ಕೋವಿಡ್‌ -19 ಮತ್ತು  ಮ್ಯುಕೋರ್ಮೈಕೋಸಿಸ್‌


Team Udayavani, May 30, 2021, 4:07 PM IST

Covid-19 and mucormycosis

ಮ್ಯುಕೋರ್ಮೈಕೋಸಿಸ್‌  ಎಂದರೇನು?

ಇದೊಂದು ಗಂಭೀರ ಶಿಲೀಂಧ್ರ ಸೋಂಕು; ಅನಾರೋಗ್ಯ, ದೀರ್ಘ‌ಕಾಲಿಕ ಆರೋಗ್ಯ ಸಮಸ್ಯೆ ಅಥವಾ ದೀರ್ಘ‌ಕಾಲಿಕ ಸ್ಟಿರಾಯ್ಡ ಚಿಕಿತ್ಸೆ/ ಆ್ಯಂಟಿಬಯಾಟಿಕ್‌ ಚಿಕಿತ್ಸೆಗಳಿಂದಾಗಿ ರೋಗ ನಿರೋಧಕ ಶಕ್ತಿ ದುರ್ಬಲವಾಗಿರುವವರಲ್ಲಿ ಬಹುತೇಕ

ಕಂಡುಬರುತ್ತದೆ. ಉತ್ತಮ ರೋಗನಿರೋಧಕ ಶಕ್ತಿ ಹೊಂದಿರುವವರಲ್ಲಿ ಇವು ಸೋಂಕು ಉಂಟು ಮಾಡುವುದು ಅಪರೂಪ. ಉದಾಹರಣೆಗೆ, ಮಧುಮೇಹಿಗಳು, ಗಡ್ಡೆ ಗಳಿಂದ ಬಾಧಿತರಾದವರು, ನ್ಯುಟ್ರೊಪೇನಿಕ್‌ ರೋಗಿಗಳು, ಪ್ರಮುಖ ಅಂಗಾಂಗ ಕಸಿಗೆ ಒಳಗಾದವರು, ಮೂತ್ರ ಪಿಂಡ ಕಾಯಿಲೆಯಿಂದ ಬಳಲುತ್ತಿರುವವರು, ಕೊರೊನಾ ರೋಗಿಗಳು ಇತ್ಯಾದಿ. ಮ್ಯುಕೊರೇಲ್ಸ್‌ ಎಂದು ಕರೆಯಲಾಗುವ ಸ್ಯಾಪ್ರೊಫೈಟಿಕ್‌ ಶಿಲೀಂಧ್ರಗಳ ಸಮೂಹದಿಂದ ಮ್ಯುಕೋರ್ಮೈಕೋಸಿಸ್‌ ಉಂಟಾಗುತ್ತದೆ (ಮ್ಯುಕೊರ್‌, ರಿಝೊಪಸ್‌, ಕನ್ನಿಂಗಾØಮೆಲಾ, ಸಿನ್ಸೆಫ‌ಲಾಸ್ಟ್ರಮ್‌, ಮೈಕೊಕ್ಲಾಡಸ್‌). ಈ ಶಿಲೀಂಧ್ರಗಳು ವಾತಾವರಣ, ದೇಹದಲ್ಲಿ ಈಗಾಗಲೇ ಇದ್ದು, ಸೋಂಕು ಉಂಟುಮಾಡುವ ಅವಕಾಶವನ್ನು ಬಳಸಿಕೊಳ್ಳುತ್ತವೆ.

38 ವರ್ಷ ವಯಸ್ಸಿನ ಉದ್ಯಮಿ ಹೇಮಂತ್‌ (ಹೆಸರು ಬದಲಾಯಿಸಿದೆ) ಅವರು ಆಸ್ಪತ್ರೆಯಲ್ಲಿ 18 ದಿನಗಳ ಹೋರಾಟದ ಬಳಿಕ ಕೋವಿಡ್‌ ಸೋಂಕಿನಿಂದ ಗುಣಮುಖರಾದರು. ಆಸ್ಪತ್ರೆಯಿಂದ ಬಿಡುಗಡೆಗೊಂಡ ಕೆಲವು ದಿನಗಳ ಬಳಿಕ ಅವರಿಗೆ ಮುಖದ ಒಂದು ಬದಿಯಲ್ಲಿ ನೋವು ಮತ್ತು ಊತದ ಅನುಭವವಾಯಿತು, ಮೂಗು ಕಟ್ಟಿಕೊಂಡಿತು, ಮೂಗಿನಿಂದ ಸ್ರಾವವೂ ಉಂಟಾಗಲಾರಂಭವಾಯಿತು. ತನ್ನ ವೈದ್ಯರನ್ನು ಭೇಟಿಯಾದಾಗ ಅವರು ಸಿಟಿ ಸ್ಕ್ಯಾನ್‌ ಮಾಡಿಸಿಕೊಳ್ಳಲು ಶಿಫಾರಸು ಮಾಡಿದರು ಹಾಗೂ ಅದನ್ನು ಪರಿಶೀಲಿಸಿದ ಬಳಿಕ ಹೇಮಂತ್‌ಗೆ ಪ್ರಾಣಾಂತಿಕವಾಗುವ ಸಾಧ್ಯತೆಯುಳ್ಳ ಮ್ಯುಕೋರ್ಮೈಕೋಸಿಸ್‌ ಶಿಲೀಂಧ್ರ ಸೋಂಕು ತಗಲಿರುವುದಾಗಿ ತಿಳಿಸಿದರು.

ವೈದ್ಯರು ಹೇಮಂತ್‌ ಅವರನ್ನು ಓರ್ವ ಇಎನ್‌ಟಿ ತಜ್ಞರ ಬಳಿಗೆ ಕಳುಹಿಸಿದರು. ಅವರು ಎಂಡೊಸ್ಕೊಪಿಯ ಮೂಲಕ ಹೇಮಂತ್‌ ಅವರ ಮೂಗಿನ ನೆಕ್ರೊಟಿಕ್‌ ಅಂಗಾಂಶಗಳನ್ನು ಸಂಗ್ರಹಿಸಿದರು. ಇದನ್ನು ತತ್‌ಕ್ಷಣ ಮೈಕ್ರೊಬಯಾಲಜಿ ಪ್ರಯೋಗಾಲಯಕ್ಕೆ ಕಳುಹಿಸಿದ್ದು, ಅಲ್ಲಿ ಮಾದರಿ ಲಭಿಸಿದ ಒಂದು ತಾಸಿನ ಒಳಗಾಗಿ ಮೈಕ್ರೊಸ್ಕೊಪಿಯ ಮೂಲಕ ಝೈಗೊಮೈಸೈಟ್ಸ್‌ ಕುಟುಂಬಕ್ಕೆ ಸೇರಿದ ಮ್ಯುಕೊರೇಲ್ಸ್‌ ಎಂಬ ಅವಕಾಶವಾದಿ ಶಿಲೀಂಧ್ರದ ಸೋಂಕು ಉಂಟಾಗಿರುವುದನ್ನು ಖಚಿತಪಡಿಸಲಾಯಿತು.

ಹೇಮಂತ್‌ ಅವರನ್ನು ತತ್‌ಕ್ಷಣ ಶಸ್ತ್ರಚಿಕಿತ್ಸೆಗೆ ಒಳಪಡಿಸಿ, ಸೋಂಕು ಮೆದುಳಿಗೆ ಹಬ್ಬುವುದನ್ನು ತಡೆಯುವುದಕ್ಕಾಗಿ ಅವರ ಮೇಲ್ದವಡೆಯನ್ನು ತೆಗೆದುಹಾಕಲಾಯಿತು. ಆ ಬಳಿಕ ಅವರಿಗೆ 3ರಿಂದ 6 ತಿಂಗಳುಗಳ ಅವಧಿಯ ಶಿಲೀಂಧ್ರನಿರೋಧಕ ಚಿಕಿತ್ಸೆಯನ್ನು ಆರಂಭಿಸಲಾಯಿತು.

ಹೇಮಂತ್‌ ಅವರ ಉದಾಹರಣೆಯನ್ನು ಗಮನಿಸಿದಿರಿ. ಈಗ ಪ್ರಸ್ತುತ ಭಾರತದಲ್ಲಿ ಕೋವಿಡ್‌ ರೋಗಿಗಳಲ್ಲಿ ಅಪಾಯಕಾರಿ ವೇಗದಿಂದ ಹಬ್ಬುತ್ತಿರುವ ಈ ಶಿಲೀಂಧ್ರ ಸೋಂಕಿನ ಬಗ್ಗೆ ಇನ್ನಷ್ಟು ವಿವರವಾಗಿ ತಿಳಿಯೋಣ.

ಮ್ಯುಕೊರ್ಮೈಕೊಸಿಸ್ಉಂಟುಮಾಡುವ ಮ್ಯುಕೊರೇಲ್ಳನ್ನು  ಬ್ಲ್ಯಾಕ್ ಫಂಗಸ್ಎಂದೂ ಕರೆಯಲಾಗುತ್ತದೆಯೇ?

ಮ್ಯುಕೊರೇಲ್‌ಗ‌ಳು ಬ್ಲ್ಯಾಕ್‌ ಫ‌ಂಗಸ್‌ಗಳಲ್ಲ. ಬ್ಲ್ಯಾಕ್‌ ಫ‌ಂಗಸ್‌ ಅಥವಾ ಕಪ್ಪು ಶಿಲೀಂಧ್ರ ಎನ್ನುವುದು ತಮ್ಮಲ್ಲಿ ಮೆಲನಿನ್‌ ಪಿಗೆ¾ಂಟ್‌ ಹೊಂದಿರುವ ಡೆಮಟೀಶಿಯಸ್‌ ಫ‌ಂಗಸ್‌ (ಚಿತ್ರ 1). ಪ್ರಯೋಗಾಲಯದಲ್ಲಿ ಇವುಗಳನ್ನು ಅಗರ್‌ ತಟ್ಟೆಯಲ್ಲಿ ಕಲ್ಚರ್‌ ಮಾಡಿದಾಗ ಮತ್ತು ಸೂಕ್ಷ್ಮ

ದರ್ಶಕದಡಿ ಇವು ಕಪ್ಪು ಅಥವಾ ಕಂದು ಬಣ್ಣದಲ್ಲಿ ಕಾಣಿಸುತ್ತವೆ. ಮ್ಯುಕೊರೇಲ್‌ಗ‌ಳು ಅಗರ್‌ ತಟ್ಟೆಯಲ್ಲಿ ಕಾಟನ್‌ ಕ್ಯಾಂಡಿಯಂತೆ ಕಂಡುಬರುತ್ತವೆ, ಕಪ್ಪಾಗಿ ಅಲ್ಲ .

ಗಮನಿಸಬೇಕಾದ ಎಚ್ಚರಿಕೆಯ  ಸೂಚನೆಗಳು ಮತ್ತು ಕೋವಿಡ್‌  ರೋಗಿಗಳಿಗೆ ಸಲಹೆಗಳು

1, ಗುಣಮುಖರಾದ ಬಳಿಕ ಕನಿಷ್ಠ 1 ತಿಂಗಳು ಮನೆಯಲ್ಲಿಯೇ ಇರಿ.

2. ಬಿಸಿ ನೀರು ಉಪಯೋಗಿಸಿ ಮೂಗು ಮತ್ತು ಬಾಯಿಗಳನ್ನು ತೊಳೆದುಕೊಳ್ಳಿರಿ.

3. ಮುಖದಲ್ಲಿ ನೋವು ಮತ್ತು ಊತ, ಮೂಗಿನಿಂದ ಸ್ರಾವ, ಮೂಗು ಕಟ್ಟುವಿಕೆ ಅಥವಾ ದೃಷ್ಟಿ ಮಂಜಾಗುವುದು, ಎರಡೆರಡು ಬಿಂಬ ಕಾಣಿಸುವುದು ಇದ್ದರೆ ತತ್‌ಕ್ಷಣ ವೈದ್ಯರನ್ನು ಭೇಟಿಯಾಗಿ.

4. ನಿಯಮಿತವಾಗಿ ಸ್ಟೀಮ್‌ ತೆಗೆದುಕೊಳ್ಳಿರಿ.

5. ಬಾಯಿಯ ಒಳ ಮೇಲ್ಭಾಗದಲ್ಲಿ ಹುಣ್ಣುಗಳು ಉಂಟಾಗಿವೆಯೇ ಎಂಬ ಬಗ್ಗೆ ನಿಗಾ ವಹಿಸಿ.

6. ರಕ್ತದಲ್ಲಿ ಸಕ್ಕರೆಯ ಅಂಶವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಿ.

ಮ್ಯುಕೋರ್ಮೈಕೋಸಿಸ್‌ನ ಐದು ವಿಧಗಳು ಯಾವುವು?

 ರಿನೊ ಸೆರಬ್ರಲ್‌

ಇದು ಸರ್ವೇಸಾಮಾನ್ಯವಾದ ವಿಧವಾಗಿದ್ದು, ಭಾರತದಲ್ಲಿ ಕೋವಿಡ್‌ ರೋಗಿಗಳಲ್ಲಿ ಅತೀ ಹೆಚ್ಚು ವರದಿಯಾಗುತ್ತಿದೆ. ಆರಂಭದಲ್ಲಿ ರೋಗಿಯ ಮೂಗು ಮತ್ತು ಸೈನಸ್‌ ಬ್ಲಾಕ್‌ ಆಗುತ್ತದೆ, ಆ ಬಳಿಕ ಮೂಗಿನಿಂದ ಸ್ರಾವ ಆರಂಭವಾಗುತ್ತದೆ, ಮೂಗಿನ ಹೊಳ್ಳೆಗಳ ಅಂಗಾಂಶಗಳು ನಿರ್ಜೀವವಾಗುತ್ತವೆ, ಸೋಂಕು ಬಾಯಿಯ ಅಂಗುಳ (ಒಳ ಮೇಲ್ಭಾಗ)ಕ್ಕೆ ಹರಡಿ ಅಲ್ಲಿ ಕಪ್ಪಗಿನ, ಎಶ್ಚರ್‌ ಎಂದು ಕರೆಯಲಾಗುವ ಹುಣ್ಣು ಉಂಟಾಗುತ್ತದೆ. ಸರಿಯಾದ ಸಮಯದಲ್ಲಿ ಪತ್ತೆಹಚ್ಚಿ ಔಷಧೋಪಚಾರ ನಡೆಸದೆ ಇದ್ದರೆ ಮುಂದಿನ ಹಂತಗಳಲ್ಲಿ ಈ ಸೋಂಕು ಮೆದುಳಿಗೂ ಹರಡಿ ಸೆರಬ್ರಲ್‌ ಮ್ಯುಕೋರ್ಮೈಕೋಸಿಸ್‌ ಆಗಿ ಬೆಳವಣಿಗೆಯಾಗುತ್ತದೆ. ಮಾನಸಿಕ ಗೊಂದಲ ಮತ್ತು ಪರಿವರ್ತನೆ ಹಾಗೂ ನರಶಾಸ್ತ್ರೀಯ ಲಕ್ಷಣಗಳು ಸೆರಬ್ರಲ್‌ ಮ್ಯುಕೋರ್ಮೈಕೋಸಿಸ್‌ನ ಲಕ್ಷಣಗಳಾಗಿದ್ದು, ಪ್ರಾಣಾಪಾಯಕಾರಿಯಾಗಿರುತ್ತದೆ.

 

 ಶ್ವಾಸಕೋಶದಲ್ಲಿ ಸೋಂಕು

ಇದು ರಕ್ತಸಂಬಂಧಿ ಸಮಸ್ಯೆ ಹೊಂದಿರುವವರು, ನ್ಯೂಟ್ರೋಪೇನಿಯಾ ರೋಗಿಗಳು ಮತ್ತು ಕೋವಿಡ್‌ನಿಂದ ಚೇತರಿಸಿಕೊಂಡವರಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಜ್ವರ, ಕೆಮ್ಮು, ಎದೆಯಲ್ಲಿ ನೋವು ಮತ್ತು ಡಿಸ್ಪೇನಿಯಾ ಇದರ ಲಕ್ಷಣಗಳು. ಈ ವಿಧದಲ್ಲಿ ಸೋಂಕಿನ ಆ್ಯಂಜಿಯೊಇನ್‌ವೇಶನ್‌ನಿಂದಾಗಿ ಅಂಗಾಂಶಗಳ ನೆಕ್ರೋಸಿಸ್‌ ಉಂಟಾಗುತ್ತದೆ, ಅಂತಿಮವಾಗಿ ಕ್ಯಾವಿಟೇಶನ್‌ ಮತ್ತು/ ಹಿಮೋಪ್ಟಿಸಿಸ್‌ಗೆ ಕಾರಣವಾಗುತ್ತದೆ.

 

 ಚರ್ಮದಲ್ಲಿ ಸೋಂಕು

ಚರ್ಮದಲ್ಲಿ ಯಾವುದೇ ಬಗೆಯ ಗಾಯ ಅಥವಾ ಸುಟ್ಟಗಾಯ ಇದ್ದರೆ ಅದರಿಂದಾಗಿ ಚರ್ಮದಲ್ಲಿ ಮ್ಯುಕೋರ್ಮೈಕೋಸಿಸ್‌ ಸೋಂಕು ಉಂಟಾಗುತ್ತದೆ. ಇದು ರೋಗನಿರೋಧಕ ಶಕ್ತಿ ಹೊಂದಿರುವ ಮತ್ತು ರೋಗನಿರೋಧಕ ಶಕ್ತಿ ಕಡಿಮೆಯಾದ – ಎರಡೂ ಬಗೆಯ ರೋಗಿಗಳಲ್ಲಿ ಉಂಟಾಗುತ್ತದೆ.

 ಜೀರ್ಣಾಂಗ ವ್ಯೂಹದಲ್ಲಿ ಸೋಂಕು

ಇದು ಅಪರೂಪಕ್ಕೆ ಕಂಡುಬರುವಂಥದ್ದಾಗಿದ್ದು, ಶಿಲೀಂಧ್ರವು ಜೀರ್ಣಾಂಗ ವ್ಯೂಹವನ್ನು ಸೇರುವುದರಿಂದ ಉಂಟಾಗುತ್ತದೆ. ಅಪೌಷ್ಟಿಕತೆಯನ್ನು ಹೊಂದಿರುವ ಅಥವಾ ಅವಧಿಪೂರ್ವ ಜನಿಸಿದ ಶಿಶುಗಳಲ್ಲಿ ಕಾಣಿಸಿಕೊಳ್ಳುತ್ತದೆ, ಹೊಟ್ಟೆನೋವು, ಹೊಟ್ಟೆ ತೊಳೆಸುವಿಕೆ ಮತ್ತು ವಾಂತಿ ಇದರ ಲಕ್ಷಣಗಳು.

 ದೇಹದ ವಿವಿಧೆಡೆ ಸೋಂಕು

ಶಿಲೀಂಧ್ರವು ರಕ್ತ ಪರಿಚಲನೆಯ ಮೂಲಕ ದೇಹದ ವಿವಿಧ ಅಂಗಾಂಗಗಳನ್ನು ಸೇರುವುದರಿಂದ ಇದು ಉಂಟಾಗುತ್ತದೆ. ಮೇಲೆ ಹೇಳಲಾದ ಯಾವುದೇ ವಿಧವಾದ ಸೋಂಕಿನ ಬಳಿಕ ಇದು ಕಾಣಿಸಿಕೊಳ್ಳಬಹುದು; ಶ್ವಾಸಕೋಶದ ಸೋಂಕಿಗೆ ಒಳಗಾಗಿರುವ ನ್ಯೂಟ್ರೋಪೆನಿಕ್‌ ರೋಗಿಗಳಲ್ಲಿ ವಿಶೇಷವಾಗಿ ಉಂಟಾಗುತ್ತದೆ.

ಕೋವಿಡ್‌ ರೋಗಿಗಳು ಮ್ಯುಕೋರ್ಮೈಕೋಸಿಸ್‌ ಸೋಂಕಿಗೆ ತುತ್ತಾಗುವುದು ಹೇಗೆ?

ಮನುಷ್ಯನಿಂದ ಮನುಷ್ಯನಿಗೆ ಸೋಂಕು ಹರಡುವುದಿಲ್ಲ. ವಾತಾವರಣದಲ್ಲಿ ಇರುವ ಶಿಲೀಂಧ್ರವು ಉಸಿರಾಟ, ಶಿಲೀಂಧ್ರದ ಬೀಜಾಣುಗಳು ಸಿರಿಂಜ್‌, ಆಮ್ಲಜನಕ ಕೊಳವೆಯಂತಹ ವಸ್ತುಗಳ ಮೂಲಕ ರೋಗಿಯ ದೇಹವನ್ನು ಪ್ರವೇಶಿಸುವುದರಿಂದ ಸೋಂಕು ಉಂಟಾಗುತ್ತದೆ. ಆಸ್ಪತ್ರೆಗಳಲ್ಲಿ ಉಂಟಾಗುವ ಸೋಂಕು ಬ್ಯಾಂಡೇಜ್‌, ನಾಲಗೆಯನ್ನು ಒತ್ತಿಹಿಡಿಯುವ ಮರದ ಸಲಕರಣೆ, ಹಾಸಿಗೆ ಬಟ್ಟೆ, ನೀರು ಸೋರಿಕೆ, ವಾಯು ಫಿಲೆóàಶನ್‌ ವ್ಯವಸ್ಥೆ, ಶುದ್ಧೀಕರಿಸದ ವೈದ್ಯಕೀಯ ಸಲಕರಣೆಗಳು ಮತ್ತು ತೇವಾಂಶದಿಂದ ಕೂಡಿದ ಕಟ್ಟಡ, ನೆಲ, ಗೋಡೆ ಇತ್ಯಾದಿಗಳಿಂದ ಉಂಟಾಗುತ್ತದೆ.

 

ಭಾರತದಲ್ಲಿ ಮ್ಯುಕೋರ್ಮೈಕೋಸಿಸ್‌ ಮತ್ತು ಅದರ ಸ್ಥಿತಿಗತಿಯ ಬಗ್ಗೆ ನಾವು ತಿಳಿದಿರುವುದೇನು?

ಭಾರತದಲ್ಲಿ ಈ ಸೋಂಕು ಎಷ್ಟು ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿದೆ ಎಂಬುದು ಖಚಿತವಾಗಿ ತಿಳಿದಿಲ್ಲ. ಆದರೆ ಜಾಗತಿಕ ಅಂಕಿಅಂಶಗಳಿಗಿಂತ ಭಾರತದಲ್ಲಿ 70 ಪಟ್ಟು ಹೆಚ್ಚು ಪ್ರಕರಣಗಳು ಕಾಣಿಸಿಕೊಳ್ಳುತ್ತಿವೆ ಎಂದು ಅಂದಾಜಿಸಲಾಗಿದೆ. ಚಂಡೀಗಢದ ಪಿಜಿಐಎಂಇಆರ್‌ನ ಅಂತಾರಾಷ್ಟ್ರೀಯ ಖ್ಯಾತಿಯ ಶಿಲೀಂಧ್ರ ತಜ್ಞ ಡಾ| ಅರುಣಲೋಕೆ ಚಕ್ರವರ್ತಿ ಅವರು ಕೆಲವು ಉತ್ತರ ಮತ್ತು ದಕ್ಷಿಣ ಭಾರತೀಯ ಪ್ರಾಂತ್ಯಗಳ ಮ್ಯುಕೋರ್ಮೈಕೋಸಿಸ್‌ ಅಂಕಿಅಂಶಗಳನ್ನು ಪ್ರಕಟಿಸಿದ್ದಾರೆ.

ಹೆಚ್ಚು ಜನಸಂಖ್ಯೆ ಮತ್ತು ಅನಿಯಂತ್ರಿತ ಮಧುಮೇಹ, ಉಷ್ಣವಲಯದ ಹವಾಮಾನ ಮತ್ತು ಕೊರೊನಾ ರೋಗಿ ಗಳ ಚಿಕಿತ್ಸೆಯಲ್ಲಿ ಹೆಚ್ಚು ಸ್ಟಿರಾಯ್ಡ ಬಳಕೆಯಿಂದಾಗಿ ಭಾರತ ದಲ್ಲಿ ಮ್ಯುಕೋರ್ಮೈಕೋಸಿಸ್‌ ಸೋಂಕು ಹಠಾತ್ತಾಗಿ ಹೆಚ್ಚಳ ಕಂಡಿದೆ.

 

ಇತ್ತೀಚೆಗಿನ ವರ್ಷಗಳಲ್ಲಿ, ಅದರಲ್ಲೂ ವಿಶೇಷವಾಗಿ ಈಗಿನ ಸೋಂಕು ಕಾಯಿಲೆಯ ಪರಿಸ್ಥಿತಿಯಲ್ಲಿ ಮಧುಮೇಹದ ಬಗ್ಗೆ ಅರಿವು ಹೆಚ್ಚುತ್ತಿದೆ. ಆದರೆ ಕೋವಿಡ್‌ ರೋಗಿಗಳು ಕಾಯಿಲೆ ಬೆಳವಣಿಗೆಯಾದ ಮುಂದುವರಿದ ಹಂತಗಳಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯಲು ಮುಂದಾಗುವು ದರಿಂದ ಸಾವುನೋವಿನ ಪ್ರಮಾಣ ಹೆಚ್ಚಾಗಿಯೇ ಇದೆ.

 

ಮ್ಯುಕೋರ್ಮೈಕೋಸಿಸ್‌ ಪತ್ತೆ ಹಚ್ಚುವುದು ಹೇಗೆ?

ಭಾರತದಲ್ಲಿ ಕೋವಿಡ್‌ ರೋಗಿಗಳಲ್ಲಿ ರಿನೊ ಮ್ಯುಕೋರ್ಮೈಕೋಸಿಸ್‌ ಹೆಚ್ಚು ಕಂಡುಬರುತ್ತಿದ್ದು, ಇದನ್ನು ಎಂಡೊಸ್ಕೊಪಿಯ ಮೂಲಕ ಮೂಗಿನಲ್ಲಿಯ ನೆಕ್ರೋಟಿಕ್‌ ಅಂಗಾಂಶವನ್ನು ತೆಗೆದು ಕೆಒಎಚ್‌ನಲ್ಲಿರಿಸಿ ಸೂಕ್ಷ್ಮದರ್ಶಕದಲ್ಲಿ ವೀಕ್ಷಿಸುವ ಮೂಲಕ ಪತ್ತೆ ಹಚ್ಚಲಾಗುತ್ತದೆ. ಚಿತ್ರದಲ್ಲಿ ತೋರಿಸಿರುವಂತೆ ತೆಳುವಾದ ಹೇಲೈನ್‌ ಅಸೆಪ್ಟೆàಟ್‌ ಹೈಪಾ ಕಾಣಿಸುತ್ತದೆ.

ಶ್ವಾಸಕೋಶದ ಸೋಂಕು

ಕೋವಿಡ್‌ ಸಂಬಂಧಿ ಆಸ್ಪರ್ಗಿಲ್ಲೋಸಿಸ್‌ಗೂ ಮತ್ತು ಶ್ವಾಸಕೋಶದ ಮ್ಯುಕೋರ್ಮೈಕೋಸ್‌ಗೂ ವ್ಯತ್ಯಾಸ ಹುಡುಕುವುದು ತುಂಬಾ ಕಷ್ಟ. ಇದರ ಚಿತ್ರ ತೆಗೆಯುವುದು ಕೂಡ ಕಠಿನ. ಶ್ವಾಸಕೋಶದ ಮ್ಯುಕೋರ್ಮೈಕೋಸಿಸ್‌ ಉಂಟಾದ ಸಂದರ್ಭದಲ್ಲಿ ದಪ್ಪ ಭಿತ್ತಿಯ ಕುಳಿಗಳು ಉಂಟಾಗಿವೆಯೇ ಎಂದು ಗಮನಿಸಬೇಕಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಮ್ಯುಕೋರ್ಮೈಕೋಸಿಸ್‌ ಮತ್ತು ಆಸ್ಪರ್ಗಿಲ್ಲೋಸಿಸ್‌ ಎರಡೂ ಸೋಂಕುಗಳಿಗೆ ಅನ್ವಯವಾಗುವ ಔಷಧ ಬಳಕೆ ಮಾಡುವಂತೆ ವಿಶ್ವ ಆರೋಗ್ಯ ಸಂಸ್ಥೆಯು ಸಲಹೆ ನೀಡುತ್ತದೆ.

ತಜ್ಞರ ಪ್ರಕಾರ ಕೋವಿಡ್‌ ರೋಗಿಗಳಲ್ಲಿ ಮ್ಯುಕೋರ್ಮೈಕೋಸಿಸ್‌ ಸೋಂಕಿಗೆ ಚಿಕಿತ್ಸಾ ವಿಧಿವಿಧಾನ ಏನು?

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಡೆಕ್ಸಾಮಿಥಸೋನ್‌ (ಸ್ಟಿರಾಯ್ಡ) ಬಳಕೆಯನ್ನು ದಿನಕ್ಕೆ 6 ಎಂಜಿಯಂತೆ 5ರಿಂದ ಗರಿಷ್ಠ 10 ದಿನಗಳಿಗೆ ಸೀಮಿತಗೊಳಿಸಬೇಕು. ಆದರೆ ತೀವ್ರತರಹದ ಕೋವಿಡ್‌ ರೋಗಿಗಳಲ್ಲಿ ಸ್ಟಿರಾಯ್ಡ ಗಳ ಅತಿಯಾದ ಅಥವಾ ದುರ್ಬಳಕೆಯಿಂದಾಗಿ ರಕ್ತದಲ್ಲಿ ಸಕ್ಕರೆಯ ಅಂಶ ಏರಿ ಶಿಲೀಂಧ್ರ ಸೋಂಕು ಉಂಟಾಗಲು ಪೂರಕ ಸನ್ನಿವೇಶ ಸೃಷ್ಟಿಯಾಗುತ್ತದೆ. ಅಲ್ಲದೆ, ಕೋವಿಡ್‌ ರೋಗಿಗಳಲ್ಲಿ ಫೆರಿಟಿನ್‌ ಪ್ರಮಾಣ ಹೆಚ್ಚಿರುವುದು ಮ್ಯುಕರೇಲ್‌ಗ‌ಳಿಗೆ ಪೋಷಕಾಂಶ ಮೂಲವಾಗುತ್ತದೆ. ಈ ಶಿಲೀಂಧ್ರಗಳು ಕಬ್ಬಿಣಾಂಶವನ್ನೂ ಪಡೆದುಕೊಳ್ಳುತ್ತವೆ. ಕೋವಿಡ್‌ ರೋಗಿಗಳಲ್ಲಿ ಸಕ್ಕರೆಯ ಪ್ರಮಾಣವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಬೇಕು ಮತ್ತು ಸೋಂಕಿನಿಂದಾಗಿ ನಿರ್ಜೀವವಾಗಿರುವ ಅಂಗಾಂಶಗಳನ್ನು ಆದಷ್ಟು ಬೇಗನೆ ಶಸ್ತ್ರಚಿಕಿತ್ಸೆಯ ಮೂಲಕ ತೆಗೆದುಹಾಕಬೇಕು.

ಲಿಪೊಸೊಮಲ್‌ ಆ್ಯಂಫೊಟೆರೆಸಿನ್‌ ಬಿ/ ಆ್ಯಂಫೊಟೆರೆಸಿನ್‌ ಡೆಕ್ಸಿಕೊಲೇಟ್‌ ಶಿಲೀಂಧ್ರನಿರೋಧಕ ಔಷಧವನ್ನು 3ರಿಂದ 5 ವಾರ ತೆಗೆದುಕೊಳ್ಳುವುದು, ಆ ಬಳಿಕ ಪೊಸಕೊನಝೋಲ್‌/ ಇಸಾವುಕೊನಝೋಲ್‌ ಔಷಧವನ್ನು 3ರಿಂದ 6 ತಿಂಗಳುಗಳ ಕಾಲ ತೆಗೆದುಕೊಳ್ಳುವುದನ್ನು ಶಿಫಾರಸು ಮಾಡಲಾಗಿದೆ.

ಅಭಿವೃದ್ಧಿ ಹೊಂದಿರುವ ದೇಶಗಳಿಗಿಂತ ಭಾರತದಲ್ಲಿ ಮ್ಯುಕೋರ್ಮೈಕೋಸಿಸ್‌ ಸೋಂಕಿನ ಪ್ರಮಾಣ ಹೆಚ್ಚಿದೆ. ಪರಿಸರ ಮತ್ತು ಆಸ್ಪತ್ರೆ ಪರಿಸರದಲ್ಲಿ ಮ್ಯುಕರೇÇಗಳು ಸಾಕಷ್ಟು ಪ್ರಮಾಣದಲ್ಲಿ ಇರುವುದು, ಸೋಂಕಿಗೆ ತುತ್ತಾಗಬಲ್ಲ ದುರ್ಬಲ ಆರೋಗ್ಯ ಸ್ಥಿತಿಯ ವ್ಯಕ್ತಿಗಳ ಸಂಖ್ಯೆ ಹೆಚ್ಚಿರುವುದು, ನಿಯಮಿತವಾಗಿ ಆರೋಗ್ಯ ತಪಾಸಣೆಗೆ ಒಳಗಾಗುವಲ್ಲಿ ಭಾರತೀಯರ ನಿರ್ಲಕ್ಷ್ಯ ಇದಕ್ಕೆ ಕಾರಣಗಳಾಗಿವೆ. ಸಾಕಷ್ಟು ಸಂಖ್ಯೆಯ ಮಧುಮೇಹಿಗಳಿಗೆ ತಾವು ಮ್ಯುಕೋರ್ಮೈಕೋಸಿಸ್‌ ಸೋಂಕಿಗೆ ಒಳಗಾಗುವ ತನಕವೂ ತಾವು ಮಧುಮೇಹಿಗಳು ಎಂಬ ಸತ್ಯಾಂಶ ತಿಳಿದಿರುವುದಿಲ್ಲ.  ಈ ಶಿಲೀಂಧ್ರ ಏಜೆಂಟ್‌ಗಳ ವ್ಯಾಪ್ತಿ ವಿಸ್ತಾರವಾಗಿದ್ದು, ಇವುಗಳನ್ನು ಹೆಚ್ಚು ಕ್ಷಿಪ್ರವಾಗಿ ಪತ್ತೆಹಚ್ಚಲು ಕ್ಲಿನಿಕಲ್‌ ಲ್ಯಾಬ್‌ ಸೌಲಭ್ಯಗಳು ಹೆಚ್ಚಬೇಕು ಎಂಬುದನ್ನು ಒತ್ತಿ ಹೇಳುತ್ತಿದೆ.

ಡಾ| ಮಮತಾ ಬಲ್ಲಾಳ್

ಪ್ರೊಫೆಸರ್ಆಫ್ ಮೈಕ್ರೊಬಯಾಲಜಿ

ಮುಖ್ಯಸ್ಥರು, ಎಂಟೆರಿಕ್ಕಾಯಿಲೆಗಳ ವಿಭಾಗ, ಕೆಎಂಸಿ, ಮಾಹೆ, ಮಣಿಪಾಲ

ಟಾಪ್ ನ್ಯೂಸ್

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

12

B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್‌ವೈ ಗರಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.