ಶಾಂತಿದೂತನ ನೆನಪಲ್ಲಿ ಹಾಡಿನ ಸಂಜೆ 

Team Udayavani, Nov 9, 2018, 6:00 AM IST

11.jpg

ಶಾಂತಿ, ಸತ್ಯ ಮತ್ತು ಅಹಿಂಸೆಯ ಮಹತ್ವ ಸಾರಿದ ಗಾಂಧೀಜಿಯ ನೂರೈವತ್ತನೆ ಜಯಂತಿಯಂದು ಮಂದಾರ(ರಿ.), ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆ, ಬೈಕಾಡಿ, ಬ್ರಹ್ಮಾವರ ಇವರು ಸಾಲಿಕೇರಿಯ ಅಂಬೇಡ್ಕರ್‌ ಭವನದಲ್ಲಿ ಹಾಡಿನ ಸಂಜೆ ಎನ್ನುವ ಹೊಸತನದ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಆರಂಭದಲ್ಲಿ ಸುಮಾ ಆಚಾರ್‌, ಬೀಜಾಡಿ ಅವರು “ಹಾಡು ಕೋಗಿಲೆ ಗಾನ ಸುಮಧುರ….’ (ರಚನೆ: ಕೆ. ಸೀತಾರಾಮ ಭಟ್ಟ) ಮತ್ತು ರಕ್ಷಾ ಭಟ್‌, ಬನ್ನಾಡಿಯವರು “ನನ್ನ ಹರಣ ನಿನಗೆ ಶರಣ….’ (ರಚನೆ: ಬಿ. ಆರ್‌. ಲಕ್ಷಣ ರಾವ್‌) ಹಾಡುಗಳನ್ನು ಸೊಗಸಾಗಿ ಪ್ರಸ್ತುತಪಡಿಸಿದರು. 

ಮುಂದೆ ರಾಘವೇಂದ್ರ ಬಿ. ಶೆಟ್ಟಿಗಾರ್‌ರವರು ಜಿ. ಎಸ್‌. ಶಿವರುದ್ರಪ್ಪ ಅವರ ರಚನೆಯಾದ “ಕಾಣದ ಕಡಲಿಗೇ….’ ಹಾಡನ್ನು ಹಾಡಿದರೆ, ರಂಗಕರ್ಮಿ ವಿನಾಯಕ ಎಸ್‌. ಎಂ. ಅವರು ಹಯವದನ ನಾಟಕದ “ಬಂದಾನೋ ಬಂದಾ ಸವಾರ….'(ರಚನೆ: ಗಿರೀಶ್‌ ಕಾರ್ನಾಡ್‌) ಎನ್ನುವ ಸೊಗಸಾದ ರಂಗಗೀತೆಯನ್ನು ಹಾಡಿ ಮನ ರಂಜಿಸಿದರು. ನಂತರ ಸುಮಾ ಅವರು “ಲೋಕದ ಕಣ್ಣಿಗೆ ರಾಧೆಯು ಕೂಡಾ…’ (ರಚನೆ: ಎಚ್‌. ಎಸ್‌. ವೆಂಕಟೇಶಮೂರ್ತಿ) ಹಾಡನ್ನು ಹಾಗೂ ರûಾ ಅವರು ಕವಿ ಗೋಪಾಲಕೃಷ್ಣ ಆಡಿಗರ ” ಆಗು ನೀನು ಇಬ್ಬನಿ ನೆಲೆಸುವ ಹೂವು….’ ಹಾಡಿ ಮುದ ನೀಡಿದರು. ಹಾಗೆಯೇ ರಾಘವೇಂದ್ರ ಅವರು ಸುಬ್ರಾಯ ಚೊಕ್ಕಾಡಿಯವರ ” ಮುನಿಸು ತರವೇ….’ ಮತ್ತು ಕುವೆಂಪು ಅವರ ” ಓ ನನ್ನ ಚೇತನಾ….’ ಹಾಡುಗಳನ್ನು ಭಾವಪೂರ್ಣವಾಗಿ ಹಾಡಿದರೆ, ವಿನಾಯಕ ಅವರು ಮೈಸೂರು ರಾಜ್ಯದ ದೊರೆ ರಣಧೀರ ಕಂಠೀರವ ಇವರ ಸಾಹಸ ಮತ್ತು ಶೌರ್ಯವನ್ನು ಹೊಗಳುವ ” ಮೈಸೂರು ರಾಜ್ಯದ ದೊರೆಯೇ….’ ಮತ್ತು ಬಿ. ವಿ. ಕಾರಂತರು ಮೈಸೂರಿನಲ್ಲಿ ರಂಗಾಯಣ ಕಟ್ಟುವ ಆರಂಭದಲ್ಲಿ ರಚಿಸಿದ ” ಗೋವಿಂದ ಮುರ ಹರ ಗೋವಿಂದಾ…’ ಹಾಡನ್ನು ಹಾಡಿ ಪ್ರೇಕ್ಷಕರೂ ದನಿಗೂಡಿಸುವಂತೆ ಪ್ರೇರಣೆ ನೀಡಿದರು. ಕೊನೆಯಲ್ಲಿ ಸುಮಾ ಮತ್ತು ರûಾ ಜೊತೆಯಾಗಿ ನಮ್ಮ ಹಿರಿಯರು ನಮ್ಮ ಒಳಿತಿಗಾಗಿ ಮಾಡಿದಂತಹ ವ್ಯವಸ್ಥೆಗಳ ಕುರಿತಾದ ಒಂದು ಬಗೆಯ ಜನಪದ ಶೈಲಿಯ “ಶರಣಯ್ಯ ಶರಣು ಶರಣಯ್ಯ…’ ಹಾಡನ್ನು ಹಾಡಿದ್ದು, ವಿನಾಯಕ ಅವರು ಹಾಡಿದ ಕೆ.ವಿ. ತಿರುಮಲೇಶ್ವರರ ” ದಾರಿ ತಪ್ಪಿದನೊಬ್ಬ ಬ್ರಾಹ್ಮಣ…’ (ರಾಗ ಸಂಯೋಜನೆ: ಗುರುರಾಜ ಮಾರ್ಪಳ್ಳಿ) ಹಾಡು ಮಾರ್ಮಿಕವಾಗಿತ್ತು. ಅಂತಿಮವಾಗಿ ಭೂಮಿಕಾ (ರಿ.), ಹಾರಾಡಿ ರಂಗ ತಂಡದ ವಿಕ್ರಂ, ರೋಷನ್‌ ಮತ್ತು ರೋಹಿತ್‌ ಇವರುಗಳ ಅಲ್ಲಾವುದ್ದೀನನ ಮಾಯಾದೀಪ ನಾಟಕದ ” ಹುಯ್ಯಹೋ.. ಹುಯ್ಯಹೋ…’ ಹಾಡಿಗೆ ಎಲ್ಲರೂ ದನಿಗೂಡಿಸಿದರು. ತಬಲಾದಲ್ಲಿ ಪ್ರಶಾಂತ್‌ ಬಿರ್ತಿ ಮತ್ತು ಜಂಬೆಯಲ್ಲಿ ರೋಷನ್‌ ಬೈಕಾಡಿ ಸಹಕರಿಸಿದ್ದರು. ಪ್ರತಿ ಹಾಡಿನ ಕೊನೆಯಲ್ಲಿ ರಂಗಕರ್ಮಿ ರೋಹಿತ್‌ ಬೈಕಾಡಿಯವರು ಗಾಂಧೀಜಿಯವರ ವಿಚಾರಧಾರೆೆಗಳೊಂದಿಗೆ ಜೀವನದ ಕೆಲವು ಘಟನೆಗಳ ನಿರೂಪಣೆ ಮಾಡುತ್ತಿದ್ದುದು ಸಮಯೋಚಿತವಾಗಿತ್ತು. 

 ಕೆ. ದಿನಮಣಿ ಶಾಸ್ತ್ರಿ

ಟಾಪ್ ನ್ಯೂಸ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

11-

Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ  

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

10-fusion

UV Fusion: ಭಕ್ತಿಯ ಜಾತ್ರೆ ನೋಡುವುದೇ ಚೆಂದ

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.