ಮಕ್ಕಳಲ್ಲಿ ಬೇಸಗೆ ಅನಾರೋಗ್ಯ ಉಲ್ಬಣಕ್ಕೆ ತಡೆ
Team Udayavani, May 15, 2022, 12:03 PM IST
ಬೇಸಗೆ ಈಗ ಉಚ್ಛ್ರಾಯ ಸ್ಥಿತಿಯಲ್ಲಿದೆ. ಮಕ್ಕಳು ಬೇಸಗೆ ರಜೆಯಲ್ಲಿ ಅನೇಕ ವಿಧವಾದ ಚಟುವಟಿಕೆಗಳು/ ರಜಾ ಶಿಬಿರಗಳಲ್ಲಿ ತೊಡಗಿಕೊಳ್ಳುವುದು ವಾಡಿಕೆ. ಬೇಸಗೆಯಲ್ಲಿ ಬಿರುಬಿಸಿಲಿನಿಂದಾಗಿ ಮಕ್ಕಳಲ್ಲಿ ಕೆಲವು ಅನಾರೋಗ್ಯಗಳು ಕಾಣಿಸಿಕೊಳ್ಳುತ್ತವೆ. ಅವುಗಳಲ್ಲಿ ಬಿಸಿಲಿನ ಆಘಾತ, ಸೆಕೆಬೊಕ್ಕೆಗಳು, ನಿರ್ಜಲೀಕರಣ, ಸ್ವಿಮ್ಮರ್ ಇಯರ್ (ಒಟಿಟಿಸ್ ಎಕ್ಸ್‌ಟರ್ನಾ), ಫುಡ್ ಪಾಯ್ಸನಿಂಗ್, ಅಲರ್ಜಿಕ್ ರಿನಿಟಿಸ್, ಇಶೆಮಾ ಸಾಮಾನ್ಯ.
ಆದ್ದರಿಂದ ಹೆತ್ತವರು ಮತ್ತು ಮಕ್ಕಳು ಈ ಅನಾರೋಗ್ಯಗಳು ಉಂಟಾಗದಂತೆ ಕೆಲವು ಮುನ್ನೆಚ್ಚರಿಕೆಯ ಕ್ರಮ ತೆಗೆದುಕೊಳ್ಳಬೇಕು.
ಬಿಸಿಲಾಘಾತ
ಬಿರುಬಿಸಿಲಿಗೆ ಹೆಚ್ಚು ಕಾಲ ಒಡ್ಡಿಕೊಳ್ಳುವುದರಿಂದ ಬಿಸಿಲಾಘಾತ (ಸನ್ ಸ್ಟ್ರೋಕ್) ಉಂಟಾಗುತ್ತದೆ. ಇದರಿಂದ ದೇಹದ ಉಷ್ಣತೆ ಅಪಾಯಕಾರಿ ಮಟ್ಟಕ್ಕೆ ಏರಬಹುದು. ಪರಿಣಾಮವಾಗಿ ಹೃದಯ ಬಡಿತದ ವೇಗ ಹೆಚ್ಚಳ, ಗೊಂದಲ- ಸ್ಥಿಮಿತ ತಪ್ಪುವುದು, ತಲೆ ತಿರುಗುವಿಕೆ, ನಾಲಗೆ ಒಣಗಿ ಊದಿಕೊಳ್ಳುವುದು, ಚರ್ಮ ಬೆಚ್ಚಗಾಗುವುದು ಉಂಟಾಗಬಹುದು. ಕೆಲವೊಮ್ಮೆ ಬಿಸಿಲಾಘಾತ ತೀವ್ರವಾಗಿದ್ದರೆ ವ್ಯಕ್ತಿಯು ಮೂರ್ಛೆ ತಪ್ಪಲೂ ಬಹುದು. ಬಿಸಿಲಾಘಾತಕ್ಕೆ ಒಳಗಾದ ವ್ಯಕ್ತಿಯನ್ನು ತತ್‌ಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಬೇಕಾದ ಅಗತ್ಯವಿರುತ್ತದೆ. ಬಿಸಿಲಾಘಾತದಿಂದ ತಪ್ಪಿಸಿಕೊಳ್ಳಲು ಹಗಲಿನಲ್ಲಿ ಮಕ್ಕಳು ಆದಷ್ಟು ನೆರಳಿನಲ್ಲಿ ಇರುವಂತೆ ನೋಡಿಕೊಳ್ಳಿ. ಹೊರಾಂಗಣ ಚಟುವಟಿಕೆಗಳನ್ನು ಬೆಳಗ್ಗೆ ಮತ್ತು ಸಂಜೆಯ ಹೊತ್ತು ಮಾತ್ರ ನಡೆಸಬೇಕು. ಜತೆಗೆ ಮಕ್ಕಳು ಸಾಕಷ್ಟು ನೀರು, ದ್ರವಾಹಾರ ಸೇವಿಸುವ ಮೂಲಕ ಅವರ ದೇಹದಲ್ಲಿ ನೀರಿನಂಶ ಸಮೃದ್ಧವಾಗಿರುವಂತೆ ನೋಡಿಕೊಳ್ಳಿ. ಮಕ್ಕಳು ಮನೆಯಿಂದ ಹೊರಗೆ ಹೋಗುವಾಗಲೆಲ್ಲ ನೀರಿನ ಬಾಟಲಿ ಜತೆಗೊಯ್ಯಲು ಮರೆಯದಿರಲಿ.
ಒಟಿಟಿಸ್ ಎಕ್ಸ್‌ಟರ್ನಾ
ಸಾಮಾನ್ಯವಾಗಿ ಸ್ವಿಮರ್ ಇಯರ್ ಎಂಬುದಾಗಿ ಕರೆಯಲ್ಪಡುವ ಈ ತೊಂದರೆಯಲ್ಲಿ ಕಿವಿಯಲ್ಲಿ ತುರಿಕೆ, ನೋವು ಮತ್ತು ಕಿವಿ ಸೋರುವಿಕೆ ಕಾಣಿಸಿಕೊಳ್ಳುತ್ತದೆ. ನೀರು ಶುದ್ಧೀಕರಿಸಲ್ಪಡದ ಕೆರೆ, ಕೊಳಗಳಲ್ಲಿ ಈಜಾಡುವುದರಿಂದ ಈ ಸಮಸ್ಯೆ ಉಂಟಾಗುತ್ತದೆ. ಕಿವಿಯೊಳಗೆ ನೀರು ಸೇರಿಕೊಂಡು ಬ್ಯಾಕ್ಟೀರಿಯಾ ಬೆಳವಣಿಗೆಗೆ ಕಾರಣವಾಗಿ ಸೋಂಕು ಉಂಟಾಗುತ್ತದೆ. ಈ ಸಮಸ್ಯೆ ಉಂಟಾದರೆ ವೈದ್ಯರನ್ನು ಸಂಪರ್ಕಿಸಬೇಕು, ಅವರು ಆ್ಯಂಟಿಬಯಾಟಿಕ್ ಇಯರ್ ಡ್ರಾಪ್ ಹಾಕುವ ಚಿಕಿತ್ಸೆಯನ್ನು ಸೂಚಿಸುತ್ತಾರೆ. ಶುದ್ಧೀಕರಿಸದ ಕೆರೆ, ಕೊಳಗಳಲ್ಲಿ ಈಜಾಡದಿರುವುದು ಈ ಸೋಂಕಿನಿಂದ ರಕ್ಷಿಸಿಕೊಳ್ಳುವ ಮಾರ್ಗ. ಈಜುಕೊಳಗಳಲ್ಲಿ ಈಜಾಡುವಾಗ ಇಯರ್ ಪ್ಲಗ್ ಉಪಯೋಗಿಸಬೇಕು.
ಫುಡ್ ಪಾಯ್ಸನಿಂಗ್
ಹಾಳಾದ, ಮಲಿನ ಆಹಾರವಸ್ತುಗಳು ಮತ್ತು ನೀರಿನ ಬಳಕೆಯಿಂದ ಫುಡ್ ಪಾಯ್ಸನಿಂಗ್ ಉಂಟಾಗಬಹುದು. ಬೇಯಿಸದ ಆಹಾರ/ ಸರಿಯಾಗಿ ಬೇಯಿಸದ ಮಾಂಸ/ ಆಹಾರವನ್ನು ಸರಿಯಾಗಿ ದಾಸ್ತಾನು ಮಾಡದೆ ಇರುವುದು/ ರಸ್ತೆ ಬದಿ ಮಾರಾಟಗಾರರಿಂದ ಆಹಾರ ಖರೀದಿಸಿ ಸೇವಿಸುವುದು ಇದಕ್ಕೆ ಕಾರಣವಾಗುತ್ತದೆ. ಇಂತ ಆಹಾರಗಳಲ್ಲಿ ಕಾಯಿಲೆ ಉಂಟು ಮಾಡುವ ಸೂಕ್ಷ್ಮಜೀವಿಗಳಿದ್ದು, ಫುಡ್ ಮಕ್ಕಳಲ್ಲಿ ಉಲ್ಬ ಣಕ್ಕೆ ತಡೆ ಬೇಸಗೆ ಅನಾರೋಗ್ಯ ನಿರ್ಜಲೀಕರಣ ನಾವು ಕುಡಿಯುವ ನೀರು, ದ್ರವಾಹಾರದ ಪ್ರಮಾಣವು ದೇಹದಿಂದ ಬೆವರು ಮತ್ತಿತರ ರೂಪದಲ್ಲಿ ನಷ್ಟವಾಗುವ ಪ್ರಮಾಣಕ್ಕಿಂತ ಕಡಿಮೆ ಇದ್ದಾಗ ಈ ಸಮಸ್ಯೆ ಉಂಟಾಗುತ್ತದೆ. ಬೇಸಗೆ ಕಾಲದಲ್ಲಿ ನಮಗೆ ಗೊತ್ತಿಲ್ಲದಂತೆಯೇ ನೀರಿನಂಶ ಮತ್ತು ಉಪ್ಪಿನಂಶಗಳು ದೇಹದಿಂದ ನಷ್ಟವಾಗುತ್ತಿರುತ್ತವೆ. ನಮ್ಮ ದೇಹ ಸರಿಯಾಗಿ ಕಾರ್ಯನಿರ್ವಹಿಸುವುದಕ್ಕೆ ನಷ್ಟವಾಗಿರುವ ಈ ಅಂಶಗಳು ಮರುಪೂರಣವಾಗುವುದು ಆವಶ್ಯಕ. ಮಕ್ಕಳು ಸಾಕಷ್ಟು ನೀರು ಕುಡಿಯುವಂತೆ ನೋಡಿಕೊಳ್ಳಿ ಮತ್ತು ಹೆಚ್ಚುವರಿ ಸಕ್ಕರೆಯಂಶ ಹೊಂದಿರುವ ಜ್ಯೂಸ್ ಅಥವಾ ಸೋಡಾ ಪಾನೀಯಗಳ ಬದಲಾಗಿ ತಾಜಾ ಹಣ್ಣುಗಳನ್ನು ತಿನ್ನುವಂತೆ ನೋಡಿಕೊಳ್ಳಿ ಪಾಯ್ಸನಿಂಗ್ ಉಂಟಾಗಬಹುದು. ಇದು ಹಾಳಾದ/ ಕಲುಷಿತ ಆಹಾರ ದಲ್ಲಿರುವ ಬ್ಯಾಕ್ಟೀರಿಯಾ, ವೈರಸ್ ಗಳು, ವಿಷಾಂಶಗಳು ಮತ್ತು ರಾಸಾಯನಿಕ ಗಳಿಂದ ತಲೆದೋರುತ್ತದೆ. ಇಂತಹ ಆಹಾರಗಳನ್ನು ಸೇವಿಸಿ ದಾಗ ಅಜೀರ್ಣ ಉಂಟಾಗಿ ಹೊಟ್ಟೆನೋವು, ಹೊಟ್ಟೆ ತೊಳೆಸುವಿಕೆ, ಬೇಧಿ ಅಥವಾ ವಾಂತಿ ಉಂಟಾಗುತ್ತದೆ. ಇಂಥ ಆಹಾರವಸ್ತುಗಳನ್ನು ಸೇವಿಸಬಾರದು. ಜತೆಗೆ ಪಿಕ್ನಿಕ್ ಹೋಗುವಂತಹ ಸಂದರ್ಭಗಳಲ್ಲಿ ಬೇಗನೆ ಹಾಳಾಗದಂತಹ ತಾಜಾ ಹಣ್ಣು ಮತ್ತು ತರಕಾರಿಗಳು ಅಥವಾ ಇತರ ಸಾಮಗ್ರಿಗಳಿಂದ ಖಾದ್ಯಗಳನ್ನು ತಯಾರಿಸಿ ಕೊಂಡೊಯ್ಯಿರಿ.
ಅಲರ್ಜಿಕ್ ರಿನಿಟಿಸ್
ಹೈ ಫಿವರ್ ಎಂದೂ ಕರೆಯಲ್ಪಡುವ ಈ ತೊಂದರೆಯು ಪರಾಗ ರೇಣುಗಳು, ಪ್ರಾಣಿಗಳ ಕೂದಲು, ಹುಲ್ಲಿನ ಸೂಕ್ಷ್ಮ ಬೀಜಗಳು ಮತ್ತು ಕೀಟಗಳಿಗೆ ಅಲರ್ಜಿಯಿಂದ ಉಂಟಾಗು ತ್ತದೆ. ಸೀನು, ಮೂಗು ಕಟ್ಟುವುದು ಮತ್ತು ಮೂಗು, ಗಂಟಲು, ಬಾಯಿ ಮತ್ತು ಕಣ್ಣುಗಳಲ್ಲಿ ಕಿರಿಕಿರಿ ಇದರ ಲಕ್ಷಣ ಗಳು. ಬೇಸಗೆ ಕಾಲದಲ್ಲಿ ಈ ತೊಂದರೆ ಸಾಮಾನ್ಯ.
ಇಶೆಮಾ
ದೇಹದಲ್ಲಿ ಚರ್ಮವಿಡೀ ತುರಿಕೆಯ ದದ್ದುಗಳು ಕಾಣಿಸಿಕೊಳ್ಳುವ ಇಶೆಮಾ ಪದೇಪದೆ ಕಾಣಿಸಿ ಕೊಳ್ಳುತ್ತದೆ. ಇಶೆಮಾಕ್ಕೆ ಅಲರ್ಜಿ ಕಾರಣ ವಾಗಿದ್ದು, ಇದು ಬೇಸಗೆಯಲ್ಲಿ ಉಲ್ಬಣಗೊಳ್ಳಬಹುದು. ಕ್ಲೋರಿನ್ ಮತ್ತು ಬಿಸಿಲಿಗೆ ಒಡ್ಡಿ ಕೊಳ್ಳುವುದರಿಂದ ಚರ್ಮ ಒಣಗಿ ಕಿರಿಕಿರಿ ಉಂಟು ಮಾಡಬಹುದು. ಹೆಚ್ಚು ಬೆವರುವುದರಿಂದ ಇಶೆಮಾ ಉಲ್ಬಣಗೊಳ್ಳಬಹುದು. ನಿಮ್ಮ ಮಗುವಿಗೆ ಇಶೆಮಾ ಇದ್ದಲ್ಲಿ ಅವರ ತ್ವಚೆಯನ್ನು ಆಗಾಗ ಶುಭ್ರ ಹತ್ತಿಬಟ್ಟೆಯಲ್ಲಿ ಒರೆಸುತ್ತಿರಿ. ಪ್ರತೀದಿನ ಮಗುವಿನ ಚರ್ಮಕ್ಕೆ ಉತ್ತಮ ಗುಣಮಟ್ಟದ ಮಾಯಿಶ್ಚರೈಸ್ ಮತ್ತು ಹೈಪೊಅಲರ್ಜನಿಕ್ ಹಚ್ಚಬೇಕು. ಮಕ್ಕಳ ಚರ್ಮಕ್ಕೆ ಗಾಳಿಯಾಡುವಂತೆ ಸಡಿಲವಾದ ಹತ್ತಿಯ ಬಟ್ಟೆಗಳನ್ನು ತೊಡಲು ಕೊಡಿ.
ಹೊರಾಂಗಣದಲ್ಲಿ ಕಾಲ ಕಳೆಯುವಾಗ ಕೀಟವರ್ಜಕ ಗಳನ್ನು ಉಪಯೋಗಿಸಿ. ಉಣ್ಣಿಗಳು, ಸೊಳ್ಳೆಗಳಿಂದ ರೋಗ ಗಳು ಹರಡುತ್ತವೆ. ಇವುಗಳಲ್ಲಿ ಲೈಮ್ ಡಿಸೀಸ್, ವಿವಿಧ ಬಗೆಯ ಎನ್‌ಸೆಫಲೈಟಿಸ್‌ಗಳು, ಮಲೇರಿಯಾ ಸೇರಿವೆ. ಹೀಗಾಗಿ ಮಕ್ಕಳಿಗೆ ಕೀಟ ವರ್ಜಕ ಹಚ್ಚುವುದು ಉಪಯುಕ್ತ. ಕೆಲವು ಬಗೆಯ ಕೀಟಗಳ ಕಡಿತಕ್ಕೆ ಮಕ್ಕಳಲ್ಲಿ ಅಲರ್ಜಿ ಉಂಟಾಗಬಹುದು. ಹೀಗಾಗಿ ಹೊರಗೆ ಕಾಲ ಕಳೆಯುವಾಗ ಮೈಪೂರ್ತಿ ಮುಚ್ಚುವ ಬಟ್ಟೆಬರೆ ಧರಿಸಲು ಹೇಳಿ.
ಸೆಕೆ ಬೊಕ್ಕೆಗಳು (ಬೆವರುಸಾಲೆ)
ದೇಹದಲ್ಲಿ ಬಟ್ಟೆಯಿಂದ ಮುಚ್ಚಿಕೊಳ್ಳುವ ಭಾಗಗಳಲ್ಲಿ ಕೆಂಪನೆಯ ಅಥವಾ ಗುಲಾಬಿ ಬಣ್ಣದ ಬೊಕ್ಕೆಗಳು ಕಾಣಿಸಿಕೊಳ್ಳುತ್ತವೆ. ಚರ್ಮದಲ್ಲಿರುವ ಬೆವರು ರಂಧ್ರಗಳು ಮುಚ್ಚಿಹೋಗುವುದರಿಂದ ಈ ಗುಳ್ಳೆಗಳು ಅಥವಾ ಸಣ್ಣ ಮೊಡವೆಗಳಂತಹ ಬೆವರು ಸಾಲೆಗಳು ಉಂಟಾಗುತ್ತವೆ. ಇದರಿಂದ ತುರಿಕೆ, ಕಿರಿಕಿರಿ ಉಂಟಾಗುತ್ತದೆ. ಬೆವರು ಸಾಲೆ ಉಂಟಾಗದಂತಿರಲು ಗಾಳಿ ಓಡಿಯಾಡುವಂತಹ ಹತ್ತಿಯ ಬಟ್ಟೆಗಳನ್ನು ಧರಿಸಿ.
-ಡಾ| ಜಯಶ್ರೀ ಕೆ. ಅಸೋಸಿಯೇಟ್ ಪ್ರೊಫೆಸರ್, ಪೀಡಿಯಾಟ್ರಿಕ್ಸ್ ವಿಭಾಗ ಕೆಎಂಸಿ, ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬಂಟ್ವಾಳ: ಶೆಡ್ ಮೇಲೆ ಗುಡ್ಡ ಕುಸಿದು ಗಾಯಗೊಂಡಿದ್ದ ಮತ್ತಿಬ್ಬರು ಸಾವು
ತನ್ನದೇ ದೇಶದ ಬಿಗ್ ಬಾಶ್ ತ್ಯಜಿಸುತ್ತಾರಾ ಡೇವಿಡ್ ವಾರ್ನರ್?
ಮುಂದುವರಿದ ಮಳೆ: ಶಿವಮೊಗ್ಗ ಜಿಲ್ಲೆಯ ಪ್ರಾಥಮಿಕ-ಪ್ರೌಢ ಶಾಲೆಗಳಿಗೆ ರಜೆ ಘೋಷಣೆ
ಮಂಗಳೂರು : ಹುಟ್ಟುವಾಗಲೇ ನವಜಾತ ಶಿಶುವಿನಲ್ಲಿ ಹಲ್ಲು! ವೈದ್ಯರು ಹೇಳಿದ್ದೇನು ಗೊತ್ತೆ ?
10 ಲಕ್ಷ ಮಕ್ಕಳಿಗಿಲ್ಲ ಶಿಕ್ಷಣ: ಕೋವಿಡ್ ತಂದಿಟ್ಟ ಆಘಾತ ಸಮೀಕ್ಷೆ ವಿವರ ಹೈಕೋರ್ಟ್ಗೆ