ವೃದ್ಧಾಪ್ಯದಲ್ಲಿ ದೇಹಪುಷ್ಠಿ

Team Udayavani, Aug 25, 2019, 5:27 AM IST

ಕಳೆದ ಸಂಚಿಕೆಯಿಂದ
ಏಕಾಕಿಯಾಗಿ ಬದುಕುವುದು/
ಕುಟುಂಬ ಸದಸ್ಯರಿಂದ ಗಮನದ ಕೊರತೆ
ಈ ಮನೋವೈಜ್ಞಾನಿಕ ಅಂಶವು ವಯೋವೃದ್ಧರಲ್ಲಿ ಸಾಮಾನ್ಯವಾದ ಅದೇವೇಳೆಗೆ ಅಪೌಷ್ಟಿಕತೆಗೆ ಪ್ರಧಾನವಾದ ಕಾರಣವಾಗಿರುತ್ತದೆ.

ವಯೋ ಸಂಬಂಧಿ
ಮನೋವೈಜ್ಞಾನಿಕ ಬದಲಾವಣೆಗಳು
(ನಮಗೆ ವಯಸ್ಸಾಗುತ್ತಿದ್ದಂತೆ ಮನೋವೈಜ್ಞಾನಿಕ ಬದಲಾವಣೆಗಳು ನಿಧಾನವಾಗಿ ಬೆಳಕಿಗೆ ಬರುತ್ತವೆ)

ಆರೋಗ್ಯ ಸಮಸ್ಯೆಗಳು/ ವಯೋವೃದ್ಧರ ತೊಂದರೆಗಳು
– ಪೌಷ್ಟಿಕಾಂಶಗಳ ಕೊರತೆ: ಆಹಾರದಲ್ಲಿ ಸಾಮಾನ್ಯವಾಗಿ ಕಬ್ಬಿಣಾಂಶ, ಪ್ರೊಟೀನ್‌, ಕ್ಯಾಲ್ಸಿಯಂ, ವಿಟಮಿನ್‌ ಎ ಮತ್ತು ಸಿಗಳ ಕೊರತೆ ಇರುತ್ತದೆ. ಇದರಿಂದ ರಕ್ತ ಹೀನತೆ, ಸೋಂಕುಗಳು ಹೆಚ್ಚುತ್ತವೆ.
– ಮದ್ಯಪಾನ: ಮದ್ಯಪಾನವು ಯುವಕರಿಗಿಂತ ವಯೋವೃದ್ಧರಲ್ಲಿ ಬೇರೆಯದೇ ಪರಿಣಾಮವನ್ನು ಉಂಟು ಮಾಡಬಹುದು. ಕೆಲವರಲ್ಲಿ ವಯಸ್ಸಾಗುತ್ತಿದ್ದಂತೆ ಹಿಂದೆ ಸೇವಿಸುತ್ತಿದ್ದಷ್ಟು ಮದ್ಯವೇ ಹೆಚ್ಚು ಅಮಲನ್ನು ಉಂಟು ಮಾಡಬಹುದು. ಈ ಅಮಲಿನ ಹೆಚ್ಚಳ ಬೀಳುವುದು, ಮೂಳೆ ಮುರಿತ, ಕಾರು ಅವಘಡಗಳಂತಹ ಅಪಘಾತಗಳಿಗೆ ಕಾರಣವಾಗಬಹುದು. ಅಲ್ಲದೆ ವಯೋವೃದ್ಧ ಪುರುಷರಿಗಿಂತ ವಯೋವೃದ್ಧ ಮಹಿಳೆಯರು ಮದ್ಯದ ಪ್ರಭಾವಕ್ಕೆ ಹೆಚ್ಚು ಒಳಗಾಗುತ್ತಾರೆ.
– ಬೊಜ್ಜು: ದೈಹಿಕ ಚಟುವಟಿಕೆ ಕಡಿಮೆಯಾಗುವುದರಿಂದ ಮತ್ತು ಕ್ಯಾಲೊರಿ ಅಗತ್ಯ ಕಡಿಮೆಯಾಗುವುದರಿಂದ ಬೊಜ್ಜು ಉಂಟಾಗುತ್ತದೆ. ದೇಹತೂಕ ಹೆಚ್ಚುವುದರಿಂದ ಚಲನೆ ಕಡಿಮೆಯಾಗುತ್ತದೆ. ಬೊಜ್ಜು ಹಾಲಿ ಇರುವಂತಹ ಯಾವುದೇ ಅನಾರೋಗ್ಯವನ್ನು ಉಲ್ಬಣಗೊಳಿಸಬಹುದು ಮತ್ತು ಇತರ ಅಪಾಯಗಳಿಗೂ ಕಾರಣವಾಗಬಲ್ಲುದು.
ಆಸ್ಟಿಯೊಪೊರೋಸಿಸ್‌: ಇದು ವಯೋವೃದ್ಧರಲ್ಲಿ ಒಂದು ಪ್ರಧಾನ ಅನಾರೋಗ್ಯವಾಗಿದೆ.
– ಮಹಿಳೆಯರಲ್ಲಿ ಋತುಚಕ್ರ ಬಂಧದ ಬಳಿಕ ಮತ್ತು ಪುರುಷರಲ್ಲಿ ಮಧ್ಯ ವಯಸ್ಸಿನಲ್ಲಿ ಕಾಣಿಸಿಕೊಳ್ಳುತ್ತದೆ.
– ಹೆಚ್ಚುವರಿ ಕ್ಯಾಲ್ಸಿಯಂ ಮತ್ತು ವಿಟಮಿನ್‌ ಡಿ ಸೇವನೆ ಇದನ್ನು ಕಡಿಮೆ ಮಾಡುತ್ತದೆ. ಜತೆಗೆ ದೈಹಿಕ ಚಟುವಟಿಕೆಯೂ ಬೇಕು. ಎಲುಬು ಸಾಂದ್ರತೆಯನ್ನು ವೃದ್ಧಿಸಲು ಫ್ಲೋರೈಡ್‌ ಸಹಾಯ ಮಾಡುತ್ತದೆ.
– ಮಧುಮೇಹ: ಮಧ್ಯವಯಸ್ಸು ಮತ್ತು ಆ ಬಳಿಕದ ವಯೋಮಾನದಲ್ಲಿ ಕಾಣಿಸಿಕೊಳ್ಳುವ ಸಾಮಾನ್ಯ ಆರೋಗ್ಯ ಸಮಸ್ಯೆ. ಇದಕ್ಕೆ ಕಾರಣವಾಗಬಹುದಾದ ಪ್ರಧಾನ ಅಪಾಯಾಂಶ ಬೊಜ್ಜು. ಪಥ್ಯಾಹಾರ ಮತ್ತು ತೂಕ ನಿಯಂತ್ರಣದ ಮೂಲಕ ನಿಭಾಯಿಸಬಹುದು.
– ಮಲಬದ್ಧತೆ ಮತ್ತು ಡೈವರ್ಟಿಕ್ಯುಲೋಸಿಸ್‌: ಕರುಳಿನ ಒಳಭಿತ್ತಿ ದುರ್ಬಲವಾಗುವುದು ಮತ್ತು ಕಡಿಮೆ ನಾರಿನಂಶ ಆಹಾರ ಸೇವನೆಯಿಂದ ಇದು ಉಂಟಾಗುತ್ತದೆ.
– ಅಧಿಕ ರಕ್ತದೊತ್ತಡ: ಇದು ಕೂಡ ವಯಸ್ಸು ಹೆಚ್ಚುತ್ತಿದ್ದಂತೆ ಹೆಚ್ಚಳವಾಗುತ್ತದೆ. ಉಪ್ಪು ಸೇವನೆಗಿಂತಲೂ ಅಧಿಕ ದೇಹತೂಕ ಇದರ ಅಪಾಯಾಂಶವಾಗಿದೆ.
– ಎಥೆರೊಸ್ಲೆರೋಸಿಸ್‌: ಹೆಚ್ಚು ಸ್ಯಾಚುರೇಟೆಡ್‌ ಕೊಬ್ಬು ಇರುವ ಆಹಾರ ಇದರ ಅಪಾಯಾಂಶವಾಗಿದೆ. ಹೃದಯಾಘಾತ/ ಆ್ಯಂಜಿನಾಕ್ಕೆ ಕಾರಣವಾಗಬಹುದು.
– ಕ್ಯಾನ್ಸರ್‌: ಮಾಲಿನ್ಯಕಾರಕಗಳು, ಆಹಾರದಲ್ಲಿ ರಾಸಾಯನಿಕಗಳು, ಧೂಮಪಾನ ಮತ್ತು ಆಹಾರಾಭ್ಯಾಸಗಳಿಗೂ ಕ್ಯಾನ್ಸರ್‌ಗೂ ಇರುವ ಸಂಬಂಧದ ಬಗ್ಗೆ ಸಾಕಷ್ಟು ಅಧ್ಯಯನಗಳು ನಡೆದಿವೆ. ವೈದ್ಯ ವಿಜ್ಞಾನಕ್ಕೆ ಇನ್ನೂ ಚೆನ್ನಾಗಿ ಅರ್ಥವಾಗದ ವಿವಿಧ ಕಾರಣಗಳಿಂದಾಗಿ ವಯಸ್ಸಾಗುತ್ತಿದ್ದಂತೆ ಕ್ಯಾನ್ಸರ್‌ನ ಅಪಾಯ ಹೆಚ್ಚುತ್ತ ಹೋಗುತ್ತದೆ.

ಸೇವಿಸಬಹುದಾದ ಆಹಾರ
– ದಾಲ್‌
– ಖೀಚಡಿ
– ಉಪ್ಪಿಟ್ಟು
– ಖೀರು
– ಅವಲಕ್ಕಿ
– ತರಕಾರಿ ಸೂಪ್‌
– ಹಣ್ಣಿನ ರಸ
– ಚೆನ್ನಾಗಿ ಬೇಯಿಸಿದ ಮೊಟ್ಟೆ, ಮೀನು, ಕೋಳಿ

ಮುಂದುವರಿಯುವುದು

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

  • ವಿಶ್ವದಲ್ಲಿಯೇ ಮೊದಲ ಬಾರಿಗೆ ಭಾರತದಲ್ಲಿ 1952ರಲ್ಲಿ ಕುಟುಂಬ ಕಲ್ಯಾಣ ಯೋಜನೆ ಆರಂಭಗೊಂಡಿತು. ಆಗ ಜನಸಂಖ್ಯಾ ಸ್ಫೋಟ, ಜನಸಂಖ್ಯಾ ಬಾಂಬ್‌ ಎಂಬ ನುಡಿಗಟ್ಟುಗಳು ಪ್ರಚಲಿತವಾಗಿದ್ದವು....

  • ಮನುಷ್ಯನ ಭಾಷೆ ಮತ್ತು ಸಂಭಾಷಣೆಯ ಬೆಳವಣಿಗೆಯಲ್ಲಿ ಶ್ರವಣ ಶಕ್ತಿಯು ಬಹಳ ಪ್ರಾಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ವ್ಯಕ್ತಿಯು ಶ್ರವಣ ಸಾಮರ್ಥ್ಯವನ್ನು ಕಳೆದುಕೊಂಡರೆ...

  • ಬಾಯಿಯಲ್ಲಿ ವಸಡಿನ ನಡುವೆ ತಾನು ಮೂಡಿಬರಬೇಕಾದ ಸ್ಥಳದಲ್ಲಿ ಮೂಡಲು ಸಾಧ್ಯವಾಗದ ಹಲ್ಲುಗಳನ್ನು ತೂರಿಕೊಂಡ ಅಥವಾ ಬಂಧಿತ ಹಲ್ಲು ಎನ್ನುತ್ತಾರೆ. ಕೆಳ ದವಡೆಯ ಮೂರನೆಯ...

  • ಮೃದು ಉದ್ದೀಪಕವಾಗಿರುವ ಕೆಫೀನ್‌ ಕಳೆದ ಹಲವಾರು ಶತಮಾನಗಳಿಂದ ನಮ್ಮ ಆಹಾರ ಶೈಲಿಯ ಭಾಗವಾಗಿದೆ. ಚೀನೀಯರು 5,000 ವರ್ಷಗಳ ಹಿಂದೆಯೇ ಚಹಾವನ್ನು ಶೋಧಿಸಿ ಕುಡಿಯುತ್ತಿದ್ದರು...

  • ಒಂದು ಕುಟುಂಬಕ್ಕೆ ಆರೋಗ್ಯವಂತ ಶಿಶುವಿನ ಜನನದಷ್ಟು ಸಂತೋಷಕರವಾದ ಸಂಭ್ರಮ ಇನ್ನೊಂದಿಲ್ಲ. ಶಿಶುವನ್ನು ವೀಕ್ಷಿಸುವುದು, ಮುದ್ದಾಡುವುದು, ವಿವಿಧ ಬಗೆಯ ಸದ್ದುಗಳಿಗೆ...

ಹೊಸ ಸೇರ್ಪಡೆ