ಸ್ವಯಂ ಪ್ರೇರಿತ ದೇಹದಾನ

ಒಂದು ಕಿರು ಪರಿಚಯ

Team Udayavani, Aug 9, 2020, 4:59 PM IST

ಸ್ವಯಂ ಪ್ರೇರಿತ ದೇಹದಾನ

ದೇಹದಾನವೇನೆಂದರೆ, “ಒಬ್ಬ ವ್ಯಕ್ತಿಯು ತನ್ನ ಮರಣದ ಅನಂತರ ತನ್ನ ದೇಹವನ್ನು ವೈದ್ಯಕೀಯ ಜ್ಞಾನಾರ್ಜನೆ ಮತ್ತು ಸಂಶೋಧನೆಗೋಸ್ಕರ ಸಮರ್ಪಿಸುವ ಇಚ್ಛೆಯನ್ನು ಮರಣ ಪೂರ್ವದಲ್ಲೇ ಪ್ರಕಟಗೊಳಿಸುವ ಪ್ರಕ್ರಿಯೆ.

ದೇಹದಾನದ ಬಗ್ಗೆ ಪುರಾಣಗಳಲ್ಲೂ ಸಹ ಉಲ್ಲೇಖೀಸಲಾಗಿದೆ. ವೃತ್ರಾಸುರ ರಾಕ್ಷಸ ದೇವಲೋಕದ ಮೇಲೆ ದಾಳಿ ಮಾಡಿದಾಗ ಎಲ್ಲ ದೇವತೆಗಳು ಶಿವನಲ್ಲಿಗೆ ಧಾವಿಸಿದರು. ಆಗ ಭಗವಂತನು ದೇವತೆಗಳೇ ಋಷಿ ದಧೀಚಿಯ ಬಳಿಗೆ ಹೋಗಿ ತಮ್ಮ ದೇಹತ್ಯಾಗ ಮಾಡಲು ಪ್ರಾರ್ಥಿಸಿಕೊಳ್ಳಿರಿ. ಅನಂತರ ವಿಶ್ವಕರ್ಮರ ಮೂಲಕ ಋಷಿ ದಧೀಚಿಯ ಅಸ್ಥಿಗಳಿಂದ ಶ್ರೇಷ್ಠವಾದ ವಜ್ರಾಯುಧವನ್ನು ರಚಿಸಿ ವೃತ್ರಾಸುರನ ವಧೆ ಮಾಡಬಹುದೆಂದು ಉಪದೇಶಿಸಿದನು. ಇದರ ಮೂಲಾರ್ಥ, ಲೋಕಕಲ್ಯಾಣಕ್ಕೋಸ್ಕರ ತನ್ನ ದೇಹದಾನ ಮಾಡಿದ ವಿಶ್ವದ ಮೊಟ್ಟಮೊದಲ ಉದಾಹರಣೆ.

ಕ್ರಿಸ್ತ ಪೂರ್ವ ಮೂರನೇ ಶತಮಾನದಲ್ಲಿ ಗ್ರೀಕ್‌ ದೇಶದ ಹೆರೋಫಿಲಸ್‌ ಎಂಬ ರಾಜ ವೈದ್ಯ ಮಾತ್ರ ವೈದ್ಯ ಜ್ಞಾನಾರ್ಜನೆಯ ಸಲುವಾಗಿ ರಾಜರುಗಳಿಂದ ದೇಹಛೇದ ಮಾಡಿ ಅಂಗರಚನ ಶಾಸ್ತ್ರದ ಅಧ್ಯಯನಕ್ಕೆ ಪ್ರೋತ್ಸಾಹಿಸಲ್ಪಡುತ್ತಾರೆ. ಅನಂತರ ಬಂದ ಗೆಲನ್‌ ಸುಲಭವಾಗಿ ಸಿಗುವ ಪ್ರಾಣಿಗಳ ವಧೆಯ ಅನಂತರ ಅಂಗರಚನಾ ವಿಧವನ್ನು ಅಧ್ಯಯನ ಮಾಡಿ, ಅದನ್ನು ಮಾನವನ ದೇಹರಚನೆಗೆ ಸಮವೆಂದು ಸಾಬೀತುಮಾಡಲು ಪ್ರಯತ್ನಿಸಿದರು. ಆಂಡ್ರಿಯಾಸ್‌ ವೆಸಾಲಿಯಸ್‌ ಎಂಬ ವೈದ್ಯ ವಿದ್ಯಾರ್ಥಿಯು ಮಾನವರ ದೇಹವನ್ನು ಛೇದಿಸಿ ಪ್ರತಿಯೊಂದು ಅಂಗ ರಚನೆ ಮತ್ತು ಕಾರ್ಯವೈಖರಿಯನ್ನು ಎಳೆಎಳೆಯಾಗಿ ಚಿತ್ರೀಕರಿಸಿ ಇಡೀ ವಿಶ್ವದಲ್ಲಿ ಆಧುನಿಕ ಅಂಗರಚನಾ ಶಾಸ್ತ್ರದ ಪಿತಾಮಹನೆಂದು ಕರೆಸಿಕೊಂಡವರು.

ದೇಹದಾನದ ಪ್ರಕ್ರಿಯೆಯನ್ನು ಹೇಗೆ ಮಾಡಬಹುದು ? :  ದೇಹದಾನ ನೊಂದಣಿ ಪ್ರಕ್ರಿಯೆ ತುಂಬಾ ಸುಲಭ. ದೇಹದಾನ ಮಾಡಲಿಚ್ಛಿಸಿದ ವ್ಯಕ್ತಿಯು ಯಾವುದೇ ಸರಕಾರಿ ಅಥವಾ ಕರ್ನಾಟಕ ಸರಕಾರದ ಗೆಜೆಟ್‌ನಲ್ಲಿ ನೋಂದಾಯಿಸಲ್ಪಟ್ಟ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ದೇಹದಾನ ಸ್ವೀಕೃತಿಗಾಗಿ ನೋಂದಾಯಿಸಬಹುದು. ನಮ್ಮ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಸ್ವಯಂ ಪ್ರೇರಿತ ದೇಹದಾನಕ್ಕೆ ಕರ್ನಾಟಕ ಸರಕಾರದ ಅನುಮತಿ ಪಡೆದಿರುತ್ತದೆ. ಅರ್ಜಿ ಫಾರಂನ್ನು ದ್ವಿಪ್ರತಿಯಲ್ಲಿ ಭರ್ತಿ ಮಾಡಿ ಒಂದು ಪ್ರತಿಯನ್ನು ತಮ್ಮಲ್ಲಿರಿಸಿ ಮತ್ತೂಂದು ಪ್ರತಿಯನ್ನು ಅಂಗರಚನಾ ಶಾಸ್ತ್ರ ವಿಭಾಗಕ್ಕೆ ನೀಡಬೇಕು. ದಾನಿಯವರು ತಮ್ಮ ಹೆಸರು, ವಿಳಾಸ, ಮೊಬೈಲ್‌/ದೂರವಾಣಿ ಸಂಖ್ಯೆ ಮತ್ತು ಒಂದು ಪಾಸಪೋರ್ಟ್‌ ಗಾತ್ರದ ಫೋಟೊವನ್ನು ಅಂಟಿಸಬೇಕು. ಅರ್ಜಿ ಫಾರಂನಲ್ಲಿ ದಾನಿಯ ಕುಟುಂಬದ ಸದಸ್ಯರು, ರಕ್ತಸಂಬಂಧಿಗಳು, ಸ್ನೇಹಿತರು ಅಥವಾ ನೆರೆಹೊರೆಯವರಿಂದ ನಾಲ್ಕು ಜನರ ಸಹಿ ಮಾಡಿಸಬೇಕು. ಹಾಗೆಯೇ ಅರ್ಜಿಯನ್ನು ಅಂಗರಚನಾ ಶಾಸ್ತ್ರ ವಿಭಾಗಕ್ಕೆ ಸ್ವತಃ ಬಂದು ಇಲ್ಲವೇ ಅಂಚೆ ಮುಖೇನ ತಲುಪಿಸಿ ನೋಂದಣಿ ಮಾಡಿಸಬಹುದು. ತದನಂತರ ದೇಹದಾನಿಯ ಹೆಸರನ್ನು ನೋಂದಾಯಿಸಿ ನೋಂದಣಿ ಸಂಖ್ಯೆಯನ್ನು ಸ್ವೀಕೃತಿ ಪತ್ರದ ಮೂಲಕ ತಿಳಿಸಲಾಗುವುದು. ಇದಕ್ಕೆ ಕಾನೂನಿನ ಪ್ರಮಾಣ ಪತ್ರ, ನೋಟರಿಯ ದೃಢೀಕರಣ ಅಥವಾ ಮತ್ತಾವುದೇ ಕಾನೂನಿನ ಅಂಶ ಇರುವುದಿಲ್ಲ.

ಒಬ್ಬ ವ್ಯಕ್ತಿಯು ನೋಂದಾಯಿತ ದಾನಿಯಲ್ಲದಿದ್ದರೂ, ತನ್ನ ಮರಣ ಪೂರ್ವದಲ್ಲಿ ದೇಹ ದಾನಿಯಾಗುವ ಇಂಗಿತವನ್ನು ಕುಟುಂಬ ಸದಸ್ಯರಿಗೆ ಮಾತಿನ ಮೂಲಕ ವ್ಯಕ್ತಪಡಿಸಿದ್ದಲ್ಲಿ ಸಂಬಂಧಿಕರು ದೇಹದಾನಿಯ ಮರಣದ ಅನಂತರ ಅಂಗರಚನಾ ಶಾಸ್ತ್ರ ವಿಭಾಗಕ್ಕೆ ಕರೆ ಮಾಡಿ ತಿಳಿಸಬೇಕಾಗುತ್ತದೆ. ಒಂದು ವೇಳೆ ದಾನಿ ತನ್ನ ಜೀವಿತಾವಧಿ ಸಮಯದಲ್ಲಿ ತನ್ನ ಮನಸ್ಸನ್ನು ಬದಲಾಯಿಸಿ, ಅಂತ್ಯಕ್ರಿಯೆ ಅಥವಾ ಸಮಾಧಿ ಮಾಡಲು ಬಯಸಿದರೆ, ಅವರು ಇಲಾಖೆಗೆ ಕರೆ ಮಾಡಿ ಯೋಜನೆಗಳ ಬದಲಾವಣೆಯ ಬಗ್ಗೆ ತಿಳಿಸಬೇಕಾಗುತ್ತದೆ. ಮತ್ತು ಇಲಾಖೆ ಅಂತಹ ದಾನಿಯ ನೋಂದಣಿಯನ್ನು ತೆಗೆದುಹಾಕಲಾಗುತ್ತದೆ.

ದೇಹದಾನಿಯ ಮರಣದ ನಂತರ ಏನು ಮಾಡಬೇಕು ? :  ದೇಹದಾನಿಯು ಮರಣ ಹೊಂದಿದಲ್ಲಿ ಕುಟುಂಬ ಸದಸ್ಯರು ಸಾವಿನ ಬಗ್ಗೆ ನಮ್ಮ ವಿಭಾಗಕ್ಕೆ 4 ರಿಂದ 6 ತಾಸಿನೊಳಗೆ ಕರೆ ಮಾಡಿ ತಿಳಿಸಬಹುದು. ಮರಣದ ಅನಂತರ ಗೊತ್ತು ಪಡಿಸಿದ ದೇಹದಾನಿ ತನ್ನ ವಿಳಾಸದಿಂದ 30-40 ಕಿ. ಮೀ. ದೂರದಲ್ಲಿದ್ದರೆ, ನಮ್ಮ ಸಂಸ್ಥೆ ದೇಹವನ್ನು ಇಲಾಖೆಗೆ ತರಿಸುವ ಮತ್ತು ಸಂಸ್ಕರಿಸುವ ಎಲ್ಲಾ ವ್ಯವಸ್ಥೆಯನ್ನು ಮಾಡುತ್ತದೆ. ದೇಹವನ್ನು ಸ್ಥಳಾಂತರಿಸುವ ಮತ್ತು ಸಂಸ್ಕರಣೆ ವಿಧಾನದ ಎಲ್ಲಾ ಶುಲ್ಕವನ್ನು ನಮ್ಮ ಇಲಾಖೆಯೇ ಭರಿಸುತ್ತದೆ. ಇಲಾಖೆಗೆ ತಂದ ದೇಹಗಳನ್ನು ಫಾರ್ಮಲಿನ್‌ ದ್ರಾವಣದಿಂದ ಸಂಸ್ಕರಿಸಿಡಲಾಗುತ್ತದೆ. ತದನಂತರ ದೇಹವನ್ನು ವೈದ್ಯಕೀಯ ಕಾಲೇಜು ತನ್ನ ವಿದ್ಯಾರ್ಥಿಗಳಿಗೆ ಅಂಗರಚನಾ ಶಾಸ್ತ್ರವನ್ನು ಕಲಿಸಲು ಉಪಯೋಗಿಸುತ್ತದೆ.

ದೇಹದಾನಿಯ ಮರಣದ ನಂತರ ಸಂಬಂಧಿಕರಲ್ಲಿ ಭಿನ್ನಾಭಿಪ್ರಾಯವಿದ್ದರೆ ಏನು ಮಾಡಬೇಕು ? ದೇಹದಾನಿಯ ಮರಣದ ನಂತರ ಸಂಬಂಧಿಕರ ನಡುವೆ ಯಾವುದೇ ಸಂಘರ್ಷವಿದ್ದರೆ, ಅಂಗರಚನಾ ಶಾಸ್ತ್ರ ವಿಭಾಗ ತಮ್ಮ ಎಲ್ಲಾ ಹಕ್ಕುಗಳನ್ನು ತ್ಯಜಿಸಿ ದೇಹವನ್ನು ಸಂಬಂಧಿಕರಿಗೆ ಬಿಡುಗಡೆ ಮಾಡುತ್ತದೆ. ಒಂದು ವೇಳೆ ಮರಣದ ನಂತರ ದೇಹವನ್ನು ಇಲಾಖೆಯ ಶಿಷ್ಟಾಚಾರದ ಪ್ರಕಾರ ಸಂರಕ್ಷಿಸುವ ವಿಧಾನ ಕೈಗೊಂಡಿದ್ದರೂ ಸಹ, ದೇಹದಾನಿಯ ಸಂಬಂಧಿಕರ ವಿನಂತಿಯ ಮೇರೆಗೆ ತಮ್ಮ ಇಲಾಖೆಯು ದೇಹವನ್ನು ಸಂಬಂಧಿಕರಿಗೆ ವರ್ಗಾಯಿಸುವ ಪ್ರಯತ್ನ ಮಾಡುತ್ತದೆ (ಸಂರಕ್ಷಿಸಿದ ಖರ್ಚನ್ನು ಪಡೆದು). ಕೆಲವೊಂದು ಅಸಾಮಾನ್ಯ ಪ್ರಕರಣಗಳಲ್ಲಿ, ಸಂಬಂಧಿಕರ ಒಂದು ಗುಂಪು ದೇಹದಾನ ಪ್ರೇರೇಪಿಸಿತಾದರೂ ಮತ್ತೂಂದು ಗುಂಪು ದೇಹವನ್ನು ಇಲಾಖೆಯಿಂದ ಹಿಂದಿರುಗಿಸಲು ಪ್ರತಿಪಾದಿಸುತ್ತಾರೆ. ಇಂತಹ ಸಂದರ್ಭದಲ್ಲಿ ಎರಡೂ ಗುಂಪಿನ ಅಭಿಪ್ರಾಯ ಪಡೆದು ಸೂಕ್ತ ನಿರ್ಧಾರ ಮಾಡುವ ಅಧಿಕಾರ ಇಲಾಖೆಗೆ ಸಂಬಂಧಪಟ್ಟಿರುತ್ತದೆ. ಸಂಬಂಧಿಕರು ದೇಹವನ್ನು ಹಸ್ತಾಂತರಿಸಲು ಸ್ವತಂತ್ರರು ಅಥವಾ ನಿರಾಕರಿಸಲೂಬಹುದು. ಇಲ್ಲಿ ಯಾವುದೇ ಪೊಲೀಸ್‌ ದೂರು ಇಲ್ಲವೇ ಕಾನೂನು ತನಿಖೆ ನಡೆಸುವುದಿಲ್ಲ.

18 ಮತ್ತು 19ನೇ ಶತಮಾನದಲ್ಲಾದ ವೈದ್ಯಕೀಯ ಕ್ರಾಂತಿಯಿಂದ ವಿಶ್ವದ ವಿವಿಧ ಭಾಗಗಳಲ್ಲಿ ವೈದ್ಯ ಕಲಿಕೆಗಾಗಿ ಅನೇಕ ಮೃತದೇಹ ಬಳಸಿಕೊಳ್ಳಲಾಗಿತ್ತು ಮತ್ತು ಇದರಿಂದ ದೇಹಗಳ ಕೊರತೆಯುಂಟಾಗಿತ್ತು. ಹಣಕ್ಕಾಗಿ ವಲಸೆ ಬಂದಂತಹ ಅಥವಾ ನಿರ್ಗತಿಕರನ್ನು ಸಾಯಿಸಿ ಮೃತ ದೇಹಗಳನ್ನು ಮಾರುವಂತಹ ಪರಿಸ್ಥಿತಿ ಬಂದಿತ್ತು. ಇದು ಅಂಗರಚನಾ ಶಾಸ್ತ್ರದ ಇತಿಹಾಸ ದಲ್ಲಿ “ಕಪ್ಪು ಯುಗ’ವೆಂದೇ ಕರೆಯಲ್ಪಟ್ಟಿತು. ಇಂತಹ ಸಂದಿಗ್ಧ ಪರಿಸ್ಥಿತಿಯನ್ನು ಕಾನೂನು ಪ್ರಕಾರ ನಿಭಾಯಿ ಸಲು ಅನಾಟಮಿ ಆ್ಯಕ್ಟನ್ನು ಪ್ರಪಂಚದಲ್ಲಿ ಮೊದಲ ಬಾರಿಗೆ ಮೆಸಚುಸೆಟ್ಸ್‌ ಕಾಯ್ದೆಯನ್ನು 1832ರಲ್ಲಿ ಜಾರಿಗೆ ತರಲಾಯ್ತು. ಭಾರತದಲ್ಲೂ ತನ್ನ ಮೊದಲ ಅನಾಟಮಿ ಆ್ಯಕ್ಟನ್ನು (ಬಾಂಬೆ ಕಾಯ್ದೆ ) 1949ರಲ್ಲಿ ತರಲಾಯ್ತು. ಬಾಂಬೆ ಕಾಯ್ದೆಯ ಮೂಲ ಉದ್ದೇಶವನ್ನು ಸ್ವಲ್ಪ ತಿದ್ದುಪಡಿಯೊಂದಿಗೆ ಎಲ್ಲ ರಾಜ್ಯಗಳು ತಮ್ಮದೇ ರಾಜ್ಯದ ಅನಾಟಮಿ ಕಾಯ್ದೆಯನ್ನು ಜಾರಿಗೆ ತಂದವು.

ದೇಹದಾನವನ್ನು ಏಕೆ ಮಾಡಬೇಕು? :  ಪ್ರಪಂಚದಲ್ಲಿ ಸ್ವ ಇಚ್ಛೆಯಿಂದ ಮಾಡಿದ ದಾನಗಳೆಲ್ಲ ಶ್ರೇಷ್ಠವೇ ಆಗಿರುತ್ತವೆ ಮತ್ತು ಪ್ರತಿ ದಾನದಲ್ಲೂ ಒಂದು ವಿಶೇಷವಿರುತ್ತದೆ. ದೇಹದಾನ ಮಾಡಿದ ಶವವನ್ನು ಪ್ರಥಮ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಅಂಗರಚನಾ ಶಾಸ್ತ್ರದ ಕಲಿಕೆಗೋಸ್ಕರ ಬಳಸಲು ಅನುಮತಿ ಇರುತ್ತದೆ. ಭಾರತೀಯ ವೈದ್ಯಕೀಯ ಸಂಸ್ಥೆ ನಿಗದಿಪಡಿಸಿರುವಂತೆ, ಪ್ರತೀ ದೇಹವನ್ನು 10ರಿಂದ 15 ವಿದ್ಯಾರ್ಥಿಗಳ ಕಲಿಕೆಗೆ ಬಳಸಲಾಗುತ್ತದೆ. ಅಂದರೆ 10ರಿಂದ 15 ಉತ್ತಮ ವೈದ್ಯರನ್ನು ಸಮಾಜಕ್ಕೆ ಕೊಡುವ ಸಾಮರ್ಥ್ಯವಿರುತ್ತದೆ. ಪ್ರತೀ ದೇಹವೂ ಅನೇಕ ನ್ಯೂನತೆಗಳನ್ನು ಹೊಂದಿರುತ್ತವೆ. ಇದನ್ನು ಅರಿತಾಗ ಮಾತ್ರ ಒಬ್ಬ ವೈದ್ಯ ಉತ್ತಮ ಚಿಕಿತ್ಸೆ ಅಥವಾ ಶಸ್ತ್ರಚಿಕಿತ್ಸೆ ಮಾಡಲು ಪರಿಣಿತಿ ಹೊಂದಬಹುದು. ಎರಡನೆಯದಾಗಿ, ದೇಹದಾನವನ್ನು ವೈದ್ಯಕೀಯ ಸಂಶೋಧನೆಗಾಗಿ ಬಳಸಲಾಗುತ್ತದೆ. ಇದರಿಂದ ವೈದ್ಯಕೀಯ ವಿಜ್ಞಾನ ಮುಂದುವರಿಯಲು ಸಹಕಾರಿಯಾಗುತ್ತದೆ. ಕೊನೆಯದಾಗಿ ದೇಹಗಳನ್ನು ಅಂತಾರಾಜ್ಯ ಅಥವಾ ವಿದೇಶ ಮಟ್ಟದಲ್ಲಿ ಶವದ ಪ್ರಯೋಗಾಲಯ ಅಥವಾ ಕಾರ್ಯಾಗಾರವನ್ನು ಏರ್ಪಡಿಸಿ ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳಿಗೆ ಮತ್ತು ವೈದ್ಯರಿಗೆ ಮುಂದುವರಿದ ವೈದ್ಯಕೀಯ ಶಿಕ್ಷಣದ ಮೂಲಕ ಹೆಸರಾಂತ ವೈದ್ಯರಿಂದ ಹೊಸ ಬಗೆಯ ಚಿಕಿತ್ಸೆ ಕುರಿತು ಅರಿವು ಮೂಡಿಸಲಾಗುತ್ತದೆ.

ದೇಹದಾನವನ್ನು ಯಾರು ಮಾಡಬಹುದು ? :  ಹದಿನೆಂಟು ವರ್ಷ ಪ್ರಾಯದ ನಂತರ ಯಾವುದೇ ವ್ಯಕ್ತಿಯು ತನ್ನ ಸ್ವ ಇಚ್ಛೆಯಿಂದ ದೇಹದಾನ ಮಾಡಬಹುದು. ಇದರಲ್ಲಿ ಲಿಂಗಭೇದ, ಪ್ರಾಯ ಅಥವಾ ದೇಹದ ಗಾತ್ರ/ಪ್ರಕಾರದ ಮಿತಿಗಳಿಲ್ಲ. ಆದರೆ ದೀರ್ಘ‌ಕಾಲದ ಅನಾರೋಗ್ಯ ದೇಹದ ಮೇಲೆ ವಿಪರೀತ ಶಸ್ತ್ರಚಿಕಿತ್ಸೆ, ಬಹು ಅಂಗಾಂಗ ದಾನ ಮಾಡಿದ ವ್ಯಕ್ತಿ, ಅಪಘಾತದಿಂದ ಸಾಮಾನ್ಯವಾಗಿ ದೇಹದ ಅಂಗರಚನೆಯ ಅಭ್ಯಾಸ ಕಷ್ಟಕರವಾಗುತ್ತದೆ ಮತ್ತು ಉಪಯೋಗವಾಗುವುದಿಲ್ಲ. ಆದರೂ ಅಂತಹ ದೇಹಗಳನ್ನು ಸಹಾ ನಾವು ಸ್ವೀಕರಿಸುತ್ತೇವೆ. ಎಚ್‌ ಐ ವಿ ಸೋಂಕು ಅಥವಾ ಕೋವಿಡ್‌ 19 ಖಾಯಿಲೆಗಳು ಒಬ್ಬರಿಂದ ಮತ್ತೂಬ್ಬರಿಗೆ ಸುಲಭವಾಗಿ ಹರಡುವುದು. ಆದುದರಿಂದ ನಮ್ಮ ಇಲಾಖೆಯ ಸಿಬಂದಿ ಮತ್ತು ಸಂಸ್ಥೆಯನ್ನು ರಕ್ಷಿಸಲು ಸಲುವಾಗಿ ಅಂತಹ ದಾನಿಗಳನ್ನು ನೋಂದಾಯಿಸಲು ಅಥವಾ ತೆಗೆದುಕೊಳ್ಳಲು ಸರಕಾರ ನಮಗೆ ಅನುಮತಿಸುವುದಿಲ್ಲ.

ದೇಹದಾನದ ಬಗ್ಗೆ ಸಮಾಜದಲ್ಲಿ ಮುಖ್ಯ ಅಡಚಣೆ ಏನು ? :  ಮೊದಲ ಕಾರಣ ಧಾರ್ಮಿಕ ನಂಬಿಕೆಗಳು ಮತ್ತು ತಪ್ಪು ಕಲ್ಪನೆಗಳು. ಏನೆಂದರೆ ದೇಹವನ್ನು ಅಂತ್ಯ ಸಂಸ್ಕಾರ ಮಾಡದಿದ್ದರೆ ಆತ್ಮಗಳಿಗೆ ಮುಕ್ತಿ ಸಿಗುವುದಿಲ್ಲ ಎಂದು. ದೇಹದಾನದ ವಿಧಿವಿಧಾನದಿಂದ ಆತಂಕ ಮತ್ತು ಭಯ. ಜನರಲ್ಲಿನ ಉದಾಸೀನ ಮನೋಭಾವ, ಅರಿವಿನ ಕೊರತೆಯಿಂದ ಕಾನೂನು ತೊಡಕುಗಳ ಮೂಢನಂಬಿಕೆ ಮತ್ತು ಕೆಲವೊಮ್ಮೆ ಆಸ್ಪತ್ರೆಗಳಲ್ಲಿ ನಡೆದ ಅಹಿತಕರ ಘಟನೆಗಳು ಇದಕ್ಕೆ ಕಾರಣವಾಗಿವೆ.

ದೇಹದಾನಿಯ ಸಂಬಂಧಿಕರು ಇಚ್ಛಿಸಿದಲ್ಲಿ ಅಂತ್ಯಕ್ರಿಯೆಗೆ ಅಥವಾ ಧಾರ್ಮಿಕ ಉದ್ದೇಶಗಳಿಗೆ ದೇಹದ ಒಂದು ಸಣ್ಣ ಭಾಗವನ್ನು ಉದಾಹರಣೆಗೆ ಕಿರು ಬೆರಳು ಅಥವಾ ಕಾಲಿನ ಬೆರಳನ್ನು ನೀಡಲಾಗುವುದು. ಅಂಗರಚನಾ ಶಾಸ್ತ್ರದ ಅಧ್ಯಯನ ಪೂರ್ಣಗೊಂಡ ನಂತರ ದಾನಿಯ ದೇಹವನ್ನು ಸಂಪೂರ್ಣವಾಗಿ ಹಿಂದಿರುಗಿಸುವ ಪ್ರಕ್ರಿಯೆ ಪ್ರಾಯೋಗಿಕವಾಗಿ ಅಸಾಧ್ಯವಾಗಿರುತ್ತದೆ.

ದೇಹದಾನಿಗಳಿಗೆ ಕೊನೆಯ ಮಾತು :  “”ಪರೋಪಕಾರಂ ಇದಂ ಶರೀರಂ” ಎಂಬಂತೆ ಮನುಷ್ಯ ತನ್ನ ಜೀವಿತಾವಧಿಯಲ್ಲಿ ಪುಣ್ಯ ಕಾರ್ಯಗಳನ್ನು ಮಾಡಿ ಒಳ್ಳೆಯವನೆನಿಸಿಕೊಂಡಂತೆ, ಮರಣದ ಬಳಿಕವೂ ನಮ್ಮ ದೇಹವನ್ನು ವೈದ್ಯಕೀಯ ವಿದ್ಯಾರ್ಜನೆಗೆ ಮತ್ತು ಸಂಶೋಧನೆಗೋಸ್ಕರ ದಾನಮಾಡಿದಲ್ಲಿ ಪ್ರತಿಯೊಂದು ದಾನಿಯೂ ಸಹ ಹತ್ತಾರು ಉತ್ತಮ ವೈದ್ಯರನ್ನು ಸಮಾಜಕ್ಕೆ ನೀಡುವಲ್ಲಿ ಸಹಕಾರಿಯಾಗಬಹುದು. ಈ ಹತ್ತಾರು ವೈದ್ಯರು ತಮ್ಮ ಜೀವಿತಾವಧಿಯಲ್ಲಿ ಲಕ್ಷಾಂತರ ರೋಗಿಗಳ ಪ್ರಾಣರಕ್ಷಣೆ ಮಾಡುವರು. ವೈದ್ಯಕೀಯ ವಿಜ್ಞಾನ ಮಂದುವರಿಯಲು ಈ ನಮ್ಮ ದೇಹದಾನ ನಾವು ಸಮಾಜಕ್ಕೆ ನೀಡುವ ಅಂತಿಮ ಮತ್ತು ಅತ್ಯುತ್ತಮ ಕೊಡುಗೆಯಾಗಿರುತ್ತದೆ. ಇಲ್ಲಿಯವರೆಗೂ ಪ್ರಪಂಚದ ಪ್ರತಿಯೊಂದು ವೈದ್ಯಕೀಯ ವಿದ್ಯಾ ಸಂಸ್ಥೆಗಳಿಗೆ ದೇಹದಾನದಿಂದ ಮತ್ತು ವಾರೀಸುದಾರರಿಲ್ಲದ ದೇಹಗಳು ಮಾತ್ರ ಮರಣದ ನಂತರ ಉಪಯೋಗಿಸಲ್ಪಡುತ್ತವೆ. ಸ್ವಯಂ ಪ್ರೇರಿತ ದೇಹದಾನದಿಂದ ಮಾತ್ರ ನಾವು ನಮ್ಮ ದೇಶದಲ್ಲಿ ಉತ್ತಮ ವೈದ್ಯರನ್ನು ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಬಹಿರಂಗಪಡಿಸಲಾಗದ ಕಾಯಿಲೆಗಳಿಗೆ ಕಾರಣಗಳು ಅಥವಾ ನಿರ್ದಿಷ್ಟ ಚಿಕಿತ್ಸೆ ಕಂಡುಹಿಡಿಯಲು ಸಹಕಾರಿಯಾಗುತ್ತದೆ.

ದೇಹದಾನ ಮತ್ತು ಅಂಗಾಂಗ ದಾನದ ವ್ಯತ್ಯಾಸಗಳು :  ದೇಹದಾನವು ಮರಣದ ನಂತರ ಸ್ವಯಂ ಪ್ರೇರಿತವಾಗಿ ತನ್ನ ದೇಹವನ್ನು ವೈದ್ಯಕೀಯ ವಿದ್ಯಾಭ್ಯಾಸ ಮತ್ತು ಸಂಶೋಧನೆಗಾಗಿ ನೀಡುವ ಪ್ರಕ್ರಿಯೆ. ಇಲ್ಲಿ ಸಂಪೂರ್ಣ ದೇಹವನ್ನು ದಾನ ಮಾಡಲಾಗುವುದು. ಆದರೆ, ಮೆದುಳು / ನರಮಂಡಲ ನಿಷ್ಕ್ರಿಯವಾದಾಗ ಮತ್ತು ಅಂತಹ ವ್ಯಕ್ತಿಯ ಚಿಕಿತ್ಸೆಯ ನಂತರವೂ ಸಹ ದೇಹವು ಸಹಜ ಸ್ಥಿತಿಗೆ ಬರುವಂತಹ ಯಾವುದೇ ಲಕ್ಷಣಗಳು ತೋರಲ್ಪಡದ (ಕೋಮಾ) ಪರಿಸ್ಥಿತಿ ಇದ್ದಲ್ಲಿ ಅಂತಹ ವ್ಯಕ್ತಿಯ ಸಂಬಂಧಿಗಳು ಅಂಗಾಂಗ ದಾನಕ್ಕೆ ಮೊರೆ ಹೋಗಬಹುದು.

 

ಡಾ| ಪ್ರಸನ ಎಲ್‌.ಸಿ.

ವಿಭಾಗ ಮುಖ್ಯಸ್ಥರು,

ಡಾ| ನಂದಿನಿ ಪಿ ಭಟ್‌

ಬೋಧಕರು

ಕೆ. ಗಣೇಶ ಕಿಣಿ,

ಅನಾಟಮಿ ವಿಭಾಗ, ಕೆ.ಎಂ.ಸಿ. ಮಣಿಪಾಲ

ಟಾಪ್ ನ್ಯೂಸ್

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

5

Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ

Malaysian ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

BJP ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ, ನಾಳೆ ಕಾಂಗ್ರೆಸ್ ಸೇರ್ಪಡೆ

BJP ಯಿಂದ ನಿರ್ಲಕ್ಷ್ಯ… ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ

Kollywood: ಚಿನ್ನದ ಅಡ್ಡೆಗೆ ʼಕೂಲಿʼಯಾಗಿ ಬಂದ ತಲೈವರ್; ಟೈಟಲ್‌ ಟೀಸರ್‌ ಔಟ್

Kollywood: ಚಿನ್ನದ ಅಡ್ಡೆಗೆ ʼಕೂಲಿʼಯಾಗಿ ಬಂದ ತಲೈವರ್; ಟೈಟಲ್‌ ಟೀಸರ್‌ ಔಟ್

Aravind kejriwal

Insulin: ಶುಗರ್ ಲೆವೆಲ್ ಏರಿಕೆ… ಜೈಲಿನಲ್ಲಿರುವ ಕೇಜ್ರಿವಾಲ್ ಗೆ ಇನ್ಸುಲಿನ್ ನೀಡಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Bengalur: ವೈದ್ಯರ ನಿರ್ಲಕ್ಷ್ಯಕ್ಕೆ ರೋಗಿ ಸಾವು; ಠಾಣೆ ಬಳಿ ಶವ ಇರಿಸಿ ಪ್ರತಿಭಟನೆ

Bengalur: ವೈದ್ಯರ ನಿರ್ಲಕ್ಷ್ಯಕ್ಕೆ ರೋಗಿ ಸಾವು; ಠಾಣೆ ಬಳಿ ಶವ ಇರಿಸಿ ಪ್ರತಿಭಟನೆ

Udupi-Chikmagalur Poll: ಬ್ರಹ್ಮಾವರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ- ಇಂದು ಸಾರ್ವಜನಿಕ ಸಭೆ

Udupi-Chikmagalur Poll: ಬ್ರಹ್ಮಾವರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ- ಇಂದು ಸಾರ್ವಜನಿಕ ಸಭೆ

Police Raid: 346 ರೌಡಿಶೀಟರ್‌ಗಳ ಮನೆಗಳ ಮೇಲೆ ದಾಳಿ

Police Raid: 346 ರೌಡಿಶೀಟರ್‌ಗಳ ಮನೆಗಳ ಮೇಲೆ ದಾಳಿ

Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್‌ ದಾಖಲು

Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್‌ ದಾಖಲು

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.