ಗುಂಡ್ಮಿಯಲ್ಲಿ ದ್ರೌಪದಿ ವಸ್ತ್ರಾಪಹರಣ


Team Udayavani, Apr 12, 2019, 6:00 AM IST

h-9

ಗುಂಡ್ಮಿ ಶಂಕರ ನಾರಾಯಣ ಉಪಾಧ್ಯರ ಸಂಸ್ಮರಣಾ ಕಾರ್ಯಕ್ರಮದ ಅಂಗವಾಗಿ ಆರು ವರ್ಷದಿಂದ ಯಕ್ಷಗಾನ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿರುವ ಉಪಾಧ್ಯರ ಕುಟುಂಬಿಕರು, ಈ ಬಾರಿ ಯಕ್ಷಗಾನ ಕಲಾಕೇಂದ್ರ(ರಿ.) ಹಂಗಾರಕಟ್ಟೆ ಇವರ ಸಹಕಾರದಲ್ಲಿ ಗುಂಡ್ಮಿಯ ಸದಾನಂದ ರಂಗ ಮಂಟಪದಲ್ಲಿ ಪ್ರಸಿದ್ಧ ಕಲಾವಿದರ ಕೂಡುವಿಕೆಯೊಂದಿಗೆ ದ್ರೌಪದಿ ವಸ್ತ್ರಾಪಹರಣ ಎನ್ನುವ ಪ್ರಸಂಗವನ್ನು ನಡೆಸಿಕೊಟ್ಟರು.

ಜೂಜಿನ ಕಣದಲ್ಲಿ ತಮ್ಮನ್ನೇ ತಾವು ಪಣಕ್ಕಿಟ್ಟು ಸೋತ ಪಾಂಡವರು ಕೊನೆಯಲ್ಲಿ ದ್ರೌಪದಿಯನ್ನೇ ಪಣಕ್ಕಿಟ್ಟು ಸೋಲುತ್ತಾರೆ. ಮುಂದೆ ತುಂಬಿದ ಸಭೆಯಲ್ಲಿ ದುಶ್ಯಾಸನನಿಂದ ಆಕೆಯ ವಸ್ತ್ರಾಪಹರಣ, ಭೀಮನಿಂದ ಪ್ರತಿಜೆ`, ಕೊನೆಯಲ್ಲಿ ಧೃತರಾಷ್ಟ್ರನು ದ್ರೌಪದಿಗೆ ಎರಡು ವರಗಳನ್ನು ಪ್ರದಾನ ಮಾಡುವಲ್ಲಿಗೆ ಕಥಾನಕವು ಮುಕ್ತಾಯಗೊಳ್ಳುತ್ತದೆ. ದ್ರೌಪದಿಯಾಗಿ ಶಶಿಕಾಂತ ಶೆಟ್ಟಿಯವರು ದ್ರೌಪದಿಗಾದ ಅವಮಾನ, ಅವಳ ಅಸಹಾಯಕತೆ ಮತ್ತು ಮನದಾಳದ ಭಾವನೆಗಳನ್ನು, ನಿಸ್ಸಹಾಯಕರಾಗಿ ಕುಳಿತ ಐವರು ಪತಿಯರು ಸಹಿತ ತುಂಬಿದ ಸಭೆಯಲ್ಲಿ ಅಭಿವ್ಯಕ್ತಿಗೊಳಿಸಿದ ಪರಿ ಮನಕಲಕುವಂತಿತ್ತು. ನಿಷ್ಕರುಣಿ ದುಶ್ಯಾಸನನಾಗಿ ಪ್ರಸನ್ನ ಶೆಟ್ಟಿಗಾರ್‌ ಅವರ ಅಭಿನಯ ಬಹಳವಾಗಿ ಸೆಳೆಯಿತು. ದುರಹಂಕಾರಿ ಕೌರವನಾಗಿ ನರಸಿಂಹ ಗಾಂವ್ಕರ್‌, ಧರ್ಮರಾಯನಾಗಿ ಶಿವಾನಂದ ಮಯ್ಯ, ಭೀಮನಾಗಿ ಬೇಳಿಂಜೆ ಸುಂದರ ನಾಯ್ಕ, ಅರ್ಜುನನಾಗಿ ವಿಭವನ, ನಕುಲನಾಗಿ ಪ್ರಣವ್‌ ಹೊಳ್ಳ, ಸಹದೇವನಾಗಿ ರೋಹನ್‌, ಧೃತರಾಷ್ಟ್ರನಾಗಿ ಅಶೋಕ್‌ ಆಚಾರ್‌, ಗಾಂಧಾರಿಯಾಗಿ ಸತೀಶ ಬೀಜಾಡಿ, ವಿಕರ್ಣನಾಗಿ ಯೋಗೀಂದ್ರ ಮರವಂತೆ, ಪ್ರತಿಕಾಮಿಯಾಗಿ ಹಳ್ಳಾಡಿ ಕೃಷ್ಣ ತಮ್ಮ ಪಾತ್ರಗಳನ್ನು ನಿರ್ವಹಿಸಿದ ರೀತಿ ಪ್ರಶಂಸನೀಯವಾಗಿತ್ತು. ಪೂರ್ವ ರಂಗದಲ್ಲಿ ಬಾಲಗೋಪಾಲರಾಗಿ ವಿಷ್ಣು ಮತ್ತು ಗೌತಮ್‌ ಸೊಗಸಾದ ಹೆಜ್ಜೆಯೊಂದಿಗೆ ನಿರ್ವಹಿಸಿದರೆ, ಉದಯ ಕುಮಾರ್‌ ಹೊಸಾಳರ‌ ಭಾವಪೂರ್ಣ ಭಾಗವತಿಕೆಗೆ ಮದ್ದಲೆಗಾರರಾಗಿ ಪ್ರಶಾಂತ್‌ ಭಂಡಾರಿ ಮತ್ತು ಜನಾರ್ದನ್‌ ಆಚಾರ್‌ ಚೆಂಡೆಯಲ್ಲಿ ಉತ್ತಮವಾದ ಸಹಕಾರ ನೀಡಿದರು. ವೇಷಭೂಷಣ ಗಣೇಶ್‌ ಆಚಾರ್‌ ಜನ್ನಾಡಿಯವರದ್ದಾಗಿತ್ತು.

ಕೆ. ದಿನಮಣಿ ಶಾಸ್ತ್ರಿ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.