ಮಧುಮೇಹಕ್ಕೆ ಔಷಧ ಚಿಕಿತ್ಸೆ

Team Udayavani, Jun 2, 2019, 6:00 AM IST

ಟೈಪ್‌ 2 ಮಧುಮೇಹ ಚಿಕಿತ್ಸೆಗೆ ಲಭ್ಯವಿರುವ ಔಷಧಗಳಾವುವು?
ಮಧುಮೇಹದ ದೀರ್ಘ‌ಕಾಲಿಕ ಸಂಕೀರ್ಣ ಸಮಸ್ಯೆಗಳನ್ನು ಕಡಿಮೆ ಮಾಡುವುದು ಮತ್ತು ಗ್ಲೆ„ಸೇಮಿಯಾ ನಿರ್ವಹಣೆಯು ಔಷಧೀಯ ಚಿಕಿತ್ಸೆಯ ಗುರಿಗಳಾಗಿವೆ. ವಿವಿಧ ಗುಂಪಿನ ಈ ಔಷಧಗಳೆಂದರೆ:

1 ಇನ್ಸುಲಿನ್‌ ಸೆನ್ಸಿಟೈಸರ್‌ಗಳು:
(ಎ) ಬಿಗುವಾನೈಡ್ಸ್‌
(ಬಿ) ಥಿಯಾಝೊಲಿಡಿನೆಡಿಯೊನಸ್‌ (ಟಿಝಡ್‌ಡಿಗಳು)
2 ಇನ್ಸುಲಿನ್‌ ಸೆಕ್ರೆಟಾಗಾಗಸ್‌:
(ಎ) ಸಲೊ#ನಿಲುರಿಯಾಸ್‌;
(ಬಿ) ಮೆಗ್ಲಿಟಿನೈಡ್‌ ಡಿರೈವೇಟಿವ್ಸ್‌
3 ಅಲ್ಫಾಗುÉಕೋಸಿಡೇಸ್‌ ಇನ್‌ಹಿಬಿಟರ್
4 ಗುÉಕಾಗೋನ್‌ಲೈಕ್‌ ಪೆಪ್ಟೆ„ಡ್‌ – 1
(ಜಿಎಲ್‌ಪಿ-1) ಅಗೊನಿಸ್ಟ್ಸ್
5 ಡೈಪೆಪ್ಟೆ„ಡಿಲ್‌ ಪೆಪ್ಟಿಡೇಸ್‌ ಐV (ಡಿಪಿಪಿ-4) ಇನ್‌ಹಿಬಿಟರ್
6 ಸೆಲೆಕ್ಟಿವ್‌ ಸೋಡಿಯಂ – ಗುÉಕೊಸೆಟ್ರಾನ್ಸ್‌ ಪೋರ್ಟರ್‌-2 (ಎಸ್‌ಜಿಎಲ್‌ಟಿ-2)
ಇನ್‌ಹಿಬಿಟರ್
7 ಇನ್ಸುಲಿನ್‌
8 ಅಮಿಲಿನೊಮೈಮೆಟಿಕ್ಸ್‌

ಇನ್ಸುಲಿನ್‌
ಸೆನ್ಸಿಟೈಸರ್‌ಗಳು
1. ಬಿಗುವಾನೈಡ್ಸ್‌
ಬಿಗುವಾನೈಡ್ಸ್‌ ಹೆಪಾಟಿಕ್‌ ಗುÉಕೋಸ್‌ ಔಟ್‌ಪುಟ್‌ ಕಡಿಮೆ ಮಾಡುತ್ತದೆ. ಇದು ಗುÉಕೋಸ್‌ ಕರುಳಿನಲ್ಲಿ ಹೀರಿಕೆಯಾಗುವುದನ್ನು ಕೂಡ ತಗ್ಗಿಸುತ್ತದೆ ಮತ್ತು ಬಾಹ್ಯ ಗುÉಕೋಸ್‌ ಸ್ವೀಕರಣ ಹಾಗೂ ಬಳಕೆಯನ್ನು ಹೆಚ್ಚಿಸುವ ಮೂಲಕ ಇನ್ಸುಲಿನ್‌ ಸಂವೇದಕತೆಯನ್ನು ವೃದ್ಧಿಸುತ್ತದೆ. ಈ ಗುಂಪಿನಲ್ಲಿ ಸಾಮಾನ್ಯವಾಗಿ ಬಳಕೆಯಾಗುವ ಔಷಧ ಮೆಟಮಾರ್ಫಿನ್‌. ಮೆಟಮಾರ್ಫಿನ್‌ನ ಪ್ರಮುಖ ಲಾಭಗಳೆಂದರೆ, ಏಕಔಷಧವಾಗಿ ಬಳಸಿದಾಗ ಹೈಪೊಗ್ಲೆ„ಸೇಮಿಯಾ ಉಂಟು ಮಾಡುವುದಿಲ್ಲ. ಇದು ತೂಕ ನಷ್ಟಕ್ಕೆ ಕಾರಣವಾಗಬಹುದು ಮತ್ತು ಇದು ಪ್ಲಾಸ್ಮಾ ಟ್ರೈಗ್ಲಿಸರೈಡ್‌ಗಳ ಸಾಂದ್ರತೆಯನ್ನು ಶೇ.10-20ರಷ್ಟು ಕಡಿಮೆಗೊಳಿಸುವುದು ಕಂಡುಬಂದಿದೆ.

ಸಾಮಾನ್ಯವಾಗಿ ದಿನಕ್ಕೆ ಎರಡು ಡೋಸ್‌ ಆಗಿರುತ್ತದೆ. ಆದರೆ ದಿನಕ್ಕೆ ಮೂರು ಡೋಸ್‌ ಕೂಡ ನೀಡಬಹುದಾಗಿದೆ, ನಿಧಾನ ಬಿಡುಗಡೆ ಸ್ವರೂಪದ (ಎಕ್ಸ್‌ಟೆಂಡೆಡ್‌ ರಿಲೀಸ್‌ ಫಾರ್ಮುಲೇಶನ್‌) ಈ ಔಷಧವನ್ನು ದಿನಕ್ಕೆ ಒಮ್ಮೆ ನೀಡಲಾಗುತ್ತದೆ. ಮೆಟಮಾರ್ಫಿನ್‌ನ ಸರ್ವಸಾಮಾನ್ಯ ಆರಂಭಿಕ ಡೋಸ್‌ 500 ಎಂಜಿ/ದಿನ ಆಗಿದ್ದು, ಗರಿಷ್ಠ ಡೋಸ್‌ 2,500 ಎಂಜಿ/ದಿನ ಆಗಿರುತ್ತದೆ. ಮೆಟಮಾರ್ಫಿನ್‌ನ ನಿಧಾನಗತಿಯ ಟೈಟ್ರೇಶನ್‌ – ಬೆಳಗ್ಗಿನ ಉಪಾಹಾರದ ಬಳಿಕ 500 ಎಂಜಿ ಮತ್ತು ಸಾಪ್ತಾಹಿಕ ಬಿಡುವುಗಳ ಜತೆಗೆ 500 ಎಂಜಿಗಳಷ್ಟು ಹೆಚ್ಚಿಸುತ್ತಾ ಬೆಳಗ್ಗಿನ ಉಪಾಹಾರ ಮತ್ತು ರಾತ್ರಿಯೂಟದ ಬಳಿಕದ 1,000 ಎಂಜಿಯ ಡೋಸ್‌ಗೆ ವೃದ್ಧಿಸುವುದು ಜೀರ್ಣಾಂಗವ್ಯೂಹಕ್ಕೆ (ಗ್ಯಾಸ್ಟ್ರೊಇಂಟಸ್ಟೈನಲ್‌) ಸಂಬಂಧಿಸಿದ ಅಡ್ಡ ಪರಿಣಾಮಗಳನ್ನು ತಡೆಯಲು ಸಹಾಯ ಮಾಡುತ್ತದೆ. ಕಂಜೆಸ್ಟಿವ್‌ ಹಾರ್ಟ್‌ ಫೈಲ್ಯೂರ್‌ (ಸಿಎಚ್‌ಎಫ್), ರೀನಲ್‌ ಅಥವಾ ಹೆಪಾಟಿಕ್‌ ಡಿಸ್‌ಫ‌ಂಕ್ಷನ್‌ ಅಥವಾ ಬಿಂಗ್‌ ಅಲ್ಕೊಹಾಲಿಸಂ ಉಳ್ಳ ರೋಗಿಗಳಲ್ಲಿ ಈ ಔಷಧವನ್ನು ಬಳಸಲಾಗದು.

2. ಥಿಯಾಝೊಲಿಡಿನೆಡಿಯೊನಸ್‌
(ಟಿಝಡ್‌ಡಿಗಳು)
ಥಿಯಾಝೊಲಿಡಿನೆಡಿಯೊನಸ್‌ ಪೆರೊಕ್ಸಿಸೋಮ್‌ ಪ್ರಾಲಿಫ‌ರೇಟರ್‌ ಆ್ಯಕ್ಟಿವೇಟೆಡ್‌ ರಿಸೆಪ್ಟರ್‌ (ಪಿಪಿಎಆರ್‌) ಗಾಮಾಗಳ ಜತೆಗೆ ಸಂಯೋಜನೆ ಹೊಂದುವ ಮೂಲಕ ಇನ್ಸುಲಿನ್‌ ಪ್ರತಿರೋಧವನ್ನು ಕುಗ್ಗಿಸುತ್ತದೆ. ಪಯೊಗ್ಲಿಟಾಝೋನ್‌, ಇದರ ಆರಂಭಿಕ ಡೋಸ್‌ 7.5 ಎಂಜಿ/ದಿನ ಮತ್ತು ಗರಿಷ್ಠ ಡೋಸ್‌ 45 ಎಂಜಿ/ದಿನ. ಏಕಔಷಧವಾಗಿ ಬಳಸಿದಾಗ ಇವು ಹೈಪೊಗ್ಲೆ„ಸೇಮಿಯಾ ಉಂಟುಮಾಡುವುದಿಲ್ಲ. ಪಯೊಗ್ಲಿಟಾಝೋನ್‌ ಬಳಕೆ ಟ್ರೈಗ್ಲಿಸರೈಡ್‌ ಮಟ್ಟ ಕಡಿಮೆಯಾಗುವುದಕ್ಕೆ, ಹೈ ಡೆನ್ಸಿಟಿ ಲಿಪೊಪ್ರೊಟೀನ್‌ (ಎಚ್‌ಡಿಎಲ್‌) ಮತ್ತು ಲೋ ಡೆನ್ಸಿಟಿ ಲಿಪೊಪ್ರೊಟೀನ್‌ (ಎಲ್‌ಡಿಎಲ್‌) ಪಾರ್ಟಿಕಲ್‌ ಗಾತ್ರ ವೃದ್ಧಿಗೆ ಕಾರಣವಾಗುತ್ತದೆ.

ಪ್ರಮುಖ ಅಡ್ಡ ಪರಿಣಾಮಗಳಲ್ಲಿ ಸಬ್‌ಕಟೇನಿಯಸ್‌ ಅಡಿಪೋಸಿಟಿ ಮತ್ತು ದ್ರವಾಂಶ ಉಳಿಕೆಯ ಸಹಿತ ತೂಕಗಳಿಕೆಯನ್ನು ಒಳಗೊಂಡಿದೆ. ಇದು ಸಾಮಾನ್ಯವಾಗಿ ಬಾಹ್ಯ ನೀರೂತವಾಗಿ ಕಾಣಿಸಿಕೊಳ್ಳುತ್ತದೆ. ಆದರೆ ಹೃದಯವೈಫ‌ಲ್ಯ ಉಂಟಾಗುವುದು ಅಪರೂಪ. ಈ ಅಡ್ಡಪರಿಣಾಮಗಳು ಹೆಚ್ಚಿನ ಡೋಸ್‌ಗಳ ಸಂದರ್ಭದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತವೆ. ಹೀಗಾಗಿ ಪಿತ್ತಕೋಶ ಕಾಯಿಲೆಗಳು ಅಥವಾ ಸಿಎಚ್‌ಎಫ್ (ಕ್ಲಾಸ್‌ ಐಐಐ ಅಥವಾ IV) ಉಳ್ಳ ರೋಗಿಗಳಿಗೆ ಈ ಔಷಧ ಶಿಫಾರಸು ಮಾಡಬಾರದು. ಟಿಝಡ್‌ಡಿಗಳು ವಿಶೇಷವಾಗಿ ಮಹಿಳೆಯರಲ್ಲಿ ಮೂಳೆಮುರಿತ ಅಪಾಯ ಹೆಚ್ಚಳದ ಜತೆಗೆ ಸಂಬಂಧ ಹೊಂದಿವೆ, ಅಪರೂಪವಾಗಿ ಡಯಾಬಿಟಿಕ್‌ ಮಾಕ್ಯುಲಾರ್‌ ಎಡೇಮಾ ಉಲ್ಬಣಕ್ಕೆ ಕಾರಣವಾಗುವುದೂ ಇದೆ. ಗರ್ಭಿಣಿಯರಲ್ಲಿ ಥಿಯಾಝೊಲಿಡಿನೆಡಿಯೊನಸ್‌ ಔಷಧ ಪ್ರಯೋಗ ಎಷ್ಟರ ಮಟ್ಟಿಗೆ ಸುರಕ್ಷಿತ ಎಂಬುದು ಇನ್ನೂ ನಿಖರವಾಗಿ ಗೊತ್ತಾಗಿಲ್ಲ.

ಇನ್ಸುಲಿನ್‌ ಸೆಕ್ರೆಟಾಗಾಗಸ್‌
ಈ ಔಷಧಗಳು ಬೇಟಾ ಜೀವಕೋಶಗಳ ಮೇಲಿನ ಎಟಿಪಿ -ಸಂವೇದನಶೀಲ ಪೊಟ್ಯಾಸಿಯಂ ಚಾನೆಲ್‌ ಜತೆಗೆ ಸಂವಹಿಸಿ ಇನ್ಸುಲಿನ್‌ ಸ್ರಾವವನ್ನು ಪ್ರಚೋದಿಸುತ್ತವೆ.

1. ಸಲೊನಿಲುರಿಯಾಸ್‌
ಈ ಔಷಧಗಳು ಖಾಲಿ ಹೊಟ್ಟೆಯ ಮತ್ತು ಆಹಾರ ಸೇವನೆಯ ಬಳಿಕದ (ಪೋಸ್ಟ್‌ ಪ್ರಾಂಡಿಯಲ್‌) ಗುÉಕೋಸ್‌ ಮಟ್ಟವನ್ನು ತಗ್ಗಿಸುತ್ತವೆ ಹಾಗೂ ಇವುಗಳನ್ನು ಕಡಿಮೆ ಡೋಸ್‌ನಿಂದ ಆರಂಭಿಸಿ, 1ರಿಂದ 2 ವಾರಗಳ ಮಧ್ಯಾಂತರದಲ್ಲಿ ರಕ್ತದ ಗ್ಲುಕೋಸ್‌ ಮಟ್ಟ (ಎಸ್‌ಎಂಬಿಜಿ)ದ ಸ್ವಯಂ ನಿಗಾವನ್ನು ಆಧರಿಸಿ ಹೆಚ್ಚಿಸಬೇಕು. ಸಾಮಾನ್ಯವಾಗಿ ಬಳಕೆಯಾಗುವ ಔಷಧಗಳೆಂದರೆ ಗ್ಲಿಬೆನ್‌ಕ್ಲಾಮೈಡ್‌ (ಡೋಸ್‌ ರೇಂಜ್‌: 5-20 ಎಂಜಿ), ಗ್ಲಿಮೆಪೆರೈಡ್‌ (ಡೋಸ್‌ ರೇಂಜ್‌: 1-8 ಎಂಜಿ), ಗ್ಲಿಕ್ಲಾಝೈಡ್‌ (ಡೋಸ್‌ ರೇಂಜ್‌: 40-240 ಎಂಜಿ) ಮತ್ತು ಗ್ಲಿಪಿಝೈಡ್‌ (ಡೋಸ್‌ ರೇಂಜ್‌: 5-20 ಎಂಜಿ).

2. ಮೆಗ್ಲಿಟಿನೈಡ್‌ ಡಿರೈವೇಟಿವ್ಸ್‌
ರೆಪಾಗ್ಲಿನೈಡ್‌ (ಡೋಸ್‌ ರೇಂಜ್‌: 0.5 -16 ಎಂಜಿ) ಮತ್ತು ನೆಟೆಗ್ಲಿನೈಡ್‌ (ಡೋಸ್‌ ರೇಂಜ್‌: 180-360 ಎಂಜಿ)ಗಳು ಸಲೊ#ನೈಲೂರಿಯಾಸ್‌ ಅಲ್ಲವಾದರೂ ಎಟಿಪಿ-ಸಂವೇದನಶೀಲ ಪೊಟ್ಯಾಸಿಯಂ ಚಾನೆಲ್‌ ಜತೆಗೂ ಸಂವಹಿಸುತ್ತವೆ. ಇವುಗಳ ಕಿರು ಅರ್ಧಾಯುಷ್ಯದ ಕಾರಣವಾಗಿ, ಈ ಔಷಧಗಳನ್ನು ಪ್ರತೀ ಊಟದ ಜತೆಗೆ ಅಥವಾ ಅದಕ್ಕೆ ಮುನ್ನ ಊಟ -ಉಪಾಹಾರ ಸಂಬಂಧಿ ಗುÉಕೋಸ್‌ ಆಧಿಕ್ಯವನ್ನು ತಡೆಯಲು ನೀಡಲಾಗುತ್ತದೆ.

ಆಲ್ಫಾ- ಗುಕೋಸಿಡೇಸ್‌
ಇನ್‌ಹಿಬಿಟರ್
ಆಲ್ಫಾ – ಗುÉಕೋಸಿಡೇಸ್‌ ಇನ್‌ಹಿಬಿಟರ್ ಅಕಾಬೋìಸ್‌ (ಡೋಸೇಜ್‌ ರೇಂಜ್‌: 25-100 ಎಂಜಿ, ಪ್ರತೀ ಊಟದ ಜತೆಗೆ), ಮಿಗಿಟಾಲ್‌ (ಡೋಸ್‌ ರೇಂಜ್‌: 25-50 ಎಂಜಿ, ಪ್ರತೀ ಊಟದ ಜತೆಗೆ) ಮತ್ತು ವೊಗ್ಲಿಬೋಸ್‌ (ಡೋಸ್‌ ರೇಂಜ್‌: 0.1-0.3 ಎಂಜಿ, ಪ್ರತೀ ಊಟದ ಜತೆಗೆ) ಪೋಸ್ಟ್‌ ಪ್ರಾಂಡಿಯಲ್‌ ಹೈಪರ್‌ಗ್ಲೆ„ಸೇಮಿಯಾ ಉಂಟಾಗುವುದನ್ನು ಗುÉಕೋಸ್‌ ಹೀರಿಕೆ ವಿಳಂಬಿಸುವುದರ ಮೂಲಕ ಕಡಿಮೆ ಮಾಡುತ್ತವೆ. ಈ ಔಷಧಗಳನ್ನು ಇನ್‌ಫ್ಲಮೇಟರಿ ಬವೆಲ್‌ ಕಾಯಿಲೆ, ಗ್ಯಾಸ್ಟ್ರೊಪರೇಸಿಸ್‌ ಅಥವಾ ಸೀರಮ್‌ ಕ್ರಿಯಾಟಿನಿನ್‌ ಮಟ್ಟ 2 ಎಂಜಿ/ಡಿಎಲ್‌ಕ್ಕಿಂತ ಹೆಚ್ಚು ಇರುವ ರೋಗಿಗಳಿಗೆ ಉಪಯೋಗಿಸಬಾರದು.

ಗುಕಾಗೋನ್‌ ಲೈಕ್‌
ಪೆಪ್ಟೆ„ಡ್‌-1 (ಜಿಎಲ್‌ಪಿ-1) ಅಗೊನಿಸ್ಟ್ಸ್
ಜಿಎಲ್‌ಪಿ-1 ಸಣ್ಣ ಕರುಳಿನ ಎಲ್‌ ಜೀವಕೋಶಗಳಲ್ಲಿ ಉತ್ಪಾದನೆಯಾಗುತ್ತವೆ ಹಾಗೂ ಇನ್ಸುಲಿನ್‌ ಸ್ರಾವವನ್ನು ಪ್ರಚೋದಿಸುತ್ತವೆ ಮತ್ತು ಗುÉಕೋಸ್‌ ಅವಲಂಬಿತ ವಿಧಾನದಲ್ಲಿ ಗುÉಕಗೋನ್‌ ಸ್ರಾವವನ್ನು ಮತ್ತು ಹೆಪಾಟಿಕ್‌ ಗುÉಕೋಸ್‌ ಉತ್ಪಾದನೆಯನ್ನು ಪ್ರತಿಬಂಧಿಸುತ್ತದೆ. ದಿನಕ್ಕೆ ಎರಡು ಬಾರಿ ಚರ್ಮದ ಕೆಳಗಿನ ಇಂಜೆಕ್ಷನ್‌ ಮೂಲಕ ನೀಡಲಾಗುತ್ತದೆ. ಎಕ್ಸನಾಟೈಡ್‌ನ‌ ಆರಂಭಿಕ ಡೋಸ್‌ 5ಫಿಜಿ. ಈ ಡೋಸೇಜ್‌ ಸ್ವೀಕೃತವಾದರೆ 1 ತಿಂಗಳ ಬಳಿಕ 10ಫಿಜಿಗೆ ಟೈಟ್ರೇಟ್‌ ಮಾಡಬೇಕು. ಗ್ಯಾಸ್ಟ್ರಿಕ್‌ ಎಂಪ್ಟಿಯಿಂಗ್‌ ಮೇಲೆ ತನ್ನ ವಿಳಂಬಿಸುವ ಪರಿಣಾಮದಿಂದಾಗಿ ಹೊಟ್ಟೆತೊಳೆಸುವಿಕೆ, ವಾಂತಿ ಮತ್ತು ಭೇದಿಯಂತಹ ಅಡ್ಡಪರಿಣಾಮಗಳನ್ನು ಜಿಐ ಉಂಟು ಮಾಡುತ್ತದೆ.

ಲಿರಾಗುÉಟೈಡ್‌ ಜಿಎಲ್‌ಪಿ-1 ಅನಲಾಗ್‌ ಆಗಿದ್ದು, ಮನುಷ್ಯ ಜಿಎಲ್‌ಪಿ-1ರಿಂದ ಪಡೆಯಲಾಗುತ್ತದೆ. ಅದರ ಪೆನ್‌ ಮೂಲಕ ಚರ್ಮದಡಿಗೆ ಇಂಜೆಕ್ಷನ್‌ ಆಗಿ ದಿನಕ್ಕೆ ಒಮ್ಮೆ ಇದನ್ನು ನೀಡಲಾಗುತ್ತದೆ. ಸಮಯವು ಊಟ-ಉಪಾಹಾರದ ಸಮಯವನ್ನು ಆಧರಿಸಿರುತ್ತದೆ. ಇದರ ಅರ್ಧಾಯುಷ್ಯವು ಸುಮಾರು 13 ತಾಸುಗಳು. ಇದರ ಪ್ರಯೋಜನಗಳು ಮತ್ತು ಅಡ್ಡಪರಿಣಾಮಗಳು ಎಕ್ಸೆನಾಟೈಡ್‌ನ‌ಂತೆಯೇ ಇವೆ, ಆದರೆ ಇದು ತನ್ನ ಪರಿಣಾಮಗಳಲ್ಲಿ ತುಸು ಹೆಚ್ಚು ಶಕ್ತಿಯುತವಾಗಿದೆ.
ಇದರ ಆರಂಭಿಕ ಡೋಸೇಜ್‌ ಒಂದು ವಾರ ಕಾಲ 0.6 ಎಂಜಿ/ದಿನ ಆಗಿರುತ್ತದೆ. ಯಾವುದೇ ಅಡ್ಡ ಪರಿಣಾಮಗಳು ಕಾಣಿಸಿಕೊಳ್ಳದಿದ್ದಲ್ಲಿ, 1.2ಎಂಜಿ/ದಿನಕ್ಕೆ ಹೆಚ್ಚಿಸಲಾಗುತ್ತದೆ (ಈ ಡೋಸೇಜ್‌ನಲ್ಲಿ ಇದರ ಬಹುತೇಕ ವೈದ್ಯಕೀಯ ಪ್ರಯೋಜನಗಳು ಕಾಣಿಸಿಕೊಳ್ಳುತ್ತವೆ). ಬಹುತೇಕ ರೋಗಿಗಳಿಗೆ, ಇನ್ನೊಂದು ವಾರದ ಬಳಿಕ ಯಾವುದೇ ಅಡ್ಡ ಪರಿಣಾಮಗಳು ಕಾಣಿಸಿಕೊಳ್ಳದಿದ್ದರೆ ಡೋಸನ್ನು 1.8 /ದಿನಕ್ಕೆ ಹೆಚ್ಚಿಸಲಾಗುತ್ತದೆ.

ಡೈಪೆಪ್ಟೆ„ಡಿಲ್‌ ಪೆಪ್ಟಿಡೇಸ್‌ IV (ಡಿಪಿಪಿ-4) ಇನ್‌ಹಿಬಿಟರ್
ಡೈಪೆಪ್ಟೆ„ಡಿಲ್‌ ಪೆಪ್ಟಿಡೇಸ್‌ 4 (ಡಿಪಿಪಿ4) ಒಂದು ಜೀವಕೋಶ ಭಿತ್ತಿಯ ಪ್ರೊಟೀನ್‌ ಆಗಿದ್ದು, ಜಿಎಲ್‌ಪಿ-1 ಮತ್ತು ಗುÉಕೋಸ್‌ ಅವಲಂಬಿ ಇನ್ಸುಲಿನೊಟ್ರೋಪಿಕ್‌ ಪಾಲಿಪೆಪ್ಟೆ„ಡ್‌ಗಳನ್ನು ಕ್ಷಿಪ್ರವಾಗಿ ದುರ್ಬಲಗೊಳಿಸುತ್ತದೆ. ಡಿಪಿಪಿ 4 ನಿಗ್ರಹವು ಇನ್ಸುಲಿನ್‌ ಸ್ರಾವ ಹೆಚ್ಚಳಕ್ಕೆ ಕಾರಣವಾಗುತ್ತದೆ ಮತ್ತು ಗುÉಕಗೋನ್‌ ಸ್ರಾವದ ಗುÉಕೋಸ್‌ ಅವಲಂಬಿ ವಿಧಾನದ ನಿಗ್ರಹಕ್ಕೆ ಕಾರಣವಾಗುತ್ತದೆ.
ಸಾಮಾನ್ಯವಾಗಿ ಬಳಕೆಯಲ್ಲಿರುವ ಗ್ಲಿಪ್ಟಿನ್‌ಗಳೆಂದರೆ, ಸಿಟಾಗ್ಲಿಪ್ಟಿನ್‌, ವಿಲ್ಡಾಗ್ಲಿಪ್ಟಿನ್‌, ಸಕ್ಸಾಗ್ಲಿಪ್ಟಿನ್‌ ಮತ್ತು ಲಿನಾಗ್ಲಿಪ್ಟಿನ್‌. ಸಿಟಾಗ್ಲಿಪ್ಟಿನ್‌ನ ಡೋಸೇಜ್‌ ದಿನಕ್ಕೊಮ್ಮೆ ಮೌಖೀಕವಾಗಿ 100 ಎಂಜಿ, ಸಕ್ಸಾಗ್ಲಿಪ್ಟಿನ್‌ – ಮೌಖೀಕವಾಗಿ ದಿನಕ್ಕೊಮ್ಮೆ 2.5ರಿಂದ 5 ಎಂಜಿ; ಲಿನಾಗ್ಲಿಪ್ಟಿನ್‌-ದಿನಕ್ಕೊಮ್ಮೆ ಮೌಖೀಕವಾಗಿ 5 ಎಂಜಿ ಮತ್ತು ವಿಲ್ಡಾಗ್ಲಿಪ್ಟಿನ್‌- ದಿನಕ್ಕೆ ಎರಡು ಬಾರಿ 50 ಎಂಜಿ. ಮೂತ್ರಪಿಂಡ ವೈಫ‌ಲ್ಯಕ್ಕೆ ಒಳಗಾಗಿರುವವರಲ್ಲಿ ಲಿನಾಗ್ಲಿಪ್ಟಿನ್‌ನ ಡೋಸೇಜ್‌ ಹೊಂದಾಣಿಕೆ ಮಾಡಬೇಕಾದ ಅಗತ್ಯವಿಲ್ಲ.

ಸೆಲೆಕ್ಟಿವ್‌ ಸೋಡಿಯಂ – ಗುÉಕೊಸೆಟ್ರಾನ್ಸ್‌ ಪೋರ್ಟರ್‌-2
(ಎಸ್‌ಜಿಎಲ್‌ಟಿ-2)
ಇನ್‌ಹಿಬಿಟರ್
ಎಸ್‌ಜಿಎಲ್‌ಟಿ-2 ಇನ್‌ಹಿಬಿಟರ್ ಟೈಪ್‌ -2 ಮಧುಮೇಹಕ್ಕೆ ಔಷಧವಾಗಿ ಎಫ್ಡಿಎಯಿಂದ ಹೊಸದಾಗಿ ಅಂಗೀಕೃತವಾಗಿರುವ ಔಷಧ ಸಮೂಹವಾಗಿದೆ. ಎಸ್‌ಜಿಎಲ್‌ಟಿ-2 ಒಂದು ಪ್ರೊಟೀನ್‌ ಆಗಿದ್ದು, ಮೂತ್ರಪಿಂಡಗಳ ಪ್ರಾಕ್ಸಿಮಲ್‌ ಟ್ಯೂಬ್ಯೂಲ್‌ಗ‌ಳಲ್ಲಿ ಸೋಡಿಯಂ -ಗುÉಕೋಸ್‌ ಸಹ ರವಾನೆದಾರನಾಗಿ ಕೆಲಸ ಮಾಡುತ್ತದೆ. ಪ್ರಾಕ್ಸಿಮಲ್‌ ಟ್ಯೂಬ್ಯೂಲ್‌ಗ‌ಳ ಪ್ರಧಾನ ಕೆಲಸವು ಮೂತ್ರಕ್ಕೆ ಶೋಧಿಸಲ್ಪಟ್ಟ ಗುÉಕೋಸನ್ನು ಅಲ್ಲಿಂದ ಪುನರಪಿ ಹೀರಿಕೊಂಡು ರಕ್ತಪ್ರವಾಹಕ್ಕೆ ಸೇರಿಸುವುದು. ಶೇ.90ರಷ್ಟು ಗುÉಕೋಸ್‌ ಪುನರಪಿ ಹೀರಿಕೆಯನ್ನು ಇದು ನಡೆಸುತ್ತದೆ. ಈ ಪ್ರೊಟೀನ್‌ನ ನಿರ್ಬಂಧವು ಮೂತ್ರದಲ್ಲಿ ಗುÉಕೋಸ್‌ ವಿಸರ್ಜನೆಗೆ ಮತ್ತು ರಕ್ತದಲ್ಲಿ ಸಹಜಕ್ಕಿಂತ ಕಡಿಮೆ ಗುÉಕೋಸ್‌ ಮಟ್ಟ (180 ಎಂಜಿ/ಡಿಎಲ್‌ಗೆ ಬದಲಾಗಿ ಸುಮಾರು 120 ಎಂಜಿ/ಡಿಎಲ್‌)ಕ್ಕೆ ಕಾರಣವಾಗುತ್ತದೆ.

ಎಸ್‌ಜಿಎಲ್‌ಟಿ-2 ಇನ್‌ಹಿಬಿಟರ್ ಗಳ ಸವàìಸಾಧಾರಣ ಅಡ್ಡ ಪರಿಣಾಮವೆಂದರೆ, ಯೋನಿಯಲ್ಲಿ ಶಿಲೀಂಧ್ರ ಸೋಂಕು ಮತ್ತು ಮೂತ್ರಾಂಗ ವ್ಯೂಹ ಸೋಂಕುಗಳು. ಅಡ್ಡಪರಿಣಾಮಗಳ ಅತಿ ಹೆಚ್ಚು ಅಪಾಯವನ್ನು ಸ್ತ್ರೀರೋಗಿಗಳು ಹಾಗೂ ಶಿಶ°ದ ಮುಂದೊಗಲು ತೆಗೆದುಹಾಕಲ್ಪಟ್ಟ ಪುರುಷ ರೋಗಿಗಳು ಹೊಂದಿರುತ್ತಾರೆ. ಪಾಲಿಯೂರಿಯಾ ಕೂಡ ಉಂಟಾಗಬಹುದು.

ತೂಕ ನಷ್ಟ (ತೂಕನಷ್ಟದ ಮೂರನೇ ಎರಡು ಕೊಬ್ಬಿನ ಜೀವಕೋಶಗಳ ನಷ್ಟದಿಂದ ಮತ್ತು ಮೂರನೇ ಒಂದು ದ್ರವಾಂಶ ನಷ್ಟದಿಂದ ಉಂಟಾಗುತ್ತದೆ) ಮತ್ತು ಕಡಿಮೆ ರಕ್ತದೊತ್ತಡಗಳು ಈ ಔಷಧಗಳ ಹೆಚ್ಚುವರಿ ಪ್ರಯೋಜನಗಳಾಗಿವೆ.

ಈ ಔಷಧಗಳನ್ನು ಮಕ್ಕಳಿಗೆ, ಟೈಪ್‌-1 ಮಧುಮೇಹ ರೋಗಿಗಳಿಗೆ, ರಕ್ತ ಅಥವಾ ಮೂತ್ರದಲ್ಲಿ ಆಗಾಗ ಕೀಟೋನ್‌ ಹೊಂದಿರುವವರಿಗೆ ಅಥವಾ ತೀವ್ರ ಮೂತ್ರಪಿಂಡ ಸಮಸ್ಯೆ ಹೊಂದಿರುವವರಿಗೆ ಸೂಚಿಸಲಾಗುವುದಿಲ್ಲ. ಮೂತ್ರದಲ್ಲಿ ಗುÉಕೋಸ್‌ ಕಾಣಿಸಿಕೊಳ್ಳುವುದನ್ನು ರೋಗಿಗಳಿಗೆ ಸೂಚಿಸಬೇಕು; ಹೀಗಾಗಿ ಯೂರಿನ್‌ ಗುÉಕೋಸ್‌ ಸ್ಟ್ರಿಪ್‌ಗ್ಳು ಸಾಮಾನ್ಯವಾಗಿ ಪಾಸಿಟಿವ್‌ ರೀಡಿಂಗ್‌ ತೋರಿಸುತ್ತವೆ.
ಪ್ರಸ್ತುತ ಮೂರು ಎಸ್‌ಜಿಎಲ್‌ಟಿ-2 ಇನ್‌ಹಿಬಿಟರ್‌ಗಳು ಲಭ್ಯವಿವೆ – ಕನಾಗ್ಲಿಫ್ಲೋಝಿನ್‌, ಡಪಾಗ್ಲಿಫ್ಲೋಝಿನ್‌ ಮತ್ತು ಎಂಪಾಗ್ಲಿಫ್ಲೋಝಿನ್‌.

ಕನಾಗ್ಲಿಫ್ಲೋಝಿನ್‌ನ್ನು ದಿನದ ಮೊತ್ತಮೊದಲ ಆಹಾರ ಸೇವನೆಗೆ ಮುನ್ನ 100 ಎಂಜಿ/ದಿನ ಪ್ರಮಾಣದಲ್ಲಿ ನೀಡಲಾಗುತ್ತದೆ ಮತ್ತು, ಸ್ವೀಕೃತವಾದರೆ 300 ಎಂಜಿ/ದಿನಕ್ಕೆ ಹೆಚ್ಚಿಸಬಹುದಾಗಿದೆ. ಕನಾಗ್ಲಿಫ್ಲೋಝಿನ್‌ನ್ನು ಇಜಿಎಫ್ಆರ್‌ 45ಎಂಎಲ್‌/ನಿಮಿಷ/1.73 ಎಂ2ಕ್ಕಿಂತ ಕಡಿಮೆ ಇರುವ ರೋಗಿಗಳಿಗೆ ಉಪಯೋಗಿಸಬಾರದು ಮತ್ತು ಇಜಿಎಫ್ಆರ್‌ 45ರಿಂದ 60 ಎಂಎಲ್‌/ನಿಮಿಷ/1.73ಎಂ2 ಇರುವ ರೋಗಿಗಳಿಗೆ 100 ಎಂಜಿಗೆ ಮಿತಗೊಳಿಸಬೇಕು.

ಡಪಾಗ್ಲಿಫ್ಲೋಝಿನ್‌ನ್ನು 5 ಎಂಜಿ/ದಿನ ಡೋಸ್‌ ನೀಡಲಾಗುತ್ತದೆ ಮತ್ತು ಸ್ವೀಕೃತವಾದರೆ 10 ಎಂಜಿ/ದಿನಕ್ಕೆ ಹೆಚ್ಚಿಸಬಹುದಾಗಿದೆ. ಇದನ್ನು ಇಜಿಎಫ್ಆರ್‌ 60 ಎಂಎಲ್‌/ನಿಮಿಷ/1.73 ಎಂ2ಕ್ಕಿಂತ ಕಡಿಮೆ ಇದ್ದರೆ ಉಪಯೋಗಿಸಬಾರದು.

ಎಂಪಾಗ್ಲಿಫ್ಲೋಝಿನ್‌ನ್ನು ದಿನಕ್ಕೊಮ್ಮೆ 10 ಅಥವಾ 25 ಎಂಜಿ ಡೋಸ್‌ನಲ್ಲಿ ನೀಡಲಾಗುತ್ತದೆ. ಇಜಿಎಫ್ಆರ್‌ ಇಜಿಎಫ್ಆರ್‌ 60 ಎಂಎಲ್‌/ನಿಮಿಷ/1.73 ಎಂ2ಕ್ಕಿಂತ ಕಡಿಮೆ ಇದ್ದರೆ ಇದನ್ನು ಆರಂಭಿಸಬಾರದು. ಈ ಔಷಧವನ್ನು ಉಪಯೋಗಿಸುತ್ತಿರುವಾಗ ಇಜಿಎಫ್ಆರ್‌ 60 ಎಂಎಲ್‌/ನಿಮಿಷ/1.73 ಎಂ2ಕ್ಕಿಂತ ಕೆಳಕ್ಕೆ ಕುಸಿದರೆ ಔಷಧವನ್ನು 10 ಎಂಜಿ/ದಿನ ಡೋಸ್‌ನಲ್ಲಿ ಮುಂದುವರಿಸಬಾರದು ಹಾಗೂ ಇಜಿಎಫ್ಆರ್‌ 45ಎಂಎಲ್‌/ ನಿಮಿಷ/1.73 ಎಂ2ಕ್ಕಿಂತ ಕೆಳಕ್ಕೆ ಕುಸಿದರೆ ಸ್ಥಗಿತಗೊಳಿಸಬೇಕು. ಪ್ರಸ್ತುತ ಎಂಪಾಗ್ಲಿಫ್ಲೋಝಿನ್‌ ಮಾತ್ರ ಟೈಪ್‌2 ಮಧುಮೇಹ ಹೊಂದಿರುವ ರೋಗಿಗಳಲ್ಲಿ ಹೃದ್ರೋಗಗಳ ಅಪಾಯವನ್ನು ತಗ್ಗಿಸುವ ಮಧುಮೇಹ ನಿರೋಧಕ ಔಷಧಿಯಾಗಿದೆ.

ಇನ್ಸುಲಿನ್‌
ಮಧುಮೇಹಕ್ಕೆ ಲಭ್ಯವಿರುವ ಅತಿ ಹಳೆಯ ಔಷಧ ಚಿಕಿತ್ಸೆ ಇನ್ಸುಲಿನ್‌. 1921ರಲ್ಲಿ ಇದನ್ನು ಕಂಡುಹಿಡಿಯಲಾಯಿತು, 1922ರಲ್ಲಿ ಮನುಷ್ಯರಲ್ಲಿ ಇದರ ಪ್ರಾಯೋಗಿಕ ಪರೀಕ್ಷೆಯನ್ನು ಆರಂಭಿಸಲಾಯಿತು. ಇವತ್ತಿಗೂ ಹೈಪರ್‌ಗ್ಲೆ„ಸೇಮಿಯಾ (ರಕ್ತದಲ್ಲಿ ಗುÉಕೋಸ್‌ ಆಧಿಕ್ಯ)ವನ್ನು ಕಡಿಮೆ ಮಾಡುವ ಅತ್ಯಂತ ಪರಿಣಾಮಕಾರಿ ವಿಧಾನವಾಗಿ ಇದು ಚಾಲ್ತಿಯಲ್ಲಿದೆ. ಇದರ ಔಷಧೀಯ ಪರಿಣಾಮಕ್ಕೆ ಮೇಲಿ¾ತಿ ಎಂಬುದಿಲ್ಲ. ಹೈಪೊಗ್ಲೆ„ಸೇಮಿಯಾ ಇದರ ಪ್ರಮುಖ ಅಡ್ಡ ಪರಿಣಾಮವಾಗಿದೆ.

ಗ್ಲೆ„ಸೇಮಿಯಾ
ನಿರ್ವಹಣೆಯ ಪ್ರವೇಶ
ಗ್ಲೆ„ಸೇಮಿಯಾ ನಿರ್ವಹಣೆಯ ಲೆಕ್ಕಾಚಾರವು ಯಾವುದೇ ಸಹವರ್ತಿ ಅನಾರೋಗ್ಯಗಳಿಲ್ಲದ ಮತ್ತು ಹೈಪೊಗ್ಲೆ„ಸೇಮಿಯಾ ಅಪಾಯ ಕಡಿಮೆ ಇರುವ ಆರೋಗ್ಯವಂತ ವ್ಯಕ್ತಿಗಳಿಗೆ ಶೇ.6.5 ಅಥವಾ ಅದಕ್ಕಿಂತ ಕಡಿಮೆ ಎಚ್‌ಬಿಎ1ಸಿಯನ್ನು ಶಿಫಾರಸು ಮಾಡುತ್ತದೆ. ಆದರೆ ಸಹವರ್ತಿ ಅನಾರೋಗ್ಯಗಳಿರುವ ಮತ್ತು ಹೈಪೊಗ್ಲೆ„ಸೇಮಿಯಾ ಅಪಾಯ ಹೆಚ್ಚು ಇರುವ ವ್ಯಕ್ತಿಗಳಿಗೆ ವ್ಯಕ್ತಿಗತವಾಗಿ ಎಚ್‌ಬಿಎ1ಸಿ ಮೌಲ್ಯದ ಗುರಿಯನ್ನು ಶೇ.6.5ಕ್ಕಿಂತ ಹೆಚ್ಚು ಇರಿಸಿಕೊಳ್ಳಲಾಗುತ್ತದೆ. ತೂಕನಷ್ಟದ ಸಹಿತ ಜೀವನಶೈಲಿ ಬದಲಾವಣೆ ಎಲ್ಲ ಚಿಕಿತ್ಸೆಗಳ ಭಾಗವಾಗಿರುತ್ತದೆ. ಏಕಚಿಕಿತ್ಸೆಯ ಆರಂಭದಲ್ಲಿ ಮೆಟಮಾರ್ಫಿನ್‌ಗೆ ಆದ್ಯತೆ ನೀಡಲಾಗುತ್ತಿದ್ದು, ಅದು
ಸಂಯೋಜಿತ ಚಿಕಿತ್ಸೆಗಳ ಆದರ್ಶ ಭಾಗವಾಗಿರುತ್ತದೆ.

ದ್ವಿ ಔಷಧಿ ಚಿಕಿತ್ಸೆ
ಗ್ಲೆ„ಸೇಮಿಕ್‌ ಗುರಿ ಸಾಧಿತವಾಗ ದಿದ್ದಲ್ಲಿ ಅಥವಾ 2-3 ತಿಂಗಳುಗಳಲ್ಲಿ ಮೊದಲಿದ್ದ ಪ್ರಮಾಣ ಮರುಕಳಿಸಿದಲ್ಲಿ ಇನ್ನೊಂದು ಔಷಧವನ್ನು ಸೇರ್ಪಡೆಗೊಳಿಸಬೇಕು. ದ್ವಿತೀಯ ಔಷಧದ ಆಯ್ಕೆಯೂ ರೋಗಿಯ ಆರೋಗ್ಯ ಸ್ಥಿತಿಗತಿ ಮತ್ತು ಒಳಗೊಳ್ಳುವಿಕೆ (ಉದಾಹರಣೆಗೆ, ಖಾಲಿ ಹೊಟ್ಟೆಯಲ್ಲಿ ಮತ್ತು ಆಹಾರ ಸೇವನೆಯ ಬಳಿಕದ ಗುÉಕೋಸ್‌ ಮಟ್ಟಗಳೆರಡೂ ಹೆಚ್ಚಿದ್ದರೆ ಡಿಪಿಪಿ-4 ಇನ್‌ಹಿಬಿಟರ್‌, ಆಹಾರ ಸೇವನೆಯ ಬಳಿಕದ ಗುÉಕೋಸ್‌ ಮಟ್ಟ ತೀವ್ರವಾಗಿ ಏರಿದ್ದರೆ ಜಿಎಲ್‌ಪಿ-1 ಅಗನಿಸ್ಟ್‌, ರೋಗಿ ಯಾವುದಾದರೂ ಮೆಟಬಾಲಿಕ್‌ ಸಿಂಡ್ರೋಮ್‌ ಅಥವಾ/ಮತ್ತು ಮೊನಾಕೊಹೊಲಿಕ್‌ ಫ್ಯಾಟಿ ಲಿವರ್‌ ಕಾಯಿಲೆ ಹೊಂದಿದ್ದರೆ ಟಿಝಡ್‌ಡಿ) ಯನ್ನು ಪರಿಗಣಿಸಿ ವ್ಯಕ್ತಿಗತಗೊಂಡಿರಬೇಕು. ಇನ್ಸುಲಿನ್‌ ಸೆಕ್ರೆಟಗಾಗ್‌ ತೆಗೆದುಕೊಳ್ಳುತ್ತಿರುವ ರೋಗಿಗೆ ದ್ವಿತೀಯ ಔಷಧವನ್ನು ನೀಡುವುದಕ್ಕೆ ಮುನ್ನ ವೈದ್ಯರು ಅಥವಾ ಆರೋಗ್ಯ ಸೇವಾದಾರರು ಹೈಪೊಗ್ಲೆ„ಸೇಮಿಯಾ ಉಂಟಾಗುವ ಸಂಭಾವ್ಯತೆಯ ಬಗ್ಗೆ ಎಚ್ಚರಿಕೆ ನೀಡಬೇಕು.

-ಮುಂದುವರಿಯುವುದು

-ಡಾ| ಶಿವಶಂಕರ ಎಂ.ಡಿ.
ಪ್ರೊಫೆಸರ್‌ ಆಫ್ ಮೆಡಿಸಿನ್‌
ಕೆಎಂಸಿ, ಮಣಿಪಾಲ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಒಗ್ಗರಣೆ ಎಂದ ಕೂಡಲೇ ಮೊದಲು ನೆನಪಾಗುವುದು ಕರಿಬೇವು. ಒಗ್ಗರಣೆಯ ಘಮ ಹೆಚ್ಚಿಸುವ ಕರಿಬೇವನ್ನು ತಿನ್ನದೆ ಅದನ್ನು ತಟ್ಟೆಯ ಮೂಲೆಗೆ ತಳ್ಳುವವರೇ ಹೆಚ್ಚು. ಆದರೆ,...

  • "ಊಟ ಬಲ್ಲವನಿಗೆ ರೋಗವಿಲ್ಲ' ಎಂಬ ಮಾತಿದೆ. ಯಾರಿಗೆ ಊಟ ಮಾಡುವ ಕಲೆ (ವಿಜ್ಞಾನವೂ ಹೌದು) ಗೊತ್ತಿದೆಯೋ, ಅವರು ಆರೋಗ್ಯವಂತರಾಗಿರುತ್ತಾರೆ. ಯಾವ ಆಹಾರವನ್ನು ಯಾವ ಕಾಲದಲ್ಲಿ,...

  • ಗ್ಯಾಸ್ಟ್ರೊಈಸೊಫೇಜಿಯಲ್‌ ರಿಫ್ಲೆಕ್ಸ್‌ ಡಿಸೀಸ್‌ ಅಥವಾ ಸಂಕ್ಷಿಪ್ತವಾಗಿ ಗೆರ್ಡ್‌ (GERD) ಎಂಬುದಾಗಿ ವೈದ್ಯಕೀಯ ಪರಿಭಾಷೆಯಲ್ಲಿ ಕರೆಯಲ್ಪಡುವ ಎದೆಯುರಿ ಜನಸಾಮಾನ್ಯರಲ್ಲಿ...

  • ಕಳೆದ ಸಂಚಿಕೆಯಿಂದ- ನ್ಯೂರೊಮಸ್ಕಾಲರ್‌ ವ್ಯವಸ್ಥೆ - ವಯಸ್ಸಾಗುತ್ತಿದ್ದಂತೆ ನರ-ಸ್ನಾಯು ಸಮನ್ವಯವು ನಶಿಸಲಾರಂಭಿಸುತ್ತದೆ. - ಸಂಧಿವಾತದಂತಹ ಅನಾರೋಗ್ಯಗಳು ಸಂಕಷ್ಟ...

  • ವೈದ್ಯಕೀಯ ಸೇವೆಯಲ್ಲಿ ಸಾಮಾನ್ಯವಾಗಿ ಎದುರಾಗುವ ಸಂಧಿವಾತ ಅಥವಾ ಆರ್ಥ್ರೈಟಿಸ್ ಎಂದರೆ ರುಮಟಾಯ್ಡ ಆರ್ಥ್ರೈಟಿಸ್ ಮತ್ತು ಸೋರಿಯಾಟಿಕ್‌ ಆರ್ಥ್ರೈಟಿಸ್, ಆ್ಯಂಕಿಲೂಸಿಂಗ್‌...

ಹೊಸ ಸೇರ್ಪಡೆ