ವಾದಿರಾಜ – ಕನಕದಾಸ ಸಂಗೀತೋತ್ಸವ

Team Udayavani, Jan 17, 2020, 1:14 AM IST

ಉಡುಪಿಯ ಎಂ.ಜಿ.ಎಂ. ಕಾಲೇಜಿನಲ್ಲಿ ಡಿ.28 ಮತ್ತು 29ರಂದು ವಾದಿರಾಜ ಕನಕದಾಸ ಸಂಗೀತೋತ್ಸವವನ್ನು ಆಚರಿಸಲಾಯಿತು. ಡಿ. 28ರಂದು ಮೊದಲನೆಯದಾಗಿ ವಿನಾಯಕ ಭಟ್‌, ಹೆಗ್ಗಾರಬೈಲ್‌ ಅವರಿಂದ ಹಿಂದುಸ್ಥಾನಿ ಗಾಯನ ನಡೆಯಿತು. ಇವರು ಗಟ್ಟಿಯಾದ ಧ್ವನಿಯಲ್ಲಿ ಅನೇಕ ದಾಸರ ಪದಗಳನ್ನು ಶೃತಿ ಬದ್ಧವಾಗಿ ಹಾಡಿ ಜನಮನ ರಂಜಿಸಿದರು. ಹಾರ್ಮೋನಿಯಂನಲ್ಲಿ ಶಂಕರ್‌ ಶಣೈ ಹಾಗೂ ಮಾಧವ ಆಚಾರ್‌ ತಬ್ಲಾದಲ್ಲಿ ಸಾಥಿಯನ್ನು ತಕ್ಕುದಾಗಿ ನೀಡಿದರು. ಸಾಯಂಕಾಲ ಉಷಾ ಹೆಬ್ಟಾರ್‌ ಮತ್ತು ಬಳಗದವರಿಂದ ವಾದಿರಾಜ-ಕನಕದಾಸ ಕೀರ್ತನೆಗಳ ಗಾಯನ ನೆರವೇರಿತು. ರಾಗ ಲಯಗಳಿಂದ ಕೂಡಿ ಒಕ್ಕೊರಲಿನಲ್ಲಿ ಸಮೂಹ ಗಾಯನದಲ್ಲಿ ಪ್ರಸ್ತುತಗೊಂಡ ಈ ಕಾರ್ಯಕ್ರಮ ಜನಾಕರ್ಷಣೆಯೆನಿಸಿತು. ವಾಮನ ನಾಯಕ್‌ ಪರ್ಕಳ ಮತ್ತು ಕೀರ್ತನ್‌ ಕ್ರಮವಾಗಿ ಹಾರ್ಮೋನಿಯಂ ಹಾಗೂ ತಬ್ಲಾ ಸಹಕಾರ ನೀಡಿದರು.

ನಡೆಸಿಕೊಟ್ಟವರು, ಕಾರ್ಕಳದ ಅನಸೂಯಾ ದೇವಸ್ಥಳಿ ಅವರು. ಇವರು ಹಾಡಿದ ರಚನೆಗಳು – ನಮ್ಮಮ್ಮ ಶಾರದೆ (ಹಂಸಧ್ವನಿ), ನೆನೆಯಬಾರದೆ ಮನವೆ (ವಾಸಂತಿ), ನೇಮವಿಲ್ಲದ ಹೋಮ (ಮುಖಾರಿ), ನಾನು ನೀನು ಎನ್ನದಿರು (ಹಿಂದೋಳ), ಸತ್ಯವಂತರ ಸಂಗವಿರಲು (ಮಿಶ್ರ), ಪಾಲುಗಡಲೊಡೆಯ ಬಾರೋ ( ಷಣ್ಮುಖಪ್ರಿಯ), ಆರು ಬದುಕಿದರೇನು (ಸಿಂಧು ಭೈರವಿ – ಸ್ವಂತ ಸಂಯೋಜನೆ) ಇತ್ಯಾದಿ. ಹಾಡಿದ ಎಲ್ಲಾ ಕೀರ್ತನೆಗಳೂ ವಾದಿರಾಜರು ಅಥವಾ ಕನಕದಾಸರದೇ ಆಗಿದ್ದುದು ಮತ್ತು ಎಲ್ಲಾ ಪದಗಳಿಗೂ ಚುಟುಕಾದ ಆಲಾಪನೆ ಹಾಗು ಸ್ವರ ಪ್ರಸ್ತಾರವನ್ನು ಮಾಡಿದುದು ಒಂದು ವಿಶೇಷ. ಕಲಾವಿದೆ ವಿಸ್ತಾರಕ್ಕಾಗಿ ಹಿಂದೋಳ ಹಾಗೂ ಷಣ್ಮುಖಪ್ರಿಯ ರಾಗಗಳನ್ನು ಆರಿಸಿಕೊಂಡರು. ನವಿರಾದ ಹಿಂದೋಳ ರಾಗದ ಆಲಾಪನೆ, “ನಾನು ನೀನು ಎನ್ನದಿರು’ ಎನ್ನುವ ಪಲ್ಲವಿಗೆ ರಾಗವನ್ನು ಬಿಂಬಿಸುವ ಸ್ವರ ಪ್ರಸ್ತಾರದೊಂದಿಗೆ ಈ ರಚನೆಯು ಬಹು ಆಪ್ಯಾಯಮಾನವಾಗಿ ಮೂಡಿ ಬಂತು. ಪ್ರಧಾನ ರಾಗವಾಗಿ ತೆಗೆದುಕೊಂಡದ್ದು ರಾಗ ಷಣ್ಮುಖಪ್ರಿಯ. ದಿ.ಸುರಾಲು ಪರಮೇಶ್ವರ ಭಟ್ಟರು ರಾಗ ಸಂಯೋಜನೆ ಮಾಡಿರುವ “ಪಾಲುಗಡಲೊಡೆಯ ಬಾರೋ’ ಈ ವಾದಿರಾಜರ ಕೃತಿಗೆ ವಿದ್ವತೂ³ರ್ಣವಾದ ಆಲಾಪನೆ, ಖಂಡಛಾಪು ತಾಳದ ಎರಡನೇ ಪೆಟ್ಟಿನಲ್ಲಿ ಶುರುವಾಗುವ “ಎನ್ನ ಮೇಲೆ ಕರುಣಾಮೃತದ ರಸಮಳೆಯ ಸುರಿಸುತಲಿ’ ಎನ್ನುವ ಅರ್ಥವತ್ತಾದ ಸಾಲುಗಳಿಗೆ ನೆರವಲ್‌ ಮತ್ತು ಕಲ್ಪನಾ ಸ್ವರಗಳ ಪೋಷಣೆಯನ್ನು ಒದಗಿಸಿದರು. ಇವರಿಗೆ ವಯೊಲಿನ್‌ನಲ್ಲಿ ವೇಣುಗಾಪಾಲ್‌ ಶ್ಯಾನುಭೋಗ್‌ ಹಾಗೂ ಮೃದಂಗದಲ್ಲಿ ಬಾಲಚಂದ್ರ ಭಾಗವತ್‌ ಸಹಕಾರ ನೀಡಿದರು.

ವಿದ್ಯಾಲಕ್ಷ್ಮೀ ಕಡಿಯಾಳಿ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ