ನಿಮ್ಮ ಮಗುವಿನ ಹೊಕ್ಕುಳ ಬಳ್ಳಿಯ ರಕ್ತದ ಶೇಖರಣೆ


Team Udayavani, Jan 17, 2021, 6:00 AM IST

ನಿಮ್ಮ ಮಗುವಿನ ಹೊಕ್ಕುಳ ಬಳ್ಳಿಯ ರಕ್ತದ ಶೇಖರಣೆ

ನಿಮ್ಮ ಮುದ್ದಾದ ಮಗುವಿನ ಜನನದ ಸಮಯ ಬಹಳಷ್ಟು ಆಸೆ-ಆಕಾಂಕ್ಷೆಗಳಿಂದ ತವಕಿಸುತ್ತಿರುತ್ತೀರಿ. ಭಾವನೆಗಳ ಉದ್ವೇಗದಲ್ಲಿರುವ ನಿಮ್ಮಲ್ಲಿ ವೈದ್ಯ ಅಥವಾ ದಾದಿಯಿಂದ ಒಂದು ಪ್ರಶ್ನೆ: “ನಿಮ್ಮ ಮಗುವಿನ ಹೊಕ್ಕುಳ ಬಳ್ಳಿಯ ರಕ್ತವನ್ನು ಶೇಖರಿಸಿಡುವಿರೇ? ಇದಕ್ಕೆ  ತಗಲುವ ವೆಚ್ಚ…’ ಪ್ರಶ್ನೆ ನಿಮ್ಮಲ್ಲಿ ಹಲವರಿಗೆ ಎದುರಾಗಿರಬಹುದು. ತಮ್ಮ ಕರುಳ ಕುಡಿಯ ಉಜ್ವಲ ಭವಿಷ್ಯಕ್ಕಾಗಿ ಏನನ್ನೂ ಮಾಡಲು ಸಿದ್ಧವಿರುವ ನಿಮಗೆ ಸಂದಿಗ್ಧ ಪ್ರಶ್ನೆಗೆ ಉತ್ತರ ನೀಡಲು ಸಹಾಯಕಾರಿಯಾಗುವ ಒಂದು ಪ್ರಯತ್ನ  ಲೇಖನ.

ಹೊಕ್ಕುಳ ಬಳ್ಳಿಯ ರಕ್ತ ನಿಧಿ  (Cord blood banking) :

ಮಗು ಜನಿಸಿದಾಗ ಹೊಕ್ಕುಳ ಬಳ್ಳಿಯ ಸುಮಾರು 80-100 ಮಿ.ಲೀ. ರಕ್ತವು ತ್ಯಾಜ್ಯವಾಗಿ ಹೊರಹೊಮ್ಮುತ್ತದೆ. ಈ ರಕ್ತವು ಆಕರ ಕೋಶಗಳ (stem cells)ಅತ್ಯಮೂಲ್ಯ ಮೂಲ. ಈ ರಕ್ತವನ್ನು ಯೋಗ್ಯ ಕ್ರಮದಲ್ಲಿ ಸಂಗ್ರಹಿಸಿ, ಶೈತ್ಯೀಕರಿಸಿ ಶೇಖರಿಸಿದರೆ ಬಹಳಷ್ಟು ವಿಧದ ಕ್ಯಾನ್ಸರ್‌ (ಲ್ಯುಕೇಮಿಯಾ, ಲಿಂಫೋಮಾ ಮುಂತಾದ) ಹಾಗೂ ಕೆಲವು ವಂಶವಾಹಿ ಕಾಯಿಲೆಗಳನ್ನು ಗುಣಪಡಿಸಲು ಉಪಯೋಗಿಸಬಹುದು. ಹೊಕ್ಕುಳ ಬಳ್ಳಿಯ ರಕ್ತವು ಸುಲಭ, ಅಗ್ಗವಾಗಿ, ಕಡಿಮೆ ದುಷ್ಪರಿಣಾಮವುಳ್ಳ ಮೂಲಕೋಶಗಳ ಒಂದು ಆಗರ. ಆದರೆ ಇಲ್ಲಿ ಸಂಗ್ರಹಿಸಿದ ಮೂಲಕೋಶಗಳ ಎಚ್‌ಎಲ್‌ಎ ಮಾದರಿಯನ್ನು ಗುರುತಿಸಿಡುವುದು ಬಹಳಷ್ಟು ಅಗತ್ಯ.

ಹೊಕ್ಕಳ ಬಳ್ಳಿಯ ರಕ್ತ ಶೇಖರಣೆಯ ಉಪಯೋಗಗಳು :

ಮೇಲೆ ಹೇಳಿದಂತೆ ಕ್ಯಾನ್ಸರ್‌ ರೋಗಿಗಳಿಗೆ ಹಾಗೂ ವಂಶವಾಹಿಗಳ ಕೆಲವು ತೊಂದರೆಗಳನ್ನು ಗುಣಪಡಿಸಲು ಈ ರೀತಿ ಸಂಗ್ರಹಿಸಿದ ಮೂಲಕೋಶಗಳನ್ನು ಉಪಯೋಗಿಸಬಹುದು. ಒಂದು ವೇಳೆ ದಾನಿ ಹಾಗೂ ಸ್ವೀಕರಿಸುವ ವ್ಯಕ್ತಿಗಳ ಎಚ್‌ಎಲ್‌ಎ ಮಾದರಿಗಳು ಪರಿಪೂರ್ಣವಾಗಿ ಹೊಂದಾಣಿಕೆಯಾಗದಿದ್ದರೂ ಇದನ್ನು ಬಳಸಬಹುದು. ಮುಂದಿನ ದಿನಗಳಲ್ಲಿ ಹೀಗೆ ಸಂಗ್ರಹಿಸಿದ ಜೀವಕೋಶಗಳ ಪ್ರಯೋಜನ ಅಧಿಕವಾಗಿ ಹೊರಹೊಮ್ಮುವ ಸಾಧ್ಯತೆಗಳಿವೆ.

ಖಾಸಗಿ ಕ್ಷೇತ್ರದಲ್ಲಿ ಹೊಕ್ಕುಳ ಬಳ್ಳಿಯ ರಕ್ತ ಶೇಖರಣೆ  :

ಇತ್ತೀಚಿನ ದಿನಗಳಲ್ಲಿ ಅನೇಕ ಜಾಹೀರಾತುಗಳು ನಿಮ್ಮನ್ನು ಮೋಡಿ ಮಾಡುತ್ತಿರಬಹುದು. ವಿಶೇಷವಾಗಿ ಸಿನೆಮಾ ತಾರೆಯರನ್ನು ಹಾಗೂ ಸಮಾಜದಲ್ಲಿ ಪ್ರಭಾವೀ ವ್ಯಕ್ತಿಗಳನ್ನು ಬಳಸಿ ಇದರ ಬಗ್ಗೆ ಸಾಕಷ್ಟು ಪ್ರಚಾರ ಮಾಡಲಾಗುತ್ತಿದೆ. ಹೊಕ್ಕುಳ ಬಳ್ಳಿಯ ರಕ್ತದ ಸಂಗ್ರಹ, ಪರಿಷ್ಕರಣೆ ಹಾಗೂ ಶೇಖರಣೆಗೆ ದುಬಾರಿ ಶುಲ್ಕವನ್ನು ವಿಧಿಸಲಾಗುತ್ತಿದೆ. ಭಾವನಾತ್ಮಕವಾದ ಕ್ಷಣಗಳಲ್ಲಿ ಇದೊಂದು ಅನಾವಶ್ಯಕವಾದ ವೆಚ್ಚವಾಗಿ ಹೊರಹೊಮ್ಮುವ ಸಾಧ್ಯತೆ ಹೆಚ್ಚು. ಬಹಳಷ್ಟು ಕಡೆ ಕೇವಲ ನಿಗದಿತ ಅವಧಿಗೆ ಮಾತ್ರ ಈ ವ್ಯವಸ್ಥೆಯನ್ನು ಒದಗಿಸುತ್ತಾರೆ.

ನಿಮ್ಮ ಮಗುವಿಗೆ ಅಥವಾ  ಕುಟುಂಬಕ್ಕೆ ಸ್ವಂತ ಮೂಲ  ಕೋಶಗಳ ಉಪಯೋಗವಿದೆಯೇ? :

ಈಗಿನ ಲಭ್ಯವಿರುವ ಮಾಹಿತಿಗಳ ಪ್ರಕಾರ, ಮಗುವಿನ ಸ್ವಂತ ಬಳಕೆಗಾಗಿ ಈ ಮೂಲಕೋಶಗಳ ಅಗತ್ಯ ನಗಣ್ಯ. ಒಂದು ಅಂದಾಜಿನ ಪ್ರಕಾರ ದುರದೃಷ್ಟವಶಾತ್‌ ಮಗುವು ಕ್ಯಾನ್ಸರಿಗೆ ತುತ್ತಾದರೆ ಸುಮಾರು ಎರಡು ಲಕ್ಷದಲ್ಲೊಂದು ವ್ಯಕ್ತಿಗೆ ಈ ರೀತಿ ಸಂಗ್ರಹಿಸಿಟ್ಟ ಮೂಲಕೋಶಗಳು ಉಪಯೋಗವಾಗುವ ಸಾಧ್ಯತೆ ಇರಬಹುದು. ಇಲ್ಲಿ ಇನ್ನೊಂದು ಗಮನಿಸುವ ಅಂಶವೆಂದರೆ 50 ಕೆ.ಜಿ.ಗಿಂತ ಜಾಸ್ತಿ ತೂಕದ ವ್ಯಕ್ತಿಗೆ ಆತನ/ಆಕೆಯ ಮೂಲಕೋಶಗಳ ಪರಿಮಾಣ ತಕ್ಕಷ್ಟಿರುವುದಿಲ್ಲ ಮತ್ತು ಮೂಲಕೋಶಗಳ ಇತರ ಆಕರಗಳ ಬಳಕೆ ಅಗತ್ಯವಾಗಬಹುದು. ತನ್ನದೇ ವಂಶವಾಹಿಗಳ ಕಾಯಿಲೆಗಳಿಗೆ ಈ ಮೂಲವನ್ನು ಬಳಸುವಂತಿಲ್ಲ (ಅದೇ ವಂಶವಾಹಿಗಳನ್ನು ಮೂಲಕೋಶಗಳೂ ಹೊಂದಿರುವ ಕಾರಣ).

ಕ್ಯಾನ್ಸರಿಗೆ ತುತ್ತಾದ ಮಗುವಿನ ಹೊಕ್ಕಳ ಬಳ್ಳಿಯ ಮೂಲ ಕೋಶಗಳಲ್ಲೂ ಕ್ಯಾನ್ಸರ್‌ಯುಕ್ತ ಜೀವಕೋಶಗಳಿರುವ ಸಾಧ್ಯತೆಯನ್ನು ಅಲ್ಲಗೆಳೆಯಲಾಗದು.

ಕುಟುಂಬದ ಸದಸ್ಯರಿಗೂ ಈ ಮೂಲಕೋಶಗಳ ಬಳಕೆಯ ಸಾಧ್ಯತೆ ಇನ್ನಷ್ಟು ಕಡಿಮೆ. ಒಂದು ವೇಳೆ ಅಗತ್ಯ ಬಂದಲ್ಲಿ ಮಗುವಿನ ಅಸ್ಥಿಮಜ್ಜೆಯಿಂದ (Bone marrow) ಅಥವಾ ರಕ್ತದಿಂದ ಬೇಕಾದ ಮೂಲಕೋಶಗಳನ್ನು ಮುಂದಕ್ಕೆ ಸೋದರ/ಸೋದರಿಯರು ಪಡೆಯುವ ಅವಕಾಶ ಇದ್ದೇ ಇದೆ.

ದಾನಿಗಳು ಮತ್ತು ಶೇಖರಣೆ :

ಅವಕಾಶವಿರುವ ಎಲ್ಲರೂ ತಮ್ಮ ಮಗುವಿನ ಹೊಕ್ಕುಳ ಬಳ್ಳಿಯ ರಕ್ತವನ್ನು ಶೇಖರಣೆ ಹಾಗೂ ಮುಂದಿನ ಬಳಕೆಗಾಗಿ ದಾನ ಮಾಡುವುದರಿಂದ ಸೂಕ್ತ ರೋಗಿಗಳು ಅದರ ಪ್ರಯೋಜನವನ್ನು ಪಡೆಯಬಹುದು. ಸಾರ್ವಜನಿಕ ಕ್ಷೇತ್ರದಲ್ಲಿ ಹಲವಾರು ಶೇಖರಣ ವ್ಯವಸ್ಥೆಗಳು ಪಾಶ್ಚಾತ್ಯ ದೇಶಗಳಲ್ಲಿ ಇದ್ದರೂ ನಮ್ಮ ದೇಶದಲ್ಲಿ ಇನ್ನೂ ಅಂತಹ ಒಂದು ವ್ಯವಸ್ಥೆ ಸಮರ್ಪಕವಾಗಿ ಇಲ್ಲದಿರುವುದು ವಿಷಾದಕರ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಹೀಗೆ ಶೇಖರಿಸಿದ ಮೂಲಕೋಶಗಳ ಎಚ್‌ಎಲ್‌ಎ ಮಾದರಿ ಹಾಗೂ ಲಭ್ಯತೆಯನ್ನು ಸಾರ್ವಜನಿಕವಾಗಿ ಬಹಿರಂಗ ಪಡಿಸತಕ್ಕದ್ದು. ಸಮಾನತೆಯನ್ನು ಪ್ರತಿಪಾದಿಸುವುದಾದರೆ, ಈ ರೀತಿಯ ದಾನ ಹಾಗೂ ಲಭ್ಯತೆಗೆ ಯಾವುದೇ ಶುಲ್ಕವನ್ನು ವಿಧಿಸುವಂತಿಲ್ಲ (ಶೇಖರಣೆಯ ಹಾಗೂ ಸಂಸ್ಕರಣೆಯ ಖರ್ಚನ್ನು ಹೊರತು ಪಡಿಸಿ). ಈ ರೀತಿಯ ವ್ಯವಸ್ಥೆಯನ್ನು ರಕ್ತದಾನ ಹಾಗೂ ರಕ್ತನಿಧಿಗೆ ಹೋಲಿಸಬಹುದು.

ಮುಂದಿನ ಮಾರ್ಗ :

ಸಾರ್ವಜನಿಕ ಕ್ಷೇತ್ರದಲ್ಲಿ ಹೊಕ್ಕುಳ ಬಳ್ಳಿಯ ರಕ್ತ ನಿಧಿಯು ಕ್ಯಾನರ್‌ ಪೀಡಿತ ವ್ಯಕ್ತಿಗಳಿಗೆ ಮೂಲಕೋಶಗಳ ಒಂದು ಉಪಯುಕ್ತ ಆಕರ. ಆದರೆ ಖಾಸಗಿ ಕ್ಷೇತ್ರದಲ್ಲಿ ಮಗುವಿನ ಸ್ವಂತ ಉಪಯೋಗಕ್ಕಾಗಿ ಈಗಿನ ಶುಲ್ಕ ಸಹಿತ ಸೌಲಭ್ಯ ಪ್ರಾಯಶಃ ದುಬಾರಿ ಹಾಗೂ ಅನವಶ್ಯಕವೆಂದು ಕಂಡು ಬರುತ್ತದೆ. ಆದರೆ ಮುಂದಿನ ದಿನಗಳಲ್ಲಿ ಎಲ್ಲಾ ಮಕ್ಕಳ ಹೊಕ್ಕುಳ ಬಳ್ಳಿಯ ರಕ್ತದ ಸಂಗ್ರಹ, ಸಂಸ್ಕರಣೆ ಹಾಗೂ ಶೇಖರಣೆ ಸಾರ್ವಜನಿಕ ಉಪಯೋಗಕ್ಕೆ ಲಭಿಸುವಿಕೆಯು ಎಲ್ಲರ ಒಗ್ಗೂಡುವಿಕೆಯಿಂದ ಸಾಧ್ಯವಾಗಲಿ ಎಂದು ಆಶಿಸೋಣ.

 

ಡಾ| ಗಿರೀಶ್‌ ಕಟ್ಟ

ಪ್ರಾಧ್ಯಾಪಕರು ಮತ್ತು ವಿಭಾಗ ಮುಖ್ಯಸ್ಥರು

ಮೆಡಿಕಲ್‌ ಜೆನೆಟಿಕ್ಸ್‌ ವಿಭಾಗ ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ

 

ಟಾಪ್ ನ್ಯೂಸ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

6-thyroid

Thyroid Disease: ಥೈರಾಯ್ಡ್ ಅನಾರೋಗ್ಯ ನಿರ್ಲಕ್ಷಿಸಿದರೆ ಮಾರಕವಾದೀತು ಎಚ್ಚರ!

4-health

Nutritional Foods: ಹದಿಹರಯದಲ್ಲಿ ಪೌಷ್ಟಿಕಾಂಶ ಅಗತ್ಯಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.