ಮನಸೂರೆಗೊಂಡ ಸಾಂಸ್ಕೃತಿಕ ವೈಭವ

Team Udayavani, May 17, 2019, 5:50 AM IST

ಬೋಳಾರ ಹಳೇಕೋಟೆ ಶ್ರೀ ಮುಖ್ಯಪ್ರಾಣ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪ್ರಯುಕ್ತ ನೆರವೇರಿದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಹೃನ್ಮನ ಸೆಳೆದವು. ಸಂಗೀತ ವಿದ್ಯಾನಿಧಿ ವಿದ್ಯಾಭೂಷಣ ಮತ್ತು ಬಳಗದವರು ಭಕ್ತಿಸುಧೆ ಕಾರ್ಯಕ್ರಮದ ಮೂಲಕ ಮಧುರ ಹಾಗೂ ಭಕ್ತಿಪೂರಿತ ಗಾಯನದ ಆನಂದವನ್ನುಂಟು ಮಾಡಿದರು. ಮಾಧುರ್ಯ ಸಂಗೀತ ವಿದ್ಯಾಲಯದ ಅನುಶ್ರೀ ರಾವ್‌- ಸ್ವಾತಿ ರಾವ್‌ ಬಳಗದವರ ಗಾನ ಮಾಧುರ್ಯ ಕಾರ್ಯಕ್ರಮ ಮನಸೆಳೆಯಿತು. ರಾವ್‌ ಸೋದರಿಯರು ಹಂಸಧ್ವನಿ ರಾಗಾಲಾಪನೆಯೊಂದಿಗೆ ಅಭೀಷ್ಟ ವರದ ಶ್ರೀ ಮಹಾಗಣಪತೇ ತ್ಯಾಗರಾಜರ ರಚನೆಯನ್ನು ಸ್ವರ ಪ್ರಸ್ತಾರದೊಂದಿಗೆ ಹಾಡಿ ಕಾರ್ಯಕ್ರಮ ಆರಂಭಿಸಿದರು. ದಾಸವರೇಣ್ಯರ ರಚನೆಗಳನ್ನೇ ಹೆಚ್ಚಾಗಿ ಪ್ರಸುತಪಡಿಸುವುದರ ಮೂಲಕ ಕೇಳುಗರಿಗೆ ದಾಸ ಸಾಹಿತ್ಯದ ರಸದೌತಣವನ್ನಿತ್ತರು . ವಾದಿರಾಜ ತೀರ್ಥರಿಂದ ರಚಿತ ಹಾಡಿನೊಂದಿಗೆ ಸಂಪನ್ನಗೊಂಡ ಈ ಗಾನ ಮಾಧುರ್ಯ ಕಾರ್ಯಕ್ರಮ ಹೃನ್ಮನಸೂರೆಗೊಳಿಸಿತು. ಬ್ರಹ್ಮಕಲಶೋತ್ಸವದ ದಿನಗಳಲ್ಲಿ ಹಳೇಕೋಟೆ ವೇದಿಕೆಯಲ್ಲಿ ವಿವಿಧ ಕಲಾತಂಡಗಳಿಂದ ಹಲವು ಸಾಂಸ್ಕೃತಿಕ ವೈವಿಧ್ಯಗಳು ಪ್ರಸ್ತುತಗೊಂಡವು. ಪ್ರಸಿದ್ಧ ಅರ್ಥದಾರಿ ಜಬ್ಟಾರ್‌ ಸಮೊ ಸಾರಥ್ಯದ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಮೂಡಿಬಂದ ಶಿವಭಕ್ತ ವೀರಮಣಿ ತಾಳಮದ್ದಳೆ ಮನಸೆಳೆಯಿತು. ಸತೀಶ್‌ ಶೆಟ್ಟಿ ಬೋಂದೆಲ್‌ರವರ ಸುಶ್ರಾವ್ಯವಾದ ಭಾಗವತಿಕೆ , ಪಾತ್ರಧಾರಿಗಳ ಅಪ್ರತಿಮ ಅರ್ಥಗಾರಿಕೆ ಮನಸೂರೆಗೊಂಡಿತು .

– ಶ್ರವಣ್‌ ಶೆಟ್ಟಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಉಡುಪಿ ವಕೀಲರ ಸಂಘದ ಆಶ್ರಯದಲ್ಲಿ ಮೇ 20-21ರಂದು ಉಡುಪಿ ಪುರಭವನದಲ್ಲಿ , ತೆಂಕುತಿಟ್ಟು-ಬಡಗುತಿಟ್ಟುಗಳ ಯಕ್ಷಗಾನ ಸ್ಪರ್ಧೆ ಏರ್ಪಡಿಸಲಾಗಿತ್ತು. ರಾಜ್ಯಮಟ್ಟದ ಸ್ಪರ್ಧೆ...

  • ಗಾನ ಕೋಗಿಲೆ ದಿ.ಗುಂಡ್ಮಿ ಕಾಳಿಂಗ ನಾವಡರು ಬಡಗುತಿಟ್ಟಿನ ಯಕ್ಷರಂಗದಲ್ಲಿ ಇತಿಹಾಸ ಸೃಷ್ಟಿಸಿದವರು. ಅವರು ರಸ್ತೆ ಅಪಘಾತಕ್ಕೆ ತುತ್ತಾಗಿ ವಿಧಿವಶರಾಗಿ 29 ವರ್ಷಗಳೆ...

  • ಮುಳ್ಳೇರಿಯದ ರಾಗಸುಧಾರಸ ಸಂಸ್ಥೆ ಆಯೋಜಿಸಿದ ಸಂಗೀತ ಶಿಬಿರದಲ್ಲಿ ಹೆಸರಾಂತ ಪಿಟೀಲು ವಾದಕರೂ, ಗಾಯಕರೂ ಆದ ವಿಠಲ ರಾಮಮೂರ್ತಿಯವರು ಸಂಗೀತ ಜ್ಞಾನವನ್ನು ಶಿಬಿರಾರ್ಥಿಗಳಿಗೆೆ...

  • ಬಾಳಂಭಟ್‌ ಮನೆತನದ ಸಭಾ ಭವನದಲ್ಲಿ ನವಭಾರತ ಯಕ್ಷಗಾನ ಅಕಾಡೆಮಿಯ ಪಂಚಮ ವರ್ಧಂತ್ಯುತ್ಸವಾಚರಣೆಯು ವಿಭಿನ್ನ ಕಾರ್ಯಕ್ರಮಗಳ ಸಂಯೋಜನೆಯೊಂದಿಗೆ ವಿಶೇಷವಾಗಿ ನಡೆದು...

  • ಯಕ್ಷಗಾನಕ್ಕೆ ಭಾಷಾಬಂಧನವಿಲ್ಲ. ಕನ್ನಡ ಭಾಷೆಗಷ್ಟೇ ಸೀಮಿತವಾಗಿದ್ದ ಯಕ್ಷಗಾನ ಪ್ರಸಂಗ ಪ್ರದರ್ಶನಗಳು ಇಂದು ತುಳು, ಮಲಯಾಳಂ, ಹಿಂದಿ, ಕೊಂಕಣಿ, ಹವ್ಯಕ,ಸಂಸ್ಕೃತ...

ಹೊಸ ಸೇರ್ಪಡೆ