ವಕ್ರದಂತಪಂಕ್ತಿ ಅಡ್ಡಾದಿಡ್ಡಿ ಹಲ್ಲುಗಳೂ ಸರಿಗೂಡಬಲ್ಲವು

Team Udayavani, Jan 3, 2021, 12:41 PM IST

arogyavani-tdy-2

ವಕ್ರದಂತಪಂಕ್ತಿ ಅಂದರೆ ಹಲ್ಲುಗಳು ಸುಸ್ವರೂಪದಲ್ಲಿ ಸಾಲಾಗಿ ಸಂಯೋಜಿತವಾಗಿರದೆ ಇರುವುದು ಅಥವಾ ಮೇಲು ಮತ್ತು ಕೆಳಗಿನ ಸಾಲಿನ ಹಲ್ಲುಗಳ ಕಚ್ಚಿಕೊಳ್ಳುವಿಕೆಯ ಸುಸಂಬಂಧ ಇಲ್ಲದೆ ಇರುವುದು. ಬ್ರೇಸ್‌ಗಳು ಮತ್ತು ಆಥೊìಡಾಂಟಿಕ್ಸ್‌ ನಿಮ್ಮ ಹಲ್ಲುಗಳ ನೇರವನ್ನೂ ಕಚ್ಚಿಕೊಳ್ಳುವಿಕೆಯ ಸಂಯೋಜನಾರಾಹಿತ್ಯವನ್ನೂ ಸರಿಪಡಿಸಬಲ್ಲವು.

ಹಲ್ಲುಗಳನ್ನು ನೇರಗೊಳಿಸುವುದು ಮತ್ತು ಕಚ್ಚುವಿಕೆಯನ್ನು ಮರು ಸಂಯೋಜಿಸುವುದು. ಒಟ್ಟಾರೆಯಾಗಿ ಬಾಯಿಯ ಆರೋಗ್ಯದ ಮೇಲೆ ದೀರ್ಘ‌ಕಾಲಿಕ ಪ್ರಯೋಜನಗಳನ್ನು ಉಂಟು ಮಾಡುತ್ತದೆ.

  • ಹಲ್ಲುಗಳು ನೇರವಾಗಿದ್ದರೆ ಹಲ್ಲುಜ್ಜಲು ಮತ್ತು ಶುಚಿಗೊಳಿಸಲು ಸುಲಭ. ಇದರಿಂದ ಹಲ್ಲು ಹುಳುಕಾಗುವುದು, ವಸಡಿನ ಕಾಯಿಲೆಗಳು ಮತ್ತು ವಸಡಿನ ಉರಿಯೂತ ಕಡಿಮೆಯಾಗಲು ಸಹಾಯವಾಗುತ್ತದೆ.
  • ಹಲ್ಲುಗಳ ಕಚ್ಚಿಕೊಳ್ಳುವಿಕೆ ಸರಿಯಾಗಿದ್ದರೆ ಹಲ್ಲುಗಳು ಮತ್ತು ಬಾಯಿ ಆಹಾರವನ್ನು ಸಮರ್ಪಕವಾದ ರೀತಿಯಲ್ಲಿ ಜಗಿಯಲು ಅನುಕೂಲವಾಗುತ್ತದೆ. ಹಲ್ಲುಗಳು ಒಂದು ಸಾಲಿನಿಂದ ಇನ್ನೊಂದು ಹೊರಕ್ಕೆ ಅಥವಾ ಒಳಕ್ಕೆ ಕಚ್ಚಿಕೊಳ್ಳುವುದು, ಅಡ್ಡಕ್ಕೆ ಕಚ್ಚಿಕೊಳ್ಳುವುದು ಅಥವಾ ಸರಿಯಲ್ಲದೆ ಇನ್ನೊಂದು ಯಾವುದೇ ರೀತಿಯಲ್ಲಿ ಅಸಂಯೋಜಿತವಾಗಿ ಕಚ್ಚಿಕೊಳ್ಳುವುದನ್ನು ಸರಿಪಡಿಸಿದರೆ ಆಹಾರವನ್ನು ಜಗಿದು ಜೀರ್ಣಿಸಿಕೊಳ್ಳಲು ಸುಲಭ.
  • ಹಲ್ಲುಗಳು ಅವಧಿಪೂರ್ವ ಸವೆಯುವು ದನ್ನು ತಡೆಯುತ್ತವೆ. ನಿಮ್ಮ ಹಲ್ಲುಗಳು ಸಮರ್ಪಕವಾಗಿ ಸಂಯೋಜನೆಯಾಗದೆ ಇದ್ದರೆ, ಅದರಿಂದ ಪಕ್ಕದ ಹಲ್ಲುಗಳ ಮೇಲೆ ಹೆಚ್ಚುವರಿ ಒತ್ತಡ ಬೀಳುತ್ತದೆ. ಇದರಿಂದಾಗಿ ಅವು ಬೇಗನೆ ಸವೆಯುತ್ತದೆ.
  • ಹಲ್ಲುಗಳು ಸರಿಯಾಗಿ ಸಂಯೋಜನೆಗೊಂಡು ಇದ್ದರೆ  ನಿಮಗೆ ಸರಿಯಾಗಿ ಮಾತನಾಡುವುದು ಕೂಡ ಸಾಧ್ಯವಾಗುತ್ತದೆ. ಮೇಲಿನ ಮತ್ತು ಕೆಳಗಿನ ಹಲ್ಲು ಸಾಲುಗಳು ಸರಿಯಾದ ಹೊಂದಾಣಿಕೆಯನ್ನು ಹೊಂದಿಲ್ಲದೆ ಇರುವಾಗ ಮಾತನಾಡುವುದಕ್ಕೆ ಸಂಬಂಧಿಸಿದ ಸಮಸ್ಯೆಗಳು ಉದ್ಭವಿಸಬಹುದು.

ಬ್ರೇಸ್‌ನಿಂದ ಸರಿಪಡಿಸಲು ಸಾಧ್ಯವಿರುವ ಸಾಮಾನ್ಯ ವಕ್ರದಂತಪಂಕ್ತಿ ಸಮಸ್ಯೆಗಳು :  ಇಡಿಕಿರಿದ ಹಲ್ಲುಗಳು :

ನಿಮ್ಮ ಬಾಯಿಯಲ್ಲಿ ಹಲ್ಲುಗಳಿಗೆ ನಿಗದಿತವಾದ ನಿರ್ದಿಷ್ಟ ಜಾಗದಲ್ಲಿ ಅನೇಕ ಹಲ್ಲುಗಳು ಮೂಡಿದಾಗ ಈ ಸಮಸ್ಯೆ ಉಂಟಾಗುತ್ತದೆ.

ಮುಂಚಾಚಿದ ಕಚ್ಚಿಕೊಳ್ಳುವಿಕೆ :

ಹಲ್ಲುಗಳನ್ನು ಕಚ್ಚಿಕೊಂಡಾಗ ಮೇಲ್ಗಡೆಯ ಹಲ್ಲುಸಾಲು ಕೆಳಗಡೆಯ ಹಲ್ಲುಸಾಲಿನಿಂದ ತೀರಾ ಮುಂದಕ್ಕೆ ಬಂದು ಮರೆಮಾಚುವಂತಿರುತ್ತದೆ.

ಹಲ್ಲುಗಳ ನಡುವೆ ಬಿಟ್ಟಸ್ಥಳ :  ನಿಮ್ಮ ಬಾಯಿಯಲ್ಲಿ ಹಲ್ಲುಗಳಿಗಾಗಿ ಇರುವ ಖಾಲಿ ಜಾಗವನ್ನು ನಿಮ್ಮ ಹಲ್ಲುಗಳು ತುಂಬಿಕೊಳ್ಳುವುದಿಲ್ಲ ಎಂಬ ಬಹಳ ಸರಳ ಕಾರಣದಿಂದ ಅಥವಾ ಹಲ್ಲು ಇಲ್ಲದೆ ಇರುವುದರಿಂದ ನಿಮ್ಮ ಹಲ್ಲುಗಳ ನಡುವೆ ಅನೈಚ್ಛಿಕ ಖಾಲಿ ಸ್ಥಳವು ಕಂಡುಬರುತ್ತದೆ.

ದಂತಪಂಕ್ತಿಗಳ ನಡುವೆ ಬಿಟ್ಟ ಸ್ಥಳ :  ನೀವು ಕಚ್ಚಿಕೊಂಡಾಗ ಮೇಲಿನ ಮತ್ತು ಕೆಳಗಿನ ಹಲ್ಲುಸಾಲುಗಳಲ್ಲಿ ಕಡೆಹಲ್ಲುಗಳು ಒಂದನ್ನೊಂದು ಕೂಡಿಕೊಂಡರೂ ಎದು ರುಗಡೆ ಅಥವಾ ಪಾರ್ಶ್ವದಲ್ಲಿ ಹಲ್ಲುಸಾಲುಗಳ ನಡುವೆ ಖಾಲಿ ಸ್ಥಳ ಇರುತ್ತದೆ.

ಅಸಂಯೋಜಿತ ಕಚ್ಚುವಿಕೆ :

ಮೇಲ್ಗಡೆಯ ಹಲ್ಲುಸಾಲು ಕೆಳಗಿನ ಹಲ್ಲುಸಾಲುಗಳ ಜತೆಗೆ ಕಚ್ಚಿಕೊಳ್ಳುವಿಕೆಯ ಸಂಯೋಜನೆ ಹೊಂದಿಲ್ಲದೆ ಇರುವುದು.

ಡಾ| ರಿತೇಶ್‌ ಸಿಂಗ್ಲಾ,  

ರೀಡರ್‌, ಆರ್ಥೋಡಾಂಟಿಕ್ಸ್‌ ವಿಭಾಗ, ಮಣಿಪಾಲ

ದಂತವೈದ್ಯಕೀಯ ಕಾಲೇಜು ವಿಭಾಗ, ಮಣಿಪಾಲ.

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

6-thyroid

Thyroid Disease: ಥೈರಾಯ್ಡ್ ಅನಾರೋಗ್ಯ ನಿರ್ಲಕ್ಷಿಸಿದರೆ ಮಾರಕವಾದೀತು ಎಚ್ಚರ!

4-health

Nutritional Foods: ಹದಿಹರಯದಲ್ಲಿ ಪೌಷ್ಟಿಕಾಂಶ ಅಗತ್ಯಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.