ಉತ್ತಮ ಆರೋಗ್ಯಕ್ಕೆ ಬಾದಾಮಿ
Team Udayavani, Aug 20, 2019, 5:00 AM IST
ಮನುಷ್ಯನಿಗೆ ಆರೋಗ್ಯಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲ. ಆರೋಗ್ಯ ಚೆನ್ನಾಗಿರಬೇಕಾದರೆ ನಮ್ಮ ದಿನನಿತ್ಯದ ಚಟುವಟಿಕೆಗಳೂ ಚೆನ್ನಾಗಿರಬೇಕು. ಪ್ರತಿದಿನ ನಾವು ಮಾಡುವ ಕೆಲಸ, ತಿನ್ನುವ ಆಹಾರದ ಮೇಲೆ ಎಚ್ಚರವಿರಬೇಕು. ಪೌಷ್ಟಿಕಾಂಶಗಳುಳ್ಳ ಆಹಾರ ಸೇವನೆಯಿಂದ ಉತ್ತಮ ಆರೋಗ್ಯ ಪಡೆಯಲು ಸಾಧ್ಯ. ಬಾದಾಮಿ, ಡ್ರೈ ಪ್ರೊಟ್ಸ್ ಸೇವನೆ ಮಾಡುವುದರಿಂದ ಹೆಚ್ಚಿನ ಆರೋಗ್ಯ ಸಮಸ್ಯೆಗಳ ನಿಯಂತ್ರಣ ಸಾಧ್ಯ
ಬಾದಾಮಿ ಹೆಚ್ಚು ಪೌಷ್ಟಿಕಾಂಶವುಳ್ಳ ಆಹಾರವಾಗಿದ್ದು, ಬಾದಾಮಿಯನ್ನು ಹಲವು ವಿಧಗಳಲ್ಲಿ ಬಳಕೆ ಮಾಡುತ್ತಾರೆ.
ಬಾದಾಮಿ ಸೇವನೆ ಹೇಗೆ?
1 ಬಾದಾಮಿಯನ್ನು ಹಲವು ರೂಪಗಳಲ್ಲಿ ಸೇವಿಸಬಹುದು. ಬಾದಾಮಿ ತಿನ್ನುವಾಗ ಅದರ ಸಿಪ್ಪೆಯೊಡನೆ ತಿನ್ನುವುದು ಹೆಚ್ಚು ಸೂಕ್ತ. ಬಾದಾಮಿ ಸಿಪ್ಪೆಯಲ್ಲೂ ಹೆಚ್ಚು ಪೌಷ್ಟಿಕಾಂಶವಿದೆ.
2 ಹುರಿದು ಕೂಡ ಸೇವಿಸಬಹುದು. ಹೆಚ್ಚಿನವರಲ್ಲಿ ಬಾದಾಮಿ ಹುರಿದು ಸೇವಿಸಿದರೆ ಅದರ ಪೌಷ್ಟಿಕಾಂಶ ಕಡಿಮೆಯಾಗುತ್ತದೆ ಎಂಬ ನಂಬಿಕೆಯಿದೆ. ಆದರೆ ಹುರಿದರೆ ನೀರಿನಾಂಶ ಕಡಿಮೆಯಾಗುವುದರ ಜತೆಗೆ ಪ್ರೊಟೀನ್ ಹೆಚ್ಚಾಗುತ್ತದೆ.
3 ನೀರಿನಲ್ಲಿ ನೆನೆಸಿಟ್ಟು ಬಾದಾಮಿ ಸೇವನೆ ಮಾಡಬಹುದು. ಇದರಿಂದ ಪೌಷ್ಟಿಕಾಂಶ ಪ್ರಮಾಣ ಹೆಚ್ಚಾಗುತ್ತದೆ. ಇದು ಕೂದಲು ಮತ್ತು ಚರ್ಮದ ಸಮಸ್ಯೆಗೂ ಹೆಚ್ಚು ಉಪಯುಕ್ತಕಾರಿ. ದಿನನಿತ್ಯ ಬಾದಾಮಿ ಸೇವನೆ ಮಾಡುವುದರಿಂದ ಕೂದಲಿನ ಬೆಳವಣೆಗೆ ಮತ್ತು ಚರ್ಮದ ಕಾಂತಿ ಹೆಚ್ಚಾಗುತ್ತದೆ.
ಪ್ರಯೋಜನಗಳು
1 ಪ್ರತಿದಿನ ಸ್ವಲ್ಪ ಪ್ರಮಾಣದಲ್ಲಿ ಬಾದಾಮಿ ಸೇವಿಸುವುದರಿಂದ ರಕ್ತದೊತ್ತಡ ನಿಯಂತ್ರಣ ಸಾಧ್ಯ.
2 ಬಾದಾಮಿ ಕೊಲೆಸ್ಟ್ರಾಲ್ ನಿಯಂತ್ರಣ ಮಾಡುವ ಶಕ್ತಿ ಹೊಂದಿದೆ.
3 2015ರಲ್ಲಿ ಮಾಡಿದ ಗೈನೋಕಾಲಜಿಕ್ ಮತ್ತು ಒಬ್‌ಸ್ಟೇಟ್ರಿಕ್ ಎಂಬ ಅಧ್ಯಯನದ ಪ್ರಕಾರ ಬಾದಾಮಿ ಸೇವನೆಯಿಂದ ಕ್ಯಾನ್ಸರ್ ಬರುವ ಸಾಧ್ಯತೆ ಕಡಿಮೆ ಎಂದು ತಿಳಿದು ಬಂದಿದೆ.
4 ಹೃದಯ ಸಂಬಂಧಿ ಸಮಸ್ಯೆ ಕಡಿಮೆಯಾಗುತ್ತದೆ.
5 ಬಾದಾಮಿಯಲ್ಲಿ ಕಡಿಮೆ ಕಾಬೋìಹೈಡ್ರೆಟ್ಸ್ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಪ್ರೊಟೀನ್ ಮತ್ತು ಫೈಬರ್ ಇರುವುದರಿಂದ ತೂಕ ಇಳಿಕೆಗೆ ಸಹಕಾರಿ.
ಒಂದು ಕಪ್ ಬಾದಾಮಿಯಲ್ಲಿ
ಶಕ್ತಿ 6.31 ಗ್ರಾಂ
ಪ್ರೊಟೀನ್ 30.24 ಗ್ರಾಂ
ಕೊಬ್ಬು 71.40 ಗ್ರಾಂ
ಫೈಬರ್ 17.9 ಗ್ರಾಂ
ಕಬ್ಬಿಣಾಂಶ 5.31 ಮಿಲಿ ಗ್ರಾಂ
ಕ್ಯಾಲ್ಸಿಯಮ್ 385 ಮಿ.ಗ್ರಾಂ.
- ರಂಜಿನಿ ಮಿತ್ತಡ್ಕ
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444