ಕೊರೊನಾ; ವೈರಸ್‌ ಕಾಯಿಲೆ 2019 (ಕೋವಿಡ್‌-19) ; ರೋಗ ಲಕ್ಷಣ, ಪತ್ತೆ, ಚಿಕಿತ್ಸಾ ಮಾಹಿತಿ

ಕೇಂದ್ರ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ 24X7 ಸಹಾಯವಾಣಿ ಸಂಖ್ಯೆ +91-11-23978046

Team Udayavani, Mar 8, 2020, 5:00 AM IST

ಕೊರೊನಾ; ವೈರಸ್‌ ಕಾಯಿಲೆ 2019 (ಕೋವಿಡ್‌-19)

ಏನಿದು: ಕೊರೊನಾ ವೈರಸ್‌
ಎಲ್ಲಿ ಪ್ರಾರಂಭವಾಯಿತು: ಚೀನದ ವುಹಾನ್‌, ಹುಬೈ ಪ್ರಾಂತ್ಯಗಳಲ್ಲಿ
ಯಾವಾಗ ಪ್ರಾರಂಭವಾಯಿತು: ಡಿಸೆಂಬರ್‌ 2019- ಪ್ರಸ್ತುತ
ಯಾವ ರೀತಿ ಹರಡುತ್ತದೆ?- ಮನುಷ್ಯನಿಂದ ಮನುಷ್ಯನಿಗೆ
ರೋಗಲಕ್ಷಣ: ಶೀತ, ಕೆಮ್ಮು, ಜ್ವರ
ಪರೀಕ್ಷಿಸುವುದು/ಪತ್ತೆ ಹಚ್ಚುವುದು: ಕಫ‌ ಮತ್ತು ಮೂಗು/ ಗಂಟಲಿನ ದ್ರವ (ಸ್ವಾಬ್‌)ಗಳ ಪರೀಕ್ಷೆಯ ಮೂಲಕ
ಚಿಕಿತ್ಸೆ: ಸದ್ಯಕ್ಕೆ ಯಾವುದೇ ನಿರ್ದಿಷ್ಟವಾದ ಚಿಕಿತ್ಸೆ ಅಥವಾ ಲಸಿಕೆ ಲಭ್ಯವಿಲ್ಲ
ತಡೆಗಟ್ಟುವಿಕೆ ಮತ್ತು ನಿಯಂತ್ರಣ: ಕೇವಲ ರೋಗಲಕ್ಷಣ ಆಧಾರಿತ ಚಿಕಿತ್ಸೆ

ಇದು ಹೇಗೆ ಹರಡುತ್ತದೆ?
– ವ್ಯಕ್ತಿಯಿಂದ ವ್ಯಕ್ತಿಗೆ
– ಸೋಂಕಿತ ವ್ಯಕ್ತಿ ಕೆಮ್ಮು ಅಥವಾ ಸೀನುವಾಗ ಉಸಿರಾಟದ ಹನಿಗಳ ನಿಕಟ ಸಂಪರ್ಕದ ಮೂಲಕ
– ಸೋಂಕಿತ ವ್ಯಕ್ತಿಯ ಕೆಮ್ಮು ಹನಿಗಳಿಂದ ಕಲುಷಿತವಾದ ವಸ್ತುಗಳನ್ನು ಸ್ಪರ್ಶಿಸುವ ಮೂಲಕ

ಪರೀಕ್ಷೆ
– ಕಫ‌ ಮತ್ತು ಮೂಗು/ ಗಂಟಲಿನ ದ್ರವ (ಸ್ವಾಬ್‌)ಗಳ ಪರೀಕ್ಷೆಗಳಿಗಾಗಿ, ರಕ್ತ ಪರೀಕ್ಷೆಗಳಿಗಾಗಿ ಆಯ್ದ ಲ್ಯಾಬ್‌ಗಳಲ್ಲಿ ವಿಶೇಷ ಕಿಟ್‌ಗಳು ಲಭ್ಯವಿವೆ.

ಚಿಕಿತ್ಸೆ
ಸದ್ಯಕ್ಕೆ ಯಾವುದೇ ನಿರ್ದಿಷ್ಟವಾದ ಚಿಕಿತ್ಸೆ ಅಥವಾ ಲಸಿಕೆ ಲಭ್ಯವಿಲ್ಲ. ರೋಗಲಕ್ಷಣ ಆಧಾರಿತ (ಜ್ವರ, ಕೆಮ್ಮು, ಶೀತ, ಉಸಿರಾಟದ ತೊಂದರೆ, ಇತರೆ) ಚಿಕಿತ್ಸೆ ಮಾತ್ರ ಲಭ್ಯವಿದೆ.

ಲಕ್ಷಣಗಳು
– ಸೋಂಕು ಹೊಂದಿರುವವರ ಸಂಪರ್ಕಕ್ಕೆ ಬಂದ 2 ದಿನಗಳಿಂದ 14 ದಿನಗಳ ವರೆಗೆ ರೋಗಲಕ್ಷಣಗಳು ಕಾಣಿಸಿಕೊಳ್ಳಬಹುದು.
– ಜ್ವರ, ಕೆಮ್ಮು, ಮತ್ತು ಉಸಿರಾಟದ ತೊಂದರೆ ಮುಂತಾದ ಸಾಮಾನ್ಯ ಲಕ್ಷಣಗಳು.
– ತೀವ್ರತರವಾದ ರೋಗಗಳಿಂದ ಬಲಳುತ್ತಿರುವ ಹಾಗೂ ವಯಸ್ಸಾದ ರೋಗಿಗಳಲ್ಲಿ ತೀವ್ರ ಅನಾರೋಗ್ಯ, ನ್ಯುಮೋನಿಯ ಮತ್ತು ಮರಣ ಸಂಭವ ಹೆಚ್ಚು

ಡಿಸೆಂಬರ್‌ ತಿಂಗಳಿನಿಂದ ಇಡೀ ವಿಶ್ವದಾದ್ಯಂತ ಕೊರೊನಾ ವೈರಸ್‌ ಸೋಂಕು ಜನತೆಯನ್ನು ಕಂಗೆಡಿಸಿದೆ. ಚೀನದಲ್ಲಿ ಪ್ರಾರಂಭದಲ್ಲಿ ಕಂಡುಬಂದ ಈ ಸೋಂಕು ಈಗ ವಿಶ್ವದಾದ್ಯಂತ ಹರಡಿದ್ದು, ಭಾರತಕ್ಕೂ ಕಾಲಿಟ್ಟಿದೆ. 2020ರ ಜನವರಿ 30ರಂದು ವಿಶ್ವ ಆರೋಗ್ಯ ಸಂಸ್ಥೆಯ ಅಂತಾರಾಷ್ಟ್ರೀಯ ಆರೋಗ್ಯ ನಿಯಮಗಳ ತುರ್ತು ಸಮಿತಿಯು ಕೊರೊನಾ ವೈರಸ್‌ ಕಾಯಿಲೆಯನ್ನು ‘ಅಂತಾರಾಷ್ಟ್ರೀಯ ಕಾಳಜಿಯ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ’ ಎಂದು ಘೋಷಿಸಿತು.

2020ರ ಫೆ.11ರಂದು ವಿಶ್ವ ಆರೋಗ್ಯ ಸಂಸ್ಥೆಯು 2019ರಲ್ಲಿ ಕಂಡು ಬಂದ ಹೊಸ ರೀತಿಯ ಕೊರೊನಾ ವೈರಸ್‌ ಸೋಂಕಿಗೆ ಕೋವಿಡ್‌-19 ಎಂಬ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡಿತು. ಅನೇಕ ವಿಧದ ಮಾನವ ಕೊರೋನಾ ವೈರಸ್‌ಗಳು ಉಸಿರಾಟದ ಕಾಯಿಲೆಗಳಿಗೆ ಕಾರಣವಾಗುತ್ತವೆ. ಆದರೆ ಕೋವಿಡ್‌-19 ಹೊಸ ಕಾಯಿಲೆಯಾಗಿದ್ದು, ಈ ಹಿಂದೆ ಮಾನವರಲ್ಲಿ ಕಂಡುಬಂದಿಲ್ಲ. ಚೀನದ ವುಹಾನ್‌, ಹುಬೈ ಪ್ರಾಂತ್ಯಗಳಲ್ಲಿ 2019ರ ಡಿಸೆಂಬರ್‌ನಿಂದ ಮತ್ತು ವಿಶ್ವದ ಇತರ ರಾಷ್ಟ್ರಗಳಲ್ಲಿ ಕಳೆದ ತಿಂಗಳಿನಿಂದ ಕೋವಿಡ್‌-19 ಸೋಂಕು ವೇಗವಾಗಿ ಹರಡುತ್ತಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಪರಿಸ್ಥಿತಿಯ ವರದಿ- ಮಾರ್ಚ್‌ 4, 2020
ಇಡೀ ವಿಶ್ವದಲ್ಲಿ 93,090 ದೃಢಪಡಿಸಿದ ಪ್ರಕರಣಗಳು, ಚೀನಾದಲ್ಲಿ 80,422 ಪ್ರಕರಣಗಳು ವರದಿಯಾಗಿದ್ದು, 2,984 ಮರಣ ಸಂಭವಿಸಿದೆ. ಚೀನಾ ಹೊರತುಪಡಿಸಿ ವಿಶ್ವದ ಇತರ 76 ರಾಷ್ಟ್ರಗಳಲ್ಲಿ 12,668 ಪ್ರಕರಣಗಳು ದೃಢಪಟ್ಟಿದ್ದು 214 ಮರಣ ಸಂಭವಿಸಿದೆ.

ಐಸಿಎಂಆರ್‌ನ ಮಾಧ್ಯಮ ಪ್ರಕಟಣೆ ಫೆ.27, 2020
ಭಾರತದಲ್ಲಿ ಕೋವಿಡ್‌ ಸಂಶಯಾಸ್ಪದ ಮಾದರಿಗಳ ಪರೀಕ್ಷೆಯಲ್ಲಿ ಸೋಂಕು ವ್ಯಾಪಕವಿರುವ ರಾಷ್ಟ್ರಗಳಿಗೆ ಪ್ರವಾಸಕ್ಕೆ ತೆರಳಿ ಭಾರತಕ್ಕೆ ವಾಪಸಾಗಿದ್ದ 3 ವ್ಯಕ್ತಿಗಳಲ್ಲಿ ಕೋವಿಡ್‌-19 ಸೋಂಕು ಕಂಡುಬಂದಿದ್ದು, ಅವರು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.

ಆ ಬಳಿಕ ಯಾವುದೇ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ. ಆದರೆ ಮಾ.3ರಂದು ಮಾಧ್ಯಮಗಳ ವರದಿಯಂತೆ ತೆಲಂಗಾಣ, ಜೈಪುರ, ದಿಲ್ಲಿಗಳಲ್ಲಿ ಮೂರು ವ್ಯಕ್ತಿಗಳಿಗೆ ಕೋವಿಡ್‌-19 ಸೋಂಕು ಇರುವುದು ಪರೀಕ್ಷೆಯಲ್ಲಿ ದೃಢಪಟ್ಟಿದೆ.

ಈ ಹಿಂದಿನ ಕೊರೋನಾ ವೈರಸ್‌ಗಳಾದ ಮರ್ಸ್‌, ಸಾರ್ಸ್‌ ಇವುಗಳು ಮನುಷ್ಯನಿಂದ ಮನುಷ್ಯನಿಗೆ ಹರಡಲು, ಸೋಂಕು ಹೊಂದಿರುವ ವ್ಯಕ್ತಿಯ ಉಸಿರಾಟದ ಹನಿಗಳು ಆರೋಗ್ಯವಂತ ವ್ಯಕ್ತಿಯ ಸಂಪರ್ಕ ಹೊಂದುವುದು ಕಾರಣವಾಗಿತ್ತು. ಸೋಂಕು ಹೊಂದಿರುವ ವ್ಯಕ್ತಿ ಕೆಮ್ಮಿದಾಗ, ಸೀನಿದಾಗ ಉಸಿರಾಟದ ಹನಿಗಳು ವ್ಯಕ್ತಿಯು ದಿನನಿತ್ಯ ಬಳಸುವ ಟವೆಲ್‌, ಹಾಸಿಗೆಗಳು, ಟೇಬಲ್‌, ಗ್ಲಾಸ್‌, ಪ್ಲಾಸ್ಟಿಕ್‌ ಮುಂತಾದ ನಿರ್ಜೀವ ವಸ್ತುಗಳ ಮೇಲೆ ಕುಳಿತುಕೊಳ್ಳುತ್ತವೆ. ಆರೋಗ್ಯವಂತ ವ್ಯಕ್ತಿಯು ಈ ವಸ್ತುಗಳನ್ನು ಸ್ಪರ್ಶಿಸಿದಾಗ ಆತನೂ ಈ ಸೋಂಕುಗಳಿಗೆ ತುತ್ತಾಗುವ ಸಂಭವ ಹೆಚ್ಚಾಗಿರುತ್ತದೆ. ಕೋವಿಡ್‌-19 ಕೂಡ ಇದೇ ರೀತಿ ಹರಡುತ್ತದೆ.

ಲಭ್ಯವಿರುವ ದತ್ತಾಂಶಗಳ ಪ್ರಕಾರ ವಿಶ್ವ ಆರೋಗ್ಯ ಸಂಸ್ಥೆಯ ಪ್ರಾಥಮಿಕ ಅಂದಾಜಿನಂತೆ ರೋಗ ಹೊಂದಿದವರೊಂದಿಗೆ ಆರೋಗ್ಯವಂತ ವ್ಯಕ್ತಿಯು ನೇರ ಅಥವಾ ಪರೋಕ್ಷ ಸಂಪರ್ಕವನ್ನು ಹೊಂದಿದ ಸರಾಸರಿ 5-6 ದಿನಗಳಲ್ಲಿ ಈ ಸೋಂಕಿಗೆ ತುತ್ತಾಗುತ್ತಾರೆ. ಇದುವರೆಗೆ ವರದಿಯಾದ ಪ್ರಕರಣಗಳಲ್ಲಿ ಸೋಂಕಿಗೆ ತುತ್ತಾದವರ ಸಂಭಾವ್ಯ ಮರಣದ ಪ್ರಮಾಣ ಶೇ.2-3 ಆಗಿದೆ. ಅದಾಗಿಯೂ ತೀವ್ರ ರೋಗವನ್ನು ಹೊಂದಿರುವವರು ಮತ್ತು ವಯಸ್ಸಾದವರಲ್ಲಿ ಕೋವಿಡ್‌-19 ಸೋಂಕಿನಿಂದಾಗಿ ಮರಣ ಪ್ರಮಾಣ ಹೆಚ್ಚಾಗಿರುತ್ತದೆ.

ಉಸಿರಾಟದ ಸೋಂಕು ಹರಡುವ ಅಪಾಯವನ್ನು ತಪ್ಪಿಸುವ ಕ್ರಮಗಳು
– ಉಸಿರಾಟದ ಕಾಯಿಲೆಯಿಂದ ಬಳಲುತ್ತಿರುವ ಜನರೊಂದಿಗೆ ನಿಕಟ ಸಂಪರ್ಕವನ್ನು ತಪ್ಪಿಸಿ.

– ವಿಶೇಷವಾಗಿ ಅನಾರೋಗ್ಯ ಹೊಂದಿರುವ ಜನರ ಅಥವಾ ಅವರ ಪರಿಸರದ ನೇರ ಸಂಪರ್ಕವನ್ನು ಹೊಂದಿದ ಬಳಿಕ ಸಾಬೂನು ಮತ್ತು ನೀರಿನಿಂದ ಆಗಾಗ್ಗೆ ಚೆನ್ನಾಗಿ ಕೈ ತೊಳೆದುಕೊಳ್ಳಬೇಕು.

– ಕೃಷಿ ಅಥವಾ ಸಾಕು ಪ್ರಾಣಿಗಳೊಂದಿಗೆ ಅಸುರಕ್ಷಿತ ಸಂಪರ್ಕವನ್ನು ತಪ್ಪಿಸುವುದು.

– ಪ್ರಾಣಿಗಳ ಹಸಿ ಮಾಂಸವನ್ನು ಸೇವನೆ ಮಾಡದಿರುವುದು. ಮಾಂಸವನ್ನು ಸೇವಿಸುವವರು ಚೆನ್ನಾಗಿ ಬೇಯಿಸಿದ ಮಾಂಸವನ್ನು ಸೇವನೆ ಮಾಡಬೇಕು.

– ಉಸಿರಾಟದ ಸೋಂಕನ್ನು ಹೊಂದಿರುವವರು ಕೆಮ್ಮುವಾಗ ಆರೋಗ್ಯಕರ ಅಭ್ಯಾಸಗಳನ್ನು (ದೂರ ಕಾಪಾಡಿಕೊಳ್ಳುವುದು, ಕೆಮ್ಮುವಾಗ ಸೀನುವಾಗ ಕರವಸ್ತ್ರ ಅಥವಾ ಬಳಸಿ ಬಿಸಾಡಬಹುದಾದ ಟಿಶ್ಯೂ ಪೇಪರ್‌ಗಳನ್ನು ಬಳಸಿ ಸುರಕ್ಷಿತವಾಗಿ ವಿಲೇವಾರಿ ಮಾಡಬೇಕು ಮತ್ತು ಕೈಯನ್ನು ತೊಳೆದುಕೊಳ್ಳುವುದು) ಬೆಳೆಸಿಕೊಳ್ಳಬೇಕು.

– ಸೋಂಕು ಹೊಂದಿರುವವರೊಂದಿಗೆ ಸಂಪರ್ಕವನ್ನು ತಪ್ಪಿಸಿ, ಅನಾರೋಗ್ಯದಿಂದ ಬಳಲುತ್ತಿರುವಾಗ ಪ್ರಯಾಣಿಸಬೇಡಿ.

– ಚೀನಕ್ಕೆ ಅಥವಾ ಕೊರೊನಾ ವೈರಸ್‌ ಕಾಯಿಲೆ ಕಂಡು ಬಂದಿರುವ ವಿಶ್ವದ ಇತರ ರಾಷ್ಟ್ರಗಳಿಗೆ ಪ್ರಯಾಣಿಸಿದ 14 ದಿನಗಳಲ್ಲಿ ಜ್ವರ, ಕೆಮ್ಮು ಅಥವಾ ಉಸಿರಾಟದ ತೊಂದರೆ ಇದ್ದರೆ ವೈದ್ಯಕೀಯ ಸಲಹೆ ಪಡೆಯಿರಿ.

– ಕೈ ತೊಳೆಯದೆ ಕಣ್ಣು, ಮೂಗು ಮತ್ತು ಬಾಯಿಯನ್ನು ಸ್ಪರ್ಶಿಸುವುದನ್ನು ತಪ್ಪಿಸಿ.

– ಕನಿಷ್ಠ 20 ಸೆಕೆಂಡುಗಳ ಕಾಲ ಸೋಪ್‌ ಮತ್ತು ನೀರಿನಿಂದ ಕೈಗಳನ್ನು ಚೆನ್ನಾಗಿ ತೊಳೆಯಿರಿ.

– ಮನೆಯಲ್ಲಿ ಆಗಾಗ್ಗೆ ಮುಟ್ಟಿದ ವಸ್ತುಗಳು ಮತ್ತು ಅದರ ಮೇಲ್ಮೈಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ ಮತ್ತು ಸೋಂಕುರಹಿತಗೊಳಿಸಿ.

ಮಾಸ್ಕ ಗಳ ಬಳಕೆ
– ಮಾಸ್ಕ್ ಗಳನ್ನು ಬಳಸುವುದು ಹೆಚ್ಚು ಸಹಾಯಕವಾಗುವುದಿಲ್ಲ. ಕೆಮ್ಮುವಾಗ ಆರೋಗ್ಯಕರ ಅಭ್ಯಾಸಗಳನ್ನು ಅನುಸರಿಸುವುದರಿಂದ ಮತ್ತು ಕೈ ನೈರ್ಮಲ್ಯವನ್ನು ಅಭ್ಯಾಸ ಮಾಡುವುದು ಹೆಚ್ಚಿನ ಪ್ರಯೋಜನವನ್ನು ಹೊಂದಿದೆ.

– ಆರೋಗ್ಯವಂತ ವ್ಯಕ್ತಿಗೆ ಉಸಿರಾಟದ ಖಾಯಿಲೆಯಿಂದ ರಕ್ಷಿಸಲು ಇದನ್ನು ಶಿಫಾರಸು ಮಾಡಲಾಗುವುದಿಲ್ಲ.

– ರೋಗಲಕ್ಷಣ ಹೊಂದಿರುವ ಜನರು ಇತರರಿಗೆ ಸೋಂಕು ಹರಡುವುದನ್ನು ತಪ್ಪಿಸಲು ಇದನ್ನು ಬಳಸಬೇಕು.

– ಆರೋಗ್ಯ ಕಾರ್ಯಕರ್ತರು ಮತ್ತು ಮನೆಯಲ್ಲಿ ಅನಾರೋಗ್ಯದ ವ್ಯಕ್ತಿಗಳನ್ನು ನೋಡಿಕೊಳ್ಳುವ ಜನರು ಇದನ್ನು ಬಳಸಬೇಕು.

ಜಗತ್ತು ಆಧುನಿಕತೆ ಹೊಂದುತ್ತಿರುವಂತೆಯೇ ಹೊಸ ಹೊಸ ರೀತಿಯ ಕಾಯಿಲೆಗಳು ಪತ್ತೆಯಾಗುತ್ತಿವೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಹೆಚ್ಚಿನ ಮುಂಜಾಗ್ರತೆ ವಹಿಸಿದಲ್ಲಿ ಈ ರೀತಿಯ ಸಾಂಕ್ರಾಮಿಕ ರೋಗಗಳನ್ನು ತಡೆಯಲು ಸಾಧ್ಯವಿದೆ.

ಈ ಸೋಂಕು, ಆರೋಗ್ಯದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮತ್ತು ಸೋಂಕು ಹರಡಿರುವ ರಾಷ್ಟ್ರಗಳಿಗೆ ಪ್ರಯಾಣ ಬೆಳೆಸಿ ಭಾರತಕ್ಕೆ ಹಿಂದಿರುಗಿದ 28 ದಿನಗಳ ಒಳಗಾಗಿ ಕೊರೊನಾ ವೈರಸ್‌ ಸೋಂಕಿನ ಲಕ್ಷಣಗಳು ಕಂಡು ಬಂದಲ್ಲಿ ತತ್‌ಕ್ಷಣ ಕೇಂದ್ರ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ 24X7 ಸಹಾಯವಾಣಿ ಸಂಖ್ಯೆ +91-11-23978046 ಸಂಪರ್ಕಿಸಬಹುದು.

– ಡಾ| ಚೈತ್ರಾ ಆರ್‌. ರಾವ್‌ , ಅಸೋಸಿಯೇಟ್‌ ಪ್ರೊಫೆಸರ್‌, ಕಮ್ಯುನಿಟಿ ಮೆಡಿಸಿನ್‌ ವಿಭಾಗ ಮತ್ತು ಕೋ-ಆರ್ಡಿನೇಟರ್‌, ಸೆಂಟರ್‌ ಫಾರ್‌ ಟ್ರಾವೆಲ್‌ ಮೆಡಿಸಿನ್‌ ರಾಘವೇಂದ್ರ ಭಟ್‌ ಎಂ. ,ಆರೋಗ್ಯ ಸಹಾಯಕರು, ಕಮ್ಯುನಿಟಿ ಮೆಡಿಸಿನ್‌ ವಿಭಾಗ,
ಕೆಎಂಸಿ ಮಣಿಪಾಲ

ಟಾಪ್ ನ್ಯೂಸ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

6-thyroid

Thyroid Disease: ಥೈರಾಯ್ಡ್ ಅನಾರೋಗ್ಯ ನಿರ್ಲಕ್ಷಿಸಿದರೆ ಮಾರಕವಾದೀತು ಎಚ್ಚರ!

4-health

Nutritional Foods: ಹದಿಹರಯದಲ್ಲಿ ಪೌಷ್ಟಿಕಾಂಶ ಅಗತ್ಯಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

1-qweqwqe

Ban in Singapore; ಎವರೆಸ್ಟ್‌ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.