ವೀರ ಅಭಿಮನ್ಯು -ಸುಧನ್ವ ಮೋಕ್ಷ : ಕಲಾಕ್ಷೇತ್ರದಲ್ಲಿ ಅರಳಿದ ಕಲಾಕುಸುಮ


Team Udayavani, Oct 25, 2019, 4:29 AM IST

q-47

ಉಡುಪಿ ಗುಂಡಿಬೈಲಿನ ಯಕ್ಷಗಾನ ಕಲಾಕ್ಷೇತ್ರದಲ್ಲಿ ಶಾರದಾ ಪೂಜೆ ಪ್ರಯುಕ್ತ ಮಕ್ಕಳು ಹಾಗೂ ಮಹಿಳೆಯರಿಂದ “ವೀರ ಅಭಿಮನ್ಯು’ ಮತ್ತು ಸಂಘದ ಹಿರಿಯ ಕಲಾವಿದರಿಂದ “ಸುಧನ್ವ ಮೋಕ್ಷ’ ಯಕ್ಷಗಾನ ಪ್ರದರ್ಶನ ನಡೆಯಿತು.

ಯಕ್ಷಗುರು ಪೆರಂಪಳ್ಳಿಯ ಉದಯಕುಮಾರ್‌ ಮಧ್ಯಸ್ಥರ ದಕ್ಷ ನಿರ್ದೇಶನದಲ್ಲಿ ಪೂರ್ವರಂಗ ಸಹಿತವಾಗಿ ಮೂಡಿಬಂದ “ವೀರ ಅಭಿಮನ್ಯು’ ಪ್ರೇಕ್ಷಕರ ಮೆಚ್ಚುಗೆ ಗಳಿಸಿತು. ಗೃಹಿಣಿಯರು ಮತ್ತು ಬಾಲಕಿಯರು ಹೆಚ್ಚಿನ ಪಾತ್ರಗಳನ್ನು ನಿರ್ವಹಿಸಿದ್ದು ಗಮನಾರ್ಹ. ಪಾರಂಪರಿಕ ಕೋಡಂಗಿ ನೃತ್ಯ, ಬಾಲಗೋಪ, ಪೀಠಿಕಾ ಸ್ತ್ರೀವೇಷಗಳಲ್ಲಿ ಪ್ರಥಮ ಬಾರಿಗೆ ರಂಗಪ್ರವೇಶ ಮಾಡಿದ ಬಾಲರು ಯಾವುದೇ ಅಳುಕಿಲ್ಲದೆ ನಿರ್ವಹಣೆ ನೀಡಿ ಸೈ ಎನಿಸಿಕೊಂಡರು. ಕೌರವ, ಕರ್ಣ, ದುಶ್ಯಾಸನರಾಗಿ ಸೌಮ್ಯಾ, ಕು| ಸಿಂಚನಾ, ಕು| ಲಕ್ಷ್ಮೀ ಇವರ ಸಂಪ್ರದಾಯಬದ್ಧ ಒಡ್ಡೋಲಗ ಕುಣಿತದೊಂದಿಗೆ ಹಿತಮಿತವಾದ ಅರ್ಥಗಾರಿಕೆಯಲ್ಲಿ ಗಮನ ಸೆಳೆದರು. ದ್ರೋಣನಾಗಿ ಉತ್ತಮ ನೃತ್ಯಾಭಿನಯದಿಂದ ಕು| ಅನುಷಾ ಮೆಚ್ಚುಗೆಗೆ ಪಾತ್ರರಾದರು. ಕರ್ಣಾರ್ಜುನರಾಗಿ ಕು| ಪೌಷ,

ಸುಗಂಧಿಯವರ ಜೋಡಿ ಮನ ಸೆಳೆಯಿತು. ಸಮಸಪ್ತಕರಾಗಿ ಅಟ್ಟಹಾಸದ ಪ್ರವೇಶ ಮಾಡಿದ ಮಾ| ಭುವನ್‌ ಅಬ್ಬರವನ್ನು ಕೊನೆಯವರೆಗೂ ಉಳಿಸಿಕೊಂಡು ಹೋಗುವಲ್ಲಿ ಸಫ‌ಲರಾದದ್ದು ಅವರ ಶ್ರದ್ಧೆಯನ್ನು ತೋರಿಸುತ್ತಿತ್ತು.

ಪ್ರಥಾಮಾರ್ಧದ ಅಭಿಮನ್ಯುವಾಗಿ ಕು| ಮೇಧಾ ದಣಿವಯರಿಯದ ಕುಣಿತ ಮತ್ತು ಹಸನ್ಮುಖ ಭಾವಾಭಿನಯದಲ್ಲಿ ಮಿಂಚಿದರೆ ಮಾತೆ ಸುಭದ್ರೆಯಾಗಿ ಭಾವಾನಾತ್ಮಕ ಅಭಿನಯ ನೀಡುವಲ್ಲಿ ಕು| ದೃಶ್ಯ ಮೆಚ್ಚುಗೆಗಳಿಸಿದರು. ದ್ವಿತೀಯಾರ್ಧದ ಅಭಿಮನ್ಯುವಾಗಿ ಮಿಂಚು ಹರಿಸಿದ್ದು ಕು| ಶ್ರೀಪದ್ಮಾ ಚಕ್ರವ್ಯೂಹ ಭೇದಿಸಿ ಅತಿರಥರನ್ನು ಕೆಡಹಿ ಕುರರಾಯನನ್ನು ಬಂಧಿಸಿ ಕೆಣಕುವ ಪರಿ ವೃತ್ತಿ ಕಲಾವಿದರ ನಿರ್ವಹಣೆಗೆ ಸರಿಸಾಟಿಯಾಗಿತ್ತು. ದೊಂದಿ ಬೆಳಕಿನಲ್ಲಿ ಚಕ್ರವ್ಯೂಹದ ಚಿತ್ರಣ ವಿಶಿಷ್ಟವಾಗಿತ್ತು. ಹಿಮ್ಮೇಳದಲ್ಲಿ ಭಾಗವತರಾಗಿ ಪ್ರಭಾಕರ್‌ ಹೇರೂರು, ಮದ್ದಲೆಯಲ್ಲಿ ರಕ್ಷಿತ್‌ ಮಲ್ಯ, ಚೆಂಡೆಯಲ್ಲಿ ಶಾಂತಾರಾಮ ಆಚಾರ್ಯರ ಉತ್ತಮ ನಿರ್ವಹಣೆ ನೀಡಿದರು.

ನಂತರ ನಡೆದ “ಸುಧನ್ವ ಮೋಕ್ಷ’ ಪ್ರಸಂಗದ ಅಶ್ವಮೇಧಯಾಗದ ತುರಗ ರಕ್ಷಕನಾಗಿ ಅರ್ಜುನ ಗಣೇಶ್‌ ಕೋಟ್ಯಾನ್‌ ರಂಗದ ಹಿಡಿತದಲ್ಲಿ ಪ್ರಬುದ್ಧತೆ ಮೆರೆದರೆ, ವೃಷಕೇತು, ಪ್ರದ್ಯುಮ್ನರಾಗಿ ದರ್ಶನ್‌, ಶ್ರೀಧರ ಭಟ್‌ ಗಮನ ಸೆಳೆದರು. ಸುಧನ್ವನಾಗಿ ನವೀನ್‌ ಭಟ್‌ ಮಿಂಚಿದರೆ, ಸತಿ ಪ್ರಭಾವತಿಯಾಗಿ ವಿಶ್ವನಾಥ ಕಾಮತ್‌ ಗಮನ ಸೆಳೆದರು. ಕೃಷ್ಣನಾಗಿ ಅನುಭವಿ ಕಲಾವಿದ

ಡಾ| ರಮೇಶ್‌ ಚಿಂಬಾಳ್ಕರ್‌ ಮೆಚ್ಚುಗೆ ಗಳಿಸಿದರು. ಹವ್ಯಾಸಿ ವಯದ ಪ್ರಸಿದ್ಧ ಭಾಗವತ ನಿಟ್ಟೂರು ಶೀನಪ್ಪ ಸುವರ್ಣರ ಭಾಗವತಿಕೆ ಹಾಗೂ ಹಿಮ್ಮೇಳ ಪ್ರಸಂಗಕ್ಕೆ ಪೂರಕವಾಗಿ ಮೂಡಿಬಂದು ಯಶಸ್ವೀ ಪ್ರದರ್ಶನವೆನಿಸಿತು.

ಜಯಂತ್‌, ಕಾಪು

ಟಾಪ್ ನ್ಯೂಸ್

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.