ವಿಭಿನ್ನ ಸಾಮರ್ಥ್ಯವಿರುವ ಮಕ್ಕಳು, ಯುವಕರಿಗೆ ಕ್ರೀಡೆ ಮತ್ತು ಮನೋರಂಜನೆಯ ಅಗತ್ಯ


Team Udayavani, Dec 15, 2019, 5:08 AM IST

zx-12

ಮತ್ತು ಅಗತ್ಯ ಪೋಷಣೆ ಸಿಕ್ಕಾಗ ಯಾವುದೇ ಮಗು ಮಹತ್ತರ ಸಾಧನೆ ಮಾಡಬಲ್ಲುದು. ದೈಹಿಕ ನ್ಯೂನತೆಗಳುಳ್ಳ ಎಲ್ಲ ಮಕ್ಕಳಂತೆ ಸಾಮಾನ್ಯ ಬುದ್ಧಿಶಕ್ತಿಯುಳ್ಳ ಮಕ್ಕಳ ಕೆಲವೊಂದು ಅನುಭವಕ್ಕೆ ಬಂದ ಉದಾಹರಣೆಗಳನ್ನು ಇಲ್ಲಿ ಪ್ರಾಸ್ತಾವಿಕವಾಗಿ ನೀಡುತ್ತಿದ್ದೇನೆ.

ಒಂದು ಉದಾಹರಣೆ: ಸುಮಾರು 5ರಿಂದ 6 ವರುಷದ ದೈಹಿಕವಾಗಿ ಸ್ವಲ್ಪ ಮಟ್ಟಿನ ನ್ಯೂನತೆಯಿದ್ದು, ಸಾಮಾನ್ಯ ಬುದ್ಧಿಶಕ್ತಿಯುಳ್ಳ ಹುಡುಗ. ಶಾಲೆಯ ಶಿಕ್ಷಕರು ಮತ್ತು ಮುಖ್ಯೋಪಾಧ್ಯಾಯರ ಮೆಹನತ್ತಿನಿಂದ ಸಾಂಸ್ಕೃತಿಕ ಸ್ಪರ್ಧೆಯಿರಬಹುದು, ಕ್ರೀಡೆಯಿರಬಹುದು- ಈ ಹುಡುಗನಿಗೆ ಎಲ್ಲದರಲ್ಲೂ ಅವಕಾಶ ಸಿಗುತ್ತಿತ್ತು. ಆ ಹುಡುಗ ಅನ್ಯ ಕಾರಣಗಳಿಂದ ಹಾಜರಾಗಿದೆ ಇದ್ದಲ್ಲಿ ಎಲ್ಲರಲ್ಲೂ ಆತಂಕ. ಈ ಉದಾಹರಣೆ ನನ್ನಂತಹ ಚಿಕಿತ್ಸಕರಲ್ಲಿ ಉತ್ಸಾಹ ನೀಡುತ್ತದಲ್ಲದೆ ಇನ್ನಷ್ಟು ಅವಕಾಶಗಳನ್ನು ಎಲ್ಲ ಮಕ್ಕಳಿಗೂ ಒದಗಿಸಿಕೊಡುವಂತಹ ಆಲೋಚನೆಗಳು ಹರಿದುಬರುತ್ತವೆ.

ಇನ್ನೊಂದು ಉದಾಹರಣೆ: ಇದು ಕೂಡ ಮೇಲೆ ಹೇಳಿದಂತೆ ದೈಹಿಕ ಭಿನ್ನ ಸಾಮರ್ಥ್ಯ ಉಳ್ಳ ಮಗು. ಶಾಲಾ ನೋಂದಣಿಗೆ ಹೋದಾಗ ಮುಖ್ಯಸ್ಥರಿಂದ ದಾಖಲಾತಿಗೆ ನಿರಾಕರಣೆಯಾಯಿತು. ತಡವಾಗಿ ಇನ್ನೊಂದು ಶಾಲೆಯಲ್ಲಿ ದಾಖಲಾತಿ ಸಿಕ್ಕಿದಾಗ ಶಾಲೆ ಪ್ರಾರಂಭಗೊಂಡು 2 ತಿಂಗಳ ಪಾಠ ಮುಗಿದಾಗಿತ್ತು. ಈ ಬುದ್ಧಿವಂತ ಮಗು ಉಳಿದ ಮಕ್ಕಳನ್ನು ಮೀರಿಸುವಂತೆ ಭಾಷೆಯನ್ನು (ಓದಲು ಮತ್ತು ಸ್ವಲ್ಪ ಮಟ್ಟಿಗೆ ಬರೆಯಲು) ಕಲಿತು ಶಿಕ್ಷಕರನ್ನು ನಿಬ್ಬೆರಗಾಗಿಸಿದ. ದೈಹಿಕ ಚಿಕಿತ್ಸೆಯ ಅಗತ್ಯ ಇದ್ದರೂ ಹುಡುಗನಿಗೆ ಶಾಲೆಯನ್ನು ತಪ್ಪಿಸಲು ಶಿಕ್ಷಕರು ಹಿಂದೆ ಮುಂದೆ ನೋಡುವಂತೆ ಮಾಡಿದಾಗ ನನಗೆ ತುಂಬಾ ಅಚ್ಚರಿಯಾಯಿತು. ಆ ಶಿಕ್ಷಕರು ಮತ್ತು ಶಾಲೆಯ ಎಲ್ಲಾ ವರಿಷ್ಠರ ಬಗ್ಗೆ ತುಂಬ ಹೆಮ್ಮೆ ಎನಿಸಿತು. ಮಗುವಿನ ದೈಹಿಕ ಊನದ ಬಗ್ಗೆ ನನ್ನ ಬಳಿ ಎಷ್ಟೋ ಬಾರಿ ಕಣ್ಣೀರು ಹರಿಸಿದ್ದ ಹೆತ್ತವರು ಅವನ ಕಲಿಕೆಯ ಪ್ರಗತಿಯ ಬಗ್ಗೆ ನಗುಮುಖದೊಂದಿಗೆ ಹೇಳಿದಾಗ ನಮ್ಮಂಥವರ ಮನಸಿಗೆ ತುಂಬಾ ತೃಪ್ತಿ ಎನಿಸುತ್ತದೆ.

ಈ ಬರಹದ ಮುಖ್ಯ ಉದ್ದೇಶ ವಿಭಿನ್ನ ಚೈತನ್ಯವಿರುವ ಮಕ್ಕಳು ಕೂಡ ಕ್ರೀಡೆ ಮತ್ತು ಮನೋರಂಜನೆ (ಅಡಾಪ್ಟೆಡ್‌ ನ್ಪೋರ್ಟ್ಸ್ಆ್ಯಂ ಡ್‌ ರಿಕ್ರಿಯೇಶನ್‌) ಆಟೋಟಗಳಲ್ಲಿ ಭಾಗಿಯಾಗಲು ಸಾಧ್ಯವಿದೆ ಮತ್ತು ಈ ನಿಟ್ಟಿನಲ್ಲಿ ಭಾರತೀಯರು ಮಹತ್ತರ ಹೆಜ್ಜೆಯಿಡುವ, ಸಮರ್ಥವಾಗಿ, ಸಮರ್ಪಕವಾಗಿ ನಡೆಸುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ. ಪ್ರತಿವರ್ಷ ಡಿಸೆಂಬರ್‌ ಮೂರರಂದು ವಿಶ್ವದೆಲ್ಲೆಡೆ ವಿಭಿನ್ನ ಸಾಮರ್ಥ್ಯವುಳ್ಳವರ (ಮಕ್ಕಳು ಮತ್ತು ಯುವಕರು/ಯುವತಿಯರ) ದಿನವನ್ನಾಗಿ ಆಚರಿಸಲಾಗುತ್ತದೆ.

ಕ್ರೀಡೆ ಮತ್ತು ಮನೋರಂಜನೆಗಾಗಿ ಆಟಗಳು ಎಲ್ಲ ಮಕ್ಕಳ ಹಕ್ಕು. ದೈಹಿಕ ಕಾರ್ಯಕ್ಷಮತೆಯಲ್ಲಿ ವ್ಯತ್ಯಯ ಇರುವ ಮಕ್ಕಳಿಗೂ ಈ ಹಕ್ಕು ಅನ್ವಯವಾಗುತ್ತದೆ. ಈ ಉದ್ದೇಶವನ್ನು ಈಡೇರಿಸುವುದಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆಯು 2000ನೇ ಇಸವಿಯ ಸುಮಾರಿಗೆ ಆರೋಗ್ಯದ ಏರುಪೇರನ್ನು ಬಿಂಬಿಸಲು ಅಂತಾರಾಷ್ಟ್ರೀಯ ಕಾರ್ಯ/ಚಟುವಟಿಕೆ, ಆರೋಗ್ಯ ಮತ್ತು ಅಶಕ್ತರ ವರ್ಗೀಕರಣ (ಇಂಟರ್‌ನ್ಯಾಷನಲ್‌ ಕ್ಲಾಸಿಫಿಕೇಶನ್‌ ಆಫ್ ಫ‌ಂಕ್ಷನಿಂಗ್‌, ಹೆಲ್ತ್‌ ಆ್ಯಂಡ್‌ ಡಿಸೆಬಿಲಿಟಿ) ಎಂಬ ಲಿಖೀತ ಫ್ರೆಮ್‌ ವರ್ಕ್‌ನ್ನು ಪ್ರಚುರುಪಡಿಸಿದರು. ಈ ವರ್ಗೀಕರಣದಲ್ಲಿ ಆರೋಗ್ಯವನ್ನು ದೇಹದ ಅಂಗಾಂಗ ಮತ್ತು ಕಾರ್ಯ/ಚಟುವಟಿಕೆ, ಚಟುವಟಿಕೆ, ಭಾಗವಹಿಸುವಿಕೆ (ಕುಟುಂಬ ಮತ್ತು ಸಮುದಾಯ)ವನ್ನು ವಿಭಾಗಿಸಲಾಗಿದೆ ಹಾಗೂ ಚಟುವಟಿಕೆ ಮತ್ತು ಭಾಗವಹಿಸುವಿಕೆಯು ಯಾವ ಕಾರಣಗಳಿಂದ ಅಂದರೆ ವೈಯಕ್ತಿಕ/ಪರಿಸರ/ಅವಕಾಶಗಳಿಂದ ನಿರ್ಧರಿತವಾಗುತ್ತದೆ ಎಂಬುದನ್ನು ಪ್ರತಿಯೊಂದು ಆರೋಗ್ಯದ ಏರುಪೇರುಗಳಿಗೆ ವಿಶ್ಲೇಷಿಸಲಾಗಿದೆ. ಈ ಮಾದರಿ ಎಲ್ಲಾ ವೈದ್ಯಕೀಯ ವರ್ಗದವರು ಅಂದರೆ ವೈದ್ಯರು, ಭೌತಿಕ ಚಿಕಿತ್ಸಕರು, ವಾಕ್‌ ಶ್ರವಣ ತಜ್ಞರು, ಮಾನಸಿಕ ತಜ್ಞರು, ಶುಶ್ರೂಕಿಯರು ಹಾಗೂ ಯಾರೆಲ್ಲ ಉತ್ತಮ ಆರೋಗ್ಯವನ್ನು ಪಸರಿಸುವ ಕಾರ್ಯಗಳಲ್ಲಿ ಒಳಗೊಂಡಿದ್ದಾರೂ ಅವರಿಗೆಲ್ಲಾ ಸಕಾರಾತ್ಮಕ ಅಂಶವುಳ್ಳದ್ದಾಗಿದೆ. ಸಮಾಜದಲ್ಲಿ ನಾವೆಲ್ಲರೂ ಮಾಡುತ್ತಿರುವ ಒಂದು ದೊಡ್ಡ ತಪ್ಪೆಂದರೆ ಒಬ್ಬ ವ್ಯಕ್ತಿಯ ನ್ಯೂನತೆಯನ್ನು ಮಾತ್ರ ಎತ್ತಿ ಹಿಡಿಯುವುದು. ವಿಶ್ವ ಸಂಸ್ಥೆಯ ಈ ಮಾದರಿಯು ಒಬ್ಬ ವ್ಯಕ್ತಿಯಲ್ಲಿ ಯಾವ ಕಾರ್ಯ ಚಟುವಟಿಕೆಯನ್ನು ದೈಹಿಕ ನ್ಯೂನತೆಯೊಂದಿಗೆ ಮಾಡಲು ಶಕ್ತನೋ ಎಂದು ನೋಡುವ ನಿಟ್ಟಿನಲ್ಲಿ ನಮ್ಮೆಲ್ಲರ ಆಂತರಿಕ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳಿ ಎಂದು ಎತ್ತಿ ತೋರಿಸುತ್ತಿದೆ.

ಕಾರ್ಯ ಚಟುವಟಿಕೆ (Fuction) ಅಂದರೆ ದೊಡ್ಡವರಿಗೆ ಕೆಲಸ, ವೃತ್ತಿ, ಪ್ರವೃತ್ತಿ, ಪಾತ್ರ (ಕುಟುಂಬ ಮತ್ತು ಸಮಾಜ). ಅದೇ ಮಕ್ಕಳಿಗೆ “ಆಟ ಆಡುವುದೇ’ ಒಂದು ವೃತ್ತಿ. ಹೀಗೆ ಆಂಗ್ಲ ಭಾಷೆ ‘F’ ಅಕ್ಷರದಿಂದ Function, Family, Fitness, Fun, Friends & Future ಎಂಬ ಆರು ವಿಭಾಗಗಳಲ್ಲಿ ಬಿಂಬಿಸಲಾಗುತ್ತಿದೆ. ಅಂದರೆ ದೈಹಿಕ/ಮಾನಸಿಕ ತೊಂದರೆಯಿರುವ ವ್ಯಕ್ತಿಯು ಎಲ್ಲರಂತೆ ಮೇಲೆ ಹೇಳಿದ ಎಲ್ಲ ಅಂಶಗಳಲ್ಲಿಯೂ ಹಕ್ಕು ಇರುವಂಥವರಾಗಿದ್ದಾರೆ. ಇವೆಲ್ಲವೂ ಪರಿಪೂರ್ಣವಾಗಿ ವಿಭಿನ್ನ ಸಾಮರ್ಥ್ಯ ಇರುವ ಮಕ್ಕಳಿಗೆ ಸಿಗಬೇಕು ಎನ್ನುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿ. ಅಳವಡಿಸಿಕೊಳ್ಳುವ ಅಥವಾ ಹೊಂದಿಕೆಯಾಗುವಂತಹ ಕ್ರೀಡೆ ಮತ್ತು ಮನೋರಂಜನೆ ಯಾವುದೇ ರೀತಿಯ ಅಂಗವೈಕಲ್ಯ ಅಂದರೆ ವಾಕ್‌ಶ್ರವಣ ತೊಂದರೆಯಿರುವ, ದೈಹಿಕ ಸಮಸ್ಯೆಗಳು (ಸೆರೆಬ್ರಲ್‌ ಪಾಲ್ಸಿ, ಡೌನ್ಸ್‌ ಸಿಂಡ್ರೋಮ್‌ ಹಾಗೂ ಇನ್ನಿತರ) ಇರುವ, ದೃಷ್ಟಿ ದೋಷ ಇರುವವರಿಗೆ ಅನ್ವಯವಾಗುತ್ತದೆ.

ನಮ್ಮ ದೇಶದಲ್ಲಿ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ಯಾರಾಲಂಪಿಕ್ಸ್‌, ವಿಶೇಷ ಒಲಂಪಿಕ್ಸ್‌ನಂತಹ ಹಲವು ಸ್ಪರ್ಧೆಗಳನ್ನು ವಿಭಿನ್ನ ಸಾಮರ್ಥ್ಯ ಇರುವವರಿಗೆ ನಡೆಸಲಾಗುತ್ತಿದೆ. ನಮ್ಮ ದೇಶದ ಅವಕಾಶ ಇರುವಂತಹವರು, ಆರ್ಥಿಕ ಸಾಮರ್ಥ್ಯ ಹೊಂದಿರುವ ಹೆತ್ತವರು ತಮ್ಮ ಮಕ್ಕಳಿಗೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸುವಂತೆ ಪ್ರೋತ್ಸಾಹ ನೀಡುತ್ತಿದ್ದಾರೆ. ಆದರೂ ಅವಕಾಶ ವಂಚಿತರು ಹಲವರಿದ್ದಾರೆ. ವಿಭಿನ್ನ ಸಾಮರ್ಥ್ಯ ಇರುವವರಿಗೆ ಕ್ರೀಡೆಯಿಂದಾಗುವ ಪ್ರಯೋಜನಗಳು: ಕ್ರೀಡೆ ಮತ್ತು ಮನೋರಂಜನಾ ಆಟಗಳಿಂದ ವಿಭಿನ್ನ ಸಾಮರ್ಥ್ಯವಿರುವ ಮಕ್ಕಳಿಗೆ ಹಲವು ಪ್ರಯೋಜನಗಳಿವೆ.

ದೈಹಿಕ ಚಟುವಟಿಕೆಯಿಂದ ಕಲಿಕೆಯ ಸಾಮರ್ಥ್ಯ ಹೆಚ್ಚುವುದು, ತಾನೂ ಮಾಡಬಲ್ಲೆ ಎಂಬ ವಿಶ್ವಾಸವು ಮತ್ತಷ್ಟು ಕಾರ್ಯಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಉತ್ತೇಜನ ನೀಡುತ್ತದೆ. ಶ್ವಾಸಕೋಶ, ಹೃದಯ ಸಂಬಂಧಿ ತೊಂದರೆಗಳಿಂದ ದೂರ ಇಡುತ್ತದೆ. ಮೇಲಾಗಿ ಹೆತ್ತವರಿಗೆ ತನ್ನ ಮಗುವು ಇತರರಂತೆ ಆಡಲು ಸಾಧ್ಯ ಎಂದು ತೋರಿದಾಗ ಬರುವ ತೃಪ್ತಿ ಸಮಾಧಾನ ನಿಜಕ್ಕೂ ಅವರ್ಣನೀಯ. ವಿಭಿನ್ನ ಸಾಮರ್ಥ್ಯ ಇರುವ ಮಕ್ಕಳಿಗೆ ಮತ್ತು ಹೆತ್ತವರಿಗೆ ಈಗ ಬೇಕಿರುವುದು ನಮ್ಮ ಅನುಕಂಪವಲ್ಲ, “ಉತ್ತೇಜನ’ ಮಾತ್ರ!

ಹೊಂದಿಕೆಯಾಗುವ ಕ್ರೀಡೆ ಮತ್ತು ಮನೋರಂಜನೆ

ಆಟೋಟಗಳಲ್ಲಿ ವಿಧಗಳು:
ವೈಯಕ್ತಿಕ ಆಟಗಳು: ನೃತ್ಯ, ಸಮರ ಕಲೆಗಳು, ಟೆನ್ನಿಸ್‌, ಈಜು, ಸೈಕ್ಲಿಂಗ್‌, ಓಟದ ಸ್ಪರ್ಧೆಗಳು, ಬಿಲ್ಲುಗಾರಿಕೆ.
ತಂಡವಾಗಿ ಆಡುವಂತ ಕ್ರೀಡೆಗಳು: ನೃತ್ಯ, ಬಾಸ್ಕೆಟ್‌ಬಾಲ್‌, ವಾಲಿಬಾಲ್‌, ಕ್ರಿಕೆಟ್‌, ಬೇಸ್‌ಬಾಲ್‌.  ಮೇಲೆ ಹೇಳಿದವುಗಳನ್ನು ಸ್ಪೆಶಲ್‌ ಸ್ಕೂಲ್‌ನಲ್ಲಿ ಮಾಡಿಸುತ್ತಿದ್ದಾರೆ. ಆದರೆ ವಿಶೇಷ ಶಾಲೆಗೆ ಹೋಗದ ಮಕ್ಕಳಿಗೂ ಈ ಅವಕಾಶ ನೀಡಬೇಕಾಗಿದೆ.

ಸ್ಪರ್ಧಾತ್ಮಕ ಕ್ರೀಡೆಗಳು
ದೈಹಿಕ ನ್ಯೂನತೆಗಳು ಇರುವವರಿಗಾಗಿ ನಡೆಸಲಾಗುವ ಕ್ರೀಡಾ ಸ್ಪರ್ಧೆ ಪ್ಯಾರಾಲಂಪಿಕ್ಸ್‌. ಮಾನಸಿಕ ಅಸಮರ್ಥತೆ ಇರುವವರಿಗಾಗಿ ನಡೆಸುವ ಕ್ರೀಡಾಸ್ಪರ್ಧೆ ಸ್ಪೆಶಲ್‌ ಒಲಂಪಿಕ್ಸ್‌. ಅಮೆರಿಕನ್‌ ಅಕಾಡೆಮಿ ಆಫ್ ಸೆರಬ್ರಲ್‌ ಪಾಲ್ಸಿ ಮತ್ತು ಡೆವಲಪ್‌ಮೆಂಟಲ್‌ ಮೆಡಿಸಿನ್‌ ಸಂಘಟನೆಯ ವಾರ್ಷಿಕ ಸಮ್ಮೇಳನದಲ್ಲಿ ಭಾಗಿಯಾಗುವ ಅವಕಾಶ ನನ್ನ ವೃತ್ತಿ ಜೀವನದ ಅನುಭವವನ್ನು ಹೆಚ್ಚಿಸಿತ್ತು ಮತ್ತು ವಿಭಿನ್ನ ಸಾಮರ್ಥವುಳ್ಳವರಿಗಾಗಿ ಕಾರ್ಯ ಚಟುವಟಿಕೆಗಳನ್ನು ಹೇಗ ನಮ್ಮ ನಾಡಿನಲ್ಲಿ ಪ್ರಾರಂಭಿಸುವುದು ಎಂಬ ಚಿಂತನೆಯನ್ನು ಹೆಚ್ಚಿ ಸುವಲ್ಲಿ ಸಹಕಾರಿಯಾಯಿತು. ಸಮ್ಮೇಳನದಲ್ಲಿ ವೃತ್ತಿಪರರೊಂದಿಗೆ ವಿಭಿನ್ನ ಸಾಮರ್ಥ್ಯವುಳ್ಳವರು, ಹೆತ್ತವರು ಭಾಗವಹಿಸುವ ಸಮಾನ ಅವಕಾಶವನ್ನು ಪಡೆದುದನ್ನು ನಾನು ನೋಡಿದ್ದೇನೆ. ಸುಧಾರಿತ ಯಂತ್ರೋಪಕರಣಗಳ ಸಹಾಯದೊಂದಿಗೆ ದೈಹಿಕ ಮತ್ತು ಮಾನಸಿಕ ಭಿನ್ನ ಸಾಮರ್ಥ್ಯ ಉಳ್ಳವರು ಎಲ್ಲರೊಂದಿಗೆ ಬೆರೆಯುವುದು, ಸಂಭಾಷಣೆಯಲ್ಲಿ ನಿರತವಾಗುವುದನ್ನು ನೋಡಿ ಬೆರಗಾಗಿದ್ದೇನೆ. ಎಲ್ಲ ವಿಭಾಗಗಳಲ್ಲೂ ವಿಭಿನ್ನ ಸಾಮರ್ಥ್ಯದವರಿಗೆ ಅವರ ಹೆತ್ತವರಿಗೂ ಮೊದಲ ಆದ್ಯತೆ.

ಈ ವರ್ಷದ ವಿಶ್ವ ಅಂಗವಿಕಲರ ದಿನ ಕಳೆದರೂ ಹೊತ್ತಿನಲ್ಲಿ ನಮ್ಮ ಮುಂದಿನ ಹೆಜ್ಜೆ ಏನು, ನಮ್ಮ ನಿಮ್ಮೆಲ್ಲರ ಹೊಣೆಗಾರಿಕೆ ಏನು ಎಂಬುದು ಸದಾ ನಾವು ಹಾಕಿಕೊಳ್ಳಬೇಕಾದ ಪ್ರಶ್ನೆಗಳು.

1. ಹೆತ್ತವರನ್ನು ಹೀಗೆ ಕೇಳುವ ಮೊದಲು ಆಲೋಚಿಸಿ: ನಿಮ್ಮ ಮಗು ಹೀಗೆ ಯಾಕೆ? ತುಂಬಾ ಕಷ್ಟ ಅಲ್ಲವಾ?
ಇದರ ಬದಲಿಗೆ ಹೀಗೆ ಹೆತ್ತವರನ್ನು ಕೇಳಿ: ನಿಮ್ಮ ಮಗುವಿನ ನಗು ನೋಡಿ ಖುಶಿಯಾಯ್ತು, ಹೇಗೆ ಎಷ್ಟು ಚೆನ್ನಾಗಿ ನನ್ನ ಕೈಯನ್ನು ಹಿಡಿದಿದ್ದಾನೆ ನೋಡಿ. ಇಂತಹ ಉತ್ತೇಜನಕಾರಿ ಮಾತುಗಳು ಹೆತ್ತವರಿಗೆ ತುಂಬ ಸಹಕಾರಿಯಾಗುತ್ತವೆ.

2. ಸಾಮಾನ್ಯ (Normal) ಮಕ್ಕಳ ತಂದೆ ತಾಯಿಯರ ಪಾತ್ರ: ನಮ್ಮ ಮಕ್ಕಳಿಗೆ ದೈಹಿಕ ಹಾಗೂ ಮಾನಸಿಕ ತೊಂದರೆಯಿರುವ ಅಥವಾ ಕಲಿಕೆಯಲ್ಲಿ ನಿಧಾನಗತಿಯಲ್ಲಿ ಇರುವ ತಮ್ಮ ಸಹಪಾಠಿ ಮಕ್ಕಳನ್ನು ಹೇಗೆ ಗುರುತಿಸಬೇಕು ಹಾಗೂ ಹೇಗೆ ಅವರಿಗೆ ಉತ್ತೇಜನ ಕೊಡಬಹುದು ಎಂಬುದರ ಬಗ್ಗೆ ತಿಳಿವಳಿಕೆಯನ್ನು ಚಿಕ್ಕ ವಯಸ್ಸಿನಿಂದ ಒದಗಿಸಬೇಕು. ಅದೇ ರೀತಿ ಹಿರಿಯ ನಾಗರಿಕರ ಬಗ್ಗೆ ಗೌರವವನ್ನು ನೀಡುವುದು ಮತ್ತು ಸಹಕರಿಸುವುದು. ಇದೆಲ್ಲ ಹೆತ್ತವರಿಂದ ಸಾಧ್ಯವಿದೆ. ಹಲವು ಉದಾಹರಣೆಗಳನ್ನು ಕೊಡಬಹುದಾಗಿದೆ.

3. ಈಗಿನ ಶಿಕ್ಷಣ ಪದ್ಧತಿ ಮತ್ತು ಅಧ್ಯಾಪಕರ ಪಾತ್ರ. ಸಮನ್ವಯ ಶಿಕ್ಷಣ ಎಂಬ ಪಠ್ಯಮಾದರಿಯನ್ನು ಸರಕಾರದಿಂದ ಸಿದ್ಧ ಪಡಿಸಲಾಗಿದೆ. ಇದರನ್ವಯ ದೈಹಿಕ ತೊಂದರೆ ಇರುವ ಮಕ್ಕಳು ವಿಶೇಷ ಶಾಲೆಯ ದಾಖಲಾತಿಗೆ ಒಳಪಡುವ ಆವಶ್ಯಕತೆಯಿಲ್ಲ. ಅವರ ಬುದ್ಧಿಸಾಮರ್ಥ್ಯ ಉಳಿದ ಸಾಮಾನ್ಯ ಮಕ್ಕಳಂತೆ ಇರುವಾಗ ಪಠ್ಯಕ್ರಮದಲ್ಲಿ ಸ್ವಲ್ಪ ಬದಲಾವಣೆ ಮಾಡಿ ಅವರಿಗೂ ಎಲ್ಲ ಮಕ್ಕಳೊಂದಿಗೆ ಬೆರೆಯುವ ಅವಕಾಶ ನೀಡುವುದು ಮತ್ತು ಇತರ ಮಕ್ಕಳು ಈ ಮಕ್ಕಳನ್ನು ನೋಡಿಕೊಳ್ಳಲು ತಿಳಿಹೇಳುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಬೇರೆ ಮಕ್ಕಳು ಈ ಮಕ್ಕಳ ಅವಹೇಳನ ಮಾಡದಂತೆ ನೋಡಿಕೊಳ್ಳುವ ಜವಾಬ್ದಾರಿ ಶಿಕ್ಷಕರದ್ದುಲ್ಲದೆ ಪೋಷಕರದ್ದೂ ಆಗಿರುತ್ತದೆ.

ಅಮೆರಿಕನ್‌ ಅಕಾಡೆಮಿ ಆಫ್ ಸೆರಬ್ರಲ್‌ ಪಾಲ್ಸಿ ಆ್ಯಂಡ್‌ ಡೆವಲಪ್‌ಮೆಂಟಲ್‌ ಮೆಡಿಸಿನ್‌ (AACPDM) ಸದಸ್ಯೆಯಾಗಿ ವಿಶೇಷ ಅಗತ್ಯವುಳ್ಳ ಮಕ್ಕಳನ್ನು ಎಲ್ಲರಂತೆ ಕಾಣುವುದರ ಬಗೆಗೆ ತಿಳಿವಳಿಕೆಯನ್ನು ಪಸರಿಸುವುದು ನನ್ನ ಮೊದಲ ಆದ್ಯತೆ. ಸರಕಾರದ ಸೀಮಿತ ಸಮನ್ವಯ ಶಿಕ್ಷಣದ ಶಿಕ್ಷಕರು ನಮ್ಮ ವಿಭಾಗದೊಂದಿಗೆ ತುಂಬು ಸಹಕಾರ ನೀಡುತ್ತಿದ್ದಾರೆ. ವಿಭಿನ್ನ ಸಾಮರ್ಥ್ಯ ವಿರುವವರ ಬಗ್ಗೆ ಅವರ ಕಾಳಜಿ, ಕಾರ್ಯ ವೈಖರಿ, ದೃಢ ವಿಶ್ವಾಸವನ್ನು ನೋಡಿ ಆನಂದಿಸಿದ್ದೇನೆ, ಪ್ರಭಾವಿತಳಾಗಿದ್ದೇನೆ. ಇದುವರೆಗಿನ ಆಸ್ಪತ್ರೆ ಆಧಾರಿತ ವೃತ್ತಿ ಜೀವನದಲ್ಲಿ ಭೇಟಿಯಾದ ಪುಟ್ಟ ಮಕ್ಕಳು ಅವರ ಹೆತ್ತವರು ಅನುಭವ ಬುತ್ತಿಯನ್ನು ತುಂಬುತ್ತಲೇ ಇದ್ದಾರೆ.

ಡಾ| ಭಾಮಿನೀ ಕೃಷ್ಣ ರಾವ್‌,
ಪ್ರೊಫೆಸರ್‌, ಫಿಸಿಯೋಥೆರಪಿ ವಿಭಾಗ , ಮಣಿಪಾಲ ಕಾಲೇಜ್‌ ಆಫ್ ಹೆಲ್ತ್‌ ಸೈಯನ್ಸ್‌, ಮಣಿಪಾಲ

ಟಾಪ್ ನ್ಯೂಸ್

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3–child-growth

Child Growth: ಮಕ್ಕಳು ಬೇಗನೇ ದೊಡ್ಡವರಾಗುವುದು

2-bamboo-brush

Bamboo:ಶುದ್ಧ ಮತ್ತು ಹಸುರು ಪರಿಸರ ಕಾಯ್ದುಕೊಳ್ಳಲು ಹಲ್ಲುಜ್ಜುವ ಬಿದಿರಿನಬ್ರಶ್‌ ಮೊರೆಹೋಗಿ

2-kidney-day

World Kidney Day: ಹಿಮೋಡಯಾಲಿಸಿಸ್‌: ಯಾವಾಗ ಅಗತ್ಯ? ಯಾಕೆ ಆವಶ್ಯಕ? ಕಾರ್ಯನಿರ್ವಹಣೆ ಹೇಗೆ?

3-health

Rare diseases: ಅಪರೂಪದ ರೋಗಗಳು: ಕೆಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

4-cholestral

Cholesterol: ಕೊಲೆಸ್ಟರಾಲ್‌ ತಗ್ಗಿಸುವ ಔಷಧ ಸ್ಟಾಟಿನ್‌

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.