ಸೂಲಗಿತ್ತಿಯರು: ಸ್ತ್ರೀಹಕ್ಕುಗಳ ರಕ್ಷಕರು

Team Udayavani, May 19, 2019, 6:00 AM IST

-ಮುಂದುವರಿದುದು ಗರ್ಭಕಂಠದ ಕ್ಯಾನ್ಸರ್‌
ಪ್ರಜನನ ವಯೋಮಾನದಲ್ಲಿರುವ ಮತ್ತು ಋತುಬಂಧಾನಂತರದ ವಯಸ್ಸಿನಲ್ಲಿಯೂ ಮಹಿಳೆಯರ ಸಾವಿಗೆ ಗರ್ಭಕಂಠದ ಕ್ಯಾನ್ಸರ್‌ ಒಂದು ಮುಖ್ಯ ಕಾರಣವಾಗಿದೆ. ಹ್ಯೂಮನ್‌ ಪಾಪಿಲೋಮಾ ವೈರಸ್‌ (ಎಚ್‌ಪಿವಿ) ಎಂಬ ವೈರಸ್‌ನಿಂದ ಈ ಕಾಯಿಲೆ ಉಂಟಾಗುತ್ತದೆ. ಶೀಘ್ರವಾಗಿ ಪತ್ತೆಹಚ್ಚಿದರೆ ಈ ಕ್ಯಾನ್ಸರನ್ನು ತಡೆಯಬಹುದು. ಪ್ಯಾಪ್‌ ಸೆರ್‌ ಟೆಸ್ಟ್‌ ಎಂಬ ತಪಾಸಣೆಯಿಂದ ಗರ್ಭಕೋಶದ ಕ್ಯಾನ್ಸರನ್ನು ಶೀಘ್ರವಾಗಿ ಪತ್ತೆ ಮಾಡಬಹುದು. 21 ವರ್ಷ ವಯಸ್ಸಿನ ಬಳಿಕ ಪ್ರತೀ ಮೂರು ವರ್ಷಗಳಿಗೆ ಒಮ್ಮೆ ಈ ತಪಾಸಣೆಯನ್ನು ನಡೆಸುವುದು ಸೂಕ್ತ.

ಪ್ಯಾಪ್‌ ಸರ್‌ ಟೆಸ್ಟ್‌
ಪ್ಯಾಪ್‌ ಸೆರ್‌/ ಪ್ಯಾಪ್‌ ಟೆಸ್ಟ್‌/ ಸರ್ವಿಕಲ್‌ ಸೆ¾àರ್‌ ಅಥವಾ ಸೆ¾àರ್‌ ಟೆಸ್ಟ್‌ ಎಂಬುದಾಗಿಯೂ ಇದನ್ನು ಕರೆಯುತ್ತಾರೆ. ಗರ್ಭಕಂಠದಲ್ಲಿ ಉಂಟಾಗಿರಬಹುದಾದ ಕ್ಯಾನ್ಸರ್‌ ಪೂರ್ವ ಸ್ಥಿತಿ ಅಥವಾ ಕ್ಯಾನ್ಸರ್‌ ಬೆಳವಣಿಗೆಯನ್ನು ಪತ್ತೆಹಚ್ಚಲು ಗರ್ಭಕಂಠದಲ್ಲಿ ನಡೆಸುವ ತಪಾಸಣೆ ಇದು. ಈ ತಪಾಸಣೆಯ ಬಳಿಕ ವೈದ್ಯರ ಶಿಫಾರಸಿನಂತೆ ಇನ್ನಿತರ ಕ್ಯಾನ್ಸರ್‌ ನಿರ್ಧಾರಕ ತಪಾಸಣೆಗಳನ್ನೂ ನಡೆಸಬಹುದಾಗಿದೆ. ಹ್ಯೂಮನ್‌ ಪ್ಯಾಪಿಲೊಮಾ ವೈರಸ್‌ ಲೈಂಗಿಕವಾಗಿ ಪ್ರಸಾರವಾಗುವ ಡಿಎನ್‌ಎ ವೈರಸ್‌ ಆಗಿದ್ದು, ಇದರ ಸೋಂಕಿನಿಂದ ಉಂಟಾಗಿರುವ ಕ್ಯಾನ್ಸರ್‌ ಪೂರ್ವ ಬದಲಾವಣೆಗಳನ್ನು ಗುರುತಿಸಲು ಗರ್ಭಕಂಠದಿಂದ ಅಂಗಾಂಶಗಳನ್ನು ಸಂಗ್ರಹಿಸುವುದು ಹೊರರೋಗಿ ವಿಭಾಗದಲ್ಲಿಯೇ ನಡೆಸಲಾಗುವ ಒಂದು ಪ್ರಕ್ರಿಯೆಯಾಗಿದೆ. ಎಂಡೊ ಸರ್ವಿಕ್ಸ್‌ ಮತ್ತು ಎಂಡೊಮೆಟ್ರಿಯಂಗಳಲ್ಲಿ ಆಗಿರುವ ಇನ್ನಿತರ ಸೋಂಕುಗಳು ಮತ್ತು ಅಸಹಜತೆಗಳನ್ನು ಕೂಡ ಈ ಪರೀಕ್ಷೆಯಿಂದ ಕಂಡು ಹಿಡಿಯಬಹುದು.

ತಡೆ
ನಮಗೆಲ್ಲರಿಗೂ ತಿಳಿದಿರುವಂತೆ “ಚಿಕಿತ್ಸೆಗಿಂತ ರೋಗ ತಡೆಯೇ ಉತ್ತಮವಾಗಿದೆ. ಸರಿಯಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೆ ಗರ್ಭಕಂಠದ ಕ್ಯಾನ್ಸರ್‌ ವಿರುದ್ಧವೂ ನಾವು ಹೋರಾಡಿ ಅದನ್ನು ತಡೆಯಬಹುದಾಗಿದೆ. ಕ್ಯಾನ್ಸರ್‌ ಅನ್ನು ಬೇಗನೆ ಪತ್ತೆ ಹಚ್ಚಿ ಚಿಕಿತ್ಸೆ ನೀಡಿದರೆ ಅದನ್ನು ತಡೆಯಬಹುದಾಗಿದೆ ಮತ್ತು ಗುಣಪಡಿಸಬಹುದಾಗಿದೆ.

ಗರ್ಭಕಂಠದ ಕ್ಯಾನ್ಸರ್‌ ಉಂಟಾಗುವುದನ್ನು ತಡೆಯಲು ಏನು ಮಾಡಬೇಕು?
– ಧೂಮಪಾನ ಮಾಡಬಾರದು
– ಲೈಂಗಿಕ ಸಂಗಾತಿಗಳು ಸೀಮಿತವಾಗಿರಬೇಕು
– ಲೈಂಗಿಕ ಸಂಪರ್ಕ ಸಂದರ್ಭ ಕಾಂಡೋಮ್‌ ಉಪಯೋಗಿಸಬೇಕು
– ಪ್ರೌಢವಯಸ್ಸಿಗೆ ಬಂದ ಮೇಲೆಗೇ ಮೊದಲ ಲೈಂಗಿಕ ಸಂಪರ್ಕ ನಡೆಸಬೇಕು.
– ಎಚ್‌ಪಿವಿ ಲಸಿಕೆ ಹಾಕಿಸಿಕೊಳ್ಳಬೇಕು
– ಪ್ಯಾಪ್‌ ಮತ್ತು ಎಚ್‌ಪಿವಿ ತಪಾಸಣೆ ಮಾಡಿಸಿಕೊಳ್ಳಿ

ಸೂಲಗಿತ್ತಿಯರು ನಡೆಸುವ ಆದರೆ ನಿರ್ಲಕ್ಷ್ಯಕ್ಕೆ ಒಳಗಾದ ಇಂತಹ ಇನ್ನೆಷ್ಟೋ ಕಾರ್ಯಗಳಿವೆ. ಸಮಾಜದಲ್ಲಿ ಗುರುತರ ಜವಾಬ್ದಾರಿ ಇರುವ, ಸಮಾಜದ ಸ್ವಾಸ್ಥ್ಯಕ್ಕಾಗಿ ಕೆಲಸ ಮಾಡುವ ಜವಾಬ್ದಾರಿಯುತ ವ್ಯಕ್ತಿಗಳಾಗಿ ನಾವು ಸೂಲಗಿತ್ತಿಯರನ್ನು ಗುರುತಿಸಲು ಇದು ಅತ್ಯಂತ ಸೂಕ್ತ ಸಮಯವಾಗಿದೆ. ಮಹಿಳೆಯು ಶಿಶುವಿಗೆ ಜನ್ಮ ನೀಡುವ ಸಾಮರ್ಥ್ಯ ಹೊಂದಿರುವವಳಾಗಿದ್ದು, ಇದೇ ಕಾರಣದಿಂದ ಆಕೆಗೆ ಕುಟುಂಬದ ಇನ್ನಿತರ ಸದಸ್ಯರಿಗೂ ಉತ್ತಮ ಆರೋಗ್ಯಕರ ಜೀವನವನ್ನು ಒದಗಿಸಿಕೊಡುವ ಸಾಮರ್ಥ್ಯವೂ ಇದೆ. ಹೀಗಾಗಿ ತನಗೆ ಮತ್ತು ತನ್ನ ಕುಟುಂಬಕ್ಕೆ ಬೇಕಾದ ಉತ್ಕೃಷ್ಟ ಜೀವನವನ್ನು ಆರಿಸಿಕೊಳ್ಳುವ ಹಕ್ಕು ಮಹಿಳೆಗಿದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ತಿರುವನಂತಪುರ: ರೇಪ್‌ ಬಗ್ಗೆ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಾಕಿದ್ದಕ್ಕೆ ಕೇರಳದ ಸಂಸದ ಹಿಬಿ ಎಡೆನ್‌ ಪತ್ನಿ ಈಗ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆ ಎದುರಿಸುವಂತಾಗಿದೆ....

  • ಹೊಸದಿಲ್ಲಿ: ಬ್ಯಾಂಕ್‌ಗಳ ವಿಲೀನ ಮತ್ತು ಠೇವಣಿ ಬಡ್ಡಿ ದರ ಇಳಿಕೆಯನ್ನು ವಿರೋಧಿಸಿ ರಾಷ್ಟ್ರೀಕೃತ ಬ್ಯಾಂಕ್‌ ನೌಕರರು ಮಂಗಳವಾರ ಪ್ರತಿಭಟನೆ ನಡೆಸಿದ್ದರಿಂದ,...

  • ತಿರುವನಂತಪುರ: ದಕ್ಷಿಣ ಭಾರತದ ಜನಪ್ರಿಯ ಚಿತ್ರನಟಿ ಮಂಜು ವಾರ್ಯರ್‌ "ಒಡಿಯನ್‌' ಸಿನಿಮಾ ನಿರ್ಮಾಪಕ ಶಿವಕುಮಾರ ಮೆನನ್‌ ವಿರುದ್ಧ ಕೇಸು ದಾಖಲಿಸಿದ್ದಾರೆ. ಬೆದರಿಕೆಯೊಡ್ಡಿದ...

  • ಮುಂಬಯಿ: ಸಾಧಕ ಮಹಿಳೆಯರನ್ನು ಗುರುತಿಸುವ ಭಾರತ್‌ ಕಿ ಲಕ್ಷ್ಮೀ ಎಂಬ ಯೋಜನೆಗೆ ನಟಿ ದೀಪಿಕಾ ಪಡುಕೋಣೆ ಮತ್ತು ಶಟ್ಲರ್‌ ಪಿ.ವಿ. ಸಿಂಧು ಅವರನ್ನು ರಾಯಭಾರಿಗಳನ್ನಾಗಿ...

  • ರಾಂಚಿ: ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಮೂರನೇ ಟೆಸ್ಟ್‌ ಪಂದ್ಯದ ನಾಲ್ಕನೇ ದಿನ ಡ್ರೆಸ್ಸಿಂಗ್‌ ಕೊಠಡಿಯಲ್ಲಿ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಕಾಣಿಸಿಕೊಂಡು...