ಹೆತ್ತವರಿಂದ ಮಗುವಿಗೆ ಎಚ್‌ಐವಿ ಪ್ರಸರಣ ತಡೆ ಹೇಗೆ?

Team Udayavani, Jun 9, 2019, 6:00 AM IST

ಸಾಂದರ್ಭಿಕ ಚಿತ್ರ.

ಐಸಿಟಿಸಿ/ಪಿಪಿಟಿಸಿಟಿಯು ಸೋಂಕಿತ ತಾಯಂದಿರ ಜೀವನದ ಗುಣಮಟ್ಟ ಹಾಗೂ ಜೀವಿತದ ಕಾಲಾವಧಿಯನ್ನು ಹೆಚ್ಚಿಸುವುದಕ್ಕೆ ಒಂದು ಪ್ರಮುಖ ಪಾತ್ರ ವಹಿಸುವ ಕೇಂದ್ರವಾಗಿದೆ. ಜೊತೆಗೆ ಮುಖ್ಯವಾಗಿ, ಶಿಶುವಿಗೆ ಹೆಚ್‌.ಐ.ವಿ. ವೈರಾಣು ಹರಡುವುದನ್ನು ತಡೆಗಟ್ಟಲು ಪ್ರಮುಖ ಪಾತ್ರ ವಹಿಸುತ್ತದೆ. ಈ ಐಸಿಟಿಸಿ ವ್ಯವಸ್ಥೆಯು ಎಲ್ಲಾ ಸರಕಾರಿ ಆಸ್ಪತ್ರೆ ಹಾಗೂ ಕೆಲವು ಆಯ್ದ ಮೆಡಿಕಲ್‌ ಕಾಲೇಜುಗಳಲ್ಲಿ ಲಭ್ಯವಿರುತ್ತದೆ.

ತಾಯಿಯಿಂದ ಮಗುವಿಗೆ ಹೆಚ್‌.ಐ.ವಿ. ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಸಾಧ್ಯವಿದೆ. ಹಾಗಾಗಿ ಪ್ರಸವ ಪೂರ್ವದ ಮೂರು ತಿಂಗಳೊಳಗಾಗಿ ಎಲ್ಲಾ ಗರ್ಭಿಣಿ ಮಹಿಳೆಯರು ಐಸಿಟಿಸಿ ಕೇಂದ್ರದಲ್ಲಿ ತಪಾಸಣೆಗೊಳಪಡಬೇಕು. ಫ‌ಲಿತಾಂಶವು ನೆಗೆಟಿವ್‌ ಎಂದಾದರೆ, ಗರ್ಭಿಣಿ ಅಪಾಯಕಾರಿಯಂಚಿನಲ್ಲಿದ್ದರೆ, ಪುನಃ 3-6 ತಿಂಗಳಲ್ಲಿ ಮರು ರಕ್ತಪರೀಕ್ಷೆ ಮಾಡಿಸಬೇಕಾಗುತ್ತದೆ. ಪ್ರತಿ ಗರ್ಭಿಣಿಯರ ಸಂಗಾತಿಯ ಪರೀಕ್ಷೆಯು ಅಗತ್ಯವಾಗಿರುತ್ತದೆ. ಯಾಕೆಂದರೆ, ಗರ್ಭಿಣಿಯು ನೆಗೆಟಿವ್‌ ಆಗಿ ಆಕೆಯ ಸಂಗಾತಿಯ ಫ‌ಲಿತಾಂಶ ಪಾಸಿಟಿವ್‌ ಬಂದರೆ ಅಂತಹ ಗರ್ಭಿಣಿಗೆ ವಿಂಡೋ ಅವಧಿಯೆಂದು ಪರಿಗಣಿಸಿ ಮರು ಪರೀಕ್ಷೆಗೊಳಪಡಿಸಬಹುದು.

ತಾಯಿಯಿಂದ ಮಗುವಿಗೆ ಹೆಚ್‌.ಐ.ವಿ. ಹರಡುವ ಸಮಯ : ಐಸಿಟಿಸಿ ವ್ಯವಸ್ಥೆ/ಕಾರ್ಯಕ್ರಮಗಳು ಇಲ್ಲದಿದ್ದಾಗ ಹೆಚ್‌.ಐ.ವಿ.ಯನ್ನು ಈ ಕೆಳಗಿನ ಸಮಯಗಳಲ್ಲಿ ಹರಡಿಸಬಹುದು. ಒಟ್ಟಾರೆಯಾಗಿ ತಾಯಿಯಿಂದ ಮಗುವಿಗೆ ಶೇ. 5ರಿಂದ 30ರ ವರೆಗೆ ಹೆಚ್‌.ಐ.ವಿ. ಹರಡುವ ಸಾಧ್ಯತೆ ಇದೆ.

ಪ್ರಸವ ಮತ್ತು ಹೆರಿಗೆಯ ಸಮಯ ಹೆಚ್ಚಿನ ಅಪಾಯಕಾರಿ ಅಂಶವಾಗಿದೆ. ಸ್ತನಪಾನದ 24 ತಿಂಗಳುಗಳ ಸಮಯದಲ್ಲುಂಟಾಗುವ ಸೋಂಕು ಹೆರಿಗೆಯ 24 ಗಂಟೆಗಳ ಸಮಯದಲ್ಲಿ ಉಂಟಾಗುತ್ತದೆ. ಈ ಅವಧಿ, ಸ್ತನಪಾನದ ಮೂಲಕ ಹೆಚ್‌.ಐ.ವಿ. ಸೋಂಕು ಉಂಟಾಗಿರುವ ಶಿಶುಗಳ ಮೇಲೆ ಪ್ರಮುಖವಾಗಿ ಕೇಂದ್ರಿಕರಿಸುತ್ತದೆ.
ಗರ್ಭಾವಸ್ಥೆಯ ಸಮಯದಲ್ಲಿ ಹರಡಬಹುದಾದಂತಹ ಅಪಾಯಕಾರಿ ಅಂಶಗಳು
ಗರ್ಭಾವಸ್ಥೆಯ ಸಮಯದಲ್ಲಿ ಹೆಚ್‌.ಐ.ವಿ. ವೈರಾಣು ಮಾಸುಚೀಲದಿಂದ (ಪ್ಲಾಸೆಂಟ) ಭ್ರೂಣಕ್ಕೆ ಹಾದು ಹೋಗುವಾಗ ಹರಡುತ್ತದೆ. ಯಾವಾಗ ತಾಯಿಯು ಹೆಚ್‌.ಐ.ವಿ.ಗೆ ಚಿಕಿತ್ಸೆಯನ್ನು ಪಡೆಯುವುದಿಲ್ಲವೋ ಆಗ ಗರ್ಭಾವಸ್ಥೆಯ ಸಮಯದಲ್ಲಿ ಮಗುವಿಗೆ ಶೇಕಡ 5-10%ರಷ್ಟು ವೈರಾಣು ಪಾಸಿಟಿವ್‌ ತಾಯಿಯಿಂದ ಹರಡುವ ಸಾಧ್ಯತೆ ಇದೆ.
ಪ್ರಸವ ಹಾಗೂ ಹೆರಿಗೆಯ ಸಮಯದಲ್ಲಿ ಹರಡಬಹುದಾದಂತಹ ಅಪಯಕಾರಿ ಅಂಶಗಳು

– ಪ್ರಸವ ಮತ್ತು ಹೆರಿಗೆ ಹಚ್ಚಿನ ಅಪಾಯಕಾರಿ ಸಮಯವಾಗಿದೆ. ಈ ಸಮಯದಲ್ಲಿ ಶೇಕಡ 10-20%ರಷ್ಟು ಹೆಚ್‌.ಐ.ವಿ. ಹರಡುವ ಅಪಾಯದ ಸಾಧ್ಯತೆ ಇದೆ.
– ಪ್ರಸವ ಮತ್ತು ಹೆರಿಗೆ ಹೆಚ್ಚಿನ ಸಮಯದಲ್ಲಿ ಹೆಚ್ಚಿನದಾಗಿ ಶಿಶುಗಳು ಹೆಚ್‌.ಐ.ವಿ. ಹೊಂದಿರುವ ತಾಯಿಯ ರಕ್ತವನ್ನು ಅಥವಾ ಕೊರಳಿನ ಸ್ರಾವಗಳನ್ನು ಹೀರಿಕೊಂಡರೆ ಕುಡಿದರೆ ಅಥವಾ ಎಳೆದುಕೊಂಡರೆ ವೈರಾಣು ಹರಡುವ ಸಾಧ್ಯತೆಗಳಿರುತ್ತದೆ.
– ಸ್ತನಪಾನದ ಸಮಯದಲ್ಲಿ ಹೆಚ್‌.ಐ.ವಿ. ಹರಡುವಿಕೆ: ಮಕ್ಕಳ ಬೆಳವಣಿಗೆಗೆ ಸ್ತನಪಾನ ಬಹಳ ಮುಖ್ಯ ಪಾತ್ರವಹಿಸುತ್ತದೆ. ಆದರೆ ಸ್ತನಪಾನದಿಂದ ಶೇಕಡ 5-20%ರಷ್ಟು ಹೆಚ್‌.ಐ.ವಿ. ಹರಡುವ ಅಪಾಯವಿದೆ. ಪಾಸಿಟಿವ್‌ ತಾಯಿಯು ಪ್ರಸವದ ಮೊದಲ ಮೂರು ತಿಂಗಳಲ್ಲಿ ಎ.ಆರ್‌.ಟಿ. ಚಿಕಿತ್ಸೆ ಪಡೆಯುವುದರಿಂದ ಸ್ತನಪಾನದಿಂದ ಹೆಚ್‌.ಐ.ವಿ. ಹರಡುವುದನ್ನು ಕಡಿಮೆಗೊಳಿಸಬಹುದು. ಹೆಚ್‌.ಐ.ವಿ. ಸೋಂಕಿತ ತಾಯಿಗೆ ಸೂಕ್ತವಾದ ಸ್ತನಪಾನದ ಆಯ್ಕೆಯು ಆಕೆಯ ವೈಯಕ್ತಿಕ ಪರಿಸ್ಥಿತಿ, ಅವಳ ಆರೋಗ್ಯದ ಪರಿಸ್ಥಿತಿ ಮತ್ತು ಸುತ್ತಮುತ್ತಲಿನ ಸಂದರ್ಭದ ಮೇಲೆ ಅವಲಂಬಿತವಾಗಿರುತ್ತದೆ. ಸ್ತನಪಾನದ ಮಾದರಿ ಅಥವಾ ರೀತಿಯೂ ಕೂಡ ಹೆಚ್‌.ಐ.ವಿ. ಹರಡುವುದರ ಮೇಲೆ ಪರಿಣಾಮ ಬೀರುತ್ತದೆ. ಹುಟ್ಟಿದ ಮೊದಲ 6 ತಿಂಗಳಲ್ಲಿ ಸ್ತನಪಾನದ ಜೊತೆಗೆ ಇತರ ದ್ರವಗಳು, ಹಾಲು ಅಥವಾ ಗಟ್ಟಿ ಆಹಾರಗಳನ್ನು ಸೇವಿಸುವ ಶಿಶುಗಳಿಗಿಂತ ಪ್ರತ್ಯೇಕವಾದ ಸ್ತನಪಾನವಾಗುತ್ತಿರುವ ಶಿಶುಗಳಿಗೆ ಹೆಚ್‌.ಐ.ವಿ. ಹರಡುವ ಅಪಾಯವು ಬಹಳ ಕಡಿಮೆಯಿರುತ್ತದೆ. ಪಾಸಿಟಿವ್‌ ತಾಯಿಯು ಪ್ರಸವದ ಮೂರು ತಿಂಗಳಲ್ಲಿ ಎ.ಆರ್‌.ಟಿ. ಚಿಕಿತ್ಸೆ ಪಡೆಯುವುದರಿಂದ ಸ್ತನಪಾನದಿಂದ ಹೆಚ್‌.ಐ.ವಿ. ಹರಡುವುದನ್ನು ಕಡಿಮೆಗೊಳಿಸಬಹುದು. ಸ್ತನಪಾವನ್ನು ಆರಿಸಿಕೊಂಡು ಪಾಸಿಟಿವ್‌ ಮಹಿಳೆಯು ಶಿಶುವಿಗೆ 6 ತಿಂಗಳುಗಳ ಕಾಲ ಪರ್ಯಾಯ ಆಹಾರವನ್ನು ನೀಡಕೂಡದು. ಪರ್ಯಾಯ ಆಹಾರವನ್ನು ಆರಿಸಿಕೊಂಡ ಮಹಿಳೆಯು ಸ್ತನಪಾನವನ್ನು ಕೊಡುವ ಹಾಗಿಲ್ಲ. 6 ತಿಂಗಳ ತನಕ ಸ್ತನಪಾನ ಹಾಗೂ ಪರ್ಯಾಯ ಆಹಾರವನ್ನು ಒಟ್ಟಿಗೆ ಕೊಡುವಂತಿಲ್ಲ. 6 ತಿಂಗಳ ನಂತರ ಎರಡನ್ನು ಕೊಡಬಹುದು. ಸ್ತನಪಾನವನ್ನು ಮಗುವಿಗೆ 12 ತಿಂಗಳ ತನಕ ಕೊಡಿಸಿ ಮಗುವಿನ ಹೆಚ್‌.ಐ.ವಿ. ಫ‌ಲಿತಾಂಶ ನೆಗೆಟಿವ್‌ ಬಂದರೆ ಅದನ್ನು ನಿಲ್ಲಿಸಬೇಕು ಮತ್ತು ಮಗುವಿನ ಫ‌ಲಿತಾಂಶ ಪಾಸಿಟಿವ್‌ ಬಂದರೆ ಎರಡು ವರ್ಷಗಳ ತನಕ ಮುಂದುವರಿಸಬಹುದು.

-ಹರಿಣಾಕ್ಷಿ ಎಂ.ಕೆ.
ಐಸಿಟಿಸಿ ಕೌನ್ಸಿಲರ್‌, ಕೆಎಂಸಿ ಆಸ್ಪತ್ರೆ,
ಅತ್ತಾವರ, ಮಂಗಳೂರು

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ವ್ಯಾಯಾಮದ ಕಸರತ್ತಿಗೆ ಫೋಮ್‌ ರೋಲರ್‌ ಸಾಧನ ಹೆಚ್ಚು ಪ್ರಸಿದ್ಧವಾಗಿದೆ. ಮೂರರಿಂದ ನಾಲ್ಕು ಇಂಚುಗಳ ಅಗಲ, 36 ಇಂಚು ಉದ್ದದ ದಿಂಬಿನಂತೆ ಕಾಣುವ ಇದು ಸ್ನಾಯುಗಳಿಗೆ...

  • ಹಳ್ಳಿಮನೆಗಳಲ್ಲಿ ಮನೆ ಮದ್ದಾಗಿ ಕಾಮ ಕಸ್ತೂರಿಯನ್ನು ಸಾಮಾನ್ಯವಾಗಿ ಉಪಯೋಗಿಸುತ್ತಾರೆ. ಆದರೆ ಅನೇಕ ಮಂದಿಗೆ ಇದರಲ್ಲಿರುವ ಆರೋಗ್ಯಕರ ಅಂಶಗಳು ತಿಳಿದಿಲ್ಲ. ಹೇರಳವಾದ...

  • ಮಂಗಳೂರು: ದೇಶದಲ್ಲಿ ಆರ್ಥಿಕ ಹಿಂಜರಿತದಿಂದಾಗಿ ಸಣ್ಣ ಮತ್ತು ಮಧ್ಯಮ ಉದ್ಯಮಗಳು (ಎಸ್‌ಎಂಇ) ತೀವ್ರ ಸಂಕಷ್ಟಕ್ಕೊಳಗಾಗಿವೆ. ಅವುಗಳನ್ನು ಉಳಿಸಲು ಕೇಂದ್ರ ಮತ್ತು...

  • ಹೊಸದಿಲ್ಲಿ: ಶೂಟಿಂಗ್‌ ಅಭ್ಯಾಸ ನಡೆಸುತ್ತಿದ್ದ ವೇಳೆ ಇಬ್ಬರು ಶೂಟರ್‌ಗಳು ಕ್ಷುಲ್ಲಕ ಕಾರಣಕ್ಕೆ ಪರಸ್ಪರ ಹೊಡೆದಾಡಿಕೊಂಡ ಘಟನೆ ನಡೆದಿದೆ. ದಿಲ್ಲಿಯ ಕರ್ಣಿ...

  • ಎಲ್ಲರಿಗೂ ಒಂದಲ್ಲ ಒಂದು ದಿನ ವಯಸ್ಸಾಗುತ್ತದೆ ಅದನ್ನು ತಡೆಯಲು ಪ್ರತಿದಿನ ಹಲವಾರು ರೀತಿಯ ಕಸರತ್ತನ್ನು ಮಾಡುತ್ತಲೇ ಇರುತ್ತೇವೆ. ಅದಕ್ಕಿಂತ ಸುಲಭವಾಗಿ ಮನೆಯಲ್ಲೇ...