ಯಕ್ಷ ಮೇನಕಾದ ಇಂದ್ರಕೀಲಕ- ಊರ್ವಶಿ ಶಾಪ-ಅಂಬಾಶಪಥ


Team Udayavani, Sep 20, 2019, 5:00 AM IST

t-5

ಕಾಮ್ಯಕಾವನದಲ್ಲಿ ವನವಾಸದಲ್ಲಿದ್ದ ಪಾಂಡವರು, ಸೂರ್ಯನಿಂದ ಅಕ್ಷಯಪಾತ್ರೆ ಪಡೆದ ಧರ್ಮಜನಿಗೆ ವೇದವ್ಯಾಸರು ಈಶ್ವರನ ಬೀಜ ಮಂತ್ರ ಉಪದೇಶಿಸುತ್ತಾರೆ. ಅದನ್ನು ಧರ್ಮಜ ಅರ್ಜುನನಿಗೆ ಹೇಳಿ ಹರನನ್ನು ತಪಸ್ಸಿನಿಂದ ಒಲಿಸಿ ದಿವ್ಯಾಸ್ತ್ರಗಳನ್ನು ಪಡೆಯಲು ಕಳಿಸುತ್ತಾನೆ. ಉತ್ತರದ ಗಿರಿಕಾನನದಲಿ ನಡೆವಾಗ ಹರನ ತಪಸ್ಸಿಗೆ ಇಂದ್ರಕೀಲ ಎಂಬ ಈ ಪುಣ್ಯಭೂಮಿ ಬಲುಶ್ರೇಷ್ಠ ಎಂಬ ನಭೋವಾಣಿಯಾದಂತೆ ಅಲ್ಲೇ ತಪಗೈಯುತ್ತಾನೆ.

ಋಷಿಮುನಿಗಳ ದೂರಿನಂತೆ ಈಶ್ವರ ಪಾರ್ವತಿ , ಶಬರ ಶಬರಿಯರಾಗಿ ಅಲ್ಲಿಗೆ ತೆರಳಿ ಬಗೆಬಗೆಯಲಿ ಪರೀಕ್ಷಿಸಿ ಸೂಕರದ ನೆವನದಲಿ ಘೋರಕಾಳಗವಾಗಿ ಈಶ್ವರನ ಹಣೆ ಘಾಸಿಗೊಳಿಸಿದ ಅರ್ಜುನನ್ನು ತನ್ನ ರೌದ್ರಾವೇಷದಿಂದ ಸೋಲಿಸಿ ಬೋರಲು ಬೀಳಿಸುತ್ತಾನೆ. ಪಾರ್ವತಿಯೊಡನೆ ಆತನ ಬೆನ್ನು ನೋಡಲು ಬಯಸಿದ್ದೆಯಲ್ಲಾ , ನೋಡು ಎಂದಾಗ , ಆತನನ್ನು ಸಲಹಲೇಬೇಕು ಎಂದು ಪರಿಪರಿಯಾಗಿ ಬೇಡುತ್ತಾಳೆ.

ಯುದ್ಧದಲ್ಲಿ ಸೋತ ಅರ್ಜುನ ಮತ್ತೆ ಅಲ್ಲೇ ಇದ್ದ ಕಲ್ಲಿನ ಶಿವಲಿಂಗಕ್ಕೆ ಪುಷ್ಪಾರ್ಚನೆ ಮಾಡುತ್ತಾನೆ, ಆದರೆ ಆ ಹೂವುಗಳೆಲ್ಲಾ ತನ್ನೊಡನೆ ಜಗಳ ಕಾದ ಶಬರನ ಮುಡಿಸೇರುತ್ತದೆ. ತನ್ನ ತಪ್ಪನ್ನರಿತ ಅರ್ಜುನ ಶಬರನ ಪಾದಸ್ಪರ್ಶಿಸಿ ಕ್ಷಮೆಯಾಚಿಸಿದಾಗ ಈಶ್ವರ ಪಾರ್ವತಿಯಾಗಿ ಕಾಣುತ್ತಾರೆ. ಈಶ್ವರ ಪಾಶುಪತವನ್ನೂ ಪಾರ್ವತಿ ಅಂಜನಾಸ್ತ್ರವನ್ನೂ ಅನುಗ್ರಹಿಸುತ್ತಾರೆ. ತಪದಿಂದ ಮತ್ತು ಯುದ್ಧದಿಂದ ಬಳಲಿದ ಅರ್ಜುನನನ್ನು ವಿಶ್ರಾಂತಿ ಪಡೆಯಲು ಸುರಲೋಕಕ್ಕೆ ಆಹ್ವಾನಿಸಿದ ದೇವೇಂದ್ರ ಶಿವ ಪಾರ್ವತಿಯರಿಂದ ಅಸ್ತ್ರಗಳನ್ನು ಪಡೆದುದಕೆ ಅಭಿನಂದಿಸುತ್ತಾ , ಸ್ವರ್ಗದ ಎಲ್ಲರೂ ತಮ್ಮದ್ದಾದ ಅಸ್ತ್ರಗಳನ್ನು ಉಡುಗೊರೆಯಾಗಿ ನೀಡುತ್ತಾರೆ.

ಬಳಲಿ ಬಂದ ತನ್ನ ಮಗನಿಗಾಗಿ ದೇವೇಂದ್ರ ಊರ್ವಶಿಯ ನಾಟ್ಯವೇರ್ಪಡಿಸುತ್ತಾನೆ, ಊರ್ವಶಿಯ ಮೇಲೆ ಗಮನವಿರಿಸಿ ತದೇಕಚಿತ್ತದಿಂದ ಅವಳ ನಾಟ್ಯ ಸೌಂದರ್ಯ ಆಸ್ವಾದಿಸಿದುದು ಗಮನಿಸಿದ ದೇವೇಂದ್ರ ಅರ್ಜುನನ ಶಯನಗೃಹಕ್ಕೆ ಚಿತ್ರಸೇನನ ಮೂಲಕ ಊರ್ವಶಿಯನ್ನು ಕಳಿಸಿಕೊಡುತ್ತಾನೆ.

ಊರ್ವಶಿಯ ಪಾದಸ್ಪರ್ಶಿಸಿ ನಮಸ್ಕರಿಸಿದ ಅರ್ಜುನ, ತನ್ನ ಮನೋವಾಂಛೆ ಈಡೇರಿಸದ ಅರ್ಜುನನಿಗೆ ಒಂದು ವರುಷ ಶಿಖಂಡಿಯಾಗೆಂದು ಶಪಿಸುತ್ತಾಳೆ.

ಇತ್ತ ಕಾಶೀರಾಜನ ಮಗಳಂದಿರನ್ನು ಸ್ವಯಂವರ ಮಂಟಪದಿಂದ ಕರೆದೊಯ್ದು ಅಂಬಿಕೆ, ಅಂಬಾಲಿಕೆಯರನ್ನು ತಮ್ಮ ವಿಚಿತ್ರವೀರ್ಯನಿಗೆ ಮದುವೆ ಮಾಡಿಸುತ್ತಾನೆ ಭೀಷ್ಮ. ಅಂಬೆ ತಾನು ಸಾಳ್ವನೆಂಬವನನ್ನು ಪ್ರೀತಿಸಿದ್ದೇನೆ ನನ್ನನ್ನು ಸೌಭದೇಶಕ್ಕೆ ಕಳಿಸಿಕೊಡು ಎನ್ನುತ್ತಾಳೆ, ವೃದ್ಧ ಬ್ರಾಹ್ಮಣರೊಂದಿಗೆ ಸಾಳ್ವನಲ್ಲಿಗೆ ಭೀಷ್ಮ ಕಳಿಸಿಕೊಡುತ್ತಾನೆ.

ಸಾಳ್ವನಿಂದಲೂ ತಿರಸ್ಕರಿಸಲ್ಪಟ್ಟಾಗ ಮತ್ತೆ ಭೀಷ್ಮರಲ್ಲಿಗೆ ಬಂದು ಮದುವೆ ನಿವೇದನೆ ಮಾಡಿದಾಗ ಅವರಿಂದಲೂ ತಿರಸ್ಕೃತಳಾಗಿ ಪತಿಹೀನಳನ್ನಾಗಿ ಮಾಡಿದ ನಿನಗೆ ದುರಪರಾಕ್ರಮಿಗಳನೊಲಿಸಿ ನಿನ್ನ ಶಿರ ಚೆಂಡಾಡುವೆನೆಂಬ ಶಪಥಗೈಯುತ್ತಾಳೆ.

ಭೀಷ್ಮರ ಗುರುಗಳಾದ ಪರಶುರಾಮರಲ್ಲಿ ದೂರಿತ್ತ ಅಂಬೆ , ಪರಶುರಾಮ ತನ್ನ ಶಿಷ್ಯನ ವಿಚಾರಿಸಲು , ಭೀಷ್ಮ ತನ್ನ ಬ್ರಹ್ಮಚರ್ಯ ವೃತ ಪ್ರತಿಜ್ಞೆಯಿಂದ ವರಿಸಲಸಾಧ್ಯ ಎಂದು ಭಿನ್ನವಿಸಿದರೂ ಅಂಬಾ ಪ್ರಕರಣದಿಂದ ಗುರುಶಿಷ್ಯರೊಡನೆ ದೀರ್ಘ‌ಕಾಲದ ಕಾಳಗವಾಗಿ ಜಯಾಪಜಯ ನಿಶ್ಚಯವಾಗದಿರಲು ಪರಮ ಶಿಷ್ಯನ ದುರಕೆ ಮೆಚ್ಚಿ ನಿನ್ನಮನದಿಚ್ಛೆಯಂತೆ ಆಗಲಿ ಎನ್ನುತ್ತಾರೆ ಪರಶುರಾಮರು.

ಇದು ಮೂಡುಬಿದಿರೆಯ ಯಕ್ಷಮೇನಕಾದ ಹದಿನಾಲ್ಕನೇ ವರ್ಷದ ಯಕ್ಷಗಾನ ತಾಳಮದ್ದಳೆಯ ಮೂರು ಪ್ರಸಂಗಗಳ ಕಥಾಸಾರ. ಇಂದ್ರಕೀಲಕ-ಊರ್ವಶಿ ಶಾಪ-ಅಂಬಾಶಪಥ ಪ್ರಸಂಗದಲ್ಲಿ ಶಬರ ಶಂಕರನಾಗಿ ಉಜಿರೆ ಅಶೋಕ ಭಟ್‌ ಅರ್ಥಗಾರಿಕೆಯ ರಸದೌತಣ ನೀಡಿದರು. ಶಬರಿ ಶಂಕರಿ ಯಾಗಿ ದೀಪ್ತಿ ಬಾಲಕೃಷ್ಣ ಭಟ್‌ ದೊಡ್ಡ ಕಲಾವಿದರೊಂದಿಗೆ ಪ್ರಥಮಬಾರಿ ಕುಳಿತರೂ ಎಲ್ಲೂ ಅಳುಕದೆ ಪ್ರತ್ಯುತ್ಪನ್ನ ಮತಿತ್ವದಲ್ಲೂ ಸೈ ಎನಿಸಿಕೊಂಡರು. ಅರ್ಜುನನಾಗಿ ರಮಣಾಚಾರ್‌ ಕಾರ್ಕಳ ವಾದಸರಣಿಗಳಿಂದ ರಂಜಿಸಿದರು. ದೇವೇಂದ್ರನಾಗಿ ಸರಪಾಡಿ ಅಶೋಕ ಶೆಟ್ಟಿಯವರು ಪ್ರಸಕ್ತ ದೇಶದ ರಾಜಕಾರಣದ ಇಂದ್ರನಿಗೆ ಪೂರಕವಾಗಿ ಹಾಸ್ಯಮಿಶ್ರಿತ ಶೈಲಿಯಲ್ಲಿ ರಂಜಿಸಿದರು. ಊರ್ವಶಿಯಾಗಿ ವಿಷ್ಣುಶರ್ಮ ವಾಟೆಪಡು³ ಸ್ತ್ರೀ ಸಹಜ ಮಾತುಗಳಿಂದ ಪಳಕಿತರನ್ನಾಗಿಸಿದರು.

ಅಂಬೆಯಾಗಿ ಜಯಪ್ರಕಾಶ ಶೆಟ್ಟಿಯವರು ವಿವಾಹ ವಂಚಿತೆ, ಪತಿ ವಿಹೀನಳಾಗುವ ಸನ್ನಿವೇಶದ ಅಮೋಘ ಚಿತ್ರಣಕೊಟ್ಟು ಹೆಣ್ಣಿಗೆ ಈ ಪರಿ ಬರಲೇಬಾರದು ಎಂದು ಅಶ್ರುಧಾರೆ ಸುರಿಸಿ ಸಭಿಕರ ಕಣ್ಣು ಮಂಜಾಗಿಸಿದರು. ಸಾಳ್ವನಾಗಿ ಸಿಡಿಗುಂಡಿನ ಅರ್ಥಗಾರಿಕೆ ಮಾಡಿದ ಹಿರಿಯಕಲಾವಿದ ಶಂಭುಶರ್ಮರು ಸದಾ ನೆನಪಲ್ಲುಳಿದರು. ವೃದ್ಧ ಬ್ರಾಹ್ಮಣನಾಗಿ ರಾಮಾಜೋಯಿಸ ಬೆಳ್ಳಾರೆಯವರು ನಕ್ಕುನಗಿಸಿದರು. ಭೀಷ್ಮನಾಗಿ ವಾಸುದೇವ ರಂಗಾಭಟ್ಟರು, ಪರಶುರಾಮನಾಗಿ ಜಬ್ಟಾರ್‌ ಸಮೊರವರ ವಾದಗಳಲ್ಲಿ ಮೇಲಾಟವೇ ಮೇಳೈಸಿ ಕೊನೆಕೊನೆಗೆ ಜಬ್ಟಾರ್‌ರವರ ಅರ್ಥವಂತೂ ಕವನ ಶೈಲಿಯಲ್ಲಿಯೇ ಬಂತು.

ಇಂದ್ರಕೀಲಕ ಊರ್ವಶಿ ಶಾಪದಲ್ಲಿ ಭಾಗವತರಾಗಿ ಸತೀಶ್‌ ಶೆಟ್ಟಿ ಬೋಂದೆಲ್‌, ಮದ್ದಳೆಯಲ್ಲಿ ಸೋಮಶೇಖರ ಭಟ್‌ ಕಾಶೀಪಟ್ಣ, ಚಂಡೆಯಲ್ಲಿ ಕೌಶಲ್‌ ಪುತ್ತಿಗೆ, ಅಂಬಾಶಪಥದಲ್ಲಿ ಭಾಗವತರಾಗಿ ರವಿಚಂದ್ರ ಕನ್ನಡಿಕಟ್ಟೆ, ಮದ್ದಳೆಯಲ್ಲಿ ಗುರುಪ್ರಸಾದ್‌ ಬೊಳಿಂಜಡ್ಕ , ಚಂಡೆಯಲ್ಲಿ ದೇವಾನಂದ ಬೆಳುವಾಯಿ , ಎರಡೂ ಪ್ರಸಂಗಗಳಿಗೆ ಮುರಾರಿ ವಿಟ್ಲ ಚಕ್ರತಾಳದಲ್ಲಿ ಸಹಕರಿಸಿದರು.

ಯಕ್ಷರಂಜಿನಿ

ಟಾಪ್ ನ್ಯೂಸ್

rwytju11111111111

ರಾಯರ ವಾರದಂದು ನಿಮ್ಮ ರಾಶಿಫಲ ಹೇಗಿದೆ ನೋಡಿ!

ಕಡತಯಜ್ಞ : ಲಭಿಸಿತು ಅಗಾಧ ಜಾಗ! ಪ್ರಧಾನಿ ಸೂಚನೆಯನುಸಾರ ಸಮರೋಪಾದಿ ಕೆಲಸ

ಕಡತಯಜ್ಞ : ಲಭಿಸಿತು ಅಗಾಧ ಜಾಗ! ಪ್ರಧಾನಿ ಸೂಚನೆಯನುಸಾರ ಸಮರೋಪಾದಿ ಕೆಲಸ

ಚಿತ್ರಮಂದಿರಗಳ ಸಮಸ್ಯೆಯಲ್ಲಿ ಬಾಲಿವುಡ್‌

ಚಿತ್ರಮಂದಿರಗಳ ಸಮಸ್ಯೆಯಲ್ಲಿ ಬಾಲಿವುಡ್‌

ಅತ್ಯಂತ ಯಶಸ್ವಿ ಆಡಳಿತಗಾರ ಮೋದಿ: ಗೃಹ ಸಚಿವ ಅಮಿತ್‌ ಶಾ

ಅತ್ಯಂತ ಯಶಸ್ವಿ ಆಡಳಿತಗಾರ ಮೋದಿ: ಗೃಹ ಸಚಿವ ಅಮಿತ್‌ ಶಾ

ಚೀನಾ ಕಾಯ್ದೆಗೆ ಆಕ್ಷೇಪ; ಗಡಿ ಕಾಯ್ದೆ ಬಾಂಧವ್ಯಕ್ಕೆ ಧಕ್ಕೆ ತರಲಿದೆ

ಚೀನಾ ಕಾಯ್ದೆಗೆ ಆಕ್ಷೇಪ; ಗಡಿ ಕಾಯ್ದೆ ಬಾಂಧವ್ಯಕ್ಕೆ ಧಕ್ಕೆ ತರಲಿದೆ

ಖೇಲ್‌ರತ್ನಕ್ಕೆ 11 ಹೆಸರು ಶಿಫಾರಸು; ನೀರಜ್‌ ಚೋಪ್ರಾ,ಮಿಥಾಲಿ, ಚೆಟ್ರಿ ಹೆಸರು ಮುಂಚೂಣಿಯಲ್ಲಿ

ಖೇಲ್‌ರತ್ನಕ್ಕೆ 11 ಹೆಸರು ಶಿಫಾರಸು; ನೀರಜ್‌ ಚೋಪ್ರಾ,ಮಿಥಾಲಿ, ಚೆಟ್ರಿ ಹೆಸರು ಮುಂಚೂಣಿಯಲ್ಲಿ

ಸಂಕಷ್ಟದಲ್ಲಿ ಕನ್ನಡ ಪುಸ್ತಕೋದ್ಯಮ; ಕೋವಿಡ್‌ದಿಂದಾಗಿ ಬಿದ್ದಿದೆ ಪೆಟ್ಟು

ಸಂಕಷ್ಟದಲ್ಲಿ ಕನ್ನಡ ಪುಸ್ತಕೋದ್ಯಮ; ಕೋವಿಡ್‌ದಿಂದಾಗಿ ಬಿದ್ದಿದೆ ಪೆಟ್ಟು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ಹಿಂದೂಗಳ ನಡುವೆ ನಮಾಜ್ : ಹೇಳಿಕೆಗಾಗಿ ಕ್ಷಮೆಯಾಚಿಸಿದ ವಕಾರ್ ಯೂನಿಸ್

udayavani youtube

ಅಂಗಾಂಗ ದಾನ ಎಂದರೇನು ಏನಿದರ ಮಹತ್ವ ?

udayavani youtube

ಸಾವಯವ ಕೃಷಿಯಲ್ಲಿ ಅನುಸರಿಸಬೇಕಿರುವ ಪ್ರಮುಖ ಅಂಶಗಳ ಬಗ್ಗೆ ನಿಮಗೆ ಗೊತ್ತೇ?

udayavani youtube

ಶಾಲೆಗೆ ಬಂತು ಬಿಸಿಯೂಟ : ದೋಟಿಹಾಳ ಶಾಲಾ ಮಕ್ಕಳ ಒಂದು ಕಿಲೋಮೀಟರ್ ಪಾದಯಾತ್ರೆಗೆ ಬ್ರೇಕ್

udayavani youtube

ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯನ್ನು ಉಳಿಸಬೇಕಾಗಿದೆ : ಆರ್. ಅಶೋಕ್

ಹೊಸ ಸೇರ್ಪಡೆ

rwytju11111111111

ರಾಯರ ವಾರದಂದು ನಿಮ್ಮ ರಾಶಿಫಲ ಹೇಗಿದೆ ನೋಡಿ!

ಕಡತಯಜ್ಞ : ಲಭಿಸಿತು ಅಗಾಧ ಜಾಗ! ಪ್ರಧಾನಿ ಸೂಚನೆಯನುಸಾರ ಸಮರೋಪಾದಿ ಕೆಲಸ

ಕಡತಯಜ್ಞ : ಲಭಿಸಿತು ಅಗಾಧ ಜಾಗ! ಪ್ರಧಾನಿ ಸೂಚನೆಯನುಸಾರ ಸಮರೋಪಾದಿ ಕೆಲಸ

ಚಿತ್ರಮಂದಿರಗಳ ಸಮಸ್ಯೆಯಲ್ಲಿ ಬಾಲಿವುಡ್‌

ಚಿತ್ರಮಂದಿರಗಳ ಸಮಸ್ಯೆಯಲ್ಲಿ ಬಾಲಿವುಡ್‌

ಶ್ರೀಕ್ಷೇತ್ರ ಧರ್ಮಸ್ಥಳ: ದೇವರ ದರ್ಶನ ಸಮಯ ಬದಲು

ಶ್ರೀಕ್ಷೇತ್ರ ಧರ್ಮಸ್ಥಳ: ದೇವರ ದರ್ಶನ ಸಮಯ ಬದಲು

ತನಿಖೆಯಿಂದ ವಾಂಖೆಡೆ ತೆರವಿಲ್ಲ; ಎನ್‌ಸಿಬಿ ಸ್ಪಷ್ಟನೆ

ತನಿಖೆಯಿಂದ ವಾಂಖೆಡೆ ತೆರವಿಲ್ಲ; ಎನ್‌ಸಿಬಿ ಸ್ಪಷ್ಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.