ಯುವ ಜನತೆಯಲ್ಲಿ  ಅಧಿಕ ರಕ್ತದೊತ್ತಡ

Team Udayavani, May 16, 2021, 3:08 PM IST

Hypertension in young people

ಪ್ರಶ್ನೆ: ಡಾಕ್ಟರ್‌, ನನಗೆ ಅಧಿಕ  ರಕ್ತದೊತ್ತಡ ಇದೆಯೇ?

ಉತ್ತರ: ಪ್ರಸ್ತುತ ಲಭ್ಯವಿರುವ ಮಾರ್ಗದರ್ಶಿ ಸೂತ್ರಗಳ ಪ್ರಕಾರ, ಎರಡು ಅಥವಾ ಹೆಚ್ಚು ರಕ್ತದೊತ್ತಡ ತಪಾಸಣೆಗಳ ಸಂದರ್ಭದಲ್ಲಿ 140/90 ಎಂಎಂ ಎಚ್‌ಜಿಗಿಂತ ಹೆಚ್ಚು ರಕ್ತದೊತ್ತಡ ಕಂಡುಬಂದರೆ ಅದನ್ನು ಅಧಿಕ ರಕ್ತದೊತ್ತಡ ಎನ್ನಲಾಗುತ್ತದೆ. 130-139/85-89 ಎಂಎಂ ಎಚ್‌ಜಿ ಸಿಸ್ಟಾಲಿಕ್‌ ರಕ್ತದೊತ್ತಡವು ಗಡಿರೇಖೆಯಾಗಿದ್ದು, ಅಧಿಕ ರಕ್ತದೊತ್ತಡದ ಪೂರ್ವಸ್ಥಿತಿ ಎಂದು ಪರಿಗಣಿಸಲಾಗುತ್ತದೆ.

ಪ್ರಶ್ನೆ: ನನಗೆ 35 ವರ್ಷ ವಯಸ್ಸು. ಆದರೂ ನನಗೆ ಅಧಿಕ ರಕ್ತದೊತ್ತಡ ಉಂಟಾಗಬಹುದೇ?

ಉತ್ತರ: ಅಧಿಕ ರಕ್ತದೊತ್ತಡವು ಹಿರಿಯರಲ್ಲಿ ಕಾಣಿಸಿಕೊಳ್ಳುವ ಕಾಯಿಲೆ ಎಂಬುದು ನಿಜವಾದರೂ ಯುವಜನರಲ್ಲಿ ಕೂಡ ಈ ಅನಾರೋಗ್ಯ ಉಂಟಾಗಬಹುದು. 20ರಿಂದ 40 ವರ್ಷ ವಯೋಮಾನದ ಭಾರತೀಯ ಯುವಜನರಲ್ಲಿ ಅಧಿಕ ರಕ್ತದೊತ್ತಡದ ಉಪಸ್ಥಿತಿಯು ಶೇ. 22ರಷ್ಟಿದೆ. ಇದು ಪಾಶ್ಚಾತ್ಯ ದೇಶಗಳಿಗೆ ಹೋಲಿಸಿದರೆ ಹೆಚ್ಚು. ಯುವ ಜನರಲ್ಲಿ ಅಧಿಕ ರಕ್ತದೊತ್ತಡ ಉಂಟಾಗುವುದಕ್ಕೆ ಪರ್ಯಾಯ ಕಾರಣಗಳು ಯಾವುವು ಎಂಬುದನ್ನು ಪರಿಗಣಿಸಿ ವಿಶ್ಲೇಷಿಸುವುದು ಮುಖ್ಯವಾಗಿದೆ.

ಪ್ರಶ್ನೆ: ರೂಢಿಗತ ತಪಾಸಣೆಯ ಸಂದರ್ಭದಲ್ಲಿ  ನನಗೆ ಅಧಿಕ ರಕ್ತದೊತ್ತಡ ಇರುವುದು  ಪತ್ತೆಯಾಗಿದೆ. ಆದರೆ, ಅಧಿಕ ರಕ್ತದೊತ್ತಡದ

ಸಾಮಾನ್ಯ ಲಕ್ಷಣಗಳು ಯಾವುವು?

ಉತ್ತರ: ಅಧಿಕ ರಕ್ತದೊತ್ತಡವು ಅಪಾಯಕಾರಿ ಮಟ್ಟಕ್ಕೆ ಏರದ ವಿನಾ ಅಧಿಕ ರಕ್ತದೊತ್ತಡ ಹೊಂದಿರುವವರಲ್ಲಿ ಯಾವುದೇ ಲಕ್ಷಣಗಳು ಅಥವಾ ಚಿಹ್ನೆಗಳು ಕಂಡುಬರುವುದಿಲ್ಲ. ಅಧಿಕ ರಕ್ತದೊತ್ತಡ ಹೊಂದಿರುವ ಕೆಲವರಲ್ಲಿ ತಲೆನೋವು, ದೃಷ್ಟಿ ಮಂದವಾಗುವುದು ಮತ್ತು ತಲೆತಿರುಗುವಿಕೆ, ಉಸಿರುಗಟ್ಟುವುದು ಅಥವಾ ಮೂಗಿನಿಂದ ರಕ್ತಸ್ರಾವದಂತಹ ಲಕ್ಷಣಗಳು ಉಂಟಾಗಬಹುದು. 18 ವರ್ಷಕ್ಕಿಂತ ಅಧಿಕ ವಯೋಮಾನದವರು ಎರಡು ವರ್ಷಗಳಿಗೆ ಒಮ್ಮೆ ರಕ್ತದೊತ್ತಡ ಪರೀಕ್ಷೆ ಮಾಡಿಸಿಕೊಳ್ಳುವುದು, ಅಧಿಕ ರಕ್ತದೊತ್ತಡದ ಗಡಿಯಲ್ಲಿ ಇರುವವರು ವರ್ಷಕ್ಕೊಮ್ಮೆ ಪರೀಕ್ಷಿಸಿಕೊಳ್ಳುವುದು ಉತ್ತಮ.

ಪ್ರಶ್ನೆ: ನೀವು ಯಾವ ತಪಾಸಣೆಗಳನ್ನು  ಶಿಫಾರಸು ಮಾಡುತ್ತೀರಿ?

ಉತ್ತರ: ಎಲ್ಲ ಯುವ ಜನರು ಅಧಿಕ ರಕ್ತದೊತ್ತಡದ ಪರ್ಯಾಯ ಕಾರಣಗಳನ್ನು ಕಂಡುಹಿಡಿಯುವುದಕ್ಕೆ ಸಹಾಯ ಮಾಡುವ ಇಸಿಜಿ, ಕಿಡ್ನಿ ಪರೀಕ್ಷೆಗಳು, ಮೂತ್ರ ಪರೀಕ್ಷೆಗಳು, ಥೈರಾಯ್ಡ ಪರೀಕ್ಷೆಗಳು, ಸಕ್ಕರೆ ಪರೀಕ್ಷೆ, ಹೊಟ್ಟೆಯ ಅಲ್ಟ್ರಾಸೌಂಡ್‌, ಮೂತ್ರಪಿಂಡದ ರಕ್ತನಾಳಗಳ ಡಾಪ್ಲರ್‌ ಪರೀಕ್ಷೆ ಮತ್ತು ಎಕೊಕಾರ್ಡಿಯಾಗ್ರಾಮ್‌ ಮಾಡಿಸಿಕೊಳ್ಳಬೇಕು. ಇವುಗಳಲ್ಲದೆ, ಕೆಲವು ನಿರ್ದಿಷ್ಟ ಜನರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ಶಿಫಾರಸಿನಂತೆ ಸ್ಲಿàಪ್‌ ಸ್ಟಡಿಯಂತಹ ಪರೀಕ್ಷೆಗಳನ್ನು ನಡೆಸಬಹುದು.

ಪ್ರಶ್ನೆ: ಅನಿಯಂತ್ರಿತ ರಕ್ತದೊತ್ತಡಕ್ಕೆ  ಸಂಬಂಧಪಟ್ಟ ಸಮಸ್ಯೆಗಳು ಯಾವುವು?

ಉತ್ತರ: ಅಧಿಕ ರಕ್ತದೊತ್ತಡವು ಲಕ್ವಾ, ಇಂಟ್ರಾಕ್ರೇನಿಯಲ್‌ ಹೆಮರೇಜ್‌, ಕೊರೊನರಿ ಹಾರ್ಟ್‌ ಡಿಸೀಸ್‌, ಹೃದಯಾಘಾತ, ಮೂತ್ರಪಿಂಡ ವೈಫ‌ಲ್ಯ ಮತ್ತು ಕಾಲುಗಳ ರಕ್ತನಾಳಗಳಲ್ಲಿ ತಡೆ ಮುಂತಾದ ಹೃದ್ರೋಗಗಳು ಮತ್ತು ಮೂತ್ರಪಿಂಡ ಕಾಯಿಲೆಗಳಿಗೆ ಪ್ರಮುಖ ಮತ್ತು ಪ್ರಧಾನವಾದ ಅಪಾಯಾಂಶವಾಗಿದೆ. ದೀರ್ಘ‌ಕಾಲದವರೆಗೆ ಅನಿಯಂತ್ರಿತವಾಗಿ ಉಳಿಯುವ ಅಧಿಕ ರಕ್ತದೊತ್ತಡವು ದೇಹದ ಪ್ರಮುಖ ರಕ್ತನಾಳಗಳಿಗೆ ಹಾನಿಯನ್ನು ಉಂಟುಮಾಡಬಹುದಾಗಿದ್ದು, ಇದು ಪ್ರಾಣಾಪಾಯಕಾರಿ ಸ್ಥಿತಿಯಾಗಿರುತ್ತದೆ.

ಪ್ರಶ್ನೆ: ನಿಮ್ಮ ಸಲಹೆಗಳಿಗೆ ಕೃತಜ್ಞತೆಗಳು  ಡಾಕ್ಟರ್‌. ಹಾಗಾದರೆ, ರಕ್ತದೊತ್ತಡವನ್ನು  ನಿಯಂತ್ರಣದಲ್ಲಿ ಇರಿಸಿಕೊಳ್ಳುವುದಕ್ಕಾಗಿ  ಜೀವನ ಶೈಲಿಯಲ್ಲಿ ಯಾವ ರೀತಿಯ  ಬದಲಾವಣೆಗಳನ್ನು ತರಬೇಕು?

ಉತ್ತರ:  1. ಧೂಮಪಾನವನ್ನು ತ್ಯಜಿಸಿ ಮತ್ತು ಮದ್ಯಪಾನವನ್ನು ಮಿತಿಯಲ್ಲಿ ಇರಿಸಿಕೊಳ್ಳಿ.

 1. ಹೆಚ್ಚು ದೇಹತೂಕ/ ಬೊಜ್ಜು ಹೊಂದಿದ್ದರೆ ದೇಹತೂಕ ಇಳಿಸಿಕೊಳ್ಳಿ. ದೇಹತೂಕದಲ್ಲಿ ಪ್ರತೀ ಒಂದು ಕೆ.ಜಿ.ಯಷ್ಟು ಇಳಿಕೆಯು ರಕ್ತದೊತ್ತಡದಲ್ಲಿ 1ರಿಂದ 2 ಎಂಎಂ ಎಚ್‌ಜಿಯಷ್ಟು ಇಳಿಕೆಗೆ ಕಾರಣವಾಗುತ್ತದೆ.
 2. ದಿನಕ್ಕೆ 30 ನಿಮಿಷಗಳ ಕಾಲ – ವಾರದಲ್ಲಿ ಐದು ದಿನ ಜಾಗಿಂಗ್‌, ಬಿರುಸಾದ ನಡಿಗೆಯಂತಹ ವ್ಯಾಯಾಮಗಳನ್ನು ಮಾಡಬೇಕು. ಇದಲ್ಲದೆ ಈಜು, ಸೈಕಲ್‌ ಸವಾರಿ ಮತ್ತು ಇತರ ಏರೋಬಿಕ್‌ ವ್ಯಾಯಾಮಗಳು ಕೂಡ ಸಹಾಯ ಮಾಡುತ್ತವೆ.
 3. ಸಿಟ್ಟು ಮತ್ತು ಒತ್ತಡ ನಿಭಾಯಿಸಬೇಕು.

ಪ್ರಶ್ನೆ: ಸಹಜ ರಕ್ತದೊತ್ತಡವನ್ನು  ಕಾಪಾಡಿಕೊಳ್ಳಲು ಆಹಾರ ಶೈಲಿ  ಹೇಗಿರಬೇಕು/ ಯಾವ  ಮಾರ್ಪಾಟುಗಳನ್ನು ತರಬೇಕು?

ಉತ್ತರ:

1.ಅಧಿಕ ಉಪ್ಪಿನಂಶ ಸೇವಿಸುವುದಕ್ಕೂ ಅಧಿಕ ರಕ್ತದೊತ್ತಡಕ್ಕೂ ನಿಕಟ ಸಂಬಂಧ ಇದೆ. ದಿನಕ್ಕೆ 4.5 ಗ್ರಾಂ ಅಥವಾ ಅದಕ್ಕಿಂತ ಕಡಿಮೆ ಉಪ್ಪಿನಂಶ ಸೇವನೆಯು ಸಿಸ್ಟಾಲಿಕ್‌ ರಕ್ತದೊತ್ತಡವನ್ನು 5 ಮತ್ತು ಡಯಾಸ್ಟಾಲಿಕ್‌ ರಕ್ತದೊತ್ತಡವನ್ನು 2.5 ಎಂಎಂ ಎಚ್‌ಜಿಯಷ್ಟು ಕಡಿಮೆ ಮಾಡುತ್ತದೆ.

 1. ಡ್ಯಾಶ್‌ ಡಯಟ್‌ (ಈಅಖಏ ಡಯಟ್‌ – ಡಯಟರಿ ಎಪ್ರೋಚಸ್‌ ಟು ಸ್ಟಾಪ್‌ ಹೈಪರ್‌ಟೆನ್ಶನ್‌) ರಕ್ತದೊತ್ತಡವನ್ನು ಕಡಿಮೆ ಮಾಡುವಲ್ಲಿ ಗಮನಾರ್ಹ ಪಾತ್ರ ಹೊಂದಿದೆ. ಡ್ಯಾಶ್‌ ಡಯಟ್‌ನಲ್ಲಿ ಹಣ್ಣುಹಂಪಲು, ತರಕಾರಿಗಳು, ಬೇಳೆಕಾಳುಗಳು, ಧಾನ್ಯಗಳು ಮತ್ತು ಕಡಿಮೆ ಕೊಬ್ಬಿನಂಶ ಇರುವ ಹೈನು ಉತ್ಪನ್ನಗಳನ್ನು ಹೊಂದಿರುತ್ತದೆ; ಸ್ನ್ಯಾಕ್ಸ್‌, ಸಿಹಿತಿನಿಸುಗಳು, ಮಾಂಸಾಹಾರ, ಸ್ಯಾಚ್ಯುರೇಟೆಡ್‌ ಮತ್ತು ಸಂಪೂರ್ಣ ಕೊಬ್ಬು ಕಡಿಮೆ ಇರುತ್ತದೆ.
 2. ಹಸುರು ಅಥವಾ ಬ್ಲ್ಯಾಕ್‌ ಟೀ ಸೇವನೆಯಿಂದ ರಕ್ತದೊತ್ತಡ ಕೊಂಚ ಕಡಿಮೆಯಾಗಬಹುದು.
 3. ಸಕ್ಕರೆ ಬೆರೆಸಿದ ಸಾಫ್ಟ್ ಡ್ರಿಂಕ್‌ಗಳು ಮೆಟಬಾಲಿಕ್‌ ಸಿಂಡ್ರೋಮ್‌ ಮತ್ತು ಅಧಿಕ ರಕ್ತದೊತ್ತಡ ಉಂಟು ಮಾಡುತ್ತವೆ.

ಪ್ರಶ್ನೆ: ನಾನು ಈಗಲೇ ಔಷಧೋಪಚಾರ  ಆರಂಭಿಸಬೇಕೇ?

ಉತ್ತರ: ರಕ್ತದೊತ್ತಡವು 150-160/80-90 ಎಂಎಂ ಎಚ್‌ಜಿ ಇದ್ದು, ಹೃದ್ರೋಗಗಳು, ಮೂತ್ರ ಪಿಂಡ ಕಾಯಿಲೆಗಳು, ಲಕ್ವಾ ಮತ್ತು ಹೃದ್ರೋಗ ಗಳಂತಹ ಸಮಸ್ಯೆಗಳು ಇಲ್ಲದವರಿಗೆ ಆರಂಭಿಕ ಕೆಲವು ತಿಂಗಳುಗಳ ಕಾಲ ಆಹಾರ ಶೈಲಿಯಲ್ಲಿ ಬದಲಾವಣೆ, ಜೀವನ ಶೈಲಿ ಬದಲಾವಣೆಗಳಿಂದ ನಿಭಾಯಿಸಬಹುದು. ಆದರೂ ಈ ಆರಂಭಿಕ ಕ್ರಮಗಳ ಹೊರತಾಗಿಯೂ ರಕ್ತದೊತ್ತಡವು ಹೆಚ್ಚೇ ಇದ್ದರೆ ಔಷಧೋಪಚಾರ ಆರಂಭಿಸಬೇಕಾದೀತು.

ಪ್ರಶ್ನೆ: ನನ್ನ ರಕ್ತದೊತ್ತಡವನ್ನು ಯಾವಾಗೆಲ್ಲ  ಪರೀಕ್ಷಿಸಿಕೊಳ್ಳಬೇಕು?

ಉತ್ತರ: ಜೀವನಶೈಲಿ ಮತ್ತು ಆಹಾರ ಶೈಲಿಯಲ್ಲಿ ಬದಲಾವಣೆಗಳನ್ನು ಮಾಡಿಕೊಂಡ ಬಳಿಕ ಮೂರು ತಿಂಗಳುಗಳ ಅವಧಿಯಲ್ಲಿ ನಿಮ್ಮ ರಕ್ತದೊತ್ತಡವು ಉದ್ದೇಶಿತ ಗುರಿಯನ್ನು ಸಾಧಿಸದೆ ಇದ್ದರೆ ನಿಮಗೆ ರಕ್ತದೊತ್ತಡ ಕಡಿಮೆ ಮಾಡುವ ಔಷಧಗಳನ್ನು ನೀಡಬೇಕಾಗುತ್ತದೆ. ಆರಂಭಿಕವಾಗಿ ಪ್ರತೀ 2 ತಿಂಗಳಿಗೆ ಒಮ್ಮೆ ನೀವು ಫಾಲೊ ಅಪ್‌ ಮಾಡಬೇಕಾಗುತ್ತದೆ. ಒಮ್ಮೆ ಅದು ನಿಯಂತ್ರಣಕ್ಕೆ ಬಂದ ಬಲಿಕ 3ರಿಂದ 6 ತಿಂಗಳಿಗೆ ಒಮ್ಮೆ ತಪಾಸಣೆ ಮಾಡಿಸಿಕೊಂಡರೆ ಸಾಕು.

ನಿಮ್ಮ ಸಲಹೆಗಳಿಗೆ ಧನ್ಯವಾದಗಳು ಡಾಕ್ಟರ್‌. ಮೂರು ತಿಂಗಳುಗಳ ಬಳಿಕ ಮತ್ತೆ ನಿಮ್ಮನ್ನು ಕಾಣುವೆ.

ಪ್ರಶ್ನೆ: ಡಾಕ್ಟರ್‌, ನನಗೆ ಅಧಿಕ  ರಕ್ತದೊತ್ತಡ ಇದೆಯೇ?

ಉತ್ತರ: ಪ್ರಸ್ತುತ ಲಭ್ಯವಿರುವ ಮಾರ್ಗದರ್ಶಿ ಸೂತ್ರಗಳ ಪ್ರಕಾರ, ಎರಡು ಅಥವಾ ಹೆಚ್ಚು ರಕ್ತದೊತ್ತಡ ತಪಾಸಣೆಗಳ ಸಂದರ್ಭದಲ್ಲಿ 140/90 ಎಂಎಂ ಎಚ್‌ಜಿಗಿಂತ ಹೆಚ್ಚು ರಕ್ತದೊತ್ತಡ ಕಂಡುಬಂದರೆ ಅದನ್ನು ಅಧಿಕ ರಕ್ತದೊತ್ತಡ ಎನ್ನಲಾಗುತ್ತದೆ. 130-139/85-89 ಎಂಎಂ ಎಚ್‌ಜಿ ಸಿಸ್ಟಾಲಿಕ್‌ ರಕ್ತದೊತ್ತಡವು ಗಡಿರೇಖೆಯಾಗಿದ್ದು, ಅಧಿಕ ರಕ್ತದೊತ್ತಡದ ಪೂರ್ವಸ್ಥಿತಿ ಎಂದು ಪರಿಗಣಿಸಲಾಗುತ್ತದೆ.

ಪ್ರಶ್ನೆ: ನನಗೆ 35 ವರ್ಷ ವಯಸ್ಸು. ಆದರೂ ನನಗೆ ಅಧಿಕ ರಕ್ತದೊತ್ತಡ ಉಂಟಾಗಬಹುದೇ?

ಉತ್ತರ: ಅಧಿಕ ರಕ್ತದೊತ್ತಡವು ಹಿರಿಯರಲ್ಲಿ ಕಾಣಿಸಿಕೊಳ್ಳುವ ಕಾಯಿಲೆ ಎಂಬುದು ನಿಜವಾದರೂ ಯುವಜನರಲ್ಲಿ ಕೂಡ ಈ ಅನಾರೋಗ್ಯ ಉಂಟಾಗಬಹುದು. 20ರಿಂದ 40 ವರ್ಷ ವಯೋಮಾನದ ಭಾರತೀಯ ಯುವಜನರಲ್ಲಿ ಅಧಿಕ ರಕ್ತದೊತ್ತಡದ ಉಪಸ್ಥಿತಿಯು ಶೇ. 22ರಷ್ಟಿದೆ. ಇದು ಪಾಶ್ಚಾತ್ಯ ದೇಶಗಳಿಗೆ ಹೋಲಿಸಿದರೆ ಹೆಚ್ಚು. ಯುವ ಜನರಲ್ಲಿ ಅಧಿಕ ರಕ್ತದೊತ್ತಡ ಉಂಟಾಗುವುದಕ್ಕೆ ಪರ್ಯಾಯ ಕಾರಣಗಳು ಯಾವುವು ಎಂಬುದನ್ನು ಪರಿಗಣಿಸಿ ವಿಶ್ಲೇಷಿಸುವುದು ಮುಖ್ಯವಾಗಿದೆ.

ಪ್ರಶ್ನೆ: ರೂಢಿಗತ ತಪಾಸಣೆಯ ಸಂದರ್ಭದಲ್ಲಿ  ನನಗೆ ಅಧಿಕ ರಕ್ತದೊತ್ತಡ ಇರುವುದು  ಪತ್ತೆಯಾಗಿದೆ. ಆದರೆ, ಅಧಿಕ ರಕ್ತದೊತ್ತಡದ  ಸಾಮಾನ್ಯ ಲಕ್ಷಣಗಳು ಯಾವುವು?

ಉತ್ತರ: ಅಧಿಕ ರಕ್ತದೊತ್ತಡವು ಅಪಾಯಕಾರಿ ಮಟ್ಟಕ್ಕೆ ಏರದ ವಿನಾ ಅಧಿಕ ರಕ್ತದೊತ್ತಡ ಹೊಂದಿರುವವರಲ್ಲಿ ಯಾವುದೇ ಲಕ್ಷಣಗಳು ಅಥವಾ ಚಿಹ್ನೆಗಳು ಕಂಡುಬರುವುದಿಲ್ಲ. ಅಧಿಕ ರಕ್ತದೊತ್ತಡ ಹೊಂದಿರುವ ಕೆಲವರಲ್ಲಿ ತಲೆನೋವು, ದೃಷ್ಟಿ ಮಂದವಾಗುವುದು ಮತ್ತು ತಲೆತಿರುಗುವಿಕೆ, ಉಸಿರುಗಟ್ಟುವುದು ಅಥವಾ ಮೂಗಿನಿಂದ ರಕ್ತಸ್ರಾವದಂತಹ ಲಕ್ಷಣಗಳು ಉಂಟಾಗಬಹುದು. 18 ವರ್ಷಕ್ಕಿಂತ ಅಧಿಕ ವಯೋಮಾನದವರು ಎರಡು ವರ್ಷಗಳಿಗೆ ಒಮ್ಮೆ ರಕ್ತದೊತ್ತಡ ಪರೀಕ್ಷೆ ಮಾಡಿಸಿಕೊಳ್ಳುವುದು, ಅಧಿಕ ರಕ್ತದೊತ್ತಡದ ಗಡಿಯಲ್ಲಿ ಇರುವವರು ವರ್ಷಕ್ಕೊಮ್ಮೆ ಪರೀಕ್ಷಿಸಿಕೊಳ್ಳುವುದು ಉತ್ತಮ.

ಪ್ರಶ್ನೆ: ನೀವು ಯಾವ ತಪಾಸಣೆಗಳನ್ನು  ಶಿಫಾರಸು ಮಾಡುತ್ತೀರಿ?

ಉತ್ತರ: ಎಲ್ಲ ಯುವ ಜನರು ಅಧಿಕ ರಕ್ತದೊತ್ತಡದ ಪರ್ಯಾಯ ಕಾರಣಗಳನ್ನು ಕಂಡುಹಿಡಿಯುವುದಕ್ಕೆ ಸಹಾಯ ಮಾಡುವ ಇಸಿಜಿ, ಕಿಡ್ನಿ ಪರೀಕ್ಷೆಗಳು, ಮೂತ್ರ ಪರೀಕ್ಷೆಗಳು, ಥೈರಾಯ್ಡ ಪರೀಕ್ಷೆಗಳು, ಸಕ್ಕರೆ ಪರೀಕ್ಷೆ, ಹೊಟ್ಟೆಯ ಅಲ್ಟ್ರಾಸೌಂಡ್‌, ಮೂತ್ರಪಿಂಡದ ರಕ್ತನಾಳಗಳ ಡಾಪ್ಲರ್‌ ಪರೀಕ್ಷೆ ಮತ್ತು ಎಕೊಕಾರ್ಡಿಯಾಗ್ರಾಮ್‌ ಮಾಡಿಸಿಕೊಳ್ಳಬೇಕು. ಇವುಗಳಲ್ಲದೆ, ಕೆಲವು ನಿರ್ದಿಷ್ಟ ಜನರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ಶಿಫಾರಸಿನಂತೆ ಸ್ಲಿàಪ್‌ ಸ್ಟಡಿಯಂತಹ ಪರೀಕ್ಷೆಗಳನ್ನು ನಡೆಸಬಹುದು.

ಪ್ರಶ್ನೆ: ಅನಿಯಂತ್ರಿತ ರಕ್ತದೊತ್ತಡಕ್ಕೆ  ಸಂಬಂಧಪಟ್ಟ ಸಮಸ್ಯೆಗಳು ಯಾವುವು?

ಉತ್ತರ: ಅಧಿಕ ರಕ್ತದೊತ್ತಡವು ಲಕ್ವಾ, ಇಂಟ್ರಾಕ್ರೇನಿಯಲ್‌ ಹೆಮರೇಜ್‌, ಕೊರೊನರಿ ಹಾರ್ಟ್‌ ಡಿಸೀಸ್‌, ಹೃದಯಾಘಾತ, ಮೂತ್ರಪಿಂಡ ವೈಫ‌ಲ್ಯ ಮತ್ತು ಕಾಲುಗಳ ರಕ್ತನಾಳಗಳಲ್ಲಿ ತಡೆ ಮುಂತಾದ ಹೃದ್ರೋಗಗಳು ಮತ್ತು ಮೂತ್ರಪಿಂಡ ಕಾಯಿಲೆಗಳಿಗೆ ಪ್ರಮುಖ ಮತ್ತು ಪ್ರಧಾನವಾದ ಅಪಾಯಾಂಶವಾಗಿದೆ. ದೀರ್ಘ‌ಕಾಲದವರೆಗೆ ಅನಿಯಂತ್ರಿತವಾಗಿ ಉಳಿಯುವ ಅಧಿಕ ರಕ್ತದೊತ್ತಡವು ದೇಹದ ಪ್ರಮುಖ ರಕ್ತನಾಳಗಳಿಗೆ ಹಾನಿಯನ್ನು ಉಂಟುಮಾಡಬಹುದಾಗಿದ್ದು, ಇದು ಪ್ರಾಣಾಪಾಯಕಾರಿ ಸ್ಥಿತಿಯಾಗಿರುತ್ತದೆ.

ಪ್ರಶ್ನೆ: ನಿಮ್ಮ ಸಲಹೆಗಳಿಗೆ ಕೃತಜ್ಞತೆಗಳು  ಡಾಕ್ಟರ್‌. ಹಾಗಾದರೆ, ರಕ್ತದೊತ್ತಡವನ್ನು  ನಿಯಂತ್ರಣದಲ್ಲಿ ಇರಿಸಿಕೊಳ್ಳುವುದಕ್ಕಾಗಿ  ಜೀವನ ಶೈಲಿಯಲ್ಲಿ ಯಾವ ರೀತಿಯ  ಬದಲಾವಣೆಗಳನ್ನು ತರಬೇಕು?

ಉತ್ತರ:

 1. ಧೂಮಪಾನವನ್ನು ತ್ಯಜಿಸಿ ಮತ್ತು ಮದ್ಯಪಾನವನ್ನು ಮಿತಿಯಲ್ಲಿ ಇರಿಸಿಕೊಳ್ಳಿ.
 2. ಹೆಚ್ಚು ದೇಹತೂಕ/ ಬೊಜ್ಜು ಹೊಂದಿದ್ದರೆ ದೇಹತೂಕ ಇಳಿಸಿಕೊಳ್ಳಿ. ದೇಹತೂಕದಲ್ಲಿ ಪ್ರತೀ ಒಂದು ಕೆ.ಜಿ.ಯಷ್ಟು ಇಳಿಕೆಯು ರಕ್ತದೊತ್ತಡದಲ್ಲಿ 1ರಿಂದ 2 ಎಂಎಂ ಎಚ್‌ಜಿಯಷ್ಟು ಇಳಿಕೆಗೆ ಕಾರಣವಾಗುತ್ತದೆ.
 3. ದಿನಕ್ಕೆ 30 ನಿಮಿಷಗಳ ಕಾಲ – ವಾರದಲ್ಲಿ ಐದು ದಿನ ಜಾಗಿಂಗ್‌, ಬಿರುಸಾದ ನಡಿಗೆಯಂತಹ ವ್ಯಾಯಾಮಗಳನ್ನು ಮಾಡಬೇಕು. ಇದಲ್ಲದೆ ಈಜು, ಸೈಕಲ್‌ ಸವಾರಿ ಮತ್ತು ಇತರ ಏರೋಬಿಕ್‌ ವ್ಯಾಯಾಮಗಳು ಕೂಡ ಸಹಾಯ ಮಾಡುತ್ತವೆ.
 4. ಸಿಟ್ಟು ಮತ್ತು ಒತ್ತಡ ನಿಭಾಯಿಸಬೇಕು.

ಪ್ರಶ್ನೆ: ಸಹಜ ರಕ್ತದೊತ್ತಡವನ್ನು  ಕಾಪಾಡಿಕೊಳ್ಳಲು ಆಹಾರ ಶೈಲಿ  ಹೇಗಿರಬೇಕು/ ಯಾವ  ಮಾರ್ಪಾಟುಗಳನ್ನು ತರಬೇಕು?

ಉತ್ತರ:

 1. ಅಧಿಕ ಉಪ್ಪಿನಂಶ ಸೇವಿಸುವುದಕ್ಕೂ ಅಧಿಕ ರಕ್ತದೊತ್ತಡಕ್ಕೂ ನಿಕಟ ಸಂಬಂಧ ಇದೆ. ದಿನಕ್ಕೆ 4.5 ಗ್ರಾಂ ಅಥವಾ ಅದಕ್ಕಿಂತ ಕಡಿಮೆ ಉಪ್ಪಿನಂಶ ಸೇವನೆಯು ಸಿಸ್ಟಾಲಿಕ್‌ ರಕ್ತದೊತ್ತಡವನ್ನು 5 ಮತ್ತು ಡಯಾಸ್ಟಾಲಿಕ್‌ ರಕ್ತದೊತ್ತಡವನ್ನು 2.5 ಎಂಎಂ ಎಚ್‌ಜಿಯಷ್ಟು ಕಡಿಮೆ ಮಾಡುತ್ತದೆ.
 2. ಡ್ಯಾಶ್‌ ಡಯಟ್‌ (ಈಅಖಏ ಡಯಟ್‌ – ಡಯಟರಿ ಎಪ್ರೋಚಸ್‌ ಟು ಸ್ಟಾಪ್‌ ಹೈಪರ್‌ಟೆನ್ಶನ್‌) ರಕ್ತದೊತ್ತಡವನ್ನು ಕಡಿಮೆ ಮಾಡುವಲ್ಲಿ ಗಮನಾರ್ಹ ಪಾತ್ರ ಹೊಂದಿದೆ. ಡ್ಯಾಶ್‌ ಡಯಟ್‌ನಲ್ಲಿ ಹಣ್ಣುಹಂಪಲು, ತರಕಾರಿಗಳು, ಬೇಳೆಕಾಳುಗಳು, ಧಾನ್ಯಗಳು ಮತ್ತು ಕಡಿಮೆ ಕೊಬ್ಬಿನಂಶ ಇರುವ ಹೈನು ಉತ್ಪನ್ನಗಳನ್ನು ಹೊಂದಿರುತ್ತದೆ; ಸ್ನ್ಯಾಕ್ಸ್‌, ಸಿಹಿತಿನಿಸುಗಳು, ಮಾಂಸಾಹಾರ, ಸ್ಯಾಚ್ಯುರೇಟೆಡ್‌ ಮತ್ತು ಸಂಪೂರ್ಣ ಕೊಬ್ಬು ಕಡಿಮೆ ಇರುತ್ತದೆ.
 3. ಹಸುರು ಅಥವಾ ಬ್ಲ್ಯಾಕ್‌ ಟೀ ಸೇವನೆಯಿಂದ ರಕ್ತದೊತ್ತಡ ಕೊಂಚ ಕಡಿಮೆಯಾಗಬಹುದು.
 4. ಸಕ್ಕರೆ ಬೆರೆಸಿದ ಸಾಫ್ಟ್ ಡ್ರಿಂಕ್‌ಗಳು ಮೆಟಬಾಲಿಕ್‌ ಸಿಂಡ್ರೋಮ್‌ ಮತ್ತು ಅಧಿಕ ರಕ್ತದೊತ್ತಡ ಉಂಟು ಮಾಡುತ್ತವೆ.

ಪ್ರಶ್ನೆ: ನಾನು ಈಗಲೇ ಔಷಧೋಪಚಾರ  ಆರಂಭಿಸಬೇಕೇ?

ಉತ್ತರ: ರಕ್ತದೊತ್ತಡವು 150-160/80-90 ಎಂಎಂ ಎಚ್‌ಜಿ ಇದ್ದು, ಹೃದ್ರೋಗಗಳು, ಮೂತ್ರ ಪಿಂಡ ಕಾಯಿಲೆಗಳು, ಲಕ್ವಾ ಮತ್ತು ಹೃದ್ರೋಗ ಗಳಂತಹ ಸಮಸ್ಯೆಗಳು ಇಲ್ಲದವರಿಗೆ ಆರಂಭಿಕ ಕೆಲವು ತಿಂಗಳುಗಳ ಕಾಲ ಆಹಾರ ಶೈಲಿಯಲ್ಲಿ ಬದಲಾವಣೆ, ಜೀವನ ಶೈಲಿ ಬದಲಾವಣೆಗಳಿಂದ ನಿಭಾಯಿಸಬಹುದು. ಆದರೂ ಈ ಆರಂಭಿಕ ಕ್ರಮಗಳ ಹೊರತಾಗಿಯೂ ರಕ್ತದೊತ್ತಡವು ಹೆಚ್ಚೇ ಇದ್ದರೆ ಔಷಧೋಪಚಾರ ಆರಂಭಿಸಬೇಕಾದೀತು.

ಪ್ರಶ್ನೆ: ನನ್ನ ರಕ್ತದೊತ್ತಡವನ್ನು ಯಾವಾಗೆಲ್ಲ  ಪರೀಕ್ಷಿಸಿಕೊಳ್ಳಬೇಕು?

ಉತ್ತರ: ಜೀವನಶೈಲಿ ಮತ್ತು ಆಹಾರ ಶೈಲಿಯಲ್ಲಿ ಬದಲಾವಣೆಗಳನ್ನು ಮಾಡಿಕೊಂಡ ಬಳಿಕ ಮೂರು ತಿಂಗಳುಗಳ ಅವಧಿಯಲ್ಲಿ ನಿಮ್ಮ ರಕ್ತದೊತ್ತಡವು ಉದ್ದೇಶಿತ ಗುರಿಯನ್ನು ಸಾಧಿಸದೆ ಇದ್ದರೆ ನಿಮಗೆ ರಕ್ತದೊತ್ತಡ ಕಡಿಮೆ ಮಾಡುವ ಔಷಧಗಳನ್ನು ನೀಡಬೇಕಾಗುತ್ತದೆ. ಆರಂಭಿಕವಾಗಿ ಪ್ರತೀ 2 ತಿಂಗಳಿಗೆ ಒಮ್ಮೆ ನೀವು ಫಾಲೊ ಅಪ್‌ ಮಾಡಬೇಕಾಗುತ್ತದೆ. ಒಮ್ಮೆ ಅದು ನಿಯಂತ್ರಣಕ್ಕೆ ಬಂದ ಬಲಿಕ 3ರಿಂದ 6 ತಿಂಗಳಿಗೆ ಒಮ್ಮೆ ತಪಾಸಣೆ ಮಾಡಿಸಿಕೊಂಡರೆ ಸಾಕು. ನಿಮ್ಮ ಸಲಹೆಗಳಿಗೆ ಧನ್ಯವಾದಗಳು ಡಾಕ್ಟರ್‌. ಮೂರು ತಿಂಗಳುಗಳ ಬಳಿಕ ಮತ್ತೆ ನಿಮ್ಮನ್ನು ಕಾಣುವೆ.

ಟಾಪ್ ನ್ಯೂಸ್

Namma-hudugrau

ಭರ್ಜರಿ ಎಂಟ್ರಿಗೆ ‘ನಮ್ಮ ಹುಡುಗರು’ ರೆಡಿ

Boris

“ಮಹಾ” ಕಸರತ್ತು: ಸಚಿವರ ರಾಜೀನಾಮೆಗೆ ಮಣಿದ ಬ್ರಿಟನ್ ಪ್ರಧಾನಿ ಬೋರಿಸ್ ರಾಜೀನಾಮೆ ಇಂಗಿತ

congress

ಚುನಾವಣೆವರೆಗೂ ಯಾರೂ ಮಲಗಬಾರದು : ಕೈ ಕಾರ್ಯಕರ್ತರಿಗೆ ಸಿದ್ದರಾಮಯ್ಯ ಕರೆ

ಭ್ರಷ್ಟರನ್ನು ಮಟ್ಟ ಹಾಕುವವರೆಗೂ ವಿಶ್ರಮಿಸುವುದಿಲ್ಲ: ಆರಗ ಜ್ಞಾನೇಂದ್ರ ಗುಡುಗು

ಭ್ರಷ್ಟರನ್ನು ಮಟ್ಟ ಹಾಕುವವರೆಗೂ ವಿಶ್ರಮಿಸುವುದಿಲ್ಲ: ಆರಗ ಜ್ಞಾನೇಂದ್ರ ಗುಡುಗು

1-sadsdsa

ಪ್ರಧಾನಿ ಮೋದಿಯವರು ಕ್ರೀಡಾಪ್ರೇಮಿಗಳಿಗೆ ತುಂಬಾ ಹತ್ತಿರವಾಗಿದ್ದಾರೆ: ಪಿ.ಟಿ.ಉಷಾ

11accident

ಕಾರಿಗೆ ಸರ್ಕಾರಿ ಬಸ್‌ ಢಿಕ್ಕಿ: ಮೂವರು ಸ್ಥಳದಲ್ಲೇ ಸಾವು

ಬಾಲಕಿಯರಿಗೆ ಕಿರುಕುಳ: ಕೇರಳದ ಚಿತ್ರನಟ ಶ್ರೀಜಿತ್ ರವಿ ಬಂಧನ

ಬಾಲಕಿಯರಿಗೆ ಕಿರುಕುಳ: ಕೇರಳದ ಚಿತ್ರನಟ ಶ್ರೀಜಿತ್ ರವಿ ಬಂಧನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವೈದ್ಯಕೀಯದ ಕಣ್ಣುಗಳಿದ್ದಂತೆ ರೇಡಿಯಾಲಜಿ ವಿಭಾಗ

ವೈದ್ಯಕೀಯದ ಕಣ್ಣುಗಳಿದ್ದಂತೆ ರೇಡಿಯಾಲಜಿ ವಿಭಾಗ

arogya

ಋತುಚಕ್ರಪೂರ್ವ ಡಿಸ್ಪೋರಿಕ್‌ ಡಿಸಾರ್ಡರ್‌  

12

ಯುವಜನರು ಮತ್ತು ಪಾರ್ಕಿನ್‌ಸನ್ಸ್‌ ಕಾಯಿಲೆ

11

ಮಾದಕ ವಸ್ತುಗಳ ಬಳಕೆ

19

ಬಿಸಿಲಿನ ತಾಪದಿಂದ ಆರೋಗ್ಯ ಅಪಾಯ ತಡೆಯಲು ಏನು ಮಾಡಬೇಕು?

MUST WATCH

udayavani youtube

ನ್ಯಾಯ ಸಿಗುವ ನಂಬಿಕೆ ಇಲ್ಲ; ಹರ್ಷ ಸಹೋದರಿ ಅಶ್ವಿನಿ ಅಳಲು

udayavani youtube

ಇಡೀ ದೇಶ ಸೇವೆಗೊಂದು ಅವಕಾಶ: ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ

udayavani youtube

ದೇವಸ್ಥಾನದ ಆವರಣದೊಳಕ್ಕೆ ಉಕ್ಕಿ ಹರಿದ ನದಿಗಳು!

udayavani youtube

ಚಂದ್ರಶೇಖರ ಗುರೂಜಿ ಹತ್ಯೆ : ಕೇವಲ 4 ಗಂಟೆಯಲ್ಲಿ ಹಂತಕರ ಪತ್ತೆ

udayavani youtube

Lightings ನೋಡಿದಾಗ Shock ಆದೆ! – ಪ್ರೇಮಾ

ಹೊಸ ಸೇರ್ಪಡೆ

17ashok

ಮಳೆಯಿಂದ ಮನೆ ಕಳೆದುಕೊಂಡವರಿಗೆ 5 ಲಕ್ಷ ಪರಿಹಾರ: ಹಾನಿಗೆ 50 ಸಾವಿರ;  ಆರ್‌ ಅಶೊಕ್‌

ಓದಿನ ಬಗ್ಗೆ ಹೆಚ್ಚು ಆಸಕ್ತಿ ಬೆಳೆಸಿಕೊಳ್ಳಿ: ಅನುರಾಧ

ಓದಿನ ಬಗ್ಗೆ ಹೆಚ್ಚು ಆಸಕ್ತಿ ಬೆಳೆಸಿಕೊಳ್ಳಿ: ಅನುರಾಧ

16-protest

ಶಾಲೆಗೆ ಬೀಗ ಹಾಕಿ ಪ್ರತಿಭಟನೆ

Namma-hudugrau

ಭರ್ಜರಿ ಎಂಟ್ರಿಗೆ ‘ನಮ್ಮ ಹುಡುಗರು’ ರೆಡಿ

15AC

ಎಸ್‌ಸಿ ಪ್ರಮಾಣ ಪತ್ರ ವಿತರಣೆಗಾಗಿ ನಿರಶನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.