ಆಹಾರದಲ್ಲಿ ನಾರಿನಂಶ

Team Udayavani, Jul 28, 2019, 5:00 AM IST

-ಸಲಾಡ್‌ಗಳಲ್ಲಿ ಆಮ್ಲಜನಕವು ಸಾಂದ್ರವಾಗಿದ್ದು, ಬ್ಯಾಕ್ಟೀರಿಯಾ, ವೈರಸ್‌ ಮತ್ತು ಅಸಹಜ ಅಂಗಾಂಶ ಬೆಳವಣಿಗೆಗಳಿಂದ ಕಾಪಾಡುತ್ತವೆ.
– ಧಾನ್ಯ ಮತ್ತು ಕಾಳುಗಳನ್ನು ತೋಯಿಸಿ ಮೊಳಕೆ ಬರಿಸುವುದರಿದ ನಾರಿನಂಶ ಹೆಚ್ಚುತ್ತದೆಯಲ್ಲದೆ, ಅದು ಕೊಬ್ಬು ಮತ್ತು ವಿಷಾಂಶಗಳ ಜತೆಗೆ ಸಂಯೋಜನೆಗೊಂಡು ಅವುಗಳನ್ನು ದೇಹದಿಂದ ಹೊರಹಾಕಲು ಸಹಾಯ ಮಾಡುತ್ತದೆ.
– ಎ, ಬಿ ಮತ್ತು ಇಯಂತಹ ವಿಟಮಿನ್‌ಗಳು ಮತ್ತು ಆವಶ್ಯಕ ಫ್ಯಾಟಿ ಆ್ಯಸಿಡ್‌ಗಳು ಮೊಳಕೆ ಬರಿಸುವುದರ ಮೂಲಕ ವೃದ್ಧಿಯಾಗುತ್ತವೆ. ಇವು ಪ್ರೊಟೀನ್‌ನ ಜತೆಗೆ ಸುಲಭವಾಗಿ ಸಂಯೋಗಗೊಂಡು ದೇಹವು ಅವುಗಳನ್ನು ಹೀರಿಕೊಳ್ಳಲು ಸುಲಭವಾಗುತ್ತದೆ.
– ಸಲಾಡ್‌ಗಳು ದೇಹವನ್ನು ಪ್ರತ್ಯಾಮ್ಲಿàಯಗೊಳಿಸುತ್ತವೆ ಮತ್ತು ಕ್ಯಾನ್ಸರ್‌ನಂತಹ ಕಾಯಿಲೆಗಳಿಂದ ದೂರವಿರಲು ನೆರವಾಗುತ್ತವೆ.
– ಸಲಾಡ್‌ಗಳಿಗೆ ನಿಂಬೆರಸವನ್ನು ಸೇರಿಸಿದಾಗ ವಿಟಮಿನ್‌ ಸಿ ಹೆಚ್ಚುತ್ತದೆ. ಇದು ಕಬ್ಬಿಣಾಂಶವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಕಬ್ಬಿಣಾಂಶವು ರಕ್ತಹೀನತೆಯುಳ್ಳ ರೋಗಿಗಳಿಗೆ ಅಗತ್ಯವಾದುದಾಗಿದೆ.

ನಿಮ್ಮ ಉಪಾಹಾರಗಳಲ್ಲಿ
ನಾರಿನಂಶ ಇರಲಿ
ಓಟ್ಸ್‌ ದೋಸೆ, ಗೋಧಿ ದೋಸೆಯಂತಹವನ್ನು ಅಕ್ಕಿ ಇಲ್ಲದೆಯೂ ತಯಾರಿಸಬಹುದು. ಹೆಚ್ಚು ನಾರಿನಂಶ- ಕಡಿಮೆ ಕೊಲೆಸ್ಟರಾಲ್‌ ಸೇವಿಸಬೇಕಿರುವವರು, ಮಧುಮೇಹ ಹೊಂದಿರುವವರು ಮತ್ತು ತೂಕ ಇಳಿಸಿಕೊಳ್ಳುವುದಕ್ಕಾಗಿ ಹೆಚ್ಚು ನಾರಿನಂಶ ಸೇವಿಸಬೇಕಿರುವವರಿಗೆ ಉಪಕಾರಿ.

– ಹೆಚ್ಚು ಹಣ್ಣು ಮತ್ತು ತರಕಾರಿಗಳನ್ನು ತಿನ್ನಿ. ಅವುಗಳಲ್ಲಿ ಅಧಿಕ ನಾರಿನಂಶದ ಜತೆಗೆ ವಿಟಮಿನ್‌ ಮತ್ತು ಖನಿಜಾಂಶಗಳೂ ಹೆಚ್ಚಿರುತ್ತವೆ. ದಿನಕ್ಕೆ ಐದು ಅಥವಾ ಅದಕ್ಕಿಂತ ಹೆಚ್ಚು ಬಾರಿ ಸೇವಿಸಲು ಪ್ರಯತ್ನಿಸಿ.
– ಉಪಾಹಾರ, ತಿನಿಸುಗಳೂ ನಾರಿನಂಶಪೂರಿತವಾಗಿರಲಿ. ತಾಜಾ ಹಣ್ಣುಗಳು, ಹಸಿ ತರಕಾರಿಗಳು, ಕಡಿಮೆ ಕೊಬ್ಬಿರುವ ಪಾಪ್‌ಕಾರ್ನ್ ಮತ್ತು ಇಡೀ ಧಾನ್ಯಗಳ ಕುರುಕು ತಿನಿಸುಗಳು ಉತ್ತಮ ಆಯ್ಕೆಗಳಾಗಿವೆ. ಒಂದು ಮುಷ್ಠಿ ಬೀಜಗಳು ಅಥವಾ ಒಣ ಹಣ್ಣುಗಳು ಕೂಡ ಉತ್ತಮ ಆಯ್ಕೆಯೇ. ಬೀಜಗಳು ಮತ್ತು ಒಣ ಹಣ್ಣುಗಳಲ್ಲಿ ಕ್ಯಾಲೊರಿ ಹೆಚ್ಚಿದ್ದರೂ ಇವು ಉತ್ತಮ.
– ಅಧಿಕ ನಾರಿನಂಶವುಳ್ಳ ಆಹಾರಗಳು ನಮ್ಮ ಆರೋಗ್ಯ ದೃಷ್ಟಿಯಿಂದ ಅತ್ಯುತ್ತಮ. ಆದರೆ ಅತಿ ಹೆಚ್ಚು ಪ್ರಮಾಣದ ನಾರಿನಂಶವನ್ನು ಅತ್ಯಲ್ಪ ಕಾಲದಲ್ಲಿ ಸೇವಿಸುವುದರಿಂದ ಹೊಟ್ಟೆಯಲ್ಲಿ ಗ್ಯಾಸ್‌, ಹೊಟ್ಟೆಯುಬ್ಬರ, ಹಿಡಿತ ಉಂಟಾಗಬಹುದು. ಕೆಲವು ವಾರಗಳ ಅಂತರದಲ್ಲಿ ನಾರಿನಂಶವನ್ನು ಕ್ರಮೇಣವಾಗಿ ಹೆಚ್ಚಿಸಿಕೊಳ್ಳಿ. ಇದರಿಂದ ನಿಮ್ಮ ಕರುಳಿನಲ್ಲಿರುವ ನೈಸರ್ಗಿಕ ಬ್ಯಾಕ್ಟೀರಿಯಾಗಳಿಗೆ ಬದಲಾವಣೆಗೆ ಹೊಂದಿಕೊಳ್ಳಲು ಸುಲಭವಾಗುತ್ತದೆ.
– ಅಲ್ಲದೆ, ಸಾಕಷ್ಟು ನೀರು ಕುಡಿಯಿರಿ. ನೀರನ್ನು ಹೀರಿಕೊಂಡಾಗ ನಾರಿನಂಶವು ಅತ್ಯುತ್ತಮವಾಗಿ ಕೆಲಸ ಮಾಡುತ್ತದೆ. ಇದರಿಂದ ಮಲವು ಮೃದು ಮತ್ತು ಹೆಚ್ಚು ಗಾತ್ರದ್ದಾಗುತ್ತದೆ.

-ಕಳೆದ ಸಂಚಿಕೆಯಿಂದ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ