ವೃದ್ಧಾಪ್ಯದಲ್ಲಿ ದೇಹಪುಷ್ಠಿ

Team Udayavani, Aug 4, 2019, 5:40 AM IST

ಕಳೆದ ಸಂಚಿಕೆಯಿಂದ-ಪೌಷ್ಟಿಕಾಂಶ ಆರೋಗ್ಯದ ಮೇಲೆ ವೃದ್ಧಾಪ್ಯದ ಪರಿಣಾಮಗಳು

– ಹಸಿವು ಮತ್ತು ಆಹಾರ ಸೇವನೆ ಕಡಿಮೆಯಾಗುವುದು: ಇದರಿಂದ ಬೇಸಲ್‌ ಮೆಟಬಾಲಿಕ್‌ ದರ ಮತ್ತು ದೈಹಿಕ ಚಟುವಟಿಕೆ ಕಡಿಮೆಯಾಗುತ್ತದೆ. ಪೌಷ್ಟಿಕಾಂಶ ಕೊರತೆಯ ಅಪಾಯ ಹೆಚ್ಚುತ್ತದೆ ಎನ್ನುವುದು ಇದರರ್ಥ.
– ರುಚಿ ಮತ್ತು ಘ್ರಾಣಶಕ್ತಿ ಕಡಿಮೆಯಾಗುವುದು (ಡಿಸೆಸಿಯಾ ಮತ್ತು/ಅಥವಾ ಹೈಪೊಸ್ಮಿಯಾ): ಇದು ಕೂಡ ಆಹಾರ ಸೇವನೆಯ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ. ನಿರ್ದಿಷ್ಟ ದೀರ್ಘ‌ಕಾಲೀನ ಕಾಯಿಲೆಗಾಗಿ ಸೇವಿಸುವ ಔಷಧಗಳಿಂದಾಗಿ ಇದು ಉಂಟಾಗುತ್ತದೆ.
ದಂತ ಆರೋಗ್ಯ: ಶೇ.50ರಿಂದ ಶೇ.60ರಷ್ಟು ಮಂದಿ ವಯೋವೃದ್ಧರು ತಮ್ಮೆಲ್ಲ ಹಲ್ಲುಗಳನ್ನು ಕಳೆದುಕೊಂಡಿರುವ ಸಾಧ್ಯತೆ ಹೊಂದಿರುತ್ತಾರೆ. ಕೃತಕ ದಂತಗಳನ್ನು ಅಳವಡಿಸಿದರೂ ಜಗಿಯಲು ಹೆಚ್ಚು ಸಮಯ ಬೇಕಾಗುತ್ತದೆ. ಆಹಾರದ ಸ್ಥಿತಿ ಬದಲಾಗಬೇಕಾಗುತ್ತದೆ; ಮೃದುವಾಗಬೇಕಾಗುತ್ತದೆ.
– ಬಾಯಾರಿಕೆ: ವಯಸ್ಸಾಗುತ್ತಿದ್ದಂತೆ ದ್ರವಾಹಾರ ಸೇವನೆಯ ಪ್ರಮಾಣ ಕುಸಿಯುತ್ತದೆ. ಬಾಯಾರಿಕೆಯನ್ನು ಗ್ರಹಿಸುವ ಶಕ್ತಿಯೂ ಕುಂದುತ್ತಾ ಹೋಗುತ್ತದೆ. ನಿರ್ಜಲೀಕರಣವು ಸಾಮಾನ್ಯವಾಗಿದ್ದು, ಗೊಂದಲ ಉಂಟಾಗಲು ಕಾರಣವಾಗುತ್ತದೆ. ದಿನಕ್ಕೆ ಆರರಿಂದ ಎಂಟು ಲೋಟಗಳಷ್ಟು ದ್ರವಾಹಾರ ಸೇವನೆ ಅಗತ್ಯವಾಗಿರುತ್ತದೆ.
– ಜೀರ್ಣಾಂಗವ್ಯೂಹದಲ್ಲಿ ಬದಲಾವಣೆ: ಆಹಾರವು ಜೀರ್ಣಾಂಗ ವ್ಯೂಹದಲ್ಲಿ ಚಲಿಸುವುದು ನಿಧಾನವಾಗುತ್ತದೆ.
– ಇದರಿಂದಾಗಿ ಮಲಬದ್ಧತೆಯು ಉಂಟಾಗುವುದು ಸಾಮಾನ್ಯವಾಗುತ್ತದೆ. ಆಹಾರದಲ್ಲಿ ನಾರಿನಂಶ ಮತ್ತು ದ್ರವಾಂಶಗಳನ್ನು ಹೆಚ್ಚಿಸಿಕೊಂಡರೆ ಪೆರಿಸ್ಟಾಲ್ಸಿಸ್‌ (ಜೀರ್ಣಾಂಗ ವ್ಯೂಹದ ವಿವಿಧ ಕಡೆ ಆಹಾರ ಸಂಸ್ಕರಣ ಕೇಂದ್ರಗಳಿಗೆ ಆಹಾರ ಚಲಿಸಲು ಕಾರಣವಾಗುವ ಸ್ನಾಯುಗಳ ಸಂಕುಚನ-ವಿಕಸನ) ಹೆಚ್ಚುತ್ತದೆ.
– ವಯಸ್ಸಾಗುತ್ತಿದ್ದಂತೆ ಲ್ಯಾಕ್ಟೇಸ್‌ (ಕಾಬೊìಹೈಡ್ರೇಟ್‌ ಜೀರ್ಣಗೊಳ್ಳಲು ಅಗತ್ಯ) ಉತ್ಪಾದನೆಯೂ ಕುಸಿಯುತ್ತದೆ.
– “ಇಂಟ್ರಿನ್ಸಿಕ್‌ ಫ್ಯಾಕ್ಟರ್‌’ಗಳ ಸಂಯೋಜನೆ ಕಡಿಮೆಯಾಗಿ ವಿಟಮಿನ್‌ ಬಿ12 ಹೀರುವಿಕೆಯ ಮೇಲೆ ಪರಿಣಾಮ ಉಂಟಾಗುತ್ತದೆ.
– ಅಜೀರ್ಣ ಮತ್ತು ಎದೆಯುರಿಗಳು ವೃದ್ಧಾಪ್ಯದ ಸಾಮಾನ್ಯ ಸಮಸ್ಯೆಗಳಾಗಿವೆ.
– ಪಿತ್ತಜನಕಾಂಗ, ಪಿತ್ತಕೋಶ ಮತ್ತು ಮೇದೊಜೀರಕ ಗ್ರಂಥಿಗಳ ಕಾರ್ಯಚಟುವಟಿಕೆಗಳ ಕುಸಿತ: ಪಿತ್ತಜನಕಾಂಗವು ಅನೇಕ ವಿಷಾಂಶಗಳನ್ನು ಸಂಸ್ಕರಿಸುವ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಪಿತ್ತಕೋಶದಲ್ಲಿ ತಡೆಯನ್ನು ಉಂಟು ಮಾಡುವ ಪಿತ್ತಕೋಶದ ಕಲ್ಲುಗಳು ಸಾಮಾನ್ಯವಾಗಿ ಉಂಟಾಗುತ್ತವೆ. ಇದರಿಂದ ಪಿತ್ತರಸದ ಹರಿಯುವಿಕೆಗೆ ತಡೆ ಉಂಟಾಗುತ್ತದೆ. ಮೇದೊಜೀರಕ ಗ್ರಂಥಿಗಳ ಕಾರ್ಯಕ್ಷಮತೆ ಕುಸಿಯುವುದು ರಕ್ತದಲ್ಲಿ ಗುÉಕೋಸ್‌ ಮಟ್ಟ ಹೆಚ್ಚಳದ ಮೂಲಕ ಕಾಣಿಸಿಕೊಳ್ಳುತ್ತದೆ.
– ಮೂತ್ರ ತಡೆಹಿಡಿಯುವ ಶಕ್ತಿ ಕುಸಿತ: ಸ್ನಾಯುಗಳನ್ನು ನಿಯಂತ್ರಿಸುವ ಶಕ್ತಿ ಕುಸಿಯುವುದರಿಂದ ಮೂತ್ರ ಹಿಡಿದಿರಿಸಿಕೊಳ್ಳುವ ಶಕ್ತಿ ಕಡಿಮೆಯಾಗುತ್ತದೆ. ಇದರಿಂದಾಗಿ ವಯೋವೃದ್ಧರು ದ್ರವಾಹಾರಗಳ ಸೇವನೆಯನ್ನು ಕಡಿಮೆ ಮಾಡುತ್ತಾರೆ; ಇದು ನಿರ್ಜಲೀಕರಣ ಮತ್ತು ಮಲಬದ್ಧತೆಗೆ ಕಾರಣವಾಗುತ್ತದೆ.
– ಮೂತ್ರಪಿಂಡಗಳ ಕ್ಷಮತೆ: ವಯಸ್ಸಾಗುತ್ತಿದ್ದಂತೆ ಮೂತ್ರಪಿಂಡಗಳಲ್ಲಿಯ ನೆಫ್ರಾನ್‌ಗಳ ಸಂಖ್ಯೆ ಕಡಿಮೆಯಾಗಿ ಮೂತ್ರಪಿಂಡಗಳು ತ್ಯಾಜ್ಯ ಮತ್ತು ವಿಷಾಂಶಗಳನ್ನು ಸಂಸ್ಕರಿಸುವುದು ನಿಧಾನವಾಗುತ್ತದೆ.
– ರೋಗ ನಿರೋಧಕ ಕ್ರಿಯೆಗಳು: ಕಡಿಮೆ ಸಲಿಲವಾಗಿ ಮತ್ತು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಹೆಚ್ಚು ಪ್ರೊಟೀನ್‌, ವಿಟಮಿನ್‌ ಇ, ಸಿ, ಬಿ6, ಝಿಂಕ್‌ ಇತ್ಯಾದಿಗಳು ನಮ್ಮ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಲು ಕಾರಣವಾಗುತ್ತವೆ. ರೋಗ ನಿರೋಧಕ ಶಕ್ತಿಯು ದುರ್ಬಲವಾಗಿದ್ದರೆ ಕಾಯಿಲೆಗಳು ಮರುಕಳಿಸುವುದು, ಆಗಾಗ ಅನಾರೋಗ್ಯ, ಗಾಯಗಳು ನಿಧಾನವಾಗಿ ಗುಣ ಹೊಂದುವುದು ಸಾಮಾನ್ಯವಾಗಿರುತ್ತದೆ.
– ಶ್ವಾಸಕೋಶದ ಚಟುವಟಿಕೆಗಳು: ಶ್ವಾಸಕೋಶಗಳ ಚಟುವಟಿಕೆಗಳೂ ಅಲ್ಪ ಪ್ರಮಾಣದಲ್ಲಿ ಕುಗ್ಗುತ್ತದೆ. ಧೂಮಪಾನ ಮಾಡುತ್ತಿದ್ದವರು, ಈಗಲೂ ಧೂಮಪಾನದಲ್ಲಿ ತೊಡಗಿರುವವರು/ ತಂಬಾಕು ಉತ್ಪನ್ನಗಳನ್ನು ಸೇವಿಸುವ ಅಭ್ಯಾಸ ಹೊಂದಿರುವ ವಯೋವೃದ್ಧರಲ್ಲಿ ಈ ಸಮಸ್ಯೆ ಇನ್ನಷ್ಟು ಹೆಚ್ಚು. ಶ್ವಾಸಕೋಶದ ಕಾರ್ಯಚಟುವಟಿಕೆಗಳು ಕುಸಿದರೆ ದೈಹಿಕ ಚಟುವಟಿಕೆಗಳು ಕೂಡ ಕಡಿಮೆಯಾಗುತ್ತವೆ.
– ಕೇಳುವಿಕೆ ಮತ್ತು ದೃಷ್ಟಿ: ಶಬ್ದ ಮಾಲಿನ್ಯಕ್ಕೆ ಒಡ್ಡಿಕೊಂಡ ಹಿರಿಯರಲ್ಲಿ ಕೇಳುವಿಕೆಯ ಸಮಸ್ಯೆ ಬಹಳ ಬೇಗನೆ ಎದುರಾಗುತ್ತದೆ. ಶ್ರವಣ ಶಕ್ತಿ ಕಡಿಮೆಯಾದರೆ ಪರಿಣಾಮವಾಗಿ ಸಾಮಾಜಿಕ ಏಕಾಕಿತನ/ ಒಂಟಿಯಾಗಿ ಇರುವಿಕೆ ಹೆಚ್ಚುತ್ತದೆ. ಅಕ್ಷಿಪಟಲದ ಶಕ್ತಿಗುಂದುವುದರಿಂದ ಸ್ವಾವಲಂಬನೆ ಮತ್ತು ಬದುಕಿನ ಗುಣಮಟ್ಟಗಳ ಮೇಲೆ ಪ್ರತಿಕೂಲ ಪರಿಣಾಮವುಂಟಾಗುತ್ತದೆ.

ಮುಂದುವರಿಯುವುದು

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ