ಪೋಲಿಯೋಮೈಲೈಟಿಸ್‌

ಶಾಶ್ವತ ಅಂಗವೈಕಲ್ಯಕ್ಕೆ ಕಾರಣವಾಗುವ ವೈರಾಣು ಕಾಯಿಲೆ

Team Udayavani, Mar 29, 2020, 5:05 AM IST

polio

ಬೆನ್ನುಹುರಿಯ ಮುಂಭಾಗದಲ್ಲಿರುವ ಕೋಡಿನಾಕೃತಿಯ ಅಂಗಾಂಶಗಳನ್ನು ಬಾಧಿಸಿ ಚಲನೆಯ ಮೇಲೆ ದುಷ್ಪರಿಣಾಮ ಬೀರುವ ಅನಾರೋಗ್ಯವೇ ಪೋಲಿಯೋಮೈಲೈಟಿಸ್‌ ಅಥವಾ ಜನರು ಸಾಮಾನ್ಯವಾಗಿ ಹೆಸರಿಸುವ ಪೋಲಿಯೋ. ಪೋಲಿಯೋವೈರಸ್‌ ಎಂಬ ವೈರಾಣುವಿನಿಂದ ಈ ಕಾಯಿಲೆಯು ಉಂಟಾಗುತ್ತದೆ. ಎರಡು ದಶಕಗಳ ಹಿಂದೆ ಇದೊಂದು ಭೀತಿಕಾರಕವಾದ ಕಾಯಿಲೆಯಾಗಿತ್ತು. ಇಸವಿ 2000ದ ಒಳಗೆ ಭೂಮಿಯ ಮೇಲಿನಿಂದ ಪೋಲಿಯೋ ಕಾಯಿಲೆಯನ್ನು ಅಳಿಸಿಹಾಕುವ ಕನಸನ್ನು ವಿಶ್ವ ಆರೋಗ್ಯ ಸಂಸ್ಥೆಯು ಕಂಡಿತ್ತು.
ಆದರೆ 2000ನೇ ಇಸವಿಯ ಬಳಿಕವೂ ಅಭಿವೃದ್ಧಿಶೀಲ ದೇಶಗಳಲ್ಲಿ ಅಲ್ಲಲ್ಲಿ ಒಂದೊಂದು ಪೋಲಿಯೋ ರೋಗ ಪ್ರಕರಣಗಳು ವರದಿಯಾಗುತ್ತಲೇ ಇವೆ. 2011ರಲ್ಲಿ ಪಶ್ಚಿಮ ಬಂಗಾಲ ಮತ್ತು ಗುಜರಾತ್‌ಗಳಲ್ಲಿಯೂ ಕೆಲವು ಹೊಸ ಪೋಲಿಯೋ ಪ್ರಕರಣಗಳು ವರದಿಯಾಗಿವೆ. 2014ರ ಮಾರ್ಚ್‌ 27ರಂದು ವಿಶ್ವಸಂಸ್ಥೆಯು ಭಾರತವನ್ನು ಪೋಲಿಯೋ ಮುಕ್ತ ಎಂಬುದಾಗಿ ಘೋಷಿಸಿತು. ಕಳೆದ ಆರು ವರ್ಷಗಳಿಂದ ಭಾರತವು ಪೋಲಿಯೋ ಮುಕ್ತವಾಗಿದೆ. ಆದರೆ ಪಾಕಿಸ್ಥಾನ, ಅಫ್ಘಾನಿಸ್ಥಾನ ಮತ್ತು ನೈಜೀರಿಯಾಗಳಲ್ಲಿ ಪೋಲಿಯೋ ಒಂದು ಸಾಂಕ್ರಾಮಿಕ ರೋಗವಾಗಿಯೇ ಉಳಿದಿದೆ. ಪೋಲಿಯೋ ಸೋಂಕು ಸಾಮಾನ್ಯವಾಗಿ ಕಾಲಿನ ಕೆಳಭಾಗದ ಸ್ನಾಯುಗಳು, ಅಪರೂಪವಾಗಿ ಕಾಲಿನ ಮೇಲ್ಭಾಗ ಮತ್ತು ಬೆನ್ನುಮೂಳೆಯನ್ನು ಬಾಧಿಸುತ್ತದೆ.

ಪೋಲಿಯೋ ಪ್ರಸರಣವಾಗುವುದು ಹೇಗೆ?
ಪೋಲಿಯೋ ವೈರಸ್‌ನಿಂದ ಪೋಲಿಯೋಮೈಲೈಟಿಸ್‌ ಉಂಟಾಗುತ್ತದೆ. ಮೂರು ವಿಧವಾದ ಪೋಲಿಯೋ ವೈರಸ್‌ಗಳಿವೆ: ಟೈಪ್‌ 1, ಟೈಪ್‌ 2 ಮತ್ತು ವಿಧ 3. ಮಲ ಮತ್ತು ಮೌಖೀಕ ಮಾರ್ಗದ ಮೂಲಕ ಈ ವೈರಲ್‌ ಪ್ರಸಾರವಾಗುತ್ತದೆ. ನೈರ್ಮಲ್ಯದ ಕೊರತೆ ಮತ್ತು ಜನಸಂದಣಿಯೂ ಈ ಸೋಂಕು ಪ್ರಸರಣದಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಸೋಂಕುಕಾರಕ ವೈರಸ್‌ ಜೀರ್ಣಾಂಗವ್ಯೂಹದ ಮೂಲಕ ರಕ್ತ ಪರಿಚಲನ ವ್ಯವಸ್ಥೆಗೆ ಮತ್ತು ಅಲ್ಲಿಂದ ಬೆನ್ನುಹುರಿಯ ಹೊರಭಾಗದ ಕೋಡಿನಂತಹ ಅಂಗಾಂಶಗಳಿಗೆ ಪ್ರಯಾಣ ಬೆಳೆಸುತ್ತದೆ.

ಪೋಲಿಯೋ ದಿನ
ಪ್ರತೀವರ್ಷ ಅಕ್ಟೋಬರ್‌ 24ನ್ನು ವಿಶ್ವ ಆರೋಗ್ಯ ದಿನವನ್ನಾಗಿ ಆಚರಿಸಲಾಗುತ್ತದೆ. ಪೋಲಿಯೋ ವೈರಸ್‌ಗೆ ಲಸಿಕೆಯನ್ನು ಕಂಡುಹಿಡಿದ ಜೊನಾಸ್‌ ಸಾಲ್ಕ್ನ ಜನ್ಮದಿನವಿದು. ರೋಟರಿ ಇಂಟರ್‌ನ್ಯಾಶನಲ್‌ ಸಂಘಟನೆಯು ವಿಶ್ವ ಪೋಲಿಯೋ ದಿನವನ್ನು ಆಚರಿಸುವ ಸಂಪ್ರದಾಯವನ್ನು ಎರಡು ದಶಕಗಳ ಹಿಂದೆ ಆರಂಭಿಸಿತು.

ಪೋಲಿಯೋ ವೈರಸ್‌
ಪರಿಣಾಮ ಬೀರುವುದು ಹೇಗೆ?
ಪೋಲಿಯೋ ವೈರಸ್‌ ಬೆನ್ನುಹುರಿಯ ಹೊರಭಾಗದ ಕೋಡಿನಂತಹ ಅಂಗಾಂಶಗಳ ಮೇಲೆ ಪರಿಣಾಮ ಬೀರುತ್ತದೆ ಮತ್ತು ವಿಷಮ ಪಾರ್ಶ್ವದ (ಅಸಿಮೆಟ್ರಿಕಲ್‌) ಸ್ನಾಯುಗಳ ಲಕ್ವಾಕ್ಕೆ ಕಾರಣವಾಗುತ್ತದೆ. ಕಾಲುಗಳ ವಿಷಮ ಪಾರ್ಶ್ವದ ಸ್ಥಿರ ಸ್ನಾಯುಗಳ ಮೇಲೆ ಈ ವೈರಸ್‌ ದುಷ್ಪರಿಣಾಮ ಬೀರುತ್ತದೆ. ಸಾಮಾನ್ಯವಾಗಿ ಇದು ಪರಿಣಾಮ ಬೀರುವುದು ಕೆಳಕಾಲಿನ ಮೇಲೆ. ದುಷ್ಪರಿಣಾಮವನ್ನು ಅನುಭವಿಸುವ ಸಾಮಾನ್ಯ ಸಂಧಿಗಳೆಂದರೆ, ಪೃಷ್ಠ, ಮೊಣಕಾಲು ಮತ್ತು ಹಿಮ್ಮಡಿಗಳು. ಅಪರೂಪವಾಗಿ ಕಾಲಿನ ಮೇಲು ಭಾಗ ಮತ್ತು ಸೊಂಟ-ಪೃಷ್ಠವೂ ಇದರ ದುಷ್ಪರಿಣಾಮವನ್ನು ಅನುಭವಿಸುತ್ತವೆ. ಇದರಿಂದ ಉಂಟಾಗುವ ಲಕ್ವಾದ ತೀವ್ರತೆಯೂ ಭಿನ್ನವಾಗಿರುತ್ತದೆ. ಇದು ಸ್ನಾಯುಗಳ ಮೇಲೆ ಮಾತ್ರ ಪರಿಣಾಮ ಬೀರುತ್ತದೆ. ದುಷ್ಪರಿಣಾಮ ಅನುಭವಿಸಿದರೂ ಕಾಲುಗಳ ಸಂವೇದನಾಶಕ್ತಿಯು ಸಹಜವಾಗಿರುತ್ತದೆ.

ಪೋಲಿಯೋದ ಹಂತಗಳಾವುವು?
ಪೋಲಿಯೋ 3 ವಿಭಿನ್ನ ಹಂತಗಳನ್ನು ಹೊಂದಿರುತ್ತದೆ; ಅಕ್ಯೂಟ್‌ ಪ್ಲಾಸಿಡ್‌ ಪ್ಯಾರಾಲಸಿಸ್‌ (ಲಕ್ವಾ), ಚೇತರಿಕೆ ಮತ್ತು ಶಾಶ್ವತ ಲಕ್ವಾ (ರೆಸಿಡುವಲ್‌ ಪ್ಯಾರಾಲಿಸಿಸ್‌). ಮಗು ಶಾಶ್ವತ ಲಕ್ವಾ ಅಥವಾ ರೆಸಿಡುವಲ್‌ ಪ್ಯಾರಾಲಿಸಿಸ್‌ ಹಂತ ತಲುಪಿದ ಬಳಿಕ ಸ್ನಾಯುಗಳ ದೌರ್ಬಲ್ಯವು ಶಾಶ್ವತವಾಗಿರುತ್ತದೆ.

ಚಿಕಿತ್ಸೆ ಹೇಗೆ?
ಕಾಯಿಲೆಯ ಹಂತವನ್ನು ಅವಲಂಬಿಸಿ ಪಟ್ಟಿಕಟ್ಟು (ಸ್ಪ್ಲಿಂಟ್‌) ಅಥವಾ ಶಸ್ತ್ರಕ್ರಿಯೆಯ ಮೂಲಕ ಚಿಕಿತ್ಸೆ ನೀಡಲಾಗುತ್ತದೆ.ಶಾಶ್ವತ ಪೋಲಿಯೋಕ್ಕೆ ಒಳಗಾಗಿರುವ ಅನೇಕ ಮಂದಿ ಭಾರತದಲ್ಲಿದ್ದಾರೆ. 2014ರಲ್ಲಿ ಭಾರತವು ಪೋಲಿಯೋ ಮುಕ್ತ ದೇಶವಾಯಿತು. ಆದರೆ 2014ಕ್ಕಿಂತ ಹಿಂದೆ ದೇಶದಲ್ಲಿ ಪೋಲಿಯೋ ಭಾದೆಗೊಳಗಾಗದ ಮಕ್ಕಳು ಅದರಿಂದ ಉಂಟಾದ ಶಾಶ್ವತ ಅಂಗವೈಕಲ್ಯದೊಂದಿಗೆ ಜೀವಿಸುತ್ತಿದ್ದಾರೆ. ಇಂತಹ ಶಾಶ್ವತ ಪೋಲಿಯೋ ಅಂಗವೈಕಲ್ಯವನ್ನು ಹೊಂದಿರುವ ಹದಿಹರಯದ ಅಥವಾ ಪ್ರೌಢ ರೋಗಿಗಳಿಗೆ ಆಥೊìಪೆಡಿಕ್‌ ಶಸ್ತ್ರಚಿಕಿತ್ಸಾ ತಜ್ಞ ವೈದ್ಯರು ಚಿಕಿತ್ಸೆ ನೀಡುತ್ತಾರೆ.

ಶಾಶ್ವತ ಹಂತದಲ್ಲಿ ಚಲನೆಯ ದೌರ್ಬಲ್ಯ, ಸ್ನಾಯು ಅಸಮತೋಲನ, ಸಂಧಿಗಳ ರಚನೆಯಲ್ಲಿ ವೈಕಲ್ಯ, ಸಂಧಿಗಳ ಅಸ್ಥಿರತೆ ಮತ್ತು ಕಾಲುಗಳು ಕುಬjವಾಗಿರುವುದು ಪ್ರಧಾನ ತೊಂದರೆಗಳಾಗಿರುತ್ತವೆ. ಪೋಲಿಯೋಕ್ಕೆ ಚಿಕಿತ್ಸೆಯು ಅಂಗ ಕಾರ್ಯಚಟುವಟಿಕೆಗಳು ಪುನರ್‌ಸ್ಥಾಪನೆ, ಸ್ನಾಯು ಅಸಮತೋಲನವನ್ನು ಸರಿಪಡಿಸುವುದು, ಸಂಧಿಗಳ ವಿರೂಪವನ್ನು ತಡೆಯುವುದು ಮತ್ತು ಸರಿಪಡಿಸುವುದು, ಅಸ್ಥಿರ ಸಂಧಿಗಳನ್ನು ಸ್ಥಿರಗೊಳಿಸುವುದು ಮತ್ತು ಕಾಲುಗಳ ಉದ್ದವನ್ನು ಸಮಾನಗೊಳಿಸುವುದನ್ನು ಒಳಗೊಂಡಿದೆ. ತೊಂದರೆಗಳ ಲಕ್ಷಣಗಳು ಮತ್ತು ಗಂಭೀರತೆಯನ್ನು ಆಧರಿಸಿ ಚಿಕಿತ್ಸೆಗೆ ಒಳಪಡಿಸಲಾಗುತ್ತದೆ. ಪೋಲಿಯೋಗೆ ಚಿಕಿತ್ಸೆಯು ಶಸ್ತ್ರಕ್ರಿಯೇತರ ಮತ್ತು ಶಸ್ತ್ರಕ್ರಿಯಾತ್ಮಕ ಕ್ರಮಗಳನ್ನು ಒಳಗೊಂಡಿರುತ್ತದೆ. ಶಸ್ತ್ರಕ್ರಿಯೇತರ ವಿಧಾನಗಳಲ್ಲಿ ಕಾಸ್ಟ್‌, ಬ್ರೇಸ್‌ ಮತ್ತು ಟ್ರ್ಯಾಕ್ಷನ್‌ ಒಳಗೊಂಡಿರುತ್ತದೆ. ಶಸ್ತ್ರಕ್ರಿಯಾತ್ಮಕ ಕ್ರಮಗಳಲ್ಲಿ ಟೆಂಡನ್‌ ಸ್ನಾಯುಗಳನ್ನು ಉದ್ದಗೊಳಿಸುವುದು, ಟೆಂಡರ್‌ ವರ್ಗಾವಣೆ, ಓಸ್ಟಿಯೊಟೊಮಿ ಹಾಗೂ ಸಂಧಿಯ ಶಸ್ತ್ರಕ್ರಿಯಾತ್ಮಕ ಫ್ಯೂಶನ್‌ ಸೇರಿವೆ. ಸಣ್ಣ ಮಕ್ಕಳಲ್ಲಿ ಬ್ರೇಸಿಂಗ್‌ ಪ್ರಯೋಜನಕಾರಿಯಾಗಿದ್ದರೆ ಓಸ್ಟಿಯೊಟೊಮಿ, ಟೆಂಡನ್‌ ಟ್ರಾನ್ಸ್‌ಫ‌ರ್‌ ಮತ್ತು ಸಂಧಿಗಳ ಶಸ್ತ್ರಕ್ರಿಯಾತ್ಮಕ ಫ್ಯೂಶನ್‌ ರೆಸಿಡುವಲ್‌ ಪೋಲಿಯೋ ಹೊಂದಿರುವ ವಯಸ್ಕರಿಗೆ ಪ್ರಯೋಜನಕಾರಿ.

ತಡೆಗಟ್ಟುವುದು ಹೇಗೆ?
ಸರಿಯಾದ ಸಮಯದಲ್ಲಿ ಸಮರ್ಪಕವಾದ ಲಸಿಕೆ ಹಾಕಿಸಿಕೊಳ್ಳುವುದರ ಮೂಲಕ ಪೋಲಿಯೋವನ್ನು ತಡೆಗಟ್ಟಬಹುದು. ಎರಡು ವಿಧವಾದ ಲಸಿಕೆಗಳಿವೆ; ಒಂದನೆಯದು ಬಾಯಿಗೆ ಹನಿ ರೂಪದಲ್ಲಿ ಹಾಕಲಾಗುವ ಓರಲ್‌ ಪೋಲಿಯೋ ವ್ಯಾಕ್ಸಿನೇಶನ್‌ (ಒಪಿವಿ) ಮತ್ತು ಎರಡನೆಯದು ನಿಶ್ಚೇತನಗೊಳಿಸಿದ ಇನ್ಯಾಕ್ಟಿವೇಟೆಡ್‌ ಪೊಲಿಯೋ ವ್ಯಾಕ್ಸಿನೇಶನ್‌ (ಐಪಿವಿ). ತರಬೇತಿ ಹೊಂದಿದ ಪರಿಣಿತರು ಇಂಜೆಕ್ಷನ್‌ ಮೂಲಕ ಐಪಿವಿಯನ್ನು ನೀಡುತ್ತಾರೆ. ಭಾರತವು ಸಮಗ್ರ ಲಸಿಕೆ ಕಾರ್ಯಕ್ರಮಕ್ಕಾಗಿ ಬಾಯಿಗೆ ಹನಿ ರೂಪದಲ್ಲಿ ಹಾಕುವ ಒಪಿವಿಯನ್ನು ಉಪಯೋಗಿಸುತ್ತದೆ. ಪ್ರತಿ ಶಿಶುವೂ ಜನನ ಸಂದರ್ಭದಲ್ಲಿ ಬಾಯಿಯ ಮೂಲಕ ಹನಿರೂಪದಲ್ಲಿ ಹಾಕಲಾಗುವ ಪೋಲಿಯೋ ಲಸಿಕೆಯನ್ನು ಹಾಕಿಸಿಕೊಳ್ಳಬೇಕು. ಆ ಬಳಿಕ ಜನನ ಬಳಿಕ ಮೊದಲ ತಿಂಗಳಿನಲ್ಲಿ ಮೂರು ಡೋಸ್‌ಗಳನ್ನು ನೀಡಲಾಗುತ್ತದೆ. ಪ್ರತೀ ಮಗುವಿನ ಬಾಯಿಗೆ ಎರಡು ಹನಿಗಳ ರೂಪದಲ್ಲಿ ಈ ಲಸಿಕೆಯನ್ನು ನೀಡಲಾಗುತ್ತದೆ. ಪೋಲಿಯೋ ವೈರಸ್‌ನ ಪ್ರಸರಣವನ್ನು ತಡೆಯಲು ಬರೇ ಮೂರು ಡೋಸ್‌ ಲಸಿಕೆಗಳು ಸಾಕಾಗುವುದಿಲ್ಲ. ಹೀಗಾಗಿ ಪೋಲಿಯೋ ವೈರಸ್‌ ನಿರ್ಮೂಲನೆಗೊಳಿಸುವುದಕ್ಕಾಗಿ ಪ್ರತೀ ಮಗುವೂ ಸಾಮೂಹಿಕ ಪೋಲಿಯೋ ಲಸಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಲಸಿಕೆ ಹಾಕಿಸಿಕೊಳ್ಳುವುದು ಅವಶ್ಯ. 1990ರ ದಶಕದ ಅಂತ್ಯಭಾಗದಲ್ಲಿ ಪೋಲಿಯೋ ನಿರ್ಮೂಲನೆಗಾಗಿ ಸರಕಾರವು ಪಲ್ಸ್‌ ಪೋಲಿಯೋ ಲಸಿಕೆ ಕಾರ್ಯಕ್ರಮವನ್ನು ಆರಂಭಿಸಿತು.

ಸರಕಾರಿ ಮತ್ತು ಸರಕಾರೇತರ
ಸಂಸ್ಥೆಗಳ ಉತ್ಕೃಷ್ಟ ಕಾರ್ಯ ನಿರ್ವಹಣೆಯಿಂದಾಗಿ ಪೋಲಿಯೋ ವೈರಸ್‌ ಮೇಲಿನ ನಿಯಂತ್ರಣವನ್ನು ಪಲ್ಸ್‌ ಪೋಲಿಯೋ ಲಸಿಕೆ ಕಾರ್ಯಕ್ರಮದ ಮೂಲಕ ಸಾಧಿಸಲಾಗಿದೆ. ಭಾರತದಲ್ಲಿ ಈ ಸಾಮೂಹಿಕ ಲಸಿಕೆ ಕಾರ್ಯಕ್ರಮಕ್ಕಾಗಿ ಒಪಿವಿಯನ್ನು ಉಪಯೋಗಿಸಲಾಗುತ್ತಿದೆ. ಐದು ವರ್ಷ ವಯಸ್ಸಿಗಿಂತ ಕಡಿಮೆ ವಯಸ್ಸಿನ ಪ್ರತೀ ಮಗುವಿಗೂ ಲಸಿಕೆ ಹಾಕುವ ಮೂಲಕ ಸಂಪೂರ್ಣ ಭಾರತವನ್ನು ಪೋಲಿಯೋ ಮುಕ್ತವನ್ನಾಗಿಸುವ ಗುರಿಯೊಂದಿಗೆ ನಡೆಸಲಾಗುತ್ತಿರುವ ಕಾರ್ಯಕ್ರಮವೇ ಪಲ್ಸ್‌ ಪೋಲಿಯೋ ಅಭಿಯಾನ.

ಎಲ್ಲ ಮಕ್ಕಳೂ ಪಲ್ಸ್‌
ಪೋಲಿಯೋ ಕಾರ್ಯಕ್ರಮದಡಿ ಒಳಗೊಂಡು ಪೋಲಿಯೋ ಲಸಿಕೆಯನ್ನು ಪಡೆಯುವುದನ್ನು ಖಾತರಿಗೊಳಿಸುವುದಕ್ಕಾಗಿ ಸರಕಾರವು ಸಮರ್ಪಕ ಕ್ರಮಗಳನ್ನು ತೆಗೆದುಕೊಂಡಿದೆ. ಅತಿ ಕುಗ್ರಾಮ, ಅತ್ಯಂತ ದುರ್ಗಮ ಪ್ರದೇಶದ ಮಕ್ಕಳನ್ನೂ ಸೇರಿಸಿ ಯಾವ ಶಿಶುವೂ ಹೊರಗುಳಿಯದಂತೆ ಪಲ್ಸ್‌ ಪೋಲಿಯೋ ಕಾರ್ಯಕ್ರಮವನ್ನು ನಡೆಸಲಾಗಿದೆ. ಯಾವುದೇ ಫ್ಲಾಸಿಡ್‌ ಲಕ್ವಾದ ಪ್ರಕರಣವೂ ವರದಿಯಾಗುವಿಕೆಯಿಂದ ಹೊರಗುಳಿಯದಂತೆ ಕಟ್ಟೆಚ್ಚರದ ಸಮೀಕ್ಷೆಯ ಜತೆಗೆ 2014ರಲ್ಲಿ ಭಾರತವನ್ನು ಪೋಲಿಯೋ ಮುಕ್ತ ಎಂಬುದಾಗಿ
ಘೋಷಿಸಲಾಗಿದೆ.

ಭವಿಷ್ಯ ಮತ್ತು ಸವಾಲುಗಳು
ಪಾಕಿಸ್ಥಾನ, ಅಫ್ಘಾನಿಸ್ಥಾನದಂತಹ ಕೆಲವು ದೇಶಗಳಲ್ಲಿ ಸಾರ್ವತ್ರಿಕ ಲಸಿಕೆ ಕಾರ್ಯಕ್ರಮಕ್ಕೆ ವಿರೋಧಗಳು ವ್ಯಕ್ತವಾಗಿವೆ. ಹೀಗಾಗಿ ಈ ದೇಶಗಳಲ್ಲಿ ಪೋಲಿಯೋ ಈಗಲೂ ಇದೆ. ಈ ದೇಶಗಳಲ್ಲಿ ಪೋಲಿಯೋ ವೈರಸ್‌ ಬಾಧಿಸಿದ ಹೊಸ ಪ್ರಕರಣಗಳು ಈಗಲೂ ವರದಿಯಾಗುತ್ತಿವೆ. ವೈರಸ್‌ಗೆ ರಾಜಕೀಯ ಅಥವಾ ಭೌಗೊಳಿಕ ಪರಿಧಿಗಳು ಲಕ್ಷ್ಯಕ್ಕಿಲ್ಲ. ಹೀಗಾಗಿ ಈ ಮಾರಕ ಕಾಯಿಲೆಯ ವಿರುದ್ಧ ಹೋರಾಟವನ್ನು ಸರಕಾರ ಇನ್ನು ಮುಂದೆಯೂ ಮುಂದುವರಿಸಬೇಕಾಗಿದೆ. ಜಗತ್ತಿನಿಂದ ಪೋಲಿಯೋ ವೈರಸ್‌ ನಿರ್ಮೂಲನೆಯಾಗಿಲ್ಲ, ಹೀಗಾಗಿ ಅದು ಮರುಕಳಿಸುವ ಭೀತಿ ಇದ್ದೇ ಇದೆ. ಒಪಿವಿ ಲಸಿಕೆಯಲ್ಲಿನ ವೈರಸ್‌ ಆಕಸ್ಮಿಕವಾಗಿ ಸಚೇತನಗೊಳ್ಳುವ ಅಪರೂಪದ ಸಾಧ್ಯತೆಯೂ ಇದೆ. ಪಿಲಿಪ್ಪೀನ್ಸ್‌ನಲ್ಲಿ ಹೊಸ ಪೋಲಿಯೋ ಪ್ರಕರಣ ಕಾಣಿಸಿಕೊಂಡಿರುವುದು ಇತ್ತೀಚೆಗೆ ವರದಿಯಾಗಿದೆ. ಇದು ಲಸಿಕೆಯಲ್ಲಿರುವ ದುರ್ಬಲ ವೈರಸ್‌ ಸಚೇತನಗೊಂಡಿರುವುದರಿಂದ ಆಗಿರಬಹುದು. ಆದರೆ ಅಲ್ಲಿ ಪೋಲಿಯೋ ಒಂದು ಸಾಂಕ್ರಾಮಿಕವಾಗಿ ತಲೆದೋರುವ ಸಾಧ್ಯತೆಯನ್ನು ವಿಶ್ವ ಆರೋಗ್ಯ ಸಂಸ್ಥೆಯು ತಳ್ಳಿಹಾಕಿದೆ. ಪಿಲಿಪ್ಪೀನ್ಸ್‌ನ “ಪೋಲಿಯೋ ಮುಕ್ತ’ ಸ್ಥಿತಿಗೆ ಇದು ಬಾಧಕವಾಗದು ಎಂಬುದಾಗಿ ಇಂಟರ್‌ನ್ಯಾಶನಲ್‌ ಪೋಲಿಯೋ ಪ್ಲಸ್‌ನ ಅಧ್ಯಕ್ಷ ಮೈಕೆಲ್‌ ಕೆ. ಮೆಕ್‌ಗವರ್ನ್ ಕೂಡ ಹೇಳಿದ್ದಾರೆ. ಲಸಿಕೆಯಿಂದ ಪೋಲಿಯೋ ವೈರಸ್‌ ಸಚೇತನಗೊಳ್ಳುವ ಸಾಧ್ಯತೆಗಳು ಅಲ್ಪವಾದರೂ ಇದ್ದೇ ಇದೆ. ಭಾರತವನ್ನು ಪೋಲಿಯೋ ಮುಕ್ತವಾಗಿ ಕಾಪಾಡಿಕೊಳ್ಳುವ ಸವಾಲು ಸರಕಾರದ ಮುಂದಿದೆ. ಭಾರತವನ್ನು ಪೋಲಿಯೋ ಮುಕ್ತವಾಗಿ ಇರಿಸಿಕೊಳ್ಳುವುದಕ್ಕಾಗಿ ಭಾರತೀಯ
ಆರೋಗ್ಯ ಸೇವಾ ವ್ಯವಸ್ಥೆಯು ಸಾರ್ವತ್ರಿಕ ಲಸಿಕೆ ಕಾರ್ಯಕ್ರಮವನ್ನು ಮುಂದುವರಿಸಲು ಮತ್ತು ಪ್ರತೀ ಮಗುವೂ ಸುರಕ್ಷಿತ ಪೋಲಿಯೋ ಲಸಿಕೆಯನುನ ಪಡೆಯುವುಂತಾಗುವುದಕ್ಕಾಗಿ ಭಾರತೀಯ ಆರೋಗ್ಯ ಸೇವಾ ವ್ಯವಸ್ಥೆಯು ಶ್ರಮಿಸಬೇಕಾಗಿದೆ. ಪೋಲಿಯೋ ಮುಕ್ತ ಸ್ಥಿತಿಯಲ್ಲಿ ಬದುಕುವುದಕ್ಕಾಗಿ ಪ್ರತೀ ಮಗುವು ಕೂಡ ಜನಿಸಿದ ಬಳಿಕ ಮೊದಲ ವರ್ಷದಲ್ಲಿ ಕನಿಷ್ಠ ನಾಲ್ಕು ಡೋಸ್‌ಗಳಾದರೂ ಪೋಲಿಯೋ ಲಸಿಕೆಯನ್ನು ಪಡೆಯಬೇಕಾಗಿದೆ.

ಡಾ| ಹಿತೇಶ್‌ ಶಾ ,
ಪೀಡಿಯಾಟ್ರಿಕ್‌ ಓಥೊìಪೆಡಿಕ್ಸ್‌ ಸರ್ವೀಸಸ್‌
ಕೆಎಂಸಿ, ಮಣಿಪಾಲ

ಟಾಪ್ ನ್ಯೂಸ್

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ

1-24-tuesday

Daily Horoscope: ಹಿತವಾದುದನ್ನು ಮಾತ್ರ ಆರಿಸಿಕೊಳ್ಳುವುದು ವಿವೇಕಿಗಳ ಲಕ್ಷಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3–child-growth

Child Growth: ಮಕ್ಕಳು ಬೇಗನೇ ದೊಡ್ಡವರಾಗುವುದು

2-bamboo-brush

Bamboo:ಶುದ್ಧ ಮತ್ತು ಹಸುರು ಪರಿಸರ ಕಾಯ್ದುಕೊಳ್ಳಲು ಹಲ್ಲುಜ್ಜುವ ಬಿದಿರಿನಬ್ರಶ್‌ ಮೊರೆಹೋಗಿ

2-kidney-day

World Kidney Day: ಹಿಮೋಡಯಾಲಿಸಿಸ್‌: ಯಾವಾಗ ಅಗತ್ಯ? ಯಾಕೆ ಆವಶ್ಯಕ? ಕಾರ್ಯನಿರ್ವಹಣೆ ಹೇಗೆ?

3-health

Rare diseases: ಅಪರೂಪದ ರೋಗಗಳು: ಕೆಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

4-cholestral

Cholesterol: ಕೊಲೆಸ್ಟರಾಲ್‌ ತಗ್ಗಿಸುವ ಔಷಧ ಸ್ಟಾಟಿನ್‌

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.