ಬಿಸಿಲಿನ ತಾಪದಿಂದ ಆರೋಗ್ಯ ಅಪಾಯ ತಡೆಯಲು ಏನು ಮಾಡಬೇಕು?

Team Udayavani, Jun 5, 2022, 5:55 PM IST

19

ಹವಾಮಾನದಲ್ಲಿ ದಿನದಿಂದ ದಿನಕ್ಕೆ ಆಗುತ್ತಿರುವ ಬದಲಾವಣೆಗಳು ಮನುಷ್ಯನ ಆರೋಗ್ಯದ ಮೇಲೆ ವಿವಿಧ ರೀತಿಯ ಪರಿಣಾಮಗಳನ್ನು ಬೀರುತ್ತಿವೆ. 2000 ಇಸವಿ ಮತ್ತು 2016ರ ನಡುವೆ ಸುಮಾರು 125 ಮಿಲಿಯನ್‌ ಜನರು ಬಿಸಿಲಿನ ಶಾಖಕ್ಕೆ ಸಂಬಂಧಪಟ್ಟಂತಹ ಹಲವಾರು ತೊಂದರೆಗಳಿಗೆ ತುತ್ತಾಗಿದ್ದಾರೆ. ವಿಪರೀತ ಬಿಸಿಲಿನ ಶಾಖ ಮತ್ತು ಹೆಚ್ಚಿರುವ ತಾಪಮಾನ ಮಾನವನ ಶರೀರದ ಮೇಲೆ ವ್ಯಾಪಕವಾದ ಪರಿಣಾಮಗಳನ್ನು ಬೀರುತ್ತದೆ. ಆರೋಗ್ಯಕ್ಕೆ ಹೊಸ ತೊಂದರೆಗಳು ಅಥವಾ ಮುಂಚೆಯಿಂದ ಅಸ್ತಿತ್ವದಲ್ಲಿರುವ ತೊಂದರೆಗಳನ್ನು ಹೆಚ್ಚಿಸುವ ಕೆಲಸವನ್ನು ಈ ವಿಪರೀತ ಬಿಸಿಲಿನ ಶಾಖ ಮಾಡುತ್ತದೆ. ವಿಪರೀತ ಶಾಖವು ದೇಹಕ್ಕೆ ಮಾರಕವಾಗಬಹುದು. ಈ ವರ್ಷ ದೇಶದ ವಿವಿಧ ರಾಜ್ಯ ಮತ್ತು ಪ್ರಾಂತ್ಯಗಳಿಂದ ವಿಪರೀತ ತಾಪಮಾನದ ದಾಖಲೆಗಳು ಗಮನಕ್ಕೆ ಬಂದಿವೆ. ಬಿಸಿಲಿನ ಶಾಖದಿಂದ ಅನೇಕ ತೊಂದರೆಗಳು ಉಂಟಾಗ ಬಹುದು. ಅದರಲ್ಲಿ ಅತ್ಯಂತ ತುರ್ತು ಪರಿಸ್ಥಿತಿ ಎಂದರೆ ಬಿಸಿಲಾಘಾತ. ಇದನ್ನು ಸರಿಯಾದ ಸಮಯದಲ್ಲಿ ಪತ್ತೆ ಹಚ್ಚಿ ಚಿಕಿತ್ಸೆ ನೀಡದಿದ್ದರೆ ಇದು ಮಾರಣಾಂತಿ ಕವಾಗಿ ಪರಿಣಮಿಸ ಬಹುದು. ಇದರ ಲಕ್ಷಣಗಳನ್ನು ಎಲ್ಲರೂ ತಿಳಿದಿರಬೇಕು ಮತ್ತು ಇದರ ಪ್ರಥಮ ಚಿಕಿತ್ಸೆಯ ಬಗ್ಗೆಯೂ ಎಲ್ಲರೂ ತಿಳಿದಿರಬೇಕು. ಬಿಸಿಲಿನ ಶಾಖದಿಂದ ದೇಹದ ತಾಪಮಾನವು ಹೆಚ್ಚಾಗುತ್ತದೆ ಮತ್ತು ದೇಹದಲ್ಲಿ ನಿರ್ಜಲೀಕರಣದ ಪರಿಣಾಮವಾಗಿ ಸ್ಟ್ರೋಕ್‌ ಸಂಭವಿಸುತ್ತದೆ.

ಇದರ ಲಕ್ಷಣಗಳು

  • ವಾಂತಿ
  • ವೇಗವಾದ ಉಸಿರಾಟ
  • ವೇಗವಾದ ಹೃದಯ ಬಡಿತ
  • ಕೈ ಕಾಲು ಸೆಳೆತ

ರೋಗಿಯಲ್ಲಿ ಇಂತಹ ಲಕ್ಷಣಗಳು ಕಂಡು ಬಂದಲ್ಲಿ ನೀಡಬೇಕಾದ ಪ್ರಥಮ ಚಿಕಿತ್ಸೆ

 ಆ್ಯಂಬುಲೆನ್ಸ್‌ಗೆ ಕರೆ ಮಾಡುವುದು

 ರೋಗಿಯ ಬಟ್ಟೆಗಳನ್ನು ಸಡಿಲಗೊಳಿಸಬೇಕು

 ದೇಹದ ಮೇಲೆ ತಂಪು ನೀರಿನಲ್ಲಿ ಒದ್ದೆ ಮಾಡಿರುವ ಬಟ್ಟೆ ಹಾಕಿ

ರೋಗಿಯು ಪ್ರಜ್ಞೆ ಹೊಂದಿದ್ದರೆ ಕುಡಿಯಲು ನೀರು ಕೊಡಿ

ಪ್ರಜ್ಞೆ ಇಲ್ಲದಿದ್ದರೆ ಅಥವಾ ಮಂಪರು ಪರಿಸ್ಥಿತಿ ಇದ್ದಲ್ಲಿ ಬಾಯಿಗೆ ಏನೂ ಕೊಡಬೇಡಿ.

ಬೇಸಗೆಯಲ್ಲಿ ಆರೋಗ್ಯವನ್ನು ಕಾಪಾಡಲು ಮಾಡಬೇಕಾದಂತಹ ಕೆಲಸಗಳು

  • ನಿಗದಿತ ಪ್ರಮಾಣದಲ್ಲಿ ನೀರು ಸೇವಿಸಬೇಕು
  •  ಸಹಜ ಆರೋಗ್ಯವಂತರು ದಿನಕ್ಕೆ ಕನಿಷ್ಟ 3 ಲೀಟರ್‌ ನೀರು ಸೇವಿಸಬೇಕು. ಕಿಡ್ನಿ, ಹೃದಯ ತೊಂದರೆ ಇದ್ದವರು ವೈದ್ಯರು ಸೂಚಿಸಿದ ಪ್ರಮಾಣದಲ್ಲಿ ನೀರು ಸೇವಿಸಬೇಕು.
  •  ವ್ಯವಹಾರ/ ವ್ಯಾಪಾರ ಇನ್ನಿತರ ಕೆಲಸಗಳನ್ನು ಬೆಳಿಗ್ಗೆ 6ರಿಂದ 10 ಗಂಟೆಯ ಒಳಗೆ ಹಾಗೂ ಸಂಜೆ 4 ಗಂಟೆಯ ಅನಂತರ
  •   ಕೆಲಸದ ಜಾಗದಲ್ಲಿ ಹವಾನಿಯಂತ್ರಣ ಯಂತ್ರವನ್ನು ಬಳಸಿ. ದಿನದ ಹೊತ್ತಿನಲ್ಲಿ ಕೋಣೆಯ ತಾಪಮಾನ 30 ಡಿಗ್ರಿ ಸೆ.ಗಿಂತ ಕಡಿಮೆ ಮತ್ತು ರಾತ್ರಿ ಹೊತ್ತಿನಲ್ಲಿ 24 ಡಿಗ್ರಿ ಸೆ. ಕಡಿಮೆ ಇರಬೇಕು.
  •  ಸಮಯ ಸಿಕ್ಕರೆ ದಿನದ ಹೊತ್ತಿನಲ್ಲಿ ಸ್ವಲ್ಪ ವಿಶ್ರಾಂತಿಯನ್ನು ಪಡೆಯಿರಿ
  •  ಹೊರಾಂಗಣದ ಚಟುವಟಿಕೆಗಳನ್ನು ಮಿತಗೊಳಿಸಿ ಸಾರ್ವಜನಿಕ ಸ್ಥಳಗಳಲ್ಲಿ ಆದಷ್ಟು ಸ್ವತ್ಛ ನೀರಿನ ವ್ಯವಸ್ಥೆ ಮಾಡಿ.
  •  ಕನಿಷ್ಟ ಮನೆಯ ಅಂಗಳದಲ್ಲಿ ಅಥವಾ ನಿಮ್ಮ ಬಾಲ್ಕನಿಯಲ್ಲಿ ಪ್ರತಿದಿನ ಸ್ವತ್ಛ ಪಾತ್ರೆಯಲ್ಲಿ ಸ್ವಚ್ಛ ನೀರನ್ನು ಪಕ್ಷಿಗಳಿಗಾಗಿ ಇಡಿ.

ಡಾ| ಹರೂನ್‌ಎಚ್‌.

ಇಂಟರ್ನಲ್‌ ಮೆಡಿಸಿನ್‌,

ಕೆಎಂಸಿ, ಮಂಗಳೂರು

ಟಾಪ್ ನ್ಯೂಸ್

Congress ವಿರುದ್ಧ ಬಿಜೆಪಿ ಕ್ಯೂಆರ್‌ ಕೋಡ್‌ ಸಮರ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

OBC ವರ್ಗಕ್ಕೆ ಕಾಂಗ್ರೆಸ್‌ನಿಂದ ಅನ್ಯಾಯ: ಸುನಿಲ್‌ ಕುಮಾರ್‌

OBC ವರ್ಗಕ್ಕೆ ಕಾಂಗ್ರೆಸ್‌ನಿಂದ ಅನ್ಯಾಯ: ಸುನಿಲ್‌ ಕುಮಾರ್‌

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್‌ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ

Bangalore Rural; ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್‌ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ

Mekedatu Dam ನಿರ್ಮಾಣಕ್ಕೆ ಕೇಂದ್ರMekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡಯುವೆ: ದೇವೇಗೌಡ

Mekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Congress ವಿರುದ್ಧ ಬಿಜೆಪಿ ಕ್ಯೂಆರ್‌ ಕೋಡ್‌ ಸಮರ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

OBC ವರ್ಗಕ್ಕೆ ಕಾಂಗ್ರೆಸ್‌ನಿಂದ ಅನ್ಯಾಯ: ಸುನಿಲ್‌ ಕುಮಾರ್‌

OBC ವರ್ಗಕ್ಕೆ ಕಾಂಗ್ರೆಸ್‌ನಿಂದ ಅನ್ಯಾಯ: ಸುನಿಲ್‌ ಕುಮಾರ್‌

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.