ರಸ್ತೆ ಅಪಘಾತ 


Team Udayavani, Jan 27, 2019, 12:30 AM IST

accident.jpg

ಕಂಡಾಗ ನಾವೇನು ಮಾಡಬಹುದು?
ನಮ್ಮ ದೇಶದಲ್ಲಿ  ಡೆಂಗ್ಯು ,ಮಲೇರಿಯಾ, ಕ್ಷಯ, ಕ್ಯಾನ್ಸರ್‌ನಂತಹ ಮಾರಣಾಂತಿಕ ಕಾಯಿಲೆಗಳ ಸಾಲಿಗೆ ಹೊಸದಾಗಿ ಸೇರ್ಪಡೆಗೊಂಡಿರುವ ಮಹಾಮಾರಿಯೆಂದರೆ ರಸ್ತೆ ಅಪಘಾತ. ಒಂದು ಅಂದಾಜಿನ ಪ್ರಕಾರ ನಮ್ಮ ದೇಶದಲ್ಲಿ ದಿನಕ್ಕೆ ಸುಮಾರು 400 ಮಂದಿ ರಸ್ತೆ ಅಪಘಾತಗಳಿಗೆ ಬಲಿಯಾಗುತ್ತಿದ್ದಾರೆ. ಇನ್ನು ಗಾಯಗೊಂಡು  ಅಂಗಾಂಗ ಊನಗೊಂಡವರೆಷ್ಟೋ? ರಸ್ತೆ ಅಪಘಾತದ ಬಲಿಪಶುಗಳಲ್ಲಿ ಹೆಚ್ಚಿನವರು ಯುವಜನರು ಎಂಬುದು ನಮ್ಮ ಸಮಾಜದ ದುರಂತಗಳಲ್ಲಿ ಒಂದು. ಹೆಚ್ಚಿನ ಸಲ ನಾವು ರಸ್ತೆ ಅಪಘಾತದ ಸುದ್ದಿಯನ್ನು ಪತ್ರಿಕೆಗಳಲ್ಲಿ  ಓದಿ ಮರೆತು ಬಿಡುತ್ತೇವೆ.”ಈ ಸಮಸ್ಯೆಗೆ ಪರಿಹಾರ ಏನಿದ್ದರೂ ಸರಕಾರವೇ ಕಂಡುಹುಡುಕಬೇಕು’ ಎಂದು ಕೊಂಡು ನಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತೇವೆ. ವರ್ಷವೊಂದಕ್ಕೆ ಲಕ್ಷಾಂತರ ಮಂದಿಯನ್ನು ಬಲಿ ತೆಗೆದುಕೊಳ್ಳುವ ಈ ಪೀಡೆಯ ಬಗ್ಗೆ ಸಮಾಜವಿಂದು ಎಚ್ಚೆತ್ತು ಕೊಳ್ಳಲೇಬೇಕಾಗಿದೆ.

ರಸ್ತೆ ಅಪಘಾತಗಳನ್ನು ತಡೆಯುವುದು ಹೇಗೆ ಎಂಬುದರ ಬಗ್ಗೆ ಚರ್ಚಿಸುವುದು ಈ ಲೇಖನದ ಉದ್ದೇಶವಲ್ಲ. ಈ ನಿಟ್ಟಿನಲ್ಲಿ ಸರಕಾರದ ಪಾತ್ರವೇ ಮುಖ್ಯ. ವೈಜ್ಞಾನಿಕವಾದ ರಸ್ತೆ ನಿರ್ಮಾಣ, ಸೂಕ್ತ ಸಂಚಾರ ನಿಯಂತ್ರಣ, ನಿಯಮ ಉಲ್ಲಂ ಸಿದವರಿಗೆ ತಕ್ಕ ಶಿಕ್ಷೆ, ಚಾಲನಾ ಪರವಾನಿಗೆ ಕೊಡುವಲ್ಲಿ ಹೆಚ್ಚಿನ ಕಟ್ಟು ನಿಟ್ಟು ಇತ್ಯಾದಿಗಳು ರಸ್ತೆ ಅಪಘಾತಗಳ ಸಂಖ್ಯೆಯನ್ನು ನಿಯಂತ್ರಿಸಬಲ್ಲವು. ಆದರೆ ಈ ಸಮಸ್ಯೆಯು ಪರಿಹಾರವಾಗಬೇಕಾದರೆ ಸಮಾಜದ ಉಡಾಫೆ ಮನೋಭಾವ ಬದಲಾಗುವುದೂ ಅಷ್ಟೇ ಮುಖ್ಯ.

ಸರಕಾರ ಹಾಗೂ ಸಮಾಜ ಎಷ್ಟೇ ಎಚ್ಚರ ವಹಿಸಿದರೂ ರಸ್ತೆ ಅಪಘಾತಗಳನ್ನು ಸಂಪೂರ್ಣವಾಗಿ ತಡೆಗಟ್ಟುವುದು ಅಸಾಧ್ಯ. ವಾಹನದಲ್ಲಿನ ತಾಂತ್ರಿಕ ದೋಷ, ಚಾಲಕನಿಗೆ ಉಂಟಾಗಬಹುದಾದ ದಿಢೀರ್‌ ಅನಾರೋಗ್ಯ, ಮಕ್ಕಳು ಯಾ ಪ್ರಾಣಿಗಳು ದಿಢೀರಾಗಿ ರಸ್ತೆಗಿಳಿಯುವುದು ಇತ್ಯಾದಿಗಳಿಂದಾಗುವ ಅಪಘಾತಗಳನ್ನು ತಡೆಯುವುದು ದುಸ್ಸಾಧ್ಯ. ಈ ರೀತಿಯಲ್ಲಿ ನೋಡಿದಾಗ ರಸ್ತೆ ಅಪಘಾತಗಳನ್ನು ನಿಯಂತ್ರಿಸುವುದರ ಜತೆಗೆ ಅಪಘಾತದ ಗಾಯಾಳುಗಳನ್ನು ಉಪಚರಿಸುವುದೂ ಸಮಾಜದ ಕರ್ತವ್ಯವೇ ಆಗಿದೆ. 

ರಸ್ತೆ ಅಪಘಾತ ನಡೆದಾಗ ಅದನ್ನು  ಕಂಡ ಇತರ ವಾಹನ ಚಾಲಕರು ಯಾ ಪಾದಚಾರಿಗಳು ಏನು ಮಾಡಬಹುದು ಎಂಬ ಬಗ್ಗೆ ಪ್ರಾಥಮಿಕ ಮಾಹಿತಿ ನೀಡುವುದಷ್ಟೇ ಈ ಲೇಖನದ ಉದ್ದೇಶ. ಎಷ್ಟೋ ಸಲ ಗಾಯಾಳುಗಳ ಅಪ್ರಬುದ್ಧ ನಿರ್ವಹಣೆಯಿಂದಲೂ ಗಾಯಾಳುಗಳು ಸಾವನ್ನಪ್ಪುವುದುಂಟು. ರಸ್ತೆ ಅಪಘಾತವೇ ಒಂದು ದುರಂತ. ಅದರ ಜತೆಗೆ ಗಾಯಾಳುಗಳ ನಿರ್ವಹಣೆಯ ಬಗೆಗಿನ ಅರಿವಿನ ಕೊರತೆಯಿಂದ ಬದುಕಬಹುದಾಗಿದ್ದ ಗಾಯಾಳುವೂ ಸಾವನ್ನಪ್ಪುವಂತಾದರೆ ಅದು ನಮ್ಮ ಸಾಮಾಜಿಕ ವ್ಯವಸ್ಥೆಗೇ ಕಳಂಕವೆನ್ನದೇ ವಿಧಿಯಿಲ್ಲ. ಅಪಘಾತವಾದಾಗ ಅದನ್ನು ಕಂಡ ಸಾರ್ವಜನಿಕರು ಯಾ ವಾಹನ ಚಾಲಕರು ಯಾವ ರೀತಿ ಪ್ರತಿಕ್ರಿಯಿಸಬಹುದು ಎಂಬುದನ್ನು ಸ್ಥೂಲವಾಗಿ ಈ ಕೆಳಗೆ ವಿವರಿಸಲಾಗಿದೆ.

1. ಸಹಾಯಕ್ಕಾಗಿ ನಿಲ್ಲಿಸಿ /ನಿಲ್ಲಿ  
(STOP FOR HELP)

ಎಷ್ಟೋ ಸಲ ನಮ್ಮ ಕಣ್ಣೆದುರಿಗೇ ಅಪಘಾತ ಸಂಭವಿಸಿದರೂ ಅಥವಾ ಅಪಘಾತದ ಗಾಯಾಳುಗಳು ರಸ್ತೆ ಪಕ್ಕದಲ್ಲಿ ಬಿದ್ದಿರುವುದನ್ನು ನೋಡಿದಾಗ್ಯೂ ನಾವು ನಮ್ಮ ವಾಹನವನ್ನು ನಿಲ್ಲಿಸಿ ಸಹಾಯಹಸ್ತ ಚಾಚಲು ಹಿಂದೆ ಮುಂದೆ ನೋಡುತ್ತೇವೆ. ಹಾಗೆ ಹೆದರುವವರು ಕಠಿನ ಹೃದಯದವರೆಂದೇನೂ ಅಲ್ಲ. ಆದರೆ ತಾವು ಸಹಾಯ ಮಾಡಲು ಹೋಗಿ ಕೊನೆಗೆ ತಮ್ಮ ಮೇಲೆಯೇ ಅಪವಾದ ಬಂದೀತೇನೋ ಅಥವಾ ಕೋರ್ಟ್‌, ಪೊಲೀಸ್‌ ಠಾಣೆಗಳಿಗೆ ಅಲೆದಾಡಬೇಕಾಗಬಹುದೇನೋ ಎಂಬ ಭೀತಿಯಿಂದ ಸಹೃದಯರೂ ತಮ್ಮ ವಾಹನ ನಿಲ್ಲಿಸುವ ಗೊಡವೆಗೇ ಹೋಗುವುದಿಲ್ಲ. ಈ ರೀತಿಯ ನಡವಳಿಕೆ ಅರ್ಥವಾಗುವಂಥದ್ದಾದರೂ ದುರದೃಷ್ಟಕರ. ಈ ರೀತಿಯ ಭೀತಿ ಸುಶಿಕ್ಷಿತರಲ್ಲಿ ಇನ್ನೂ ಜಾಸ್ತಿ. ಕೊನೆಗೆ ನರಳುತ್ತಿರುವ ಗಾಯಾಳುಗಳನ್ನು ಯಾರಾದರೂ ಸಹೃದಯ ರಿಕ್ಷಾ ಚಾಲಕರು ಆಸ್ಪತ್ರೆಗೆ ತಲುಪಿಸುವ ಸ್ಥಿತಿ ಇಂದಿಗೂ ನಮ್ಮ ಸಮಾಜದಲ್ಲಿದೆ.ಇಲ್ಲಿನ ತಾತ್ಪರ್ಯವೇನೆಂದರೆ ಅಪಘಾತ ಕಂಡಾಗ ನಮ್ಮ ವಾಹನವನ್ನು ನಿಲ್ಲಿಸಿ ಏನಾದರೂ ಸಹಾಯ ಮಾಡಲಾದೀತೇ ಎಂದು ವಿಚಾರಿಸುವ ಮನೋವೃತ್ತಿಯನ್ನು ನಾವೆಲ್ಲರೂ ಬೆಳೆಸಿಕೊಳ್ಳಬೇಕಾಗಿದೆ. ಇಡೀ ಸಮಾಜದಲ್ಲಿ ಈ ರೀತಿಯ ಮನೋವೃತ್ತಿ ಬೆಳೆದಾಗ ದುರದೃಷ್ಟವಶಾತ್‌ ಒಂದೊಮ್ಮೆ ನಾವೇ ಅಪಘಾತಕ್ಕೆ ಈಡಾದಾಗ ನಮಗೆ ಸಹಾಯ ಒದಗುವ ಸಂಭಾವ್ಯತೆ ಹೆಚ್ಚುತ್ತದೆ.

2. ಸಹಾಯಕ್ಕಾಗಿ ಕರೆ ಮಾಡಿ 
(Call For Help)

ಎಷ್ಟೋ ಬಾರಿ ಸಹೃದಯರಾದ ವಾಹನ ಚಾಲಕರು ಯಾ ಸಾರ್ವಜನಿಕರು ಅಪಘಾತದ ಗಾಯಾಳುಗಳನ್ನು ಉಪಚರಿಸಲು ಮುಂದಾದರೂ ತಾವು ಏನು ಮಾಡಬೇಕು ಅಥವಾ ಮಾಡಬಹುದು ಎಂಬುದು ಅವರಿಗೆ ಸ್ಪಷ್ಟವಿರುವುದಿಲ್ಲ. ಏನು ಮಾಡಬಹುದು, ಏನು ಮಾಡಬಾರದು ಎಂಬ ಅರಿವಿನ ಕೊರತೆಯಿಂದ ಕೆಲವೊಮ್ಮೆ ಸಹಾಯ ಮಾಡಲು ಹೋಗಿ ಗಾಯಾಳುವಿಗೆ ತೊಂದರೆಯಾಗುವುದೂ ಉಂಟು. ಆದ್ದರಿಂದ ಏನು ಮಾಡಬೇಕೆಂದು ತೋಚದೇ ಇದ್ದಾಗ ಗಾಯಾಳುವಿಗೆ ಸಾಂತ್ವನ ಹೇಳಿ ಕೂಡಲೇ ಆ್ಯಂಬುಲೆನ್ಸ್‌ (ಫೋನ್‌ ನಂಬ್ರ 108) ಯಾ ಪೊಲೀಸ್‌ (ಫೋನ್‌ ನಂಬ್ರ 100) ರಿಗೆ ದೂರವಾಣಿ ಕರೆ ಮಾಡಿ ಅಪಘಾತವಾಗಿರುವ ಸ್ಥಳ ಮತ್ತಿತರ ಅಗತ್ಯ ಮಾಹಿತಿ ಒದಗಿಸಬೇಕು. ಈ ಒಂದು ದೂರವಾಣಿ ಕರೆಯಿಂದಲೇ ಎಷ್ಟೋ ಸಲ ಗಾಯಾಳು ಸಾವನ್ನಪ್ಪುವುದನ್ನು ತಪ್ಪಿಸಬಹುದು. ಗಾಯಾಳು ಪ್ರಜ್ಞೆ ಕಳೆದುಕೊಳ್ಳದೇ ಇದ್ದಲ್ಲಿ ಆತನ ಫೋನ್‌ ಮೂಲಕ ಆತನ ಮನೆಯವರಿಗೂ ಸುದ್ದಿ ಮುಟ್ಟಿಸುವುದರಿಂದ ಅವರು ಚಿಕಿತ್ಸೆಯ ಹೊಣೆ ಹೊತ್ತುಕೊಳ್ಳಲು ಅನುವಾಗುತ್ತದೆ.

ಸುಸಜ್ಜಿತ ಆ್ಯಂಬುಲೆನ್ಸ್‌ ತ್ವರಿತವಾಗಿ  ಆಗಮಿಸಿದ್ದೇ ಆದರೆ ಅದರೊಂದಿಗೆ ಬರುವ ಆರೋಗ್ಯ ರಕ್ಷಕ ಸಿಬಂದಿ ವರ್ಗದವರಿಗೆ ಜೀವರಕ್ಷಣೆಯ ತರಬೇತಿ ಇರುವುದರಿಂದ ಗಾಯಾಳುವಿನ ನಿರ್ವಹಣೆ ಸುಲಲಿತವಾಗುತ್ತದೆ. ಗಾಯಾಳುವಿನ ಪ್ರಾಥಮಿಕ ಚಿಕಿತ್ಸೆಗೆ ಬೇಕಾಗುವ ಆಮ್ಲಜನಕ, ಜೀವಜಲ (sಚlಜಿnಛಿ) ಇತ್ಯಾದಿ ಆ್ಯಂಬುಲೆನ್ಸ್‌  ನಲ್ಲಿ ಲಭ್ಯವಿರುತ್ತವೆ. 

– ಮುಂದುವರಿಯುವುದು

– ಡಾ| ಶಿವಾನಂದ ಪ್ರಭು, 
ಮೆಡಿಸಿನ್‌ ವಿಭಾಗ,
ಕೆ.ಎಂ.ಸಿ., ಮಂಗಳೂರು

ಟಾಪ್ ನ್ಯೂಸ್

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

1-C-brijesh

Dakshina Kannada; ಕ್ಯಾಪ್ಟನ್‌ ಬ್ರಿಜೇಶ್‌ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

1-JP-H

Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.