ನವಜಾತ ಶಿಶುಗಳ ಶ್ರವಣ ಪರೀಕ್ಷೆ

Team Udayavani, Jun 16, 2019, 5:26 AM IST

ಶ್ರವಣ ಶಕ್ತಿ, ಅಂದರೆ ಕಿವಿ ಕೇಳಿಸುವಿಕೆ ಇದು ಮೂಲ ಸಂವೇದನೆಗಳಲ್ಲೂ ಬಹಳ ವಿಶೇಷವಾದುದು ಮತ್ತು ಹೆಚ್ಚು ಅನಾದಿಯಾದುದು. ಕಿವಿ ಕೇಳಿಸುವ ಪ್ರಕ್ರಿಯೆಯನ್ನು, ತನ್ನ ಸುತ್ತಮುತ್ತಲಿನ ಹೆಚ್ಚಿನ ಶಬ್ದಗಳನ್ನು ಗ್ರಹಿಸುವ ಮನುಷ್ಯನ ಸಾಮರ್ಥ್ಯ ಎಂಬುದಾಗಿ  ವಿವರಿಸಬಹುದು. ಸಾಕಷ್ಟು ಮಾತು ಮತ್ತು ಭಾಷಾ ಕೌಶಲಗಳನ್ನು ಗಳಿಸಬೇಕಾದರೆ ಶ್ರವಣ ಶಕ್ತಿಯು ಸಹಜವಾಗಿರಬೇಕಾದುದು ಅತ್ಯಂತ ಆವಶ್ಯಕ. ಒಬ್ಬ ವ್ಯಕ್ತಿಯಲ್ಲಿ ಶಬ್ದಗಳನ್ನು ಕೇಳಿಸಿಕೊಳ್ಳಲು ಯಾವುದೇ ಮಟ್ಟದಲ್ಲಿ ಇರುವ ಅಸಾಮರ್ಥ್ಯಕ್ಕೆ ಶ್ರವಣ ನಷ್ಟ ಅಥವಾ ಕಿವುಡುತನ ಎಂದು ಹೇಳುತ್ತಾರೆ. ವ್ಯಕ್ತಿಯ ಸಂವಹನ ಮತ್ತು ಸಾಮಾಜಿಕ ಜೀವನದ ಮೇಲೆ ಕಿವುಡುತನವು ವ್ಯತಿರಿಕ್ತ ಪರಿಣಾಮಗಳನ್ನು ಉಂಟು ಮಾಡಬಹುದು.

ನವಜಾತ ಶಿಶುಗಳ ಶ್ರವಣ ಪರೀಕ್ಷೆ ಅನ್ನುವುದು ನಿಮ್ಮ ಮಗುವಿಗೆ ಸರಿಯಾಗಿ ಕಿ ವಿ ಕೇಳಿಸುತ್ತಿದೆಯೇ ಇಲ್ಲವೇ ಅನ್ನುವುದನ್ನು ದೃಢಪಡಿಸುವ ಒಂದು ತಪಾಸಣಾ  ವಿಧಾನ. ಯೂನಿವರ್ಸಲ್‌ ನಿಯೋನೇಟಲ್‌ ಹಿಯರಿಂಗ್‌   ಸ್ಕ್ರೀನಿಂಗ್‌ (UNHs) ಎಂಬುದು ಮಕ್ಕಳಲ್ಲಿನ ಜನ್ಮಜಾತ ಕಿವುಡುತನವನ್ನು ಆರಂಭದಲ್ಲೇ ಪತ್ತೆ ಮಾಡುವ ಒಂದು ಕಾರ್ಯ ವಿಧಾನ. ಮಗುವಿನ ಕಿವಿಯ ಒಂದು ನಿರ್ದಿಷ್ಟ ಕ್ಷೇತ್ರದ ಶ್ರವಣಶಕ್ತಿಯನ್ನು ಪರೀಕ್ಷಿಸಲು ಬಳಸುವ ಅಬೆjಕ್ಟಿವ್‌ ವಿಧಾನಗಳನ್ನು (ಸಾಮಾನ್ಯವಾಗಿ ಓಟೋ ಅಕೌಸ್ಟಿಕ್‌ ಎಮಿಷನ್‌, OAE ಅಥವಾ ಆಡಿಟರಿ ಬ್ರೆ„ನ್ಸೆಮ್‌ ರೆಸ್ಪಾನ್ಸಸ್‌, ABR) ಅದು ವಿವರಿಸುತ್ತದೆ. ನುರಿತ ಶ್ರವಣ ತಜ್ಞರು ಈ ಪರೀಕ್ಷೆಯನ್ನು ನಡೆಸುತ್ತಾರೆ.

ಈ  ಸ್ಕ್ರೀನಿಂಗ್‌ ಪರೀಕ್ಷೆಯಲ್ಲಿ ಮಕ್ಕಳನ್ನು ಎರಡು ವರ್ಗಗಳಾಗಿ ವಿಂಗಡಿಸಲಾಗುತ್ತದೆ. ಅಂದರೆ ಅಧಿಕ ಸೂಚ್ಯಂಕದ ಸಂದೇಹಾಸ್ಪದ ಗುಂಪಿನ ಮಕ್ಕಳು ಮತ್ತು ಕಡಿಮೆ ಸೂಚ್ಯಂಕದ ಸಂದೇಹಾಸ್ಪದ ಗುಂಪಿನ ಮಕ್ಕಳು. ಅಧಿಕ ಸೂಚ್ಯಂಕದ ಸಂದೇಹಾಸ್ಪದ ಗುಂಪಿನ ಮಕ್ಕಳನ್ನು ತಪಾಸಣ ಪರೀಕ್ಷೆಗಳಿಗೆ ಶಿಫಾರಸು ಮಾಡಲಾಗುತ್ತದೆ.

ಒಂದು ವೇಳೆ ಮಗುವು ಶ್ರವಣ ಪರೀಕ್ಷೆಯಲ್ಲಿ ಪಾಸ್‌ ಆಗದಿದ್ದರೆ, ಆ ಮಗುವನ್ನು ಅನುಸರಣಾ ಪರೀಕ್ಷೆಗಳಿಗೆ ಶಿಫಾರಸು ಮಾಡುತ್ತಾರೆ. ಆದರೆ ನಾವು ತಿಳಿದಿರಬೇಕಾದ ಸಂಗತಿ ಅಂದರೆ, ಒಟ್ಟು ಮಕ್ಕಳಲ್ಲಿ ಶ್ರವಣ ನಷ್ಟ ಇರುವುದು ಕೇವಲ ಶೇ. 1ರಷ್ಟು ಮಕ್ಕಳಿಗೆ ಆದರೂ ಸುಮಾರು ಶೇ. 10ರಷ್ಟು ಮಕ್ಕಳೂ ಸ್ಕ್ರೀನಿಂಗ್‌ ಪರೀಕ್ಷೆಯಲ್ಲಿ ಪಾಸ್‌ ಆಗುವುದಿಲ್ಲ. ನವಜಾತ ಶಿಶುಗಳ ಶ್ರವಣ ಪರೀಕ್ಷೆಯಲ್ಲಿ ಪಾಸ್‌ ಆಗದೆ ಇರಲು ಇರುವ ಪ್ರಮುಖ ಕಾರಣ ಅಂದರೆ, ಕಿವಿಯ ನಾಳಗಳಲ್ಲಿ ಕೊಳೆ ತುಂಬಿರುವುದು, ಮಧ್ಯ ಕಿವಿಯಲ್ಲಿ ದ್ರವ ತುಂಬಿರುವುದು ಅಥವಾ ಪರೀಕ್ಷೆಯ ಸಮಯದಲ್ಲಿ ಮಗುವು ಅತ್ತಿತ್ತ‌ ಅಲುಗಾಡುವುದು/ಮಗುವು ಅಳುತ್ತಾ ಇರುವುದು.

ಆದರೆ ಹೆಚ್ಚಿನ ಮಕ್ಕಳು ಮುಂದಿನ ಹಂತದ ಅನುಸರಣಾ ಪರೀಕ್ಷೆಯಲ್ಲಿ ಪಾಸ್‌ ಆಗುತ್ತಾರೆ. ಆದರೆ ಈ ಪರೀಕ್ಷೆಗೆ ಮಗುವನ್ನು ಒಳಪಡಿಸುವುದು ಬಹಳ ಆವಶ್ಯಕ ಯಾಕೆಂದರೆ, ಮಗುವಿನ ಕೇಳುವಿಕೆಯ ಮಟ್ಟ ಹೇಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಇರುವುದು ಇದೊಂದೇ ವಿಧಾನ.

ಕೆಲವು ಮಕ್ಕಳಲ್ಲಿ ಹುಟ್ಟುವಾಗ ಕಿವಿ ಕೇಳುವಿಕೆಯು ಸಹಜವಾಗಿದ್ದು, ಆ ಬಳಿಕ ಅಂದರೆ ನವಜಾತ ಶಿಶು ವಿನ ಹಂತದ ಅನಂತರ ಕಿವಿ ಕೇಳಿಸದಿರುವ ತೊಂದರೆ ಕಾಣಿಸಿಕೊಳ್ಳ ಬಹುದು. ವಿವಿಧ ಅಸ್ವಸ್ಥತೆಗಳು ಅಥವಾ ಆನುವಂಶಿಕ ಕಾರಣಗಳಿಂದಾಗಿ ಈ ಪರಿಸ್ಥಿತಿ ಬರಬಹುದು. ಮಾತ್ರವಲ್ಲದೆ, ಏಟುಗಳು ಅಥವಾ ಕಾಯಿಲೆಗಳಿಗಾಗಿ ಬಳಸುವ ಕೆಲವು ಔಷಧಿಗಳಿಂದಾಗಿ ನವಜಾತ ಶಿಶುವಿನ ಹಂತದ  ಅನಂತರ ಶ್ರವಣ ನಷ್ಟ ಕಾಣಿಸಿಕೊಳ್ಳಬಹುದು. ಈ ಕಾರಣಕ್ಕಾಗಿ ಮಗು ವಿನ ಕೇಳುವಿಕೆಯ ಮಟ್ಟ ಹೇಗಿದೆ ಎಂಬುದನ್ನು ಗಮನಿಸಲು ಮತ್ತು ಮಗು ವಿನ ಕೇಳುವ ನಡವಳಿಕೆಯನ್ನು (ಆಡಿಟರಿ ಬಿಹೇ ವಿಯರ್ಸ್‌) ಅಂದರೆ  ವಿವಿಧ ಶಬ್ದಗಳಿಗೆ ಮಗುವು ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ವಿವರವಾಗಿ ವಿಶ್ಲೇ ಷಿಸಲು ನಿಯ ಮಿತ ಆಡಿಯೋಲಾಜಿಕಲ್‌ ಪರೀಕ್ಷೆಗೆ (ಶ್ರವಣ ಪರೀಕ್ಷೆ) ಶಿಫಾರಸು ಮಾಡಲಾಗುತ್ತದೆ.

ಹಿಯರಿಂಗ್‌  ಸ್ಕ್ರೀನಿಂಗ್‌ ಅಥವಾ ಶ್ರವಣ ಪರೀಕ್ಷೆ ಎನ್ನುವುದು ಸರಳ, ಸುರಕ್ಷಿತ ಮತ್ತು ನೋವು ರಹಿತ ಪರೀಕ್ಷೆ ಆಗಿದ್ದು, ಎಲ್ಲಾ ನವಜಾತ ಶಿಶುಗಳಿಗೂ ಈ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿಸಲೇಬೇಕು ಯಾಕೆಂದರೆ ಈ ಪರೀಕ್ಷೆಯು ಮಗುವಿನ ಶ್ರವಣ ನಷ್ಟವನ್ನು ಆರಂಭದಲ್ಲೇ ಪತ್ತೆ ಮಾಡುವ ಮೂಲಕ ಮಗುವಿನ ಭವಿಷ್ಯವನ್ನು ಬದಲಾಯಿಸುತ್ತದೆ.

ಯೂನಿವರ್ಸಲ್‌ ನಿಯೋನೇಟಲ್‌ ಹಿಯರಿಂಗ್‌ ಸ್ಕ್ರೀನಿಂಗ್‌ನ ಉದ್ದೇಶಗಳನ್ನು ಸಂಕ್ಷಿಪ್ತವಾಗಿ, 1-3-6 ಉದ್ದೇಶಗಳಾಗಿ  ವಿವರಿಸಲಾಗಿದೆ

1 ತಿಂಗಳ ವಯಸ್ಸಿನಲ್ಲಿ  ಸ್ಕ್ರೀನ್‌ ಮಾಡಬೇಕಾ
ಗಿರುವ ಮಕ್ಕಳು.

3 ತಿಂಗಳ ವಯಸ್ಸಿನಲ್ಲಿ ಪೂರ್ಣ ಮಾಡಬೇಕಾಗಿರುವ ಆಡೊಯಾಲಾಜಿಕಲ್‌ ವಿಶ್ಲೇಷಣೆಗಳು.

6 ತಿಂಗಳ ಪ್ರಾಯದಲ್ಲಿ ಆರಂಭಿಸುವ ಸೂಕ್ತ ವೈದ್ಯಕೀಯ ಮತ್ತು ಆಡಿಯೋಲಾಜಿಕಲ್‌ ಸೇವೆಗಳು, ಆರಂಭಿಕ ಪರಿಹಾರೋಪಾಯಗಳ ಬಗ್ಗೆ ಅರಿವು ನೀಡುವ ಸೇವೆಗಳು.

-ಡಾ| ಅರ್ಚನಾ ಜಿ.,
ಶ್ರವಣ ತಜ್ಞರು, ಸ್ಪೀಚ್‌ ಎಂಡ್‌ ಹಿಯರಿಂಗ್‌ ವಿಭಾಗ, ಡಾ| ಟಿ ಎಂ ಎ ಪೈ ಆಸ್ಪತ್ರೆ ಉಡುಪಿ ಮತ್ತು SOAHS, ಮಣಿಪಾಲ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

  • ವಿಶ್ವದಲ್ಲಿಯೇ ಮೊದಲ ಬಾರಿಗೆ ಭಾರತದಲ್ಲಿ 1952ರಲ್ಲಿ ಕುಟುಂಬ ಕಲ್ಯಾಣ ಯೋಜನೆ ಆರಂಭಗೊಂಡಿತು. ಆಗ ಜನಸಂಖ್ಯಾ ಸ್ಫೋಟ, ಜನಸಂಖ್ಯಾ ಬಾಂಬ್‌ ಎಂಬ ನುಡಿಗಟ್ಟುಗಳು ಪ್ರಚಲಿತವಾಗಿದ್ದವು....

  • ಮನುಷ್ಯನ ಭಾಷೆ ಮತ್ತು ಸಂಭಾಷಣೆಯ ಬೆಳವಣಿಗೆಯಲ್ಲಿ ಶ್ರವಣ ಶಕ್ತಿಯು ಬಹಳ ಪ್ರಾಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ವ್ಯಕ್ತಿಯು ಶ್ರವಣ ಸಾಮರ್ಥ್ಯವನ್ನು ಕಳೆದುಕೊಂಡರೆ...

  • ಬಾಯಿಯಲ್ಲಿ ವಸಡಿನ ನಡುವೆ ತಾನು ಮೂಡಿಬರಬೇಕಾದ ಸ್ಥಳದಲ್ಲಿ ಮೂಡಲು ಸಾಧ್ಯವಾಗದ ಹಲ್ಲುಗಳನ್ನು ತೂರಿಕೊಂಡ ಅಥವಾ ಬಂಧಿತ ಹಲ್ಲು ಎನ್ನುತ್ತಾರೆ. ಕೆಳ ದವಡೆಯ ಮೂರನೆಯ...

  • ಮೃದು ಉದ್ದೀಪಕವಾಗಿರುವ ಕೆಫೀನ್‌ ಕಳೆದ ಹಲವಾರು ಶತಮಾನಗಳಿಂದ ನಮ್ಮ ಆಹಾರ ಶೈಲಿಯ ಭಾಗವಾಗಿದೆ. ಚೀನೀಯರು 5,000 ವರ್ಷಗಳ ಹಿಂದೆಯೇ ಚಹಾವನ್ನು ಶೋಧಿಸಿ ಕುಡಿಯುತ್ತಿದ್ದರು...

  • ಒಂದು ಕುಟುಂಬಕ್ಕೆ ಆರೋಗ್ಯವಂತ ಶಿಶುವಿನ ಜನನದಷ್ಟು ಸಂತೋಷಕರವಾದ ಸಂಭ್ರಮ ಇನ್ನೊಂದಿಲ್ಲ. ಶಿಶುವನ್ನು ವೀಕ್ಷಿಸುವುದು, ಮುದ್ದಾಡುವುದು, ವಿವಿಧ ಬಗೆಯ ಸದ್ದುಗಳಿಗೆ...

ಹೊಸ ಸೇರ್ಪಡೆ

  • ಬಾಗಲಕೋಟೆ: ಜಿಲ್ಲಾ ಕಾಂಗ್ರೆಸ್‌ ನಾಯಕತ್ವ ಬದಲಾವಣೆಗೆ ಕೈ ನಾಯಕರು ಈಗ ಗಂಭೀರ ಚಿಂತನೆ ನಡೆಸಿದ್ದು, ಜಿಲ್ಲಾ ಅಧ್ಯಕ್ಷರ ಬದಲಾವಣೆಗಾಗಿಯೇ ಕೆಪಿಸಿಸಿಯಿಂದ ನೇಮಕಗೊಂಡಿದ್ದ...

  • ಬೆಳಗಾವಿ: ಸಹೋದರ ಲಖನ್ ಜಾರಕಿಹೊಳಿಗೆ ಒಳ್ಳೆಯದಾಗಲಿ. ಅವನು ಸತೀಶ್ ಜಾರಕಿಹೊಳಿ ಜೊತೆಗೆ ಸೇರಿ ಹಾಳಾಗುವುದು ಬೇಡ. ಲಖನ್ ಶಾಸಕ ಆದ್ರೆ ಮೊದಲು ಸಂತೋಷ ನಾನು ಪಡುತ್ತೇನೆ...

  • ಕುಂದಗೋಳ: ಸರ್ಕಾರಿ ಕಾರ್ಯಕ್ರಮಕ್ಕೆ ನಮ್ಮನ್ನು ಏಕೆ ಕರೆಯುತ್ತಿಲ್ಲ ಎಂದು ತಾಪಂ ಸರ್ವ ಸದಸ್ಯರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪಟ್ಟಣದ ತಾಪಂ...

  • ಧಾರವಾಡ: ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ತಂಬಾಕು ತನಿಖಾ ದಳ ದಿಂದ 21ಕ್ಕೂ ಹೆಚ್ಚು ದಿಢೀರ್‌ ದಾಳಿ ಮಾಡಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುತ್ತಿದ್ದ...

  • ಧಾರವಾಡ: ಕೋಟಿ ಕೋಟಿ ರೂಪಾಯಿ ಸುರಿದು ಕಟ್ಟಿದ ಕಟ್ಟಡ ಇನ್ನೂ ಉದ್ಘಾಟನೆಯಾಗಿಲ್ಲ. ಆದರೆ ಅಲ್ಲಲ್ಲಿ ಸೋರುತ್ತಿದೆ. ನೆಲ ಮಹಡಿಯಲ್ಲಿಯೋ ಚರಂಡಿ ನೀರು ಮತ್ತು ಮಳೆ...