ಸಾಂಸ್ಕೃತಿಕ ವಿಚಾರ ವಿನಿಮಯದಲ್ಲಿ ಹರಿದ ಸಂಗೀತ ಸುಧೆ

Team Udayavani, Aug 2, 2019, 5:00 AM IST

ಆಷಾಡದ ಮಳೆಯ ಅಬ್ಬರ, ನಗರದ ಸದ್ದು ಗದ್ದಲದಿಂದ ದೂರ ಕಾನನದ ಮಧ್ಯದಲ್ಲಿ ಸಂಗೀತದ ಸುಧೆ. ಬ್ರಹ್ಮಾವರ ಸಮೀಪದ ಕರ್ಜೆಯ ಕಲಾಕೋಸ್ಟ್‌ ಗ್ಲೋಬಲ್‌ ಮ್ಯೂಸಿಕ್‌ ಮತ್ತು ಆರ್ಟ್‌ ವಿಲೇಜ್‌ನಲ್ಲಿ ಸಂಗೀತದ ಸಂವಾದ ಹಾಗೂ ವಿಚಾರ ವಿನಿಮಯ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಮೊದಲು ಪ್ರಾರ್ಥನೆಯಲ್ಲಿ ಶರತ್‌ ಕಡೇಕರ್‌ ಅಸೋ ನಮನ ತುಜಾ ಮರಾಠಿ ಭಜನೆಯನ್ನು ಹಾಡುವುದರೊಂದಿಗೆ ಕಾರ್ಯಕ್ರಮ ಆರಂಭವಾಯಿತು. ನಂತರ ಸ್ಥಳೀಯ ಪ್ರತಿಭೆ ಸಿದ್ಧಾಪುರದ ಶ್ರವಣ ಪೈ ಸಿ.ಆರ್‌.ವ್ಯಾಸ ಸಂಗೀತ ರಚನೆಯ ಧನಕೋಣಿ ರಾಗದಲ್ಲಿ ಏಕ್‌ಚಂದಾ ಭಜನೆಯನ್ನು ಹಾಡಿ ಸಂಗೀತದ ಸಂಜೆಗೆ ಬಂದ ಕಲಾಭಿಮಾನಿಗಳನ್ನು ಸಿದ್ದಗೊಳಿಸಿದರು.

ಅನಂತರ ಮುಂಬೈನ ಅನುಜ -ಅಗ್ರಜರ ಜೋಡಿ ಓಂಕಾರ ಶೆಣೈ ರಾಗ್‌ ಕೇದಾರ್‌ದಲ್ಲಿ ಅಥನಾ ಗಾಯನವನ್ನು ಪ್ರಸ್ತುತ ಪಡಿಸಿದರು. ಅವರಿಗೆ ಅಣ್ಣ ಕಾರ್ತಿಕ್‌ ಶೆಣೈ ತಬಲಾದಲ್ಲಿ ಸಾಥ್‌ ನೀಡಿದರು.

ಮುಂದೆ ವೀಣಾ ನಾಯಕ್‌ “ಮುಲ್ತಾನಿ’ ರಾಗದಲ್ಲಿ ಸುಂದರ ಸುರಜನವಾ ಹಾಡಿದರು. ಹಾಗೆಯೇ ಉಡುಪಿಯ ಸಿಂಧೂ ಕಾಮತ್‌ ಜೇಡಿ ಮಣ್ಣಿನಿಂದ ತಯಾರಿಸಿದ ಮೂರ್ತಿಯನ್ನು ತೋರ್ಪಡಿಸಿ ಚಿತ್ರಕಲೆ, ಚಿತ್ರ ರಚನೆ, ಕಲಾಕೃತಿ ಹಾಗೂ ಮೂರ್ತಿ ರಚನೆಯ ಕುರಿತ ತಮ್ಮ ಅನುಭವವನ್ನು ಹಂಚಿಕೊಂಡರು.

ಮುಂಬೈನ ಕೊಳಲು ವಾದಕ ಸುಧೀರ್‌ ಭಕ್ತ ಮೇಘ ರಾಗದಲ್ಲಿ ಕೊಳಲು ನುಡಿಸಿದ ಸಮಯದಲ್ಲಿ ಹೊರಗಡೆ ಸುರಿದ ತುಂತುರು ಮಳೆ ನಿದರ್ಶನವಾಯಿತು. ಅನಂತರ ಸತ್ಯ ಚರಣ ಶೆಣೈ “ಪುರಿಯಾ ಧನಶ್ರೀ’ ರಾಗದಲ್ಲಿ ಮುಶಕಿಲೇ ಕರೇ ಆಸಾನ್‌ ಹಾಡನ್ನು ಪ್ರಸ್ತುತಪಡಿಸಿದರು.

ಬೆಂಗಳೂರಿನ ರಘನಂದನ ಭಟ್‌ ದುರ್ಗಾ ರಾಗ ದಲ್ಲಿ ಮನಮೋಹರಿ ಜಾನ್‌ ಎನ್ನುವ ಹಾಡನ್ನು ಹಾಡಿದರು. ಮುಂಬಯಿಯ ರಾಧಿಕಾ ಸೂಲ್‌ ಅವರು ಸೂಫಿ ಶೈಲಿಯಲ್ಲಿ ಪಂಜಾಬಿ ಭಾಷೆಯಲ್ಲಿ ಶಾ ಹುಸೇನ್‌ ಅವರು ರಚಿಸಿದ ರಬ್ಟಾ ಮೇರೆ ಹಾಲದಾ ಮೆಹೆರಮ ತೂ ಹೊಸ ಅನುಭವನ್ನು ನೀಡಿತು.

ಮಣಿಪಾಲದ ರಂಗ ಪೈ ವಾಯೋಲಿನ್‌ನಲ್ಲಿ ಶ್ರೀನಿವಾಸ ಕರೇಜಿಯ ಸಂಗೀತ ಸಂಯೋಜಿಸಿದ ಹಾಡನ್ನು ನುಡಿಸಿದರು.

ಅಂತಿಮವಾಗಿ ಮಹಾರಾಷ್ಟ್ರದ ಆಳಂದಿಯ ಅವಧೂತ ಗಾಂಧಿ ಹಾಗೂ ಹರಿದಾಸ ಶಿಂಡೆಯವರ ವಾರಕರಿ ಶೈಲಿಯ ಮರಾಠಿ ಭಜನೆ ಸಂಗೀತದ ಬೇರೊಂದು ಲೋಕಕ್ಕೆ ಕರೆದ್ಯೊಯಿತು. ಹರಿ ಜೈ ಜೈ ರಾಮ್‌ ರಾಮಕೃಷ್ಣ ಹರಿ, ಅಭಿರ ಗುಲಾಲ್‌ ಉದಳೀತ ರಂಗ ಭಜನೆ ಅಧುºತವಾಗಿತ್ತು.

ತಬಲಾದಲ್ಲಿ ವಿಘ್ನೇಶ್‌ ಕಾಮತ್‌ ಕೋಟೇಶ್ವರ, ಭಾರವಿ ದೇರಾಜೆ, ರಂಗ ಪೈ ಹಾಗೆಯೇ ಹಾರ್ಮೋನಿಯಂನಲ್ಲಿ ಶ್ರೀಧರ ಭಟ್‌ ಕೋಟೇಶ್ವರ, ಪ್ರಸಾದ ಕಾಮತ್‌ ಹಾಗೂ ಸುಧೀರ್‌ ನಾಯಕ್‌ ಸಹಕರಿಸಿದರು.

ರಮೇಶ ಭಟ್‌ ಕೋಟೇಶ್ವರ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ