲಾಯುಧನಾಗಿ ಸುಬ್ರಾಯ ಹೊಳ್ಳರು ಮಿಂಚಿದರೂ , ಅವಕಾಶ ಸಾಲದಾಯಿತು . ಉಳಿದ ಕಲಾವಿದರ ನಿರ್ವಹಣೆ ಯಶಸ್ಸಿಗೆ ಕಾರಣವಾಯಿತು . ಭಾಗವತರಾದ ಪದ್ಯಾಣ , ಕನ್ನಡಿಕಟ್ಟೆಯವರ ಸುಶ್ರಾವ್ಯ ಹಾಡುಗಾರಿಕೆ ಮತ್ತಷ್ಟು ಕೇಳಬೇಕೆನಿಸುವಷ್ಟು ಇಂಪಾಗಿತ್ತು . ಶಂಕರನಾರಾಯಣ ಪದ್ಯಾಣ , ಪದ್ಯಾಣ ಜಯರಾಮ ಭಟ್‌ , ಚೈತನ್ಯ , ವಿಟ್ಲರವರ ಹಿಮ್ಮೇಳವೂ ಪ್ರಸಂಗದ ಯಶಸ್ಸಿಗೆ ಕಾರಣವಾಯಿತು .

ಎಂ.ಶಾಂತರಾಮ ಕುಡ್ವ 

ಟಾಪ್ ನ್ಯೂಸ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

6-jp-hegde

Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

5-karkala

Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್‌; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ

Fraud: ರೈಸ್‌ ಪುಲ್ಲಿಂಗ್‌ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ

Fraud: ರೈಸ್‌ ಪುಲ್ಲಿಂಗ್‌ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ

Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ

Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.