ಮಹಿಳೆಯರ ಆರೋಗ್ಯ ಸಮಸ್ಯೆಗಳು


Team Udayavani, Apr 17, 2022, 11:44 AM IST

health-issues

ಮಹಿಳೆಯೊಬ್ಬಳು ತನ್ನ ಜೀವನದಲ್ಲಿ ಹದಿಹರಯದವಳಾಗುವುದು, ಪ್ರಜನನ ಮತ್ತು ಋತುಚಕ್ರಬಂಧ- ಹೀಗೆ ಹಲವು ಹಂತಗಳನ್ನು ಹಾದುಬರುತ್ತಾಳೆ. ಈ ಸ್ಥಿತ್ಯಂತರಗಳಲ್ಲಿ ಆಕೆಯ ದೇಹವು ಹಲವು ಏಳುಬೀಳುಗಳನ್ನು ಕಾಣುತ್ತದೆ. ಆದ್ದರಿಂದ ಮಹಿಳೆಯರು ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ಅವುಗಳಲ್ಲಿ ಕೆಲವನ್ನು ಈ ಕೆಳಗೆ ಚರ್ಚಿಸಲಾಗಿದೆ.

ಪಿಸಿಒಡಿ ಮತ್ತು ಬೊಜ್ಜು

ಬಾಲಕಿ ಹರಯಕ್ಕೆ ಬರುವ ಸಂದರ್ಭದಲ್ಲಿ ಉಂಟಾಗಬಲ್ಲ ಪ್ರಮುಖ ಆರೋಗ್ಯ ಸಮಸ್ಯೆ ಇದು. ಇದಕ್ಕೆ ಸರ್ವೇಸಾಮಾನ್ಯವಾದ ಕಾರಣ ಎಂದರೆ ಅನಾರೋಗ್ಯಕರ ಆಹಾರ ಶೈಲಿ ಮತ್ತು ಆಲಸಿ ಜೀವನಶೈಲಿ.

ಗರ್ಭಧಾರಣೆಗೆ ಸಂಬಂಧಿಸಿದ ಸಮಸ್ಯೆಗಳು

ಗರ್ಭಕೋಶ, ಜನನಾಂಗಗಳಿಗೆ ಸಂಬಂಧಿಸಿದ ಸೋಂಕುಗಳಿಗೆ ಪದೇಪದೆ ತುತ್ತಾಗುವ ಮಹಿಳೆಯರಲ್ಲಿ ಎಕ್ಟೋಪಿಕ್‌ ಗರ್ಭಧಾರಣೆಯ ತೊಂದರೆ ಉಂಟಾಗಬಹುದು. ಇದನ್ನು ಬೇಗನೆ ಪತ್ತೆಹಚ್ಚಿ ಚಿಕಿತ್ಸೆ ನೀಡದೆ ಇದ್ದಲ್ಲಿ ಪ್ರಾಣಾಪಾಯಕ್ಕೆ ಕಾರಣವಾಗಬಹುದು.

ಗರ್ಭಧಾರಣೆಯ ಸಂದರ್ಭ ಪೌಷ್ಟಿಕಾಂಶ ಕೊರತೆ

ಇದರಿಂದ ತಾಯಿಗೆ ರಕ್ತಹೀನತೆ ಉಂಟಾಗಿ ಗರ್ಭಕೋಶದಲ್ಲಿರುವ ಭ್ರೂಣದ ಬೆಳವಣಿಗೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ಆದ್ದರಿಂದ ಮಹಿಳೆ ಗರ್ಭಧರಿಸಿದ ಸಂದರ್ಭದಲಿಲ ಉತ್ತಮ ಪೌಷ್ಟಿಕಾಂಶ ಮಟ್ಟ ಕಾಪಾಡಿಕೊಳ್ಳುವುದು ಮತ್ತು ಸಾಕಷ್ಟು ವಿಶ್ರಾಂತಿ ಪಡೆಯುವುದು ಬಹಳ ಮುಖ್ಯ.

ಗರ್ಭಧಾರಣೆಯ ಸಂದರ್ಭದಲ್ಲಿ ಚಯಾಪಚಯ ಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು

ಇತ್ತೀಚೆಗಿನ ದಿನಗಳಲ್ಲಿ ಇದು ಬಹಳ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ಪ್ರಧಾನ ಕಾರಣ ಎಂದರೆ ತಾಯಿಯ ಮುಂದುವರಿದ ವಯಸ್ಸು (35 ವರ್ಷಗಳ ಬಳಿಕ ತಾಯಿಯಾಗುವುದು) ಮತ್ತು ಒತ್ತಡಯುಕ್ತ ಜೀವನಶೈಲಿ. ವಿಶೇಷವಾಗಿ ಉದ್ಯೋಗಿ ಮಹಿಳೆಯರಲ್ಲಿ ಈ ತೊಂದರೆ ಹೆಚ್ಚು.

ಪ್ರಸೂತಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು

ಹೆರಿಗೆಯಾದ ಬಳಿಕ ತೀವ್ರ ರಕ್ತಸ್ರಾವ ಇದಕ್ಕೆ ಒಂದು ಉದಾಹರಣೆ. ಇದು ಪ್ರಾಣಾಪಾಯಕ್ಕೆ ಕಾರಣವಾಗಬಹುದಾದ ಸಮಸ್ಯೆ. ಹೀಗಾಗಿ ಇದಕ್ಕೆ ಉತ್ತಮ ಆಸ್ಪತ್ರೆಯಲ್ಲಿ ಪರಿಣತ ವೈದ್ಯರಿಂದ ಚಿಕಿತ್ಸೆ ನೀಡಬೇಕು.

ಪೆಲ್ವಿಕ್‌ ಸೋಂಕುಗಳು

ಜನನಾಂಗದ ಮೂಲಕ ಬಿಳುಪು ಹೋಗುವ ಸಮಸ್ಯೆಯುಳ್ಳ ಮಹಿಳೆಯರಿಗೆ ಈ ಸಮಸ್ಯೆ ಹೆಚ್ಚು ಕಾಣಿಸಿಕೊಳ್ಳುತ್ತದೆ. ಸರಿಯಾಗಿ ಚಿಕಿತ್ಸೆ ನೀಡದೆ ಹೋದರೆ ಮೂತ್ರಾಂಗ ವ್ಯೂಹ ಮತ್ತು ಪೆಲ್ವಿಕ್‌ ಉರಿಯೂತ ಕಾಯಿಲೆ ಪದೇಪದೆ ಉಂಟಾಗಬಹುದು. ಆದ್ದರಿಂದ ವೈಯಕ್ತಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ತುಂಬಾ ಮುಖ್ಯ.

ಗರ್ಭಕೋಶ ಮತ್ತು ಅಂಡಾಶಯಗಳಲ್ಲಿ ಗಡ್ಡೆಗಳು

ಸಾಮಾನ್ಯವಾಗಿ ಕಾಣಿಸಿಕೊಳ್ಳುವಂಥದ್ದು ಗರ್ಭಕೋಶದ ಫೈಬ್ರಾಯ್ಡ ಹಾಗೂ ಕೆಲವು ಮಹಿಳೆಯರಲ್ಲಿ ಕ್ಯಾನ್ಸರ್‌ಕಾರಕವಲ್ಲದ ಅಂಡಾಶಯದ ಗಡ್ಡೆಗಳು. ಸಾಮಾನ್ಯವಾಗಿ ಇವು ಋತುಸ್ರಾವದ ಸಂದರ್ಭದಲ್ಲಿ ಅತಿಯಾದ ರಕ್ತಸ್ರಾವ ಮತ್ತು ಹೆಚ್ಚು ನೋವಿನ ಜತೆಗೆ ಸಂಬಂಧ ಹೊಂದಿರುತ್ತದೆ. ಇದನ್ನು ಶೀಘ್ರವಾಗಿ ತಪಾಸಣೆಗೆ ಒಳಪಡಿಸಬೇಕು ಮತ್ತು ಅಗತ್ಯಬಿದ್ದಲ್ಲಿ ಶಸ್ತ್ರಚಿಕಿತ್ಸೆ ನೀಡಬೇಕು.

ಋತುಚಕ್ರ ಬಂಧದ ಬಳಿಕದ ಸಮಸ್ಯೆಗಳು

ಋತುಚಕ್ರ ನಿಲ್ಲುವ ವಯಸ್ಸಿನಲ್ಲಿ ಈ ಸಮಸ್ಯೆಗಳು ತಲೆದೋರುತ್ತವೆ. ಸಾಮಾನ್ಯವಾಗಿ ಮೈ ಬೆವರುವುದು, ಮೈಕೈನೋವು, ನಿದ್ದೆಯ ಕೊರತೆ ಮತ್ತು ಬೇಗನೆ ಸಿಟ್ಟಿಗೇಳುವುದು ಇತ್ಯಾದಿ ಇರುತ್ತವೆ. ಇಂತಹ ಮಹಿಳೆಯರಿಗೆ ಆಪ್ತಸಮಾಲೋಚನೆ ಮತ್ತು ಪೂರಕ ಚಿಕಿತ್ಸೆ ಅಗತ್ಯವಾಗಿರುತ್ತದೆ.

ಅಪಾಯಕಾರಿ ಬೆಳವಣಿಗೆಗಳು

ಸ್ತನದ ಕ್ಯಾನ್ಸರ್‌, ಗರ್ಭಕೋಶದ ಕ್ಯಾನ್ಸರ್‌, ಗರ್ಭಕಂಠದ ಕ್ಯಾನ್ಸರ್‌ ಮತ್ತು ಅಂಡಾಶಯದ ಕ್ಯಾನ್ಸರ್‌ನಂತಸ ಸಮಸ್ಯೆಗಳು ಹಿರಿಯ ವಯಸ್ಸಿನಲ್ಲಿ ತಲೆದೋರಬಹುದಾಗಿದೆ. ಆದ್ದರಿಂದ ಎಲ್ಲ ಮಹಿಳೆಯರೂ 40 ವರ್ಷ ವಯಸ್ಸಿನ ಬಳಿಕ ಇವುಗಳಿಗೆ ಸಂಬಂಧಿಸಿದ ತಪಾಸಣೆಗಳನ್ನು ಮಾಡಿಸಿ ಕೊಳ್ಳಬೇಕು ಮತ್ತು ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು.

-ಡಾ| ಸಮೀನಾ ಕನ್ಸಲ್ಟಂಟ್‌, ಒಬ್‌ಸ್ಟೆಟ್ರಿಕ್ಸ್‌ ಮತ್ತು ಗೈನಕಾಲಜಿ ವಿಭಾಗ, ಕೆಎಂಸಿ ಆಸ್ಪತ್ರೆ, ಮಂಗಳೂರು

ಟಾಪ್ ನ್ಯೂಸ್

Kota: ಬೈಕ್‌ ಅಪಘಾತ; ಯುವಕ ಸಾವು

Kota: ಬೈಕ್‌ ಅಪಘಾತ; ಯುವಕ ಸಾವು

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

ಬರ ಪರಿಹಾರದಲ್ಲಿ ಸಿಎಂ, ಕಾಂಗ್ರೆಸ್‌ ರಾಜಕೀಯ: ಅಶೋಕ್‌

ಬರ ಪರಿಹಾರದಲ್ಲಿ ಸಿಎಂ, ಕಾಂಗ್ರೆಸ್‌ ರಾಜಕೀಯ: ಅಶೋಕ್‌

“ಬರ ಪರಿಹಾರ ಕೊಡಿ, ಇಲ್ಲವೇ ರಾಜ್ಯಕ್ಕೆ ಬರಲೇಬೇಡಿ’

“ಬರ ಪರಿಹಾರ ಕೊಡಿ, ಇಲ್ಲವೇ ರಾಜ್ಯಕ್ಕೆ ಬರಲೇಬೇಡಿ’

Gold price drops by Rs 1,530 in one day

Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ

ನಿಮ್ಮ ಮನೆ ದೇವರು, ಮತದಾರರು ಒಳ್ಳೆಯದು ಮಾಡ್ತಾರಾ?: ಡಿಕೆಶಿ

ನಿಮ್ಮ ಮನೆ ದೇವರು, ಮತದಾರರು ಒಳ್ಳೆಯದು ಮಾಡ್ತಾರಾ?: ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Kota: ಬೈಕ್‌ ಅಪಘಾತ; ಯುವಕ ಸಾವು

Kota: ಬೈಕ್‌ ಅಪಘಾತ; ಯುವಕ ಸಾವು

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

ಬರ ಪರಿಹಾರದಲ್ಲಿ ಸಿಎಂ, ಕಾಂಗ್ರೆಸ್‌ ರಾಜಕೀಯ: ಅಶೋಕ್‌

ಬರ ಪರಿಹಾರದಲ್ಲಿ ಸಿಎಂ, ಕಾಂಗ್ರೆಸ್‌ ರಾಜಕೀಯ: ಅಶೋಕ್‌

“ಬರ ಪರಿಹಾರ ಕೊಡಿ, ಇಲ್ಲವೇ ರಾಜ್ಯಕ್ಕೆ ಬರಲೇಬೇಡಿ’

“ಬರ ಪರಿಹಾರ ಕೊಡಿ, ಇಲ್ಲವೇ ರಾಜ್ಯಕ್ಕೆ ಬರಲೇಬೇಡಿ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.