ಸಂಧಿವಾತ

Team Udayavani, Nov 18, 2018, 6:00 AM IST

arthritis-care.jpg

ಹಿಂದಿನ ವಾರದಿಂದ- ಈ ಚಿಕಿತ್ಸೆಯಿಂದ ಗಂಟುಗಳಿಗೆ ಔಷಧಯುಕ್ತ ತೈಲಗಳ ಪ್ರಯೋಗದಿಂದ ವಾತದೋಷದ ರೂಕ್ಷತೆ ನಿವಾರಣೆಯಾಗಿ ಸ್ನಿಗ್ಧ ಗುಣದ ವೃದ್ಧಿಯಾಗುವುದರಿಂದ ಗಂಟುಗಳ ಸವಕಳಿಕೆ ತಡೆಗಟ್ಟಬಹುದಾಗಿದೆ. 

ಸಂಧಿವಾತದ ಸಮಸ್ಯೆಗೆ ಇದು ಸಹ ಒಂದು ಲಾಭದಾಯಕ ಚಿಕಿತ್ಸೆಯಾಗಿದೆ. ಈ ಚಿಕಿತ್ಸೆಯನ್ನು 7 ದಿನ, 14 ದಿನ, 21 ದಿನಗಳ ಕಾಲ ಮಾಡಿದರೆ ಇನ್ನೂ ಹೆಚ್ಚು ಲಾಭದಾಯಕವಾಗಿದೆ. ಈ ಉಪಕರ್ಮಗಳಲ್ಲದೆ ಪಂಚಕರ್ಮ ಚಿಕಿತ್ಸೆಗಳಿಂದಲೂ ಇನ್ನೂ ಅಧಿಕ ಲಾಭ ಈ ಸಂಧಿಗತವಾತದಲ್ಲಿ ಪಡೆಯಬಹುದಾಗಿದೆ. ಪಂಚಕರ್ಮದ ಪ್ರಾಮುಖ್ಯ ಎಂದರೆ ಬೇರು ಸಮೇತ ಒಂದು ಚಿಕಿತ್ಸಾ ಸಾಧ್ಯ ರೋಗವನ್ನು ಕಿತ್ತೂಗೆಯುವುದು. ಈ ಪಂಚಕರ್ಮಗಳಲ್ಲಿ ಬಸ್ತಿ ಚಿಕಿತ್ಸೆ ಸಂಧಿವಾತ ರೋಗಕ್ಕೆ ಅತ್ಯಂತ ಶ್ರೇಷ್ಠವಾದದ್ದು.

ಬಸ್ತಿ ಚಿಕಿತ್ಸೆ
ಇದು ಪಂಚಕರ್ಮಗಳಲ್ಲಿ ಶ್ರೇಷ್ಠವಾದ ಚಿಕಿತ್ಸೆ ಹಾಗೂ ಇದನ್ನು ಅರ್ಧಚಿಕಿತ್ಸಾ ಎಂದು ಕರೆಯಲಾಗುತ್ತದೆ. ಇದು ವಾತದೋಷಕ್ಕೆ ಅತ್ಯಂತ ಶ್ರೇಷ್ಠ ಚಿಕಿತ್ಸೆಯಾಗಿದೆ. ಅಲ್ಲದೆ ಅನೇಕ ಪ್ರಕಾರದ ಬಸ್ತಿಗಳಿರುವುದರಿಂದ ಪಿತ್ತ ಕಫ‌ದೋಷಗಳಿಗೂ ಶ್ರೇಷ್ಠ ಚಿಕಿತ್ಸೆಯಾಗಿದೆ.

ಈ ಚಿಕಿತ್ಸೆಯಿಂದ ವಿಕೃತ ವಾತದೋಷ ಶಮನವಾಗಿ ಎಲುಬುಗಳಿಗೆ ಒಳ್ಳೆಯ ಪೋಷಣೆ   ಸಿಗುತ್ತದೆ ಹಾಗೂ ಅವುಗಳ ಸವಕಳಿಕೆಯನ್ನು ತಡೆಗಟ್ಟಿ ನೋವು ಹಾಗೂ ಸ್ತಬ್ಧತೆಯ ನಿವಾರಣೆ ಆಗುತ್ತದೆ. ಈ ಚಿಕಿತ್ಸೆಯನ್ನು 8 ದಿನ, 16 ದಿನ, 30 ದಿನಗಳವರೆಗೆ ಕೊಡಬಹುದು. ಈ ಚಿಕಿತ್ಸೆಯಲ್ಲಿ ಔಷಧಯುಕ್ತ ಕಷಾಯವನ್ನು ಅಥವಾ ತೈಲ, ಘೃತವನ್ನು ಗುದದ್ವಾರದ ಮುಖಾಂತರ ಕೊಡಲಾಗುತ್ತದೆ ಹಾಗೂ ಗುದದ್ವಾರದ ಮುಖಾಂತರವೇ ದೇಹದಲ್ಲಿರುವ ದೂಷಿತ ಅಂಶ ಹೊರಹಾಕಲ್ಪಡುತ್ತದೆ. ಈ ಚಿಕಿತ್ಸೆ ಅನೇಕ ಪ್ರಕಾರದ ವಾತವ್ಯಾಧಿಗಳನ್ನು ತಡೆಗಟ್ಟುವಲ್ಲಿ ಸಹಾಯಕವಾಗಿದೆ. ಈ ರೀತಿ ಸಂಧಿವಾತ ರೋಗಕ್ಕೆ ಅನೇಕ ಬಾಹ್ಯ ಉಪಕ್ರಮಗಳು ಹಾಗೂ ಪಂಚಕರ್ಮ ಚಿಕಿತ್ಸೆಗಳಲ್ಲದೆ ಅನೇಕ ತರಹದ ಮಾತ್ರೆ, ಕಷಾಯ, ಅರಿಷ್ಠಗಳು, ಲೇಹ, ಚೂರ್ಣ ಇತ್ಯಾದಿಗಳಿಂದಲೂ ಅನೇಕ ಲಾಭಗಳಿವೆ.

ಸಂಧಿವಾತವನ್ನು ತಡೆಗಟ್ಟಲು ಒಳ್ಳೆಯ ಹಾಗೂ ಶ್ರೇಷ್ಠವಾದ ಉಪಾಯವೆಂದರೆ ವಾರಕ್ಕೆ ಒಂದು ಬಾರಿ ಆದರೂ ತೈಲದ ಅಭ್ಯಂಗ ಮಾಡುವುದು. ದೇಹದ  ತೂಕ  ಸಮರ್ಪಕವಾಗಿ ಇಟ್ಟುಕೊಳ್ಳುವುದು, ಸರಿಯಾದ ಆಹಾರಕ್ರಮ ಪಾಲಿಸುವುದು ಹಾಗೂ ವ್ಯಾಯಾಮವನ್ನು ಮಾಡುವುದು. ರೋಗದ ಚಿಕಿತ್ಸೆಗಿಂತಲೂ ರೋಗವನ್ನು ತಡೆಗಟ್ಟುವುದು ಅತ್ಯಂತ ಶ್ರೇಯಸ್ಕರ ಉಪಾಯ.

ಟಾಪ್ ನ್ಯೂಸ್

Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ

 PM Modi:ನನ್ನ 90 ಸೆಕೆಂಡ್‌ ಭಾಷಣ ಕಾಂಗ್ರೆಸ್‌, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ

 PM Modi:ನನ್ನ 90 ಸೆಕೆಂಡ್‌ ಭಾಷಣ ಕಾಂಗ್ರೆಸ್‌, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

Team India; Not Hardik; Bhajji has suggested the name of Team India’s next T20 captain

Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

18

ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ

 PM Modi:ನನ್ನ 90 ಸೆಕೆಂಡ್‌ ಭಾಷಣ ಕಾಂಗ್ರೆಸ್‌, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ

 PM Modi:ನನ್ನ 90 ಸೆಕೆಂಡ್‌ ಭಾಷಣ ಕಾಂಗ್ರೆಸ್‌, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

Team India; Not Hardik; Bhajji has suggested the name of Team India’s next T20 captain

Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.