Udayavni Special

ಜಾತ್ರೆಯ ನಡುವೆ ಮೊಳಗಿದ “ಪಾಂಚಜನ್ಯ’


Team Udayavani, May 25, 2018, 6:00 AM IST

c-2.jpg

ಬೆಂಗಳೂರಿನ ಯಕ್ಷ ದೇಗುಲ ( ರಿ. ) ಇವರು ಕೋಟದ ಹಂದಟ್ಟಿನ ಹಂದೆ ಶ್ರೀ ಮಹಾವಿಷ್ಣು, ಶ್ರೀ ಮಹಾಗಣಪತಿ ದೇವಸ್ಥಾನದ ಜಾತ್ರಾ ಮಹೋತ್ಸವದ ಪ್ರಯುಕ್ತ ದೇವಾಲಯದ ಆವರಣದಲ್ಲಿ ಪಾಂಚಜನ್ಯ ಎನ್ನುವ ಆಖ್ಯಾನವನ್ನು ಆಡಿ ತೋರಿಸಿದರು. ಸಾಂದೀಪನಿ ಋಷಿಯ ಗುರುಕುಲದಲ್ಲಿ ಕಲಿಯುತ್ತಿದ್ದ ಶ್ರೀ ಕೃಷ್ಣ ಮತ್ತು ಆತನ ಸಹಪಾಠಿ ಉದ್ಧವ ವಿಹಾರಕ್ಕಾಗಿ ಕಡಲ ತಡಿಯಲ್ಲಿ ತಿರುಗುತ್ತಿರುವಾಗ ಸಮುದ್ರದ ಮಧ್ಯದಲ್ಲಿ ಮನೆಯಾಕಾರವೊಂದು ತೇಲುತ್ತಿದ್ದು, ಅದರಲ್ಲಿ ಅಸ್ಪಷ್ಟ ಮನುಷ್ಯಾಕೃತಿಗಳನ್ನು ಕಂಡು ಚಕಿತರಾಗುತ್ತಾರೆ. ಅದರ ಬಗ್ಗೆ ಕುತೂಹಲಿಗಳಾದ ಈರ್ವರೂ ಅದೇನೆಂಬುದನ್ನು ತಿಳಿಯಲು ಸಾಂದೀಪನಿ ಗುರುಗಳ ಬಳಿ ಬರುತ್ತಾರೆ. ಆದರೆ ಚಿಂತಾಕ್ರಾಂತರಾಗಿದ್ದ ಗುರುಗಳನ್ನು ಕಂಡು ಕಾರಣ ಕೇಳಿದಾಗ ಗುರುಗಳು ವರುಷದ ಹಿಂದೆ ತನ್ನ ಮಗ ಪುನರ್ದತ್ತನನ್ನು ಅಪಹರಿಸಿದ ಕಡಲುಗಳ್ಳರ ಮನೆಯದು ಎನ್ನುತ್ತಾರೆ. ಶ್ರೀ ಕೃಷ್ಣನು ಪುನರ್ದತ್ತನನ್ನು ಹಿಂದಕ್ಕೆ ಕರೆತರುವುದೇ ತಾನು ಗುರುಗಳಿಗೆ ನೀಡುವ ಗುರುದಕ್ಷಿಣೆ ಎಂದು ಯೋಚಿಸಿ ಗೆಳೆಯನೊಂದಿಗೆ ಅಲ್ಲಿಗೆ ತೆರಳುತ್ತಾನೆ. ಅಲ್ಲಿ ಕಡಲುಗಳ್ಳರ ನಾಯಕ ಪಂಚಜನನನ್ನು ಸಂಹರಿಸಲು ಮುಂದಾದಾಗ, ಆತ ಪುನರ್ದತ್ತನನ್ನು ಪಾತಾಳದೊಡತಿ ಮೃತ್ಯುಮಾಲಿನಿಗೆ ದ್ರವ್ಯಕ್ಕಾಗಿ ನೀಡಿರುವುದಾಗಿ ತಿಳಿಸುತ್ತಾನೆ. ಶರಣಾದ ಪಂಚಜನನು ಶ್ರೀ ಕೃಷ್ಣನಲ್ಲಿ, ಸದಾ ನಿನ್ನ ಬಳಿಯೇ ಇರುವಂತೆ ಮೋಕ್ಷ ಕರುಣಿಸು ಎಂದಾಗ, ಆತನ ಅಸ್ಥಿಯಿಂದ ಶ್ವೇತವರ್ಣದ ಶಂಖವನ್ನು ರಚಿಸಿ (ಪಾಂಚಜನ್ಯ) ತನ್ನಲ್ಲಿ ಇರಿಸಿಕೊಳ್ಳುತ್ತಾನೆ. ಮುಂದೆ ಮೃತ್ಯು ಮಾಲಿನಿಯ ಬಳಿಗೆ ತೆರಳಿದಾಗ, ಆಕೆಯು ಕೃಷ್ಣನಿಗೆ ಮರುದಿನ ಅರಮನೆಗೆ ಬರುವಂತೆ ತಿಳಿಸಿ ಆತನಿಗೆ ತಂಗಲು ವ್ಯವಸ್ಥೆ ಮಾಡುತ್ತಾಳೆ.

ವಿಶ್ರಾಂತಿ ಗೃಹದಲ್ಲಿದ್ದ ಕೃಷ್ಣನನ್ನು ಕಂಡ ಮೃತ್ಯು ಮಾಲಿನಿಯ ಮಗಳಾದ ಅಸಿಕೆಯು ಕೃಷ್ಣನ ಚೆಲುವಿಗೆ ಮನಸೋತು ವಿವಾಹವಾಗಲು ಒತ್ತಾಯಿಸಿದಾಗ ನಿರಾಕರಿಸುತ್ತಾನೆ. ಮರುದಿನ ಮೃತ್ಯುಮಾಲಿನಿಯು ಗುರುಪುತ್ರನನ್ನು ನೀಡಲು ಒಪ್ಪದಾಗ ಯುದ್ಧಕ್ಕೆ ಮುಂದಾಗುತ್ತಾನೆ. ಅಸಿಕೆಯು ಮಧ್ಯ ಪ್ರವೇಶಿಸಿ ತಾಯಿಗೆ ಆತನ ವಿಚಾರವನ್ನು ತಿಳಿಸುತ್ತಾಳೆ. ಕ್ಷಮೆ ಕೋರಿದ ಮೃತ್ಯುಮಾಲಿನಿಯು ಗುರುಪುತ್ರನೊಂದಿಗೆ ತನ್ನ ಮಗಳನ್ನು ನೀಡುತ್ತಾಳೆ ಎಂಬಲ್ಲಿಗೆ ಈ ಸುಂದರ ಆಖ್ಯಾನ ಕೊನೆಗೊಳ್ಳುತ್ತದೆ. ಕೃಷ್ಣನಾಗಿ ಸುಜಯೀಂದ್ರ ಹಂದೆಯವರ ಮಾತು ಹಾಗೂ ಅಭಿನಯ ಪ್ರೇಕ್ಷರನ್ನು ಸೆಳೆದರೆ, ಉದ್ಧವನ ಮೊದ್ದುತನವನ್ನು ಹಾಸ್ಯರಸದೊಂದಿಗೆ ಅಭಿವ್ಯಕ್ತಿಗೊಳಿಸಿದವರು ಪ್ರಶಾಂತ್‌ ಹೆಗಡೆ. ಪಂಚಜನನಾಗಿ ತಮ್ಮಣ್ಣ ಗಾಂವ್ಕರ್‌ ಪಾತ್ರ ಸಹಜ ಗುಣವನ್ನು ಮೆರೆದರೆ, ಕಡ್ಲೆ ಗಣಪತಿಯವರ ಮೃತ್ಯುಮಾಲಿನಿ¿å ರೋಷಾವೇಷದ ಅಭಿನಯ ಮತ್ತು ಕೃಷ್ಣನ ಚೆಲುವಿಗೆ ಮನಸೋತ ಅಸಿಕೆಯಾಗಿ ಕುಂಕಿಪಾಲ್‌ ನಾಗರಾಜ ಭಟ್‌ ಅವರ ಶೃಂಗಾರ ರಸಾಭಿನಯ ಮನ ಸೆಳೆಯಿತು. ಸಾಂದೀಪನಿ ಮುನಿಯ ಪಾತ್ರವನ್ನು ಗಣೇಶ್‌ ಉಪ್ಪುಂದ ನಿರ್ವಹಿಸಿದರು. ಭಾಗವತರಾಗಿ ಲಂಬೋಧರ ಹೆಗಡೆ ಮತ್ತು ದೇವರಾಜ್‌ ದಾಸ್‌ ಮರವಂತೆ, ಮದ್ದಳೆಯಲ್ಲಿ ಯಲ್ಲಾಪುರ ಗಣಪತಿ ಭಟ್‌, ಚಂಡೆಯಲ್ಲಿ ಮಾಧವ ಮಣೂರು ಮತ್ತು ಸುದೀಪ್‌ ಉರಾಳ ಹಿಮ್ಮೇಳದ ಸೊಗಸನ್ನು ಹೆಚ್ಚಿಸಿದರು. ಪ್ರಸಾದನದಲ್ಲಿ ನರಸಿಂಹ ತುಂಗ ಮತ್ತು ರಾಜು ಪೂಜಾರಿ ಕೋಟ ಅವರ ಸಹಕಾರವಿತ್ತು. ಸಂಯೋಜನೆ ಸುದರ್ಶನ ಉರಾಳ, ನಿರ್ದೇಶನ ಕೆ. ಮೋಹನ್‌ ಅವರದ್ದಾಗಿತ್ತು. 

 ಕೆ. ದಿನಮಣಿ ಶಾಸ್ತ್ರಿ 

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಮಣಿಪಾಲ : ಕುಸಿಯುವ ಭೀತಿಯಲ್ಲಿದೆ ಎಂಟು ಅಂತಸ್ತಿನ ಕಟ್ಟಡ!

ಮಣಿಪಾಲ : ಕುಸಿಯುವ ಭೀತಿಯಲ್ಲಿದೆ ಎಂಟು ಅಂತಸ್ತಿನ ಕಟ್ಟಡ! ಸ್ಥಳಕ್ಕೆ ಅಧಿಕಾರಿಗಳ ದೌಡು

ಐತಿಹಾಸಿಕ ನಡೆ: ನೌಕಾಪಡೆಯ ಯುದ್ಧ ಹಡಗಿಗೆ ಇಬ್ಬರು ಮಹಿಳಾ ಅಧಿಕಾರಿಗಳ ನೇಮಕ ಸಾಧ್ಯತೆ

ಐತಿಹಾಸಿಕ ನಡೆ: ನೌಕಾಪಡೆಯ ಯುದ್ಧ ಹಡಗಿಗೆ ಇಬ್ಬರು ಮಹಿಳಾ ಅಧಿಕಾರಿಗಳ ನೇಮಕ ಸಾಧ್ಯತೆ

ಮುಂಬಯಿಯ ಕೊಲೆ ಆರೋಪಿಯನ್ನು ನೇಪಾಳ ಗಡಿಯಲ್ಲಿ ಬಂಧಿಸಿದ ಪೊಲೀಸರು

ಮುಂಬಯಿಯ ಕೊಲೆ ಆರೋಪಿಯನ್ನು ನೇಪಾಳ ಗಡಿಯಲ್ಲಿ ಬಂಧಿಸಿದ ಪೊಲೀಸರು

ನಾನು ಶಾಸನ ಸಭೆಗೆ ಬರದಂತೆ ಬಿಎಸ್ ವೈ ಮಾಡುತ್ತಿದ್ದಾರೆ: ವಾಟಾಳ್ ನಾಗರಾಜ್

ನಾನು ಶಾಸನ ಸಭೆಗೆ ಬರದಂತೆ ಬಿಎಸ್ ವೈ ಮಾಡುತ್ತಿದ್ದಾರೆ: ವಾಟಾಳ್ ನಾಗರಾಜ್

ಡ್ರಗ್ ಮಾಫಿಯಾ : ರಾಗಿಣಿ, ಸಂಜನಾ ಜಾಮೀನು ಅರ್ಜಿ ಸೆ. 24ಕ್ಕೆ ಮುಂದೂಡಿಕೆ

ಡ್ರಗ್ ಮಾಫಿಯಾ : ರಾಗಿಣಿ, ಸಂಜನಾ ಜಾಮೀನು ಅರ್ಜಿ ಸೆ. 24ಕ್ಕೆ ಮುಂದೂಡಿಕೆ

ಆರು ದಿನಗಳಿಗೆ ವಿಧಾನಮಂಡಲ ಅಧಿವೇಶನ ಮುಕ್ತಾಯ ಮಾಡಲು ನಿರ್ಧಾರ

ಆರು ದಿನಗಳಿಗೆ ವಿಧಾನಮಂಡಲ ಅಧಿವೇಶನ ಮುಕ್ತಾಯ ಮಾಡಲು ನಿರ್ಧಾರ

ಅವರೇನೋ ಶಬ್ದ ಬಳಕೆ ಮಾಡಿದರು, ಇನ್ನು ಈ ರೀತಿ ಮಾತಾಡಬಾರದು ಅಷ್ಟೇ: ವಾರ್ನ್ ಮಾಡಿದ ನಾರಯಣಗೌಡ

ಅವರೇನೋ ಶಬ್ದ ಬಳಕೆ ಮಾಡಿದರು, ಇನ್ನು ಈ ರೀತಿ ಮಾತಾಡಬಾರದು ಅಷ್ಟೇ: ವಾರ್ನ್ ಮಾಡಿದ ನಾರಾಯಣಗೌಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ಬೆಳೆ ಹಾನಿ ತಡೆಗೆ ಪಟಾಕಿ ಸಿಡಿಸುವ ಕೋವಿ ತಯಾರಿ

udayavani youtube

ಕಬ್ಬಿನ ಬೆಳೆಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

udayavani youtube

Dr.Harsha Kamath : ಕಾರ್ಕಳದ ಈ Doctor ಕಲಾ ಕುಸುರಿಯ Master | Udayavani

udayavani youtube

ಮುಂಬೈಯಿಂದ ಡ್ರಗ್ಸ್‌ ತಂದು ಮಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದರು: ನಗರ ಪೊಲೀಸ್ ಆಯುಕ್ತ

udayavani youtube

ಕುತಂತ್ರಿ ಚೀನಾವನ್ನು ಕಟ್ಟಿ ಹಾಕುವುದು ಹೇಗೆ?ಹೊಸ ಸೇರ್ಪಡೆ

ಅನುದಾನ ರಹಿತ ಶಿಕ್ಷಕರ ಪ್ರತಿಭಟನೆ

ಅನುದಾನ ರಹಿತ ಶಿಕ್ಷಕರ ಪ್ರತಿಭಟನೆ

ಬೆಳೆ ಪರಿಹಾರದಲ್ಲಿ  ಕೇಂದ್ರ ತಾರತಮ್ಯ

ಬೆಳೆ ಪರಿಹಾರದಲ್ಲಿ ಕೇಂದ್ರ ತಾರತಮ್ಯ

ಬೆಳೆ ಹಾನಿ; ಎಕರೆಗೆ 25 ಸಾವಿರ ನೀಡಲು ಆಗ್ರಹ

ಬೆಳೆ ಹಾನಿ; ಎಕರೆಗೆ 25 ಸಾವಿರ ನೀಡಲು ಆಗ್ರಹ

ತುಂಗಭದ್ರಾ ಎಡದಂಡೆ ಕಾಲುವೆ ಅಕ್ವಾಡೆಕ್ಟನಲ್ಲಿ‌ ಬಿರುಕು : ಆತಂಕದಲ್ಲಿ ರೈತರು

ತುಂಗಭದ್ರಾ ಎಡದಂಡೆ ಕಾಲುವೆ ಅಕ್ವಾಡೆಕ್ಟನಲ್ಲಿ‌ ಬಿರುಕು : ಆತಂಕದಲ್ಲಿ ರೈತರು

bofara-tdy-2

ಬೀದರನಲ್ಲಿ ಲಕ್ಷ ಹೆಕ್ಟೇರ್‌ ಬೆಳೆ ಹಾನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.