ದೀರ್ಘ‌ಕಾಲೀನ ಮತ್ತು ಹಸ್ತಕ್ಷೇಪಿತ ನೋವಿಗೆ ಸಂಬಂಧಿಸಿದ  ಸೇವೆಗಳು


Team Udayavani, Jun 13, 2021, 1:08 PM IST

Arogyavani

ದೀರ್ಘ‌ಕಾಲೀನ ನೋವು ಎಂದರೇನು?

ನೋವಿನಲ್ಲಿ ಅಲ್ಪಕಾಲೀನ ನೋವು, ದೀರ್ಘ‌ಕಾಲೀನ ನೋವು ಮತ್ತು ಕ್ಯಾನ್ಸರ್‌ ನೋವು ಎಂಬ ವ್ಯಾಪಕ ಅಸ್ವಾಸ್ಥ್ಯಗಳಿವೆ. ಅಪಘಾತ ಅಥವಾ ಮೂಳೆಮುರಿತದ ಘಟನೆಗಳ ಬಳಿಕ ಸಂಭವಿಸುವ ಅಕ್ಯೂಟ್‌ ಅಥವಾ ಅಲ್ಪಾವಧಿಯ ನೋವು, ಹಾನಿಯ ಬಗ್ಗೆ ಎಚ್ಚರಿಕೆ ನೀಡುವ ಒಳ್ಳೆಯ ಉದ್ದೇಶವನ್ನು ಒಳಗೊಂಡಿರುತ್ತದೆ. ಯಾವುದೇ ಪ್ರಸಕ್ತ ಹಾನಿಯ ಅನುಪಸ್ಥಿತಿಯಲ್ಲೂ 3 ತಿಂಗಳಿಗಿಂತಲೂ ಹೆಚ್ಚಿನ ಅವಧಿಗೆ (ಕ್ರಾನಿಕ್‌) ಎಡೆಬಿಡದೆ ಕಾಡುವ ನೋವು ಯಾವುದೇ ರೀತಿಯಲ್ಲೂ ಪ್ರಯೋಜನಕಾರಿಯಾಗಿರುವುದಿಲ್ಲ. ದೀರ್ಘಾವಧಿಯ ನೋವನ್ನು ಕಾಯಿಲೆಯೆಂದೇ ಪರಿಗಣಿಸಬೇಕಾಗುತ್ತದೆ.

ದೀರ್ಘಾವಧಿಯ ನೋವಿಗೆ ಏನು ಕಾರಣ?

ನೋವು ದೇಹದ ಯಾವುದೇ ಭಾಗದಲ್ಲೂ ಉಂಟಾಗಬಹುದು: ಚರ್ಮ, ಸ್ನಾಯು, ಕೀಲುಗಳು, ಮೂಳೆ (ನೊಸಿಸೆಪ್ಟಿವ್‌ ನೋವು); ನರಗಳು (ನ್ಯೂರೋಪತಿಕ್‌ ನೋವು ಅಥವಾ ನ್ಯೂರಾಲ್ಜಿಯಾ), ಒಳಭಾಗದ ಅಂಗಗಳು (ವಿಸೆರೆಲ್‌ ನೋವು) ಅಥವಾ ಕೆಲವೊಮ್ಮೆ ಮೇಲಿನ ಸಂರಚನೆಗಳ ಸಂಯೋಜನೆ (ಮಿಶ್ರ ನೋವು). ದೀರ್ಘಾವಧಿಯ ನೋವು ವಿವಿಧ ಕಾರಣಗಳಿಂದ ಸಂಭವಿಸಬಹುದು, ಉದಾಹರಣೆಗೆ, ಅಂಗಗಳ ಕ್ಷಯಿಸುವಿಕೆ, ಸಂಧಿವಾತ, ಉರಿಯೂತ, ನರಹಾನಿ, ಡಿಸ್ಕ್ ಪ್ರೊಲ್ಯಾಪ್ಸ್‌, ಟ್ರಾಮಾ, ಶಸ್ತ್ರಚಿಕಿತ್ಸೆ, ಮಧುಮೇಹ ಮತ್ತು ಕ್ಯಾನ್ಸರ್‌. ಕೆಲವೊಮ್ಮೆ, ಫೈಬೊÅಮಯಲ್ಜಿಯಾದಂಥ ಸ್ಥಿತಿಯಲ್ಲಿ ನೋವೇ ಒಂದು ಕಾಯಿಲೆಯಾಗಿ ಪರಿಣಮಿಸುತ್ತದೆ ಮತ್ತು ಇದಕ್ಕೆ ಸ್ಪಷ್ಟವಾದ ಕಾರಣವಿರುವುದಿಲ್ಲ.

ನೋವಿನಿಂದ ಉಪಶಮನ ಏಕೆ ಬೇಕು?

ನೋವಿಗೆ ಚಿಕಿತ್ಸೆ ಕೊಡಿಸದಿದ್ದಲ್ಲಿ ಅನೇಕ ಋಣಾತ್ಮಕ ಪರಿಣಾಮಗಳುಂಟಾಗಬಹುದು. ಉಪಶಮನವಾಗದ ನೋವು ವ್ಯಕ್ತಿಯ ದೈಹಿಕ ಮಾನಸಿಕ, ಸಾಮಾಜಿಕ, ಆರ್ಥಿಕ ಅಥವಾ ಅಧ್ಯಾತ್ಮಿಕ ಜೀವನ- ಹೀಗೆ ಎಲ್ಲ ಅಂಶಗಳ ಮೇಲೂ ಪರಿಣಾಮ ಬೀರುತ್ತದೆ.

 ನೋವೆಂಬುದು ಶಕ್ತಿಹೀನ ಸ್ಥಿತಿಯಾಗಿದ್ದು ದಿನನಿತ್ಯದ ಸಾಮಾನ್ಯ ಕೆಲಸಗಳು ಅಥವಾ ಚಟುವಟಿಕೆಗಳನ್ನು ಮಾಡುವ ವ್ಯಕ್ತಿಯ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ.

 ದೀರ್ಘಾವಧಿಯ ನೋವಿನಿಂದಾಗಿ ಹಿಂದೆ ಆನಂದಿಸುತ್ತಿದ್ದ ಚಟುವಟಿಕೆಗಳನ್ನು ಮಾಡಲು ಸಾಧ್ಯವೇ ಆಗದಿರಬಹುದು.

 ಇದರಿಂದಾಗಿ, ಕುಟುಂಬಿಕರು ಅಥವಾ ಸ್ನೇಹಿತರೊಂದಿಗೆ ಸ್ವಲ್ಪ ಸಮಯವನ್ನು ಆರಾಮವಾಗಿ ಕಳೆಯಲು ಕೂಡ ಕಷ್ಟವಾಗಬಹುದು.

 ದೀರ್ಘಾವಧಿಯ ತನಕ ನೋವಿಗೆ ಆಸ್ಪದ ಕೊಟ್ಟಲ್ಲಿ ಮೆದುಳಿನ ನರವ್ಯೂಹ ರಚನೆಯಲ್ಲಿ ವ್ಯತ್ಯಯ ಉಂಟುಮಾಡಬಹುದು ಮತ್ತು ನೋವಿಗೆ ಸಂವೇದನೆ ಹೆಚ್ಚಾಗಬಹುದು, ದೇಹದಲ್ಲಿ ನೈಸರ್ಗಿಕ ನೋವು ನಿವಾರಕಗಳನ್ನು ಸ್ರವಿಸುವ ಸಾಮರ್ಥ್ಯ ಕಡಿಮೆಯಾಗಬಹುದು, ಭಾವನಾತ್ಮಕ ಸಮಸ್ಯೆಗಳನ್ನು ಉಂಟುಮಾಡಬಹುದು (ಆತಂಕ ಮತ್ತು ಖನ್ನತೆಯಂಥ) ಮತ್ತು ಅರಿವಿನ ಸಾಮರ್ಥ್ಯ ಕಡಿಮೆಯಾಗಬಹುದು.

 ಕೆಲಸಕ್ಕೆ ಹೋಗುವವರು ರಜೆ ತೆಗೆದುಕೊಳ್ಳುವ ಒಂದು ಸಾಮಾನ್ಯ ಕಾರಣವೆಂದರೆ ಕೆಳಬೆನ್ನಿನ ನೋವು, ಕೆಲಸ ಮಾಡುವ ಸಾಮರ್ಥ್ಯ ಕಡಿಮೆಯಾಗುವುದು ಮತ್ತು ಕೆಲವೊಮ್ಮೆ ಕೆಲಸ ಕಳೆದುಕೊಳ್ಳುವುದು.

 ದೀರ್ಘ‌ಕಾಲೀನ ನೋವಿನಿಂದಾಗಿ ಚಲನೆಯ ಸಾಮರ್ಥ್ಯ ಕುಂದುತ್ತದೆ ಮತ್ತು ದೇಹಸ್ಥಿತಿ ದುಸ್ತರಗೊಳ್ಳುತ್ತದೆ.

 ಸಕಾಲದಲ್ಲಿ ಮತ್ತು ಸೂಕ್ತ ಚಿಕಿತ್ಸೆ ಕೊಡಿಸಿ ದಾಗ ದೀರ್ಘಾವಧಿ ನೋವಿನ ಈ ಋಣಾತ್ಮಕ ಪರಿಣಾಮಗಳನ್ನು ತಡೆಗಟ್ಟ ಬಹುದು ಮತ್ತು ಕೆಲವೊಮ್ಮೆ ಪೂರ್ವಸ್ಥಿತಿಗೆ ಮರಳಬಹುದು ಎಂಬುದನ್ನು ಸಂಶೋಧನೆಯೂ ತೋರಿಸಿಕೊಟ್ಟಿದೆ.

ನೋವಿನ ಔಷಧ ವಿಭಾಗ (ಪೈನ್‌ ಮೆಡಿಸಿನ್‌) ಎಂದರೇನು?

ಪೈನ್‌ ಮೆಡಿಸಿನ್‌ ಅಥವಾ ಸಾಮಾನ್ಯವಾಗಿ ಕರೆಯುವಂತೆ ನೋವು ನಿರ್ವಹಣೆ ಎಂಬುದು ದೀರ್ಘಾವಧಿ ನೋವಿನ ಪತ್ತೆ ಮತ್ತು ಚಿಕಿತ್ಸೆಯ ಮೇಲೆ ಕೇಂದ್ರಿತವಾಗಿರುವ ಒಂದು ವೈದ್ಯಕೀಯ ವಿಭಾಗ. ಈ ವಿಭಾಗವು ಹಲವು ಚಿಕಿತ್ಸೆಗಳ ಸಂಯೋಜನೆಯನ್ನು ಹೊಂದಿದ್ದು, ನೋವಿನಿಂದ ಬಳಲುತ್ತಿರುವ ವ್ಯಕ್ತಿಯ ನೋವಿನ ಉತ್ತಮ ನಿರ್ವಹಣೆ ಮಾಡಲು, ದೀರ್ಘಾವಧಿ ನೋವಿಗೆ ಸಂಬಂಧಿಸಿದ ನರಳುವಿಕೆ

ಯನ್ನು ಕಡಿಮೆ ಮಾಡಲು, ಜೀವನ ಗುಣಮಟ್ಟ ಸುಧಾರಿಸಲು ಮತ್ತು ಬದುಕಿನ ಮೇಲೆ ನಿಯಂತ್ರಣ ಮರುಸಾಧಿಸಲು ನೆರವಾಗುತ್ತದೆ. ನೋವು ನಿರ್ವಹಣೆಯ ಗುರಿಯೇನೆಂದರೆ ದೀರ್ಘಾವಧಿ ನೋವಿಗೆ ಸಂಬಂಧಪಟ್ಟ ಎಲ್ಲ ಅಂಶಗಳನ್ನು ಪರಿಹರಿಸುವುದು.

ಪೈನ್‌ ಕ್ಲಿನಿಕ್‌ ಎಂದರೇನು?

ನೋವು ನಿರ್ವಹಣ ಸೇವೆಗಳು ಅಥವಾ ಪೈನ್‌ ಕ್ಲಿನಿಕ್‌ಗಳು ಎಂದೂ ಕರೆಯಲಾಗುತ್ತದೆ. ಇವು ಪರಿಣಿತ ಆರೋಗ್ಯ ಆರೈಕೆ ಸೇವೆಗಳಾಗಿದ್ದು, ವಿಭಿನ್ನ ಬಗೆಯ ನೋವಿನ ಸೂಕ್ತ ಪತ್ತೆ ಮತ್ತು ನಿರ್ವಹಣೆಯ ಮೇಲೆ ಕೇಂದ್ರೀಕೃತವಾಗಿರುತ್ತವೆ. ಮಣಿಪಾಲದ ಕಸ್ತೂರ್ಬಾ ಮೆಡಿಕಲ್‌ ಕಾಲೇಜು ಮತ್ತು ಆಸ್ಪತ್ರೆಯ ಕ್ರಾನಿಕ್‌ ಪೈನ್‌ ಸರ್ವೀಸ್‌ ಅತ್ಯಾಧುನಿಕ, ಸಮಗ್ರ ನೋವು ನಿರ್ವಹಣ ಸೇವೆಯಾಗಿದ್ದು, ದೀರ್ಘ‌ಕಾಲದಿಂದ ನಿಭಾಯಿಸಲು ಅಸಾಧ್ಯವಾದ ನೋವಿನಿಂದ ನರಳುತ್ತಿರುವವರಿಗೆ ತಮ್ಮ ನೋವನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಮತ್ತು ಅವರ ಜೀವ ಗುಣಮಟ್ಟವನ್ನು ಸುಧಾರಿಸಲು ನೆರವಾಗುವ ಉದ್ದೇಶವನ್ನು ಹೊಂದಿದೆ.

ನೋವು ನಿರ್ವಹಣಾ ತಜ್ಞರು ಯಾರು?

ನೋವು ನಿರ್ವಹಣ ತಜ್ಞರು ವಿವಿಧ ಬಗೆಯ ದೀರ್ಘ‌ಕಾಲೀನ ನೋವಿನ ಮೌಲ್ಯಮಾಪನ, ರೋಗಪತ್ತೆ ಮತ್ತು ಚಿಕಿತ್ಸೆಯಲ್ಲಿ ನುರಿತ ತರಬೇತಿ ಪಡೆದ ಪರಿಣತ ವೈದ್ಯರಾಗಿರುತ್ತಾರೆ. ವೈದ್ಯಕೀಯ ಕ್ಷೇತ್ರವು ನೋವಿನ ಸಂಕೀರ್ಣತೆಯ ಬಗ್ಗೆ ಹೆಚ್ಚು ಹೆಚ್ಚು ತಿಳಿದಷ್ಟೂ, ಈ ನೋವಿನ ಸ್ಥಿತಿಗಳ ಬಗ್ಗೆ ವಿಶೇಷ ತಿಳಿವಳಿಕೆ ಮತ್ತು ಕೌಶಲವಿರುವ ವೈದ್ಯರು ಇವುಗಳಿಗೆ ಚಿಕಿತ್ಸೆ ನೀಡುವುದು ಸಹ ಮಹತ್ವದ್ದಾಗಿರುತ್ತದೆ. ನೋವಿಗೆ ಚಿಕಿತ್ಸೆ ನೀಡಲು ನೊವು ನಿರ್ವಹಣ ಪರಿಣಿತರು ಕೆಳಗಿನವನ್ನು ಉಪಯೋಗಿಸುತ್ತಾರೆ:

 ನೋವಿನ ಪ್ಯಾಥೊಫಿಸಿಯಾಲಜಿಯ (ರೋಗಶಾಸ್ತ್ರ) ಬಗ್ಗೆ ಆಳವಾದ ಅರಿವು

  ನೋವಿನ ಮೂಲವನ್ನು ನಿರ್ಧರಿಸುವುದು

  ನೋವಿನ ಸಂಕೀರ್ಣ ಸ್ಥಿತಿಗಳನ್ನು ಹೊಂದಿರುವ ರೋಗಿಗಳ ಮೌಲ್ಯ ಮಾಪನ ಮಾಡುವ ಸಾಮರ್ಥ್ಯ

  ನೋವಿನ ಸ್ಥಿತಿಗಳ ರೋಗಪತ್ತೆಗೆ ಅಗತ್ಯವಿರುವ ವಿಶೇಷ ಪರೀಕ್ಷೆಗಳ ಬಗ್ಗೆ ತಿಳಿವಳಿಕೆ

  ವಿವಿಧ ನೋವುಗಳಿಗೆ ಸೂಕ್ತ ಔಷಧದ ಸಲಹೆ ನೀಡುವುದು

  ನರಗಳಲ್ಲಿ ತಡೆ (ನರ್ವ್‌ ಬ್ಲಾಕ್‌), ಬೆನ್ನುಹುರಿಯ ಚುಚ್ಚುಮದ್ದು ಮತ್ತು ಇತರ  ಪ್ರಕ್ರಿಯೆಗಳಂಥ ವಿಶೇಷ ಕಾರ್ಯವಿಧಾನಗಳನ್ನು ನಡೆಸುವುದು.

  ಕೇವಲ ನೋವಿಗೆ ಚಿಕಿತ್ಸೆ ಒದಗಿಸುವುದು ಮಾತ್ರವಲ್ಲದೆ ಫ‌ಂಕ್ಷನ್‌ ಮೊಬಿಲಿಟಿ (ಚಲನೆ) ಮತ್ತು ಫ‌ಂಕ್ಷನಲ್‌ ಇಂಡಿಪೆಂಡೆನ್ಸ್‌ (ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವ ಸಾಮರ್ಥ್ಯ) ಹೆಚ್ಚಿಸಲು ಫಿಸಿಯೋಥೆರಪಿ ಮತ್ತು ಆಕ್ಯುಪೇಶನಲ್‌ ಥೆರಪಿಯಂಥ ಇತರ ಸ್ಪೆಷಾಲಿಟಿ ಸೇವೆಗಳೊಂದಿಗೆ ಸಂಯೋಜನೆ ಏರ್ಪಡಿಸುವುದು.

  ನೋವು ನಿರ್ವಹಣೆಗೆ ಪ್ರತಿವರ್ಷ ಲಭ್ಯವಾಗುತ್ತಿರುವ ಅನೇಕ ಹೊಸ ಔಷಧಗಳು ಮತ್ತು ಕಾರ್ಯವಿಧಾನಗಳ ಜತೆಗೆ, ನೋವು ನಿರ್ವಹಣ ತಜ್ಞರು ತಮ್ಮ ರೋಗಿಗಳಿಗೆ ಸುರಕ್ಷಿತವಾಗಿ ಮತ್ತು ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡುವಂತಾಗಲು ಈ ಅರಿವನ್ನು ಬಳಸಿಕೊಳ್ಳುವ ಕುರಿತು ವಿಶೇಷ ತರಬೇತಿ ಪಡೆದಿರುತ್ತಾರೆ.

ಪೈನ್‌ ಕ್ಲಿನಿಕ್‌ನಲ್ಲಿ ನೋವಿನ ನಿರ್ವಹಣೆಗೆ  ಬಳಸುವ ಸಾಮಾನ್ಯ ಚಿಕಿತ್ಸಾ ವಿಧಾನಗಳು  ಯಾವುವು?

ನೋವು ನಿರ್ವಹಣ ತಜ್ಞರು, ರೋಗಿಯ ನೋವಿನ ಉತ್ತಮ ನಿರ್ವಹಣೆಗಾಗಿ ಅನೇಕ ಚಿಕಿತ್ಸಾ ವಿಧಾನಗಳನ್ನು ಅನುಸರಿಸುವ ಮೂಲಕ ರೋಗಿಯ ಸಮಗ್ರ ನೋವು

ನಿರ್ವಹಣೆಗೆ ಒತ್ತು ನೀಡುತ್ತಾರೆ.  ಪೈನ್‌ಕ್ಲಿನಿಕ್‌ನಲ್ಲಿ ಬಳಸುವ ಕೆಲವು ಸಾಮಾನ್ಯ ಚಿಕಿತ್ಸಾ ವಿಧಾನಗಳೆಂದರೆ ಫಾರ್ಮ ಕೊಥೆರಪಿ, ಟ್ರಾನ್ಸ್‌ ಕ್ಯುಟೇನಿಯಸ್‌ ಇಲೆಕ್ಟ್ರಿಕಲ್‌ ನರ್ವ್‌ ಸ್ಟಿಮ್ಯುಲೇಷನ್‌ , ಆಕ್ಯುಪಂಕ್ಚರ್‌ ಮತ್ತು ಇಂಟರ್‌ವೆನ್ಶನಲ್‌ ನೋವು ನಿರ್ವಹಣೆಯಂಥ ನಾನ್‌-ಫಾರ್ಮ ಕೊಲಾಜಿಕಲ್‌ ನಿರ್ವಹಣ ವಿಧಾನಗಳು.

ಇಂಟರ್ವೆನ್ಷನಲ್‌ (ಹಸ್ತಕ್ಷೇಪಿತ)  ನೋವು ನಿರ್ವಹಣೆ ಎಂದರೇನು?

ರೂಪಾಧಾರಿತ -ಮಾರ್ಗದರ್ಶನದಲ್ಲಿ ದೇಹದ ನಿರ್ದಿಷ್ಟ ಭಾಗಗಳಿಗೆ ನೋವು ನಿವಾರಕ ಚುಚ್ಚುಮದ್ದನ್ನು  ಕೊಡುವ ಮೂಲಕ ಇಂಟರ್ವೆನ್ಶನಲ್‌ ನೋವು ನಿರ್ವಹಣೆಯು ದೀರ್ಘ‌ಕಾಲೀನ ನೋವಿನ ನಿರ್ವಹಣೆ ಮಾಡುತ್ತದೆ. ದೈನಂದಿನ ಚಟುವಟಿಕೆಗಳಿಗೆ ಅಡ್ಡಿಮಾಡುವಷ್ಟು ತೀವ್ರ ಪ್ರಮಾಣದ ನೋವಿದ್ದಲ್ಲಿ ಅಥವಾ ಇತರ ಚಿಕಿತ್ಸೆಗಳು ನೋವನ್ನು ಕಡಿಮೆ ಮಾಡಲು ಅಸಫ‌ಲವಾದಾಗ ಸಾಮಾನ್ಯವಾಗಿ ಹಸ್ತಕ್ಷೇಪಗಳನ್ನು ನಡೆಸಲಾಗುತ್ತದೆ.

ಇವುಗಳಿಂದ ಕೆಳಗೆ ತೋರಿಸಿದ ಪ್ರಯೋಜನಗಳಿವೆ:

  ಅಲ್ಟ್ರಾಸೌಂಡ್‌, ಎಕ್ಸ್‌-ರೇ ಅಥವಾ ಸಿಟಿ ಸ್ಕ್ಯಾನ್‌ನಂಥ ಸುಧಾರಿತ ಇಮೇಜಿಂಗ್‌ ತಂತ್ರಜ್ಞಾನಗಳ ಮಾರ್ಗದರ್ಶನದಡಿ ಔಷಧವನ್ನು ನಿಖರವಾಗಿ ತಲುಪಿಸಲಾಗುತ್ತೆದೆ.

  ನೋವು ನಿವಾರಕ ಔಷಧಗಳನ್ನು ನೋವು ಯಾವ ಮೂಲದಿಂದ ಉಂಟಾಗುತ್ತದೋ ಅಲ್ಲಿಯೇ ನೀಡಲಾಗುವುದು; ನೀಡಲಾಗುವ ಔಷಧಿಯ ಡೋಸ್‌ನ್ನು ಕಡಿಮೆ ಮಾಡಲಾಗುವುದು.

  ಸಾಮಾನ್ಯ ಅರಿವಳಿಕೆಯ ಅಗತ್ಯವಿಲ್ಲ. ಪ್ರಕ್ರಿಯೆಯ ಸಂದರ್ಭದಲ್ಲಿ ರೋಗಿ ಎಚ್ಚರವಾಗಿಯೇ ಉಳಿಯುತ್ತಾರೆ ಮತ್ತು ಪ್ರಕ್ರಿಯೆಯ ಸಂದರ್ಭದಲ್ಲಿ ನೋವನ್ನು ಕಡಿಮೆ ಮಾಡಲು ಸ್ಥಳೀಯ ಅರಿವಳಿಕೆಯನ್ನು ನೀಡಲಾಗುವುದು.

  ಇವುಗಳಲ್ಲಿ ಹೆಚ್ಚಿನ ಪ್ರಕ್ರಿಯೆಗಳು ಗಾಯರಹಿತವಾಗಿದ್ದು, ಚರ್ಮದ ಸೀಳಿಕೆ ಅಥವಾ ಹೊಲಿಗೆ ಅಗತ್ಯವಿರುವುದಿಲ್ಲ.

 

ಲಭ್ಯವಿರುವ ಸಾಮಾನ್ಯ ಇಂಟರ್ವೆನ್ಶನಲ್‌ ನೋವು ನಿವಾರಣ ತಂತ್ರಗಳು ಯಾವುವು?

ಹಲವು ಬಗೆಯ ಇಂಟರ್ವೆನ್ಶನಲ್‌ ನೋವು ನಿವಾರಣ ತಂತ್ರಗಳು ಲಭ್ಯವಿವೆ. ಆಯ್ಕೆ ಮಾಡಿದ ಚಿಕಿತ್ಸೆಯು ನಿರ್ದಿಷ್ಟ ನೋವಿನ ಸ್ಥಿತಿಯನ್ನು ಅವಲಂಬಿಸಿರುತ್ತದೆ.

ಅವುಗಳನ್ನು ಈ ರೀತಿಯಾಗಿ ವಿಂಗಡಿಸಬಹುದು:

  ನೋವಿನ ಮೂಲಕ್ಕೆ/ಅದರ ಸುತ್ತ ಔಷಧಗಳನ್ನು ನೀಡುವ ಟಾರ್ಗೆಟೆಡ್‌ ಡೆಲಿವರಿಯು ಒಳಗೊಂಡಿರುವ ಇಂಟರ್ವೆನ್ಶನ್‌ಗಳು

 ಟ್ರಿಗರ್‌ ಪಾಯಿಂಟ್‌ ಇಂಜೆಕ್ಷನ್‌ಗಳು

 ನರಗಳಲ್ಲಿ ತಡೆ (ಬ್ಲಾಕ್‌)

 ಎಪಿಡ್ನೂರಲ್‌ ಸ್ಟೀರಾಯ್ಡ ಇಂಜೆಕ್ಷನ್‌ಗಳು

 ಕೆಳ ಬೆನ್ನು ನೋವು ಅಥವಾ ಕುತ್ತಿಗೆ ನೋವಿಗೆ

ಫಾಸೆಟ್‌ ಜಾಯಿಂಟ್‌ ಇಂಜೆಕ್ಷನ್‌ಗಳು

 ಕೆಳ ಬೆನ್ನು ನೋವಿಗೆ ಸ್ಯಾಕ್ರೊಇಲಿಯಾಕ್‌

ಜಾಯಿಂಟ್‌ ಇಂಜೆಕ್ಷನ್‌ಗಳು

  ನ್ಯೂರೊಅಬ್ಲೇಟಿವ್‌ ಪ್ರಕ್ರಿಯೆಗಳು

ರೇಡಿಯೋಫ್ರೀಕ್ವೆನ್ಸಿ ಪ್ರಕ್ರಿಯೆಗಳು.

 ಟ್ರೈಜೆಮಿನಲ್‌ ನ್ಯೂರಾಲ್ಜಿಯಾಕ್ಕಾಗಿ ರಿಟ್ರೊಗ್ಯಾಸೆರಿಯನ್‌ ಬಲೂನ್‌ ಕಂಪ್ರಷನ್‌

ಔಷಧದಿಂದ ಗುಣಪಡಿಸಲಾಗದ ಕ್ಯಾನ್ಸರ್‌ ನೋವಿಗಾಗಿ ಸೆಲಿಯಾಕ್‌ ಪ್ಲೆಕ್ಸಸ್‌ ನ್ಯೂರೊಲಿಸಿಸ್‌, ದೀರ್ಘ‌ಕಾಲೀನ ಪೆಲ್ವಿಕ್‌ ನೋವಿಗಾಗಿ ಸುಪೀರಿಯರ್‌ ಹೈಪೊಗ್ಯಾಸ್ಟ್ರಿಕ್‌ ಪ್ಲೆಕ್ಸಸ್‌ ನ್ಯೂರೊಲಿಸಿಸ್‌, ಕೊಕ್ಸಿಕೊಡೈನಿಯಾಕ್ಕಾಗಿ ಗ್ಯಾಂಗ್ಲಿಯಾನ್‌ ಇಂಪಾರ್‌ ಬ್ಲಾಕ್‌ ಅಥವಾ ಸಿಂಪಥೆಟಿಕ್‌ ಬ್ಲಾಕ್‌ ಮತ್ತು ನ್ಯೂರೊಲಿಸಿಸ್‌, ಸಿಆರ್‌ ಪಿಎಸ್‌ ಮತ್ತು ಫ್ಯಾಂಟಮ್‌ ಲಿಂಬ್‌ ಪೈನ್‌

 

  ನ್ಯೂರೊ  ಮೊಡ್ಯುಲೇಷನ್‌ ಪ್ರಕ್ರಿಯೆಗಳು

 ಪ್ಲೇಟ್‌ಲೆಟ್‌ ರಿಚ್‌ ಪ್ಲಾಸ್ಮಾ ಥೆರಪಿ

 ಪಲ್ಸ್‌$x ರೇಡಿಯೊಫ್ರೀಕ್ವೆನ್ಸಿ

 ಸ್ಪೈನಲ್‌ ಕೋರ್ಡ್‌ ಸಿಮುಲೇಟರ್‌

 ಇಂಟ್ರಾಥೆಕಲ್‌ ಪಂಪ್‌ ಇಂಪ್ಲಾಟೇಷನ್‌

  ಇತರ ಕೆಳ ಬೆನ್ನು ನೋವು ಅಥವಾ ಡಿಸ್ಕ್ ಪೊ›ಲ್ಯಾಪ್ಸ್‌ಗೆ ನ್ಯೂಕ್ಲಿಯೊಪ್ಲಾಸ್ಟಿ ಅಥವಾ ಆನ್ಯುಲೊಪ್ಲಾಸ್ಟಿ  ಮೊಣಕಾಲಿನ ಆಸ್ಟಿಯೊಆಥೆÅìç+ಟಿಸ್‌ಗಾಗಿ ವಿಸ್ಕೊಸಪ್ಲಿಮೆಂಟೇಷನ್‌.

 

ಡಾ| ಮಯಾಂಕ್‌ ಗುಪ್ತ

ಸಹ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು,

ದೀರ್ಘ‌ಕಾಲೀನ ಮತ್ತು ಹಸ್ತಕ್ಷೇಪಿತ ನೋವಿನ ವಿಭಾಗ , ಕಸ್ತೂರ್ಬಾ ಮೆಡಿಕಲ್‌ ಕಾಲೇಜು ಮತ್ತು ಆಸ್ಪತ್ರೆ, ಮಾಹೆ, ಮಣಿಪಾಲ

ಟಾಪ್ ನ್ಯೂಸ್

1-sadadas

NDA;ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವವರು ಮೋದಿ ಮತ್ತು ಶಾ ಮಾತ್ರ: ದೇವೇಗೌಡ

Arrested: 17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Arrested: 17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Padubidri: ಬೈಕಿಗೆ ಡಿಕ್ಕಿ ಹೊಡೆದ ಕಾರು… ಪೊಲೀಸ್‌ ಕಾನ್‌ಸ್ಟೆಬಲ್‌ ಗೆ ಗಾಯ

Padubidri: ಬೈಕಿಗೆ ಡಿಕ್ಕಿ ಹೊಡೆದ ಕಾರು… ಪೊಲೀಸ್‌ ಕಾನ್‌ಸ್ಟೆಬಲ್‌ ಗೆ ಗಾಯ

sumalata

Vijayendra ಜತೆ ಚರ್ಚೆ: ಮಂಡ್ಯದಲ್ಲೇ ನಿರ್ಧಾರ ತಿಳಿಸುತ್ತೇನೆ ಎಂದ ಸುಮಲತಾ

1-weqewqe

Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್

Yatindra

Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ

1-ewqeqwqe

AAP ‘ಮಹಾರ್‍ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3–child-growth

Child Growth: ಮಕ್ಕಳು ಬೇಗನೇ ದೊಡ್ಡವರಾಗುವುದು

2-bamboo-brush

Bamboo:ಶುದ್ಧ ಮತ್ತು ಹಸುರು ಪರಿಸರ ಕಾಯ್ದುಕೊಳ್ಳಲು ಹಲ್ಲುಜ್ಜುವ ಬಿದಿರಿನಬ್ರಶ್‌ ಮೊರೆಹೋಗಿ

2-kidney-day

World Kidney Day: ಹಿಮೋಡಯಾಲಿಸಿಸ್‌: ಯಾವಾಗ ಅಗತ್ಯ? ಯಾಕೆ ಆವಶ್ಯಕ? ಕಾರ್ಯನಿರ್ವಹಣೆ ಹೇಗೆ?

3-health

Rare diseases: ಅಪರೂಪದ ರೋಗಗಳು: ಕೆಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

4-cholestral

Cholesterol: ಕೊಲೆಸ್ಟರಾಲ್‌ ತಗ್ಗಿಸುವ ಔಷಧ ಸ್ಟಾಟಿನ್‌

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-sadadas

NDA;ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವವರು ಮೋದಿ ಮತ್ತು ಶಾ ಮಾತ್ರ: ದೇವೇಗೌಡ

Arrested: 17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Arrested: 17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Padubidri: ಬೈಕಿಗೆ ಡಿಕ್ಕಿ ಹೊಡೆದ ಕಾರು… ಪೊಲೀಸ್‌ ಕಾನ್‌ಸ್ಟೆಬಲ್‌ ಗೆ ಗಾಯ

Padubidri: ಬೈಕಿಗೆ ಡಿಕ್ಕಿ ಹೊಡೆದ ಕಾರು… ಪೊಲೀಸ್‌ ಕಾನ್‌ಸ್ಟೆಬಲ್‌ ಗೆ ಗಾಯ

Brahmavara: ವಿದ್ಯುತ್‌ ಕಂಬ ಮುರಿದು ಬಿದ್ದು ಯುವಕ ಮೃತ್ಯು

Brahmavara: ವಿದ್ಯುತ್‌ ಕಂಬ ಮುರಿದು ಬಿದ್ದು ಯುವಕ ಮೃತ್ಯು

sumalata

Vijayendra ಜತೆ ಚರ್ಚೆ: ಮಂಡ್ಯದಲ್ಲೇ ನಿರ್ಧಾರ ತಿಳಿಸುತ್ತೇನೆ ಎಂದ ಸುಮಲತಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.