ಕೊಳಲು ಮಾಂತ್ರಿಕ ಸೋದರರ ಉಚ್ಛ್ರಾಯ ಕಛೇರಿ

Team Udayavani, Oct 18, 2019, 4:11 AM IST

f-42

ಆರನೆಯ ರಂಜನಿ ಸಂಸ್ಮರಣ ವರ್ಷಾಚರಣೆಯ ಐದನೇ ದಿನದ ಪ್ರಧಾನ ಕಛೇರಿಯನ್ನು ಹೇಮಂತ-ಹೇರಂಭ ಸಹೋದರರು ನಡೆಸಿಕೊಟ್ಟರು. ಅವರಿಗೆ ವಯಲಿನ್‌ನಲ್ಲಿ ಮತ್ತೂರು ಶ್ರೀನಿಧಿ, ಮೃದಂಗದಲ್ಲಿ ನಿಕ್ಷಿತ್‌ ಟಿ. ಮತ್ತು ಘಟಂನಲ್ಲಿ ಶರತ್‌ ಕೌಶಿಕ್‌ ಸಹಕರಿಸಿದರು.

ಈ ಸಹೋದರರ ತುತ್ತುಕಾರಗಳು ಕೊಳಲಿನ ಬಿದಿರಿನ ಮೇಲೆ ತುಟಿಗಳುಜ್ಜುವ ಸದ್ದು ಮಾಡುವುದಿಲ್ಲ. ಹೊರ ಬರುವುದು ನಾದ ಮಾತ್ರ. ಮೂಗಿನ ಉಸಿರೂ ಹೊರಬಾರದು. ಖಮಾಚ್‌, ರಂಜನಿ, ಮನೋರಂಜನಿಗಳಲ್ಲೆಲ್ಲಾ ಗಾಯಕೀ ಅಂಶಗಳು, ತಂತ್ರಗಾರಿಕೆಯ ಉತ್ತಮ ಸ್ವರೂಪಗಳು, ಅದ್ಭುತ ಎಂದೆನಿಸುವ ಮನೋಧರ್ಮ, ಪ್ರತಿಬಾರಿಯೂ ಮುಂದೇನು ಎನ್ನುವ ಕುತೂಹಲವನ್ನು ಹುಟ್ಟಿಸುವ ಕಲ್ಪನಾ ಸ್ವರವಿನ್ಯಾಸ ಈ ಈರ್ವರ ವಿಲಾಸ. ಕಾಂಬೋಧಿಯ ರಾಗರೂಪಕ್ಕೆ ಹೇಮಂತ-ಹೇರಂಭ ಅವರು ಹೊಸ ಹೊಸ ವರಸೆಗಳನ್ನು ನೀಡುತ್ತಾ “ಓ ರಂಗಶಾಯಿ’ಯನ್ನು ಹೊಸೆದರು. ಚಿಕ್ಕ ಗಾತ್ರದ, ಮಧ್ಯಗಾತ್ರದ ಮತ್ತು ಮಾರು ಗಾತ್ರದ ಬಾನ್ಸುರಿ ಕೊಳಲಿನಲ್ಲಿ ಇವರೀರ್ವರ ಕಾಂಬೋಧಿಯು ಲಾಲಿತ್ಯಪೂರ್ಣವಾಗಿ ಸರಸವಾಡಿತು,ಪ್ರೌಢತೆ ಯಿಂದ ಮೆರೆಯಿತು. ಪರಸ್ಪರ ಹೊಂದಾಣಿಕೆಯಿಂದ ಅಪ್ಯಾಯಮಾನವಾಗಿ ಬೆಳಗಿತು.ಒಂದೊಮ್ಮೆ ಇಬ್ಬರು ಸೋದರರು ಪಾಶ್ಚಾತ್ಯ ಮಾದರಿಯ ಕಾರ್ಡ್‌ ಸ್ವರಗಳನ್ನು ಬಳಸಿಕೊಂಡು ಒಂದಿಷ್ಟೂ ಚ್ಯುತಿ ಇಲ್ಲದೆ ಪರಿಪೂರ್ಣ ಹೊಂದಾಣಿಕೆಯೊಂದಿಗೆ ಉಸಿರು ಬಿಗಿಹಿಡಿದಂತೆ ನೀಡಿದ ಕಾಂಬೋಧಿಯನ್ನು ಯಾರೂ ಮರೆಯುವಂತಿಲ್ಲ. ವ್ಯಾಕರಣ ಶುದ್ಧತೆ, ರಾಗರೂಪದ ಸುಂದರತೆ, ಭಾವೋತ್ಕಟತೆಯನ್ನು ಮೇಳೈಸಿಕೊಂಡು ಪ್ರೌಢತೆಯನ್ನು ಪ್ರದರ್ಶಿಸುತ್ತಾ, ಚಮತ್ಕಾರಗಳ ಸರ್ಕಸ್ಸುಗಳಿಲ್ಲದೆ ಸಾಮಾನ್ಯ ಶ್ರೋತೃಗೂ ಸಂಗೀತವನ್ನು ತಲುಪಿಸಬಲ್ಲ ಅಸಾಮಾನ್ಯ ಬಲ ಈ ಸೋದರರಲ್ಲಿದೆ.

ಅತ್ಯಂತ ಸುಶ್ರಾವ್ಯವಾಗಿ ಮೂಡುತ್ತಿರುವ ಈ ಶ್ರಾವ್ಯ ಕಛೇರಿ, ಮುಂದೆ, ಅಚ್ಚರಿ ಮೂಡಿಸಬಲ್ಲ ಸರ್ಕಸ್‌ ಚಮತ್ಕಾರಗಳ ದೃಶ್ಯ ಕಛೇರಿಯಾಗದಂತೆ ನೋಡಿಕೊಳ್ಳುವ ಎಚ್ಚರವನ್ನು ಕಲಾವಿದರು ಕಾಯ್ದುಕೊಳ್ಳಬೇಕು.

ವಯಲಿನ್‌ ಸಹಕಾರದಲ್ಲಿ ಹೇಮಂತ-ಹೇರಂಭರ ಪಡಿಯಚ್ಚೇ ಅನುರಣಿಸಿದೆ. ಅವರ ಹೆಜ್ಜೆಹೆಜ್ಜೆಗೂ ಇವರದು ಸಹ ಹೆಜ್ಜೆ. ನಿಕ್ಷಿತ್‌ ಅವರ ಎಚ್ಚರದ ನಡೆ ನುಡಿಕಾರಗಳು ಸೋದರರಿಬ್ಬರ ವರಸೆಗಳಿಗೆ ಹೇಳಿಮಾಡಿಸಿದಂತಿತ್ತು.ಸಂಗತಿ ಸಂಗತಿಗಳಿಗೆ ನಿಕ್ಷಿತ್‌ ನೀಡುವ ಅನುಸರಣೆ ಉಳಿದವರಿಗೆ ಮಾದರಿ. ತನಿ ಆವರ್ತನ ಅತ್ಯಂತ ಪ್ರೌಢ. ಶರತ್‌ ಕೌಶಿಕರದು ಹಿತಮಿತ ಸಹಕಾರ.

– ಗಾನಮೂರ್ತಿ

ಟಾಪ್ ನ್ಯೂಸ್

Kollam; ಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Kollam; ಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.